ಯೆರೆಮೀಯ
5 ಯೆರೂಸಲೇಮಿನ ಬೀದಿಗಳಲ್ಲಿ ಅಲ್ಲಿಇಲ್ಲಿ ತಿರುಗಾಡಿ.
ಸುತ್ತಮುತ್ತ ಗಮನಕೊಟ್ಟು ನೋಡಿ.
ಪಟ್ಟಣದ ಮುಖ್ಯಸ್ಥಳಗಳಲ್ಲಿ* ಹುಡುಕಿ,
ನ್ಯಾಯವಾಗಿ, ನಂಬಿಗಸ್ತನಾಗಿ ಇರೋ
ಒಬ್ಬ ಮನುಷ್ಯ ನಿಮಗೆ ಸಿಗ್ತಾನಾ ನೋಡಿ,+
ಹಾಗೆ ಸಿಕ್ಕಿದ್ರೆ ನಾನು ಯೆರೂಸಲೇಮನ್ನ ಕ್ಷಮಿಸ್ತೀನಿ.
2 “ಜೀವ ಇರೋ ದೇವರಾದ ಯೆಹೋವನಾಣೆ” ಅಂತ ಜನ್ರು ಹೇಳ್ತಾರೆ ಅಷ್ಟೇ,
ಆದ್ರೆ ಅವರು ಇಡೋ ಆಣೆಯೆಲ್ಲ ಸುಳ್ಳು.+
3 ಯೆಹೋವನೇ, ನಂಬಿಗಸ್ತರು ಯಾರಾದ್ರೂ ಇದ್ದಾರಾ ಅಂತ ನಿನ್ನ ಕಣ್ಣುಗಳು ಹುಡುಕ್ತವಲ್ಲಾ?+
ನೀನು ನಿನ್ನ ಜನ್ರನ್ನ ಹೊಡ್ದೆ, ಆದ್ರೂ ಅವರು ಬದಲಾಗಲಿಲ್ಲ.
ನೀನು ಅವ್ರನ್ನ ನಾಶ ಮಾಡೋ ಹಂತಕ್ಕೆ ಹೋದ್ರೂ ಅವರು ಬುದ್ಧಿ ಕಲೀಲಿಲ್ಲ.+
4 ಆದ್ರೆ ನಾನು ಹೀಗೆ ನೆನಸಿದೆ “ಅವರು ಕೆಳವರ್ಗದ ಜನರಾಗಿರಬೇಕು.
ಅವ್ರಿಗೆ ತಮ್ಮ ದೇವರಾದ ಯೆಹೋವನ ದಾರಿ ಬಗ್ಗೆ ಗೊತ್ತಿಲ್ಲ, ಆತನ ನಿಯಮಗಳ ಬಗ್ಗೆ ಗೊತ್ತಿಲ್ಲ,
ಹಾಗಾಗಿ ಮೂರ್ಖತನದಿಂದ ನಡ್ಕೊಳ್ತಾ ಇದ್ದಾರೆ.
5 ನಾನು ದೊಡ್ಡ ದೊಡ್ಡ ವ್ಯಕ್ತಿಗಳ ಹತ್ರ ಹೋಗಿ ಮಾತಾಡ್ತೀನಿ,
ಯಾಕಂದ್ರೆ ಅವರು ತಮ್ಮ ದೇವರಾದ ಯೆಹೋವನ ದಾರಿಗೆ, ಆತನ ನಿಯಮಗಳಿಗೆ ಖಂಡಿತ ಗಮನ ಕೊಟ್ಟಿರ್ತಾರೆ.+
ಆದ್ರೆ ಅವ್ರೆಲ್ಲ ನೊಗವನ್ನ ಮುರಿದುಹಾಕಿದ್ರು,
ನಿರ್ಬಂಧಗಳನ್ನೆಲ್ಲ ಕಿತ್ತು ಹಾಕಿದ್ರು.”
6 ಹಾಗಾಗಿ ಕಾಡಿನ ಸಿಂಹ ಬಂದು ಅವ್ರ ಮೇಲೆ ದಾಳಿ ಮಾಡುತ್ತೆ,
ಬಯಲು ಪ್ರದೇಶಗಳ ತೋಳ ಅವ್ರನ್ನ ಸೀಳಿಹಾಕುತ್ತೆ,
ಅವ್ರ ಪಟ್ಟಣಗಳಲ್ಲಿ ಚಿರತೆ ಹೊಂಚು ಹಾಕುತ್ತೆ.
ಪಟ್ಟಣಗಳಿಂದ ಹೊರಗೆ ಹೋಗೋ ಜನ್ರನ್ನೆಲ್ಲ ತುಂಡು ತುಂಡು ಮಾಡಿಬಿಡುತ್ತೆ.
ಯಾಕಂದ್ರೆ ಅವ್ರ ಅಪರಾಧಗಳು ಒಂದೆರಡಲ್ಲ,
ಅವರು ಮಾಡಿದ ದ್ರೋಹಗಳಿಗೆ ಲೆಕ್ಕಾನೇ ಇಲ್ಲ.+
7 ಇಂಥ ಕೆಲಸಗಳನ್ನ ಮಾಡಿದ ನಿನ್ನನ್ನ ಹೇಗೆ ಕ್ಷಮಿಸಲಿ?
ನಿನ್ನ ಮಕ್ಕಳು ನನ್ನನ್ನ ಬಿಟ್ಟು ಹೋಗಿದ್ದಾರೆ,
ದೇವರಲ್ಲದವುಗಳ ಮೇಲೆ ಆಣೆ ಇಡ್ತಾರೆ.+
ಅವ್ರಿಗೆ ಬೇಕಾಗಿರೋದನ್ನೆಲ್ಲ ಕೊಟ್ಟೆ,
ಆದ್ರೆ ಅವರು ವ್ಯಭಿಚಾರ ಬಿಡಲಿಲ್ಲ,
ವೇಶ್ಯೆಯ ಮನೆಗೆ ಅವರು ಗುಂಪುಗುಂಪಾಗಿ ಹೋಗ್ತಾರೆ.
8 ಅವರು ಕಾಮದ ಬಿಸಿಯೇರಿ ಹುಚ್ಚುಚ್ಚಾಗಿ ಆಡೋ ಕುದುರೆಗಳ ತರ,
ಪ್ರತಿಯೊಬ್ರು ಕುದುರೆ ತರ ಸದ್ದು ಮಾಡ್ತಾ ಇನ್ನೊಬ್ಬನ ಹೆಂಡತಿ ಹಿಂದೆ ಹೋಗ್ತಾರೆ.+
9 “ಇದಕ್ಕೆಲ್ಲ ನಾನು ಅವ್ರಿಂದ ಲೆಕ್ಕ ಕೇಳಬಾರ್ದಾ?
ಇಂಥ ಜನ್ರಿಗೆ ನಾನು ಸೇಡು ತೀರಿಸಬಾರ್ದಾ?” ಅಂತ ಯೆಹೋವ ಹೇಳ್ತಾನೆ.+
ಅವಳ ಎಳೆಯ ಕೊಂಬೆಗಳನ್ನ ಕಿತ್ತು ಹಾಕಿ,
ಯಾಕಂದ್ರೆ ಅವು ಯೆಹೋವನಿಗೆ ಸೇರಿದ್ದಲ್ಲ.
11 ಇಸ್ರಾಯೇಲಿನ ಜನ್ರೂ ಯೆಹೂದದ ಜನ್ರೂ
ನನಗೆ ತುಂಬ ನಂಬಿಕೆ ದ್ರೋಹ ಮಾಡಿದ್ದಾರೆ” ಅಂತ ಯೆಹೋವ ಹೇಳ್ತಾನೆ.+
12 “ಅವರು ಯೆಹೋವನ ಮಾತು ಕೇಳಲಿಲ್ಲ,
ನಮ್ಮ ಮೇಲೆ ಯಾವ ಕಷ್ಟನೂ ಬರಲ್ಲ,
ನಮ್ಮ ಕಾಲದಲ್ಲಿ ಯುದ್ಧ ನಡಿಯಲ್ಲ, ಬರ ಬರಲ್ಲ’ ಅಂತ ಹೇಳ್ತಾ ಇರ್ತಾರೆ.+
13 ಪ್ರವಾದಿಗಳು ಹೇಳೋದೆಲ್ಲ ಸುಳ್ಳು,
ದೇವರ ಮಾತಂತೂ ಅವ್ರ ಬಾಯಿಂದ ಬರಲ್ಲ.
ಅವ್ರ ಸುಳ್ಳು ಮಾತುಗಳ ತರ ಅವರೂ ಹಾಳಾಗಿ ಹೋಗ್ಲಿ!”
14 ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಾನೆ
“ಈ ಜನ್ರು ಹೀಗೆ ಹೇಳ್ತಾ ಇರೋದ್ರಿಂದ
ನಾನು ನಿನ್ನ ಬಾಯಲ್ಲಿ ಇಟ್ಟಿರೋ ನನ್ನ ಮಾತುಗಳನ್ನ ಬೆಂಕಿಯಾಗಿ ಮಾಡ್ತೀನಿ,+
ಈ ಜನ್ರು ಸೌದೆ ತರ ಇದ್ದಾರೆ,
ಆ ಬೆಂಕಿ ಅವ್ರನ್ನ ಬೂದಿ ಮಾಡಿಬಿಡುತ್ತೆ.”+
15 “ಇಸ್ರಾಯೇಲಿನ ಜನ್ರೇ, ದೂರದ ಒಂದು ದೇಶದವರು ನಿಮ್ಮ ವಿರುದ್ಧ ಬರೋ ತರ ನಾನು ಮಾಡ್ತೀನಿ”+ ಅಂತ ಯೆಹೋವ ಹೇಳ್ತಾನೆ.
“ಅದು ತುಂಬ ಸಮಯದಿಂದ ಇರೋ ದೇಶ,
ಹಳೇ ಕಾಲದಿಂದ ಇರೋ ದೇಶ,
ಆ ದೇಶದವರ ಭಾಷೆ ನಿಮಗೆ ಗೊತ್ತಿಲ್ಲ,
ಅವ್ರ ಮಾತು ನಿಮಗೆ ಅರ್ಥ ಆಗಲ್ಲ.+
16 ಅವ್ರ ಬತ್ತಳಿಕೆ ತೆರೆದ ಸಮಾಧಿ,
ಅವ್ರೆಲ್ಲ ಯುದ್ಧಶೂರರು.
17 ಅವರು ನಿಮ್ಮ ಬೆಳೆ, ನಿಮ್ಮ ಆಹಾರ ನಾಶ ಮಾಡ್ತಾರೆ.+
ನಿಮ್ಮ ಮಕ್ಕಳನ್ನ ಸಾಯಿಸ್ತಾರೆ.
ನಿಮ್ಮ ಆಡು-ಕುರಿ, ದನ-ಹೋರಿಗಳನ್ನ ಕೊಲ್ತಾರೆ.
ನಿಮ್ಮ ದ್ರಾಕ್ಷಿಬಳ್ಳಿಗಳನ್ನ, ಅಂಜೂರ ಮರಗಳನ್ನ ಹಾಳು ಮಾಡ್ತಾರೆ.
ನೀವು ನಂಬಿಕೆ ಇಟ್ಟಿರೋ ಭದ್ರ ಕೋಟೆಯ ಪಟ್ಟಣಗಳನ್ನ ಆಯುಧಗಳಿಂದ ನಾಶ ಮಾಡ್ತಾರೆ.”
18 ಯೆಹೋವ ಹೇಳೋದು ಏನಂದ್ರೆ “ಆದ್ರೆ ಆ ದಿನಗಳಲ್ಲಿ ಸಹ ನಾನು ನಿಮ್ಮನ್ನ ಪೂರ್ತಿ ನಾಶ ಮಾಡಲ್ಲ.+ 19 ‘ನಮ್ಮ ದೇವರಾದ ಯೆಹೋವ ನಮಗೆ ಹೀಗೆಲ್ಲಾ ಯಾಕೆ ಮಾಡಿದನು?’ ಅಂತ ಅವರು ಕೇಳಿದಾಗ ನೀನು ಅವ್ರಿಗೆ ‘ನಿಮ್ಮ ದೇಶದಲ್ಲಿ ನಿಮ್ಮ ದೇವರನ್ನ ಬಿಟ್ಟು ಬೇರೆ ದೇವರ ಸೇವೆ ಮಾಡಿದ್ರಲ್ಲಾ, ಹಾಗಾಗಿ ನೀವು ಬೇರೆ ದೇಶದಲ್ಲಿ ವಿದೇಶಿಯರ ಸೇವೆ ಮಾಡ್ತೀರ’ ಅಂತ ಹೇಳಬೇಕು.”+
20 ಯಾಕೋಬನ ವಂಶದವರಿಗೆ ಇದನ್ನ ಹೇಳಿ,
ಯೆಹೂದದಲ್ಲಿ ಇದನ್ನ ಸಾರಿಹೇಳಿ
21 “ಬುದ್ಧಿಯಿಲ್ಲದ ಮೂರ್ಖ ಜನ್ರೇ,+ ಕೇಳಿ,
ನಿಮಗೆ ಕಣ್ಣು ಇದ್ರೂ ನೋಡೋಕೆ ಆಗ್ತಿಲ್ಲ,+
ಕಿವಿ ಇದ್ರೂ ಕೇಳಿಸ್ಕೊಳ್ಳೋಕೆ ಆಗ್ತಿಲ್ಲ.+
22 ಯೆಹೋವ ಹೇಳೋದು ಏನಂದ್ರೆ ‘ನೀವು ನನಗೆ ಭಯಪಡಲ್ವಾ?
ನೀವು ನನ್ನ ಮುಂದೆ ಗಡಗಡ ನಡುಗಬೇಕಲ್ವಾ?
ಮರಳನ್ನ ಸಮುದ್ರಕ್ಕೆ ಗಡಿಯಾಗಿ ಇಟ್ಟವನು ನಾನೇ,
ಅದು ತನ್ನ ಗಡಿ ದಾಟಿ ಬರದ ಹಾಗೆ ನಾನು ಅದಕ್ಕೆ ಒಂದು ಶಾಶ್ವತ ನಿಯಮ ಇಟ್ಟಿದ್ದೀನಿ.
ಸಮುದ್ರದ ಅಲೆಗಳು ಎಷ್ಟೇ ಹೊಯ್ದಾಡಿದ್ರೂ ಆ ಗಡಿ ಮೀರೋಕೆ ಆಗಲ್ಲ,
ಅವು ಎಷ್ಟೇ ಆರ್ಭಟಿಸಿದ್ರೂ ದಾಟಿ ಬರೋಕೆ ಆಗಲ್ಲ.+
23 ಆದ್ರೆ ಈ ಜನ ಹಠಮಾರಿಗಳು, ದಂಗೆ ಏಳೋ ಜನ್ರು,
ಅವರು ನನ್ನ ದಾರಿ ಬಿಟ್ಟು ತಮ್ಮ ಸ್ವಂತ ದಾರಿಯಲ್ಲಿ ಹೋಗಿದ್ದಾರೆ.+
24 ಅವರು ತಮ್ಮ ಮನಸ್ಸಲ್ಲಿ
“ಈಗ ನಮ್ಮ ದೇವರಾದ ಯೆಹೋವನಿಗೆ ಭಯಪಡೋಣ,
ಕಾಲಕಾಲಕ್ಕೆ ಮಳೆ ಸುರಿಸೋನು ಆತನೇ,
ಶರತ್ಕಾಲದ ಮಳೆಯನ್ನ ವಸಂತಕಾಲದ ಮಳೆಯನ್ನ ಕೊಡೋನು ಆತನೇ,
ಇಂತಿಷ್ಟೇ ವಾರದಲ್ಲಿ ಕೊಯ್ಲು ಮಾಡೋ ಹಾಗೆ ನೋಡ್ಕೊಳ್ಳೋನು ಆತನೇ”+ ಅಂತ ಯೋಚನೆ ಮಾಡಲ್ಲ.
25 ನೀವು ತಪ್ಪುಗಳನ್ನ ಮಾಡಿದ್ರಿಂದ ನಿಮಗೆ ಅದೆಲ್ಲ ಸಿಗ್ತಿಲ್ಲ,
ನೀವು ಪಾಪಗಳನ್ನ ಮಾಡಿದ್ರಿಂದ ಒಳ್ಳೇ ವಿಷ್ಯಗಳು ನಿಮಗೆ ಸಿಗ್ತಿಲ್ಲ.+
26 ನನ್ನ ಜನ್ರಲ್ಲಿ ಕೆಟ್ಟವರು ಇದ್ದಾರೆ.
ಹಕ್ಕಿಗಳನ್ನ ಹಿಡಿಯೋರು ಹೊಂಚು ಹಾಕುವಾಗ ಇಣಿಕಿ ನೋಡೋ ತರ ಅವರು ಇಣಿಕಿ ನೋಡ್ತಾ ಇರ್ತಾರೆ.
ಅವರು ಜೀವ ತೆಗಿಯೋ ಉರ್ಲು ಇಟ್ಟಿದ್ದಾರೆ.
ಅವರು ಹಿಡಿಯೋದು ಮನುಷ್ಯರನ್ನೇ!
27 ಪಂಜರದಲ್ಲಿ ಪಕ್ಷಿಗಳು ತುಂಬಿರೋ ಹಾಗೆ,
ಮೋಸದಿಂದ ಪಡೆದ ವಸ್ತುಗಳು ಅವ್ರ ಮನೆಯಲ್ಲಿ ತುಂಬಿದೆ.+
ಹೀಗೆ ಅವರು ಶ್ರೀಮಂತರಾಗಿ ಇದ್ದಾರೆ, ಬಲಶಾಲಿ ಆಗಿದ್ದಾರೆ.
28 ಅವರು ಚೆನ್ನಾಗಿ ಕೊಬ್ಬಿ ಪಳಪಳ ಹೊಳಿತಾರೆ.
ಲೆಕ್ಕ ಇಲ್ಲದಷ್ಟು ಕೆಟ್ಟತನ ಮಾಡ್ತಾರೆ.
ಅನಾಥರು* ಮೊಕದ್ದಮೆ ಹೂಡಿದ್ರೆ ಅವ್ರಿಗಾಗಿ ವಾದಿಸಲ್ಲ,+
ತಮಗೆಲ್ಲಿ ಲಾಭ ಸಿಗುತ್ತೆ ಅಂತ ಮಾತ್ರ ನೋಡ್ತಾರೆ,
ಬಡವರಿಗೆ ನ್ಯಾಯ ಸಿಗದ ಹಾಗೆ ಮಾಡ್ತಾರೆ.’”+
29 ಯೆಹೋವ ಹೇಳೋದು ಏನಂದ್ರೆ “ಇದಕ್ಕೆಲ್ಲ ನಾನು ಅವ್ರಿಂದ ಲೆಕ್ಕ ಕೇಳಬಾರ್ದಾ?
ಇಂಥ ಜನ್ರಿಗೆ ನಾನು ಸೇಡು ತೀರಿಸಬಾರ್ದಾ?
30 ಭಯಹುಟ್ಟಿಸೋ ಭಯಂಕರ ವಿಷ್ಯ ದೇಶದಲ್ಲಿ ನಡಿದಿದೆ, ಅದೇನಂದ್ರೆ
31 ಪ್ರವಾದಿಗಳು ಸುಳ್ಳು ಭವಿಷ್ಯವಾಣಿಗಳನ್ನ ಹೇಳ್ತಾ ಇದ್ದಾರೆ,+
ಪುರೋಹಿತರು ಅಧಿಕಾರ ಚಲಾಯಿಸಿ ಬೇರೆಯವ್ರನ್ನ ತುಳಿತಾರೆ.
ನನ್ನ ಜನ್ರಿಗೆ ಅದೇ ಇಷ್ಟ.+
ಆದ್ರೆ ಅಂತ್ಯ ಬರುವಾಗ ನೀವೇನು ಮಾಡ್ತೀರ?”