ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಕೀರ್ತನೆ.
ಅಂಥ ಜನ್ರು ಭ್ರಷ್ಟರು, ಅವರ ಕೆಲಸ ಅಸಹ್ಯ.
ಯಾರೂ ಒಳ್ಳೇದನ್ನ ಮಾಡ್ತಿಲ್ಲ.+
2 ಆದ್ರೆ ಯಾರಿಗೆ ತಿಳುವಳಿಕೆ ಇದೆ,
ಯಾರು ಯೆಹೋವನನ್ನ ಹುಡುಕ್ತಿದ್ದಾರೆ,
ಅಂತ ತಿಳ್ಕೊಳ್ಳೋಕೆ ಯೆಹೋವ ಸ್ವರ್ಗದಿಂದ ನೋಡ್ತಾನೆ.+
3 ಅವ್ರೆಲ್ಲ ದಾರಿತಪ್ಪಿದ್ದಾರೆ,+
ಭ್ರಷ್ಟಾಚಾರ ಮಾಡದಿರೋರು ಒಬ್ರೂ ಇಲ್ಲ.
ಯಾರೂ ಒಳ್ಳೇದನ್ನ ಮಾಡ್ತಿಲ್ಲ,
ಒಬ್ಬನೂ ಮಾಡ್ತಿಲ್ಲ.
4 ಕೆಟ್ಟದನ್ನ ಮಾಡೋರಿಗೆ ಗೊತ್ತಾಗಲ್ವಾ?
ಅವರು ನನ್ನ ಜನ್ರನ್ನ ರೊಟ್ಟಿ ತರ ನುಂಗ್ತಾರೆ.
ಅವರು ಯೆಹೋವನಿಗೆ ಪ್ರಾರ್ಥನೆ ಮಾಡಲ್ಲ.
5 ಆದ್ರೆ ತುಂಬ ಭಯ ಅವ್ರನ್ನ ಕಾಡುತ್ತೆ.+
ಯಾಕಂದ್ರೆ ಒಳ್ಳೇ ಪೀಳಿಗೆ ಜೊತೆ ಯೆಹೋವ ಇದ್ದಾನೆ.
6 ಕೆಟ್ಟದನ್ನ ಮಾಡೋರೇ, ನೀವು ದೀನರ ಕೆಲಸಗಳನ್ನ ಹಾಳುಮಾಡೋಕೆ ಪ್ರಯತ್ನಿಸ್ತೀರ.
ಆದ್ರೆ ಯೆಹೋವ ಅವ್ರ ಆಶ್ರಯವಾಗಿದ್ದಾನೆ.+
7 ಚೀಯೋನಿಂದ ಇಸ್ರಾಯೇಲ್ಯರಿಗೆ ರಕ್ಷಣೆ ಬರಲಿ!+
ಜೈಲಲ್ಲಿರೋ ಜನ್ರನ್ನ ಯೆಹೋವ ಒಟ್ಟುಸೇರಿಸುವಾಗ,
ಯಾಕೋಬ ಖುಷಿಪಡಲಿ, ಇಸ್ರಾಯೇಲ್ ಉಲ್ಲಾಸಪಡಲಿ.