ಕೀರ್ತನೆ
ದಾವೀದನ ಮಧುರ ಗೀತೆ.
141 ಯೆಹೋವನೇ, ನಾನು ನಿನಗೆ ಮೊರೆ ಇಡ್ತೀನಿ.+
ಬೇಗ ಬಂದು ನನಗೆ ಸಹಾಯಮಾಡು.+
ನಾನು ನಿನಗೆ ಪ್ರಾರ್ಥಿಸಿದಾಗ ಗಮನಕೊಟ್ಟು ಕೇಳು.+
2 ನಿನ್ನ ಸನ್ನಿಧಿಯಲ್ಲಿ ನನ್ನ ಪ್ರಾರ್ಥನೆ ವಿಶೇಷವಾಗಿ ತಯಾರಿಸಿದ+ ಧೂಪದ+ ತರ,
ನಾನು ಮೇಲೆತ್ತಿರೋ ನನ್ನ ಕೈ ಸಂಜೆಯ ಧಾನ್ಯ ಅರ್ಪಣೆ ತರ ಇರಲಿ.+
3 ಯೆಹೋವನೇ ನನ್ನ ಬಾಯಿಗೆ,
ನನ್ನ ತುಟಿಗಳಿಗೆ ಒಬ್ಬ ಕಾವಲುಗಾರನನ್ನ ಇಡು.+
4 ಯಾವ ಕೆಟ್ಟ ವಿಷ್ಯದ ಕಡೆನೂ ನನ್ನ ಮನಸ್ಸು ವಾಲದ ಹಾಗೆ ನೋಡ್ಕೊ,+
ಕೆಟ್ಟವರ ಜೊತೆ ಸೇರಿ ಕೆಟ್ಟ ಕೆಲಸ ಮಾಡೋಕೆ ನನ್ನನ್ನ ಬಿಡಬೇಡ,
ಯಾವತ್ತೂ ನಾನು ಅವ್ರ ಊಟದ ರುಚಿ ನೋಡೋಕೆ ಇಷ್ಟಪಡಲ್ಲ.
5 ನೀತಿವಂತ ನನ್ನನ್ನ ಹೊಡಿಯೋದು ಅವನಿಗೆ ನನ್ನ ಮೇಲಿರೋ ಶಾಶ್ವತ ಪ್ರೀತಿಯಿಂದಾನೇ,+
ಅವನು ನನ್ನನ್ನ ತಿದ್ದೋದು ನನ್ನ ತಲೆಯನ್ನ ತಂಪು ಮಾಡೋ ಎಣ್ಣೆ ತರ,+
ಯಾವ ಕಾರಣಕ್ಕೂ ನಾನು ಅದನ್ನ ಬೇಡ ಅನ್ನಲ್ಲ.+
ನೀತಿವಂತ ಕಷ್ಟದಲ್ಲಿ ಇರೋವಾಗ ನಾನು ಅವನಿಗಾಗಿ ಪ್ರಾರ್ಥಿಸ್ತಾ ಇರ್ತಿನಿ.
6 ಅವ್ರ ನ್ಯಾಯಾಧೀಶರು ಕಡಿದಾದ ಬಂಡೆಯಿಂದ ಕೆಳಗೆ ತಳ್ಳಿದ್ರೂ
ಜನ್ರು ನನ್ನ ಮಾತಿಗೆ ಗಮನ ಕೊಡ್ತಾರೆ. ಯಾಕಂದ್ರೆ ಅವು ಮನಸ್ಸಿಗೆ ಮುದ ಕೊಡುತ್ತೆ.
7 ಹೊಲವನ್ನ ಉಳುತ್ತಾ ಮಣ್ಣಿನ ಹೆಂಟೆಗಳನ್ನ ಒಡೆಯೋ ಹಾಗೆ,
ಸಮಾಧಿಯ* ಹತ್ರ ನಮ್ಮ ಎಲುಬುಗಳು ಚೆಲ್ಲಾಪಿಲ್ಲಿಯಾಗಿ ಬಿದ್ಕೊಂಡಿವೆ.
8 ವಿಶ್ವದ ರಾಜ ಯೆಹೋವನೇ, ನನ್ನ ಕಣ್ಣು ನಿನ್ನನ್ನೇ ನೋಡುತ್ತೆ.+
ನಿನ್ನಲ್ಲಿ ನಾನು ಆಶ್ರಯ ಪಡ್ಕೊಂಡಿದ್ದೀನಿ,
ನನ್ನ ಪ್ರಾಣ ತೆಗೀಬೇಡ.
9 ಅವರು ನನಗಾಗಿ ಬೀಸಿರೋ ಬಲೆಯಲ್ಲಿ ಸಿಕ್ಕಿಬೀಳದೆ ಇರೋ ಹಾಗೆ ನನ್ನನ್ನ ಕಾಪಾಡು,
ಕೆಟ್ಟವರ ಉರುಲಿಂದ ನನ್ನನ್ನ ರಕ್ಷಿಸು.
10 ನಾನು ಸುರಕ್ಷಿತವಾಗಿ ಅವನ್ನ ದಾಟಿ ಹೋಗ್ತೀನಿ.
ಆದ್ರೆ ಆ ಕೆಟ್ಟವರು ಬೀಸಿದ ಬಲೆಯಲ್ಲಿ ಅವ್ರೇ ಬೀಳ್ತಾರೆ.+