ನಿಮಗೆ ನೆನಪಿದೆಯೇ?
ಇತ್ತೀಚಿಗಿನ ಕಾವಲಿನಬುರುಜು ಸಂಚಿಕೆಗಳು ನಿಮಗೆ ವ್ಯಾವಹಾರ್ಯ ಮೂಲ್ಯತೆಯವುಗಳಾಗಿ ಕಂಡಿವೆಯೋ? ಹಾಗಿದ್ದರೆ ಕೆಳಗಿನವುಗಳೊಂದಿಗೆ ನಿಮ್ಮ ಸ್ಮರಣಶಕ್ತಿಯನ್ನು ಏಕೆ ಪರೀಕ್ಷಿಸಬಾರದು?
◻ ಮತ್ತಾಯ 25:34 ರಲ್ಲಿ ಯೇಸು ಕುರಿಗಳಿಗೆ, “ಲೋಕಾದಿಯಿಂದ ಸಿದ್ಧಮಾಡಿದ ರಾಜ್ಯವನ್ನು ಸ್ವಾಸ್ಥ್ಯವಾಗಿ ಪಡೆಯಿರಿ” ಎಂದು ಹೇಳಿದ್ದು ಯಾವ ಅರ್ಥದಲ್ಲಿ?
ಕುರಿಸದೃಶ್ಯರು ತನ್ನೊಂದಿಗೆ ಪರಲೋಕದಲ್ಲಿ ಆಳುವರು ಎಂಬರ್ಥದಲ್ಲಿ ಯೇಸು ಇದನ್ನು ಹೇಳಲಿಲ್ಲ. ಬದಲಾಗಿ, ವಿಮೋಚನಾರ್ಹ ಮಾನವಕುಲವೆಂಬ “ಲೋಕದ ಆದಿಯಿಂದ” ಸಿದ್ಧವಾದ ರಾಜ್ಯದ ಭೂಕ್ಷೇತ್ರವನ್ನು ಕುರಿಗಳು ಸ್ವಾಸ್ಥ್ಯವಾಗಿ ಪಡೆಯುವರು. ಈ ರೀತಿಯಲ್ಲಿ ಅವರು ತಮ್ಮ “ನಿತ್ಯನಾದ ತಂದೆ” ರಾಜ ಕ್ರಿಸ್ತ ಯೇಸುವಿನ ಭೂಮಕ್ಕಳಾಗುವರು. (ಯೆಶಾಯ 9:6, 7)—5⁄1, ಪುಟ 17.
◻ ಸಾ. ಶ. 33 ಕ್ಕೆ ಮುಂಚೆ ಸತ್ತ ನಂಬಿಗಸ್ತರು ಪುನರುತ್ಥಾನವಾಗುವಾಗ ಅವರನ್ನು ಸ್ವಾಗತಿಸಲು ಅಭಿಷಿಕ್ತ ಉಳಿಕೆಯವರು ಭೂಮಿಯಲ್ಲಿ ಜೀವಂತರಾಗಿ ಇರಬೇಕಾದ ಅವಶ್ಯವಿದೆಯೇ?
ಇಲ್ಲ, ಅವಶ್ಯವಿಲ್ಲ. ಮಹಾ ಸಂಕಟವನ್ನು ಪಾರಾಗುವ ಹೆಚ್ಚಿನ ಮಹಾ ಸಮೂಹದವರು ಸಂಘಟನಾ ಜವಾಬ್ದಾರಿಯನ್ನು ನಿರ್ವಹಿಸಲು ಈಗ ತರಬೇತು ಹೊಂದುತ್ತಿದ್ದಾರೆ. ಆದುದರಿಂದ, ಆ ಪರಿಸ್ಥಿತಿಯನ್ನು ನಿರ್ವಹಿಸಲು, ಮತ್ತು “ನೂತನಾಕಾಶ”ದ ಕೆಳಗಿನ “ನೂತನಭೂಮಿ”ಯ ಪರಿಚಯವನ್ನು ಪುನರುತಿಥ್ತರಿಗೆ ಮಾಡಿಸಲು ಅವರು ಶಕ್ತರಾಗಿರುವರು. (2 ಪೇತ್ರ 3:13)—5⁄1, ಪುಟ 17, 18.
◻ ಲೋಕವ್ಯಾಪಕ ದ್ವೇಷ ಮತ್ತು ವಿರೋಧ ಬಂದರೂ ಯೆಹೋವನ ಸಾಕ್ಷಿಗಳೇಕೆ ನಿರಾಶೆ ಮತ್ತು ಆಶಾಭಂಗವನ್ನು ಪಡೆಯುವುದಿಲ್ಲ?
ಅಂಥ ವಿರೋಧ ಮತ್ತು ದ್ವೇಷವು ಸತ್ಯಾರಾಧಕರ ಗುರುತುಚಿಹ್ನೆ ಎಂದು ಯೇಸು ಮುಂತಿಳಿಸಿದ್ದಾನೆ. (ಯೋಹಾನ 15:20, 21; 2 ತಿಮೊಥಿ 3:12) ಹೀಗೆ, ಅವರಿಗೆ ದೈವಿಕ ಸಮ್ಮತಿ ಇದೆಂಬ ಆಶ್ವಾಸನೆ ಸುವಾರ್ತಾ ಘೋಷಕರಿಗಿದೆ. ಅದಲ್ಲದೆ, ಮಹೋನ್ನತ ದೇವರಾದ ಯೆಹೋವನ ಬೆಂಬಲ ತಮಗಿದೆಂದು ಯೆಹೋವನ ಸಾಕ್ಷಿಗಳಿಗೆ ಗೊತ್ತಿದೆ.—6⁄1, ಪುಟ 21.
◻ ವಿವಾಹಿತ ಜೊತೆಯು ಸಮತೆಯ ನೊಗದಲ್ಲಿರುವಾಗ ಇರುವ ಪ್ರಯೋಜನಗಳಾವುವು?
ಗಂಡ ಮತ್ತು ಹೆಂಡತಿ ತಮ್ಮ ದೇವರ ಆರಾಧನೆಯ ಸಂಬಂಧದಲ್ಲಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವ ನೆಲೆಯಲ್ಲಿರುವರು. ಹಾಗೂ, ತಮ್ಮ ಮನಸ್ತಾಪಗಳನ್ನು ಪರಿಹರಿಸಿಕೊಳ್ಳಲು ಮಾರ್ಗದರ್ಶನೆಗಾಗಿ ಅವರು ದೇವರ ವಾಕ್ಯದ ಕಡೆಗೆ ನೋಡಬಲ್ಲರು.—6⁄1, ಪುಟ 12.
◻ ಯೆಹೋವನು ಒದಗಿಸುವ ಒಳನೋಟದಿಂದ ನಾವು ಪ್ರಯೋಜನ ಪಡೆಯಬೇಕಾದರೆ ನಮ್ಮಿಂದ ಯಾವ ಮೂರು ವಿಷಯಗಳು ಅವಶ್ಯಕ?
ಯೆಹೋವನ ಸಂಸ್ಥೆಯನ್ನು ನಾವು ಗಣ್ಯ ಮಾಡುವ ಅಗತ್ಯವಿದೆ. ದೇವರ ವಾಕ್ಯವನ್ನು ಮತ್ತು ಅದರ ತಿಳುವಳಿಕೆಯನ್ನು ಹೊಂದಲು ನಾವು ಶಕ್ತರಾಗುವಂತೆ ಒದಗಿಸಲಾದ ಸಹಾಯಕಗಳನ್ನು ಕ್ರಮವಾಗಿ ಅಭ್ಯಾಸ ಮಾಡಬೇಕು. ಮತ್ತು ನಾವು ಕಲಿತ ವಿಷಯಗಳನ್ನು ಮನನ ಮಾಡಬೇಕು ಮತ್ತು ಅವನ್ನು ನಮ್ಮ ನಿತ್ಯದ ಜೀವನದಲ್ಲಿ ಹೇಗೆ ಅನ್ವಯಿಸುವದೆಂಬದನ್ನು ಕಲಿಯಬೇಕು.—7⁄1, ಪುಟ 26.
◻ ಪ್ರಾಚೀನ ಇಸ್ರಾಯೇಲ್ಯರು ಅಂಥ ಘೋರ ಒಳನೋಟದ ಕೊರತೆಯಿಂದ ವರ್ತಿಸಿದ್ದೇಕೆ?
ಯೆಹೋವನು ಅವರಿಗಾಗಿ ಮಾಡಿದ ಎಲ್ಲಾ ವಿಷಯಗಳನ್ನು ಗಣ್ಯತೆಯಿಂದ ಮನನ ಮಾಡಲು ಅವರು ತಪ್ಪಿದ್ದರಿಂದಲೇ. (ಕೀರ್ತನೆ 106:7, 13)—8⁄1 ಪುಟ 7.
◻ “ದಿವ್ಯ ಭಕ್ತಿ” ಎಂದರೇನು? (1 ತಿಮೊಥಿ 3:16)
ದೇವರ ವಿಶ್ವ ಸಾರ್ವಭೌಮತ್ವಕ್ಕೆ ನಿಷ್ಠೆಯೊಂದಿಗೆ- ದೇವರಿಗೆ ಪೂಜ್ಯಭಾವ, ಭಕ್ತಿ ಮತ್ತು ಸೇವೆಯೇ ದಿವ್ಯಭಕ್ತಿಯಾಗಿದೆ.—8⁄1, ಪುಟ 15.
◻ 2 ಥೆಸಲೊನೀಕ 2:3 ರಲ್ಲಿ ಅಪೊಸ್ತಲ ಪೌಲನು ತಿಳಿಸುವ “ಅಧರ್ಮಸ್ವರೂಪನು” ಯಾರು?
ಪೌಲನು ಇಲ್ಲಿ ಏಕ ವ್ಯಕ್ತಿಯ ಕುರಿತು ಮಾತಾಡುವುದಿಲ್ಲ ಏಕಂದರೆ ಆ “ಪುರುಷನು” ಪೌಲನ ದಿನಗಳಲ್ಲಿ ಇದ್ದನೆಂತಲೂ ಮತ್ತು ಈ ವಿಷಯ ವ್ಯವಸ್ಥೆಯ ಅಂತ್ಯದಲ್ಲಿ ಯೆಹೋವನು ಅವನನ್ನು ನಾಶ ಮಾಡುವ ತನಕ ಅವನು ಅಸ್ತಿತ್ವದಲ್ಲಿರುವನೆಂದೂ ಪೌಲನು ಹೇಳಿದ್ದಾನೆ. ಆದುದರಿಂದ, “ಅಧರ್ಮಸ್ವರೂಪನು” ಎಂಬದು ಸಾಂಕೇತಿಕ ಹೇಳಿಕೆ. ಶತಮಾನಗಳಿಂದ ತಮ್ಮದೇ ಆದ ಮಾರ್ಗವನ್ನು ಅನುಸರಿಸುತ್ತಾ ಇರುವ ಕ್ರೈಸ್ತ ಪ್ರಪಂಚದ ಡಾಂಭಿಕ, ಹೆಬ್ಬಯಕೆಯ ವೈದಿಕ ವರ್ಗವೇ ಅವನೆಂದು ರುಜುವಾತು ತೋರಿಸುತ್ತದೆ.—9⁄1, ಪುಟ 13.
◻ ಬೈಬಲ್ ಹಸ್ತ ಪ್ರತಿಗಳಲ್ಲಿರುವ ಸಾವಿರಾರು ವ್ಯತ್ಯಾಸಗಳು ಬೈಬಲ್ ದೇವರ ವಾಕ್ಯವೆಂಬ ವಾದವನ್ನು ನಿರ್ಬಲಗೊಳಿಸುತ್ತದೋ?
ಇಲ್ಲ. ಆ ಎಲ್ಲಾ ವ್ಯತ್ಯಾಸಗಳು ಶಾಸ್ತ್ರ ವಚನಕ್ಕೆ ಕೊಂಚವೂ ಮಹತ್ವದ್ದಲ್ಲವೆಂದು ಬೈಬಲ್ ಪಂಡಿತರು ತಿಳಿಸುತ್ತಾರೆ. ಅವು ಕೇವಲ ಶಾಸ್ತ್ರ ವಚನಗಳ ಸಪ್ರಮಾಣ್ಯದ ರುಜುವಾತನ್ನು ಪುಷ್ಟಿಗೊಳಿಸುವ ಸಾಧನವಾಗಿವೆ. (ಕೀರ್ತನೆ 119:105; 1 ಪೇತ್ರ 1:25)—10⁄1, ಪುಟ 30, 31.
◻ ಯೇಸುವಿನ ತಲಾಂತುಗಳ ಸಾಮ್ಯದಲ್ಲಿ ತಲಾಂತುಗಳನ್ನು ವ್ಯಾಪಾರಕ್ಕೆ ಹಾಕುವುದು ಎಂಬದರ ಅರ್ಥವೇನು?
ತಲಾಂತುಗಳನ್ನು ವ್ಯಾಪಾರಕ್ಕೆ ಹಾಕುವುದು ಎಂದರೆ ದೇವರ ರಾಯಭಾರಿಗಳಾಗಿ ಕೆಲಸಮಾಡುವುದು, ಶಿಷ್ಯರನ್ನಾಗಿ ಮಾಡುವುದು, ದೇವರ ಮನೆಯವರಿಗೆ ಆತ್ಮಿಕ ಸತ್ಯವನ್ನು ಒದಗಿಸುತ್ತಾ ಇರುವುದು. (ಮತ್ತಾಯ 24:45; 28:19, 20; 2 ಕೊರಿಂಥದವರಿಗೆ 5:20)—10⁄1, ಪುಟ 13.
◻ ಯಾವ ಮೂರು ಮುಖಗಳಲ್ಲಿ ಬೈಬಲು ಬೇರೆಲ್ಲಾ ಸಲಹೆಗಳ ಮೂಲಗಳಿಗಿಂತ ಅಸದೃಶ್ಯವಾಗಿದೆ?
ಮೊದಲನೇದಾಗಿ, ಅದರ ಸಲಹೆಗಳು ಯಾವಾಗಲೂ ಉಪಯುಕ್ತವು. (ಕೀರ್ತನೆ 93:5) ಎರಡನೇದಾಗಿ, ಅದು ಕಾಲದ ಪರೀಕ್ಷೆಯನ್ನು ಪಾರಾಗಿ ನಿಂತದೆ. (ಯೆಶಾಯ 40:8; 1 ಪೇತ್ರ 1:25) ಮೂರನೇದಾಗಿ, ನಾವು ಯಾವುದೇ ಸಮಸ್ಯೆಯನ್ನು ಅಥವಾ ನಿರ್ಣಯವನ್ನು ಎದುರಿಸಲಿ, ಬೈಬಲಿನ ಸೂಚನೆಗಳಲ್ಲಿರುವ ವಿಸ್ತಾರ್ಯವು ಅಪಾರ. ಬೈಬಲಲ್ಲಿ ನಮಗೆ ಸಹಾಯಕಾರಿಯಾಗಬಲ್ಲ ವಿವೇಕವು ಅಡಕವಾಗಿದೆ.—11⁄1, ಪುಟ 20.