ಯುವ ಜನರು ಪ್ರಶ್ನಿಸುವುದು...
ನನ್ನ ಅಪ್ಪ ಮತ್ತು ಅಮ್ಮ ಅನಕ್ಷರಸ್ಥರು ನಾನು ಅವರನ್ನು ಹೇಗೆ ಗೌರವಿಸಲಿ?
ಥಾಮಸ್ ಎಡಿಸನ್, ವಿದ್ಯುತ್ದೀಪ ಬಲ್ಬ್ನ ಸಂಶೋಧಕನಾಗಿ ಲೋಕದಲ್ಲೆಲ್ಲೂ ಅಂಗೀಕರಿಸಲ್ಪಟ್ಟಿದ್ದಾನೆ. ತದ್ರೀತಿ ಹೆನ್ರಿ ಫೋರ್ಡ್, ಮಹಾ ತಾಂತ್ರಿಕ ಉತ್ಪಾದನೆಯ ಜನಕನಾಗಿ ಲೋಕದಲ್ಲೆಲ್ಲಾ ಹೆಸರಾದವನು. ಆದರೆ ಹೆನ್ರಿ ಫೋರ್ಡ್ ಮತ್ತು ಥಾಮಸ್ ಎಡಿಸನ್ ಇಬ್ಬರಿಗೂ ಕೇವಲ ಕೊಂಚವೇ ವಿಧಿವಿಹಿತ ವಿದ್ಯೆ ದೊರೆತ್ತಿತ್ತೆಂಬದು ನಿಮಗೆ ಗೊತ್ತೋ?
ಅಪೊಸ್ತಲರಾದ ಪೇತ್ರ ಮತ್ತು ಯೋಹಾನರು ಆದಿ ಕ್ರೈಸ್ತ ಸಭೆಯ ಸ್ತಂಭಗಳಾಗಿದ್ದರು. ಅವರು ಸತ್ಯದ ಧೀರ ಹಾಗೂ ವಾಕಾತ್ಚುರ್ಯವುಳ್ಳ ಭಾಷಕರು ಆಗಿದ್ದರು. ಆದರೂ, ಐಹಿಕ ವಿದ್ಯೆಯ ಸಂಬಂಧದಲ್ಲಿ ಅವರು, “ಶಾಸ್ತ್ರಭ್ಯಾಸ ಮಾಡದ (ನಿರಕ್ಷರರು, NW) ಸಾಧಾರಣರು” ಎಂದು ಕರೆಯಲ್ಪಟ್ಟಿದ್ದರು.—ಅ.ಕೃ. 4:13.
ಹೌದು, ವಿಧಿವಿಹಿತವಾದ ಕೊಂಚವೇ ವಿದ್ಯೆ ಇದ್ದಾಗ್ಯೂ ಮಹತ್ತಾದ ಕಾರ್ಯಗಳನ್ನು ಸಾಧಿಸಿದ ಸ್ತ್ರೀ ಪುರುಷರು ಇತಿಹಾಸದಲ್ಲೆಲ್ಲಾ ಇದ್ದಾರೆ. ಮತ್ತು ಆ ಕಾರಣದಿಂದಾಗಿ ಅವರನ್ನು ಕಡಿಮೆ ಮಾನ್ಯರೆಂದು ಯಾವ ನ್ಯಾಯಸಮ್ಮತ ವ್ಯಕ್ತಿಯಾದರೂ ಎಣಿಸಲಾರನು. ಹಾಗಾದರೆ, ಸ್ಪಷ್ಟವಾಗಿಗಿಯೇ, ವಿಧಿವಿಹಿತವಾದ ವಿದ್ಯೆಗಿಂತ ಮಾನವ ಪಾತ್ರತೆ ಮತ್ತು ಘನತೆಗೆ ಹೆಚ್ಚು ಖ್ಯಾತಿ ಇದೆ.
ಇದರ ಅರ್ಥವು ವಿಧಿವಿಹಿತ ವಿದ್ಯೆಯು ಮಹತ್ವದಲ್ಲ ಅಥವಾ ಅನಕ್ಷರತೆ ಅಂದರೆ ಓದು ಬರಹ ಇಲ್ಲದಿರುವದು ತಡೆಗಟ್ಟಲ್ಲ ಎಂದಲ್ಲ. ಅನೇಕ ದೇಶಗಳಲ್ಲಿ, ಮಾಧ್ಯಮಿಕ ಶಾಲಾ ಯೋಗ್ಯತಾ ಪತ್ರವಿಲ್ಲದ ವ್ಯಕ್ತಿಗೆ ಉದ್ಯೋಗ ಸಿಗುವದು ಬಲು ಕಷ್ಟ. ಓದಲು ಬಾರದವನಿಗೆ ಪುಸ್ತಕಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಅಡಕವಾಗಿರುವ ವಿಪುಲ ಜ್ಞಾನಭಂಡಾರವನ್ನು ಸವಿಯ ಸಾಧ್ಯವಿಲ್ಲ. ಬರೆಯಲು ಬಾರದ ವ್ಯಕ್ತಿ ಸಹಿಮಾಡುವಂತೆ ಅಥವಾ ಒಂದು ಅರ್ಜಿಯನ್ನು ತುಂಬಿಸುವಂತೆ ಕೇಳಲ್ಪಟ್ಟಲ್ಲಿ ಪೇಚಾಟಕ್ಕೆ ಒಳಗಾಗಬಹುದು.
ಆದರೂ, ಒಬ್ಬನ ಹೆತ್ತವರು ಅನಕ್ಷರಸ್ಥರಾಗಿದ್ದಲ್ಲಿ ಆಗೇನು? ಆಫ್ರಿಕಾ ಮತ್ತು ಇತರ ವಿಕಾಸಗೊಳ್ಳುತ್ತಿರುವ ದೇಶಗಳಲ್ಲಿ, ಓದುಬರಹಬಲ್ಲ ಯುವಕರಿಗೆ ಓದುಬರಹ ಬಾರದ ಹೆತ್ತವರು ಇರುವದು ಸರ್ವ ಸಾಮಾನ್ಯ. ಔದ್ಯೋಗಿಕವಾಗಿ ಮುಂಬರಿದ ದೇಶಗಳಲ್ಲೂ, ಕೆಲವು ಯುವಕರಿಗೆ ತಮ್ಮ ಹೆತ್ತವರು ಆನಂದಿಸಲಾಗದಂಥ ವಿದ್ಯಾಭ್ಯಾಸದ ಪ್ರಯೋಜನಗಳು ದೊರೆತಿವೆ. ಹೇಗೂ, ಇದು ನಿಮ್ಮ ವಿಷಯದಲ್ಲಿ ನಿಜವಾಗಿದ್ದರೆ, ನಿಮ್ಮ ಹೆತ್ತವರ ವಿಷಯದಲ್ಲಿ ನಿಮ್ಮ ಭಾವನೆಯೇನು? ಅವರಿಗಿರುವ ವಿದ್ಯೆಯ ಕೊರತೆಯು ನಿಮ್ಮನ್ನು ಸಂಕೋಚಕ್ಕೆ ಹಾಕುತ್ತದೋ? ಅಥವಾ, ಇನ್ನೂ ಕೆಟ್ಟದ್ದಾಗಿ, ಅವರು ಮೂಢರು ಮತ್ತು ಗೌರವಕ್ಕೆ ಪಾತ್ರರಲ್ಲ ಎಂಬ ಅನಿಸಿಕೆ ಕೆಲವು ಸಲ ನಿಮಗಾಗುತ್ತದೋ?
ಗೌರವವೇಕೆ ಯೋಗ್ಯವು
ಅಂಥ ನಕಾರಾತ್ಮಕ ಅನಿಸಿಕೆಯು ನಿಮ್ಮನ್ನು ಆಗಿಂದಾಗ್ಯೆ ಬಾಧಿಸುತ್ತಿದ್ದರೆ, ನೀವು ಹೆತ್ತವರನ್ನು ಗೌರವಿಸಬೇಕೆಂದು ದೇವರು ಅಪೇಕ್ಷಿಸುತ್ತಾನೆ ಎಂಬ ವಾಸ್ತವಿಕತೆಯನ್ನು ಮನಸ್ಸಿನಲ್ಲಿಡುವದು ನಿಮಗೆ ಸಹಾಯಕಾರಿ. ಎಫೆಸ 6:2, 3 ಆಜ್ಞಾಪಿಸುವುದು: “ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ— ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸಬೇಕು. ಸನ್ಮಾನಿಸಿದರೆ ನಿನಗೆ ಮೇಲಾಗುವದು, ನೀನು ಭೂಮಿಯ ಮೇಲೆ ಬಹು ಕಾಲ ಬದುಕುವಿ.” ಮಾನ ಕೊಡುವಿಕೆಯನ್ನು ಒಂದು ಶಬ್ದಕೋಶವು, ‘ಗೌರವದಿಂದ ಉಪಚರಿಸುವಿಕೆ’ ಎಂದು ಅರ್ಥೈಸುತ್ತದೆ. ನಿಮ್ಮ ಹೆತ್ತವರಿಗೆ ಗೌರವ ತೋರಿಸುವಿಕೆಯ ಮೇಲೆ ನಿಮ್ಮ ಭವಿಷ್ಯ ಜೀವನದ ಪ್ರತೀಕ್ಷೆಗಳು ಆತುಕೊಂಡಿವೆ ಎಂಬದನ್ನೂ ಗಮನಿಸಿರಿ. ಅವರಿಗೆ ಅಗೌರವವು ದೇವರಿಗೆ ಅಗೌರವ ತೋರಿಸುವಂತೆ ಇರುವದು.
ಎಷ್ಟೆಂದರೂ, ನಿಮಗೆ ಜೀವವನ್ನು ಕೊಟ್ಟದ್ದಕ್ಕಾಗಿ ನಿಮ್ಮ ಹೆತ್ತವರಿಗೆ ನೀವು ಋಣಿಗಳಾಗಿದ್ದೀರಿ. ತಮ್ಮಿಂದಾದಷ್ಟು ಮಟ್ಟಿಗೆ ಉತ್ತಮವಾಗಿ ಅವರು ನಿಮಗೆ ಆಹಾರ, ಬಟ್ಟೆ ಮತ್ತು ಮನೆಯನ್ನು—ಅನೇಕ ವಿಕಸನಗೊಳ್ಳುವ ದೇಶಗಳಲ್ಲಿ ಇದೂ ಕಷ್ಟ—ಒದಗಿಸುತ್ತಾರೆ ಮತ್ತು ಮುಂದಣ ವರ್ಷಗಳಲ್ಲೂ ಒದಗಿಸುತ್ತಾ ಬರುವರು ನಿಸ್ಸಂಶಯ. ನಿಮ್ಮ ಹೆತ್ತವರ ಸಮಯ, ಕೋಮಲ ಪರಾಮರಿಕೆ ಮತ್ತು ಪ್ರೀತಿಯ ಮಾರ್ಗದರ್ಶನೆಯ ಮೂಲ್ಯತೆಗೆ ಬೆಲೆಕಟ್ಟ ಸಾಧ್ಯವಿಲ್ಲ. ನಿರ್ದಿಷ್ಟ ಶೈಕ್ಷಣಿಕ ಪ್ರಯೋಜನಗಳ ಕೊರತೆ ಅವರಿಗಿದೆ ಎಂದ ಕಾರಣದಿಂದ ಅವರನ್ನು ತೃಣೀಕರಿಸಬೇಕೋ? ಅನಕ್ಷರಸ್ಥರಾಗಿರಲಿ, ಅಕ್ಷರರಸ್ಥರಾಗಿರಲಿ, ಅವರು ನಿಮ್ಮ ಹೆತ್ತವರಷ್ಟೇ.
ಇದನ್ನೂ ನೆನಪಿಡಿರಿ ಏನಂದರೆ ಯಾವುದೇ ವಿಧಿವಿಹಿತ ವಿದ್ಯೆಯು ನಿಮಗಿರುವದು ನಿಮ್ಮ ಹೆತ್ತವರು ಅದಕ್ಕಾಗಿ ಹಣ ತೆತ್ತದ್ದರಿಂದಲೇ, ಕೆಲವು ಸಾರಿ ಬಹಳ ತ್ಯಾಗಗಳನ್ನು ಮಾಡಿ. ಅದು ನಿಮ್ಮ ಗಣ್ಯತೆಯನ್ನು ಕೇಳಿಕೊಳ್ಳಬಾರದೇ?
ಹೆತ್ತವರಿಗಿರುವ ಶಿಕ್ಷಣ
ವಾಸ್ತವದಲ್ಲಿ, ನಿಮ್ಮ ಹೆತ್ತವರು ಬಹುಶಃ ನಿಮಗಿಂತ ಹೆಚ್ಚು ಶಿಕ್ಷಿತರಿರಬಹುದು. ವಿಧಿವಿಹಿತ ವಿದ್ಯಾಭ್ಯಾಸವು, ಒಬ್ಬನು ತನ್ನ ಜೀವಮಾನದಲ್ಲೆಲ್ಲಾ ಅದರ ಮೇಲೆ ಕಟ್ಟಬಲ್ಲ ಒಂದು ವಿಸ್ತಾರವಾದ ತಳಪಾಯವನ್ನು ಕೊಡುತ್ತದೆ. ಆದರೆ ಜೀವಮಾನದಲ್ಲಿ ನೀವು ತಿಳಿಯಬೇಕಾದ ಎಲ್ಲವನ್ನು ಅದು ನಿಮಗೆ ಕಲಿಸುವುದಿಲ್ಲ.
ಘಾನಾದ ಒಂದು ಸಾಮಾನ್ಯ ನಾಣ್ಣುಡಿ ಹೀಗಿದೆ: “ಪ್ರೌಢನು ಒಮ್ಮೆ ಮಗುವಾಗಿದವ್ದನು, ಆದರೆ ಮಗುವು ಹಿಂದೆಂದೂ ಪ್ರೌಢನಾಗಿದ್ದಿರಲಿಲ್ಲ.” ಪುಸ್ತಕದಿಂದ ನೀವು ಪಡೆಯಲಾರದಂಥ ಒಂದು ಸಂಗತಿ ನಿಮ್ಮ ಹೆತ್ತವರಿಗಿದೆ: ಜೀವಿತದಲ್ಲಿನ ಅನುಭವಗಳು. ನೀವೆಂದಾದರೂ ಒಂದು ಉದ್ಯೋಗ ಹಿಡಿದವರೋ, ಹಣ ಪಾವತಿಗಳನ್ನು ಮಾಡಿರುವಿರೋ, ಚಿಕ್ಕ ಮಕ್ಕಳನ್ನು ಪಾಲಿಸಿರುವಿರೋ ಅಥವಾ ಮನೆವಾರ್ತೆಯನ್ನು ನಿರ್ವಹಿಸಿರುವಿರೋ? ಈ ವಿಷಯಗಳಲ್ಲಿ ನಿಮ್ಮ ಹೆತ್ತವರು ಈವಾಗಲೇ ಅನೇಕ ವರ್ಷಗಳ ಅನುಭವವನ್ನು ಸಂಚಯಿಸಿರುವರು.
ಬೈಬಲ್ ಇಬ್ರಿಯರಿಗೆ 5:14ರಲ್ಲಿ ಇನ್ನೂ ಹೇಳುವದೇನಂದರೆ, ಒಬ್ಬನ ತಿಳುವಳಿಕೆಯ ಶಕ್ತಿಯು “ಒಳ್ಳೇದರ ಮತ್ತು ಕೆಟ್ಟದರ ಭೇದವನ್ನು ತಿಳಿಯುವದು” ಕೇವಲ ಓದು ಮತ್ತು ಅಭ್ಯಾಸದ ಮೂಲಕವಲ್ಲ, “ಸಾಧನೆಯಿಂದ ಶಿಕ್ಷಿಸಿ” ಕೊಳ್ಳುವ ಮೂಲಕವೇ! ನಿಮ್ಮ ಹೆತ್ತವರು ಹೀಗೆ ನಿಮಗೆ ಮಾರ್ಗದರ್ಶನೆಯನ್ನು ಕೊಡುವ, ನಿಮ್ಮಲ್ಲಿ ಮೌಲ್ಯತೆಯನ್ನು ಬೇರೂರಿಸುವ ಸ್ಥಾನದಲ್ಲಿರುವರು. ನಿಮ್ಮ ಹೆತ್ತವರು ದೇವ-ಭೀರುಗಳಾಗಿರುವಾಗ ಇದು ವಿಶೇಷವಾಗಿ ಸತ್ಯವು.
ರಸಕರವಾಗಿಯೇ, ನಿಮಗಿಂತ ಹೆಚ್ಚು ಅನುಭವವಿರುವ ಹೆತ್ತವರ ಉಪಯುಕ್ತತೆಯು, ನೀವು ಸಥ್ವಃ ಸಾಕಷ್ಟು ದೊಡ್ಡವರಾಗಿ ಒಂದು ಮನೆವಾರ್ತೆಯನ್ನು ನೀವಾಗಿಯೇ ನಡಿಸ ಶಕ್ತರಾಗುವಾಗಲೂ ಕಡಿಮೆಯಾಗದು! ಜ್ಞಾನೋಕ್ತಿ 23:22 ಹೇಳುವದು: “ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆ ಮಾಡಬೇಡ.” ಈ ಸಲಹೆಯು ಚಿಕ್ಕ ಮಕ್ಕಳಿಗೆ ಉದ್ದೇಶಿಸಿದ್ದಲ್ಲ, ಮುದುಕರಾದ ಹೆತ್ತವರಿರುವ ಪ್ರೌಢರಿಗೆ. ಹೌದು, ಒಬ್ಬರು ಪ್ರೌಢರಾಗಿರುವಾಗಲೂ ತಮ್ಮ ಹೆತ್ತವರಿಗೆ ಕಿವಿಗೊಡುವದು, ಅನುಭವದಿಂದ ಅವರು ಗಳಿಸಿರುವ ವಿವೇಕಕ್ಕೆ ಗೌರವ ನೀಡುವದು ವಿವೇಕಪ್ರದವು. ಹೆತ್ತವರು ಅನಕ್ಷರಸ್ಥರಾಗಿರಬಹುದು, ಆದರೆ ಅವರ ಸೂಚನೆಯಲ್ಲಿ ಮೌಲ್ಯತೆಯಿಲ್ಲ ಎಂದದರ ಅರ್ಥವಲ್ಲ.
ಅನಕ್ಷರಸ್ಥರು ಆದರೆ ವೈಫಲ್ಯರಲ್ಲ
ಓದುಬರಹವಿಲ್ಲದ ಹೆತ್ತವರಿಂದ ಬೆಳೆಸಲ್ಪಟ್ಟ ಯುವಕರ ನಿಜ-ಜೀವನ ಅನುಭವಗಳು ಮೇಲಿನವುಗಳ ಸತ್ಯತೆಯನ್ನು ಚೆನ್ನಾಗಿ ಚಿತ್ರಿಸುತ್ತವೆ. ಘಾನಾ ದೇಶದ ಯುವಕ, ಕಬ್ವೇನ, ತನ್ನ ಅನಕ್ಷರಸ್ಥೆ ತಾಯಿಯ ಕುರಿತು ಹೇಳುವದು: “ಆಕೆ ಕಟ್ಟುನಿಟ್ಟಿನ ಶಿಸ್ತನ್ನಿಟ್ಟಳು. ನನ್ನ ಹಿತಕ್ಕಾಗಿ ಆಕೆ ನನ್ನಲ್ಲಿ ಬೇರೂರಿಸಿದ ಮೌಲ್ಯಗಳಿಗಾಗಿ ಗಣ್ಯತೆಯಲ್ಲಿ, ನಾನು ಆಕೆಯನ್ನು ಹೆಚ್ಚೆಚ್ಚು ಪ್ರೀತಿಸ ತೊಡಗಿದ್ದೇನೆ. ನನ್ನ ಅಕ್ಕಂದಿರು ಸಾಫಲ್ಯರಾದ ಪತ್ನಿಯರಾಗಿದ್ದಾರೆ, ಇದರ ಕೀರ್ತಿಯ ಅಧಿಕಾಂಶವು ನನ್ನ ತಾಯಿಗೆ ಸಲ್ಲಬೇಕು.”
ರೆಜಿನಾಲ್ಡ್, ಇನ್ನೊಂದು ಕಡೆ, ಅನಕ್ಷರಸ್ಥನಾದ ಅವನ ಅಜ್ಜನಿಂದ ಬೆಳೆಸಲ್ಪಟ್ಟನು. ರೆಜಿನಾಲ್ಡ್ ನೆನಪಿಸುವದು: “ಆತನ ಮಾರ್ಗದರ್ಶನೆಗಳು ಬಲಿತವುಗಳೂ ಸ್ಥಿರಭಾವದವುಗಳೂ ಆಗಿದ್ದು, ನನಗೆ ಜೀವನದ ಅತ್ಯಾರಂಭದಿಂದಲೇ ಗಂಭೀರ ಜವಾಬ್ದಾರಿಗಳಿಗೆ ಯನ್ನು ಹೆಗಲು ಕೊಡಲು ನೆರವಾದವು.”
ಕಾಸ್ವಿಯು ಇನ್ನೊಬ್ಬ ಘಾನಾ ಯುವಕನು, ಅವನ ತಾಯಿಗೂ ವಿಧಿವಿಹಿತ ವಿದ್ಯೆಯ ಪ್ರಯೋಜನ ಎಂದೂ ದೊರೆತಿರಲಿಲ್ಲ. ಇದು ಅವಳನ್ನು ತನ್ನ ಮಗನಿಗೆ ತೀರಾ ಅಪ್ರಯೋಜಕಳನ್ನಾಗಿ ಮಾಡಿತೋ? ಇಲ್ಲ. ಕಾಸ್ವಿ ನೆನಪಿಸುವದು: “ನನ್ನ ತಾಯಿಯ ಮಾನಸಿಕ ಬಲವನ್ನು ನಾನು ಯಾವಾಗಲೂ ಮೆಚ್ಚಿದ್ದೆ. ಆಕೆ ವ್ಯಾಪಾರ ಕಸುಬಿನಲಿದ್ಲಳ್ದು, ಮತ್ತು ನನ್ನ ಮಾಧ್ಯಮಿಕ ಶಾಲಾ ಆರಂಭದ ವರ್ಷಗಳಲ್ಲಿ, ಯಾವಾಗಲಾದರೂ ಆಕೆಗೆ ಲೆಕ್ಕಮಾಡಲಿದ್ದರೆ ನನಗೆ ಪೆನ್ ಮತ್ತು ಪೇಪರ್ನ ಮರೆಹೋಗಬೇಕಿತ್ತು. ಆಕೆಯಾದರೋ ಮನಸ್ಸಲ್ಲೇ ಅಂಕಗಣಿತ ಮಾಡುತ್ತಿದ್ದಳು. ಹೆಚ್ಚಾಗಿ ಸರಿಯಾದ ಉತ್ತರವು ಮೊದಲು ಆಕೆಗೇ ದೊರಕುತ್ತಿತ್ತು!”
ನಿಮ್ಮ ಹೆತ್ತವರಿಗೆ ಒಂದು ಸಹಾಯವಾಗಿರ್ರಿ
ಹೌದು, ಸಾಕ್ಷರತೆಯು ನಿಮಗೆ ನಿರ್ದಿಷ್ಟ ಪ್ರಯೋಜನಗಳನ್ನು ಕೊಡುತ್ತದೆ. ಆದರೆ ನಿಮ್ಮ ಹೆತ್ತವರನ್ನು ಕೆಳದರ್ಜೆಯವರಾಗಿ ನೋಡುವದಕ್ಕೆ ಇದು ಯಾವ ಕಾರಣವನ್ನೂ ಕೊಡಬಾರದು. ಯೇಸು ಯುವಕನಾಗಿದ್ದಾಗ, ಅವನ ಹೆತ್ತವರಿಗಿಂತ ಒಂದು ವಿಶೇಷ ಮೇಲ್ಮೈ ಅವನಿಗಿತ್ತು. ಅವನು ಪರಿಪೂರ್ಣನಾಗಿದ್ದನು. ಆದರೂ, ಬೈಬಲ್ ದಾಖಲೆ ತೋರಿಸುವದು: “ಆತನು ಅವರಿಗೆ ಅಧೀನನಾಗಿದ್ದನು.”—ಲೂಕ 2:51.
ಇದರ ನೋಟದಲ್ಲಿ, ನಿಮ್ಮ ಕುಶಲತೆಗಳನ್ನು ನಿಮ್ಮ ಹೆತ್ತವರ ಪ್ರಯೋಜನಕ್ಕಾಗಿ ಹೇಗೆ ಬಳಸಬಹುದೆಂಬದಕ್ಕೆ ನೀವು ಮನಸ್ಸು ಕೊಟ್ಟಿದ್ದೀರೋ? ಅವರು, ಉದಾಹರಣೆಗೆ, ಅವರ ಕಾಗಪ್ದತ್ರಗಳನ್ನು, ವಾರ್ತಾಪತ್ರ, ಬೈಬಲು, ಬೈಬಲಾಧಾರಿತ ಸಾಹಿತ್ಯಗಳನ್ನು ನೀವು ಅವರಿಗೆ ಓದಿಹೇಳುವದನ್ನು ಗಣ್ಯಮಾಡಬಹುದು. ಅಥವಾ, ಅವರ ಪರವಾಗಿ ನೀವು ಪತ್ರ ಬರೆಯುವದರಿಂದ ಯಾ ಅರ್ಜಿಗಳನ್ನು ತುಂಬಿಸಿಕೊಡುವದರಿಂದ ಅವರು ಪ್ರಯೋಜನ ಪಡೆಯಬಹುದು.
ಯೆಹೋವ ದೇವರು ತನ್ನ ಜನರಿಗೆ ಸಹಾಯ ಮಾಡುವಾಗ, “ಆತನು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ” ಎಂದು ಜ್ಞಾಪಕದಲ್ಲಿಡಿರಿ. (ಯಾಕೋಬ 1:5) ಇನ್ನೊಂದು ಮಾತಿನಲ್ಲಿ ಹೇಳುವದಾದರೆ, ತನ್ನ ಸಹಾಯ ಬೇಕಾದದ್ದಕ್ಕಾಗಿ ನಮ್ಮನ್ನು ನಿಷ್ಪಯ್ರೋಜಕರೆಂಬ ಅನಿಸಿಕೆಗೆ ಆತನು ಒಳಪಡಿಸುವದಿಲ್ಲ. ಹೀಗೆ ನಿಮ್ಮ ಹೆತ್ತವರೊಂದಿಗೆ ವಿನಯದಿಂದ, ದಯೆಯಿಂದ ವರ್ತಿಸಿರಿ, ಆಗ ಅವರು ನಿಮ್ಮ ಸಹಾಯವನ್ನು ಸ್ವೀಕರಿಸುವ ಹೆಚ್ಚು ಸಂಭವನೀಯತೆ ಇದೆ.
ಓದುವ ಮತ್ತು ಬರೆಯುವ ಸಾಮರ್ಥ್ಯಗಳು ಕ್ರೈಸ್ತ ಸಭೆಯಲ್ಲಿ ಎಷ್ಟೋ ಉಪಯುಕ್ತವಾಗಿರುವದರಿಂದ, ದೊರೆಯಬಹುದಾದ ಓದು-ಬರಹದ ಹಲವಾರು ಕಾರ್ಯಕ್ರಮಗಳ ಪ್ರಯೋಜನ ತಕ್ಕೊಳ್ಳುವಂತೆ ನೀವು ನಿಮ್ಮ ಹೆತ್ತವರಿಗೆ ವಿನಯಪರ ಉತ್ತೇಜನವನ್ನು ಕೊಡಲೂ ಬಹುದು. ಕುತೂಹಲಕರವಾಗಿ, ನಿರಕ್ಷರತೆಯು ಇರುವ ಅನೇಕ ದೇಶಗಳಲ್ಲಿ, ಯೆಹೋವನ ಸಾಕ್ಷಿಗಳ ರಾಜ್ಯಗೃಹವು ಆಗಾಗ್ಯೆ ಕಲಿಯುವ ಕೇಂದ್ರವಾಗಿ ಉಪಯೋಗಿಸಲ್ಪಡುತ್ತದೆ. ಅಲ್ಲಿ ನೀಡಲ್ಪಡುವ ಶಿಕ್ಷಣ ಕಾರ್ಯಕ್ರಮದ ಪ್ರಯೋಜನವನ್ನು ತಕ್ಕೊಳ್ಳುವಂತೆ ಪ್ರೇರೇಪಿಸಲ್ಪಡಲು ಪ್ರಾಯಶಃ ನಿಮ್ಮ ದಯೆಯುಳ್ಳ ಉತ್ತೇಜನದ ಒಂದು ಮಾತೇ ಅವರಿಗೆ ಸಾಕಾದೀತು.
ಕೆಲವು ಆಫ್ರಿಕನ್ ದೇಶಗಳಲ್ಲಿ, ಮಕ್ಕಳು ತಮ್ಮ ಹೆತ್ತವರ ಮರಣದ ತನಕ ಕಾಯುತ್ತಾರೆ ಮತ್ತು ಬೆಲೆಯುಳ್ಳ ಶವಸಂಪುಟವನ್ನು ಒದಗಿಸುವ ಮೂಲಕ ತಮ್ಮ “ಕೊನೆಯ ಗೌರವ”ವನ್ನು ಸೂಚಿಸುತ್ತಾರೆ. ಆದರೆ ನಿಮ್ಮ ಹೆತ್ತವರು ಈಗ ಬದುಕಿರುವಾಗಲೇ ಅವರಿಗೆ ನೀವು ಆಳವಾದ ಗೌರವವನ್ನು ತೋರಿಸುವದು ಅದೆಷ್ಟು ಒಳ್ಳೆಯದು! ಅವರು ಚಿಕ್ಕವರಿದ್ದಾಗ ನಿರ್ದಿಷ್ಟ ಸಂದರ್ಭಗಳನ್ನು ಕಳಕೊಂಡದ್ದಕ್ಕಾಗಿ ಎಂದೂ ಸಂಕೋಚ ಪಡಬೇಡಿರಿ. ಅವರಲ್ಲಿರುವ ಗುಣಗಳು ಅವರ ಐಹಿಕ ಶಿಕ್ಷಣದ ಕೊರತೆಯನ್ನು ಬಹಳಮಟ್ಟಿಗೆ ನೀಗಿಸಿಯೇ ಬಿಡುತ್ತದೆ. ಯಾವಾಗಲೂ ನಡೆಯಲ್ಲಿಯೂ ನುಡಿಯಲ್ಲಿಯೂ ಅವರಿಗೆ ಗೌರವ ತೋರಿಸಿರಿ. ಅವರೊಂದಿಗೆ ಅಸಮ್ಮತಿ ಇದ್ದಾಗಲೂ “ವಿಧೇಯರಾಗಲು ಸಿದ್ಧರಾಗಿರಿ.” (ಯಾಕೋಬ 3:17) ನಿಮ್ಮ ಹೆತ್ತವರಲ್ಲಿರುವ ಸ್ನೇಹ, ಪ್ರೀತಿ ಮತ್ತು ವಿವೇಕವನ್ನು ನಿಕ್ಷೇಪವಾಗಿಡಿರಿ, ಅವು ಓದು ಬರಹದ ಸಾಮರ್ಥ್ಯಕ್ಕಿಂತ ಎಷ್ಟೋ ಹೆಚ್ಚು ಅರ್ಥಭರಿತವಾದವುಗಳು. (g89 12/22)
[ಪುಟ 15 ರಲ್ಲಿರುವಚಿತ್ರ]
ಸಾಕ್ಷರತೆಯ ಸಾಮರ್ಥ್ಯಗಳಿಲ್ಲದಾಗಲೂ ಹೆತ್ತವರು ಸಲಹೆಯ ಬೆಲೆಯುಳ್ಳ ಮೂಲಗಳಾಗಿರಬಲ್ಲರು