ಹಬಕ್ಕೂಕ
1 ಈ ಸಂದೇಶ ಪ್ರವಾದಿ ಹಬಕ್ಕೂಕನಿಗೆ* ದರ್ಶನದಲ್ಲಿ ಸಿಕ್ತು:
2 ಯೆಹೋವನೇ, ಇನ್ನೂ ಎಷ್ಟು ದಿನ ನಾನು ನಿನ್ನ ಹತ್ರ ಸಹಾಯಕ್ಕಾಗಿ ಬೇಡಬೇಕು? ನನ್ನ ಪ್ರಾರ್ಥನೆನ ನೀನು ಯಾವಾಗ ಕೇಳಿಸ್ಕೊಳ್ತೀಯ?+
ಹಿಂಸೆಯಿಂದ ನನ್ನನ್ನ ಬಿಡಿಸೋಕೆ ಎಲ್ಲಿ ತನಕ ನಾನು ನಿನ್ನ ಹತ್ರ ಬೇಡ್ತಾನೇ ಇರಬೇಕು? ನೀನು ಯಾವಾಗ ಈ ವಿಷ್ಯದ ಕಡೆ ಗಮನ ಕೊಡ್ತೀಯ?*+
3 ಯಾಕೆ ಈ ಕೆಟ್ಟ ಕೆಲಸಗಳು ನನ್ನ ಕಣ್ಣಿಗೆ ಬೀಳೋ ತರ ಮಾಡ್ತೀಯ?
ಯಾಕೆ ದೌರ್ಜನ್ಯ ನೋಡಿನೂ ನೋಡದ ಹಾಗಿದ್ದೀಯ?
ಯಾಕೆ ಹಿಂಸೆ ಮತ್ತು ಸುಲಿಗೆ ನನ್ನ ಕಣ್ಮುಂದೆನೇ ಇದೆ?
ಯಾಕೆ ಜಗಳ ಮತ್ತು ಯುದ್ಧಗಳು ನಡಿತಾನೇ ಇದೆ?
4 ನಿಯಮ ಪುಸ್ತಕ ಯಾರೂ ಪಾಲಿಸ್ತಿಲ್ಲ,
ನ್ಯಾಯ ಅನ್ನೋದು ಎಲ್ಲೂ ಇಲ್ಲ.
ಕೆಟ್ಟವರು ನೀತಿವಂತರನ್ನ ಸುತ್ಕೊಂಡಿದ್ದಾರೆ,
ಅದಕ್ಕೇ ನ್ಯಾಯ ಮಾಯವಾಗ್ತಿದೆ.+
5 “ಜನಾಂಗಗಳ ಕಡೆಗೆ ನೋಡಿ! ಗಮನಕೊಡಿ!
ಕಣ್ಣುಬಾಯಿ ಬಿಟ್ಕೊಂಡು ನೋಡಿ, ಆಶ್ಚರ್ಯಪಡಿ,
ಯಾಕಂದ್ರೆ ನಿಮ್ಮ ಕಾಲದಲ್ಲಿ ಒಂದು ವಿಷ್ಯ ನಡಿಯುತ್ತೆ,
ಅದ್ರ ಬಗ್ಗೆ ನಿಮಗೆ ಹೇಳಿದ್ರೂ ಅದನ್ನ ನಂಬಲ್ಲ.+
ಅವರು ಬೇರೆಯವರ ಮನೆಗಳನ್ನ ವಶ ಮಾಡ್ಕೊಳ್ಳೋಕೆ
ವಿಶಾಲ ಭೂಮಿಯಲ್ಲೆಲ್ಲ ಓಡಾಡ್ತಾರೆ.+
7 ಅವರು ಭಯಂಕರ ಕ್ರೂರಿಗಳು.
ಅವರು ಮಾಡಿದ್ದೇ ನಿಯಮ, ಅವ್ರದ್ದೇ ಅಧಿಕಾರ.*+
ಅವ್ರ ಯುದ್ಧ ಕುದುರೆಗಳು ಓಡೋಡಿ ಮುಂದೆ ಬರುತ್ತೆ.
ಅವರ ಕುದುರೆಗಳು ತುಂಬ ದೂರದಿಂದ ಬರುತ್ತೆ.
ಬೇಟೆಯನ್ನ ಹಿಡಿಯೋ ಹದ್ದು ಆತುರದಿಂದ ಬರೋ ಹಾಗೆ ಬರುತ್ತೆ.+
9 ಅವ್ರೆಲ್ಲ ಹಿಂಸೆ ಕೊಡೋಕೇ ಬರ್ತಾರೆ.+
ಪೂರ್ವದ ಸುಂಟರಗಾಳಿ ತರ ಸೇರಿ ಬರ್ತಾರೆ,+
ಮರಳಿನ ಕಣಗಳ ತರ ಲೆಕ್ಕ ಇಲ್ಲದಷ್ಟು ಜನ್ರನ್ನ ಕೈದಿಗಳಾಗಿ ಕರ್ಕೊಂಡು ಹೋಗ್ತಾರೆ.
ಎಲ್ಲ ಭದ್ರಕೋಟೆಗಳನ್ನ ನೋಡಿ ನಗ್ತಾರೆ,+
ಮಣ್ಣಿನ ದಿಬ್ಬಗಳನ್ನ ಮಾಡಿ ಅವನ್ನ ವಶ ಮಾಡ್ಕೊಳ್ತಾರೆ.
11 ಆಮೇಲೆ ಅವರು ಜೋರಾಗಿ ಬೀಸೋ ಗಾಳಿ ತರ ದೇಶವನ್ನ ದಾಟಿ ಹೋಗ್ತಾರೆ,
ಆದ್ರೆ ಅವರು ಅಪರಾಧಿಗಳಾಗ್ತಾರೆ,+
ಯಾಕಂದ್ರೆ ಆ ಶಕ್ತಿ ಕೊಟ್ಟಿದ್ದು ಅವ್ರ ದೇವರೇ* ಅಂತ ಅವರು ಹೇಳ್ತಾರೆ.”+
12 ಯೆಹೋವ, ನೀನು ಆರಂಭದಿಂದಲೂ ಇದ್ದವನಲ್ವಾ?+
ನನ್ನ ದೇವರೇ, ಪವಿತ್ರ ದೇವರೇ, ನಿನಗೆ ಸಾವೇ ಇಲ್ಲ.*+
ಅಂಥದ್ರಲ್ಲಿ ಮೋಸಗಾರರನ್ನ ಯಾಕೆ ಸಹಿಸ್ಕೊಳ್ತಾ ಇದ್ದೀಯ?+
ಒಬ್ಬ ಕೆಟ್ಟವನು ನೀತಿವಂತನನ್ನ ನುಂಗುವಾಗ ಅದನ್ನ ನೋಡಿನೂ ನೀನ್ಯಾಕೆ ನೋಡದ ಹಾಗಿದ್ದೀಯ?+
14 ನೀನು ಮನುಷ್ಯರನ್ನ ಸಮುದ್ರದ ಮೀನಿನ ತರ ಯಾಕೆ ಮಾಡಿದ್ದೀಯ?
ನಾಯಕನಿಲ್ಲದ ಸಮುದ್ರದ ಪ್ರಾಣಿಗಳ ತರ ಯಾಕೆ ಮಾಡಿದ್ದೀಯ?
15 ಅವನು* ಅವ್ರನ್ನೆಲ್ಲ ಮೀನು ಹಿಡಿಯೋ ಗಾಳ ಹಾಕಿ ಎಳೀತಾನೆ.
ಅವನು ಅವ್ರನ್ನ ಬಲೆ ಬೀಸಿ ಹಿಡಿತಾನೆ,
ಅವನು ಅವ್ರನ್ನ ಮೀನುಗಳನ್ನ ಹಿಡಿಯೋ ಬಲೆಯಲ್ಲಿ ಒಟ್ಟುಸೇರಿಸ್ತಾನೆ,
ಖುಷಿಯಿಂದ ಕುಣಿದು ಕುಪ್ಪಳಿಸ್ತಾನೆ.+
16 ಅದಕ್ಕೇ ಅವನು ಆ ಬಲೆಗೆ ಬಲಿ ಕೊಡ್ತಾನೆ,
ಮೀನು ಹಿಡಿಯೋ ಬಲೆಗೆ ಧೂಪ ಹಾಕ್ತಾನೆ.
ಯಾಕಂದ್ರೆ ಅದ್ರಿಂದಾನೇ ಅವನಿಗೆ ದಷ್ಟಪುಷ್ಟವಾದ* ಊಟ ಸಿಗೋದು
ಶ್ರೇಷ್ಠವಾದ ಆಹಾರ ಸಿಗೋದು.
17 ಅವನು ಹೀಗೇ ತನ್ನ ಬಲೆಯನ್ನ ತುಂಬ್ತಾ ಖಾಲಿ ಮಾಡ್ತಾ ಇರ್ತಾನಾ?*
ಕನಿಕರ ಇಲ್ಲದೆ ಜನಾಂಗಗಳನ್ನ ನಾಶ ಮಾಡ್ತಾ ಇರ್ತಾನಾ?+