18 ಜನ್ರ ಜೊತೆ ಸೇರದೆ ಒಂಟಿಯಾಗಿ ಇರೋಕೆ ಇಷ್ಟಪಡುವವನು ಸ್ವಾರ್ಥ ಆಸೆಗಳ ಹಿಂದೆ ಹೋಗ್ತಾನೆ,
ಅವನು ವಿವೇಕವನ್ನ ಬೇಡ ಅಂತಾನೆ.
2 ಬುದ್ಧಿ ಮಾತಂದ್ರೆ ಮೂರ್ಖನಿಗೆ ಸ್ವಲ್ಪಾನೂ ಇಷ್ಟ ಆಗಲ್ಲ.
ಅವನ ಮನಸ್ಸಲ್ಲಿ ಇರೋದನ್ನ ಕಕ್ಕೋದೆ ಅವನಿಗಿಷ್ಟ.+
3 ಕೆಟ್ಟವನು ಎಲ್ಲಿ ಇರ್ತಾನೋ ಅಲ್ಲಿ ತಿರಸ್ಕಾರನೂ ಇರುತ್ತೆ,
ಅವಮಾನದ ಜೊತೆ ಕೆಟ್ಟ ಹೆಸ್ರೂ ಬರುತ್ತೆ.+
4 ಮನುಷ್ಯನ ಮಾತು ಆಳವಾದ ನೀರಿನ ತರ,+
ಅವನಿಂದ ಬರೋ ವಿವೇಕ ಹರಿಯೋ ಕಾಲುವೆ ತರ.
5 ತೀರ್ಪನ್ನ ಕೊಡೋವಾಗ ಕೆಟ್ಟವನ ಪರ ವಹಿಸೋದು ಸರಿಯಲ್ಲ,+
ನೀತಿವಂತನಿಗೆ ನ್ಯಾಯ ಸಿಗದ ಹಾಗೆ ಮಾಡೋದು ಒಳ್ಳೇದಲ್ಲ.+
6 ಮೂರ್ಖನ ಮಾತು ಜಗಳಕ್ಕೆ ನಡಿಸುತ್ತೆ,+
ಅವನ ಬಾಯಿ ಹೊಡೆತಗಳನ್ನ ಕೈಬೀಸಿ ಕರಿಯುತ್ತೆ.+
7 ದಡ್ಡನ ಬಾಯಿ ಅವನಿಗೆ ನಾಶ ತರುತ್ತೆ,+
ಅವನ ತುಟಿಗಳು ಅವನ ಪ್ರಾಣಕ್ಕೆ ಉರ್ಲು.
8 ಚಾಡಿಕೋರನ ಮಾತು ರುಚಿಯಾದ ತುತ್ತುಗಳ ತರ,+
ನುಂಗಿದಾಗ ನೇರವಾಗಿ ಹೊಟ್ಟೆಗೆ ಹೋಗುತ್ತೆ.+
9 ಸೋಮಾರಿಯಾಗಿ ಇರೋನು,
ನಾಶ ತರುವವನ ತಮ್ಮ.+
10 ಯೆಹೋವನ ಹೆಸ್ರು ಬಲವಾದ ಕೋಟೆ.+
ನೀತಿವಂತ ಅದ್ರೊಳಗೆ ಓಡಿಹೋಗಿ ರಕ್ಷಣೆ ಪಡೀತಾನೆ.+
11 ಶ್ರೀಮಂತನ ಆಸ್ತಿನೇ ಅವನಿಗೆ ಭದ್ರಕೋಟೆ,
ಅದು ಅವನಿಗೆ ರಕ್ಷಣೆ ಕೊಡೋ ಗೋಡೆ ಅಂದ್ಕೊಳ್ತಾನೆ.+
12 ಮನುಷ್ಯನ ಸೊಕ್ಕು ನಾಶಕ್ಕೆ ನಡಿಸುತ್ತೆ,+
ದೀನತೆಯಿಂದ ಗೌರವ ಸಿಗುತ್ತೆ.+
13 ನಿಜ ಏನಂತ ಅರ್ಥ ಮಾಡ್ಕೊಳ್ಳದೆ ಉತ್ತರ ಕೊಡುವವನು ಮೂರ್ಖ,
ಅದ್ರಿಂದ ಅವನಿಗೆ ಅವಮಾನ ಆಗುತ್ತೆ.+
14 ಧೈರ್ಯವಾಗಿದ್ರೆ ಕಾಯಿಲೆಯನ್ನೂ ಗೆಲ್ಲಬಹುದು,+
ಆದ್ರೆ ಕುಗ್ಗಿದ ಮನಸ್ಸನ್ನ ಯಾರು ತಾನೇ ಸಹಿಸ್ಕೊಳ್ತಾರೆ?+
15 ಅರ್ಥ ಮಾಡ್ಕೊಳ್ಳೋ ಮನಸ್ಸು ಜ್ಞಾನ ಗಳಿಸುತ್ತೆ,+
ಬುದ್ಧಿವಂತನ ಕಿವಿ ಜ್ಞಾನ ಹುಡುಕುತ್ತೆ.
16 ಒಬ್ಬನು ಕೊಡೋ ಉಡುಗೊರೆ ಅವನಿಗೆ ದಾರಿ ತೆರಿಯುತ್ತೆ,+
ಅದು ಅವನನ್ನ ದೊಡ್ಡದೊಡ್ಡವ್ರ ಮುಂದೆ ಕರ್ಕೊಂಡು ಹೋಗುತ್ತೆ.
17 ಮೊದ್ಲು ಮಾತಾಡುವವನೇ ಸರಿ ಅಂತ ಅನಿಸುತ್ತೆ,+
ಆದ್ರೆ ಪ್ರತಿವಾದಿ ಎದ್ದು ಪ್ರಶ್ನೆ ಮಾಡಿದಾಗ ನಿಜ ಗೊತ್ತಾಗುತ್ತೆ.+
18 ಚೀಟಿ ಹಾಕಿದ್ರೆ ಜಗಳ ನಿಂತುಹೋಗುತ್ತೆ,+
ವಿರೋಧಿಗಳು ಎಂಥವ್ರೇ ಆಗಿದ್ರೂ ಸಮಸ್ಯೆ ಬಗೆಹರಿಯುತ್ತೆ.
19 ಬೇಜಾರಾಗಿರೋ ಸಹೋದರನನ್ನ ಗೆಲ್ಲೋದಕ್ಕಿಂತ ಭದ್ರಕೋಟೆ ಇರೋ ಪಟ್ಟಣ ಗೆಲ್ಲೋದು ಸುಲಭ,+
ಭದ್ರಕೋಟೆಯ ಕಂಬಿಗಳ ತರ ಜಗಳಗಳು ಜನ್ರನ್ನ ಬೇರೆಬೇರೆ ಮಾಡಿಬಿಡುತ್ತೆ.+
20 ಮನುಷ್ಯ ತನ್ನ ಮಾತಿಂದ ಹೊಟ್ಟೆ ತುಂಬಿಸ್ಕೊಳ್ತಾನೆ,+
ತನ್ನ ತುಟಿಗಳ ಬೆಳೆಯಿಂದ ತೃಪ್ತನಾಗ್ತಾನೆ.
21 ಜೀವ, ಮರಣ ಎರಡೂ ನಾಲಿಗೆ ಕೈಯಲ್ಲಿದೆ,+
ಮಾತಿಗೆ ತಕ್ಕ ಹಾಗೆ ಫಲ ಸಿಗುತ್ತೆ.+
22 ಒಬ್ಬನಿಗೆ ಒಳ್ಳೇ ಹೆಂಡತಿ ಸಿಕ್ಕಿದ್ರೆ ಬೆಲೆಕಟ್ಟೋಕೆ ಆಗದ ನಿಧಿ ಸಿಕ್ಕಿದ ಹಾಗೆ.+
ಅವನು ಯೆಹೋವನ ಆಶೀರ್ವಾದ ಪಡೀತಾನೆ.+
23 ಶ್ರೀಮಂತನ ಹತ್ರ ಬಡವ ಸಹಾಯಕ್ಕಾಗಿ ಅಂಗಲಾಚಿ ಕೇಳ್ತಾನೆ,
ಆದ್ರೆ ಶ್ರೀಮಂತ ಕನಿಕರ ತೋರಿಸದೆ ಉತ್ತರ ಕೊಡ್ತಾನೆ.
24 ಒಬ್ರನ್ನೊಬ್ರು ಜಜ್ಜಿಬಿಡಬೇಕು ಅಂತ ಕಾಯೋ ಜೊತೆಗಾರರೂ ಇದ್ದಾರೆ,+
ಒಡಹುಟ್ಟಿದವನಿಗಿಂತ ಜಾಸ್ತಿ ಪ್ರೀತಿಸೋ ಸ್ನೇಹಿತನೂ ಇರ್ತಾನೆ.+