ಯೆಶಾಯ
53 ನಮ್ಮಿಂದ ಕೇಳಿಸ್ಕೊಂಡ ವಿಷ್ಯಗಳ ಮೇಲೆ* ಯಾರು ನಂಬಿಕೆ ಇಟ್ಟಿದ್ದಾರೆ?+
ತನ್ನ ಶಕ್ತಿಯನ್ನ* ಯೆಹೋವ+ ಯಾರಿಗೆ ತೋರಿಸಿದ್ದಾನೆ?+
3 ಅವನನ್ನ ತಿರಸ್ಕಾರದಿಂದ ನೋಡಲಾಯ್ತು, ಮನುಷ್ಯರು ಅವನನ್ನ ದೂರ ಮಾಡಿದ್ರು,+
ನೋವಂದ್ರೆ ಏನು, ಅನಾರೋಗ್ಯ ಅಂದ್ರೇನು ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು.
ಅವನ ಮುಖವನ್ನ ನೋಡದೇ ಇರೋಕೆ ನಾವು ನಮ್ಮ ದೃಷ್ಟಿಯನ್ನ ತಿರುಗಿಸ್ಕೊಂಡ್ವಿ,*
ಅವನನ್ನ ತಿರಸ್ಕಾರದಿಂದ ಕಾಣಲಾಯ್ತು, ನಾವು ಅವನಿಗೆ ಕಿಂಚಿತ್ತೂ ಬೆಲೆ ಕೊಡಲಿಲ್ಲ.+
ಆದ್ರೆ ನಾವು ಅವನನ್ನ ಮಾರಕ ವ್ಯಾಧಿಗೆ ತುತ್ತಾದವನ ತರ ನೋಡಿದ್ವಿ. ದೇವರಿಂದ ಹೊಡೆತ ತಿಂದು ಕಷ್ಟ ಅನುಭವಿಸುವವನ ತರ ಕಂಡ್ವಿ.
6 ಕುರಿಗಳ ತರ ನಾವೆಲ್ಲ ಅತ್ತಿತ್ತ ಅಲೆದಾಡಿದ್ವಿ,+
ನಾವೆಲ್ಲ ನಮ್ಮನಮ್ಮ ದಾರಿ ಹಿಡಿದು ಹೋದ್ವಿ,
ನಮ್ಮೆಲ್ಲರ ತಪ್ಪುಗಳನ್ನ ಯೆಹೋವ ಅವನ ತಲೆ ಮೇಲೆ ಹಾಕಿದನು.+
ಬಲಿಯ ಕುರಿಮರಿನ ಕರ್ಕೊಂಡು ಬರೋ ತರ ಅವನನ್ನ ಕರ್ಕೊಂಡು ಬರಲಾಯ್ತು,+
ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿ ನಿಲ್ಲೋ ಕುರಿ ತರ
ಅವನು ತನ್ನ ಬಾಯಿ ತೆರಿದೇ ಸುಮ್ಮನಿದ್ದನು.+
8 ದಬ್ಬಾಳಿಕೆಯಿಂದ, ಅನ್ಯಾಯದಿಂದ ಅವನ ಜೀವ ತೆಗಿಲಾಯ್ತು,*
ಆದ್ರೆ ಅವನು ಯಾರು? ಎಲ್ಲಿಂದ ಬಂದ? ಅಂತ ತಿಳಿಯೋಕೆ ಯಾರೂ ಪ್ರಯತ್ನಿಸಲಿಲ್ಲ.
ಹಾಗಿದ್ರೂ ಕೆಟ್ಟವ್ರನ್ನ ಸಮಾಧಿ ಮಾಡೋ ಸ್ಥಳದಲ್ಲಿ ಅವನಿಗೆ ಸಮಾಧಿ ಮಾಡಲಾಯ್ತು.*+
ಆದ್ರೆ ಅವನು ತೀರಿಹೋದಾಗ ಅವನನ್ನ ಶ್ರೀಮಂತರ ಜೊತೆ* ಸಮಾಧಿ ಮಾಡಲಾಯ್ತು.+
10 ಆದ್ರೆ ಅವನನ್ನ ಜಜ್ಜೋದು ಯೆಹೋವನ ತೀರ್ಮಾನವಾಗಿತ್ತು.* ಅದಕ್ಕೇ ಅವನು ನೋವಿಂದ ನರಳೋ ತರ ಆತನು ಅನುಮತಿಸಿದನು.
ದೇವರೇ, ನೀನು ಅವನ ಪ್ರಾಣವನ್ನ ದೋಷಪರಿಹಾರಕ ಬಲಿಯಾಗಿ ಅರ್ಪಿಸಿದ್ರೆ,+
ಅವನು ತನ್ನ ಸಂತತಿಯನ್ನ ನೋಡ್ತಾನೆ, ಅವನು ತುಂಬ ಕಾಲ ಬದುಕ್ತಾನೆ,+
ಅವನ ಮೂಲಕ ಯೆಹೋವನ ಉದ್ದೇಶ ನೆರವೇರುತ್ತೆ.+
11 ತಾನು ಅನುಭವಿಸಿದ ಕಡುಸಂಕಟದ ಫಲಿತಾಂಶ ಕಂಡು ಅವನು ತೃಪ್ತನಾಗ್ತಾನೆ.