ಧರ್ಮೋಪದೇಶಕಾಂಡ
34 ಆಮೇಲೆ ಮೋಶೆ ಮೋವಾಬಿನ ಬಯಲು ಪ್ರದೇಶಗಳಿಂದ ಹೊರಟು ಯೆರಿಕೋವಿನ ಮುಂದೆ+ ಇರೋ ನೆಬೋ ಬೆಟ್ಟ+ ಹತ್ತಿ, ಪಿಸ್ಗಾದ ತುದಿಗೆ+ ಹೋದ. ಯೆಹೋವ ಅವನಿಗೆ ಅಲ್ಲಿಂದ ಇಡೀ ದೇಶ ಅಂದ್ರೆ ಗಿಲ್ಯಾದಿಂದ ದಾನಿನ+ ತನಕ, 2 ನಫ್ತಾಲಿಯ ಎಲ್ಲ ಪ್ರದೇಶ, ಎಫ್ರಾಯೀಮ್, ಮನಸ್ಸೆಯ ಪ್ರದೇಶ, ಪಶ್ಚಿಮ ಸಮುದ್ರದ ತನಕ* ಇರೋ ಯೆಹೂದದ ಇಡೀ ಪ್ರದೇಶ,+ 3 ನೆಗೆಬ್,+ ಖರ್ಜೂರ ಮರಗಳ ಪಟ್ಟಣವಾಗಿದ್ದ ಯೆರಿಕೋವಿನ ಕಣಿವೆ ಬಯಲಿಂದ ಚೋಗರ್+ ಪಟ್ಟಣ ತನಕ ಇದ್ದ ಯೋರ್ದನ್ ಪ್ರದೇಶವನ್ನೆಲ್ಲ+ ತೋರಿಸಿದನು.
4 ಆಮೇಲೆ ಯೆಹೋವ ಮೋಶೆಗೆ “ನಾನು ಅಬ್ರಹಾಮ, ಇಸಾಕ, ಯಾಕೋಬರಿಗೆ ಮಾತು ಕೊಟ್ಟ ಹಾಗೆ ಅವರ ಸಂತತಿಯವರಿಗೆ ಕೊಡ್ತೀನಿ+ ಅಂತ ಹೇಳಿದ ದೇಶ ಇದೇ. ಇದನ್ನ ಕಣ್ಣಾರೆ ನೋಡೋ ಅವಕಾಶ ನಿನಗೆ ಕೊಟ್ಟಿದ್ದೀನಿ. ಆದ್ರೆ ನೀನು ಯೋರ್ದನ್ ದಾಟಿ ಅಲ್ಲಿಗೆ ಹೋಗಬಾರದು”+ ಅಂದನು.
5 ಯೆಹೋವನ ಸೇವಕನಾದ ಮೋಶೆ ಯೆಹೋವ ಹೇಳಿದ ಹಾಗೆ ಮೋವಾಬ್ ದೇಶದಲ್ಲಿ ತೀರಿಹೋದ.+ 6 ದೇವರು ಅವನನ್ನ ಮೋವಾಬ್ ದೇಶದ ಕಣಿವೆಯಲ್ಲಿ, ಬೇತ್-ಪೆಗೋರಿನ ಮುಂದೆ ಸಮಾಧಿ ಮಾಡಿದನು. ಅವನ ಸಮಾಧಿ ಎಲ್ಲಿದೆ ಅಂತ ಇವತ್ತಿನ ತನಕ ಯಾರಿಗೂ ಗೊತ್ತಿಲ್ಲ.+ 7 ಮೋಶೆ ತೀರಿಕೊಂಡಾಗ ಅವನಿಗೆ 120 ವರ್ಷ.+ ಆ ವಯಸ್ಸಲ್ಲೂ ಅವನ ದೃಷ್ಟಿ ಸ್ವಲ್ಪನೂ ಕಮ್ಮಿ ಆಗಿರಲಿಲ್ಲ, ಶಕ್ತಿ ಕುಂದಿರಲಿಲ್ಲ. 8 ಇಸ್ರಾಯೇಲ್ಯರು ಮೋವಾಬಿನ ಬಯಲು ಪ್ರದೇಶಗಳಲ್ಲಿ ಮೋಶೆಗಾಗಿ 30 ದಿನದ ತನಕ ಅತ್ರು.+ ಆಮೇಲೆ ಆ ಶೋಕಾಚರಣೆ ಮುಗಿತು.
9 ಮೋಶೆ ನೂನನ ಮಗ ಯೆಹೋಶುವನ ಮೇಲೆ ಕೈ ಇಟ್ಟು ಅವನನ್ನ ನಾಯಕನಾಗಿ ನೇಮಿಸಿದ್ರಿಂದ+ ಅವನಲ್ಲಿ ತುಂಬ ವಿವೇಕ ಇತ್ತು.* ಇಸ್ರಾಯೇಲ್ಯರು ಅವನು ಹೇಳಿದ ಹಾಗೆ ನಡಿಯೋಕೆ ಶುರುಮಾಡಿದ್ರು. ಮೋಶೆ ಮೂಲಕ ಯೆಹೋವ ಹೇಳಿದ ಹಾಗೆ ಅವರು ಮಾಡಿದ್ರು.+ 10 ಮೋಶೆ ಯೆಹೋವನ ಬಗ್ಗೆ ತುಂಬ ಚೆನ್ನಾಗಿ ತಿಳ್ಕೊಂಡಿದ್ದ.*+ ಮೋಶೆಯಂಥ ಒಬ್ಬ ಪ್ರವಾದಿ+ ಇವತ್ತಿನ ತನಕ ಇಸ್ರಾಯೇಲ್ಯರಲ್ಲಿ ಇರಲೇ ಇಲ್ಲ. 11 ಈಜಿಪ್ಟ್ ದೇಶದಲ್ಲಿ ಫರೋಹನ ಮುಂದೆ, ಅವನ ಸೇವಕರ ಮುಂದೆ, ಅವನ ಇಡೀ ದೇಶದಲ್ಲಿ ಯಾವ ಯಾವ ಸೂಚಕಕೆಲಸ, ಅದ್ಭುತ ಮಾಡೋಕೆ ಯೆಹೋವ ಮೋಶೆಯನ್ನ ಕಳಿಸಿದ್ದನೋ ಅದನ್ನೆಲ್ಲ ಅವನು ಮಾಡಿದ.+ 12 ಮೋಶೆ ಎಲ್ಲ ಇಸ್ರಾಯೇಲ್ಯರ ಮುಂದೆ ಅವರು ಆಶ್ಚರ್ಯ ಪಡೋ ತರ ಅದ್ಭುತಗಳನ್ನ ಮಾಡಿದ.+