ಯೋಹಾನನಿಗೆ ಕೊಟ್ಟ ಪ್ರಕಟನೆ
19 ಆಮೇಲೆ ಸ್ವರ್ಗದಿಂದ ದೇವದೂತರು ಗುಂಪಾಗಿ ಹೇಳಿದ್ರೆ ಹೇಗಿರುತ್ತೋ ಅಂಥ ಒಂದು ದೊಡ್ಡ ಧ್ವನಿ ನನಗೆ ಕೇಳಿಸ್ತು. ಅದೇನಂದ್ರೆ “ಯಾಹುವನ್ನ ಸ್ತುತಿಸಿ!*+ ನಮ್ಮ ದೇವರು ನಮ್ಮನ್ನ ರಕ್ಷಿಸ್ತಾನೆ. ಆತನಿಗೆ ತುಂಬ ಶಕ್ತಿ, ಮಹಿಮೆ ಇದೆ. 2 ಆತನು ನ್ಯಾಯವಾಗಿ, ಸರಿಯಾಗಿ ತೀರ್ಪು ಮಾಡ್ತಾನೆ.+ ಯಾಕಂದ್ರೆ ಪ್ರಸಿದ್ಧ ವೇಶ್ಯೆ ಲೈಂಗಿಕ ಅನೈತಿಕತೆಯಿಂದ* ಭೂಮಿಯನ್ನ ಹಾಳು ಮಾಡಿದಳು. ಅದಕ್ಕೇ ದೇವರು ಅವಳಿಗೆ ಶಿಕ್ಷೆ ಕೊಟ್ಟಿದ್ದಾನೆ. ಅವಳು ದೇವರ ಸೇವಕರ ರಕ್ತವನ್ನ ಸುರಿಸಿದಳು. ಅದಕ್ಕೇ ದೇವರು ಸೇಡು ತೀರಿಸ್ಕೊಂಡಿದ್ದಾನೆ.”+ 3 ತಕ್ಷಣ ಎರಡನೇ ಸಾರಿ ಅವರು ಹೀಗೆ ಹೇಳಿದ್ರು: “ಯಾಹುವನ್ನ ಸ್ತುತಿಸಿ!*+ ಬಾಬೆಲ್ ಪಟ್ಟಣ ಸುಡ್ತಾ ಇರುವಾಗ ಆ ಹೊಗೆ ಯಾವಾಗ್ಲೂ ಮೇಲೆ ಹೋಗ್ತಾ ಇರುತ್ತೆ.”+
4 ಆಗ 24 ಹಿರಿಯರು,+ ನಾಲ್ಕು ಜೀವಿಗಳು+ ಅಡ್ಡಬಿದ್ದು ಸಿಂಹಾಸನದ ಮೇಲೆ ಕೂತಿದ್ದ ದೇವರನ್ನ ಆರಾಧಿಸ್ತಾ “ಆಮೆನ್! ಯಾಹುವನ್ನ ಸ್ತುತಿಸಿ!”*+ ಅಂತ ಹೇಳಿದ್ರು.
5 ಅಷ್ಟೇ ಅಲ್ಲ ಸಿಂಹಾಸನದ ಕಡೆಯಿಂದ ಬಂದ ಇನ್ನೊಂದು ಧ್ವನಿ “ದೇವರಿಗೆ ಭಯಪಡುವವ್ರೇ, ಚಿಕ್ಕವ್ರಿಂದ ಹಿಡಿದು ದೊಡ್ಡವ್ರ ತನಕ ಇರೋ+ ಆತನ ಎಲ್ಲ ಸೇವಕರೇ, ನಮ್ಮ ದೇವರನ್ನ ಸ್ತುತಿಸಿ”+ ಅಂತ ಹೇಳ್ತು.
6 ಆಗ ಒಂದು ಶಬ್ದ ಬಂತು. ಅದು ತುಂಬ ಜನ್ರ ಶಬ್ದದ ತರ, ಪ್ರವಾಹದ ಶಬ್ದದ ತರ, ದೊಡ್ಡ ಗುಡುಗಿನ ಶಬ್ದದ ತರ ಇತ್ತು. ಅವರು ಹೀಗೆ ಹೇಳಿದ್ರು: “ಯಾಹುವನ್ನ ಸ್ತುತಿಸಿ.*+ ನಮ್ಮ ದೇವರಾದ ಯೆಹೋವ* ಸರ್ವಶಕ್ತ.+ ಆತನು ರಾಜನಾಗಿ ಆಳೋದನ್ನ ಶುರುಮಾಡಿದ್ದಾನೆ.+ 7 ನಾವು ಖುಷಿಪಡೋಣ. ಆನಂದದಿಂದ ಆತನಿಗೆ ಗೌರವ ಕೊಡೋಣ. ಯಾಕಂದ್ರೆ ಕುರಿಮರಿಯ ಮದುವೆ ಹತ್ರ ಆಗಿದೆ. ಆತನನ್ನ ಮದುವೆ ಆಗೋ ಹುಡುಗಿ ತಯಾರಾಗಿದ್ದಾಳೆ. 8 ಶುದ್ಧವಾಗಿರೋ, ಹೊಳಿಯೋ, ಚೆನ್ನಾಗಿರೋ ನಾರಿನ ಬಟ್ಟೆಯನ್ನ ಹಾಕೊಳ್ಳೋಕೆ ಅವಳಿಗೆ ಅನುಮತಿ ಸಿಕ್ಕಿದೆ. ಯಾಕಂದ್ರೆ ಒಳ್ಳೇ ನಾರಿನ ಬಟ್ಟೆ ಪವಿತ್ರ ಜನ್ರ ಒಳ್ಳೇ ಕೆಲಸಗಳನ್ನ ಸೂಚಿಸುತ್ತೆ.”+
9 ಆ ದೇವದೂತ ನನಗೆ ಹೀಗೆ ಹೇಳಿದ: “ಈ ಮಾತುಗಳನ್ನ ಬರಿ: ಕುರಿಮರಿಯ ಮದುವೆ ಊಟಕ್ಕೆ ಯಾರನ್ನೆಲ್ಲ ಕರೆದಿದ್ದಾರೋ+ ಅವರು ಖುಷಿಯಾಗಿ ಇರ್ತಾರೆ.” ಅಷ್ಟೇ ಅಲ್ಲ “ಇದು ದೇವರ ಮಾತು. ನಾವು ನಂಬಬಹುದು” ಅಂತಾನೂ ಹೇಳಿದ. 10 ಆಗ ನಾನು ಆ ದೇವದೂತನನ್ನ ಆರಾಧಿಸೋಕೆ ಅವನ ಕಾಲಿಗೆ ಬಿದ್ದೆ. ಆಗ ಅವನು “ಏನು ಮಾಡ್ತಾ ಇದ್ದೀಯ? ಹಾಗೆ ಮಾಡಬೇಡ!+ ನಾನು ನಿನ್ನ ತರಾನೇ ಒಬ್ಬ ಸೇವಕ ಅಷ್ಟೆ. ಯೇಸು ಬಗ್ಗೆ ಹೇಳೋಕೆ ದೇವರು ನನಗೆ ಈ ಕೆಲಸ ಕೊಟ್ಟಿದ್ದಾನೆ.+ ದೇವರನ್ನ ಆರಾಧನೆ ಮಾಡು.+ ಯಾಕಂದ್ರೆ ಯೇಸು ಬಗ್ಗೆ ಸಾಕ್ಷಿ ಕೊಡೋದೇ ಭವಿಷ್ಯವಾಣಿಗಳ ಉದ್ದೇಶ”+ ಅಂದ.
11 ಆಮೇಲೆ ಸ್ವರ್ಗ ತೆರಿತು. ಒಂದು ಬಿಳಿ ಕುದುರೆ ಕಾಣಿಸ್ತು.+ ಆ ಕುದುರೆ ಮೇಲೆ ಕೂತಿದ್ದವನಿಗೆ ನಂಬಿಗಸ್ತ+ ಮತ್ತು ಸತ್ಯವಂತ ಅನ್ನೋ ಹೆಸ್ರಿತ್ತು.+ ಆತನು ನ್ಯಾಯವಾಗಿ ತೀರ್ಪು ಮಾಡ್ತಾನೆ. ನ್ಯಾಯವಾಗಿ ಯುದ್ಧ ಮಾಡ್ತಾನೆ.+ 12 ಆತನ ಕಣ್ಣುಗಳು ಉರಿಯೋ ಬೆಂಕಿ ತರ ಇದೆ.+ ಆತನ ತಲೆ ಮೇಲೆ ತುಂಬ ಕಿರೀಟ ಇದೆ. ಆತನ ಮೇಲೆ ಒಂದು ಹೆಸ್ರು ಬರೆದಿದೆ. ಆ ಹೆಸ್ರು ಏನಂತ ಆತನಿಗೆ ಮಾತ್ರ ಗೊತ್ತು. ಬೇರೆ ಯಾರಿಗೂ ಗೊತ್ತಿಲ್ಲ. 13 ಆತನ ಬಟ್ಟೆಗೆ ರಕ್ತದ ಕಲೆ* ಆಗಿದೆ. ಆತನಿಗೆ ದೇವರ ವಾಕ್ಯ ಅನ್ನೋ ಹೆಸ್ರಿದೆ.+ 14 ಸ್ವರ್ಗದಲ್ಲಿರೋ ಸೈನ್ಯ ಆತನ ಹಿಂದೆ ಹೋಗ್ತಿದೆ. ಆ ಸೈನ್ಯದಲ್ಲಿ ಇರುವವ್ರೆಲ್ಲ ಬಿಳಿ ಕುದುರೆಗಳ ಮೇಲೆ ಕೂತಿದ್ರು. ಅವರು ಶುದ್ಧವಾಗಿರೋ, ಬೆಳ್ಳಗಿರೋ, ಒಳ್ಳೇ ನಾರಿನ ಬಟ್ಟೆ ಹಾಕೊಂಡಿದ್ರು. 15 ಆತನ ಬಾಯಿಂದ ಒಂದು ದೊಡ್ಡ ಕತ್ತಿ ಹೊರಗೆ ಬರ್ತಾ ಇತ್ತು. ಅದು ತುಂಬಾ ಉದ್ದ ಇತ್ತು,+ ಚೂಪಾಗಿತ್ತು. ಆತನು ಅದನ್ನ ದೇಶಗಳನ್ನ ನಾಶಮಾಡೋಕೆ ಬಳಸ್ತಾನೆ. ಕಬ್ಬಿಣದ ಕೋಲಿಂದ ಅವ್ರ ಮೇಲೆ ಆಳ್ವಿಕೆ ಮಾಡ್ತಾನೆ.+ ಸರ್ವಶಕ್ತನಾಗಿರೋ ದೇವರ ಕೋಪದ ದ್ರಾಕ್ಷಿತೊಟ್ಟಿಯನ್ನ ತುಳಿತಾನೆ.+ 16 ಆತನ ಬಟ್ಟೆ ಮೇಲೆ, ಆತನ ತೊಡೆ ಮೇಲೆ ಒಂದು ಹೆಸ್ರು ಬರೆದಿತ್ತು. ಅದೇನಂದ್ರೆ ರಾಜರ ರಾಜ, ಒಡೆಯರ ಒಡೆಯ.+
17 ಅಷ್ಟೇ ಅಲ್ಲ ಒಬ್ಬ ದೇವದೂತ ಸೂರ್ಯನ ಕಿರಣಗಳಲ್ಲಿ ನಿಂತಿರೋದನ್ನ ನಾನು ನೋಡ್ದೆ. ಆಕಾಶದಲ್ಲಿ ಹಾರಾಡೋ ಎಲ್ಲ ಹಕ್ಕಿಗಳಿಗೆ ಅವನು ಜೋರಾಗಿ ಹೀಗೆ ಹೇಳಿದ: “ಇಲ್ಲಿ ಬನ್ನಿ, ದೇವರು ಏರ್ಪಾಡು ಮಾಡಿರೋ ಸಂಜೆ ಊಟಕ್ಕೆ ಬನ್ನಿ.+ 18 ರಾಜರ, ಸೇನಾಧಿಪತಿಗಳ, ಬಲಿಷ್ಠರ,+ ಕುದುರೆಗಳ, ಅದರ ಮೇಲೆ ಕೂತಿರೋ ಸವಾರರ ಮಾಂಸವನ್ನ,+ ಎಲ್ಲರ ಮಾಂಸವನ್ನ ಅಂದ್ರೆ ಸ್ವತಂತ್ರರಾಗಿರೋ ದಾಸರಾಗಿರೋ ಚಿಕ್ಕವರ ದೊಡ್ಡವರ ಮಾಂಸವನ್ನ ತಿನ್ನಿ.”
19 ಕಾಡುಪ್ರಾಣಿ, ಭೂಮಿಯ ರಾಜರು ಮತ್ತು ಅವ್ರ ಸೈನಿಕರು ಸೇರಿಬಂದಿರೋದನ್ನ ನಾನು ನೋಡಿದೆ. ಕುದುರೆ ಮೇಲೆ ಕೂತಿದ್ದವನ ಮತ್ತು ಅವನ ಸೈನ್ಯದ ವಿರುದ್ಧ ಯುದ್ಧ ಮಾಡೋಕೆ ಅವ್ರೆಲ್ಲ ಬಂದಿದ್ರು.+ 20 ಕುದುರೆ ಮೇಲೆ ಕೂತಿರುವವನು ಕಾಡುಪ್ರಾಣಿಯನ್ನ, ಸುಳ್ಳು ಪ್ರವಾದಿಯನ್ನ+ ಹಿಡಿದು ಉರಿಯೋ ಬೆಂಕಿಯ ಕೆರೆಗೆ ಜೀವಂತವಾಗಿ ಹಾಕಿದ.+ ಈ ಸುಳ್ಳು ಪ್ರವಾದಿ ಕಾಡುಪ್ರಾಣಿ ಮುಂದೆ ಅದ್ಭುತಗಳನ್ನ ಮಾಡಿದ. ಹೀಗೆ ಮಾಡಿ ಕಾಡುಪ್ರಾಣಿಯ ಗುರುತು ಇದ್ದವ್ರನ್ನ,+ ಕಾಡುಪ್ರಾಣಿಯ ಮೂರ್ತಿಯನ್ನ ಆರಾಧಿಸ್ತಿದ್ದ ಜನ್ರನ್ನ+ ಮರಳು ಮಾಡಿದ. 21 ಆದ್ರೆ ರಾಜರನ್ನ, ಸೈನಿಕರನ್ನ ಕುದುರೆ ಮೇಲೆ ಕೂತಿದ್ದವನ ಬಾಯಿಂದ ಹೊರಗೆ ಬರ್ತಿದ್ದ ಕತ್ತಿಯಿಂದ ಸಾಯಿಸಿದ್ರು.+ ಎಲ್ಲ ಪಕ್ಷಿಗಳು ಅವ್ರ ಶವಗಳನ್ನ ತಿಂದು ಹೊಟ್ಟೆ ತುಂಬಿಸಿಕೊಂಡ್ವು.+