ಕೀರ್ತನೆ
106 ಯಾಹುವನ್ನ ಸ್ತುತಿಸಿ!*
ಯೆಹೋವನಿಗೆ ಧನ್ಯವಾದ ಹೇಳಿ. ಯಾಕಂದ್ರೆ ಆತನು ಒಳ್ಳೆಯವನು.+
ಆತನ ಪ್ರೀತಿ ಶಾಶ್ವತ.+
2 ಯೆಹೋವನ ಶಕ್ತಿಶಾಲಿ ಕೆಲಸಗಳ ಬಗ್ಗೆ ಯಾರು ಚೆನ್ನಾಗಿ ಹೇಳ್ತಾರೆ?
ಹೊಗಳಿಕೆಗೆ ಯೋಗ್ಯವಾಗಿರೋ ಆತನ ಕೆಲಸಗಳ ಬಗ್ಗೆ ಯಾರು ಸಾರುತ್ತಾರೆ?+
3 ನ್ಯಾಯವಾಗಿ ನಡಿಯೋರು ಖುಷಿಯಾಗಿ ಇರ್ತಾರೆ.
ಯಾವಾಗ್ಲೂ ಸರಿಯಾಗಿ ಇರೋದನ್ನೇ ಮಾಡೋರು ಭಾಗ್ಯವಂತರು.+
4 ಯೆಹೋವನೇ, ಜನ್ರ ಕಡೆ ನಿನ್ನ ಕೃಪೆ* ತೋರಿಸುವಾಗ ನನ್ನನ್ನ ನೆನಪಿಸ್ಕೊ.+
ನನ್ನ ಕಡೆ ಕಾಳಜಿ ತೋರಿಸು, ನನ್ನನ್ನ ಕಾದು ಕಾಪಾಡು.
5 ಆಗ, ನೀನು ಆರಿಸ್ಕೊಂಡಿರೋ ಜನ್ರಿಗೆ+ ತೋರಿಸೋ ಒಳ್ಳೇತನದಲ್ಲಿ ನಾನೂ ಖುಷಿಪಡ್ತೀನಿ,
ನಿನ್ನ ಜನಾಂಗದ ಜೊತೆ ನಾನೂ ಸಂಭ್ರಮಿಸ್ತೀನಿ,
ನಿನ್ನ ಆಸ್ತಿಯಾಗಿರೋ ಜನ್ರ ಜೊತೆ ಸೇರಿ ನಿನ್ನನ್ನ ಹೆಮ್ಮೆಯಿಂದ ಕೊಂಡಾಡ್ತೀನಿ.*
7 ಈಜಿಪ್ಟಲ್ಲಿ ನಮ್ಮ ಪೂರ್ವಜರು ನಿನ್ನ ಅದ್ಭುತಗಳನ್ನ ಅರ್ಥ ಮಾಡ್ಕೊಳ್ಳಿಲ್ಲ.
ನಿನ್ನ ಅಪಾರ ಶಾಶ್ವತ ಪ್ರೀತಿಯನ್ನ ನೆನಪು ಮಾಡ್ಕೊಳ್ಳಿಲ್ಲ,
ಕೆಂಪು ಸಮುದ್ರದ ಹತ್ರಾನೇ ನಿನ್ನ ವಿರುದ್ಧ ದಂಗೆ ಎದ್ರು.+
9 ಆತನು ಕೆಂಪು ಸಮುದ್ರವನ್ನ ಗದರಿಸಿದಾಗ ಅದು ಬತ್ತಿಹೋಯ್ತು,
ಮರುಭೂಮಿಯಲ್ಲಿ* ನಡಿಸ್ಕೊಂಡು ಹೋಗೋ ತರ ಆತನು ಅವ್ರನ್ನ ಆಳವಾದ ಸಮುದ್ರದ ತಳದಲ್ಲಿ ನಡೆಸಿದ.+
11 ಸಮುದ್ರ ಅವ್ರ ಶತ್ರುಗಳನ್ನ ಮುಚ್ಚಿಹಾಕ್ತು,
ಅವ್ರಲ್ಲಿ ಒಬ್ಬನೂ ಬದುಕುಳಿಲಿಲ್ಲ.+
13 ಆದ್ರೆ ಆತನು ಮಾಡಿದ್ದನ್ನ ಅವರು ತಕ್ಷಣ ಮರೆತುಬಿಟ್ರು,+
ಆತನ ಮಾರ್ಗದರ್ಶನಕ್ಕಾಗಿ ಅವರು ಕಾಯಲಿಲ್ಲ.
15 ಅವರು ಕೇಳಿದ್ದನ್ನ ಆತನು ಅವ್ರಿಗೆ ಕೊಟ್ಟ,
ಆದ್ರೆ ಆಮೇಲೆ ಅವ್ರನ್ನ ವ್ಯಾಧಿಯಿಂದ ನಾಶಮಾಡಿದ.+
17 ಆಗ ಭೂಮಿ ಬಾಯಿ ತೆಗೆದು ದಾತಾನನನ್ನ ನುಂಗಿಹಾಕ್ತು,
ಅಬೀರಾಮನ ಜೊತೆ ಇದ್ದವ್ರನ್ನ ಮುಚ್ಚಿಹಾಕ್ತು.+
18 ಅವ್ರ ಗುಂಪಿನ ಮಧ್ಯ ಬೆಂಕಿ ಹೊತ್ತಿ ಉರೀತು,
ಕೆಟ್ಟವರನ್ನ ಅಗ್ನಿ ಭಸ್ಮ ಮಾಡ್ತು.+
20 ನನಗೆ ಕೊಡಬೇಕಾದ ಗೌರವವನ್ನ,
ಅವರು ಹುಲ್ಲು ತಿನ್ನೋ ಹೋರಿಯ ಮೂರ್ತಿಗೆ ಕೊಟ್ರು.+
21 ಅವ್ರನ್ನ ರಕ್ಷಿಸಿದ ದೇವರನ್ನೇ ಮರೆತುಬಿಟ್ರು,+
ಆತನು ಈಜಿಪ್ಟಲ್ಲಿ ಶ್ರೇಷ್ಠ ಕಾರ್ಯಗಳನ್ನ ಮಾಡಿದ,+
22 ಹಾಮನ ದೇಶದಲ್ಲಿ ಅದ್ಭುತಗಳನ್ನ ಮಾಡಿದ,+
ಕೆಂಪು ಸಮುದ್ರದ ಹತ್ರ ಭಯವಿಸ್ಮಯ ಹುಟ್ಟಿಸೋ ಕೆಲಸಗಳನ್ನ ಮಾಡಿದ.+
23 ಆತನು ಅವ್ರನ್ನ ಇನ್ನೇನು ನಿರ್ಮೂಲ ಮಾಡಿಬಿಡಬೇಕು ಅಂತಿದ್ದ,
ಅಷ್ಟರಲ್ಲಿ ಆತನು ಆರಿಸಿದ್ದ ಮೋಶೆ ಬಂದು ಆತನನ್ನ ಬೇಡ್ಕೊಂಡ,*
ನಾಶಮಾಡಬೇಕು ಅನ್ನೋ ಆತನ ಕೋಪನ ಶಾಂತಮಾಡಿದ.+
26 ಹಾಗಾಗಿ ಆತನು ತನ್ನ ಕೈಯೆತ್ತಿ ಅವ್ರ ಬಗ್ಗೆ ಆಣೆ ಮಾಡಿದ,
ಅವರು ಕಾಡಲ್ಲೇ ಸತ್ತುಹೋಗೋ ಹಾಗೆ ಮಾಡ್ತೀನಿ ಅಂತ,+
27 ಜನಾಂಗಗಳ ಮಧ್ಯ ಅವ್ರ ಸಂತತಿ ನಾಶವಾಗೋ ಹಾಗೆ ಮಾಡ್ತೀನಿ ಅಂತ,
ಅವ್ರನ್ನ ದೇಶದಲ್ಲೆಲ್ಲ ಚೆಲ್ಲಾಪಿಲ್ಲಿ ಮಾಡ್ತೀನಿ ಅಂತ ಹೇಳಿದ.+
30 ಆದ್ರೆ ಫೀನೆಹಾಸ ಎದ್ದು ಮುಂದೆ ಬಂದಾಗ
ಆ ವ್ಯಾಧಿ ನಿಂತುಹೋಯ್ತು.+
31 ಇದ್ರಿಂದ ತಲತಲಾಂತರದ ತನಕ
ಅವನು ದೇವರ ದೃಷ್ಟಿಯಲ್ಲಿ ನೀತಿವಂತನಾಗಿದ್ದ.+
37 ಅವರು ತಮ್ಮ ಮಕ್ಕಳನ್ನ ಕೆಟ್ಟ ದೇವದೂತರಿಗೆ ಬಲಿಯಾಗಿ ಕೊಡ್ತಿದ್ರು.+
38 ಅವರು ನಿರಪರಾಧಿಗಳ ರಕ್ತವನ್ನ,+
ತಮ್ಮ ಸ್ವಂತ ಮಕ್ಕಳ ರಕ್ತವನ್ನ ಸುರಿಸ್ತಾನೇ ಇದ್ರು.
ಅವ್ರನ್ನ ಕಾನಾನಿನ ಮೂರ್ತಿಗಳಿಗೆ ಅರ್ಪಿಸ್ತಿದ್ರು,+
ದೇಶ ರಕ್ತಪಾತದಿಂದ ಹಾಳಾಗಿ ಹೋಯ್ತು.
40 ಹಾಗಾಗಿ ಯೆಹೋವನ ಕೋಪ ತನ್ನ ಜನ್ರ ಮೇಲೆ ಹೊತ್ತಿ ಉರೀತು,
ತನ್ನ ಆಸ್ತಿ ಮೇಲೆ ಆತನಿಗೆ ಅಸಹ್ಯ ಆಯ್ತು.
41 ಆತನು ಪದೇಪದೇ ಅವ್ರನ್ನ ಬೇರೆ ಜನಾಂಗಗಳ ಕೈಗೆ ಒಪ್ಪಿಸಿದ,+
ಹಾಗಾಗಿ ಅವ್ರನ್ನ ದ್ವೇಷಿಸೋ ಆ ಜನಾಂಗಗಳು ಅವ್ರ ಮೇಲೆ ಆಳ್ವಿಕೆ ಮಾಡಿದ್ವು.+
42 ಅವ್ರ ಮೇಲೆ ಶತ್ರುಗಳು ದಬ್ಬಾಳಿಕೆ ಮಾಡಿದ್ರು,
ಅವರು ಶತ್ರುಗಳಿಗಿದ್ದ ಶಕ್ತಿ ಮುಂದೆ ತಲೆತಗ್ಗಿಸಬೇಕಾಯ್ತು.
43 ಎಷ್ಟೋ ಸಲ ಆತನು ಅವ್ರನ್ನ ಬಿಡಿಸಿದ.+
45 ಅವ್ರಿಗಾಗಿ ಆತನು ತನ್ನ ಒಪ್ಪಂದವನ್ನ ನೆನಪಿಸಿಕೊಳ್ತಿದ್ದ,
ಶ್ರೇಷ್ಠವಾದ* ತನ್ನ ಶಾಶ್ವತ ಪ್ರೀತಿಯಿಂದ ಅವ್ರನ್ನ ನೋಡಿ ಮರುಗುತಿದ್ದ.*+
46 ಅವ್ರನ್ನ ಕೈದಿಗಳಾಗಿ ಕರ್ಕೊಂಡು ಹೋಗ್ತಿದ್ದವರೆಲ್ಲ
ಅವ್ರನ್ನ ನೋಡಿ ಪಾಪ ಅನ್ನೋ ತರ ಮಾಡ್ತಿದ್ದ.+
47 ನಮ್ಮ ದೇವರಾದ ಯೆಹೋವನೇ, ನಮ್ಮನ್ನ ಕಾಪಾಡು,+
ನಾವು ನಿನ್ನ ಪವಿತ್ರ ಹೆಸ್ರಿಗೆ ಧನ್ಯವಾದ ಹೇಳೋ ತರ,
ನಿನ್ನನ್ನ ಹೊಗಳೋದ್ರಲ್ಲಿ ಖುಷಿಪಡೋ ತರ+
ಬೇರೆ ಜನಾಂಗಗಳ ಮಧ್ಯ ಚೆದರಿಹೋಗಿರೋ ನಮ್ಮನ್ನ ಒಟ್ಟುಸೇರಿಸು.+
ಎಲ್ಲ ಜನ್ರು “ಆಮೆನ್!”* ಅಂತ ಹೇಳಲಿ.
ಯಾಹುವನ್ನ ಸ್ತುತಿಸಿ!*