ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ, “ಲಿಲಿ” ಅನ್ನೋ ರಾಗದಲ್ಲಿ ಹಾಡಬೇಕು. ದಾವೀದನ ಕೀರ್ತನೆ.
69 ದೇವರೇ, ನನ್ನನ್ನ ಕಾಪಾಡು. ಯಾಕಂದ್ರೆ ನಾನು ನೀರಲ್ಲಿ ಮುಳುಗಿ ಹೋಗ್ತಿದ್ದೀನಿ.+
2 ಆಳವಾದ ಕೆಸ್ರಲ್ಲಿ ಮುಳುಗ್ತಿದ್ದೀನಿ, ಕಾಲು ಇಡಕ್ಕೂ ಗಟ್ಟಿನೆಲ ಸಿಗ್ತಿಲ್ಲ.+
ಆಳವಾದ ನೀರಲ್ಲಿ ಮುಳುಗಿ ಹೋಗ್ತಿದ್ದೀನಿ,
ಜೋರಾಗಿ ಹರಿತಿರೋ ಪ್ರವಾಹ ನನ್ನನ್ನ ಕೊಚ್ಕೊಂಡು ಹೋಗ್ತಿದೆ.+
3 ಕೂಗಿ ಕೂಗಿ ನನಗೆ ಸಾಕಾಗಿ ಹೋಯ್ತು,+
ನನ್ನ ಗಂಟಲು ಕಟ್ಕೊಂಡಿದೆ.
ನನ್ನ ದೇವರಿಗಾಗಿ ಕಾದುಕಾದು ನನ್ನ ಕಣ್ಣು ಸೋತುಹೋಗಿದೆ.+
5 ದೇವರೇ, ನಾನು ದಡ್ಡ ಅಂತ ನಿನಗೇ ಗೊತ್ತು,
ನನ್ನ ತಪ್ಪು ನಿನಗೆ ಕಾಣಿಸ್ತಾನೇ ಇದೆ.
6 ವಿಶ್ವದ ರಾಜ, ಸೈನ್ಯಗಳ ದೇವರಾದ ಯೆಹೋವನೇ,
ನಿನ್ನಲ್ಲಿ ನಿರೀಕ್ಷೆ ಇಟ್ಕೊಂಡ ಜನ್ರಿಗೆ ನನ್ನಿಂದ ಅವಮಾನ ಆಗೋಕೆ ಬಿಡಬೇಡ,
ಇಸ್ರಾಯೇಲ್ ದೇವರೇ,
ನಿನ್ನನ್ನ ಹುಡುಕೋರ ಹೆಸ್ರು ನನ್ನಿಂದ ಹಾಳಾಗದೇ ಇರಲಿ.
8 ನಾನು ನನ್ನ ಅಣ್ಣತಮ್ಮಂದಿರಿಗೇ ಅಪರಿಚಿತನ ತರ ಆಗಿಬಿಟ್ಟಿದ್ದೀನಿ,
ನನ್ನ ಜೊತೆ ಹುಟ್ಟಿದವ್ರಿಗೆ ವಿದೇಶಿ ತರ ಆಗಿಬಿಟ್ಟಿದ್ದೀನಿ.+
9 ನಿನ್ನ ಆಲಯದ ಕಡೆಗಿರೋ ಹುರುಪು ನನ್ನೊಳಗೆ ಹೊತ್ತಿ ಉರೀತಿದೆ+
ನಿನ್ನನ್ನ ಅಣಕಿಸೋರ ಬೈಗುಳಗಳು ನನ್ನ ಮೇಲೆ ಬಂದು ಬಿದ್ದಿವೆ.+
10 ಉಪವಾಸ ಮಾಡಿ* ನಾನು ನನ್ನನ್ನ ತಗ್ಗಿಸ್ಕೊಂಡಾಗ,
ಅದಕ್ಕೂ ನನ್ನನ್ನ ಬೈದ್ರು.
11 ಗೋಣಿ ಬಟ್ಟೆ ಹಾಕ್ಕೊಂಡಾಗ,
ಅವರು ನನ್ನನ್ನ ನೋಡಿ ತಮಾಷೆ* ಮಾಡಿದ್ರು.
12 ಊರಬಾಗಿಲಲ್ಲಿ ಕೂತ್ಕೊಳ್ಳೋರು ನನ್ನ ಬಗ್ಗೆ ಮಾತಾಡ್ತಾರೆ,
ಕುಡುಕರು ನನ್ನನ್ನ ಅವ್ರ ಹಾಡಲ್ಲಿ ಸೇರಿಸ್ಕೊಳ್ತಾರೆ.
13 ಆದ್ರೆ ಯೆಹೋವನೇ,
ಸರಿಯಾದ ಸಮಯಕ್ಕೆ ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ,+
ದೇವರೇ, ನಿನ್ನ ಅಪಾರವಾದ ಶಾಶ್ವತ ಪ್ರೀತಿಯಿಂದ,
ನಿನ್ನ ರಕ್ಷಣೆಯ ಕೆಲಸಗಳಿಂದ ನನಗೆ ಉತ್ರ ಕೊಡು.+
14 ಕೆಸ್ರಿಂದ ನನ್ನನ್ನ ಕಾಪಾಡು,
ನನ್ನನ್ನ ಮುಳುಗೋಕೆ ಬಿಡಬೇಡ.
ದ್ವೇಷಿಸೋರಿಂದ, ಆಳವಾದ ನೀರಿಂದ ನನ್ನನ್ನ ರಕ್ಷಿಸು.+
15 ಜೋರಾಗಿ ಹರಿತಿರೋ ಪ್ರವಾಹ ನನ್ನನ್ನ ಕೊಚ್ಕೊಂಡು ಹೋಗೋಕೆ ಬಿಡಬೇಡ,+
ಆಳವಾದ ನೀರು ನನ್ನನ್ನ ನುಂಗೋಕೆ ಬಿಡಬೇಡ,
16 ಯೆಹೋವನೇ, ನನಗೆ ಉತ್ರ ಕೊಡು. ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ಒಳ್ಳೇದು.+
ನಿನ್ನ ಅಪಾರ ಕರುಣೆ ತೋರಿಸ್ತಾ ನನ್ನ ಕಡೆ ತಿರುಗು.+
17 ನಿನ್ನ ಸೇವಕನಿಂದ ನಿನ್ನ ಮುಖ ಮರೆ ಮಾಡ್ಕೊಬೇಡ.+
ನಾನು ಕಷ್ಟದಲ್ಲಿದ್ದೀನಿ, ತಕ್ಷಣ ನನಗೆ ಉತ್ರಕೊಡು.+
18 ನನ್ನ ಹತ್ರ ಬಂದು ನನ್ನನ್ನ ರಕ್ಷಿಸು,
ನನ್ನ ಶತ್ರುಗಳಿಂದ ನನ್ನನ್ನ ಬಿಡಿಸು.
19 ನನ್ನ ಮೇಲಿರೋ ಆರೋಪ, ನನಗಾಗಿರೋ ಅವಮಾನ, ಅಪಮಾನ, ನಿನಗೆ ಗೊತ್ತಿದೆ.+
ನೀನು ನನ್ನ ಶತ್ರುಗಳನ್ನೆಲ್ಲ ನೋಡಿದ್ದೀಯ.
20 ಆರೋಪದಿಂದ ನನ್ನ ಹೃದಯ ಒಡೆದು ಹೋಗಿದೆ, ನನ್ನ ಈ ಗಾಯ ವಾಸಿನೇ ಆಗ್ತಾ ಇಲ್ಲ.*
ನನಗೆ ಸಹಾನುಭೂತಿ ಸಿಕ್ಕರೆ ಸಾಕು, ಆದ್ರೆ ಅದು ಎಲ್ಲೂ ಸಿಗಲಿಲ್ಲ,+
ಸಾಂತ್ವನ ಕೊಡೋರನ್ನ ಹುಡುಕಿದೆ, ಆಗ್ಲೂ ನನಗೆ ಯಾರೂ ಸಿಗಲಿಲ್ಲ.+
22 ಅವ್ರ ಊಟಾನೇ ಅವ್ರಿಗೆ ಉರುಲಾಗಲಿ,
ಅವ್ರ ಸಮೃದ್ಧಿನೇ ಅವ್ರಿಗೆ ಬಲೆಯಾಗಲಿ.+
23 ಅವ್ರ ಕಣ್ಣು ಕತ್ತಲಾಗಿ ಕಾಣದಂತಾಗಲಿ,
ಅವ್ರ ಕಾಲು ಯಾವಾಗ್ಲೂ ಗಡಗಡ ನಡುಗಲಿ.
26 ಯಾಕಂದ್ರೆ ನೀನು ಗಾಯ ಮಾಡಿರೋರನ್ನ ಅವರು ಅಟ್ಟಿಸ್ಕೊಂಡು ಹೋಗ್ತಾರೆ,
ನೀನು ಮಾಡಿದ ಗಾಯದ ನೋವುಗಳ ಬಗ್ಗೆ ಹರಟೆ ಹೊಡೀತಾರೆ.
27 ಅವ್ರ ಅಪರಾಧಕ್ಕೆ ಇನ್ನೂ ಅಪರಾಧ ಸೇರಿಸು,
ನಿನ್ನ ನೀತಿಯಲ್ಲಿ ಅವ್ರಿಗೆ ಯಾವ ಪಾಲೂ ಸಿಗದಿರಲಿ.
29 ನಾನು ಕಷ್ಟದಲ್ಲಿದ್ದೀನಿ, ನೋವಲ್ಲಿದ್ದೀನಿ.+
ದೇವರೇ, ನಿನ್ನ ರಕ್ಷಣೆಯ ಶಕ್ತಿ ನನ್ನನ್ನ ಕಾಪಾಡಲಿ.
30 ದೇವರ ಹೆಸ್ರಿಗೆ ಗೌರವ ಕೊಡೋಕೆ ನಾನು ಹಾಡಿ ಕೊಂಡಾಡ್ತೀನಿ,
ಧನ್ಯವಾದ ಹೇಳ್ತಾ ಆತನನ್ನ ಹೊಗಳ್ತೀನಿ.
31 ಯೆಹೋವನಿಗೆ ಹೋರಿಗಿಂತ,
ಕೊಂಬುಗಳಿರೋ ಉಗುರಿರೋ ಎಳೇ ಹೋರಿಗಿಂತ ಇದೇ ಜಾಸ್ತಿ ಇಷ್ಟ.+
32 ದೀನ ಜನ್ರು ಇದನ್ನ ನೋಡಿ ಖುಷಿಪಡ್ತಾರೆ.
ದೇವರನ್ನ ಹುಡುಕ್ತಿರೋ ಜನ್ರೇ, ನಿಮ್ಮ ಹೃದಯಕ್ಕೆ ಮತ್ತೆ ಜೀವ ಬರಲಿ.
34 ಭೂಮಿ ಮತ್ತು ಆಕಾಶ ಆತನನ್ನ ಹೊಗಳಲಿ,+
ಸಮುದ್ರ ಮತ್ತು ಅದ್ರಲ್ಲಿ ಈಜೋ ಎಲ್ಲವೂ ಆತನನ್ನ ಕೊಂಡಾಡಲಿ.