ಯೆಶಾಯ
22 ದರ್ಶನದ ಕಣಿವೆ* ಬಗ್ಗೆ ಸಿಕ್ಕಿದ ಸಂದೇಶ+
ನಿನಗೆ ಏನಾಗಿದೆ? ನಿನ್ನ ಜನ್ರೆಲ್ಲ ಯಾಕೆ ಮಾಳಿಗೆಗಳನ್ನ ಹತ್ತಿದ್ದಾರೆ?
2 ಭಾರಿಮೋಜಿನಲ್ಲಿ ಆನಂದಿಸೋ ಕೋಲಾಹಲದ ಪಟ್ಟಣವೇ,
ನೀನು ಗಲಭೆ ಗೊಂದಲಗಳಿಂದ ತುಂಬಿ ಹೋಗಿದ್ದೆ,
ಸತ್ತ ನಿನ್ನ ಜನ ಕತ್ತಿಯಿಂದಾಗಲಿ,
ಯುದ್ಧದಿಂದಾಗಲಿ ಸಾಯಲಿಲ್ಲ.+
3 ನಿನ್ನ ಪ್ರಭುಗಳೆಲ್ಲ ಒಟ್ಟಿಗೆ ಓಡಿಹೋಗಿದ್ದಾರೆ.+
ಅವ್ರನ್ನ ಕೈದಿಗಳಾಗಿ ತಗೊಂಡು ಹೋಗೋಕೆ ಬಿಲ್ಲಿನ ಅವಶ್ಯಕತೆ ಬರಲಿಲ್ಲ.
ಸಿಕ್ಕಿದವ್ರನ್ನೆಲ್ಲ ಕೈದಿಗಳಾಗಿ ತಗೊಂಡು ಹೋಗಲಾಯ್ತು,+
ಅವರು ತುಂಬ ದೂರ ಓಡಿಹೋಗಿದ್ರೂ ಅವ್ರನ್ನ ಬಿಡಲಿಲ್ಲ.
ನನ್ನ ಮಗಳ ಅಂದ್ರೆ ನನ್ನ ಜನ್ರ ನಾಶನದಿಂದ ದುಃಖಿಸೋ ನನ್ನನ್ನ+
ಸಂತೈಸೋಕೆ ಪ್ರಯತ್ನಿಸಬೇಡಿ.
5 ವಿಶ್ವದ ರಾಜನೂ ಸೈನ್ಯಗಳ ದೇವರೂ ಆದ ಯೆಹೋವನ ಕಡೆಯಿಂದ
ಆ ದಿನ ದರ್ಶನದ ಕಣಿವೆಗೆ
ಗಲಿಬಿಲಿಯ, ಸೋಲಿನ ಮತ್ತು ಭೀತಿಯ ದಿನವಾಗಿದೆ.+
ಪಟ್ಟಣದ ಗೋಡೆಯನ್ನ ಬೀಳಿಸಲಾಗುತ್ತೆ,+
ಜನ ಸಹಾಯಕ್ಕಾಗಿ ಕೂಗ್ತಿದ್ದಾರೆ. ಆ ಕೂಗು ಬೆಟ್ಟದ ತನಕ ಮುಟ್ಟುತ್ತೆ.
ಯುದ್ಧರಥಗಳಿಂದ ತುಂಬಿಹೋಗ್ತವೆ,
ಪಟ್ಟಣದ ಬಾಗಿಲುಗಳಲ್ಲಿ ಕುದುರೆಗಳು* ತಮ್ಮತಮ್ಮ ಸ್ಥಳಗಳಲ್ಲಿ ಸಿದ್ಧವಾಗಿ ನಿಲ್ಲುತ್ತವೆ.
8 ಯೆಹೂದದ ಪರದೆಯನ್ನ* ತೆಗೆದುಹಾಕಲಾಗುತ್ತೆ,
ಆ ದಿನ ನೀನು ‘ಲೆಬನೋನ್ ವನ’ ಅನ್ನೋ ಅರಮನೆಯಲ್ಲಿ+ ಇರೋ ಆಯುಧಗಳ ಮನೆ ಕಡೆ ನೋಡ್ತೀಯ. 9 ದಾವೀದಪಟ್ಟಣದ ಗೋಡೆಗಳಲ್ಲಿ ನೀನು ತುಂಬ ಬಿರುಕುಗಳನ್ನ ಕಾಣ್ತೀಯ.+ ಕೆಳಗಿನ ಕೊಳದಲ್ಲಿ ನೀರನ್ನ ಶೇಖರಿಸ್ತೀಯ.+ 10 ಯೆರೂಸಲೇಮಿನ ಮನೆಗಳನ್ನ ಎಣಿಸ್ತೀಯ. ಗೋಡೆಗಳನ್ನ ಬಲಪಡಿಸೋಕೆ ಮನೆಗಳನ್ನ ಕೆಡವಿ ಹಾಕ್ತೀಯ. 11 ಎರಡು ಗೋಡೆಗಳ ಮಧ್ಯ ಹಳೇ ಕೊಳದ ನೀರನ್ನ ಸಂಗ್ರಹಿಸೋ ಸ್ಥಳವನ್ನ ಮಾಡ್ತೀಯ. ಆದ್ರೆ ಅದನ್ನ ಮಾಡಿದ ಮಹಾನ್ ದೇವರ ಕಡೆ ನೀನು ದೃಷ್ಟಿ ಹಾಯಿಸಲ್ಲ. ಅದನ್ನ ತುಂಬ ಹಿಂದೆನೇ ರಚಿಸಿದವನನ್ನ ನೋಡಲ್ಲ.
12 ವಿಶ್ವದ ರಾಜನೂ ಸೈನ್ಯಗಳ ದೇವರೂ ಆದ ಯೆಹೋವ ಆ ದಿನ ನಿಮಗೆ
ತಲೆಗಳನ್ನ ಬೋಳಿಸ್ಕೊಂಡು ಗೋಣಿ ಸುತ್ಕೊಂಡು
ಗೋಳಾಡೋಕೆ, ಶೋಕಿಸೋಕೆ ಹೇಳಿದನು.+
13 ಆದ್ರೆ ನೀವು ಸಂಭ್ರಮದಿಂದ ಉಲ್ಲಾಸಪಟ್ರಿ,
ಪ್ರಾಣಿಗಳನ್ನ ಮತ್ತು ಕುರಿಗಳನ್ನ ಕಡಿದು
ಮಾಂಸ ತಿಂದ್ರಿ, ದ್ರಾಕ್ಷಾಮದ್ಯ ಕುಡಿದ್ರಿ.+
‘ತಿನ್ನೋಣ, ಕುಡಿಯೋಣ. ಯಾಕಂದ್ರೆ ಹೇಗಿದ್ರೂ ನಾಳೆ ಸಾಯ್ತೀವಿ’+ ಅಂತ ಮಾತಾಡ್ಕೊಂಡ್ರಿ.”
14 ಆಮೇಲೆ ಸೈನ್ಯಗಳ ದೇವರಾದ ಯೆಹೋವ ನನ್ನ ಕಿವಿಯಲ್ಲಿ ಈ ವಿಷ್ಯ ಹೇಳಿದನು “ವಿಶ್ವದ ರಾಜನೂ ಸೈನ್ಯಗಳ ದೇವರೂ ಆದ ಯೆಹೋವ ಹೇಳೋದು ಏನಂದ್ರೆ ‘ನೀವು ಸಾಯೋ ತನಕ ನಿಮ್ಮ ಈ ಪಾಪಕ್ಕೆ ಪ್ರಾಯಶ್ಚಿತ್ತ ಆಗಲ್ಲ.’”+
15 ವಿಶ್ವದ ರಾಜನೂ ಸೈನ್ಯಗಳ ದೇವರೂ ಆದ ಯೆಹೋವ ಹೀಗೆ ಹೇಳ್ತಿದ್ದಾನೆ “ಹೋಗು, ಅರಮನೆಯ ಮೇಲ್ವಿಚಾರಕನಾಗಿರೋ ಶೆಬ್ನನ+ ಹತ್ರ ಹೋಗಿ ಹೀಗೆ ಹೇಳು 16 ‘ನೀನು ಇಲ್ಲೇನು ಮಾಡ್ತಿದ್ದೀಯ? ನಿನಗಾಗಿ ಇಲ್ಲಿ ಸಮಾಧಿ ಮಾಡ್ಕೊಳ್ತಿದ್ದೀಯಲ್ಲಾ, ಇಲ್ಲಿ ನಿನಗೆ ಯಾರಿದ್ದಾರೆ?’ ಅವನು ಎತ್ರ ಸ್ಥಳದಲ್ಲಿ ತನಗಾಗಿ ಒಂದು ಸಮಾಧಿ ಸಿದ್ಧಮಾಡ್ಕೊಳ್ತಿದ್ದಾನೆ, ಕಡಿದಾದ ಬಂಡೆ ಕತ್ತರಿಸಿ ತನಗಾಗಿ ಒಂದು ವಿಶ್ರಾಂತಿ ಸ್ಥಳ ಮಾಡಿಸ್ಕೊಳ್ತಿದ್ದಾನೆ. 17 ‘ಮನುಷ್ಯನೇ, ನೋಡು! ಯೆಹೋವ ನಿನ್ನನ್ನ ಜೋರಾಗಿ ನೆಲಕ್ಕೆ ಬಡಿದು ಬಲವಂತವಾಗಿ ಹಿಡ್ಕೊಳ್ತಾನೆ. 18 ಆತನು ನಿನ್ನನ್ನ ಬಿಗಿಯಾಗಿ ಕಟ್ಟಿ ಚೆಂಡು ಎಸಿಯೋ ತರ ವಿಶಾಲವಾದ ದೇಶಕ್ಕೆ ಖಂಡಿತ ಎಸೆದುಬಿಡ್ತಾನೆ. ನೀನು ಅಲ್ಲೇ ಸಾಯ್ತೀಯ, ವೈಭವದ ನಿನ್ನ ರಥಗಳೂ ಅಲ್ಲೇ ಬಿದ್ದಿರ್ತವೆ. ಅವುಗಳಿಂದಾಗಿ ನಿನ್ನ ಯಜಮಾನನ ಮನೆಗೆ ಅವಮಾನ ಆಗುತ್ತೆ. 19 ನಿನ್ನ ಸ್ಥಾನದಿಂದ ನಾನು ನಿನ್ನನ್ನ ಕೆಳಗಿಳಿಸ್ತೀನಿ. ನಿನ್ನನ್ನ ಕೆಲಸದಿಂದ ಕಿತ್ತುಹಾಕ್ತೀನಿ.
20 ಆ ದಿನ ನಾನು ಹಿಲ್ಕೀಯನ+ ಮಗನೂ ನನ್ನ ಸೇವಕನೂ ಆದ ಎಲ್ಯಕೀಮನನ್ನ ಕರಿತೀನಿ, 21 ನಿನ್ನ ನಿಲುವಂಗಿಯನ್ನ ಅವನಿಗೆ ತೊಡಿಸಿ ನಿನ್ನ ಸೊಂಟಪಟ್ಟಿಯನ್ನ ಅವನಿಗೆ ಕಟ್ತೀನಿ.+ ನಿನ್ನ ಅಧಿಕಾರವನ್ನ ಅವನ ಕೈಗೆ ಕೊಡ್ತೀನಿ. ಯೆರೂಸಲೇಮಿನ ನಿವಾಸಿಗಳಿಗೆ ಯೆಹೂದ ಮನೆತನಕ್ಕೆ ಅವನು ತಂದೆಯಾಗಿ ಇರ್ತಾನೆ. 22 ದಾವೀದನ ಮನೆಯ ಬೀಗದ ಕೈಯನ್ನ+ ಅವನ ಭುಜಗಳ ಮೇಲೆ ಇಡ್ತೀನಿ. ಅವನು ತೆರೆದ್ರೆ ಯಾರೂ ಮುಚ್ಚಲ್ಲ, ಅವನು ಮುಚ್ಚಿದ್ರೆ ಯಾರೂ ತೆರಿಯಲ್ಲ. 23 ಕದಲದ ಸ್ಥಳದಲ್ಲಿ ಗೂಟ ಹೊಡೆದ ಹಾಗೆ ನಾನು ಅವನನ್ನ ಸ್ಥಿರ ಮಾಡ್ತೀನಿ. ಅವನ ತಂದೆಯ ಮನೆಗೆ ಅವನು ಮಹಿಮೆಯ ಸಿಂಹಾಸನ ಆಗ್ತಾನೆ. 24 ಹೇಗೆ ಚಿಕ್ಕಚಿಕ್ಕ ಪಾತ್ರೆಗಳನ್ನ, ಬಟ್ಟಲಾಕಾರದ ಪಾತ್ರೆಗಳನ್ನ ದೊಡ್ಡದೊಡ್ಡ ಜಾಡಿಗಳ ಆಸರೆಯಲ್ಲಿ ತೂಗಿ ಹಾಕಿದ ಹಾಗೆ ಅವನ ತಂದೆ ಮನೆಯ ಎಲ್ಲ ಮಹಿಮೆ ಅಂದ್ರೆ ಅವನ ವಂಶಸ್ಥರು, ಅವನ ಸಂತತಿಯವರು ಅವನನ್ನ ಆತುಕೊಳ್ತಾರೆ.’
25 ಸೈನ್ಯಗಳ ದೇವರಾದ ಯೆಹೋವ ಹೀಗಂತಿದ್ದಾನೆ ‘ಆ ದಿನ, ಕದಲದ ಸ್ಥಳದಿಂದ ಗೂಟವನ್ನ ಕಿತ್ತುಹಾಕಲಾಗುತ್ತೆ,+ ಅದು ಬಿದ್ದು ನಾಶವಾಗಿ ಹೋಗುತ್ತೆ, ಅದಕ್ಕೆ ಆತ್ಕೊಂಡಿರೋ ಭಾರ ಬಿದ್ದು ನಾಶ ಆಗುತ್ತೆ. ಯಾಕಂದ್ರೆ ಸ್ವತಃ ಯೆಹೋವನೇ ಈ ಮಾತನ್ನ ಹೇಳಿದ್ದಾನೆ.’”