ಕೀರ್ತನೆ
3 ಹೆಮ್ಮೆಯಿಂದ ಆತನ ಪವಿತ್ರ ಹೆಸ್ರನ್ನ ಕೊಂಡಾಡಿ.+
ಯೆಹೋವನನ್ನ ಹುಡುಕುವವರ ಹೃದಯ ಖುಷಿಪಡಲಿ.+
4 ಯೆಹೋವನಿಗಾಗಿ, ಆತನ ಬಲಕ್ಕಾಗಿ ಹುಡುಕಿ.+
ಆತನ ಮೆಚ್ಚುಗೆ ಪಡಿಯೋಕೆ ಪ್ರಯತ್ನಿಸ್ತಾ ಇರಿ.
5 ಆತನು ಮಾಡಿದ ಮಹತ್ಕಾರ್ಯಗಳನ್ನ,
ಅದ್ಭುತಗಳನ್ನ, ತೀರ್ಪುಗಳನ್ನ ನೆನಪಿಸ್ಕೊಳ್ಳಿ,+
6 ಆತನ ಸೇವಕನಾದ ಅಬ್ರಹಾಮನ ಸಂತತಿಯವರೇ,+
ಯಾಕೋಬನ ಮಕ್ಕಳೇ, ಆತನು ಆರಿಸ್ಕೊಂಡ ಜನ್ರೇ+ ಅದನ್ನ ನೆನಪಿಸ್ಕೊಳ್ಳಿ.
7 ಆತನು ನಮ್ಮ ದೇವರಾದ ಯೆಹೋವ.+
ಆತನ ತೀರ್ಪುಗಳು ಇಡೀ ಭೂಮಿಯಲ್ಲಿ ತುಂಬ್ಕೊಂಡಿವೆ.+
9 ಆತನು ಅಬ್ರಹಾಮನ ಜೊತೆ ಮಾಡ್ಕೊಂಡ ಒಪ್ಪಂದವನ್ನ+
ಆತನು ಇಸಾಕನಿಗೆ ಕೊಟ್ಟ ಮಾತನ್ನ+
10 ಯಾಕೋಬನಿಗೆ ಒಂದು ಆಜ್ಞೆಯಾಗಿ ಕೊಟ್ಟ,
ಇಸ್ರಾಯೇಲ್ಯರ ಜೊತೆ ಒಂದು ಶಾಶ್ವತ ಒಪ್ಪಂದ ಮಾಡ್ಕೊಂಡ.
12 ಅವರು ಆಗ ಸ್ವಲ್ಪಾನೇ ಜನ ಇದ್ರು,+ ಹೌದು, ತುಂಬ ಕಮ್ಮಿ ಇದ್ರು.
ಆ ದೇಶದಲ್ಲಿ ಅವರು ವಿದೇಶಿಗಳಾಗಿದ್ರು.+
13 ಅವರು ಒಂದು ದೇಶದಿಂದ ಇನ್ನೊಂದು ದೇಶಕ್ಕೆ,
ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗ್ತಿದ್ರು.+
14 ಯಾರಿಂದನೂ ಅವ್ರಿಗೆ
ಅನ್ಯಾಯ ಆಗದೆ ಇರೋ ತರ ಆತನು ನೋಡ್ಕೊಂಡ,+
ಅವ್ರಿಗೋಸ್ಕರ ರಾಜರನ್ನೂ ಬೈದ,+
15 “ನನ್ನ ಅಭಿಷಿಕ್ತರನ್ನ ಮುಟ್ಟಬೇಡಿ,
ನನ್ನ ಪ್ರವಾದಿಗಳಿಗೆ ಯಾವ ಕೆಟ್ಟದನ್ನೂ ಮಾಡಬೇಡಿ”+ ಅಂತ ಹೇಳಿದ.
17 ಆತನು ಅವ್ರಿಗಿಂತ ಮುಂದೆ ಒಬ್ಬ ವ್ಯಕ್ತಿಯನ್ನ ಕಳಿಸಿದ.
ಅವರು ಅವನನ್ನ ದಾಸನಾಗಿ ಮಾರಿಬಿಟ್ರು, ಅವನೇ ಯೋಸೇಫ.+
19 ದೇವರ ಮಾತು ಸತ್ಯ ಅಂತ ಸಾಬೀತಾಗೋ ತನಕ+
ಯೆಹೋವನ ಮಾತೇ ಅವನನ್ನ ಶುದ್ಧ ಮಾಡ್ತು.
20 ಅವನನ್ನ ಬಿಡೋಕೆ ರಾಜ ಆಜ್ಞೆ ಕೊಟ್ಟ,+
ಅಧಿಕಾರಿಗಳು ಅವನನ್ನ ಬಿಟ್ಟುಬಿಟ್ರು.
21 ರಾಜ ಅವನನ್ನ ತನ್ನ ಮನೆಗೆ ಯಜಮಾನನಾಗಿ ಮಾಡಿದ,
ತನ್ನ ಎಲ್ಲ ಆಸ್ತಿ ಮೇಲೆ ಅಧಿಕಾರಿಯಾಗಿ ಇಟ್ಟ.+
22 ತಾನು ಮೆಚ್ಚೋ ತರ ತನ್ನ ದೊಡ್ಡ ಅಧಿಕಾರಿಗಳ ಮೇಲೆ ಅಧಿಕಾರ ನಡೆಸೋಕೆ,
ತನ್ನ ಹಿರಿಯರಿಗೆ ವಿವೇಕದ ಮಾತುಗಳನ್ನ ಕಲಿಸೋಕೆ ರಾಜ ಯೋಸೇಫನನ್ನ ನೇಮಿಸಿದ.+
23 ಆಮೇಲೆ ಇಸ್ರಾಯೇಲನು ಈಜಿಪ್ಟಿಗೆ ಬಂದ,+
ಹಾಮನ ದೇಶದಲ್ಲಿ ಯಾಕೋಬ ವಿದೇಶಿಯಾಗಿದ್ದ.
24 ದೇವರು ತನ್ನ ಜನ್ರ ಸಂಖ್ಯೆಯನ್ನ ಜಾಸ್ತಿ ಮಾಡಿದ.+
ಅವ್ರ ಶತ್ರುಗಳಿಗಿಂತ ಅವ್ರನ್ನ ಬಲಿಷ್ಠರಾಗಿ ಮಾಡಿದ.+
25 ಆತನು ಶತ್ರುಗಳ ಹೃದಯ ಬದಲಾಗೋಕೆ ಬಿಟ್ಟ.
ಹಾಗಾಗಿ ಅವರು ಆತನ ಸೇವಕರನ್ನ ದ್ವೇಷಿಸಿದ್ರು,
ಅವ್ರ ವಿರುದ್ಧ ಸಂಚು ಮಾಡಿದ್ರು.+
27 ಅವರು ಈಜಿಪ್ಟಿನವರ ಮುಂದೆ ಆತನ ಅದ್ಭುತಗಳನ್ನ,
ಹಾಮನ ದೇಶದಲ್ಲಿ ಆತನ ಮಹತ್ಕಾರ್ಯಗಳನ್ನ ತೋರಿಸಿದ್ರು.+
28 ಆತನು ಕತ್ತಲನ್ನ ಕಳಿಸಿದಾಗ ಇಡೀ ದೇಶ ಕತ್ತಲಾಯ್ತು,+
ಮೋಶೆ ಮತ್ತು ಆರೋನ ಆತನ ಮಾತಿಗೆ ವಿರುದ್ಧವಾಗಿ ದಂಗೆ ಏಳಲಿಲ್ಲ.
29 ಆತನು ಈಜಿಪ್ಟಿನವರ ನೀರನ್ನ ರಕ್ತ ಮಾಡಿದ,
ಅವ್ರ ಮೀನುಗಳನ್ನ ಸಾಯಿಸಿದ.+
30 ಅವ್ರ ದೇಶ ಕಪ್ಪೆಗಳಿಂದ ತುಂಬಿಹೋಯ್ತು,+
ಅವು ರಾಜನ ಮನೆಯನ್ನೂ ಬಿಡಲಿಲ್ಲ.
31 ರಕ್ತ ಹೀರೋ ನೊಣಗಳಿಗೆ ಆತನು ಅವ್ರ ಮೇಲೆ ಆಕ್ರಮಣ ಮಾಡು ಅಂತ ಆಜ್ಞೆ ಕೊಟ್ಟ.
ಸೊಳ್ಳೆಗಳಿಗೆ ಅವ್ರ ಎಲ್ಲ ಪ್ರದೇಶಗಳ ಮೇಲೆ ದಾಳಿ ಮಾಡೋಕೆ ಹೇಳಿದ.+
33 ಆತನು ಅವ್ರ ದ್ರಾಕ್ಷಿ ತೋಟಗಳನ್ನ, ಅಂಜೂರ ಮರಗಳನ್ನ ನಾಶಮಾಡಿದ
ಅವ್ರ ಪ್ರದೇಶದಲ್ಲಿದ್ದ ಮರಗಳನ್ನ ಧ್ವಂಸಮಾಡಿದ.
34 ಆತನು ಮಿಡತೆಗಳಿಗೆ ಅವ್ರ ಮೇಲೆ ಆಕ್ರಮಣ ಮಾಡೋಕೆ ಹೇಳಿದ,
ಲೆಕ್ಕವಿಲ್ಲದಷ್ಟು ಮರಿ ಮಿಡತೆಗಳಿಗೆ ಆಜ್ಞೆ ಕೊಟ್ಟ.+
35 ಅವು ದೇಶದ ಬೆಳೆಯನ್ನೆಲ್ಲ ತಿಂದುಹಾಕಿದ್ವು,
ಭೂಮಿಯ ಫಸಲನ್ನ ನುಂಗಿಬಿಟ್ವು.
36 ಆಮೇಲೆ ಆತನು ಅವ್ರ ದೇಶದ ಎಲ್ಲ ಮೊದಲ ಮಕ್ಕಳನ್ನ ಹತಿಸಿದ,+
ಅವ್ರಿಗೆ ಮೊದಲು ಹುಟ್ಟಿದವರನ್ನೇ ಅಳಿಸಿಹಾಕಿದ.
37 ತನ್ನ ಜನ್ರು ಬೆಳ್ಳಿಬಂಗಾರ ತಗೊಂಡು ಬರೋ ತರ ಮಾಡಿದ,+
ಆತನ ಕುಲಗಳಲ್ಲಿ ಒಬ್ಬನೂ ಎಡವಿ ಬೀಳಲಿಲ್ಲ.
38 ಅವರು ಹೋದಾಗ ಈಜಿಪ್ಟಿನವರು ಖುಷಿಪಟ್ರು,
ಯಾಕಂದ್ರೆ ಇಸ್ರಾಯೇಲ್ಯರ ಭಯ ಅವ್ರನ್ನ ಕಾಡ್ತಿತ್ತು.+
39 ಇಸ್ರಾಯೇಲ್ಯರನ್ನ ಕಾಪಾಡೋಕೆ ಆತನು ಒಂದು ಮೋಡ ಇಟ್ಟ.+
ರಾತ್ರಿಯಲ್ಲಿ ಬೆಳಕಿಗಾಗಿ ಅಗ್ನಿಸ್ತಂಭ ಇಟ್ಟ.+
42 ಆತನು ತನ್ನ ಸೇವಕ ಅಬ್ರಹಾಮನಿಗೆ ಕೊಟ್ಟ ಮಾತನ್ನ ನೆನಪಿಸ್ಕೊಂಡ.+
43 ಹಾಗಾಗಿ ತನ್ನ ಪ್ರಜೆಗಳನ್ನ ಹೊರಗೆ ತಂದ.+
ಆತನು ಆರಿಸ್ಕೊಂಡ ಜನ್ರು ಉಲ್ಲಾಸಿಸ್ತಾ, ಸಂತೋಷದಿಂದ ಜೈಕಾರ ಹಾಕ್ತಾ ಹೋದ್ರು.
44 ಬೇರೆ ಜನ್ರಿಗೆ ಸೇರಿದ ಪ್ರದೇಶಗಳನ್ನ ಆತನು ಅವ್ರಿಗೆ ಕೊಟ್ಟ,+
ಆ ಜನ್ರು ಕಷ್ಟಪಟ್ಟು ಕೆಲಸಮಾಡಿದ್ದರ ಪ್ರತಿಫಲವನ್ನ ಇವರು ಆಸ್ತಿಯಾಗಿ ಪಡ್ಕೊಂಡ್ರು.+
45 ಅವರು ತನ್ನ ಆಜ್ಞೆಗಳನ್ನ ಪಾಲಿಸಬೇಕಂತ,+
ತನ್ನ ನಿಯಮಗಳನ್ನ ಅನುಸರಿಸಬೇಕಂತ ಆತನು ಹೀಗೆ ಮಾಡಿದ.
ಯಾಹುವನ್ನ ಸ್ತುತಿಸಿ!*