ಕೀರ್ತನೆ
ದಾವೀದನ ಕೀರ್ತನೆ
27 ಯೆಹೋವ ನನ್ನ ಬೆಳಕು,+ ನನ್ನ ರಕ್ಷಣೆ.
ನಾನು ಯಾಕೆ ಭಯಪಡಬೇಕು?+
ಯೆಹೋವನೇ ನನ್ನ ಜೀವದ ಭದ್ರಕೋಟೆ.+
ನಾನು ಯಾಕೆ ಹೆದರಬೇಕು?
ನನ್ನ ವಿರುದ್ಧ ಯುದ್ಧಕ್ಕೆ ಬಂದ್ರೂ,
ನಾನು ಧೈರ್ಯವಾಗೇ ಇರ್ತಿನಿ.
4 ನಾನು ಯೆಹೋವನ ಹತ್ರ ಒಂದು ವಿಷ್ಯ ಕೇಳಿದ್ದೀನಿ,
ಅದಕ್ಕಾಗಿ ನಾನು ಕಾಯ್ತಾ ಕೂತಿದ್ದೀನಿ, ಅದೇನಂದ್ರೆ
ಯಾವಾಗ್ಲೂ ಯೆಹೋವನ ಒಳ್ಳೇತನವನ್ನ ನೋಡೋಕೆ ಆಗೋ ಹಾಗೆ,
ಆತನ ಆಲಯವನ್ನ ಗಣ್ಯತೆಯಿಂದ ಕಾಣೋ ಹಾಗೆ,+
5 ಯಾಕಂದ್ರೆ ವಿಪತ್ತಿನ ದಿನ ಆತನು ನನ್ನನ್ನ ತನ್ನ ಆಶ್ರಯದಲ್ಲಿ ಬಚ್ಚಿಡ್ತಾನೆ,+
ನನ್ನನ್ನ ತನ್ನ ಡೇರೆಯ ರಹಸ್ಯ ಜಾಗದಲ್ಲಿ ಅಡಗಿಸಿ ಇಡ್ತಾನೆ,+
ನನ್ನನ್ನ ಎತ್ತರವಾದ ಬಂಡೆ ಮೇಲೆ ನಿಲ್ಲಿಸ್ತಾನೆ.+
6 ಈಗ ನನ್ನ ತಲೆ ನನ್ನನ್ನ ಮುತ್ಕೊಂಡಿರೋ ಶತ್ರುಗಳಿಗಿಂತ ಎತ್ತರದಲ್ಲಿದೆ,
ಖುಷಿಯಿಂದ ಜೈಕಾರ ಹಾಕ್ತಾ ನಾನು ಆತನ ಡೇರೆಯಲ್ಲಿ ಬಲಿಗಳನ್ನ ಕೊಡ್ತೀನಿ,
ನಾನು ಯೆಹೋವನಿಗೆ ಹಾಡಿ ಹೊಗಳ್ತೀನಿ.
8 “ನನ್ನನ್ನ ಹುಡುಕಿ” ಅನ್ನೋ ಆಜ್ಞೆ ಕೊಟ್ಟೆ ಅಂತ,
ನನ್ನ ಹೃದಯ ಹೇಳ್ತು.
ಯೆಹೋವನೇ, ನಾನು ನಿನ್ನನ್ನ ಹುಡುಕ್ತೀನಿ.+
9 ನಿನ್ನ ಮುಖವನ್ನ ನನ್ನಿಂದ ತಿರುಗಿಸ್ಕೊಬೇಡ.+
ನಿನ್ನ ಸೇವಕನನ್ನ ಕೋಪದಿಂದ ತಳ್ಳಬೇಡ.
ನೀನೇ ನನ್ನ ಸಹಾಯಕ,+
ನನ್ನ ರಕ್ಷಣೆಯ ದೇವರೇ, ತೊರೆದು ಹೋಗಬೇಡ, ನನ್ನನ್ನ ಬಿಡಬೇಡ.
11 ಯೆಹೋವನೇ, ನಿನ್ನ ದಾರಿಯನ್ನ ನನಗೆ ಕಲಿಸು.+
ಶತ್ರುಗಳಿಂದ ಕಾಪಾಡೋಕೆ ನೀತಿಯ ದಾರೀಲಿ ನನ್ನನ್ನ ನಡಿಸು.
12 ನನ್ನನ್ನ ಶತ್ರುಗಳ ಕೈಗೆ ಒಪ್ಪಿಸಬೇಡ,+
ಯಾಕಂದ್ರೆ ಸುಳ್ಳು ಸಾಕ್ಷಿ ಹೇಳೋರು ನನ್ನ ವಿರುದ್ಧ ಎದ್ದಿದ್ದಾರೆ,+
ಅವರು ನನಗೆ ಪ್ರಾಣ ಬೆದರಿಕೆ ಹಾಕ್ತಿದ್ದಾರೆ.
ಧೈರ್ಯವಾಗಿ, ದೃಢವಾಗಿ ಇರು.+
ಹೌದು, ಯೆಹೋವನ ಮೇಲೆ ನಿರೀಕ್ಷೆ ಇಡು.