ಹೋಶೇಯ
13 “ಎಫ್ರಾಯೀಮ್ ಮಾತಾಡಿದಾಗ ಜನ ನಡುಗಿದ್ರು,
ಅವನು ಇಸ್ರಾಯೇಲಲ್ಲಿ ಪ್ರಮುಖನಾಗಿದ್ದ.+
ಆದ್ರೆ ಬಾಳನ ವಿಷ್ಯದಲ್ಲಿ ಅವನು ಅಪರಾಧಿಯಾಗಿ+ ಸತ್ತ.
2 ಈಗ ಅವರು ಇನ್ನೂ ಹೆಚ್ಚು ಪಾಪ ಮಾಡ್ತಿದ್ದಾರೆ,
ತಮ್ಮ ಬೆಳ್ಳಿಯ ಮೂರ್ತಿಗಳನ್ನ ಮಾಡ್ತಿದ್ದಾರೆ,+
ಅವರು ಕೌಶಲದಿಂದ ಮೂರ್ತಿಗಳನ್ನ ಮಾಡ್ತಿದ್ದಾರೆ. ಅವೆಲ್ಲ ಕರಕುಶಲಗಾರರ ಕೈಕೆಲಸನೇ.
‘ಬಲಿ ಅರ್ಪಿಸುವವರು ಕರುಗಳ ಮೂರ್ತಿಗಳಿಗೆ ಮುತ್ತಿಡ್ಲಿ’+ ಅಂತ ಹೇಳ್ತಿದ್ದಾರೆ.
3 ಹಾಗಾಗಿ ಅವರು ಬೆಳಿಗ್ಗೆಯ ಮೋಡದ ತರನೂ
ಬೇಗ ಕರಗಿ ಹೋಗೋ ಇಬ್ಬನಿ ತರನೂ
ಬಿರುಗಾಳಿ ಕಣದಿಂದ ಬಡ್ಕೊಂಡು ಹೋಗೋ ಹೊಟ್ಟಿನ ತರಾನೂ
ಹೊಗೆ ಕೊಳವೆಯಿಂದ ಬರೋ ಹೊಗೆ ತರನೂ ಇರ್ತಾರೆ.
4 ಆದ್ರೆ ನೀನು ಈಜಿಪ್ಟ್ ದೇಶದಲ್ಲಿದ್ದ ಕಾಲದಿಂದ ಯೆಹೋವನಾದ ನಾನೇ ನಿನ್ನ ದೇವರಾಗಿದ್ದೀನಿ,+
ನನ್ನನ್ನ ಬಿಟ್ಟು ನೀನು ಬೇರೆ ದೇವರನ್ನ ಅರಿತುಕೊಂಡಿರಲಿಲ್ಲ,
ನನ್ನನ್ನ ಬಿಟ್ಟು ನಿನಗೆ ಬೇರೆ ರಕ್ಷಕನಿಲ್ಲ.+
5 ಕಾಡಲ್ಲಿ,+ ನೀರಿಲ್ಲದ ಒಣಪ್ರದೇಶದಲ್ಲಿ ನಾನು ನಿನ್ನ ಕಡೆ ಗಮನಹರಿಸಿದೆ.
6 ನಾನು ಅವ್ರನ್ನ ಹುಲ್ಲುಗಾವಲುಗಳಿಗೆ ನಡೆಸಿದಾಗ ಅವರು ಅವುಗಳಿಂದ ತೃಪ್ತರಾದ್ರು,+
ತೃಪ್ತರಾದಾಗ ಅವರ ಹೃದಯ ಅಹಂಕಾರದಿಂದ ಉಬ್ಬಿಕೊಂಡಿತು.
ಹಾಗಾಗಿ ಅವರು ನನ್ನನ್ನ ಮರೆತುಬಿಟ್ರು.+
7 ನಾನು ಅವ್ರ ಪಾಲಿಗೆ ಪ್ರಾಯದ ಸಿಂಹದ ತರ ಇರ್ತಿನಿ,+
ದಾರಿ ಪಕ್ಕದಲ್ಲಿ ಅಡಗಿಕೊಂಡು ಹೊಂಚುಹಾಕೋ ಚಿರತೆ ತರ ಇರ್ತಿನಿ.
8 ಮರಿಗಳನ್ನ ಕಳ್ಕೊಂಡ ಕರಡಿ ತರ ಅವ್ರ ಮೇಲೆ ಬಿದ್ದು
ಅವ್ರ ಎದೆಯನ್ನ ಸೀಳಿಹಾಕ್ತೀನಿ.
ಅವ್ರನ್ನ ಸಿಂಹದ ತರ ಅಲ್ಲೇ ತಿಂದುಹಾಕ್ತೀನಿ,
ಅವ್ರನ್ನ ಒಂದು ಕಾಡುಪ್ರಾಣಿ ಸೀಳಿ ತುಂಡುತುಂಡು ಮಾಡಿಬಿಡುತ್ತೆ.
9 ಇಸ್ರಾಯೇಲೇ, ಅದು ನಿನ್ನನ್ನ ನಾಶಮಾಡುತ್ತೆ,
ಯಾಕಂದ್ರೆ ನೀನು ನನ್ನ ವಿರುದ್ಧ, ನಿನಗೆ ಸಹಾಯಮಾಡಿದ ನನ್ನ ವಿರುದ್ಧನೇ ತಿರುಗಿಬಿದ್ದೆ.
10 ನಿನ್ನ ಎಲ್ಲ ಪಟ್ಟಣಗಳಲ್ಲಿ ನಿನ್ನನ್ನ ಕಾಪಾಡಬೇಕಾದ ನಿನ್ನ ರಾಜ ಎಲ್ಲಿ?+
ನಿನ್ನ ಅಧಿಪತಿಗಳು* ಎಲ್ಲಿ?
‘ನನಗೆ ಒಬ್ಬ ರಾಜನನ್ನ ಕೊಡು, ಅಧಿಕಾರಿಗಳನ್ನ ಕೊಡು’+ ಅಂತ ಕೇಳಿದ್ದು ನೀನೇ ಅಲ್ವಾ?
12 ಎಫ್ರಾಯೀಮಿನ ತಪ್ಪುಗಳನ್ನ ಮೂಟೆಕಟ್ಟಿ ಇಡಲಾಗಿದೆ,*
ಅವನ ಪಾಪಗಳನ್ನ ಶೇಖರಿಸಿಡಲಾಗಿದೆ.
13 ಅವನು ಹೆರಿಗೆ ನೋವಿನ ತರ ನೋವು ಅನುಭವಿಸ್ತಾನೆ.
ಅವನು ಬುದ್ಧಿಯಿಲ್ಲದ ಮಗು,
ಹುಟ್ಟೋ ಸಮಯ ಬಂದ್ರೂ ಅವನಿಗೆ ಹೊರಗೆ ಬರೋಕೆ ಇಷ್ಟ ಇಲ್ಲ.
ಮರಣವೇ, ಕುಟುಕುವ ನಿನ್ನ ಕೊಂಡಿಗಳು ಎಲ್ಲಿ ಹೋಯ್ತು?+
ಸಮಾಧಿಯೇ, ನಾಶಮಾಡೋ ನಿನ್ನ ಶಕ್ತಿ ಎಲ್ಲಿ ಹೋಯ್ತು?+
ಆದ್ರೆ ನಾನು ಸ್ವಲ್ಪನೂ ಕನಿಕರ ತೋರಿಸಲ್ಲ.*
15 ಅವನು ಆಪುಹುಲ್ಲಿನ ಮಧ್ಯ ಸೊಂಪಾಗಿ ಬೆಳೆದ್ರೂ
ಪೂರ್ವ ದಿಕ್ಕಿಂದ ಗಾಳಿ ಬೀಸೋ ತರ ಯೆಹೋವ ಮಾಡ್ತಾನೆ,
ಮರುಭೂಮಿಯಿಂದ ಬರೋ ಆ ಗಾಳಿ ಅವನ ಬಾವಿಯನ್ನ ಒಣಗಿಸಿ, ಅವನ ಬುಗ್ಗೆಯನ್ನ ಬತ್ತಿಸುತ್ತೆ.
ಒಬ್ಬ ಬಂದು ಅವನ ಎಲ್ಲ ಅಮೂಲ್ಯ ವಸ್ತುಗಳಿರೋ ಖಜಾನೆಯನ್ನ ಲೂಟಿ ಮಾಡ್ತಾನೆ.+
16 ಸಮಾರ್ಯ ತನ್ನ ದೇವರಿಗೆ ತಿರುಗಿಬಿದ್ದ ಕಾರಣ+ ಅದ್ರ ಮೇಲೆ ತಪ್ಪು ಹೊರಿಸಲಾಗುತ್ತೆ.+
ಅವ್ರನ್ನ ಕತ್ತಿಯಿಂದ ಕೊಲ್ತಾರೆ,+
ಅವ್ರ ಮಕ್ಕಳನ್ನ ಕ್ರೂರವಾಗಿ ಕೊಲ್ಲಲಾಗುತ್ತೆ,
ಗರ್ಭಿಣಿ ಸ್ತ್ರೀಯರ ಹೊಟ್ಟೆಯನ್ನ ಸೀಳಲಾಗುತ್ತೆ.”