ಕೀರ್ತನೆ
ಸೊಲೊಮೋನನ ಬಗ್ಗೆ.
72 ದೇವರೇ, ನಿನ್ನ ತೀರ್ಪುಗಳ ಬಗ್ಗೆ ರಾಜನಿಗೆ ಕಲಿಸು,
ನಿನ್ನ ನೀತಿ ಬಗ್ಗೆ ರಾಜನ ಮಗನಿಗೆ ಬೋಧಿಸು.+
3 ಪರ್ವತಗಳು ಜನ್ರಿಗೆ ಶಾಂತಿ ತರಲಿ,
ಬೆಟ್ಟಗಳು ನೀತಿ ತರಲಿ.
10 ತಾರ್ಷೀಷಿನ ರಾಜರು, ದ್ವೀಪಗಳ ರಾಜರು ಅವನಿಗೆ ಕಪ್ಪ ಕೊಡ್ತಾರೆ.+
ಶೆಬದ ರಾಜರು, ಸೆಬಾದ ರಾಜರು ಅವನಿಗೆ ಉಡುಗೊರೆಗಳನ್ನ ಕೊಡ್ತಾರೆ.+
11 ಎಲ್ಲ ರಾಜರು ಅವನಿಗೆ ಬಗ್ಗಿ ನಮಸ್ಕಾರ ಮಾಡ್ತಾರೆ,
ಎಲ್ಲ ಜನಾಂಗದ ಜನ್ರು ಅವನ ಸೇವೆಮಾಡ್ತಾರೆ.
12 ಯಾಕಂದ್ರೆ ಅವನು ಸಹಾಯಕ್ಕಾಗಿ ಮೊರೆ ಇಡೋ ಬಡವ್ರನ್ನ ಕಾಪಾಡ್ತಾನೆ,
ದೀನರನ್ನ, ಸಹಾಯಕ್ಕಾಗಿ ಯಾರೂ ಇಲ್ಲದವ್ರನ್ನ ರಕ್ಷಿಸ್ತಾನೆ.
13 ದೀನರ ಮೇಲೆ, ಬಡಬಗ್ಗರ ಮೇಲೆ ಅವನಿಗೆ ಕನಿಕರ ಇರುತ್ತೆ,
ಬಡವರ ಜೀವವನ್ನ ಕಾಪಾಡ್ತಾನೆ.
14 ಅವನು ಅವ್ರನ್ನ ದಬ್ಬಾಳಿಕೆಯಿಂದ, ಹಿಂಸೆಯಿಂದ ತಪ್ಪಿಸ್ತಾನೆ,
ಅವನ ದೃಷ್ಟಿಯಲ್ಲಿ ಅವ್ರ ರಕ್ತ ತುಂಬ ಅಮೂಲ್ಯ.
15 ರಾಜ ಹೆಚ್ಚು ವರ್ಷ ಬದುಕಿ ಬಾಳಲಿ, ಶೆಬದ ಬಂಗಾರ ಅವನಿಗೆ ಸಿಗಲಿ.+
ಅವನಿಗಾಗಿ ಜನ್ರು ತಪ್ಪದೆ ಪ್ರಾರ್ಥನೆ ಮಾಡಲಿ,
ದಿನವೆಲ್ಲ ಅವನನ್ನ ಆಶೀರ್ವಾದ ಮಾಡಲಿ.
ಲೆಬನೋನಿನ ಮರಗಳ ಹಾಗೆ ಅವನ ಹೊಲದ ಫಸಲು ಚೆನ್ನಾಗಿರುತ್ತೆ,+
ಭೂಮಿಯ ಹುಲ್ಲಿನ ತರ ಪಟ್ಟಣಗಳಲ್ಲಿ ಜನ್ರು ಜಾಸ್ತಿ ಆಗ್ತಾರೆ.+
ಅವನಿಂದಾಗಿ ಜನ್ರೆಲ್ಲ ಆಶೀರ್ವಾದಗಳನ್ನ ಪಡಿಲಿ,+
ಎಲ್ಲ ಜನಾಂಗಗಳು ಅವನನ್ನ ಭಾಗ್ಯವಂತ ಅಂತ ಕರೀಲಿ.
ಆಮೆನ್,* ಆಮೆನ್.
20 ಇಷಯನ ಮಗ ದಾವೀದನ+ ಪ್ರಾರ್ಥನೆ ಇಲ್ಲಿಗೆ ಮುಗಿಯುತ್ತೆ.