ಹೋಶೇಯ
14 “ಇಸ್ರಾಯೇಲೇ, ನಿನ್ನ ದೇವರಾದ ಯೆಹೋವನ ಹತ್ರ ವಾಪಸ್ ಬಾ,+
ನೀನು ತಪ್ಪುಮಾಡಿ ಎಡವಿ ಬಿದ್ದಿದ್ದೀಯ.
2 ಯೆಹೋವನ ಹತ್ರ ವಾಪಸ್ ಬಂದು ಹೀಗೆ ಹೇಳು:
‘ನಮ್ಮ ತಪ್ಪುಗಳನ್ನ ನೀನು ಕ್ಷಮಿಸು,+ ನಮ್ಮಿಂದ ಒಳ್ಳೇದನ್ನ ಸ್ವೀಕರಿಸು,
3 ಅಶ್ಶೂರ ನಮ್ಮನ್ನ ರಕ್ಷಿಸಲ್ಲ.+
ನಾವು ಕುದುರೆಗಳ ಮೇಲೆ ಸವಾರಿ ಮಾಡಲ್ಲ,+
ನಮ್ಮ ಕೈಯಿಂದ ಮಾಡಿದ ವಸ್ತುಗಳಿಗೆ “ನಮ್ಮ ದೇವರೇ” ಅಂತ ಇನ್ಮುಂದೆ ಹೇಳಲ್ಲ,
ಯಾಕಂದ್ರೆ ತಂದೆಯಿಲ್ಲದ ಮಕ್ಕಳಿಗೆ ಕರುಣೆ ತೋರಿಸುವವನು ನೀನೇ.’+
4 ಅವ್ರ ನಂಬಿಕೆ ದ್ರೋಹ ಅನ್ನೋ ಕಾಯಿಲೆಯನ್ನ ನಾನು ವಾಸಿ ಮಾಡ್ತೀನಿ.+
5 ನಾನು ಇಸ್ರಾಯೇಲಿಗೆ ಇಬ್ಬನಿ ತರ ಇರ್ತಿನಿ,
ಅವನು ಲಿಲಿ ಹೂವಿನ ತರ ಅರಳ್ತಾನೆ,
ಲೆಬನೋನಿನ ಮರಗಳ ತರ ಆಳವಾಗಿ ಬೇರು ಬಿಡ್ತಾನೆ.
6 ಅವನ ಕೊಂಬೆಗಳು ವಿಶಾಲವಾಗಿ ಹರಡುತ್ತೆ,
ಅವನ ಅಂದ ಆಲಿವ್ ಮರದ ತರ ಇರುತ್ತೆ,
ಅವನ ಪರಿಮಳ ಲೆಬನೋನಿನ ಮರಗಳ ತರ ಇರುತ್ತೆ.
7 ಅವರು ಮತ್ತೆ ಆತನ ನೆರಳಲ್ಲಿ ವಾಸಿಸ್ತಾರೆ.
ಅವರು ಧಾನ್ಯ ಬೆಳೆಸ್ತಾರೆ, ದ್ರಾಕ್ಷಿಬಳ್ಳಿ ತರ ಹೂಬಿಡ್ತಾರೆ.+
ಆತನ ಕೀರ್ತಿ ಲೆಬನೋನಿನ ದ್ರಾಕ್ಷಾಮದ್ಯದ ತರ ಇರುತ್ತೆ.
8 ‘ಇನ್ಮುಂದೆ ನನಗೆ ಮತ್ತು ಮೂರ್ತಿಗಳಿಗೆ ಯಾವ ಸಂಬಂಧನೂ ಇಲ್ಲ’ ಅಂತ ಎಫ್ರಾಯೀಮ್ ಹೇಳ್ತಾನೆ.+
ನಾನು ಅವನ ಮಾತುಗಳನ್ನ ಕೇಳ್ತೀನಿ, ಅವನನ್ನ ಚೆನ್ನಾಗಿ ನೋಡ್ಕೊಳ್ತೀನಿ.+
ನಾನು ಹುಲುಸಾಗಿ ಬೆಳೆದಿರೋ ಜುನಿಪರ್ ಮರದ ತರ ಇರ್ತಿನಿ.
ನಾನೇ ನಿನಗೆ ಹಣ್ಣುಗಳನ್ನ ಕೊಡ್ತೀನಿ.”
9 ವಿವೇಕಿ ಯಾರು? ಅವನು ಈ ವಿಷ್ಯಗಳನ್ನ ಅರ್ಥ ಮಾಡ್ಕೊಳ್ಳಲಿ.
ವಿವೇಚನೆಯುಳ್ಳವನು ಯಾರು? ಅವನು ಇವುಗಳನ್ನ ಗ್ರಹಿಸಿಕೊಳ್ಳಲಿ.