ವಾರ್ತೆಗಳ ಒಳನೋಟ
ಭೇದಗೊಂಡ ಒಂದು ಮನೆ
ಯೇಸು ಅಂದದ್ದು: “ಒಂದು ಮನೆಯಲ್ಲಿ ಭೇದ ಹುಟ್ಟಿದರೆ” ಅದು ನಿಲ್ಲಲಾರದು. (ಮಾರ್ಕ 3.25) ಆ ದೇಶದ ಅತಿ ದೊಡ್ಡ ಪ್ರೊಟೆಸ್ಟಂಟ್ ಚರ್ಚ್, ಯುನೈಟೆಡ್ ಚರ್ಚ್ ಆಫ್ ಕೆನಡಾವು ಸಲಿಂಗಕಾಮ ಮತ್ತು ಸಲಿಂಗೀ ಪುರುಷ ಮತ್ತು ಸ್ತ್ರೀಯರನ್ನು ವೈದಿಕರಾಗಿ ನೇಮಿಸುವ ವಿವಾದದಲ್ಲಿ ಆ ರೀತಿಯಲ್ಲಿ ಸಿಲುಕಿಕೊಂಡಿದೆ.
ಯುನೈಟೆಡ್ ಚರ್ಚ್ ಅಫ್ ಕೆನಡಾದ 32ನೇ ಜನರಲ್ ಕೌನ್ಸಿಲ್ನಲ್ಲಿ ಅಂಗೀಕೃತವಾದ ಒಂದು ನಿರ್ಣಯದಂತೆ ವೈದಿಕರಾಗಿ ಕಾರ್ಯ ನಿರ್ವಯಿಸುವಂತೆ ಈಗಲೂ ಸಲಿಂಗಕಾಮವನ್ನಾಚರಿಸುತ್ತಿರುವವರಿಗೆ ಅಮನುತಿಯನ್ನೀಯುತ್ತದೆ. ಕೆನಡಾದ ವಾರ್ತಾ ಪತ್ರಿಕೆಯಾದ ದಿ ಗ್ಲೋಬ್ ಎಂಡ್ ಮೇಲ್ ಗನುಸಾರ ಆ ನಿರ್ಣಯವು ನಮೂದಿಸುವದೇನಂದರೆ, ಅವರ ಲೈಂಗಿಕ ನೆಲೆಯನ್ನು ಪರಿಗಣಿಸದೇ, “ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನು ತೋರಿಸುವ ಮತ್ತು ಅದಕ್ಕೆ ವಿಧೇಯನಾಗಿರುವ ಯಾವನೇ ಒಬ್ಬನಿಗೆ ಸುಸ್ವಾಗತವಿದೆ ಯಾ ಚರ್ಚಿಗೆ ಪೂರ್ಣ ಸದಸ್ಯನಾಗಬಹುದು.” ಮತ್ತು “ಚರ್ಚಿನ ಎಲ್ಲಾ ಸದಸ್ಯರು ಪುರೋಹಿತ ಶುಶ್ರೂಷೆಗೆ ಪರಿಗಣಿಸಲ್ಪಡಲು ಅರ್ಹರಾಗುತ್ತಾರೆ.” 125 ಪುಟಗಳ ಯುನೊಯಿಟೆಡ್ ಚರ್ಚಿನ ವರದಿಯೊಂದು ಹೇಳುವದು: “ವಿವಿಧ ಲೈಂಗಿಕ ನೆಲೆಗಳಿವೆ: ಸಲಿಂಗಿಕಾಮಿಗಳು, ಉಭಯಲಿಂಗಿಗಳು, ಭಿನ್ನಲಿಂಗಿಗಳು. ಇವೆಲ್ಲವುಗಳನ್ನು ಸ್ವಾಭಾವಿಕವೆಂದೂ ದೇವರಿಂದ ಒಂದು ದಾನವೆಂದೂ ದೃಷ್ಟಿಸಬೇಕು.”
ಸಲಿಂಗಕಾಮಿಗಳನ್ನು ವೈದಿಕರಾಗಿ ಸ್ವೀಕರಿಸುವ ಚರ್ಚಿನ ನಿರ್ಣಯದ ಮೇಲೆ ಹೇಳಿಕೆಯನ್ನೀಯುತ್ತಾ, ಗ್ಲೋಬ್ ವಿವರಿಸುವದೇನಂದರೆ “ಬೇರೆಲ್ಲವನ್ನು ತಳ್ಳಿಹಾಕುವ ಕಾರಣವೇನಾಗಿತ್ತೆಂದರೆ ಚರ್ಚಿನ ಉಳಿಯುವಿಕೆಯೇ.” 1972 ರಿಂದ ವರದಿಗಳು ಪ್ರಕಟಿಸುವದೇನಂದರೆ ಚರ್ಚು ಒಂದೇ ಸಮನಾಗಿ ಸದಸ್ಯತ್ವವನ್ನು ಕಳಕೊಳ್ಳುತ್ತಾ ಇದೆ ಮತ್ತು ಆರ್ಥಿಕವಾಗಿ ತೊಂದರೆಯಲ್ಲಿದೆ. ಕಾರಣ? ವೈದಿಕನಾದ ಜೋನ್ ಟೀಡ್ವಿ ಉಲ್ಲೀಕಿಸುವದು: “ಅದು ತನ್ನ ಕ್ರೈಸ್ತ ಮೂಲಗಳಿಂದ ದೂರ ತೇಲಿಹೋಗುವದನ್ನು ಜನರು ನೋಡುತ್ತಿದ್ದ ಹಾಗೆ ಚರ್ಚ್ನಿಂದ ವಲಸೆ ಹೋಗುವದು ನಡೆಯುತ್ತಾ ಇದೆ.” ಕೆನಡಾದ ದ ಪೋಸ್ಟ್ ವರದಿಸುವದು.: “ಆದ್ದರಿಂದ ಸಲಿಂಗಕಾಮ, ಮದುವೆಯ ಬಂಧನದ ಹೊರಗಣ ಲೈಂಗಿಕತೆ, ಅಪೇಕ್ಷೆಷಗನುಸಾರ ಗರ್ಭಪಾತ ಮತ್ತು ಮುರಿಯಬಹುದಾದ ವಿವಾಹಗಳಂತಹ ಸಂಗತಿಯನ್ನು ಅವರು ಸ್ವೀಕರಿಸುವದು ಎಳೆಯ ಸಂತತಿಗೆ ಒಂದು ಉಪಕ್ರಮವಾಗಿರುತ್ತದೆ.”
ಆದರೂ ಕ್ರಿಸ್ತನಿಗೆ ವಿಧೇಯರಾಗುವದು ಬೈಬಲ್ ತತ್ವಗಳಲ್ಲಿ ಒಪ್ಪಂದಗೈಯಲು ಅನುಮತಿಸುತ್ತದೋ? ವ್ಯತಿರಿಕ್ತವಾಗಿ, ದೇವರ ವಾಕ್ಯವು ಸ್ಪಷ್ಟವಾಗಿ ಹೇಳುದು: “ನಿಮ್ಮನ್ನೇ ತಿಳಿಗೇಡಿಗಳಾಗಿರಿಸಬೇಡಿರಿ. ಅನೈತಿಕ ವ್ಯಕ್ತಿಗಳು. . .ಸಲಿಂಗಕಾಮದ ವಕ್ರತೆಯುಳ್ಳವರು. . .ಇವರ್ಯಾರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.”—1 ಕೊರಿಂಥ 6:9, 10,ಟುಡೇಸ್ ಇಂಗ್ಲಿಷ್ ವರ್ಶನ್.
ಬೆತ್ತವನ್ನು ಬಳಸುವದು
“ಬೆತ್ತವನ್ನು ಉಪಯೋಗಿಸದಿರ್ರಿ. ಆದರೆ ಪರಿಣಾಮ ಗಮನಿಸಿ” ಎಂಬ ಶೀರ್ಷಿಕೆಯು ದಕ್ಷಿಣ ಆಫ್ರಿಕದ ವಾರ್ತಾಪತ್ರಿಕೆಯಾದ ದಿ ನೇಟಲ್ ಮರ್ಕ್ಯುರಿ ಯದ್ದಾಗಿದ್ದು ಮನೆಯಲ್ಲಿ ಮತ್ತು ಶಾಲೆಯಲ್ಲಿ ಮಕ್ಕಳಿಗೆ ದೈಹಿಕ ದಂಡನೆ ಕೊಡಲು ಹಿಂದೆಗೆಯುವ ಆಧುನಿಕ ಪ್ರವೃತಿಯ ಕುರಿತು ಹಲುಬುತ್ತದೆ. ಏಟುಕೊಡುವದರ ಕಡೆಗೆ ಬದಲಾದ ಈ ಮನೋನೋಟಕ್ಕೆ ಕಾರಣರು ಯಾರು? ದಕ್ಷಿಣ ಆಫ್ರಿಕಾದ ಯುನಿವರ್ಸಿಟಿ ಆಫ್ ನಟಾಲ್ನಲ್ಲಿ ಮಕ್ಕಳ ಚಿಕಿತ್ಸಕರಾಗಿರುವ ಪ್ರೊಫೆಸರ್ ಸ್ಮಿಥೇ ಈ ಅಪವಾದವನ್ನು ನೇರವಾಗಿ ಮಕ್ಕಳ ಮನೋಶಾಸ್ತ್ರಜ್ಞರ ಮೇಲೆ ಹೊರಿಸುತ್ತಾರೆ. ಸ್ಮಿಥೇ ವಿವರಿಸುವದು: “ಭಾವನಾತ್ಮಕ ಸಮಸ್ಯೆಗಳ ಬೇರುಗಳನ್ನು ಹುಡುಕಲು ಸಾಮಾನ್ಯವಾಗಿ ಹೊರಟಾಗ ಮನೋಭಾವದಲ್ಲಿ ಬದಲಾವಣೆಯನ್ನು ಮನಶಾಸ್ತ್ರದ ನಿರೂಪಣೆಯಿಂದ ಆರಂಭಿಸಲಾಗುವದನ್ನು ಒಬ್ಬನು ಕಾಣುತ್ತಾನೆ. ಯಾವುದೇ ವಿಧದ ದೈಹಿಕ ಶಿಕ್ಷೆಗೆ ಆರಂಭದಲ್ಲಿ ಬಲವತ್ತಾಗಿ ವಿರೋಧವದೆ, ಆದರೆ ನಿರಾಶೆಗಳಿಲ್ಲದ ಮತ್ತು ಸಂಯಮ ಪ್ರವೃತಿ ಇಲ್ಲದಿರುವ ಅಭಿಪ್ರಾಯಗಳ ಫಲಿತಾಂಶಗಳು ಶಿಸ್ತುಹೀನತೆಯಿಂದ ಬಂದವೆಂದು ತಿಳಿದಾಗ ಅಶಾಭಂಗ ಉಂಟಾಗುತ್ತದೆ.”
ಸಮತೂಕವಿರುವದನ್ನು ಸ್ಮಿಥೇ ಸೂಚಿಸುತ್ತಾರೆ. “ಅತಿರೇಕದ ಸ್ವೇಚ್ಚಾಚಾರಗಳು ಎಷ್ಟೊಂದು ಹಾಳೋ ಹಾಗೆಯೇ ಶಿಕ್ಷೆಗಳು ಕೂಡಾ” ಎಂದವರು ಗಮನಿಸುತ್ತಾರೆ. ಹೆಚ್ಚು ಶಿಸ್ತುಗೊಳಿಸಿದರಿಂದ ಪುನ: ಸರಿಪಡಿಸಿಕೊಳ್ಳುವದು ಕಡಿಮೆ ಶಿಸ್ತುಗೊಳಿಸುವದಕ್ಕಿಂತ ಹೆಚ್ಚು ಸುಲಭ, ಸಂದೇಹದಲ್ಲಿರುವಾಗ ಶಿಸ್ತಿನ ಪಕ್ಕವನ್ನು ಮಗುವು ಹೆಚ್ಚು ಮೆಚ್ಚುತ್ತದೆ. ಮಗುವಿನ ಪ್ರಚಲಿತ ಮತ್ತು ಭಾವೀ ಒಳ್ಳಿತಿಗಾಗಿ ಪ್ರೀತಿಯ ಗಮನವು ದೈಹಿಕ ದಂಡನೆ ಕೊಡುವದರ ಹೇತುವಿಗಿರಬೇಕೆಂದು ಪ್ರೊಫೆಸರರು ಒತ್ತಿಹೇಳುತ್ತಾರೆ.
ಅಂತಹ ಸಲಹೆಯು ಹೊಸತೇನೂ ಅಲ್ಲ, ಬದಲು ತಪ್ಪಾಗಲಾರದ ಬೈಬಲಿನ ಮಾರ್ಗದರ್ಶನೆಗೆ ಹಿಂದಿರುಗುವದೇ ಆಗಿದೆ: “ಬೆತ್ತ ಹಿಡಿಯದ ಪಿತ ಪುತ್ರನಿಗೆ ಶತ್ರು; ಚೆನ್ನಾಗಿ ಶಿಕ್ಷಿಸುವ ಪಿತ ಪುತ್ರನಿಗೆ ಮಿತ್ರ.”—ಜ್ಞಾನೋಕ್ತಿ 13:24; ಜ್ಞಾನೋಕ್ತಿ 23:13, 14ನ್ನೂ ನೋಡಿ.
ಜೂಜಾಡುವದು ಪಾಪವಲ್ಲವೇ?
ದಿ ಶಬೊಯಿಗಾನ್ ಪ್ರೆಸ್ ವರದಿಸುವದೇನಂದರೆ ಇತ್ತೀಚೆಗೆ ಅಮೆರಿಕಾದ ವಿಸ್ಕನ್ಸಿನ್ ನಲ್ಲಿರುವ ಒಂದು ರೋಮನ್ ಕಥೋಲಿಕ ಇಗರ್ಜಿಯು ಲಾಟರಿ ಟಿಕೇಟುಗಳನ್ನು ಮಾರಲು ಅನುಮತಿ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಪ್ರಥಮ ಧಾರ್ಮಿಕ ಸಂಸ್ಥೆಯಾಗಿದೆ. ವಾರದ ಹಣ ಒಟ್ಟು ಸೇರಿಸುವದನ್ನು “ಹೆಚ್ಚಿಸುವ” ಪ್ರಯತ್ನದಲ್ಲಿ ಈ ಮಾರಾಟವು ಒಂದಾಗಿದೆ ಎಂದು ವಿವರಿಸುತ್ತಾ ಪ್ರೆಸ್ ಗಮನಿಸಿದ್ದು: “ಅದರ ಬಿಂಗೋ ಆಟಗಳಲ್ಲಿ ಹಾಜರಿಯನ್ನು ಹೆಚ್ಚಿಸುವದೇ” ಲಾಟರಿ ಟಿಕೇಟುಗಳನ್ನು ಮಾರುವ ಪ್ರಸ್ತಾವನೆಯ ಹಿಂದುಗಡೆ ಇದ್ದ ಮುಖ್ಯ ಕಾರಣ. ಪ್ರತಿ ರಾತ್ರಿಯ ಈ ಬಿಂಗೋ ಆಟಗಳನ್ನು ನಡಿಸುವದರಿಂದ ಈಗಾಗಲೇ ಆಗುವ ಲಾಭವು $800 ರಿಂದ $1000 ಗಳೆಂದು ಚರ್ಚು ವರದಿ ಮಾಡಿದೆ.
ಜೂಜಾಡುವದು ನಿಜವಾಗಿ ಪಾಪವೂ ಎಂದು ಪ್ರಶ್ನಿಸಿದಾಗ ಇಗರ್ಜಿಯ ಪಾದ್ರಿ ರೋಬರ್ಟ್ ಫೇಯ್ಲಿಶ್ಮ್ಯಾನ್ ಉತ್ತರಿಸಿದ್ದು: “ನನಗೆ ಗೊತ್ತಿಲ್ಲ.” “ಸಮಗ್ರವಾಗಿ ನಮ್ಮ ಆತ್ಮಿಕ ಕರೆಯ ಸನ್ನಿವೇಶದಲ್ಲಿ ಬಿಂಗೋ ಯಾ ಲಾಟರಿ ಟಿಕೇಟಿನ ಮಾರಾಟ ಪ್ರಾಯಶ: ಸಮರ್ಪಕವಾಗಲಿಕ್ಕಿಲ್ಲವೆಂಬದನ್ನು” ಒಪ್ಪುತ್ತಾ, ಅವರು ಕೂಡಿಸಿದ್ದು: “ತಮ್ಮ ಹಣವನ್ನು ಖರ್ಚುಮಾಡಲು ಅವರು ಇಲ್ಲಿಗೆ ಬರದಿದ್ದರೆ, ಅವರು ಬೇರೆಡೆಗೆ ಹೋಗುವರು.”
ಕ್ರಿಸ್ತನ ಹಿಂಬಾಲಕನೆಂದು ಹೇಳುವ ಧಾರ್ಮಿಕ ಮುಖಂಡನೊಬ್ಬನು ಜೂಜಾಡುವಿಕೆಯನ್ನು ಪ್ರವರ್ಧಿಸಬೇಕೋ? ಎಂದಿಗೂ ಇಲ್ಲ! ಯಾವುದೇ ವಿಧದ ಜೂಜಾಟವು ಮಾನವರಲ್ಲಿನ ಕೆಟ್ಟ ಗುಣಗಳಲ್ಲಿ ಒಂದನ್ನು ಆಕರ್ಶಿಸುತ್ತದೆ—ಲೋಭ. ಅದನ್ನು ಪ್ರವರ್ಧಿಸುವವರು ಇತರರ ನಷ್ಟಗಳಿಂದ ತಾವು ಲಾಭಗಳಿಸುವದು ಯೋಗ್ಯವೆಂದು ಜನರು ನಂಬುವಂತೆ ಹುರಿದುಂಬಿಸುತ್ತಾರೆ. ಆದರೂ ದೇವರ ಪ್ರೇರಿತ ವಾಕ್ಯವು ನೇರವಾಗಿ ಹೇಳುವದೇನಂದರೆ ಲೋಭಿಗಳು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.—1 ಕೊರಿಂಥ 6:9, 10; ಎಫೆಸ್ಯ 4:19; 5:3. (w88 12/15)