ಲೋಕ ಶಕ್ತಿಗಳ ದೀರ್ಘ ಪಥಚಲನೆಯ ಅದರ ಅಂತ್ಯಕ್ಕೆ ಸಮೀಪಿಸಿದೆ
ಏಳು ಮಹಾಲೋಕ ಶಕ್ತಿಗಳ ಕುರಿತು ಬೈಬಲು ತಿಳಿಸುತ್ತದೆ—ಲೋಕ ಇತಿಹಾಸದ ಸಾವಿರಾರು ವರ್ಷಗಳಲ್ಲಿ ಒಂದರ ನಂತರ ಇನ್ನೊಂದು ಉತ್ತರಾಧಿಕಾರಿಯಾಗಿ ಬಂದಿರುವ ಬಲಾಢ್ಯ ಸಾಮ್ರಾಜ್ಯಗಳು, ಅವುಗಳಲ್ಲಿ ಕೊನೆಯದ್ದರ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆಂದು ಈ ಸರಣಿಯ ಮೊದಲಿನ ಲೇಖನಗಳು ತೋರಿಸುತ್ತವೆ—ಅದು ನಮ್ಮ ದಿನಗಳ ಆಂಗ್ಲೋ-ಅಮೆರಿಕನ್ ಲೋಕ ಶಕ್ತಿಯೇ.a —ಪ್ರಕಟನೆ 17:9,10.
ಇದೇ ಆಂಗ್ಲೋ-ಅಮೆರಿಕನ್ ಲೋಕ ಶಕ್ತಿಯು ಪ್ರಕಟನೆ ಪುಸ್ತಕದ ಆರಂಭದಲ್ಲಿ “ಎರಡು ಕೊಂಬುಗಳಿರುವ” ಮೃಗವೆಂದು ವರ್ಣಿಸಲಾಗಿದೆ. ಈ ದ್ವಿ-ಭಾಗದ ಲೋಕಶಕ್ತಿಯು, ಎಲ್ಲಾ ಏಳು ಲೋಕಶಕ್ತಿಗಳನ್ನು ಪ್ರತಿನಿಧಿಸುವ ರಾಜಕೀಯ ಮೃಗಕ್ಕೆ “ಭೂಲೋಕದ ಭೂನಿವಾಸಿಗಳು ನಮಸ್ಕರಿಸುವಂತೆ ಒಂದು ವಿಗ್ರಹವನ್ನು ಮಾಡಿಸಿಕೊಳ್ಳುವಂತೆ ಬೋಧಿಸುತ್ತದೆ.”—ಪ್ರಕಟನೆ 13:11,14.
ಈ ಪ್ರವಾದನೆಗಳು ಹೇಗೆ ನೆರವೇರಿದವು? ಮತ್ತು ಇಂದು ಅದು ನಮಗೆ ಯಾವ ಅರ್ಥದಲ್ಲಿದೆ? ಕೆಳಗಿನ ಲೇಖನದ ಮೇಲ್ವಿಷಯದ ಅದರ ಆಸಕ್ತಿಭರಿತ ಉತ್ತರವಾಗಿದೆ.
ನಾಲ್ಕು ವರ್ಷಗಳ ಮೊದಲನೆಯ ಲೋಕಯುದ್ಧದ ವಿಪತ್ಕಾರಗಳು ಅಂತ್ಯವಾಗುವಷ್ಟರಲ್ಲಿ, ಅಮೇರಿಕದ ಅಧ್ಯಕ್ಷ ವುಡ್ರೋ ವಿಲ್ಸನ್ ಮತ್ತು ಬ್ರಿಟನಿನ ಪ್ರಧಾನ ಮಂತ್ರಿ ಡೇವಿಡ್ ಲಾಯ್ಡ್ ಜೋರ್ಜ್ ಜನಾಂಗ ಸಂಘದ ಪ್ರಸ್ತಾಪ ಮಾಡಿದರು. ಅದರ ಗುರಿಯು “ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಸಾಧಿಸುವದು” ಮತ್ತು ಅಂತಹ ಯುದ್ಧವೊಂದರ ವಿಪತ್ಕಾರಕತೆಗಳನ್ನು ಇನ್ನೊಮ್ಮೆ ಎಂದಿಗೂ ಸಂಭವಿಸದಂತೆ ತಡೆಯುವದೇ.
ಇದನ್ನು ಕುರಿತು ಮೊದಲು ಆಸಕ್ತಿ ತೆಗೆದುಕೊಂಡವರು ಯಾರೆಂದು ಗಮನಿಸುವದು ಆಸಕ್ತಿಕರ. ಬೈಬಲ್ ಇತಿಹಾಸದ ಏಳನೆಯ ಇಂಗ್ಲಿಷ್ ಮಾತಾಡುವ ದ್ವಿ-ಭಾಗದ ಆಂಗ್ಲೋ ಅಮೇರಿಕನ್ ಲೋಕಶಕ್ತಿಯ ಪ್ರಧಾನರೇ ಈ ಇಬ್ಬರು ಮುಂದಾಳುಗಳು. ಇದು ಮತ್ತು ಅಂತರ್ರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಸಂಸ್ಥೆಯ ಕುರಿತಾದ ಇತರ ವಾಸ್ತವಾಂಶಗಳು, ನಮ್ಮ ದಿನಗಳಲ್ಲಿ ಏಳುವ, ಬೀಳುವ ಕೊಂಚ ಕಾಲ ಜೀವಿಸುವ “ಎಂಟನೆಯ ಅರಸನ” ಕುರಿತು ಬೈಬಲ್ ಪುಸ್ತಕವಾದ ಪ್ರಕಟನೆಯಲ್ಲಿ ಹೇಳಿರುವ ಸಂಗತಿಗಳಿಗೆ ಆಶ್ಚರ್ಯಕರ ರೀತಿಯಲ್ಲಿ ಹೊಂದಿಕೊಳ್ಳುತ್ತವೆ. ಕೆಲವೊಂದು ಅಸಕ್ತಿಕರ ಸರಿ ಹೋಲಿಕೆಗಳು ಯಾವುವು?—ಪ್ರಕಟನೆ 17:11.
ಮೊದಲನೆಯ ಮೃಗಕ್ಕಾಗಿ “ಒಂದು ವಿಗ್ರಹವನ್ನು ಮಾಡಿ ಭೂನಿವಾಸಿಗಳೆಲ್ಲರೂ ನಮಸ್ಕರಿಸುವಂತೆ” ಹೇಳುವ “ಕುರಿಮರಿಗಿರುವಂತೆ ಎರಡು ಕೊಂಬುಗಳಿರುವ” “ಕಾಡು ಮೃಗವೊಂದು”. ಬೈಬಲ್ ಇತಿಹಾಸದ ಏಳು ಮಹಾಶಕ್ತಿಗಳಿಂದ ಮುಂದಾಳುತನ ಹೊಂದಿದೆ ಎಂದು ಪ್ರಕಟನೆಯಲ್ಲಿನ ಪ್ರವಾದನೆಯು ತಿಳಿಸುತ್ತದೆ.
ಇದನ್ನು ತಾನೇ ಆಂಗ್ಲೋ-ಅಮೇರಿಕನ್ ಲೋಕಶಕ್ತಿಯು ನಡಿಸಿತು. ಮಹಾ ಸರಕಾರಗಳು ಮಾಡುವಂತಹ ರೀತಿಯಲ್ಲಿ ತೋರುವ ಮತ್ತು ವರ್ತಿಸುವ ಒಂದು ಸಂಘವನ್ನು “ಭೂನಿವಾಸಿಗಳೆಲ್ಲರೂ” ಮಾಡುವಂತೆ ಅದು ಒತ್ತಾಯಿಸಿತು. ಆದರೆ ಅದು ನಿಜವಾಗಿಯೂ “ಕಾಡು ಮೃಗದ ವಿಗೃಹ”ವಾಗಿತ್ತು. ಅದಕ್ಕೆ ಅವರದ್ದೇ ಸ್ವಂತ ಬಲವಿರಲಿಲ್ಲ. ಬದಲು ಸದಸ್ಯ ಜನಾಂಗಗಳು ಏನನ್ನು ನೀಡಿದ್ದವೂ ಅದು ಮಾತ್ರವಿತ್ತು. ಲೋಕಶಕ್ತಿಗಳು ಮಾಡಿದಂತಹ ರೀತಿಯಲ್ಲಿ, ಯಾವುದೇ ಮಹಾ ಸೇನಾ ವಿಜಯದಿಂದ ಇದು ಅಧಿಕಾರಕ್ಕೆ ಬರುತ್ತದೆಂದು ವಿವರಿಸಲ್ಪಟ್ಟಿಲ್ಲ. ಬದಲಿಗೆ ಇದು ಏಳು ಲೋಕಶಕ್ತಿಗಳಿಂದ ಹೊರ ಹೊಮ್ಮುತ್ತದೆ ಯಾ ಬರುತ್ತದೆ. ತನ್ನ ಅಸ್ತಿತ್ವಕ್ಕಾಗಿ ಅವುಗಳಲ್ಲಿನ ಏಳನೆಯದಕ್ಕೆ ಋಣಿಯಾಗಿರುವದು ಮಾತ್ರವಲ್ಲ, ಬದಲು ಅದರ ಮುಂಚಿನ ಆರು ಶಕ್ತಿಗಳು ಉಳಿಕೆಯಾಗಿರುವ ಇನ್ನಿತರ ಸದಸ್ಯ ರಾಷ್ಟ್ರಗಳಿಗೂ ಋಣಿಯಾಗಿದೆ. ಅದರಲ್ಲಿ ಉನ್ನತವಾದ ಆಶೆಯನ್ನಿಟ್ಟುಕೊಂಡು ಸ್ಥಾಪಿಸಿದ ಸ್ಥಾಪಕರ ಉಚ್ಛ ಧ್ಯೇಯಗಳನ್ನು ಈ ರಾಜಕೀಯ ವಿಗ್ರಹವು ಮುಟ್ಟುವದೋ?—ಪ್ರಕಟನೆ 17:11,14.
ಸಂಘದ ಸೋಲು
ಸಾಮಾಜಿಕ ಕ್ಷೇತ್ರಗಳಲ್ಲಿ ಬಹಳಷ್ಟು ಜನಾಂಗ ಸಂಘವು ಪೂರೈಸುತ್ತದೆ. ಅದಾಗ್ಯೂ, ಅದರ ಅಧಿಕೃತ “ಜನಾಂಗಗಳ ಸಂಘದ ಒಡಂಬಡಿಕೆ”ಯಲ್ಲಿ ಅದರ ನಿಜ ಗುರಿಯು “ಅಂತರ್ರಾಷ್ಟ್ರಿಯ ಸಹಕಾರವನ್ನು ಪ್ರಗತಿಗೊಳಿಸುವದು ಮತ್ತು ಅಂತರ್ರಾಷ್ಟ್ರಿಯ ಶಾಂತಿ ಮತ್ತು ಭದ್ರತೆಯನ್ನು ಸಾಧಿಸುವದೇ.”
1931 ರಲ್ಲಿ ಮಂಚೂರಿಯಕ್ಕೆ ಜಪಾನ್ ಮುಂದೊತ್ತುವದನ್ನು ಜನಾಂಗ ಸಂಘವು ನಿಲ್ಲಿಸಲು ಯಶಸ್ವೀಯಾಗಲಿಲ್ಲ. 1933 ರಲ್ಲಿ ಬೋಲಿವಿಯಾ ಮತ್ತು ಪಾರಾಗ್ವೇ ಯುದ್ಧಕ್ಕೆ ಹೋಗುವದರಿಂದ ಅದು ನಿಲ್ಲಿಸಲಿಲ್ಲ. ಇತಿಯೋಪ್ಯದ ವಿಜಯ 1936 ರಲ್ಲಿ ಮುಸ್ಸೊಲೋನಿ ಸಾಧಿಸುವದನ್ನು ತಡೆಯುವಲ್ಲಿ ಅದು ಸೋಲನ್ನು ಅನುಭವಿಸಿತು. ಅದಾಗ್ಯೂ, ಎರಡನೆಯ ಲೋಕ ಯುದ್ಧವು ಆರಂಭಿಸುವದರೊಂದಿಗೆ ಸಪ್ಟಂಬರ 1, 1939 ರಲ್ಲಿ ಜನಾಂಗ ಸಂಘಕ್ಕೆ ಮಾರಕ ಹೊಡೆತ ಬಿತ್ತು. —ಸಾಮೂಹಿಕ ಕಗ್ಗೊಲೆಯ ಸಂಕ್ಷೋಭೆ ಮತ್ತು ಅದನ್ನು ತಡೆಯುವುದರಲ್ಲಿ ಸಂಘವು ಹೀನಾಯಮಾನವಾಗಿ ಸೋತಿತ್ತು. ಆ ಯುದ್ಧದಲ್ಲಿ ಆದ ಪ್ರಾಣ ಹಾನಿ? 1,60,00,000 ಯೋಧರ ಮತ್ತು 3,90,00,000 ಅಯೋಧಕರ ಪ್ರಾಣಗಳು ಒಟ್ಟಿಗೆ 5,50,00,000 ಹತಗೊಂಡವರು ಅಥವಾ ಮೊದಲನೆಯ ಲೋಕಯುದ್ಧದಲ್ಲಿ ಸತ್ತವರಿಗಿಂತ ನಾಲ್ಕು ಪಟ್ಟು ಹೆಚ್ಚಾಗಿತ್ತು!
ಅದಾಗ್ಯೂ, 1919 ರಷ್ಟು ಹಿಂದಕ್ಕೆ, ಸಂಘದ ಒಪ್ಪಂದವು ಜಾರಿಗೆ ಬರುವ ಮೊದಲೇ ಯೆಹೋವನ ಸಾಕ್ಷಿಗಳು (ಆಗ ವೇದ ವಿದ್ಯಾರ್ಥಿಗಳೆಂದು ಪರಿಚಿತರಾಗಿದ್ದರು), ಸಂಘವು ಅಪಜಯ ಹೊಂದಲೇ ಬೇಕು, ಯಾಕೆಂದರೆ ಅಂತಹ ಮಾನವ ಪ್ರಯತ್ನಗಳಿಂದ ಶಾಂತಿಯು ಬರ ಸಾಧ್ಯವಿಲ್ಲವೆಂದು ಬಹಿರಂಗವಾಗಿ ಘೋಷಿಸಿದರು. ಅನಂತರ ಇಂಗ್ಲೆಂಡಿನ ಲಂಡನ್ನಲ್ಲಾದ ಅವರ 1926 ರ ಅಧಿವೇಶನದಲ್ಲಿ, ಪ್ರಕಟನೆ 17ಕ್ಕನುಸಾರ ಲೋಕಶಕ್ತಿಗಳ ಸರಣಿಯಲ್ಲಿ “ಎಂಟನೆಯ ಅರಸು” ಕೊನೆಯವನಾಗಿರಬೇಕೆಂದು ಸೂಚಿಸಿದರು. ಭಾಷಣಕರ್ತನು ಆಗ ಹೇಳಿದಂತೆ “ಕರ್ತನು ಅದರ ಜನನವನ್ನು, ಅದರ ಕೊಂಚಕಾಲದ ಇರುವಿಕೆಯನ್ನು ಮತ್ತು ಅದರ ನಿತ್ಯದ ಅಂತ್ಯವನ್ನು ಮುನ್ನುಡಿದಿದ್ದಾನೆ.”
ಅದು ಹಿಂದಿರುಗುವದು!
ಎಂಟನೆಯ ಅರಸನ ಕುರಿತು ಪ್ರೇರಿತ ಪ್ರವಾದನೆಯನ್ನುವದು: “ನೀನು ಕಂಡ ಆ ಮೃಗವು ಮೊದಲು ಇತ್ತು. ಈಗ ಇಲ್ಲ, ಮತ್ತು ಅಧೋಲೋಕದಿಂದ ಏರಿ ಬಂದು ನಾಶನಕ್ಕೆ ಹೋಗುವದು.”—ಪ್ರಕಟನೆ 17:8.
1942 ರ ಯುದ್ಧ ಸಮಯದ ನಡುವಿನಿಂದಲೇ, ಆಗ ಸುಪ್ತಾವಸ್ಥೆಯಲ್ಲಿದ್ದ ಶಾಂತಿ ಮತ್ತು ಭದ್ರತೆಯ ಸಂಸ್ಥೆಯು, ಅದರ ಕಾರ್ಯವಿಹೀನ ಅಧೋಲೋಕದಿಂದ ಮೇಲೇರಿ ಬರಲಿದೆ ಎಂದು ಯೆಹೋವನ ಸಾಕ್ಷಿಗಳು ತಿಳಿದುಕೊಂಡರು. ವಾಚ್ಟವರ್ ಸೊಸೈಟಿಯ ಅಧ್ಯಕ್ಷರು ಆ ವರ್ಷದಲ್ಲಿ 52 ನಗರಗಳಲ್ಲಿರುವ ಸಭಿಕರಿಗೆ ಅಂದದ್ದು: “ಇನ್ನು 40 ಸದಸ್ಯರು ತಾವು ಸಂಸ್ಥೆಗೆ ಅಂಟಿಕೊಂಡಿದ್ದೇವೆಂದು ಹೇಳಿಕೊಂಡರೂ, ಸಂಘವು ವಾಸ್ತವದಲ್ಲಿ ನಿಶ್ಚೇಷ್ಟ ಸ್ಥಿತಿಯಲ್ಲಿತ್ತು. . . . ಅಂದರೆ “ಇಂದು ಇಲ್ಲ.” ಆದರೆ ಅದು “ಅಧೋಲೋಕದಿಂದ ಮೇಲೇರಿ ಬರುವುದೋ?” ಈ ಬೈಬಲ್ ಪ್ರವಾದನೆಯ ಮೇಲೆ ತನ್ನ ಮಾತುಗಳಿಂದ ಆಧರಿಸುತ್ತಾ, ಅವರು ಘೋಷಿಸಿದ್ದು: “ಲೋಕದ ಜನಾಂಗಗಳ ಸಂಘವು ಪುನಃ ಏರಿ ಬರುವದು.”
ಪ್ರವಾದನೆಯಲ್ಲಿ ತಿಳಿಸಿದಂತೆ, 1920 ರಿಂದ 1939 ರ ತನಕ ಎಂಟನೆಯ ಅರಸನು ”ಇದ್ದನು”. 1939 ರಿಂದ 1945 ರಲ್ಲಿ ಎರಡನೆಯ ಲೋಕಯುದ್ಧವು ಅಂತ್ಯಗೊಳ್ಳುವ ತನಕ ಅದು “ಇರಲಿಲ್ಲ”. ಅನಂತರ ಅದು “ಅಧೋಲೋಕದಿಂದ ಮೇಲೇರಿ ಬಂದು” ಸಂಘದ ಉತ್ತರಾಧಿಕಾರಿಯೋಪಾದಿ ಸಂಯುಕ್ತ ರಾಷ್ಟ್ರ ಸಂಘವಾಗಿ ಪುನಃಶ್ಚೇತನಗೊಳಿಸಲ್ಪಟ್ಟಿತ್ತು.
ಉಚ್ಛ ನಿರೀಕ್ಷೆಗಳು ನೆರವೇರಲಿಲ್ಲ
ಜೂನ್ 26, 1945 ರಲ್ಲಿ ಸಾನ್ ಫ್ರಾನ್ಸಿಸ್ಕೋದಲ್ಲಿ 50 ಜನಾಂಗಗಳ ಪ್ರತಿನಿಧಿಗಳು ಸಂಯುಕ್ತ ರಾಷ್ಟ್ರ ಸಂಘದ ಸನ್ನದಿಗೆ ಸಹಿ ಹಾಕಿದರು. ಅದರ ಪ್ರಸ್ತಾವನೆ ಪ್ರಾರಂಭಿಸುವದು: “ಸಂಯುಕ್ತ ರಾಷ್ಟ್ರ ಸಂಘದ ಜನಾಂಗಗಳಾಗಿರುವ ನಾವು, ಮಾನವ ಕುಲದ ಮೇಲೆ ನಮ್ಮ ಜೀವಮಾನಕಾಲದಲ್ಲಿ ಎರಡು ಬಾರಿ ಹೇಳಲಸಾಧ್ಯವಾದ ದುಃಖವನ್ನು ತಂದ ಯುದ್ಧದ ಪೀಡೆಯಿಂದ ನಮ್ಮ ಮುಂದಿನ ಪೀಳಿಗೆಯನ್ನು ಉಳಿಸಲು ನಿರ್ಧರಿಸಿದ್ದೇವೆ. . . .
ಸಂಯುಕ್ತ ರಾಷ್ಟ್ರದ ಮೇಲೆ ಕಟ್ಟಲ್ಪಟ್ಟ ನಿರೀಕ್ಷೆಗಳೆಲ್ಲಾ ಎಲ್ಲಾ ವಾಸ್ತವತೆಯನ್ನು ಮೀರಿದವುಗಳು. ಅಮೇರಿಕದ ಮಾಜಿ ಸೆಕ್ರೆಟರಿ ಆಫ್, ಕಾರ್ಡೆಲ್ ಹಲ್ ಹೇಳಿದ್ದೇನೆಂದರೆ “ನಮ್ಮಿ ನಾಗರಿಕತೆಯ ಉಳಿಯುವಿಕೆಯ” ಕೀಲಿಕೈ ಅದರ ಹತ್ತಿರ ಇದೆ. ಅಮೆರಿಕದ ಅಧ್ಯಕ್ಷ ಹಾರ್ರಿ ಟ್ರೂಮನ್ “ದೇವರ ಮಾರ್ಗದರ್ಶನೆಯ ಕೆಳಗೆ ಬಾಳುವ ಶಾಂತಿಯನ್ನು ಉಂಟು ಮಾಡುವ. . . . ಅತೀ ಶ್ರೇಷ್ಠ ಅವಕಾಶ” ಅದಾಗಿದೆ ಎಂದು ಕರೆದರು. ಸಂಯುಕ್ತ ರಾಷ್ಟ್ರದ ಸನ್ನದನ್ನು “ಮನುಷ್ಯನಿಂದ ಇಷ್ಟರ ತನಕ ಉತ್ಪಾದಿಸಿದ ಮಹಾ ಬಹುಮುಖ್ಯವಾದ ದಾಖಲೆ ಪತ್ರವಾಗಿದೆ” ಎಂದು ಕರೆಯಲಾಗಿದೆ. 40 ವರ್ಷಗಳ ನಂತರ ಅಮೆರಿಕಾದ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ನ ಗ್ರೆಗರಿ ಜೆ. ನ್ಯೂವೆಲ್ ಹೇಳಿದ್ದು: “ಉದ್ದೇಶವು ಸಾಧ್ಯವಾಗಿರುವದಕ್ಕಿಂತ ಹೆಚ್ಚು ಮಟ್ಟದಲ್ಲಿ ಮಾರಲ್ಪಟ್ಟಿದೆ; ನಿರಾಶೆಯು ಅನಿವಾರ್ಯವಾಗಿತ್ತು.”
ಜನಾಂಗ ಸಂಘದಂತೆ, ಸಂಯುಕ್ತ ರಾಷ್ಟ್ರ ಸಂಘವು ಸಾಮಾಜಿಕ ಕ್ಷೇತ್ರದಲ್ಲಿ ಬಹಳಷ್ಟನ್ನು ಸಾಧಿಸಿದೆ. ಆದರೆ ಅದು ಶಾಂತಿಯನ್ನು ಖಾತರಿ ಮಾಡಿಕೊಟ್ಟಿಲ್ಲ ಯಾ ಯುದ್ಧವನ್ನು ನಿಲ್ಲಿಸಿಲ್ಲ. ಬ್ರಿಟನಿನ ಮಾಜಿ ಪ್ರಧಾನ ಮಂತ್ರಿ, ಹೆರಾಲ್ಡ್ ಮಾಕ್ ಮಿಲನ್ ಬ್ರಿಟಿಷ್ ಹೌಸ್ ಆಫ್ ಕಾಮನ್ಸ್ಗೆ 1962 ರಲ್ಲಿ ಹೇಳಿದ್ದೇನೆಂದರೆ “ಸಂಯುಕ್ತ ರಾಷ್ಟ್ರ ಸಂಘವು ಕಟ್ಟಲ್ಪಟ್ಟ ಸಮಗ್ರ ತಳಪಾಯವೇ ಶಿಥಿಲಗೊಳಿಸಲ್ಪಟ್ಟಿದೆ.”
ಆರಂಭದಲ್ಲಿ ಅನೇಕ ಜನರು ಈ ಸಂಸ್ಥೆಯನ್ನು ಧಾರ್ಮಿಕ ಹುಮ್ಮನಸ್ಸಿನಿಂದ ದೃಷ್ಟಿಸಿದರು. ದೇವರ ರಾಜ್ಯವು ಮಾತ್ರ ಮಾಡಸಾಧ್ಯವಿದೆಯೆಂದು ಬೈಬಲ್ ಹೇಳುವುದನ್ನು ಈ “ವಿಗ್ರಹವು” ಮಾಡಬಲ್ಲದು ಎಂದು ಅವರು ನಂಬಿದರು. ಅಂದರೆ ಬಾಳುವ ಶಾಂತಿ, ನ್ಯಾಯ ಮತ್ತು ನಿಜವಾಗಿಯೂ ಐಕ್ಯಗೊಂಡ ಲೋಕವೊಂದನ್ನು ಸ್ಥಾಪಿಸುವದು. ಶಾಂತಿಯ ನಿಜ ಉಗಮವಾಗಿ ಮಾನವ ಪ್ರಯತ್ನಗಳಿಂದ ಸಾಧ್ಯವಿಲ್ಲ ಎಂಬ ಬೈಬಲ್ ಪ್ರವಾದನೆಗಳೊಂದಿಗೆ ಅವರು ಉಗ್ರವಾಗಿ ಅಸಮ್ಮತಿಸಿದರು. ಅದಾಗ್ಯೂ, ಸಂಯುಕ್ತ ರಾಷ್ಟ್ರವು 40 ನೇ ವರ್ಷಕ್ಕೆ ತಲುಪಿದಾಗ, ಇತಿಹಾಸಗಾರ ತೋಮಸ್ ಎಮ್. ಫ್ರಾಂಕ್ ಹೇಳಿದ್ದು: “1945 ರಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ಎಷ್ಟೋ ಕಡಿಮೆ. . . . ಪರಿಣಾಮಕಾರಿಯಾಗಿದೆ.” ಅಮೇರಿಕದ ಸೆಕೆಟರಿ ಆಫ್ ಸ್ಟೇಟ್ ಜೋರ್ಜ್ ಪಿ. ಶುಲ್ಜ್ ಹೇಳಿದ್ದು: “ಸಂಯುಕ್ತ ರಾಷ್ಟ್ರದ ಜನಿಸುವಿಕೆಯು ಲೋಕವನ್ನು ಪರದೈಸವನ್ನಾಗಿ ಪರಿವರ್ತಿಸಿಲ್ಲ.”
ಸಂಯುಕ್ತ ರಾಷ್ಟ್ರ ಸಂಘವು ಯಶಸ್ವಿಯಾಗಿಲ್ಲ ಯಾಕೆಂದರೆ ಮಾನವ ಸರಕಾರಗಳು ಶಾಂತಿಗೆ ನಿಜವಾಗಿಯೂ ಅಡ್ಡಿಗಳಾಗಿರುವದನ್ನು ನಿವಾರಿಸಿಲ್ಲ. ರಾಷ್ಟ್ರೀಯತೆ, ಅತ್ಯಾಶೆ, ದಾರಿದ್ರ್ಯ, ವರ್ಣಭೇದ, ನಿರಂಕುಶತ್ವ ಮತ್ತು ಲೋಕದ ಮೇಲೆ ಸೈತಾನನ ಪ್ರಭಾವ, ಭವಿಷ್ಯವು ಪ್ರಕಾಶಭರಿತವಾಗಿದೆಯೆಂಬ ಕಾರಣದಿಂದ ಈ ಜನರು ಈ ಸರಕಾರಗಳಿಗೆ ಅಂಟಿಕೊಂಡಿರುವದಿಲ್ಲ, ಬದಲು ಅದಕ್ಕಿಂತ ಉತ್ತಮ ನಿರೀಕ್ಷೆ ಅವರಿಗಿಲ್ಲದಿರುವದೇ.—ಪ್ರಕಟನೆ 12:12.
ಸಂಯುಕ್ತ ರಾಷ್ಟ್ರ ಸಂಘದ ಅಸ್ತಿತ್ವ ಮತ್ತು ಅಷ್ಟೊಂದು ಜನರು ಹಾಕಿದ ಪ್ರಯತ್ನ, ಇವೆಲ್ಲ ತೋರಿಸುವದೇನೆಂದರೆ ಭೂಮಿಯ ಜನರು ಎಷ್ಟೊಂದು ಆಳವಾಗಿ ಒಂದು ಬದಲಾವಣೆಯ ಅವಶ್ಯಕತೆಯನ್ನು ಗಣ್ಯ ಮಾಡುತ್ತಾರೆಂದೇ. ಆ ಬದಲಾವಣೆಯು, ಭಿನ್ನವಾದ ಮತ್ತು ಇನ್ನಷ್ಟು ಹೆಚ್ಚು ಪರಿಣಾಮಕಾರೀ ವಿಧದಲ್ಲಿ ಬರಲಿರುವದು. ಯಾವ ವಿಧದಲ್ಲಿ?
ಶಾಶ್ವತ ಆಡಳಿತೆ
ಕೇವಲ ಒಂದರ ನಂತರ ಒಂದು ಬರುವ ಏಳೇ “ಅರಸುಗಳು” ಯಾ ಲೋಕಶಕ್ತಿಗಳ ಕುರಿತು ಮಾತ್ರ ಬೈಬಲು ಹೇಳುತ್ತದೆಂದು ನೆನಪಿನಲ್ಲಿಡಿರಿ. ತದನಂತರ, ಯಾವುದೇ ಪ್ರಬಲ ಲೋಕಶಕ್ತಿಯ ಕುರಿತು ಉಲ್ಲೀಖವಿಲ್ಲ. ಬೈಬಲು ಇದನ್ನು ಕೂಡ ಹೇಳುತ್ತದೆ. ತಾತ್ಕಾಲಿಕ “ಎಂಟನೆಯ ಅರಸು. . . . ನಾಶನಕ್ಕೆ ಹೋಗುವನು.”—ಪ್ರಕಟನೆ 17:10,11.
ಆದರೆ ಒಂದು ಉತ್ತಮ ನಿರೀಕ್ಷೆಯೊಂದಿಗೆ ಎಂದು ಕೂಡಾ ಬೈಬಲು ಹೇಳುತ್ತದೆ. ಕಾತರತೆಯಿಂದ ಜನರು ಹುಡುಕುವ ಶಾಂತಿ, ನ್ಯಾಯ ಮತ್ತು ಐಕ್ಯತೆಯ ಲೋಕವನ್ನು ತರುವ ಬೇರೊಂದಿದೆ ಎಂದು ಅದು ವಾಗ್ದಾನಿಸುತ್ತದೆ. ಅದು ಹೇಳುವದು: “ಆ ರಾಜ್ಯರ ಕಾಲದಲ್ಲಿ ಪರಲೋಕ ದೇವರು ಒಂದು ರಾಜ್ಯವನ್ನು ಸ್ಥಾಪಿಸುವನು. ಅದು ಎಂದಿಗೂ ಅಳಿಯದು. . . . ಆ ರಾಜ್ಯಗಳನ್ನೆಲ್ಲಾ ಭಂಗ ಪಡಿಸಿ ನಿರ್ನಾಮ ಮಾಡಿ ಶಾಶ್ವತವಾಗಿ ನಿಲ್ಲುವದು.”—ದಾನಿಯೇಲ 2:44.
ಇದೇ ಆಡಳಿತೆಯ ಕುರಿತು ಯೇಸುವು ಮಾತಾಡಿದನು, ಅವನ ಶಿಷ್ಯರು ಅದಕೋಸ್ಕರ ಈ ರೀತಿ ಪ್ರಾರ್ಥಿಸುವಾಗ ಬೇಡಿದರು: “ನಿನ್ನ ರಾಜ್ಯವು ಬರಲಿ.” (ಮತ್ತಾಯ 6:10) ಆ ರಾಜ್ಯವು ಮಾನವರ ಹೃದಯದಲ್ಲಿ ಒಳಿತಿಗಾಗಿ ಆಗುವ ಕೇವಲ ಯಾವುದೇ ಒಂದು ಪ್ರಭಾವವಾಗಿರುವದಿಲ್ಲ, ಬದಲು ವಾಸ್ತವದಲ್ಲಿ ಇದೊಂದು, ಸ್ವರ್ಗೀಯ ಆಡಳಿತೆ, ಭೂಮಿಯ ಕಾರುಭಾರನ್ನು ಆತ್ಮೀಕ ಲೋಕದಿಂದ ನಿಭಾಯಿಸುವದು. ನಾವು ಭೂಮಿಯಲ್ಲಿ ಜೀವಿಸುವ ಮಾರ್ಗವನ್ನು ಅದು ಬದಲಾಯಿಸುವದು.—ಪ್ರಕಟನೆ 21:1-4.
ಆ ಆಸಕ್ತಿಯ ಹೊಸ ಆಡಳಿತೆ. ಅದು ಹೇಗೆ ಕಾರ್ಯ ನಿರ್ವಹಿಸುವದು, ಮತ್ತು ಅದು ಉತ್ಪಾದಿಸಲಿರುವ ಶಾಂತಿ, ನ್ಯಾಯ ಮತ್ತು ಐಕ್ಯತೆಯ ಲೋಕವೆಂಬುದರ ಕುರಿತು ಬೈಬಲು ಏನನ್ನುತ್ತದೆ ಎಂಬದೇ ಈ ಸರಣಿಯ ಮುಂದಿನ ಮತ್ತು ಕೊನೆಯ ಲೇಖನದ ವಿಷಯವಾಗಿರುವದು. (w88 6/1).
[ಅಧ್ಯಯನ ಪ್ರಶ್ನೆಗಳು]
a ಈ ಪತ್ರಿಕೆಯ ಹಿಂದಿನ ಸಂಚಿಕೆಗಳಲ್ಲಿ ಚರ್ಚಿಸಿದ ಈ ಲೋಕಶಕ್ತಿಗಳು: (1)ಐಗುಪ್ತ, ಮಾರ್ಚ್ 1, 1989, (2)ಅಶ್ಶೂರ್ಯ, ಅಗೋಸ್ತು 1, 1989, (3)ಬಾಬೆಲ್, ಸಪ್ಟಂಬರ 1, 1989, (4)ಮೇದಯ-ಫಾರಸಿಯ, ಅಕ್ಟೋಬರ 1, 1989, (5)ಗ್ರೀಸ್, ನವಂಬರ 1, 1989, (6)ರೋಮ್, ದಶಂಬರ 1, 1989. (7)ಅಂಗ್ಲೋ-ಅಮೇರಿಕನ್, ಜನವರಿ 1, 1990.
[ಪುಟ 31 ರಲ್ಲಿರುವ ಚೌಕ]
ಯುದ್ಧದ ವಿಸ್ತಾರತೆ
ಎರಡನೆಯ ಲೋಕಯುದ್ಧವು ಜನಾಂಗವು ಸಂಘದ ಮೃತ್ಯವನ್ನು ಗುರುತಿಸಿತು, ಬೆರಗುಗೊಳಿಸುವ ಜೀವಾಹುತಿಗಳನ್ನು ಬಲಿತೆಗೆದುಕೊಂಡಿತು. ದ ಎನ್ಸೈಕ್ಲೊಪಿಡಿಯಾ ಬ್ರಿಟಾನಿಕ (1954 ರಲ್ಲಿ ಅವೃತ್ತಿ) ವಿವಿಧ ಜನಾಂಗಗಳ 1940 ಜನಸಂಖ್ಯೆಗೆ ಯುದ್ಧದ ಸಮಯದಲ್ಲಿ ಸಿಪಾಯಿಗಳ ಸತ್ತವರ ಸಂಖ್ಯೆಗೆ ಹೋಲಿಸಿ ಜೀವ ಬಲಿಯಾದವರ ವಿಸ್ತಾರತೆಯನ್ನು ಉದಾಹರಿಸಿದೆ. ಆ ಸಂಖ್ಯೆಗಳಲ್ಲಿ ಕೆಲವು: 1940 ರ ಜನಸಂಖ್ಯೆಗೆ ಅದರ ಪ್ರತಿ 500 ಜನರಿಗೆ ಒಬ್ಬ ವ್ಯಕ್ತಿ ಅಮೆರಿಕದಲ್ಲಿ ಈ ಯುದ್ಧದಲ್ಲಿ ಮಿಲಿಟರಿಯ ಮರಣ ಹೊಂದಿದ್ದಾಗಿ, ಚೀನಾ ಪ್ರತಿ 200ಕ್ಕೆ ಒಬ್ಬನು: ಬ್ರಿಟನಿನ 150ಕ್ಕೆ ಒಬ್ಬನು; ಫ್ರಾನ್ಸ್ 200ಕ್ಕೆ ಒಬ್ಬನು; ಜಪಾನ್ 46ಕ್ಕೆ ಒಬ್ಬನು; ಜರ್ಮನಿ 25ಕ್ಕೆ ಒಬ್ಬನು; ರಶ್ಯಾ ಪ್ರತಿ 22ಕ್ಕೆ ಒಬ್ಬನು; ಎಂದು ತಿಳಿಸಿದೆ. ಅಯೋಧ ಸತ್ತವರ ಬಲಿಗಳನ್ನು-ಕೆಲವು ಮಿಲಿಟರಿ ನಷ್ಟಕ್ಕಿಂತಲೂ ಹೆಚ್ಚು. ನಿಜ ಶಾಂತಿ ಮತ್ತು ಭದ್ರತೆಯನ್ನು ತರುವದರಲ್ಲಿ ಮಾನವ ಪ್ರಯತ್ನಗಳು ಖಂಡಿತವಾಗಿ ಹೇಗೆ ಸೋತಿವೆ ಎಂದು ನಾವು ಸುಲಭದಲ್ಲಿಯೇ ಕಂಡುಕೊಳ್ಳಬಹುದು.
[ಪುಟ 31 ರಲ್ಲಿರುವ ಚಿತ್ರ]
“ಸಂಯುಕ್ತ ರಾಷ್ಟ್ರ ಸಂಘದ ರಚನೆಯಿಂದ ಹಿಡಿದು, 2 ಕೋಟಿ ಜನರು ಯುದ್ಧದಲ್ಲಿ ಸತ್ತಿರುತ್ತಾರೆ, ಆದರೆ ಸೋಲಿಗೆ ತೆತ್ತ ಬೆಲೆಯನ್ನು ದೃಢೀಕರಿಸುವ ಒಂದು ದುಃಖಕರ ವಾಸ್ತವಾಂಶ.”—“ನೇಶನ್ಸ್ ಎಗೇನಸ್ಟ್ ನೇಶನ್”—ಬೈ ತೋಮಸ್ ಎಮ್ ಫ್ರಾಂಕ್ಕ್