ಹೋಶೇಯ
3 ಆದ್ರೆ ನಾನೇ ಎಫ್ರಾಯೀಮನಿಗೆ ನಡಿಯೋಕೆ ಕಲಿಸಿದ್ದೆ,+
ನಾನು ಅವ್ರನ್ನ ನನ್ನ ತೋಳುಗಳಲ್ಲಿ ಎತ್ಕೊಂಡೆ,+
ಅವ್ರನ್ನ ವಾಸಿಮಾಡಿದ್ದು ನಾನೇ ಅಂತ ಅವರು ಒಪ್ಕೊಳ್ಳಲಿಲ್ಲ.
4 ನಾನು ಪ್ರೀತಿ ಮತ್ತು ದಯೆ ಅನ್ನೋ ಹಗ್ಗಗಳಿಂದ* ಅವ್ರನ್ನ ನನ್ನ ಕಡೆ ಎಳೆದೆ,+
ನಾನೇ ಅವ್ರ ಕುತ್ತಿಗೆ ಮೇಲಿದ್ದ ನೊಗ ತೆಗೆದೆ,
ಪ್ರತಿಯೊಬ್ಬನಿಗೆ ತಿನ್ನೋಕೆ ಪ್ರೀತಿಯಿಂದ ಆಹಾರ ಕೊಟ್ಟೆ.
5 ಅವರು ಈಜಿಪ್ಟ್ ದೇಶಕ್ಕೆ ವಾಪಸ್ ಹೋಗಲ್ಲ. ಆದ್ರೆ ಅಶ್ಶೂರ ಅವ್ರ ರಾಜ ಆಗಿರ್ತಾನೆ,+
ಯಾಕಂದ್ರೆ ಅವರು ನನ್ನ ಹತ್ರ ವಾಪಸ್ ಬರೋಕೆ ಒಪ್ಪಲಿಲ್ಲ.+
6 ಅವರು ಕೆಟ್ಟ ಕುತಂತ್ರಗಳನ್ನ ಮಾಡ್ತಾರೆ.
ಹಾಗಾಗಿ ಅವ್ರ ಪಟ್ಟಣಗಳ ವಿರುದ್ಧ ಕತ್ತಿ ಗಿರಗಿರನೆ ತಿರುಗುತ್ತೆ,+
ಅದು ಅವ್ರ ಬಾಗಿಲುಗಳ ಕಂಬಿಗಳನ್ನ ನಾಶಮಾಡಿ ಅವ್ರನ್ನ ಸಾಯಿಸಿಬಿಡುತ್ತೆ.+
7 ನನ್ನ ಜನ ನನಗೆ ನಂಬಿಕೆ ದ್ರೋಹ ಮಾಡೋಕೆ ದೃಢನಿಶ್ಚಯ ಮಾಡಿದ್ದಾರೆ.+
ಅವರು ಜನ್ರನ್ನ ಮೇಲಕ್ಕೆ* ಕರೆದ್ರೂ ಯಾರೂ ಬರಲಿಲ್ಲ.
8 ಎಫ್ರಾಯೀಮೇ, ನಾನು ನಿನ್ನನ್ನ ಹೇಗೆ ತಾನೇ ಕೈಬಿಡ್ಲಿ?+
ಇಸ್ರಾಯೇಲೇ, ನಿನ್ನನ್ನ ಹೇಗೆ ತಾನೇ ಶತ್ರುಗಳ ಕೈಗೊಪ್ಪಿಸ್ಲಿ?
ಅದ್ಮಾ ಪಟ್ಟಣಕ್ಕೆ ತಂದ ಗತಿಯನ್ನ ನಿನಗೆ ಹೇಗೆ ತಾನೇ ತರಲಿ?
ಚೆಬೋಯೀಮ್ ಪಟ್ಟಣವನ್ನ ನಾಶಮಾಡಿದ ಹಾಗೆ ನಿನ್ನನ್ನ ಹೇಗೆ ತಾನೇ ನಾಶಮಾಡ್ಲಿ?+
ನನ್ನ ಮನಸ್ಸು ಬದಲಾಗಿದೆ,
ಅಷ್ಟೇ ಅಲ್ಲ ನಿನ್ನ ವಿಷ್ಯದಲ್ಲಿ ನನ್ನ ಕರುಳು ಮರುಗಿದೆ.+
9 ನನ್ನ ಕೋಪಾಗ್ನಿಯನ್ನ ನಿನ್ನ ಮೇಲೆ ಸುರಿಯಲ್ಲ.
ಎಫ್ರಾಯೀಮನ್ನ ಮತ್ತೊಮ್ಮೆ ನಾಶಮಾಡಲ್ಲ,+
ಯಾಕಂದ್ರೆ ನಾನು ದೇವರು, ಮನುಷ್ಯನಲ್ಲ,
ನಾನು ನಿಮ್ಮ ಮಧ್ಯ ವಾಸಿಸೋ ಪವಿತ್ರ ದೇವರು,
ನಾನು ಕ್ರೋಧದಿಂದ ನಿಮ್ಮ ವಿರುದ್ಧ ಬರಲ್ಲ.
10 ಅವರು ಯೆಹೋವನ ಹಿಂದೆ ನಡಿತಾರೆ, ಆತನು ಸಿಂಹದ ತರ ಗರ್ಜಿಸ್ತಾನೆ,+
ಆತನು ಗರ್ಜಿಸಿದಾಗ ಆತನ ಮಕ್ಕಳೆಲ್ಲ ನಡುಗ್ತಾ ಪಶ್ಚಿಮದಿಂದ ಬರ್ತಾರೆ.+
11 ಅವರು ಈಜಿಪ್ಟಿಂದ ಬರುವಾಗ ಹಕ್ಕಿ ತರ ನಡುಗ್ತಾರೆ,
ಅಶ್ಶೂರ್ ದೇಶದಿಂದ ಬರುವಾಗ ಪಾರಿವಾಳದ ಹಾಗೆ ಗಡಗಡ ನಡುಗ್ತಾರೆ,+
ಅವರು ಅವ್ರ ಮನೆಗಳಲ್ಲೇ ಇರೋ ಹಾಗೆ ಮಾಡ್ತೀನಿ,”
ಅಂತ ಯೆಹೋವ ಹೇಳ್ತಾನೆ.+
12 “ಎಫ್ರಾಯೀಮ್ ನನ್ನ ಹತ್ರ ಹೇಳೋದೆಲ್ಲ ಬರೀ ಸುಳ್ಳೇ,
ಇಸ್ರಾಯೇಲ್ ಮಾಡೋದೆಲ್ಲ ಬರೀ ಮೋಸನೇ.+