ಪ್ರಸಂಗಿ
11 ನಿನ್ನ ರೊಟ್ಟಿಯನ್ನ ನೀರಿನ ಮೇಲೆ ಎಸಿ,+ ತುಂಬ ದಿನಗಳಾದ ಮೇಲೆ ಅದು ನಿನಗೆ ಮತ್ತೆ ಸಿಗುತ್ತೆ.+ 2 ನಿನ್ನ ಹತ್ರ ಇರೋದನ್ನ ಏಳು ಅಥವಾ ಎಂಟು ಜನರ ಜೊತೆ ಹಂಚ್ಕೊ.+ ಯಾಕಂದ್ರೆ ಭೂಮಿ ಮೇಲೆ ನಾಳೆ ಎಂಥ ವಿಪತ್ತು ಸಂಭವಿಸುತ್ತೆ ಅಂತ ನಿನಗೆ ಗೊತ್ತಿಲ್ಲ.
3 ಮೋಡಗಳಲ್ಲಿ ನೀರು ತುಂಬಿದ್ರೆ ಅವು ಭೂಮಿ ಮೇಲೆ ಖಂಡಿತ ಮಳೆ ಸುರಿಸುತ್ತೆ. ಒಂದು ಮರ ದಕ್ಷಿಣದ ಕಡೆ ಬಿದ್ರೂ ಉತ್ತರದ ಕಡೆ ಬಿದ್ರೂ ಅದು ಬಿದ್ದಲ್ಲೇ ಇರುತ್ತೆ.
4 ಗಾಳಿ ನೋಡ್ಕೊಂಡು ಇರುವವನು ಬೀಜ ಬಿತ್ತಲ್ಲ, ಮೋಡ ನೋಡ್ಕೊಂಡು ಇರುವವನು ಬೆಳೆ ಕೊಯ್ಯಲ್ಲ.+
5 ಗರ್ಭಿಣಿಯ ಗರ್ಭದಲ್ಲಿರೋ ಮಗುವಿನ ಮೂಳೆಗಳಲ್ಲಿ ಜೀವಶಕ್ತಿ* ಕೆಲಸಮಾಡೋ ವಿಧ ಹೇಗೆ ನಿನಗೆ ಗೊತ್ತಿಲ್ವೋ+ ಹಾಗೇ ಎಲ್ಲವನ್ನ ಮಾಡೋ ಸತ್ಯ ದೇವರ ಕೆಲಸಗಳು ಸಹ ನಿನಗೆ ಗೊತ್ತಿಲ್ಲ.+
6 ಬೆಳಿಗ್ಗೆ ಬೀಜ ಬಿತ್ತೋಕೆ ಶುರು ಮಾಡು, ಸಂಜೆ ತನಕ ಬಿತ್ತೋದನ್ನ ನಿಲ್ಲಿಸಬೇಡ.+ ಬಿತ್ತಿದ ಬೀಜದಲ್ಲಿ ಯಾವುದು ಮೊಳಕೆ ಒಡೆದು ಬೆಳೆಯುತ್ತೆ. ಇದು ಬೆಳೆಯುತ್ತೋ ಅದು ಬೆಳೆಯುತ್ತೋ ಅಥವಾ ಎರಡೂ ಬೆಳೆಯುತ್ತೋ ನಿಂಗೊತ್ತಿಲ್ಲ.
7 ಬೆಳಕು ಆಹ್ಲಾದಕರ, ಸೂರ್ಯನ ಬೆಳಕನ್ನ ನೋಡೋದು ಕಣ್ಣುಗಳಿಗೆ ಒಳ್ಳೇದು. 8 ಒಬ್ಬ ಮನುಷ್ಯ ತುಂಬ ವರ್ಷ ಬದುಕಿದ್ರೆ ಅವನು ಜೀವನದ ಎಲ್ಲ ದಿನಗಳನ್ನ ಆನಂದಿಸಲಿ.+ ಆದ್ರೆ ಮುಂದೆ ಕತ್ತಲೆಯ ದಿನಗಳು ಬಂದಾಗ ಅವು ಜಾಸ್ತಿ ಇರಬಹುದು ಅಂತ ಮರಿದಿರಲಿ. ಮುಂದೆ ಬರೋ ಆ ದಿನಗಳೆಲ್ಲ ವ್ಯರ್ಥನೇ.+
9 ಯುವಕನೇ, ನಿನ್ನ ಯೌವನದಲ್ಲಿ ಖುಷಿಪಡು. ನಿನ್ನ ಯೌವನದ ದಿನಗಳಲ್ಲಿ ಆನಂದಪಡು. ನಿನ್ನ ಮನಸ್ಸು ಬಯಸಿದ್ದನ್ನ ಮಾಡು, ನಿನ್ನ ಕಣ್ಣು ಸೆಳೆದಲ್ಲೆಲ್ಲ ಹೋಗು. ಆದ್ರೆ ನೀನು ಏನೇ ಮಾಡಿದ್ರೂ ಅದಕ್ಕೆಲ್ಲ ಸತ್ಯ ದೇವರು ಲೆಕ್ಕ ಕೇಳ್ತಾನೆ ಅಂತ ನಿನಗೆ ಗೊತ್ತಿರಲಿ.+ 10 ಹಾಗಾಗಿ ಕಳವಳ ಉಂಟುಮಾಡೋ ವಿಷ್ಯಗಳನ್ನ ನಿನ್ನ ಮನಸ್ಸಿಂದ ತೆಗೆದುಹಾಕು. ನಿನ್ನ ದೇಹಕ್ಕೆ ಹಾನಿ ಮಾಡೋ ವಿಷ್ಯಗಳನ್ನ ದೂರಮಾಡು. ಯಾಕಂದ್ರೆ ಯೌವನ, ಜೀವನದ ಉದಯ ಕಾಲ ಬೇಗ ಕಳೆದುಹೋಗುತ್ತೆ.*+