ತಿಮೊತಿಗೆ ಬರೆದ ಎರಡನೇ ಪತ್ರ
1 ನಾನು ಪೌಲ, ದೇವರ ಇಷ್ಟದ ಪ್ರಕಾರ ಕ್ರಿಸ್ತ ಯೇಸುವಿನ ಅಪೊಸ್ತಲನಾಗಿದ್ದೀನಿ. ಕ್ರಿಸ್ತ ಯೇಸು ಮೂಲಕ ದೇವರು ಕೊಟ್ಟಿರೋ ಜೀವದ+ ಮಾತನ್ನ ಸಾರೋಕೆ ನನ್ನನ್ನ ನೇಮಿಸಲಾಗಿದೆ. 2 ನನ್ನ ಪ್ರೀತಿಯ ಮಗ ತಿಮೊತಿ,+
ತಂದೆಯಾದ ದೇವರು ಮತ್ತು ನಮ್ಮ ಪ್ರಭು ಕ್ರಿಸ್ತ ಯೇಸು ನಿನಗೆ ಅಪಾರ ಕೃಪೆ, ಕರುಣೆ ತೋರಿಸ್ಲಿ, ಶಾಂತಿ ಕೊಡ್ಲಿ.
3 ನಾನು ದೇವರಿಗೆ ಚಿರಋಣಿ. ನಾನು ನನ್ನ ಪೂರ್ವಜರ ಹಾಗೆ ಶುದ್ಧ ಮನಸ್ಸಾಕ್ಷಿಯಿಂದ ಆತನಿಗೆ ಪವಿತ್ರ ಸೇವೆ ಮಾಡ್ತಿದ್ದೀನಿ. ಹಗಲೂರಾತ್ರಿ ಆತನಿಗೆ ಅಂಗಲಾಚಿ ಬೇಡುವಾಗ ನಿನ್ನನ್ನ ಯಾವಾಗ್ಲೂ ನೆನಪಿಸ್ಕೊಳ್ತೀನಿ. 4 ನೀನು ಕಣ್ಣೀರು ಇಟ್ಟಿದ್ದು ನನಗಿನ್ನೂ ನೆನಪಿದೆ. ನಿನ್ನನ್ನ ನೋಡಿದಾಗ್ಲೇ ನಂಗೆ ತುಂಬ ಖುಷಿ ಆಗೋದು. ಅದಕ್ಕೇ ನಾನು ಕಾಯ್ತಾ ಇದ್ದೀನಿ. 5 ನಿನ್ನ ಪ್ರಾಮಾಣಿಕ* ನಂಬಿಕೆ ಬಗ್ಗೆ ನಾನು ನೆನಪಿಸ್ಕೊಳ್ತೀನಿ.+ ಅಂಥ ನಂಬಿಕೆ ನಿನ್ನ ಅಜ್ಜಿ ಲೋವಿ, ನಿನ್ನ ಅಮ್ಮ ಯೂನಿಕೆಯಲ್ಲಿ ಇತ್ತು. ಅದು ನಿನ್ನಲ್ಲೂ ಇದೆ ಅನ್ನೋ ನಂಬಿಕೆ ನನಗಿದೆ.
6 ಹಾಗಾಗಿ ನಾನು ನಿನ್ನ ಮೇಲೆ ಕೈಗಳನ್ನಿಟ್ಟಾಗ ನೀನು ದೇವರಿಂದ ಪಡೆದ ಸಾಮರ್ಥ್ಯವನ್ನ ಚೆನ್ನಾಗಿ ಬಳಸು ಅಂತ ನೆನಪಿಸ್ತೀನಿ. ಬೆಂಕಿಯನ್ನ ಊದಿ ಹೆಚ್ಚಿಸೋ ಹಾಗೆ ಆ ಸಾಮರ್ಥ್ಯವನ್ನ ಹೆಚ್ಚಿಸು.+ 7 ದೇವರು ಕೊಡೋ ಪವಿತ್ರಶಕ್ತಿ* ನಮ್ಮಲ್ಲಿ ಹೇಡಿತನವನ್ನ ಅಲ್ಲ,+ ಬಲ,+ ಪ್ರೀತಿ, ಒಳ್ಳೇ ವಿವೇಚನೆ ಹುಟ್ಟಿಸುತ್ತೆ. 8 ಹಾಗಾಗಿ ನಮ್ಮ ಪ್ರಭು ಬಗ್ಗೆ ಸಾರೋಕೆ ನಾಚಿಕೆ ಪಡಬೇಡ,+ ಆತನ ಸಲುವಾಗಿ ಜೈಲಲ್ಲಿ ಇರೋ ನನ್ನನ್ನ ನೋಡಿ ಬೇಜಾರು ಮಾಡ್ಕೊಬೇಡ. ಬದಲಿಗೆ ಸಿಹಿಸುದ್ದಿ ಸಾರುವಾಗ ಬರೋ ಕಷ್ಟಗಳನ್ನ ಎದುರಿಸು.+ ಅದಕ್ಕೆ ಬೇಕಾದ ಬಲವನ್ನ ದೇವರು ಕೊಡ್ತಾನೆ ಅಂತ ಭರವಸೆ ಇಡು.+ 9 ಆತನು ನಮ್ಮನ್ನ ರಕ್ಷಿಸಿದ್ದು, ಪವಿತ್ರ ಜನ್ರಾಗಿರೋಕೆ ಕರೆದಿದ್ದು+ ನಮ್ಮ ಕೆಲಸ ನೋಡಿ ಅಲ್ಲ, ಆತನ ಅಪಾರ ಕೃಪೆ+ ಮತ್ತು ಆತನ ಉದ್ದೇಶನೇ ಇದಕ್ಕೆ ಕಾರಣ. ಆತನು ಎಷ್ಟೋ ಮುಂಚೆನೇ ಕ್ರಿಸ್ತ ಯೇಸು ಮೂಲಕ ನಮಗೆ ಅಪಾರ ಕೃಪೆ ತೋರಿಸಿದನು. 10 ಆದ್ರೆ ನಮ್ಮ ರಕ್ಷಕ ಕ್ರಿಸ್ತ ಯೇಸು+ ಕಾಣಿಸ್ಕೊಳ್ಳೋ ಮೂಲಕ ಆ ಕೃಪೆ ಬಗ್ಗೆ ಈಗ ನಮಗೆ ಸ್ಪಷ್ಟವಾಗಿ ಅರ್ಥ ಆಗಿದೆ. ಆತನು ಸಾವನ್ನೇ ಅಳಿಸಿಹಾಕಿದ್ದಾನೆ.+ ಜೀವ ಮತ್ತು ಅಳಿದು ಹೋಗದ ದೇಹ + ಪಡಿಯೋದು ಹೇಗಂತ ಸಿಹಿಸುದ್ದಿ+ ಮೂಲಕ ತೋರಿಸಿದ್ದಾನೆ.+ 11 ಆ ಸಿಹಿಸುದ್ದಿ ಹೇಳೋಕೇ ನನ್ನನ್ನ ಸಾರುವವನಾಗಿ, ಅಪೊಸ್ತಲನಾಗಿ ಮತ್ತು ಬೋಧಕನಾಗಿ ನೇಮಿಸಿದ್ದಾನೆ.+
12 ಹಾಗಾಗಿ ನಾನೂ ಈ ಎಲ್ಲ ಕಷ್ಟಗಳನ್ನ ಅನುಭವಿಸ್ತಾ ಇದ್ದೀನಿ.+ ಆದ್ರೆ ನಾನು ನಾಚಿಕೆಪಡಲ್ಲ.+ ಯಾಕಂದ್ರೆ ನಾನು ನಂಬಿರೋ ದೇವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನಾನು ಆತನಿಗೆ ಯಾವುದನ್ನ ಒಪ್ಪಿಸಿದ್ದೀನೋ ಅದನ್ನ ಆತನು ತೀರ್ಪಿನ ದಿನದ ತನಕ ಕಾಪಾಡ್ತಾನೆ ಅನ್ನೋ ನಂಬಿಕೆ ಇದೆ.+ 13 ನಾನು ನಿನಗೆ ಹೇಳಿದ ಒಳ್ಳೇ* ಮಾತುಗಳನ್ನ ಮಾದರಿಯಾಗಿ ಇಟ್ಕೊಂಡು ಪಾಲಿಸ್ತಾ ಇರು.+ ಕ್ರಿಸ್ತ ಯೇಸು ಜೊತೆ ಒಂದಾಗಿರೋ ನೀನು ನಂಬಿಕೆ ಪ್ರೀತಿ ತೋರಿಸ್ತಾ ಇರು. 14 ನಿನಗೆ ಒಪ್ಪಿಸಿರೋ ಅಮೂಲ್ಯ ವಿಷ್ಯವನ್ನ ನಮ್ಮಲ್ಲಿರೋ* ಪವಿತ್ರಶಕ್ತಿ ಮೂಲಕ ಕಾಪಾಡ್ಕೊ.+
15 ಏಷ್ಯಾ ಪ್ರದೇಶದ ಜನ್ರೆಲ್ಲ+ ನನ್ನನ್ನ ಬಿಟ್ಟುಹೋದ್ರು ಅಂತ ನಿಂಗೊತ್ತು. ಫುಗೇಲ, ಹೆರ್ಮೊಗೇನನೂ ಬಿಟ್ಟು ಹೋದ್ರು. 16 ಒನೇಸಿಫೊರನ+ ಮನೆಯವ್ರಿಗೆ ದೇವರು ಕರುಣೆ ತೋರಿಸ್ಲಿ, ಯಾಕಂದ್ರೆ ಅವನು ತುಂಬ ಸಲ ನನಗೆ ಹೊಸಬಲ ತುಂಬಿದ. ನಾನು ಜೈಲಲ್ಲಿದ್ದೀನಿ, ನನಗೆ ಬೇಡಿ ಹಾಕಿದ್ದಾರೆ ಅಂತ ಅವನು ನಾಚಿಕೆಪಡಲಿಲ್ಲ. 17 ಅವನು ರೋಮ್ನಲ್ಲಿ ಇದ್ದಾಗ ನನ್ನನ್ನ ಹುಡುಕಿ ಕಂಡುಹಿಡಿದ. 18 ಅವನಿಗೆ ಒಡೆಯನಾದ ಯೆಹೋವ* ತೀರ್ಪಿನ ದಿನ ಕರುಣೆ ತೋರಿಸ್ಲಿ. ಅವನು ಎಫೆಸದಲ್ಲಿ ಎಷ್ಟೆಲ್ಲ ಸೇವೆ ಮಾಡಿದ ಅಂತ ನಿನಗೆ ಚೆನ್ನಾಗಿ ಗೊತ್ತಲ್ವಾ.