ಕೀರ್ತನೆ
3 ಯಾಕಂದ್ರೆ ಆತನು ನಿನ್ನನ್ನ ಬೇಟೆಗಾರನ ಬಲೆಯಿಂದ ಬಿಡಿಸ್ತಾನೆ,
ಜೀವ ತೆಗಿಯೋ ಅಂಟುರೋಗದಿಂದ ಕಾಪಾಡ್ತಾನೆ.
ಆತನ ನಂಬಿಗಸ್ತಿಕೆ+ ದೊಡ್ಡ ಗುರಾಣಿ,+ ರಕ್ಷಣೆಯ ಗೋಡೆ ತರ* ಇರುತ್ತೆ.
5 ರಾತ್ರಿ ಎಲ್ಲಿ ಏನಾಗುತ್ತೋ ಅಂತಾಗಲಿ,+
ಬೆಳಗ್ಗೆ ಹಾರಾಡೋ ಬಾಣಕ್ಕಾಗಲಿ ನೀನು ಹೆದ್ರಲ್ಲ,+
6 ಕತ್ತಲಲ್ಲಿ ತಿರುಗಾಡೋ ವಿಪತ್ತಿಗಾಗಲಿ
ಮಟಮಟ ಮಧ್ಯಾಹ್ನ ನಡೆಯೋ ಕೇಡಿಗಾಗಲಿ ನೀನು ಭಯಪಡಲ್ಲ.
7 ನಿನ್ನ ಪಕ್ಕದಲ್ಲಿ ಸಾವಿರ ಜನ,
ನಿನ್ನ ಬಲಗಡೆ ಹತ್ತು ಸಾವಿರ ಜನ ಬಿದ್ದುಹೋಗ್ತಾರೆ.
ಆದ್ರೆ ನಿನಗೆ ಏನೂ ಆಗಲ್ಲ.+
9 ಯಾಕಂದ್ರೆ “ಯೆಹೋವ ನನ್ನ ಆಶ್ರಯ” ಅಂತ ನೀನು ಹೇಳಿದೆ.
ಸರ್ವೋನ್ನತನನ್ನ ನಿನ್ನ ವಾಸಸ್ಥಳವಾಗಿ* ಮಾಡ್ಕೊಂಡೆ.+
13 ನೀನು ಎಳೇ ಸಿಂಹವನ್ನ ಮತ್ತು ನಾಗರಹಾವನ್ನ ಕಾಲಿಂದ ತುಳೀತಿಯ,
ಬಲಿಷ್ಠ ಸಿಂಹವನ್ನ ಮತ್ತು ದೊಡ್ಡ ಹಾವನ್ನ ಪಾದಗಳ ಕೆಳಗೆ ಹೊಸಕಿ ಹಾಕ್ತೀಯ.+
14 ದೇವರು ಹೀಗೆ ಹೇಳಿದನು “ಅವನು ನನ್ನನ್ನ ತುಂಬ ಪ್ರೀತಿಸೋದ್ರಿಂದ ನಾನು ಅವನನ್ನ ಕಾಪಾಡ್ತೀನಿ.+
ಅವನಿಗೆ ನನ್ನ ಹೆಸ್ರು ಗೊತ್ತಿರೋದ್ರಿಂದ ನಾನು ಅವನನ್ನ ಕಾಪಾಡ್ತೀನಿ.+
15 ಅವನು ನನಗೆ ಮೊರೆಯಿಡ್ತಾನೆ, ನಾನು ಅವನಿಗೆ ಉತ್ತರ ಕೊಡ್ತೀನಿ.+
ಕಷ್ಟ ಬಂದಾಗ ನಾನು ಅವನ ಜೊತೆ ಇರ್ತಿನಿ.+
ನಾನು ಅವನನ್ನ ರಕ್ಷಿಸ್ತೀನಿ, ಅವನಿಗೆ ಜಾಸ್ತಿ ಗೌರವ ಸಿಗೋ ಹಾಗೆ ಮಾಡ್ತೀನಿ.