ಕುಟುಂಬ ಸಂಕಟ—ಸಮಯಗಳ ಒಂದು ಸೂಚನೆ
ಕುಟುಂಬ ಸಂಕಟ—ಅನೇಕರು ಅದನ್ನು ವಿವಾಹದ ಮತ್ತು ಹೆತ್ತವರಾಗಿರುವದರ ಸಾಂಪ್ರದಾಯಿಕ ನಿಯಮಗಳು ಹಳತಾಗಿರುವುದರ ಸೂಚನೆಯೋಪಾದಿ ನೋಡುತ್ತಾರೆ. ಇತರರು ಅದನ್ನು ರಾಜಕೀಯ, ಅರ್ಥಿಕ, ಮತ್ತು ಸಾಮಾಜಿಕ ಪರಿವರ್ತನೆಯ ಒಂದು ಉತ್ಪಾದನೆಯೋಪಾದಿ ನೋಡುತ್ತಾರೆ. ಇನ್ನೂ ಹಲವರು ಅದನ್ನು ಆಧುನಿಕ ತಂತ್ರಕಲೆಯ ಇನ್ನೊಂದು ಆಹುತಿ ಎಂದು ವೀಕ್ಷಿಸುತ್ತಾರೆ. ವಾಸ್ತವದಲ್ಲಿ ಇಂದು ಕುಟುಂಬಗಳು ಸೆಣಸುತ್ತಿರುವ ಸಮಸ್ಯೆಗಳು ಏನೋ ಅಧಿಕ ಅರ್ಥಭರಿತವಾದದ್ದಾಗಿವೆ. ಎರಡನೇ ತಿಮೊಥಿ 3:1-4 ರಲ್ಲಿ ಬೈಬಲಿನ ಮಾತುಗಳನ್ನು ಗಮನಿಸಿರಿ:
“ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನು ಪ್ರೀತಿಸುವವರೂ. . . ಆಗಿರುವರು.”
ಇಂದಿನ ಸಮಸ್ಯೆಗಳ ತೀರ ಮೂಲಕ್ಕೆ ಈ ಮಾತುಗಳು ನಡಿಸುವುದಿಲ್ಲವೆ? ಈ ಲೋಕದ ಕಡೇ ದಿವಸಗಳಲ್ಲಿ ಸಂಭವಿಸುತ್ತವೆ ಎಂದು ಪ್ರವಾದಿಸಲ್ಪಟ್ಟ ಪರಿಸ್ಥಿತಿಗಳ ನೇರ ಫಲಿತಾಂಶವೇ ಸ್ಪಷ್ಟವಾಗಿಗಿ ಇಂದಿನ ಕುಟುಂಬ ಸಂಕಟವಾಗಿದೆ. ಮತ್ತು ಸಂಕಟದ ಈ ಸಮಯಾವಧಿಯು 1914 ರಲ್ಲಿ ಆರಂಭಿಸಿದೆ ಎನ್ನುವ ಮನಗಾಣಿಸುವ ರುಜುವಾತು ಇದೆ.a ಅಂದಿನಿಂದ, ಪಿಶಾಚನಾದ ಸೈತಾನನೆಂದು ಕರೆಯಲ್ಪಡುವ ಅತಿಮಾನವ ಆತ್ಮ ಜೀವಿಯ ಪ್ರಭಾವವು ವಿಶೇಷವಾಗಿ ಮಾರಕವಾಗಿರುತ್ತದೆ.—ಮತ್ತಾಯ 4:8-10; 1 ಯೋಹಾನ 5:19.
ಭೂಪರಿಸರದಲ್ಲಿ 1914 ರಿಂದ ನಿರ್ಬಂಧಿಸಲ್ಪಟ್ಟು, ಸೈತಾನನು “ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾರೌದ್ರವುಳ್ಳವ” ನಾಗಿದ್ದಾನೆ. (ಪ್ರಕಟನೆ 12:7-12) “ಭೂಪರಲೋಕಗಳಲ್ಲಿರುವ ಪ್ರತಿ ಜನವೂ ಹೆಸರು ತೆಗೆದುಕೊಳ್ಳುತ್ತದೋ ಆ” ದೇವರ ಬದ್ಧ ವೈರಿಯಾಗಿ ಸೈತಾನನು ಇರುವುದರಿಂದ, ಕುಟುಂಬಗಳಿಗೆ ಈ ಭೂಮಿಯು ಒಂದು ಅಪಾಯಕರ ಸ್ಥಳವಾಗಿರುವುದರಲ್ಲಿ ಏನಾದರೂ ಆಶ್ಚರ್ಯವಿದೆಯೇ? (ಎಫೆಸ 3:15) ದೇವರಿಂದ ಮಾನವಕುಲವೆಲ್ಲವನ್ನೂ ದೂರತೊಲಗಿಸಲು ಸೈತಾನನು ನಿಶ್ಚಯಿಸಿದ್ದಾನೆ. ಇದನ್ನು ಪೂರೈಸಲು ಸಮಸ್ಯೆಗಳೊಂದಿಗೆ ಕುಟುಂಬಗಳ ಧಾಳಿಮಾಡುವುದಕ್ಕಿಂತ ಬೇರೆ ಯಾವ ಉತ್ತಮ ಮಾರ್ಗವಿದೆ?
ಅಂತಹ ಅತಿಮಾನವ ಧಾಳಿಯಿಂದ ಕುಟುಂಬಗಳನ್ನು ರಕ್ಷಿಸಲು ತಜ್ಞರೆಂದೆಣಿಸಿಕೊಳ್ಳುವವರ ತಿರುಳಿಲ್ಲದ ಕಲ್ಪನೆಗಳಿಗಿಂತಲೂ ಅಧಿಕವಾದದ್ದು ಬೇಕಾಗಿದೆ. ಆದಾಗ್ಯೂ, ಸೈತಾನನ ಕುರಿತು ಬೈಬಲು ಹೇಳುವುದು: “ಅವನ ಯೋಚನೆಗಳನ್ನು ನಾವು ಅರಿಯದವರಲ್ಲವಲ್ಲಾ.” (2 ಕೊರಿಂಥ 2:11) ಅವನು ಧಾಳಿಮಾಡುವದರ ಕೆಲವು ನಿರ್ದಿಷ್ಟ ಮಾರ್ಗಗಳನ್ನು ತಿಳಿಯುವುದರಲ್ಲಿ ಸ್ವಲ್ಪ ಮಟ್ಟಿಗೆ ರಕ್ಷಣೆ ಇದೆ.
ಹಣ ಮತ್ತು ಕೆಲಸ
ಸೈತಾನನ ಧಾಳಿಮಾಡುವ ಅತಿ ಪ್ರಬಲವಾದ ಆಯುಧಗಳಲ್ಲಿ ಒಂದು ಆರ್ಥಿಕ ಒತ್ತಡವಾಗಿದೆ. “ಇವುಗಳು ವ್ಯವಹರಿಸಲು ಕಠಿನವಾದ ಕಾಲಗಳು” (NW) ಯಾ ರಿವೈಸ್ಡ್ ಸ್ಟ್ಯಾಂಡರ್ಡ್ ವರ್ಷನ್ 2 ತಿಮೊಥಿ 3:1ನ್ನು ತರ್ಜುಮಿಸಿದಂತೆ, “ಒತ್ತಡಗಳ ಕಾಲಗಳು” ಆಗಿವೆ. ಅಭಿವೃದ್ಧಿಶೀಲ ದೇಶಗಳಲ್ಲಿ, ನಿರುದ್ಯೋಗ, ಕಡಿಮೆ ಸಂಬಳ, ಮತ್ತು ಮೂಲಭೂತ ಅವಶ್ಯಕತೆಗಳ ಕೊರತೆಯಂತಹ ಸಮಸ್ಯೆಗಳು ಕುಟುಂಬಗಳನ್ನು ಬಹಳಷ್ಟು ಕಷ್ಟಕ್ಕೆ ಒಡ್ಡುತ್ತವೆ. ಆದಾಗ್ಯೂ, ಸಂಬಂಧಿತವಾಗಿ ಸಂಪದ್ಭರಿತ ಅಮೆರಿಕದಲ್ಲೂ, ಆರ್ಥಿಕ ಒತ್ತಡಗಳು ಗಂಭೀರವಾಗಿ ಪರಿಣಾಮವನ್ನು ತಂದಿವೆ. ಅಮೆರಿಕದ ಒಂದು ಸಮೀಕ್ಷೆಯು ಪ್ರಕಟಿಸಿದ್ದೇನಂದರೆ ಕುಟುಂಬದ ತಿಕ್ಕಾಟಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಹಣವಾಗಿದೆ. ಸೀಕ್ರೆಟ್ಸ್ ಆಫ್ ಸ್ಟ್ರಾಂಗ್ ಫಾಮಿಲೀಸ್ ಪುಸ್ತಕವು ವಿವರಿಸುವುದೇನಂದರೆ ಕೆಲಸದ ಬೇಡಿಕೆಗಳನ್ನು ಪೂರೈಸಲಿಕ್ಕಾಗಿ ಕೊಡಲ್ಪಡುವ “ಸಮಯ, ಗಮನ, [ಮತ್ತು] ಶಕ್ತಿಯು” ವೈವಾಹಿಕ ಬದ್ಧತೆಗಳನ್ನು ಕುಂಠಿತಗೊಳಿಸುವ “ಒಂದು ಗುಪ್ತ ಶತ್ರು” ಕೂಡ ಆಗಸಾಧ್ಯವಿದೆ.
ಪರಿಸ್ಥಿತಿಗಳು ಬಹುಸಂಖ್ಯಾತ ಸ್ತ್ರೀಯರು ಉದ್ಯೋಗವನ್ನು ಹುಡುಕುವಂತೆ ಬಲವಂತಮಾಡಿವೆ. ಲೇಖಕ ವ್ಯಾನ್ಸ್ ಪಾಕರ್ಡ್ ವರದಿಸುವುದು: “ಇಷ್ಟರಲ್ಲೇ, ಕಡಿಮೆಪಕ್ಷ ಅಮೆರಿಕದ ಮೂರು ವರ್ಷಗಳಿಗಿಂತ ಕಡಿಮೆ ಪ್ರಾಯದ ಹಸುಗೂಸುಗಳ ಮತ್ತು ದಟ್ಟಡಿಯ ಮಕ್ಕಳ ಕಾಲುಭಾಗದವರಿಗೆ, ಮನೆಯ ಹೊರಗಿನ ಯಾವುದಾದರೊಂದು ಕೆಲಸವನ್ನು ಹಿಡಿದಿರುವ ತಾಯಂದಿರಿರುತ್ತಾರೆ.” ಚಿಕ್ಕ ಮಕ್ಕಳ ಬಹುತೇಕ ತಣಿಸಲ್ಪಡದ ಆವಶ್ಯಕತೆಗಳನ್ನು ಹಾಗೂ ಕೆಲಸವೊಂದನ್ನು ನೋಡಿಕೊಳ್ಳುವುದು ಶಕ್ತಿಗುಂದಿಸುವ, ಬಳಲಿಸುವ ಒಂದು—ಹೆತ್ತವರ ಮತ್ತು ಮಕ್ಕಳ ಮೇಲೆ ಒಂದು ನಕಾರಾತ್ಮಕ ಪರಿಣಾಮಗಳೊಂದಿಗಿನ—ಪ್ರಯತ್ನವಾಗಿರಬಲ್ಲದು. ಪಾಕರ್ಡ್ ಕೂಡಿಸುವುದು, ಅಮೆರಿಕದಲ್ಲಿ ಬೇಕಾಗುವಷ್ಟು ಶಿಶು-ಪಾಲನಾ ಒದಗಿಸುವಿಕೆಗಳ ಕೊರತೆಯ ಕಾರಣ, “ಕೆಲವು ಲಕ್ಷ ಮಕ್ಕಳು ಇಂದು ಅವರ ಆರಂಭದ ವರ್ಷಗಳ ಒಳ್ಳೆಯ ಶುಶ್ರೂಷೆಯಲ್ಲಿ ಮೊಟಕುಗೊಳಿಸಲ್ಪಟ್ಟವರಾಗಿದ್ದಾರೆ.”—ಅವರ್ ಎನ್ಡೇಂಜರ್ಡ್ ಚಿಲ್ಡ್ರೆನ್.
ಕೆಲಸದ ಸ್ಥಳವು ತಾನೇ ಕೆಲವೊಮ್ಮೆ ಕುಟುಂಬದ ಅನ್ಯೋನ್ಯತೆಯನ್ನು ಶಿಥಿಲಗೊಳಿಸುತ್ತದೆ. ಅನೇಕ ಕಾರ್ಮಿಕರು ತಮ್ಮ ಜತೆಕೆಲಸಗಾರರೊಂದಿಗೆ ಅಕ್ರಮ ಲೈಂಗಿಕ ಸಂಬಂಧಕ್ಕೆ ಸೆಳೆಯಲ್ಪಡುತ್ತಾರೆ. ಇನ್ನೂ ಇತರರು ಯಶಸ್ವಿಯ ವ್ಯರ್ಥ ಅನ್ವೇಷಣದಲ್ಲಿ ಒಳಗೂಡಿಸಲ್ಪಟ್ಟು, ಜೀವನೋದ್ಯೋಗದ ಬಡಿಗ್ತಾಗಿ ಅವರ ಕುಟುಂಬ ಜೀವನವನ್ನು ತ್ಯಾಗಮಾಡುತ್ತಾರೆ. (ಹೋಲಿಸಿರಿ ಪ್ರಸಂಗಿ 4:4.) ಒಬ್ಬ ವ್ಯಕ್ತಿಯು ಮಾರಾಟ ಪ್ರತಿನಿಧಿಯೋಪಾದಿ ತನ್ನ ಕೆಲಸದಲ್ಲಿ ಎಷ್ಟೊಂದು ಮುಳುಗಿರುತ್ತಿದ್ದನೆಂದರೆ, ಅವನ ಹೆಂಡತಿಯು ಸ್ವತಃ ತನ್ನನ್ನು “ಕಾರ್ಯತಃ ಏಕ ಹೆತ್ತವಳಾಗಿ” ಇದ್ದೇನೆಂದು ವರ್ಣಿಸುತ್ತಾಳೆ.
ದುರ್ಬಲಗೊಂಡ ವೈವಾಹಿಕ ಸಂಬಂಧಗಳು
ವಿವಾಹ ಸಂಘಟನೆಯು ಸಹ ತಾನೇ ಧಾಳಿಗೊಡ್ಡಲ್ಪಟ್ಟಿದೆ. ದ ಇಂಟಿಮೆಟ್ ಎನ್ವೈರನ್ಮೆಂಟ್ ಪುಸ್ತಕವು ಹೇಳುವುದು: “ಗತಕಾಲದಲ್ಲಿ, ವಿವಾಹದ ವಿರುದ್ಧ ವಿವಾಹ ಸಂಗಾತಿಗಳಲ್ಲಿ ಯಾರಾದರೊಬ್ಬರು ಏನಾದರೂ ಘೋರ ಅಪರಾಧ—ವ್ಯಭಿಚಾರ, ಕ್ರೂರತನ, ಅತಿ ದುರ್ಲಕ್ಷ್ಯ—ಗೈದ ಹೊರತು ಜೋಡಿಯು ವಿವಾಹಿತರಾಗಿಯೇ ಉಳಿಯುವುದು ಎಂದು ನಿರೀಕ್ಷಿಸಲಾಗುತ್ತಿತ್ತು. ಈಗ ಹೆಚ್ಚಿನ ಜನರು ವಿವಾಹದ ಉದ್ದೇಶ ಒಂದು ವೈಯಕ್ತಿಕ ಪೂರೈಕೆಯಾಗಿ ನೋಡುತ್ತಾರೆ.” ಹೌದು, ವಿವಾಹವನ್ನು ಅಸಂತೋಷದ, ಬೇಸರದ, ಯಾ ಒಂಟಿಗತನದ ಪ್ರತ್ಯುಪಾಯದೋಪಾದಿ ಪರಿಗಣಿಸಲ್ಪಡುತ್ತದೆಯೇ ಹೊರತು ಇನ್ನೊಬ್ಬ ವ್ಯಕ್ತಿಯೊಂದಿಗೆ ಜೀವನಪರ್ಯಂತದ ಬದ್ಧತೆಯೋಪಾದಿ ಅಲ್ಲ. ವಿವಾಹದಿಂದ ನೀವೇನು ಪಡೆಯುವಿರಿ ಎಂಬುದು ಈಗಿನ ಕೇಂದ್ರಬಿಂದುವಾಗಿದೆಯೇ ಹೊರತು, ನೀವು ಅದಕ್ಕೆ ಏನನ್ನು ಕೂಡಿಸುವಿರಿ ಎಂಬುದಲ್ಲ. (ವ್ಯತ್ಯಾಸನೋಡಿರಿ ಅ.ಕೃತ್ಯಗಳು 20:35.) ಈ “ವಿವಾಹದ ಸುತ್ತಲಿನ ಮೌಲ್ಯಗಳ ಪ್ರಧಾನ ಪರಿವರ್ತನೆಯು” ವೈವಾಹಿಕ ಸಂಬಂಧಗಳನ್ನು ಬಹಳವಾಗಿ ದುರ್ಬಲಗೊಳಿಸಿದೆ. ಅವರ ಎಟಕಿನೊಳಗೆ ವೈಯಕ್ತಿಕ ಪೂರೈಕೆಯು ನಿಲುಕದೆ ಇರುವಾಗ, ದಂಪತಿಗಳು ಆಗಿಂದಾಗ್ಗೆ ಶೀಘ್ರ ಪರಿಹಾರದೋಪಾದಿ ವಿವಾಹವಿಚ್ಛೇದನವನ್ನು ಹಿಡಿದುಕೊಳ್ಳುತ್ತಾರೆ.
“ಕಡೇ ದಿವಸಗಳಲ್ಲಿ” ಜನರು ಪ್ರವಾದನಾರೂಪವಾಗಿ ಬೈಬಲಿನಲ್ಲಿ “ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು” ಎಂದು ವರ್ಣಿಸಲ್ಪಟ್ಟಿದ್ದಾರೆ. (2 ತಿಮೊಥೆಯ 3:4, 5) ವಿವಾಹವನ್ನು ಶಿಥಿಲಗೊಳಿಸುವುದರಲ್ಲಿ ಧರ್ಮದ ಅವನತಿಯು ಒಂದು ಪಾತ್ರವನ್ನು ಆಡಿದೆ ಎಂದು ಅನೇಕ ತಜ್ಞರು ಭಾವಿಸುತ್ತಾರೆ. ದ ಕೇಸ್ ಅಗ್ನೆಯ್ಸ್ ಡಿವೋರ್ಸ್ ಎಂಬ ತನ್ನ ಪುಸ್ತಕದಲ್ಲಿ ಡಾ. ಡಯಾನ್ ಮೆಡ್ವೆಡ್ ಬರೆದದ್ದು: “ಅನೇಕ ಧರ್ಮಗಳಿಗನುಸಾರ, ವಿವಾಹವು ಶಾಶ್ವತವಾಗಿರತಕ್ಕದ್ದು ಎಂದು ದೇವರು ಹೇಳಿದ್ದಾನೆ. ನೀವು ದೇವರ ಕುರಿತು ನಿಶಿತ್ಚಾಭಿಪ್ರಾಯವಿಲದ್ಲಿರುವುದಾದಲ್ಲಿ, ಯಾ ಅವನನ್ನು ನಂಬದಿರುವಲ್ಲಿ, ಆಗ ನೀವೇನು ಬಯಸುತ್ತೀರೋ ಅದನ್ನು ನೀವು ಮಾಡುವಿರಿ.” ಫಲಿತಾಂಶವಾಗಿ, ವಿವಾಹದಲ್ಲಿ ಸಮಸ್ಯೆಗಳು ಇದ್ದಾಗ, ದಂಪತಿಗಳು ಸ್ವಸ್ಥಕರ ಪರಿಹಾರಗಳನ್ನು ಹುಡುಕುವುದಿಲ್ಲ. “ಅವರು ಇಡೀ ವಿವಾಹವನ್ನೇ ಅವಸರದಿಂದ ಕತ್ತರಿಸುತ್ತಾರೆ.”
ಯುವಕರು ಧಾಳಿಗೊಳಗಾಗಿದ್ದಾರೆ
ಇಂದಿನ ಒತ್ತಡಗಳ ಕೆಳಗೆ ಮಕ್ಕಳು ತೊನೆದಾಡುತ್ತಿದ್ದಾರೆ. ಅವರ ಸ್ವಂತ ಹೆತ್ತವರಿಂದಲೇ ಬಹು ಸಂಖ್ಯೆಯಲ್ಲಿ ಮಕ್ಕಳು ಬಲಾತ್ಕಾರದಿಂದ ಬಡಿಯಲ್ಪಟ್ಟಿದ್ದಾರೆ ಮತ್ತು ಮೌಖಿಕವಾಗಿ ಯಾ ಲೈಂಗಿಕವಾಗಿ ದುರುಪಯೋಗಿಸಲ್ಪಟ್ಟಿದ್ದಾರೆ. ವಿವಾಹವಿಚ್ಛೇದನದ ಮೂಲಕ, ಲಕ್ಷಾಂತರ ಮಕ್ಕಳು ಇಬ್ಬರು ಹೆತ್ತವರ ಪ್ರೀತಿಯ ಪ್ರಭಾವವಿಲ್ಲದವರಾಗಿ ವಂಚಿಸಲ್ಪಟ್ಟಿದ್ದಾರೆ, ಮತ್ತು ಹೆತ್ತವರ ವಿವಾಹವಿಚ್ಛೇದನದ ವೇದನೆಯು ಕೆಲವೊಮ್ಮೆ ಜೀವನವಿಡೀ ಇರುತ್ತದೆ.
ಯುವಕರು ಬಲಶಾಲೀ ಪ್ರಭಾವಗಳಿಂದ ಸತತವಾಗಿ ಹೊಡೆಯಲ್ಪಡುತ್ತಾರೆ. ಅಮೆರಿಕದ ಯುವಕನೊಬ್ಬನು 14 ವರ್ಷ ಪ್ರಾಯದವನಾಗುವುದರೊಳಗೆ, ಕೇವಲ ಟೆಲಿವಿಶನ್ ನೋಡುವುದರ ಮೂಲಕ, 18,000 ಕೊಲೆಗಳನ್ನು, ಮತ್ತು ಬಲಾತ್ಕಾರ, ನಿಷಿದ್ಧ ಲೈಂಗಿಕತೆ, ಕ್ರೌರ್ಯ ಕಾಮವಿಕಾರ, ಮತ್ತು ಪಾತಕದ ಅಗಣಿತ ಇತರ ವಿಧಗಳನ್ನು ವೀಕ್ಷಿಸಿರುವನು. ಯುವಕರ ಮೇಲೆ ಸಂಗೀತವು ಸಹ ಮಹಾ ಶಕ್ತಿಯನ್ನು ಹಾಕುತ್ತದೆ, ಮತ್ತು ಅದರಲ್ಲಿ ಹೆಚ್ಚಿನದ್ದು ಗಾಬರಿಗೊಳಿಸುವ ರೀತಿಯಲ್ಲಿ ಸೂಚಕವಾದದ್ದೂ, ಲೈಂಗಿಕವಾಗಿ ಮುಚ್ಚುಮರೆಯಿಲ್ಲದ್ದೂ ಯಾ ಅದರಲ್ಲಿ ಸೈತಾನಿಕವಾಗಿರುವಂತಹದ್ದೂ ಕೂಡ ಆಗಿದೆ. ದೇವರಲ್ಲಿ ಮತ್ತು ಬೈಬಲಿನಲ್ಲಿ ನಂಬಿಕೆಯನ್ನು ಶಿಥಿಲಗೊಳಿಸುವ ವಿಕಾಸವಾದದಂತಹ ಕಲ್ಪನೆಗಳಿಗೆ ಶಾಲೆಗಳಲ್ಲಿ ಯುವಕರು ಒಡ್ಡಲ್ಪಡುತ್ತಾರೆ. ವಿವಾಹಪೂರ್ವದ ಲೈಂಗಿಕತೆ ಮತ್ತು ಮದ್ಯಪಾನ ಯಾ ಮಾದಕೌಷಧದ ದುರುಪಯೋಗದಲ್ಲಿ ಭಾಗಿಗಳಾಗುವಂತೆ, ಶಾಲಾಸಂಗಾತಿಗಳ ಒತ್ತಡವು ಅನೇಕರನ್ನು ಪ್ರಚೋದಿಸುತ್ತದೆ.
ಕುಟುಂಬ ಸಂಕಟದ ಮೂಲಗಳು
ಆದಕಾರಣ, ಕುಟುಂಬಗಳ ಮೇಲಿನ ಆಕ್ರಮಣವು ವ್ಯಾಪ್ತಿಯಲ್ಲಿ ವಿಸ್ತಾರವಾಗಿದ್ದು, ಧ್ವಂಸಕಾರಿಯಾಗಿರಬಲ್ಲದು. ಪಾರಾಗಲು ಕುಟುಂಬಗಳಿಗೆ ಯಾವುದು ಸಹಾಯಮಾಡಬಲ್ಲದು? ಕುಟುಂಬ ಸಲಹೆಗಾರ ಜೋನ್ ಬ್ರಾಡ್ಶಾ ಸೂಚಿಸುವುದು: “ಕಳೆದ 150 ವರ್ಷಗಳಲ್ಲಿ ಹೆತ್ತವರಾಗಿ ಮಾಡುವ ನಮ್ಮ ಕೆಲಸದ ನಿಯಮಗಳನ್ನು ಕಾಲೋಚಿತವಾಗಿ ಸರಿಹೊಂದಿಸಿಲ್ಲ. . . . ಹಳೆಯ ನಿಯಮಗಳು ಈಗ ಕಾರ್ಯಸಾಧಕವಾಗಿಲ್ಲವೆಂದು ನನ್ನ ನಂಬಿಕೆ.” ಆದಾಗ್ಯೂ, ಹೆಚ್ಚು ಮಾನವ-ನಿರ್ಮಿತ ನಿಯಮಗಳು ಪರಿಹಾರವಾಗಿರುವುದಿಲ್ಲ. ಕುಟುಂಬದ ಮೂಲಕರ್ತನು ಯೆಹೋವ ದೇವರು. ನಮ್ಮ ವೈಯಕ್ತಿಕ ಸಂತೋಷದಲ್ಲಿ ಕುಟುಂಬ ಜೀವನವು ಯಾವ ಪ್ರಮುಖ ಪಾತ್ರವನ್ನು ಆಡುತ್ತದೆ ಮತ್ತು ಕುಟುಂಬವೊಂದನ್ನು ಸಂತೋಷ ಮತ್ತು ಬಲವಾದದ್ದಾಗಿ ಮಾಡಲು ಏನು ಬೇಕು ಎಂಬುದು ಬೇರೆ ಯಾರಿಗೂ ತಿಳಿದಿರುವುದಕ್ಕಿಂತಲೂ ಚೆನ್ನಾಗಿ ಆತನಿಗೆ ತಿಳಿದದೆ. ಕುಟುಂಬ ಸಂಕಟಕ್ಕೆ ಪರಿಹಾರವನ್ನು ಆತನ ವಾಕ್ಯವಾದ ಬೈಬಲು ಒದಗಿಸುವುದು ನಮಗೆ ಅಚ್ಚರಿಯನ್ನುಂಟುಮಾಡಬೇಕೋ?
ಕುಟುಂಬ ಜೀವನವು ಅಡದ್ಡಾರಿ ಹಿಡಿದಿದ್ದ ವಿಧವನ್ನು ಆ ಪುರಾತನ ಪುಸ್ತಕವು ವಿವರಿಸುತ್ತದೆ. ಮೊದಲ ಮಾನವ ದಂಪತಿಗಳಾದ ಆದಾಮ ಮತ್ತು ಹವ್ವರು, ಒಂದು ಸುಂದರವಾದ ಉದ್ಯಾನದ ಪರಿಸರದಲ್ಲಿ ಇಡಲ್ಪಟ್ಟಿದ್ದರು ಮತ್ತು ಭೂಮಿಯನ್ನು ಭೌಗೋಳಿಕ ಪ್ರಮೋದವನವನ್ನಾಗಿ ಪರಿವರ್ತಿಸುವ ಪ್ರತಿಫಲವನ್ನೀಯುವ ಪಂಥಾಹ್ವಾನ ಅವರಿಗೆ ನೀಡಲ್ಪಟ್ಟಿತ್ತು. ಕುಟುಂಬದ ಶಿರಸ್ಸಾಗಿ ಆದಾಮನು ಇರಬೇಕೆಂದು ದೇವರು ಆಜ್ಞೆಯನ್ನಿತ್ತಿದ್ದನು. ಅವನ “ಸಹಾಯಕ”ಳಾಗಿ ಯಾ “ಪೂರಕ”ಳಾಗಿ ಅವನ ಶಿರಸ್ಸುತನದೊಂದಿಗೆ ಹವ್ವಳು ಸಹಕರಿಸಬೇಕಿತ್ತು. ಆದರೆ ಹವ್ವಳು ಈ ಏರ್ಪಾಡಿನ ವಿರುದ್ಧ ದಂಗೆಯೆದಳ್ದು. ಅವಳು ತನ್ನ ಗಂಡನ ಶಿರಸ್ಸುತನವನ್ನು ತನ್ನದಾಗಿ ಮಾಡಿಕೊಂಡಳು ಮತ್ತು ದೇವರು ಅವರ ಮೇಲೆ ಇಟ್ಟ ಒಂದು ಮತ್ತು ಏಕಮಾತ್ರ ನಿಷೇಧಕ್ಕೆ ಅವಿಧೇಯಳಾದಳು. ತದನಂತರ ಆದಾಮನು ತನ್ನ ಶಿರಸ್ಸುತನವನ್ನು ತೊರೆದನು ಮತ್ತು ಈ ದಂಗೆಯಲ್ಲಿ ಅವಳೊಂದಿಗೆ ಜತೆಗೂಡಿದನು.—ಆದಿಕಾಂಡ 1:26–3:6.
ದೇವರ ಏರ್ಪಾಡಿನ ಈ ಅಡಹ್ಡಾದಿಯ ವಿನಾಶಕಾರಿ ಪರಿಣಾಮಗಳು ಬಲುಬೇಗನೇ ತೋರಿಬಂದವು. ಶುದ್ಧರೂ, ನಿರಪರಾಧಿಗಳೂ ಇನ್ನು ಮುಂದೆ ಆಗಿರದೆ, ಆದಾಮ ಮತ್ತು ಹವ್ವರು ನಾಚಿಕೆ ಮತ್ತು ದೋಷದೊಂದಿಗೆ ಪ್ರತಿಕ್ರಿಯಿಸಿದರು. ಉಜ್ವಲರೀತಿಯಲ್ಲಿ ಹಾಗೂ ಪದ್ಯರೂಪದಲ್ಲಿ ತನ್ನ ಪತ್ನಿಯನ್ನು ವರ್ಣಿಸಿದ ಆದಾಮನು ಈಗ ತಣ್ಣಗೆ ಅವಳನ್ನು ‘ನೀನು ಕೊಟ್ಟ ಸ್ತ್ರೀ’ ಎಂದು ಸೂಚಿಸಿದನು. ಆ ನಕಾರಾತ್ಮಕ ಹೇಳಿಕೆಯು ವೈವಾಹಿಕ ದುರಂತದ ಕೇವಲ ಆರಂಭವಾಗಿತ್ತು. ತನ್ನ ಶಿರಸ್ಸುತನವನ್ನು ಪುನಃ ಸಂಪಾದಿಸುವ ಆದಾಮನ ವ್ಯರ್ಥ ಪ್ರಯತ್ನಗಳು ಅವನು ‘ಅವಳ ಮೇಲೆ ಒಡೆತನ’ ನಡಿಸುವುದರಲ್ಲಿ ಪರಿಣಮಿಸಲಿತ್ತು. ಇದಕ್ಕೆ ಬದಲಾಗಿ ಹವ್ವಳಿಗೆ ತನ್ನ ಗಂಡನ ಮೇಲೆ “ಆಶೆ” ಇರುವುದು, ಪ್ರಾಯಶಃ ಅತಿರೇಕ ಯಾ ಅಸಮತೂಕ ರೀತಿಯಲ್ಲಿರಬಹುದು.—ಆದಿಕಾಂಡ 2:23; 3:7-16.
ಆದಾಮ ಮತ್ತು ಹವ್ವರ ವೈವಾಹಿಕ ಕಲಹವು ಅವರ ಸಂತಾನದ ಮೇಲೆ ಹಾನಿಕರ ಪ್ರಭಾವವನ್ನು ಹಾಕಿದರ್ದಲ್ಲಿ ಆಶ್ಚರ್ಯವೇನೂ ಇಲ್ಲ. ಅವರ ಮೊದಲ ಮಗ, ಕಾಯಿನನು ನಿಷ್ಕರುಣಿಯಾದ ಕೊಲೆಗಾರನಾದನು. (ಆದಿಕಾಂಡ 4:8) ಕಾಯಿನನ ಸಂತತಿಯವನಾದ ಲೆಮೆಕನು ದಾಖಲಾತಿ ಪಡೆದ ಮೊದಲ ಬಹುಪತ್ನೀಕನಾಗುವುದರ ಮೂಲಕ ಕುಟುಂಬ ಜೀವನದ ಅವನತಿಗೆ ಕೂಡಿಸಿದನು. (ಆದಿಕಾಂಡ 4:19) ಪಾಪ ಮತ್ತು ಮರಣದ ಒಂದು ಪೂರ್ವಾರ್ಜಿತ ಆಸ್ತಿಯನ್ನು ಆದಾಮ ಮತ್ತು ಹವ್ವರು ನಮಗೆ ದಾಟಿಸಿದ್ದು ಮಾತ್ರವಲ್ಲದೆ, ಅಂದಿನಿಂದ ಮಾನವ ಕುಲದ ದೆಸೆಯಾಗಿರುವ ಒಂದು ಅನಾರೋಗ್ಯ ಕುಟುಂಬ ನಮೂನೆಯನ್ನು ದಾಟಿಸಿದರು. ಈ ಕಡೇ ದಿವಸಗಳಲ್ಲಿ, ಕುಟುಂಬ ಅನೈಕ್ಯತೆಯು ಎಲ್ಲಾ ಸಮಯಗಳ ಗರಿಷ್ಟತೆಯನ್ನು ತಲುಪಿದೆ.
ಯಶಸ್ವಿಯಾಗುತ್ತಿರುವ ಕುಟುಂಬಗಳು
ಆದಾಗ್ಯೂ, ಎಲ್ಲಾ ಕುಟುಂಬಗಳು ಇಂದಿನ ಒತ್ತಡಗಳ ಕೆಳಗೆ ಮುರಿದು ಹೋಗುವುದಿಲ್ಲ. ಉದಾಹರಣೆಗೆ, ಒಬ್ಬ ಗಂಡನು ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರೊಂದಿಗೆ ಅಮೆರಿಕದ ಒಂದು ಸಣ್ಣ ಸಮುದಾಯದಲ್ಲಿ ಜೀವಿಸುತ್ತಾನೆ. ಅವರ ಅನೇಕ ನೆರೆಯವರಲ್ಲಿ ಹೆತ್ತವರ ಮತ್ತು ಅವರ ಮಕ್ಕಳ ನಡುವಣ ಸಂತತಿ ಅಂತರವು ಇರುವುದಾದರೂ, ಅವನು ಮತ್ತು ಅವನ ಪತ್ನಿಯ ನಡುವೆ ಅದಿರುವುದಿಲ್ಲ, ಯಾ ಅವರ ಪುತ್ರಿಯರು ಮಾದಕೌಷಧಗಳ ಯಾ ಲೈಂಗಿಕತೆಯ ಪ್ರಯೋಗವನ್ನು ಮಾಡಬಹುದು ಎಂಬ ಚಿಂತೆ ಅವರಿಗೆ ಇರುವದಿಲ್ಲ. ಸೋಮವಾರ ಸಾಯಂಕಾಲಗಳಲ್ಲಿ, ಇತರ ಯುವಕರು ಟೀವಿಗೆ ಅಂಟಿಕೊಂಡಿರುವುದಾದರೆ, ಅವರ ಇಡೀ ಕುಟುಂಬವು ಒಂದು ಬೈಬಲ್ ಚರ್ಚೆಗಾಗಿ ಊಟದ ಮೇಜಿನ ಸುತ್ತಲೂ ಒಟ್ಟುಗೂಡುತ್ತದೆ. “ಸೋಮವಾರ ಸಾಯಂಕಾಲ ನಮಗೆಲ್ಲರಿಗೆ ಒಟ್ಟಿಗೆ ಇರಲು ಮತ್ತು ಮಾತಾಡಲು ಇರುವ ಒಂದು ರಾತ್ರಿಯಾಗಿದೆ,” ಎಂದು ಅವನು ವಿವರಿಸುತ್ತಾನೆ. “ನಮ್ಮೊಂದಿಗೆ ಅವರ ಸಮಸ್ಯೆಗಳನ್ನು ಮಾತಾಡಲು ನಮ್ಮ ಪುತ್ರಿಯರು ಸ್ವತಂತ್ರ ಭಾವದವರಾಗಿದ್ದಾರೆ.”
ಇನ್ನೊಂದು ಫಕ್ಕದಲ್ಲಿ, ನ್ಯೂ ಯೋರ್ಕ್ ಸಿಟಿಯಲ್ಲಿ ಒಬ್ಬ ಏಕ ಹೆತ್ತವಳಿದ್ದಾಳೆ, ಅವಳು ಕೂಡ ತನ್ನ ಇಬ್ಬರು ಪುತ್ರಿಯರೊಂದಿಗೆ ಅಸಾಮಾನ್ಯವಾದ ಕುಟುಂಬ ಸಾಮರಸ್ಯದಲ್ಲಿ ಆನಂದಿಸುತ್ತಿದ್ದಾಳೆ. ಅವಳ ಗುಟ್ಟು? “ವಾರಾಂತ್ಯದ ತನಕ ನಾವು ಟೀವಿಯನ್ನು ಬಂದು ಮಾಡಿಡುತ್ತೇವೆ,” ಎಂದು ಅವಳು ವಿವರಿಸುತ್ತಾಳೆ. “ಪ್ರತಿದಿನ ಬೈಬಲ್ ವಚನವೊಂದರ ಚರ್ಚೆ ನಮಗಿದೆ. ಕುಟುಂಬ ಬೈಬಲ್ ಚರ್ಚೆಗಾಗಿ ಕೂಡ ಒಂದು ಸಾಯಂಕಾಲವನ್ನು ನಾವು ಪ್ರತ್ಯೇಕವಾಗಿ ಇಡುತ್ತೇವೆ.”
ಎರಡೂ ಕುಟುಂಬಗಳೂ ಯೆಹೋವನ ಸಾಕ್ಷಿಗಳಾಗಿವೆ. ಕುಟುಂಬಗಳಿಗಾಗಿ ಬೈಬಲಿನಲ್ಲಿ ನಿರ್ದೇಶಿಸಲ್ಪಟ್ಟ ಬುದ್ಧಿವಾದವನ್ನು ಅವರು ಅನುಸರಿಸುತ್ತಾರೆ—ಮತ್ತು ಅದು ಕಾರ್ಯಸಾಧಿಸುತ್ತದೆ. ಆದರೂ, ಅವರೇನೂ ಅಪವಾದಗಳಲ್ಲ. ಅವರಂತೆಯೇ, ಆ ಪುಸ್ತಕದಲ್ಲಿ ಕಂಡುಬರುವ ಕುಟುಂಬ ಜೀವನಕ್ಕಾಗಿರುವ ನಿಯಮಗಳನ್ನು ಅನ್ವಯಿಸುವುದರ ಮೂಲಕ ಒಳ್ಳೆಯ ಫಲಿತಾಂಶಗಳನ್ನು ಪಡೆದಿರುವ ನೂರಾರು ಸಾವಿರ ಕುಟುಂಬಗಳು ಇವೆ.b ಈ ನಿಯಮಗಳು ಏನು? ನಿಮಗೂ, ನಿಮ್ಮ ಕುಟುಂಬಕ್ಕೂ ಅವುಗಳು ಹೇಗೆ ಪ್ರಯೋಜನದಾಯಕವಾಗಿರಬಲ್ಲವು? ಇದಕ್ಕೆ ಉತ್ತರವಾಗಿ ಮುಂದಿನ ಪುಟದಲ್ಲಿ ಆರಂಭವಾಗುವ ಲೇಖನಗಳನ್ನು ಗಮನಿಸುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.
[ಅಧ್ಯಯನ ಪ್ರಶ್ನೆಗಳು]
a ಕಡೇ ದಿವಸಗಳು 1914 ರಲ್ಲಿ ಆರಂಭಿಸಿವೆ ಎಂಬುದರ ಅಧಿಕ ರುಜುವಾತಿಗಾಗಿ ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕದ 18 ನೆಯ ಅಧ್ಯಾಯವನ್ನು ನೋಡಿರಿ.
b ಒಂದು ಉಚಿತ ಬೈಬಲ್ ಅಧ್ಯಯನದ ಮೂಲಕ, ಕುಟುಂಬದಲ್ಲಿ ಬೈಬಲ್ ಸೂತ್ರಗಳನ್ನು ಅನ್ವಯಿಸಲು ವೈಯಕ್ತಿಕ ಸಹಾಯವನ್ನು ಯೆಹೋವನ ಸಾಕ್ಷಿಗಳು ನೀಡುತ್ತಾರೆ. ಈ ಪತ್ರಿಕೆಯ ಪ್ರಕಾಶಕರಿಗೆ ಬರೆಯುವುದರ ಮೂಲಕ ಅವರನ್ನು ಸಂಪರ್ಕಿಸಸಾಧ್ಯವಿದೆ.
[ಪುಟ 4 ರಲ್ಲಿರುವ ಚಿತ್ರ]
ನ್ಯೂನ ಆರ್ಥಿಕ ಪರಿಸ್ಥಿತಿಗಳು ಪ್ರಗತಿಶೀಲ ದೇಶಗಳಲ್ಲಿರುವ ಕುಟುಂಬಗಳ ಸಂಕಟಕ್ಕೆ ಬಹಳಷ್ಟು ಕಾರಣವಾಗುತ್ತವೆ
[ಕೃಪೆ]
U.S. Navy photo
[ಪುಟ 7 ರಲ್ಲಿರುವ ಚಿತ್ರ]
ಬೈಬಲ್ ಸೂತ್ರಗಳನ್ನು ಅನ್ವಯಿಸುವುದರ ಮೂಲಕ ಅನೇಕ ಕುಟುಂಬಗಳು ಇಂದಿನ ಒತ್ತಡಗಳನ್ನು ಪ್ರತಿರೋಧಿಸುತ್ತಾರೆ