ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.
13 ಯೆಹೋವನೇ, ಎಲ್ಲಿ ತನಕ ನೀನು ನನ್ನನ್ನ ಮರೆತುಬಿಡ್ತೀಯ? ಶಾಶ್ವತವಾಗಿ ಮರೆತುಬಿಡ್ತೀಯ?
ಎಲ್ಲಿ ತನಕ ನೀನು ನಿನ್ನ ಮುಖನ ತಿರುಗಿಸ್ಕೊಂಡು ಇರ್ತಿಯ?+
2 ನಾನೂ ಎಲ್ಲಿ ತನಕ ಚಿಂತೆಯಲ್ಲೇ ಮುಳುಗಿರಬೇಕು?
ಪ್ರತಿದಿನ ಯಾತನೆಪಡೋ ನನ್ನ ಹೃದಯ ಎಲ್ಲಿ ತನಕ ದುಃಖದ ಭಾರನ ಸಹಿಸ್ಕೊಬೇಕು?
ನನ್ನ ವೈರಿ ನನ್ನ ಮೇಲೆ ಎಲ್ಲಿ ತನಕ ಜಯ ಸಾಧಿಸಬೇಕು?+
3 ಯೆಹೋವನೇ, ನನ್ನ ದೇವರೇ, ನನ್ನ ಕಡೆ ನೋಡು. ನನಗೆ ಉತ್ತರ ಕೊಡು.
ನಾನು ಸಾವಿನ ನಿದ್ದೆಗೆ ಜಾರದ ಹಾಗೆ ನನ್ನ ಕಣ್ಣುಗಳಿಗೆ ಬೆಳಕು ಕೊಡು.
4 ನನ್ನ ಶತ್ರು, “ನಾನು ಅವನನ್ನ ಸೋಲಿಸಿಬಿಟ್ಟೆ!” ಅಂತ ಹೇಳಬಾರದು.
ನಾನು ಬಿದ್ದುಹೋಗಿದ್ದನ್ನ ನೋಡಿ ಖುಷಿಪಡಬಾರದು.+
5 ನಾನಂತೂ ನಿನ್ನ ಶಾಶ್ವತ ಪ್ರೀತಿಯ ಮೇಲೆ ಭರವಸೆ ಇಟ್ಟಿದ್ದೀನಿ.+
ನನ್ನನ್ನ ರಕ್ಷಿಸೋಕೆ ನೀನು ಮಾಡೋ ವಿಷ್ಯಗಳಿಂದ ನನ್ನ ಹೃದಯ ಕುಣಿಯುತ್ತೆ.+
6 ನಾನು ಯೆಹೋವನಿಗಾಗಿ ಹಾಡ್ತೀನಿ, ಆತನು ನನ್ನನ್ನ ತುಂಬ ಆಶೀರ್ವದಿಸಿದ್ದಾನೆ.*+