ವಾಗ್ದಾನ ದೇಶದ ದೃಶ್ಯಗಳು
ಋತುಗಳಿಂದ ನೀವು ಕಲಿಯಬಲ್ಲಿರೋ?
ಯೆಹೋವನು ಒಮ್ಮೆ ಅಂದದ್ದು: ‘ಭೂಮಿಯು ಇರುವ ತನಕ ಬಿತ್ತನೆಯೂ ಕೊಯಿಲೂ, ಚಳಿಯೂ ಸೆಕೆಯೂ, ಬೇಸಿಗೆಕಾಲವೂ ಹಿಮಕಾಲವೂ, ಇವುಗಳ ಕ್ರಮ ತಪ್ಪುವದೇ ಇಲ್ಲ.’ (ಆದಿಕಾಂಡ 8:22) ಈ ರೀತಿ ಅವನು ಭೂವ್ಯವಸಾಯದ ಋತುಗಳನ್ನು ಒತ್ತಿ ಹೇಳಿದನು.
ಋತುಗಳ ಮತ್ತು ಬೇಸಾಯಕ್ಕಿರುವ ಅವುಗಳ ಸಂಬಂಧದ ಕುರಿತು ನೀವೇನು ಬಲ್ಲಿರಿ? ನೀವು ನಗರದಲ್ಲಿ ಜೀವಿಸುತ್ತಿದ್ದು, ಗದ್ದೆ ಕೆಲಸಮಾಡದಿದ್ದರೂ, ನೀವು ಇಸ್ರಾಯೇಲಿನ ಋತುಗಳನ್ನೂ, ಬೇಸಾಯದ ಚಟುವಟಿಕೆಗಳನ್ನೂ ಕಲಿಯಬೇಕಾಗಿದೆ. ಯಾಕೆ? ಯಾಕಂದರೆ ಇವುಗಳ ಕುರಿತು ನೀವು ಹೆಚ್ಚು ಕಲಿತಷ್ಟಕ್ಕೇ, ದೇವರ ವಾಕ್ಯವನ್ನು ನೀವು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವಿರಿ.
ರೈತರು ಗದ್ದೆಗಳನ್ನು ಉಳುತ್ತಾರೆ, ಬೀಜಗಳನ್ನು ಬಿತ್ತುತ್ತಾರೆ ಮತ್ತು ಅನಂತರ ತಮ್ಮ ಬೆಳೆಗಳನ್ನು ಕೊಯ್ದು, ತೆನೆಬಡಿಯುತ್ತಾರೆ, ಆದರೆ ಬೈಬಲು ಏನು ಹೇಳುತ್ತದೋ, ಅದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಲು ಈ ಚಟುವಟಿಕೆಗಳು ಯಾವಾಗ ನಡೆಯುತ್ತವೆಂಬದರ ಸಹಿತ ನಾವು ಹೆಚ್ಚನ್ನು ತಿಳಿಯಬೇಕಾಗಿದೆ. ಪ್ರಾಚೀನ ಯೂದಾಯದಲ್ಲಿ ಮಾಡಲ್ಪಡುವ ಬೆಟ್ಟದ ಇಳಿಜಾರಿನ ಪ್ರದೇಶದಲ್ಲಿ ನಾವು ಮೇಲಿನ ಚಿತ್ರದಲ್ಲಿ ನೋಡಬಹುದಾದ ಉಳುವುದನ್ನು ಉದಾಹರಣೆಗಾಗಿ ತೆಗೆದುಕೊಳ್ಳೋಣ.a ಯಾವ ತಿಂಗಳಲ್ಲಿ ಈ ಚಿತ್ರವನ್ನು ತೆಗೆಯಲಾಗಿದೆ ಎಂದು ನೀವು ಎಣಿಸುವಿರಿ? ನಿಮ್ಮ ಊರಿನಲ್ಲಿ ಉಳುವಿಕೆ ಮಾಡುವುದು ನಿಮಗೆ ತಿಳಿದಿರುವುದು ನಿಮ್ಮನ್ನು ತಪ್ಪು ದಾರಿಗೆ ನಡಿಸಬಹುದು. ಉತ್ತರಾರ್ಧ ಗೋಳದಲ್ಲಿ ಉಳುವಿಕೆ ಮಾಡುವ ಸಮಯವೇ ದಕ್ಷಿಣಾರ್ಧ ಗೋಳದ್ದಾಗಿರುವುದಿಲ್ಲ; ವಿವಿಧ ಎತ್ತರದಲ್ಲಿ ಮತ್ತು ಮಳೆಗಾಲದ ಋತುವಿಗನುಸಾರ ಅದು ಭಿನ್ನವಾಗಿರುತ್ತದೆ.
ಇದು ಬೈಬಲಿನ ಘಟನೆಗಳ ನಿಮ್ಮ ನೋಟದ ಮೇಲೆ ಪ್ರಭಾವ ಬೀರಬಹುದು. ತನ್ನ ಉತ್ತರಾಧಿಕಾರಿಯ ನೇಮಕವನ್ನು ಎಲೀಯನ ಮಾಡುವುದನ್ನು ನೀವು ಓದಬಹುದು: “ಅವನು . . . ಶಾಫಾಟನ ಮಗನಾದ ಎಲೀಷನು ಹನ್ನೆರಡು ಜೋಡಿ ಎತ್ತುಗಳನ್ನು ತಂದು ಉಳುವುದನ್ನು ಕಂಡನು.” (1 ಅರಸುಗಳು 19:19, NW) ಇದು ಯಾವ ತಿಂಗಳಲ್ಲಿ ಸಂಭವಿಸಿದಿರ್ದಬಹುದು ಮತ್ತು ನೆಲವು ಯಾವ ರೀತಿಯಲ್ಲಿ ತೋರುತ್ತಿತ್ತು ಎಂದು ನೀವು ಎಣಿಸುತ್ತೀರಿ? ಮತ್ತು ಯೋಹಾನ 4:35 ರಲ್ಲಿ ಯೇಸು ಅಂದದ್ದು: “ಇನ್ನು ನಾಲ್ಕು ತಿಂಗಳಿಗೆ ಸುಗ್ಗಿ ಬರುವುದೆಂದು ನೀವು ಹೇಳುವುದುಂಟಷ್ಟೆ? . . . ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಬೆಳ್ಳಗಾಗಿ ಕೊಯ್ಲಿಗೆ ಬಂದವೆಂದು ನಿಮಗೆ ಹೇಳುತ್ತೇನೆ.” ಅವನು ಒಂದು ನಿರ್ದಿಷ್ಟ ಸಮಯವನ್ನು ಹೇಳಿದ್ದರೂ, ಅದು ಯಾವಾಗ ಎಂದು ನೀವು ತಿಳಿಯಬಲ್ಲಿರೋ?
ವಾಗ್ದಾನ ದೇಶದಲ್ಲಿನ ಋತುಗಳ ಮತ್ತು ಭೂವ್ಯವಸಾಯದ ಚಟುವಟಿಕೆಗಳ ಉತ್ತಮ ಸಾರಾಂಶವನ್ನು ತಖ್ತೆಯು ಒದಗಿಸುತ್ತದೆ. ಹೊರಗಿನ ಆವರಣವು ಯೆಹೂದ್ಯರ ಪವಿತ್ರ ಕ್ಯಾಲಂಡರಿನ ತಿಂಗಳುಗಳನ್ನು ತಿಳಿಸುತ್ತದೆ.b ನಮ್ಮ ತಿಂಗಳುಗಳೊಂದಿಗೆ ಇವುಗಳನ್ನು ಹೋಲಿಸುವಾಗ ಒಂದರ ಮೇಲೊಂದು ವ್ಯಾಪಿಸಿರುವುದನ್ನು ಕಾಣುವಿರಿ, ಉದಾಹರಣೆಗೆ ನೈಸಾನ್ (ಯಾ, ಅಬೀಬ್) ಮಾರ್ಚ್ ತಿಂಗಳ ಕೊನೆಯಲ್ಲಿ ಮತ್ತು ಏಪ್ರಿಲ್ ತಿಂಗಳ ಆರಂಭದಲ್ಲಿ ಒಂದರ ಮೇಲೊಂದು ವ್ಯಾಪಿಸಿರುವುದನ್ನು ಕಾಣುವಿರಿ. ಮುಂದಿನ, ಮಧ್ಯದೆಡೆಗಿನ ನಂತರದ ವಿಭಾಗವು ಬೆಳೆಗಳು ಯಾವಾಗ ಪಕ್ವಗೊಳ್ಳುತ್ತವೆಂದು ತೋರಿಸುತ್ತದೆ, ಇದು ಕೊಯ್ಯುವ ಮತ್ತು ತೆನೆಬಡಿಯುವಂಥಹ ಬೇಸಾಯದ ಕೆಲವು ನಿರ್ದಿಷ್ಟ ಚಟುವಟಿಕೆಗಳು ಯಾವಾಗ ನಡೆಯುತ್ತವೆ ಎಂದು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುವುದು. ತಖ್ತೆಯ ಮಧ್ಯ ವಿಭಾಗವು ಹವಾಮಾನದ ಬದಲಾವಣೆಗಳನ್ನು ಹೋಲಿಸಲು ನಿಮಗೆ ಆಗುವುದು.
ಈಗಾಗಲೇ ಮೇಲೆ ತಿಳಿಸಿದ ಎರಡು ಉದಾಹರಣೆಗಳಂತೆಯೇ, ಬೈಬಲಿನ ದಾಖಲೆಗಳ ನಿಮ್ಮ ತಿಳುವಳಿಕೆ ಮತ್ತು ಗಣ್ಯತೆಯು ಆಳಗೊಳಿಸುವಂತೆ ತಖ್ತೆಯನ್ನು ಉಪಯೋಗಿಸಿರಿ.
ಪ್ರವಾದಿಯಾಗಿ ಎಲೀಷನನ್ನು ಕರೆದಾಗ, ಅವನು ಪ್ರಧಾನ ಉಳುವಿಕೆಯ ಚಟುವಟಿಕೆಯಲ್ಲಿ ಭಾಗವಹಿಸುತ್ತಾ ಇದ್ದನು. ಅದು ಸಾಧಾರಣ ತಿಸ್ರಿ (ಸಪ್ಟಂಬರ-ಒಕ್ಟೋಬರ) ಸಮಯವನ್ನು ತೋರಿಸುತ್ತದೆ, ಆಗ ಬೇಸಿಗೆ ಕಾಲದ ಕಡು ಉಷ್ಣವು ಗತಿಸಿ ಹೋಗಿರುತ್ತದೆ. ಮಣ್ಣನ್ನು ಮೃದುಗೊಳಿಸುವ ಮುಂಗಾರು ಮಳೆಯು ಬರಲು ಆರಂಭಿಸಿರುತ್ತದೆ, ಆಗ ಉಳಲು ಸಾಧ್ಯವಾಗುತ್ತದೆ, ಅದನ್ನು ಹಿಂಬಾಲಿಸಿ ಬೀಜ ಬಿತ್ತನೆಯು ಬರುತ್ತದೆ.
ಯೋಹಾನ 4:35 ರ ಮಾತುಗಳನ್ನು ಯೇಸುವು ಆಡಿದ್ದು ಯಾವಾಗ? ಸುಗ್ಗಿಯು ಬರಲು ಇನ್ನೂ ನಾಲ್ಕು ತಿಂಗಳು ಇವೆ. ಜವೆಗೋದಿಯ ಕೊಯ್ಲು ಸಾಧಾರಣ ಪಸ್ಕ ಹಬ್ಬದ ಸಮಯದಲ್ಲಿ ಅಂದರೆ ನೈಸಾನ್ನಲ್ಲಿ (ಮಾರ್ಚ್-ಏಪ್ರಿಲ್) ಆರಂಭಗೊಳ್ಳುತ್ತದೆಂದು ಗಮನಿಸಿರಿ. ನಾಲ್ಕು ತಿಂಗಳುಗಳಷ್ಟು ಹಿಮ್ಮುಖವಾಗಿ ಎಣಿಸಿರಿ. ಅದು ನಿಮ್ಮನ್ನು ಚಿಸೆವ್ಲ್ (ನವಂಬರ-ದಶಂಬರ) ತಿಂಗಳಿಗೆ ತರುತ್ತದೆ. ಮಳೆಯು ಹೆಚ್ಚಾಗುತ್ತದೆ ಮತ್ತು ಮುಂದಕ್ಕೆ ಹೆಚ್ಚು ಚಳಿಯ ಹವಾಮಾನ ಇರುತ್ತದೆ. ಆದುದರಿಂದ ಅವನು ಈ ಮಾತುಗಳನ್ನು ಹೇಳಿದಾಗ ಒಂದು ಸಾಂಕೇತಿಕ ಕೊಯ್ಲು ಎಂದು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದನು: “ನಿಮ್ಮ ಕಣ್ಣೆತ್ತಿ ಹೊಲಗಳನ್ನು ನೋಡಿರಿ; ಅವು ಬೆಳ್ಳಗಾಗಿ ಕೊಯ್ಲಿಗೆ ಬಂದಿವೆ.”
ನಿಮ್ಮ ವೈಯಕ್ತಿಕ ಅಭ್ಯಾಸಕ್ಕಾಗಿ ಇಲ್ಲವೇ ನಿಮ್ಮ ಕುಟುಂಬದೊಂದಿಗಿನ ಒಂದು ಆಹ್ಲಾದಕರ ಅಧ್ಯಯನದ ಉಪಯೋಗಕ್ಕಾಗಿ ಇಲ್ಲಿ ಕೆಳಗೆ ಬೇರೆ ಕೆಲವು ಪ್ರಶ್ನೆಗಳು ಇವೆ:
◼ ಆದಾರ್ ತಿಂಗಳಲ್ಲಿ ಯೆರಿಕೋವಿನಲ್ಲಿ ಪುಂಡಿಯ (ಅಗಸೇ ನಾರಿನ) ಕೊಯ್ಲು ಇರುತ್ತಿತ್ತು; ಹಾಗಾದರೆ ಯೆಹೋಶುವ 2:6 ಮತ್ತು ಯೆಹೋಶುವ 3:15 ರ ವಿವರಣೆಗಳು ಬೈಬಲಿನ ನಿಖರತೆಯನ್ನು ಹೇಗೆ ಸ್ಥಿರೀಕರಿಸುತ್ತವೆ?—ಯೆಹೋಶುವ 4:19; 5:11.
◼ ತೆನೆಬಡಿಯುವುದು ಧಾನ್ಯ ಕೊಯ್ಲಿನ ನಂತರ ಬರುತ್ತದೆ, ಹಾಗಾದರೆ ಯಾಜಕಕಾಂಡ 26:5 ರಲ್ಲಿರುವ ವಾಗ್ದಾನವು ವಿಪುಲ ಸಮೃದ್ಧಿಯನ್ನು ಹೇಗೆ ಚಿತ್ರಿಸುತ್ತದೆ?
◼ ದೇವರ ಜನರ ಮೇಲೆ ಬಂದಿರುವ ರಕ್ತಪರಾಧವನ್ನು ತೆಗೆಯಲು ಹತಿಸಲ್ಪಡುವಂತೆ ಬಿಡಲ್ಪಟ್ಟಾಗ ರಿಚ್ಪಳು ದೀರ್ಘಕಾಲದ ತನಕ ಕಾವಲನ್ನು ಮಾಡಿದ್ದಳು ಎಂದು 2 ಸಮುವೇಲನು 21:10 ಹೇಗೆ ಸೂಚಿಸುತ್ತದೆ?
◼ 1 ಸಮುವೇಲನು 12:17 ರಲ್ಲಿ ಗುಡುಗೂ, ಮಳೆಯೂ ದೈವಿಕ ಪ್ರತ್ಯುತ್ತರವಾಗಿದೆ ಎಂದು ಯಾಕೆ ನೀಡಲ್ಪಟ್ಟಿದೆ?—ಜ್ಞಾನೋಕ್ತಿ 26:1.
◼ ಅವಳನ್ನು ಬೋವಜನು ಸತ್ಕರಿಸಿದ್ದು ಕೇವಲ ಕಣ್ಷಿಕ ಪ್ರತಿಕ್ರಿಯೆಯಾಗಿರಲಿಲ್ಲ ಎಂದು ರೂತಳು ಎಣಿಸಲು ಯಾವ ಕಾರಣವಿತ್ತು?—ರೂತಳು 1:22; 2:23.
ಬೈಬಲಿನ ವಾಚನವನ್ನು ಮಾಡುವಾಗ ಈ ತಖ್ತೆಯನ್ನು ಕೈಗೆ ಸುಲಭವಾಗಿ ಸಿಕ್ಕುವಲ್ಲಿ ಯಾಕೆ ಇಡಬಾರದು? (w90 9/1)
ಚಿಸೆವ್ಲ್ ನೈಸಾನ್
25 ಸಮರ್ಪಣೆಯ 14 ಪಸ್ಕ ಹಬ್ಬ
ಹಬ್ಬ 15-21 ಹುಳಿಯಿಲ್ಲದ ರೊಟ್ಟಿ
16 ಪ್ರಥಮ ಫಲಗಳ
ಸಮರ್ಪಣೆ
ಐಯ್ಯಾರ್ ಆದಾರ್
14 ತಡವಾಗಿ ಪಸ್ಕ ಹಬ್ಬ 14, 15 ಪೂರೀಮ್
ಸೀವಾನ್ ತಿಶ್ರಿ
6 ವಾರಗಳ ಹಬ್ಬ 1 ತುತೂರಿ ಧ್ವನಿ
(ಪಂಚಾಶತ್ತಮ) 10 ದೋಷಪರಿಹಾರಕ ದಿನ
15-21 ಪರ್ಣಶಾಲೆಗಳ ಹಬ್ಬ
22 ಶಾಸ್ತ್ರೋಕ್ತವಾಗಿ ಸಭೆಕೂಡುವಿಕೆ
[ಅಧ್ಯಯನ ಪ್ರಶ್ನೆಗಳು]
a 1990 ಕ್ಯಾಲೆಂಡರ್ ಆಫ್ ಜೆಹೋವಸ್ ವಿಟ್ನೆಸಸ್ ನಲ್ಲಿ ಕೂಡಾ ನೋಡಿರಿ.
b 19 ವರ್ಷಗಳ ಚಕ್ರದಲ್ಲಿ ಏಳು ಬಾರಿ ಒಂದು ಹೆಚ್ಚಿನ ಇಲ್ಲವೇ ಅಧಿಕ ಮಾಸವನ್ನು (ವಿಯಾದಾರ್) ಕೂಡಿಸಲಾಗುತಿತ್ತು.
[ಪುಟ 17ರಲ್ಲಿರುವಚಿತ್ರ]
(For fully formatted text, see publication)
ನೈಸಾನ್ (ಅಬೀಬ್)
ಮಾರ್ಚ್-ಏಪ್ರಿಲ್
ಜವೆಗೋದಿ
ಐಯ್ಯಾರ್ (ಜೀವ್)
ಏಪ್ರಿಲ್-ಮೇ
ಗೋದಿ
ಸೀವಾನ್
ಮೇ-ಜೂನ್
ಮೊದಲ ಅಂಜೂರಗಳು
ತಮ್ಮೂಜ್
ಜೂನ್-ಜುಲೈ
ಮೊದಲ ದ್ರಾಕ್ಷೆಗಳು
ಆಬ್
ಜುಲೈ-ಅಗೋಸ್ತ್
ಬೇಸಿಗೆಯ ಹಣ್ಣುಗಳು
ಎಲೂಲ್
ಅಗೋಸ್ತ್-ಸಪ್ಟಂಬರ
ಖರ್ಜೂರ, ದ್ರಾಕ್ಷೆಗಳು, ಅಂಜೂರಗಳು
ತಿಶ್ರಿ (ಇಥಾನಿಮ್)
ಸಪ್ಟಂಬರ-ಒಕ್ಟೋಬರ
ಉಳುವುದು
ಹೆಸಾನ್ವ್ (ಬುಲ್)
ಒಕ್ಟೋಬರ-ನವಂಬರ
ಆಲಿವ್ಗಳು
ಚಿಸೆವ್ಲ್
ನವಂಬರ-ದಶಂಬರ
ಮಂದೆಗಳ ಚಳಿಗಾಲದ ರಕ್ಷಣೆ
ತಿಬೆತ್
ದಶಂಬರ-ಜನವರಿ
ಸಸ್ಯ-ಗಿಡಗಳ ಬೆಳೆಯುವಿಕೆ
ಶೆಬತ್
ಜನವರಿ-ಫೆಬ್ರವರಿ
ಬಾದಾಮಿಯ ಹೂಬಿಡುವಿಕೆ
ಆದಾರ್
ಫೆಬ್ರವರಿ-ಮಾರ್ಚ್
ಜಂಬೀರ ಜಾತಿಯ ಹಣ್ಣುಗಳು
ವಿಯಾದಾರ್
ಮಾರ್ಚ್
[ಪುಟ 18 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[ಪುಟ 19 ರಲ್ಲಿರುವ ಚಿತ್ರ ಕೃಪೆ]
Garo Nalbandian
Pictorial Archive (Near Eastern History) Est.