ಜೆಕರ್ಯ
11 “ಲೆಬನೋನೇ, ನಿನ್ನ ಬಾಗಿಲುಗಳನ್ನ ತೆರಿ,
ಆಗ ಬೆಂಕಿ ಬಂದು ನಿನ್ನ ದೇವದಾರು ಮರಗಳನ್ನ ಸುಟ್ಟುಹಾಕುತ್ತೆ.
2 ಜುನಿಪರ್ ಮರವೇ, ಗೋಳಾಡು! ಯಾಕಂದ್ರೆ, ದೇವದಾರು ಮರ ಬಿದ್ದಿದೆ.
ಶ್ರೇಷ್ಠ ವೃಕ್ಷಗಳು ನಾಶವಾಗಿವೆ!
ಬಾಷಾನಿನ ಓಕ್ ಮರಗಳೇ ಗೋಳಾಡಿ,
ಯಾಕಂದ್ರೆ ದಟ್ಟಕಾಡು ನೆಲಸಮವಾಗಿದೆ!
3 ಕೇಳಿ! ಕುರುಬರ ಗೋಳಾಟ ಕೇಳಿ!
ಯಾಕಂದ್ರೆ ಅವ್ರ ವೈಭವ ಮಣ್ಣುಪಾಲಾಗಿದೆ.
ಕೇಳಿ! ಎಳೇ ಸಿಂಹಗಳ ಗರ್ಜನೆ ಕೇಳಿ,
ಯಾಕಂದ್ರೆ ಯೋರ್ದನಿನ ಉದ್ದಕ್ಕೂ ಇದ್ದ ದಟ್ಟ ಪೊದೆಗಳು ನಾಶ ಆಗಿವೆ.
4 ನನ್ನ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ಬಲಿ ಕೊಡೋಕೆ ಇಟ್ಟಿರೋ ಮಂದೆಯನ್ನ ಕಾಯಿರಿ.+ 5 ಖರೀದಿ ಮಾಡಿದವರು ಅವುಗಳನ್ನ ಕೊಂದ್ರೂ,+ ಅವ್ರನ್ನ ಅಪರಾಧಿಗಳ ತರ ನೋಡಲ್ಲ. ಅವುಗಳನ್ನ ಮಾರುವವರು+ “ಯೆಹೋವನನ್ನ ಹಾಡಿಹೊಗಳಿ. ಯಾಕಂದ್ರೆ ನಾವು ಶ್ರೀಮಂತರಾಗ್ತೀವಿ” ಅಂತಾರೆ. ಅವುಗಳ ಕುರುಬರಿಗೆ ಅವುಗಳ ಮೇಲೆ ಸ್ವಲ್ಪನೂ ಕನಿಕರ ಇಲ್ಲ.’+
6 ಯೆಹೋವ ಹೀಗೆ ಹೇಳ್ತಿದ್ದಾನೆ: ‘ಇನ್ಮುಂದೆ ನಾನು ದೇಶದ ನಿವಾಸಿಗಳಿಗೆ ಕನಿಕರ ತೋರಿಸಲ್ಲ. ಪ್ರತಿಯೊಬ್ಬ ಮನುಷ್ಯ ತನ್ನ ನೆರೆಯವನ ಮತ್ತು ತನ್ನ ರಾಜನ ಕೈಯಲ್ಲಿ ನಲುಗಿಹೋಗೋ ತರ ನಾನು ಮಾಡ್ತೀನಿ. ಅವರು ದೇಶವನ್ನ ನಾಶ ಮಾಡ್ತಾರೆ. ಅವ್ರ ಕೈಯಿಂದ ನಾನು ಆ ಜನ್ರನ್ನ ಕಾಪಾಡಲ್ಲ.’”
7 ಮಂದೆಯಲ್ಲಿರೋ ನೊಂದಿರೋ ಜನ್ರೇ, ಬಲಿ ಕೊಡೋಕೆ ಇಟ್ಟಿರೋ ನಿಮ್ಮನ್ನ ನಾನು ಕಾಯೋಕೆ ಶುರು ಮಾಡಿದೆ.+ ಹಾಗಾಗಿ ನಾನು ಎರಡು ಕೋಲುಗಳನ್ನ ತಗೊಂಡೆ. ಒಂದಕ್ಕೆ ನಾನು “ಹಿತಕರ” ಅಂತ, ಇನ್ನೊಂದಕ್ಕೆ “ಐಕ್ಯ”+ ಅಂತ ಹೆಸ್ರಿಟ್ಟೆ. ಆಮೇಲೆ ಮಂದೆಯನ್ನ ಕಾಯೋಕೆ ಶುರುಮಾಡಿದೆ. 8 ಒಂದೇ ತಿಂಗಳಲ್ಲಿ ಮೂರು ಕುರುಬರನ್ನ ತೆಗೆದುಬಿಟ್ಟೆ. ಯಾಕಂದ್ರೆ ನಾನು ತಾಳ್ಮೆ ಕಳ್ಕೊಳೋ ತರ ಅವರು ಮಾಡಿದ್ರು. ಅವರು ನನ್ನನ್ನ ದ್ವೇಷಿಸ್ತಿದ್ರು. 9 ಅದಕ್ಕೆ ನಾನು “ನಿಮ್ಮನ್ನ ನಾನು ಹೀಗೇ ಕಾಯ್ತಾ ಇರಲ್ಲ. ಸಾಯುವವರು ಸಾಯಲಿ, ನಾಶ ಆಗುವವರು ನಾಶವಾಗ್ಲಿ. ಯಾರು ಉಳ್ಕೊತಾರೋ ಅವರು ಒಬ್ಬರು ಇನ್ನೊಬ್ಬರ ಮಾಂಸವನ್ನ ನುಂಗಿಹಾಕಲಿ” ಅಂದೆ. 10 ಆಮೇಲೆ ನಾನು ಹಿತಕರ+ ಅನ್ನೋ ಕೋಲು ತಗೊಂಡು ಅದನ್ನ ಮುರಿದು, ಎಲ್ಲ ಜನ್ರ ಜೊತೆ ಮಾಡ್ಕೊಂಡಿದ್ದ ಒಪ್ಪಂದವನ್ನ ಮುರಿದುಹಾಕಿದೆ. 11 ಹಾಗಾಗಿ ಆ ದಿನ ಆ ಒಪ್ಪಂದ ಮುರಿದುಹೋಯ್ತು. ನನ್ನನ್ನ ನೋಡ್ತಿದ್ದ ಆ ಮಂದೆಯಲ್ಲಿನ ನೊಂದಿದ್ದ ಜನ್ರಿಗೆ ಆ ಸಂದೇಶ ಯೆಹೋವನಿಂದ ಬಂದಿದ್ದು ಅಂತ ಗೊತ್ತಿತ್ತು.
12 ಆಮೇಲೆ ನಾನು ಅವ್ರಿಗೆ “ನಿಮಗೆ ಸರಿ ಅನಿಸಿದ್ರೆ, ನನಗೆ ನನ್ನ ಸಂಬಳವನ್ನ ಕೊಡಿ, ಇಲ್ಲದಿದ್ರೆ ಕೊಡಬೇಡಿ” ಅಂದೆ. ಆಗ ಅವರು ನನಗೆ 30 ಬೆಳ್ಳಿ ಶೆಕೆಲ್ಗಳನ್ನ ಸಂಬಳವಾಗಿ* ಕೊಟ್ರು.+
13 ಆಮೇಲೆ ಯೆಹೋವ ನನಗೆ “ಅವರು ನನಗೆ ತುಂಬ ಬೆಲೆ ಕೊಟ್ಟಿದ್ದಾರೆ! ಹೋಗು, ಅದನ್ನ ಖಜಾನೆಯಲ್ಲಿ ಬಿಸಾಡು”+ ಅಂತ ಹೇಳಿದನು. ಆಗ ನಾನು ಆ 30 ಬೆಳ್ಳಿ ಶೆಕೆಲ್ಗಳನ್ನ ತಗೊಂಡು ಹೋಗಿ ಯೆಹೋವನ ಆಲಯದ ಖಜಾನೆಯಲ್ಲಿ ಬಿಸಾಡಿದೆ.+
14 ಆಮೇಲೆ ನಾನು ಐಕ್ಯ+ ಅನ್ನೋ ನನ್ನ ಎರಡನೇ ಕೋಲನ್ನ ಮುರಿದು ಯೆಹೂದ ಮತ್ತು ಇಸ್ರಾಯೇಲಿನ ಮಧ್ಯ ಇದ್ದ ಸಹೋದರತ್ವವನ್ನ ಕಡಿದುಹಾಕಿದೆ.+
15 ಯೆಹೋವ ನನಗೆ ಹೀಗಂದನು: “ಕೆಲಸಕ್ಕೆ ಬಾರದ ಕುರುಬನ ಸಲಕರಣೆಗಳನ್ನ ತಗೊ.+ 16 ಯಾಕಂದ್ರೆ ನಾನು ಈ ದೇಶದ ಮೇಲ್ವಿಚಾರಣೆ ಮಾಡೋಕೆ ಒಬ್ಬ ಕುರುಬನನ್ನ ನೇಮಿಸ್ತೀನಿ. ಅವನು ನಾಶವಾಗ್ತಿರೋ ಕುರಿಗಳ ಕಾಳಜಿ ಮಾಡಲ್ಲ.+ ಅವನು ಅವುಗಳ ಮರಿಗಳನ್ನ ಹುಡುಕೋದೂ ಇಲ್ಲ, ಅವುಗಳಿಗೆ ಗಾಯವಾದ್ರೆ ನೋಡ್ಕೊಳ್ಳೋದೂ ಇಲ್ಲ.+ ಅಷ್ಟೇ ಅಲ್ಲ ಆರೋಗ್ಯದಿಂದ ಇರುವವುಗಳಿಗೆ ಸಹ ಮೇವನ್ನ ಹಾಕಲ್ಲ. ಬದಲಿಗೆ ದಷ್ಟಪುಷ್ಟವಾಗಿರೋ ಕುರಿಗಳ ಮಾಂಸವನ್ನ ನುಂಗಿಹಾಕ್ತಾನೆ+ ಮತ್ತು ಅವುಗಳ ಗೊರಸುಗಳನ್ನ ಸೀಳಿಹಾಕ್ತಾನೆ.+
17 ಮಂದೆಯನ್ನ ತೊರೆದುಬಿಡೋ+ ಕೆಲಸಕ್ಕೆ ಬಾರದ ನನ್ನ ಕುರುಬನ ಗತಿಯನ್ನ ಏನು ಹೇಳಲಿ!+
ಒಂದು ಕತ್ತಿ ಅವನ ತೋಳನ್ನ ಕತ್ತರಿಸುತ್ತೆ, ಅವನ ಬಲಗಣ್ಣನ್ನ ಚುಚ್ಚುತ್ತೆ.
ಅವನ ತೋಳು ಸಂಪೂರ್ಣ ಬತ್ತಿಹೋಗುತ್ತೆ.
ಅವನ ಬಲಗಣ್ಣು ಪೂರ್ತಿ ಕುರುಡಾಗುತ್ತೆ.”*