ಥೆಸಲೊನೀಕದವರಿಗೆ ಬರೆದ ಎರಡನೇ ಪತ್ರ
3 ಸಹೋದರರೇ, ಕೊನೇದಾಗಿ ನಾನು ಹೇಳೋದು ಏನಂದ್ರೆ ಯೆಹೋವನ* ಸಂದೇಶವನ್ನ ನಾವು ಎಲ್ಲ ಕಡೆ ಬೇಗ ಸಾರೋ ಹಾಗೆ+ ನಮಗೋಸ್ಕರ ಯಾವಾಗ್ಲೂ ಪ್ರಾರ್ಥಿಸಿ.+ ಆ ವಾಕ್ಯಕ್ಕೆ ನಿಮ್ಮ ತರ ಬೇರೆಯವರೂ ಗೌರವ ಕೊಡೋ ಹಾಗೆ ಆಗ್ಲಿ. 2 ನಮ್ಮನ್ನ ಕೆಟ್ಟವ್ರ ಕೈಯಿಂದ, ಅಪಾಯಕಾರಿ ಜನ್ರ ಕೈಗೆ ಸಿಕ್ಕಿ ಬೀಳದ ಹಾಗೆ ಕಾಪಾಡಬೇಕಂತ ಬೇಡಿ.+ ಯಾಕಂದ್ರೆ ಎಲ್ರಲ್ಲೂ ನಂಬಿಕೆ ಇರಲ್ಲ.*+ 3 ಆದ್ರೆ ನಮ್ಮ ಪ್ರಭು ನಂಬಿಗಸ್ತ. ಆತನು ನಿಮ್ಮನ್ನ ಬಲಪಡಿಸ್ತಾನೆ, ದುಷ್ಟನ* ಕೈಯಿಂದ ತಪ್ಪಿಸಿ ಕಾಪಾಡ್ತಾನೆ. 4 ಅಷ್ಟೇ ಅಲ್ಲ ಪ್ರಭುವಿನ ಶಿಷ್ಯರಾದ ನಮಗೆ ನಿಮ್ಮ ಮೇಲೆ ನಂಬಿಕೆ ಇದೆ. ನಾವು ಕೊಟ್ಟ ಆಜ್ಞೆಗಳನ್ನ ನೀವು ಈಗ್ಲೂ ಪಾಲಿಸ್ತಿದ್ದೀರ, ಮುಂದೆನೂ ಪಾಲಿಸ್ತೀರ ಅಂತ ನಮಗೆ ಗೊತ್ತು. 5 ದೇವರನ್ನ ಪ್ರೀತಿಸೋ ಹಾಗೆ,+ ಕ್ರಿಸ್ತನಿಗಾಗಿ ಸಹಿಸ್ಕೊಳ್ಳೋ ಹಾಗೆ+ ಪ್ರಭು ಯಾವಾಗ್ಲೂ ನಿಮಗೆ ಸಹಾಯ ಮಾಡ್ಲಿ.*
6 ಸಹೋದರರೇ, ಸರಿಯಾದ ದಾರೀಲಿ ನಡೀದೆ,+ ನಮ್ಮಿಂದ ನೀವು* ಕಲಿತ ವಿಷ್ಯಗಳ* ಪ್ರಕಾರ ನಡೀದೆ ಇರೋ ಸಹೋದರನ ಜೊತೆ ಸೇರಬೇಡಿ ಅಂತ+ ಪ್ರಭು ಯೇಸು ಕ್ರಿಸ್ತನ ಹೆಸ್ರಲ್ಲಿ ಆಜ್ಞೆ ಕೊಡ್ತೀವಿ. 7 ನಮ್ಮನ್ನ ಹೇಗೆ ಅನುಕರಿಸಬೇಕು ಅಂತ ನಿಮಗೆ ಗೊತ್ತು.+ ಯಾಕಂದ್ರೆ ನಿಮ್ಮ ಜೊತೆ ಇದ್ದಾಗ ನಾವು ಮನಸ್ಸಿಗೆ ಬಂದ ಹಾಗೆ ನಡಿಲಿಲ್ಲ. 8 ಯಾರ ಹತ್ರಾನೂ ಪುಕ್ಕಟೆ* ಊಟ ಮಾಡ್ಲಿಲ್ಲ.+ ತುಂಬ ಖರ್ಚು ಮಾಡಿಸಿ ಯಾರಿಗೂ ಭಾರ ಆಗಬಾರದು ಅಂತ ನಾವು ಹಗಲೂರಾತ್ರಿ ಬೆವರು ಸುರಿಸಿ ದುಡಿದ್ವಿ.+ 9 ನಿಮ್ಮಿಂದ ಸಹಾಯ ಕೇಳೋ ಹಕ್ಕು ನಮಗಿದ್ರೂ+ ನಾವು ಕೇಳಲಿಲ್ಲ. ನಿಮಗೆ ಒಳ್ಳೇ ಮಾದರಿ ಇಡಬೇಕಂತ+ ನಾವು ಹಾಗೆ ಮಾಡಿದ್ವಿ. 10 ಹೇಳಬೇಕಂದ್ರೆ ನಾವು ನಿಮ್ಮ ಜೊತೆ ಇದ್ದಾಗ “ಕೆಲಸ ಮಾಡೋಕೆ ಇಷ್ಟ ಇಲ್ಲದವರು ಊಟನೂ ಮಾಡಬಾರದು”+ ಅಂತ ಆಜ್ಞೆ ಕೊಡ್ತಿದ್ವಿ. 11 ನಿಮ್ಮಲ್ಲಿ ಸ್ವಲ್ಪ ಜನ ಸರಿಯಾದ ದಾರೀಲಿ ನಡೀತಿಲ್ಲ,+ ಕೆಲಸ ಮಾಡದೆ ಬೇರೆಯವ್ರ ವಿಷ್ಯದಲ್ಲಿ ತಲೆ ಹಾಕ್ತಿದ್ದಾರೆ+ ಅಂತ ಗೊತ್ತಾಯ್ತು. 12 ಅಂಥವರು ಅವ್ರ ಕೆಲಸ ಅವರು ನೋಡ್ಕೊಳ್ಳಲಿ, ದುಡಿದು ಊಟ ಮಾಡ್ಲಿ ಅಂತ ಪ್ರಭು ಯೇಸು ಕ್ರಿಸ್ತನ ಹೆಸ್ರಲ್ಲಿ ಆಜ್ಞೆ ಕೊಡ್ತೀವಿ ಮತ್ತು ಬುದ್ಧಿ ಹೇಳ್ತೀವಿ.+
13 ಸಹೋದರರೇ, ನೀವು ಒಳ್ಳೇದು ಮಾಡೋದನ್ನ ಬಿಟ್ಟುಬಿಡಬೇಡಿ. 14 ಈ ಪತ್ರದಲ್ಲಿ ಹೇಳಿದ ಪ್ರಕಾರ ನಡಿಯದೇ ಇರೋ ವ್ಯಕ್ತಿ ಮೇಲೆ ಕಣ್ಣಿಡಿ, ಅವನ ಸಹವಾಸ ಬಿಟ್ಟುಬಿಡಿ.+ ಅವನಿಗೆ ನಾಚಿಕೆ ಆಗ್ಲಿ. 15 ಆದ್ರೆ ಅವನನ್ನ ಶತ್ರುವಾಗಿ ನೋಡಬೇಡಿ, ನಿಮ್ಮ ಸಹೋದರನಾದ ಅವನಿಗೆ ಬುದ್ಧಿಹೇಳ್ತಾ ಇರಿ.+
16 ಶಾಂತಿಯ ಪ್ರಭು ಯಾವಾಗ್ಲೂ ಎಲ್ಲ ವಿಧದಲ್ಲೂ ನಿಮಗೆ ಶಾಂತಿ ಕೊಡ್ಲಿ.+ ಪ್ರಭು ನಿಮ್ಮೆಲ್ರ ಜೊತೆ ಇರಲಿ.
17 ನಿಮಗೆ ನನ್ನ ವಂದನೆ, ಪೌಲನಾದ ನಾನೇ ನನ್ನ ಕೈಯಾರೆ ಇದನ್ನ ಬರಿತಾ ಇದ್ದೀನಿ.+ ಪತ್ರ ಬರೆದಿದ್ದು ನಾನೇ ಅಂತ ನಿಮಗೆ ಗೊತ್ತಾಗ್ಲಿ ಅಂತ ಎಲ್ಲ ಪತ್ರದಲ್ಲಿ ಹೀಗೇ ಹೇಳಿದ್ದೀನಿ.
18 ನಮ್ಮ ಪ್ರಭು ಯೇಸು ಕ್ರಿಸ್ತ ನಿಮ್ಮೆಲ್ರಿಗೆ ಅಪಾರ ಕೃಪೆ ತೋರಿಸ್ಲಿ.