ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g23 ನಂ. 1 ಪು. 9-11
  • ಕಾಡು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕಾಡು
  • ಎಚ್ಚರ!—2023
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕಾಡು ಕಣ್ಮರೆ ಆಗ್ತಿದೆ
  • ಭೂಮಿಗಿರೋ ಸಾಮರ್ಥ್ಯ
  • ಮನುಷ್ಯರ ಪ್ರಯತ್ನ
  • ನಮ್ಮ ನಿರೀಕ್ಷೆಗಿರೋ ಕಾರಣಗಳು—ಬೈಬಲಲ್ಲಿ ಹೀಗಿದೆ
  • ಕಾಡುಗಳಿಗೆ ಒಂದು ಭವಿಷ್ಯವಿದೆಯೇ?
    ಎಚ್ಚರ!—1991
  • ಒಂದು ಕ್ಷಣದಲ್ಲಿ ಕಣ್ಮರೆ!
    ಎಚ್ಚರ!—1991
  • ಮಳೆ ಕಾಡುಗಳನ್ನು ಏಕೆ ರಕ್ಷಿಸಬೇಕು?
    ಎಚ್ಚರ!—1991
  • ಮಳೆ ಕಾಡುಗಳನ್ನು ಯಾರು ಕೊಲ್ಲುತ್ತಿದ್ದಾರೆ?
    ಎಚ್ಚರ!—1991
ಇನ್ನಷ್ಟು
ಎಚ್ಚರ!—2023
g23 ನಂ. 1 ಪು. 9-11
ಒಬ್ಬ ಸ್ತ್ರೀ ಕಾಡಲ್ಲಿರೋ ಸೇತುವೆ ಮೇಲೆ ನಡ್ಕೊಂಡು ಹೋಗ್ತಿದ್ದಾಳೆ.

ಭೂಮಿ ನಾಶವಾಗದೇ ಉಳಿಯುತ್ತಾ?

ಕಾಡು

ಕಾಡುಗಳನ್ನ ಭೂಮಿಯ “ಶ್ವಾಸಕೋಶ” ಅಂತ ಕರೀತಾರೆ. ಯಾಕಂದ್ರೆ, ಗಿಡ-ಮರಗಳು ಆಕ್ಸಿಜನ್‌ನ್ನ ಹೊರಹಾಕುತ್ತೆ. ನಾವು ಉಸಿರಾಡೋದು ಇದನ್ನೇ. ಇದ್ರ ಜೊತೆಗೆ ಮನುಷ್ಯರಿಗೆ ಹಾನಿಕರವಾಗಿರೋ ಕಾರ್ಬನ್‌-ಡೈ-ಆಕ್ಸೈಡ್‌ನ್ನ ಅವು ಹೀರಿಕೊಳ್ಳುತ್ತೆ. ಭೂಮಿ ಮೇಲಿರೋ 80% ಜೀವಿಗಳು, ಗಿಡ-ಮರಗಳು ಇರೋದು ಕಾಡುಗಳಲ್ಲೇ. ಕಾಡುಗಳು ಇಲ್ಲದಿದ್ರೆ ನಮಗೆ ಬದುಕೋಕೆ ಆಗ್ತಾ ಇರಲಿಲ್ಲ.

ಕಾಡು ಕಣ್ಮರೆ ಆಗ್ತಿದೆ

ವ್ಯವಸಾಯ ಮಾಡೋಕೆ ಪ್ರತೀ ವರ್ಷ ಕೋಟಿಗಟ್ಟಲೆ ಮರಗಳನ್ನ ಕಡಿಯಲಾಗ್ತಿದೆ. ಕಳೆದ 75 ವರ್ಷಗಳಲ್ಲಿ ಭೂಮಿ ಮೇಲಿರೋ ಅರ್ಧದಷ್ಟು ಮಳೆಕಾಡುಗಳು ಕಣ್ಮರೆಯಾಗಿದೆ.

ಒಂದು ಕಾಡನ್ನ ನಾಶ ಮಾಡಿದ್ರೆ ಅದ್ರಲ್ಲಿರೋ ಎಲ್ಲಾ ಜೀವರಾಶಿಗಳು ಇಲ್ಲದೇ ಹೋಗುತ್ತೆ.

ಭೂಮಿಗಿರೋ ಸಾಮರ್ಥ್ಯ

ಕಾಡುಗಳಲ್ಲಿರೋ ಎಲ್ಲಾ ಗಿಡ-ಮರಗಳನ್ನ ಕಡಿದು ಹಾಕಿದ್ರೂ ಅಲ್ಲಿ ಮತ್ತೆ ಅವು ಬೆಳೆಯೋ ಸಾಧ್ಯತೆ ಇದೆ. ಕಾಡುಗಳನ್ನ ಸಂಪೂರ್ಣವಾಗಿ ನಾಶ ಮಾಡಿದ್ರೂ ಅದೇ ಜಾಗದಲ್ಲಿ ಹಚ್ಚಹಸಿರಾಗಿ ಗಿಡ-ಮರಗಳು ಮತ್ತೆ ಬೆಳೆಯುತ್ತೆ ಅಂತ ಪರಿಸರದ ಬಗ್ಗೆ ಸಂಶೋಧನೆ ಮಾಡೋ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಅದಕ್ಕಿರೋ ಕೆಲವು ಉದಾಹರಣೆಗಳನ್ನ ನೋಡೋಣ:

  • ಮುಂಚೆ ಕಾಡುಗಳಾಗಿದ್ದ ಜಾಗವನ್ನ ಹೊಲ-ಗದ್ದೆಯಾಗಿ ಮಾಡಿ, ನಂತ್ರ ಅಲ್ಲಿ ವ್ಯವಸಾಯ ಮಾಡೋದನ್ನ ನಿಲ್ಲಿಸಿರೋ ನೆಲದ ಮೇಲೆ ವಿಜ್ಞಾನಿಗಳು ಒಂದು ಪ್ರಯೋಗ ಮಾಡಿದ್ರು. ಈಗ ಆ ನೆಲ ಯಾವ ಸ್ಥಿತಿಯಲ್ಲಿದೆ ಅಂತ ನೋಡೋಕೆ ಅವರು ಇಷ್ಟಪಟ್ರು. ಅದಕ್ಕಾಗಿ ಅವರು ದಕ್ಷಿಣ ಮತ್ತು ಉತ್ತರ ಅಮೆರಿಕ ಹಾಗೂ ಪಶ್ಚಿಮ ಆಫ್ರಿಕಾದಲ್ಲಿರೋ 2,200 ಜಾಗದಲ್ಲಿ ಅಧ್ಯಯನ ಮಾಡಿದ್ರು. ಈ ನೆಲದಲ್ಲಿ ಎಂಥಾ ಸಾಮರ್ಥ್ಯ ಇದೆ ಅಂದ್ರೆ, 10 ವರ್ಷಗಳಲ್ಲಿ ಮತ್ತೆ ಗಿಡ-ಮರಗಳು ಸಂಪೂರ್ಣವಾಗಿ ಬೆಳೆಯುತ್ತೆ ಅಂತ ಅವರು ಕಂಡುಹಿಡಿದ್ರು.

  • ಸಂಶೋಧಕರು ಇನ್ನೊಂದು ವಿಷ್ಯವನ್ನೂ ಕಂಡುಹಿಡಿದ್ರು. ಅದೇನಂದ್ರೆ, 100 ವರ್ಷದೊಳಗೆ ಆ ನೆಲ ಮತ್ತೆ ಫಲವತ್ತಾಗಿ ಎಲ್ಲಾ ಗಿಡ-ಮರಗಳು ಬೆಳೆದು ಮತ್ತೆ ದಟ್ಟವಾದ ಕಾಡು ಆಗೋಕೆ ಸಾಧ್ಯ ಇದೆ ಅಂತ ಅವರು ಸೈನ್ಸ್‌ ಪತ್ರಿಕೆಯಲ್ಲಿ ಹೇಳಿದ್ರು.

  • ಎಂಥ ನೆಲದ ಮೇಲೆ ಕಾಡುಗಳು ಬೇಗ ಬೆಳೆಯೋಕೆ ಆಗುತ್ತೆ ಅಂತ ಬ್ರೆಜಿಲ್‌ನಲ್ಲಿರೋ ಸಂಶೋಧಕರು ಅಧ್ಯಯನ ಮಾಡಿದ್ರು. ಎಲ್ಲಿ ಮನುಷ್ಯರು ಗಿಡಗಳನ್ನ ನೆಡ್ತಾರೋ ಆ ಜಾಗದಲ್ಲಾ ಅಥವಾ ಸುಮ್ಮನೆ ಏನೂ ಮಾಡದೆ ಹಾಗೇ ಬಿಟ್ಟಿರೋ ನೆಲದಲ್ಲಾ ಅಂತ ನೋಡಿದ್ರು.

  • ಇದ್ರ ಬಗ್ಗೆ ನ್ಯಾಷನಲ್‌ ಜಿಯೊಗ್ರಾಫಿಕ್‌ ಪತ್ರಿಕೆಯಲ್ಲಿ ಒಂದು ವರದಿ ಬಂದಿತ್ತು. “ಮರಗಳನ್ನ ನೆಡೋ ಅವಶ್ಯಕತೆನೇ ಇಲ್ಲ” ಅಂಥ ಅವರು ಖುಷಿಪಟ್ರು. ಯಾವ ಜಾಗದಲ್ಲಿ ಗಿಡ-ಮರಗಳನ್ನ ನೆಡಲಿಲ್ವೊ ಆ ನೆಲ “ಕೇವಲ 5 ವರ್ಷಗಳಲ್ಲಿ ಕಾಡಾಗಿ ಮಾರ್ಪಾಡಾಯ್ತು” ಅಂತ ಅವರು ಹೇಳಿದ್ರು.

    ನಿಮಗಿದು ಗೊತ್ತಿತ್ತಾ?

    ಹೊಲ-ಗದ್ದೆಗಳಿದ್ದ ಜಾಗದಲ್ಲಿ ಕಾಡು

    ಕಾಡನ್ನ ಹೊಲ-ಗದ್ದೆಯಾಗಿ ಮಾಡಿ ನಂತ್ರ ವ್ಯವಸಾಯ ಮಾಡದೇ ಹಾಗೇ ಬಿಟ್ಟಿರೋ ಜಾಗವನ್ನ ತೋರಿಸೋ ಚಿತ್ರ. 10 ವರ್ಷಗಳ ನಂತರ ಮಣ್ಣು ಮತ್ತೆ ಫಲವತ್ತಾಗುತ್ತೆ. 100 ಅಥವಾ ಅದಕ್ಕಿಂತ ಜಾಸ್ತಿ ವರ್ಷಗಳ ನಂತ್ರ ಅದೇ ಜಾಗ ದಟ್ಟವಾದ ಕಾಡು ಆಗೋ ಸಾಧ್ಯತೆ ಇದೆ.

    ಕಾಡುಗಳಿಗೆ ಒಂದು ವಿಶೇಷತೆ ಇದೆ. ಕಾಡುಗಳಿದ್ದ ಜಾಗವನ್ನ ಹೊಲ-ಗದ್ದೆಯಾಗಿ ಮಾಡಿ, ನಂತರ ವ್ಯವಸಾಯ ಮಾಡೋದನ್ನ ನಿಲ್ಲಿಸಿದ್ರೆ, ಆ ನೆಲದಲ್ಲಿ ಮತ್ತೆ ಸುಂದರವಾದ ದಟ್ಟ ಕಾಡುಗಳು ಹುಟ್ಟೋ ಸಾಧ್ಯತೆ ಇದೆ.

ಮನುಷ್ಯರ ಪ್ರಯತ್ನ

ಉಳಿದಿರೋ ಕಾಡನ್ನ ರಕ್ಷಿಸೋಕೆ ಮತ್ತು ಯಾವ ಕಾಡುಗಳು ಸಂಪೂರ್ಣವಾಗಿ ನಾಶ ಆಗಿದೆಯೋ ಅದನ್ನ ಮತ್ತೆ ಸರಿ ಮಾಡೋಕೆ ಮನುಷ್ಯರು ತುಂಬ ಪ್ರಯತ್ನ ಹಾಕ್ತಾ ಇದ್ದಾರೆ. ಸಂಯುಕ್ತ ರಾಷ್ಟ್ರದ ನ್ಯೂಸ್‌ ಪ್ರಕಾರ ಕಳೆದ 25 ವರ್ಷಗಳಲ್ಲಿ “ಕಾಡುಗಳನ್ನ ನಾಶ ಮಾಡೋದು 50% ಕಮ್ಮಿ ಆಗಿದೆ.”

ಆದ್ರೆ ಇಷ್ಟು ಮಾಡಿದ್ರೆ ಮಾತ್ರ ಸಾಕಾಗಲ್ಲ. ಒಂದು ಸಂಘಟನೆಯ ವರದಿ ಪ್ರಕಾರ “ಕಳೆದ ಕೆಲವು ವರ್ಷಗಳಲ್ಲಿ, ಉಷ್ಣವಲಯದಲ್ಲಿರೋ ಕಾಡುಗಳನ್ನ ಕಡಿಯೋದ್ರಲ್ಲಿ ಹೆಚ್ಚು ವ್ಯತ್ಯಾಸ ಕಂಡುಬಂದಿಲ್ಲ. ಈ ಕಾಡುಗಳಲ್ಲಿರೋ ಮರಗಳನ್ನ ಮುಂಚೆ ಎಷ್ಟು ಕಡಿತಾ ಇದ್ರೋ ಈಗಲೂ ಅಷ್ಟೇ ಮರಗಳನ್ನ ಕಡಿತಾ ಇದ್ದಾರೆ.”

ಯಾವ ಕಂಪನಿಗಳು ಸರ್ಕಾರದ ಅನುಮತಿ ಇಲ್ಲದೆ ಗಿಡ-ಮರಗಳನ್ನ ಕಡಿತಾ ಇದಿಯೋ, ಆ ಕಂಪನಿಗಳಿಗೆ ಕೋಟಿಗಟ್ಟಲೆ ಲಾಭ ಆಗ್ತಾ ಇದೆ. ಹಾಗಾಗಿ ಅವರು ಅತಿಯಾಸೆಯಿಂದ ಉಷ್ಣವಲಯದಲ್ಲಿರೋ ಕಾಡುಗಳನ್ನ ನಾಶ ಮಾಡ್ತಾ ಇದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿ ಮರಗಳನ್ನ ಪರೀಕ್ಷೆ ಮಾಡ್ತಿದ್ದಾನೆ.

ಕಾಡುಗಳನ್ನ ಸಂರಕ್ಷಿಸೋ ಸಂಘಗಳು ಕಾಡುಗಳನ್ನ ಕಾಪಾಡೋ ಕೆಲಸ ಮಾಡ್ತಿದ್ದಾರೆ. ಪೂರ್ತಿ ಬೆಳೆದಿರೋ ಕೆಲವೇ ಮರಗಳನ್ನ ಅವರು ಕಡೀತಾರೆ. ನಂತ್ರ ಅದೇ ಜಾಗದಲ್ಲಿ ಹೊಸ ಮರಗಳನ್ನ ನೆಡ್ತಾರೆ.

ನಮ್ಮ ನಿರೀಕ್ಷೆಗಿರೋ ಕಾರಣಗಳು—ಬೈಬಲಲ್ಲಿ ಹೀಗಿದೆ

“ಆ ತೋಟದಲ್ಲಿ ನೋಡೋಕೆ ಸುಂದರವಾದ, ತಿನ್ನೋಕೆ ಒಳ್ಳೊಳ್ಳೆ ಹಣ್ಣು ಕೊಡೋ ಎಲ್ಲ ಮರಗಳನ್ನ ಬೆಳೆಯೋ ಹಾಗೆ ಯೆಹೋವ ದೇವರುa ಮಾಡಿದನು.” —ಆದಿಕಾಂಡ 2:9.

ಮನುಷ್ಯರು ಕಾಡುಗಳನ್ನ ಬಳಸ್ತಾ ಇರೋ ಹಾಗೆ ಮತ್ತು ಕಾಡುಗಳಿಗೆ ಹಾನಿಯಾದ್ರೂ ಅದು ತನ್ನಿಂದ ತಾನೇ ಸರಿ ಆಗೋ ರೀತಿಯಲ್ಲಿ ದೇವರು ಅವುಗಳನ್ನ ಸೃಷ್ಟಿ ಮಾಡಿದ್ದಾನೆ. ಇದ್ರಿಂದ ನಮಗೇನು ಗೊತ್ತಾಗುತ್ತೆ? ಕಾಡುಗಳು ನಾಶ ಆಗದೇ, ತಮ್ಮ ಕೆಲಸವನ್ನ ಮಾಡ್ತಾ ಇರಬೇಕು ಅನ್ನೋದೇ ದೇವರ ಆಸೆ.

ಮನುಷ್ಯರು, ಪ್ರಾಣಿಗಳು, ಗಿಡ-ಮರಗಳು ಸಂಪೂರ್ಣವಾಗಿ ನಾಶ ಆಗೋ ತನಕ ದೇವರು ಕಾಯ್ತಾ ಕೂರಲ್ಲ ಅಂತ ಬೈಬಲ್‌ ನಮಗೆ ನಿರೀಕ್ಷೆ ಕೊಡುತ್ತೆ. ಅದು ಏನು ಅಂತ ತಿಳಿಯೋಕೆ ಪುಟ 15ರಲ್ಲಿರೋ “ನಮ್ಮ ಭೂಮಿ ನಾಶ ಆಗಲ್ಲ ಅಂತ ದೇವರು ಮಾತು ಕೊಟ್ಟಿದ್ದಾನೆ” ಅನ್ನೋ ಲೇಖನ ನೋಡಿ.

a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.

ಹೆಚ್ಚನ್ನ ಕಲಿಯಿರಿ

ಪರದೈಸ್‌ ಭೂಮಿಯನ್ನ ಆನಂದಿಸ್ತಿರೋ ದಂಪತಿಗಳು.

ನಿಸರ್ಗದಲ್ಲಿ ಸಿಗೋ ಗಾಳಿ, ನೀರು, ಇಂಧನ, ಗ್ಯಾಸ್‌ ಮತ್ತು ಇತರ ವಿಷ್ಯಗಳನ್ನ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು ಅದನ್ನ ಸಂಪೂರ್ಣವಾಗಿ ಖಾಲಿ ಮಾಡ್ತಾ ಇದ್ದಾನೆ. ಆದ್ರೂ ಈ ಭೂಮಿ ನಾಶ ಆಗಲ್ಲ ಅಂತ ನಾವು ನಂಬಬಹುದು. ಇದನ್ನ ಹೇಗೆ ಹೇಳಕ್ಕಾಗುತ್ತೆ? ಇದರ ಬಗ್ಗೆ ತಿಳಿಯಲು jw.orgನಲ್ಲಿ ದೇವರು ಭೂಮಿಯನ್ನು ಯಾಕೆ ಸೃಷ್ಟಿಸಿದನು? ಅನ್ನೋ ವಿಡಿಯೋ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ