ಜ್ಞಾನೋಕ್ತಿ
20 ದ್ರಾಕ್ಷಾಮದ್ಯ ಅವಮಾನಕ್ಕೆ ನಡಿಸುತ್ತೆ,+ ಮದ್ಯ ನಿಯಂತ್ರಣ ತಪ್ಪಿಸುತ್ತೆ.+
ಬುದ್ಧಿ ಇಲ್ಲದವನು ಅದ್ರಿಂದ ಅಡ್ಡದಾರಿ ಹಿಡಿತಾನೆ.+
2 ರಾಜ ಜನ್ರಲ್ಲಿ ಸಿಂಹ ಗರ್ಜನೆ ತರ ಭಯ ಹುಟ್ಟಿಸ್ತಾನೆ.+
ಅವನ ಕೋಪ ಕೆರಳಿಸೋರು ತಮ್ಮ ಜೀವಾನೇ ಪಣಕ್ಕಿಡ್ತಾರೆ.+
6 ತುಂಬ ಜನ ಅವ್ರಲ್ಲಿ ಪ್ರೀತಿ ಇದೆ ಅಂತ ಹೇಳ್ತಾರೆ,
ಆದ್ರೆ ನಂಬಿಗಸ್ತ ಜನ್ರು ಸಿಗೋದು ತುಂಬ ಅಪರೂಪ.
7 ನೀತಿವಂತ ನಿಯತ್ತಾಗಿ ನಡೀತಾನೆ.+
ಅವನ ಮುಂದಿನ ಪೀಳಿಗೆ* ಖುಷಿಯಾಗಿ ಇರುತ್ತೆ.+
8 ರಾಜ ನ್ಯಾಯ ತೀರಿಸೋಕೆ ಸಿಂಹಾಸನದ ಮೇಲೆ ಕೂತಾಗ,+
ಒಂದೇ ನೋಟದಲ್ಲಿ ಎಲ್ಲ ಕೆಟ್ಟತನವನ್ನ ಜರಡಿ ಹಿಡಿದು ತೆಗೆದುಹಾಕ್ತಾನೆ.+
11 ಒಬ್ಬ ಚಿಕ್ಕ ಹುಡುಗನ ವರ್ತನೆ ಶುದ್ಧವಾಗಿ, ಸರಿಯಾಗಿ ಇದ್ಯಾ ಇಲ್ವಾ ಅಂತ
ಅವನು ಮಾಡೋ ಕೆಲಸಗಳಿಂದ ಗೊತ್ತಾಗಿಬಿಡುತ್ತೆ.+
12 ಕೇಳಿಸ್ಕೊಳ್ಳೋ ಕಿವಿ, ನೋಡೋ ಕಣ್ಣು
ಎರಡನ್ನೂ ಮಾಡಿದ್ದು ಯೆಹೋವನೇ.+
13 ನಿದ್ದೆಯನ್ನ ಪ್ರೀತಿಸಬೇಡ, ಬಡತನ ಅಟ್ಟಿಸ್ಕೊಂಡು ಬರುತ್ತೆ.+
ನಿನ್ನ ಕಣ್ಣು ತೆರಿ, ಆಗ ತಿಂದು ತೃಪ್ತನಾಗ್ತೀಯ.+
14 ಕೊಂಡ್ಕೊಳ್ಳೋನು “ಇದು ಚೆನ್ನಾಗಿಲ್ಲ, ಅದು ಚೆನ್ನಾಗಿಲ್ಲ!” ಅಂತಾನೆ.
ಆಮೇಲೆ ಅವನು ಮಾಡಿದ ವ್ಯಾಪಾರದ ಬಗ್ಗೆ ಕೊಚ್ಕೊಳ್ತಾನೆ.+
16 ಅಪರಿಚಿತನಿಗೆ ಜಾಮೀನು ಕೊಡುವವನ ಬಟ್ಟೆ ಕಿತ್ಕೊ.+
ಅವನು ನಡತೆಗೆಟ್ಟ* ಹೆಂಗಸಿಗಾಗಿ ವಸ್ತುಗಳನ್ನ ಒತ್ತೆ ಇಟ್ರೆ ವಾಪಸ್ ಕೊಡಬೇಡ.+
17 ಮೋಸದಿಂದ ಗಳಿಸಿದ ರೊಟ್ಟಿ ಮನುಷ್ಯನಿಗೆ ರುಚಿ ಅನಿಸುತ್ತೆ,
ಆದ್ರೆ ಆಮೇಲೆ ಅವನ ಬಾಯಿ ತುಂಬ ಮರಳು ತುಂಬ್ಕೊಳ್ಳುತ್ತೆ.+
20 ಮಗ ಅಪ್ಪಅಮ್ಮನ ಮೇಲೆ ಶಾಪ ಹಾಕಿದ್ರೆ
ಕತ್ತಲೆ ಆಗುವಾಗ ದೀಪ ಆರಿಹೋಗುತ್ತೆ.+
21 ದುರಾಸೆಯಿಂದ ಗಳಿಸಿದ ಆಸ್ತಿ
ಕೊನೆಗೆ ಆಶೀರ್ವಾದ ತರಲ್ಲ.+
22 “ಸೇಡಿಗೆ ಸೇಡು ತೀರಿಸ್ತೀನಿ!” ಅಂತ ಹೇಳಬೇಡ.+
ಯೆಹೋವನ ಮೇಲೆ ನಿರೀಕ್ಷೆ ಇಡು,+ ಆತನೇ ನಿನ್ನನ್ನ ಕಾಪಾಡ್ತಾನೆ.+
23 ತಪ್ಪಾದ ತೂಕದ ಕಲ್ಲು* ಯೆಹೋವನಿಗೆ ಅಸಹ್ಯ,
ಮೋಸದ ಅಳತೆ ಸರಿಯಲ್ಲ.
24 ಮನುಷ್ಯ ಎಲ್ಲಿ ಹೆಜ್ಜೆ ಇಡಬೇಕಂತ ಯೆಹೋವ ದಾರಿ ತೋರಿಸ್ತಾನೆ.+
ಇಲ್ಲದಿದ್ರೆ ಎಲ್ಲಿಗೆ ಹೋಗೋದು ಅಂತ ಅವನಿಗೆ ಹೇಗೆ ಗೊತ್ತಾಗುತ್ತೆ?
27 ಮನುಷ್ಯನ ಉಸಿರು ಯೆಹೋವನ ದೀಪ,
ಅದು ಅಂತರಾಳವನ್ನ ಶೋಧಿಸುತ್ತೆ.