ನೀವು ಕ್ರೈಸ್ತ ಕೂಟಗಳಲ್ಲಿ ಉಪಸ್ಥಿತರಾಗುವುದು ಅವಶ್ಯವಾಗಿರುವುದರ ಕಾರಣ
ದಕ್ಷಿಣ ಅಮೆರಿಕದಲ್ಲಿ ವಾಸಿಸುತ್ತಿರುವ ರೊಜಾರಿಯೊ, ಅನೇಕ ತಿಂಗಳುಗಳ ವರೆಗೆ ಎಲಿಜಬೆತ್ಳೊಂದಿಗೆ ಬೈಬಲನ್ನು ಅಭ್ಯಾಸಿಸುವುದರಲ್ಲಿ ಆನಂದಿಸಿದಳು. ದೇವರ ರಾಜ್ಯದ ಕುರಿತು ಮತ್ತು ಭೂಮಿಯ ಮೇಲೆ ಅದು ಹೇಗೆ ಪರದೈಸದಂತಹ ಪರಿಸ್ಥಿತಿಯನ್ನು ತರುತ್ತದೆಂದು ಕಲಿಯಲು ರೊಜಾರಿಯೊಳನ್ನು ರೋಮಾಂಚನಗೊಳಿಸಿತು. ಆದರೂ, ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗಲು ಅವಳನ್ನು ಎಲಿಜಬೆತಳು ಆಮಂತ್ರಿಸಿದಾಗೆಲ್ಲಾ, ಅವಳು ನಿರಾಕರಿಸುತ್ತಿದ್ದಳು. ಸಭಾ ಕೂಟಗಳನ್ನು ಹಾಜರಾಗದೆ, ಬೈಬಲನ್ನು ಮನೆಯಲ್ಲಿಯೇ ಅಭ್ಯಾಸ ಮಾಡಬಹುದು ಮತ್ತು ಅದು ಏನನ್ನು ಹೇಳುತ್ತದೋ ಅದನ್ನು ಕಾರ್ಯರೂಪಕ್ಕೆ ಹಾಕಬಹುದು ಎಂದವಳು ಭಾವಿಸಿದಳು. ಕ್ರೈಸ್ತ ಕೂಟಗಳು ನಿಜವಾಗಿಯೂ ನಿಮ್ಮನ್ನು ಪ್ರಯೋಜನಪಡಿಸುತ್ತವೊ ಎಂದು ನೀವು ಸಹ ಆಶ್ಚರ್ಯಗೊಂಡಿದ್ದೀರೋ? ತನ್ನ ಜನರು ಒಟ್ಟಿಗೆ ಜತೆಗೂಡುವಂತೆ ದೇವರು ಯಾಕೆ ಏರ್ಪಡಿಸುತ್ತಾನೆ?
ಪ್ರಥಮ ಶತಮಾನದಲ್ಲಿ ಕ್ರೈಸ್ತರು ಅವರ ಸುತ್ತಲೂ ಇದ್ದ ಜನರಿಂದ ಬಹಳ ಭಿನ್ನರಾಗಿದ್ದ ಕಾರಣದಿಂದ, ಅವರ ಪಾರಾಗುವಿಕೆಗೆ ಯೋಗ್ಯ ಸಹವಾಸವು ಅತ್ಯಾವಶ್ಯಕವಾಗಿತ್ತು. ಆದಿ ಕ್ರೈಸ್ತರ ಒಂದು ಸಭೆಗೆ ಅಪೊಸ್ತಲ ಪೌಲನು ಬರೆದದ್ದು: ‘ವಕ್ರಬುದ್ಧಿಯುಳ್ಳ ಮೂರ್ಖ ಜಾತಿಯ ಮಧ್ಯದಲ್ಲಿ ನೀವು ನಿರ್ದೋಷಿಗಳೂ ಯಥಾರ್ಥ ಮನಸ್ಸುಳ್ಳವರೂ ಆಗಿದ್ದು ಲೋಕದೊಳಗೆ ಹೊಳೆಯುವ ಜ್ಯೋತಿರ್ಮಂಡಲಗಳಂತೆ ಕಾಣಿಸುವವರಾಗಿದ್ದೀರಲ್ಲಾ.’ (ಫಿಲಿಪ್ಪಿ 2:15 NW ) ಯೂದಾಯದಲ್ಲಿ ಕ್ರೈಸ್ತರಿಗೆ ವಿಶೇಷವಾಗಿ ಕಷ್ಟ ಸಮಯ ಬಂದಿತ್ತು, ಮತ್ತು ಅವರಿಗೆ ಪೌಲನು ಬರೆದದ್ದು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟು ಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.” (ಇಬ್ರಿಯ 10:24, 25) ಸಭೆಯಾಗಿ ಕೂಡಿಕೊಳ್ಳುವುದರ ಮೂಲಕ ನಾವು ಒಬ್ಬರನ್ನೊಬ್ಬರು ಪ್ರೀತಿಸುವುದು ಮತ್ತು ಸತ್ಕಾರ್ಯ ಮಾಡುವಂತೆ ಪ್ರೇರೇಪಿಸುವುದು ಹೇಗೆ?
ಕ್ರೈಸ್ತರು ಒಬ್ಬರನ್ನೊಬ್ಬರು “ಹರಿತ” ಮಾಡುವ ವಿಧ
ಪೌಲನು ಉಪಯೋಗಿಸಿದ ಮತ್ತು “ಪ್ರೇರಿಸು” ಎಂದು ಭಾಷಾಂತರವಾಗಿರುವ ಗ್ರೀಕ್ ಪದದ ಅಕ್ಷರಾರ್ಥವು “ಹರಿತಗೊಳಿಸುವಿಕೆ” ಎಂದಾಗಿದೆ. ಕ್ರೈಸ್ತರು ಒಬ್ಬರನ್ನೊಬ್ಬರು “ಹರಿತಗೊಳಿಸುವುದು” ಹೇಗೆ ಎಂಬುದನ್ನು ಒಂದು ಬೈಬಲ್ ಜ್ಞಾನೋಕ್ತಿ ಹೀಗೆ ಹೇಳಿ ವಿವರಿಸುತ್ತದೆ: “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು.” (ಜ್ಞಾನೋಕ್ತಿ 27:17; ಪ್ರಸಂಗಿ 10:10) ಕ್ರಮವಾಗಿ ಹರಿತಗೊಳಿಸಲು ಅವಶ್ಯವಿರುವ ಉಪಕರಣಗಳಂತೆ ನಾವಿದ್ದೇವೆ. ಯೆಹೋವನಿಗಾಗಿ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಮತ್ತು ನಾವು ನಮ್ಮ ನಂಬಿಕೆಯ ಆಧಾರದ ಮೇರೆಗೆ ನಿರ್ಣಯಗಳನ್ನು ಮಾಡುವುದಕ್ಕೆ ಲೋಕದಿಂದ ಭಿನ್ನರಾಗಿರುವ ಅರ್ಥವಿರುವುದರಿಂದ, ನಾವು ಬಹುಭಾಗದವರಿಗಿಂತ ಭಿನ್ನವೋ ಎಂಬಂಥ ಒಂದು ಪಥವನ್ನು ಸಂತತವಾಗಿ ತೆಗೆದುಕೊಳ್ಳಬೇಕು.
ಪ್ರತ್ಯೇಕವಾಗಿರಲು ಸತತವಾದ ಪ್ರಯತ್ನವು ಸತ್ಕಾರ್ಯಗಳ ಕಡೆಗಿರುವ ನಮ್ಮ ಹುರುಪನ್ನು ಮೊಂಡುಮಾಡಬಲ್ಲದು. ಆದರೆ ಯೆಹೋವನನ್ನು ಪ್ರೀತಿಸುವ ಇತರರೊಂದಿಗೆ ನಾವಿರುವಾಗ, ನಾವು ಒಬ್ಬರನ್ನೊಬ್ಬರು ಹರಿತಮಾಡುತ್ತೇವೆ—ಒಬ್ಬರನ್ನೊಬ್ಬರು ಪ್ರೀತಿಸುವುದಕ್ಕೆ ಮತ್ತು ಸತ್ಕಾರ್ಯಮಾಡುವುದಕ್ಕೆ ನಾವು ಪ್ರೇರೇಪಿಸುತ್ತೇವೆ. ಇನ್ನೊಂದು ಕಡೆಯಲ್ಲಿ, ನಾವು ಒಬ್ಬೊಂಟಿಗರಾಗಿರುವಾಗ, ನಮ್ಮನ್ನು ನಾವು ಹೆಚ್ಚಾಗಿ ಪರಿಗಣಿಸುವ ಪ್ರವೃತ್ತಿಯುಳ್ಳವರಾಗುತ್ತೇವೆ. ಅನೈತಿಕ, ಸ್ವಾರ್ಥಪರ, ಅಥವಾ ಮೂರ್ಖ ಕಲ್ಪನೆಗಳು ನಮ್ಮ ಮನಸ್ಸುಗಳನ್ನು ಪ್ರವೇಶಿಸಬಹುದು. “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.” (ಜ್ಞಾನೋಕ್ತಿ 18:1) ಆದುದರಿಂದಲೇ ಥೆಸಲೊನೀಕ ಪಟ್ಟಣದಲ್ಲಿದ್ದ ಸಭೆಗೆ ಪೌಲನು ಬರೆದುದು: “ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ.”—1 ಥೆಸಲೊನೀಕ 5:11.
ರೊಜಾರಿಯೊ ಅವಳ ಬೈಬಲಿನ ಮೂಲ ಬೋಧನೆಗಳ ಕುರಿತಾದ ಅಭ್ಯಾಸವನ್ನು ಮುಗಿಸಿದಾಗ, ಅವಳು ಇನ್ನೂ ಸಭೆಯೊಂದಿಗೆ ಸಹವಾಸಮಾಡಲು ಹಿಂಜರಿದಳು. ಆದುದರಿಂದ, ಹೆಚ್ಚಿನ ಸಹಾಯವನ್ನು ಒದಗಿಸಲು ಅಶಕ್ತಳಾಗಿ ಎಲಿಜಬೆತಳು ಅವಳನ್ನು ಸಂದರ್ಶಿಸುವುದನ್ನು ನಿಲ್ಲಿಸಿದಳು. ಕೆಲವು ತಿಂಗಳುಗಳ ಅನಂತರ ಒಬ್ಬ ಸಂಚಾರ ಮೇಲ್ವಿಚಾರಕರು ರೊಜಾರಿಯೊಳ ಭೇಟಿಗಾಗಿ ಹೋದರು ಮತ್ತು ಕೇಳಿದ್ದು: “ಒಂದು ಕುಟುಂಬದ ಪ್ರತಿಯೊಬ್ಬ ಸದಸ್ಯನೂ ಭೋಜನ ಮಂದಿರವೊಂದರಲ್ಲಿ ಒಳ್ಳೆಯ ಆಹಾರವನ್ನು ಕಂಡುಕೊಳ್ಳಶಕ್ತನಾದರೂ, ಮನೆಯಲ್ಲಿ ಜೊತೆಗೂಡಿ ಊಟಮಾಡದೆ ಇರುವುದರಿಂದ ಎಲ್ಲಾ ಸದಸ್ಯರು ಯಾವುದರಿಂದ ವಂಚಿತರಾಗುವರು?” “ಕುಟುಂಬದ ಸಹವಾಸದಿಂದ ಅವರು ವಂಚಿತರಾಗುವರು” ಎಂದು ರೊಜಾರಿಯೊ ಉತ್ತರಿಸಿದಳು. ಅವಳು ವಿಷಯವನ್ನರಿತಳು ಮತ್ತು ಕೂಟಗಳಿಗೆ ಕ್ರಮವಾಗಿ ಬರಲಾರಂಭಿಸಿದಳು. ಅವಳು ಅದನ್ನು ಎಷ್ಟೊಂದು ಪ್ರಯೋಜನಕಾರಿಯಾಗಿ ಕಂಡುಕೊಂಡಳೆಂದರೆ, ಅಂದಿನಿಂದ ಬಹು ಮಟ್ಟಿಗೆ ಎಲ್ಲಾ ಕೂಟಗಳಲ್ಲಿ ಅವಳು ಹಾಜರಿರುತ್ತಾಳೆ.
ನೀವು ನಂಬುವಂತಹದೇ ವಿಚಾರಗಳಲ್ಲಿ ಇತರ ಜನರು ನಂಬಿಕೆ ವ್ಯಕ್ತಪಡಿಸುವುದನ್ನು ಕೇಳುವುದು ಮತ್ತು ಅಂತಹ ನಂಬಿಕೆಯು ಅವರ ಜೀವಿತಗಳನ್ನು ಹೇಗೆ ಮಾರ್ಪಡಿಸಿದೆಯೆಂದು ಕಾಣುವುದು ಸಹ ಪ್ರೋತ್ಸಾಹದಾಯಕ. ಇದನ್ನು ಪೌಲನು ವೈಯಕ್ತಿಕ ಅನುಭವದಿಂದ ತಿಳಿದಿದ್ದನು, ಮತ್ತು ರೋಮಿನಲ್ಲಿದ್ದ ಸಭೆಗೆ ಆತನು ಬರೆದುದು: “ನನ್ನ ಮುಖಾಂತರವಾಗಿ ನಿಮಗೆ ಪಾರಮಾರ್ಥಿಕ ವರವೇನಾದರೂ ದೊರಕಿ ನೀವು ದೃಢವಾಗುವದಕ್ಕೋಸ್ಕರ ಅಂದರೆ ನಾನು ನಿಮ್ಮ ನಂಬಿಕೆಯಿಂದ ನೀವು ನನ್ನ ನಂಬಿಕೆಯಿಂದ ಸಹಾಯಹೊಂದಿ ಈ ಪ್ರಕಾರ ನಿಮ್ಮೊಂದಿಗೆ ನಾನು ಧೈರ್ಯಗೊಳ್ಳುವದಕ್ಕೋಸ್ಕರ ನಿಮ್ಮನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ.” (ರೋಮಾಪುರ 1:11, 12) ವಾಸ್ತವವಾಗಿ, ಪೌಲನು ರೋಮನ್ನು ಸಂದರ್ಶಿಸಿದ್ದು ವರ್ಷಗಳು ಕಳೆದ ಬಳಿಕವೇ, ಮತ್ತು ಅವನು ಸಂದರ್ಶಿಸಿದಾಗ ರೋಮನರ ಸೆರೆಯಾಳಾಗಿದ್ದನು. ಆದರೆ ಆತನನ್ನು ಎದುರುಗೊಳ್ಳುವದಕ್ಕಾಗಿ ಪಟ್ಟಣದಿಂದ 60 ಕಿಲೊಮೀಟರ್ಗಳಷ್ಟು ದೂರ ನಡೆದು ಬಂದ ರೋಮಿನ ಸಹೋದರರನ್ನು ನೋಡಿದಾಗ, “ಪೌಲನು . . . ದೇವರ ಸ್ತೋತ್ರವನ್ನು ಮಾಡಿ ಧೈರ್ಯಗೊಂಡನು.”—ಅ. ಕೃತ್ಯಗಳು 28:15.
ಸಂದಿಗ್ಧ ಸಮಯಗಳಲ್ಲಿ ಆತ್ಮಿಕ ಆಹಾರವನ್ನು ಕಂಡುಕೊಳ್ಳುವುದು
ರೋಮಿನಲ್ಲಿ ಗೃಹ ಬಂಧನದ ಕೆಳಗಿದ್ದಾಗ, ಸಭೆಯಾಗಿ ಕೂಡಿಕೊಳ್ಳುವದನ್ನು ಅವರು ಬಿಟ್ಟುಬಿಡಬಾರದೆಂಬುದರ ಕುರಿತು ಪೌಲನು ಇಬ್ರಿಯರಿಗೆ ಬರೆದನು. ಆತನು ಕೂಡಿಸಿದ ಮಾತುಗಳು ನಮಗೆ ಅರ್ಥಗರ್ಭಿತವಾಗಿವೆ: “ಕರ್ತನ ಪ್ರತ್ಯಕ್ಷತೆಯ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವದರಿಂದ ಇದನ್ನು ಮತ್ತಷ್ಟು ಮಾಡಿರಿ.” (ಇಬ್ರಿಯ 10:25) ಇಸವಿ 1914 ರ ವರುಷವು ಈ ಲೋಕಾಂತ್ಯ ಸಮಯದ ಆರಂಭವಾಗಿ ಗುರುತಿಸಲ್ಪಟ್ಟಿದೆಯೆಂದು ಮತ್ತು ಆ “ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನವು” ಹತ್ತರಿಸಿದೆ ಎಂದು ಶಾಸ್ತ್ರವಚನಗಳಿಂದ ಸುಸಂಗತವಾಗಿ ಯೆಹೋವನ ಸಾಕ್ಷಿಗಳು ತೋರಿಸಿದ್ದಾರೆ. (2 ಪೇತ್ರ 3:7) ಬೈಬಲಿನ ಪ್ರಕಟನೆ ಪುಸ್ತಕಕ್ಕೆ ಅನುಸಾರವಾಗಿ, ಅಂತ್ಯ ಸಮಯದ ಆರಂಭದಲ್ಲಿ ಪಿಶಾಚನು ಪರಲೋಕದಿಂದ ದೊಬ್ಬಲ್ಪಟ್ಟಾಗ, ಆತನು ಮಹಾರೌದ್ರವುಳ್ಳವನಾದನು ಮತ್ತು “ಉಳಿದವರ ಮೇಲೆ . . . ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳುವವವರ ಮೇಲೆ ಯುದ್ಧಮಾಡುವದಕ್ಕೆ” ಹೋದನು. (ಪ್ರಕಟನೆ 12:7-17) ಆದಕಾರಣ, ದೇವರ ಆಜ್ಞೆಗಳನ್ನು ಪಾಲಿಸುವುದು ವಿಶೇಷವಾಗಿ ಈಗ ಕಷ್ಟಕರವಾಗಿದೆ; ಆದುದರಿಂದ ನಾವು ಇನ್ನೂ ಹೆಚ್ಚಾಗಿ ಜೊತೆ ವಿಶ್ವಾಸಿಗಳೊಂದಿಗೆ ಸೇರುವ ಅಗತ್ಯವಿದೆ. ಪಿಶಾಚನ ಆಕ್ರಮಣಗಳನ್ನು ತಡೆಗಟ್ಟುವುದಕ್ಕೋಸ್ಕರ, ನಮ್ಮ ನಂಬಿಕೆ ಮತ್ತು ದೇವರೆಡೆಗೆ ನಮ್ಮ ಪ್ರೀತಿಯನ್ನು ಬಲಪಡಿಸಲು ಕೂಟಗಳು ನಮಗೆ ಸಹಾಯಮಾಡುವುವು.
ದೇವರೆಡೆಗೆ ಪ್ರೀತಿ ಮತ್ತು ನಂಬಿಕೆಯು ಒಮ್ಮೆ ಕಟ್ಟಲ್ಪಟ್ಟಾಗ ಶಾಶ್ವತವಾಗಿಯೇ ಉಳಿಯುವ ಕಟ್ಟಡಗಳಂತಿಲ್ಲ. ಬದಲಾಗಿ, ಅವುಗಳು ಆಹಾರವಿಲ್ಲದಿರುವದಾದರೆ ಬಾಡಿಹೋಗಿ, ಸಾಯುವ ಆದರೆ ಸತತವಾದ ಪೋಷಣೆಯಿಂದ ನಿಧಾನವಾಗಿ ಬೆಳೆಯುವ ಸಜೀವ ಜೀವಿಗಳಂತಿವೆ. ಆದುದರಿಂದಲೇ ಯೆಹೋವನು ತನ್ನ ಜನರನ್ನು ಬಲಪಡಿಸಲಿಕ್ಕಾಗಿ ಕ್ರಮವಾದ ಆತ್ಮಿಕ ಆಹಾರವನ್ನು ಒದಗಿಸುತ್ತಾನೆ. ಅಂತಹ ಆಹಾರವು ನಮಗೆಲ್ಲರಿಗೂ ಅಗತ್ಯ, ಆದರೆ ದೇವರ ಸಂಸ್ಥೆಯನ್ನು ಮತ್ತು ಅದರ ಕೂಟಗಳನ್ನು ಹೊರತು ಅದನ್ನು ನಾವು ಬೇರೆಲ್ಲಿ ಪಡೆದೇವು? ಬೇರೆಲಿಯ್ಲೂ ಇಲ್ಲ.—ಧರ್ಮೋಪದೇಶಕಾಂಡ 32:2; ಮತ್ತಾಯ 4:4; 5:3.
ಕ್ರೈಸ್ತ ಸಭೆಯನ್ನು ತಾನು ಹೇಗೆ ಉಣಿಸುತ್ತೇನೆಂದು ನಾವು ಕಾಣುವಂತೆ ಸಹಾಯ ಮಾಡಸಾಧ್ಯವಿರುವ ಒಂದು ಪ್ರಶ್ನೆಯನ್ನು ಯೇಸು ಮುಂದಿಟ್ಟನು. ಆತನು ಕೇಳಿದ್ದು: “ಹಾಗಾದರೆ ಯಜಮಾನನು ತನ್ನ ಮನೆಯವರಿಗೆ ಹೊತ್ತುಹೊತ್ತಿಗೆ ಆಹಾರ ಕೊಡಲಿಕ್ಕೆ ಅವರ ಮೇಲಿಟ್ಟ ನಂಬಿಗಸ್ತನೂ ವಿವೇಕಿಯೂ ಆದಂಥ ಆಳು ಯಾರು? ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುತ್ತಾನೋ ಆ ಆಳು ಧನ್ಯನು.” (ಮತ್ತಾಯ 24:45, 46) ಪ್ರಥಮ ಶತಮಾನದಲ್ಲಿ ತನ್ನ ಹಿಂಬಾಲಕರನ್ನು ಉಣಿಸಲಿಕ್ಕಾಗಿ ಯೇಸು ಯಾರನ್ನು ನೇಮಿಸಿದನು, ಮತ್ತು ರಾಜ್ಯಾಧಿಕಾರದಲ್ಲಿ ತಾನು ಹಿಂದಿರುಗಿದಾಗ, ಯಾರು ಅವರನ್ನು ನಂಬಿಗಸ್ತಿಕೆಯಿಂದ ಉಣಿಸುತ್ತಿದ್ದಾರೆಂದು ಅವನು ಕಂಡುಕೊಂಡನು? ನಿಸ್ಸಂಶಯವಾಗಿ, ಆ ಶತಮಾನಗಳಲ್ಲೆಲ್ಲಾ ಯಾವ ಒಬ್ಬ ಮನುಷ್ಯನೂ ಜೀವಿಸಿ ಉಳಿದದ್ದಿಲ್ಲ. ಕ್ರೈಸ್ತ-ಪೂರ್ವ ಕಾಲಗಳಲ್ಲಿ ಇಸ್ರಾಯೇಲ್ ಜನಾಂಗವು ದೇವರ ಸೇವಕನಾಗಿದ್ದಂತೆಯೆ, ಪುರಾವೆಯು ಆ ಆಳನ್ನು ಆತ್ಮಾಭಿಷಿಕ್ತ ಕ್ರೈಸ್ತರ ಸಭೆಯೆಂದು ಗುರುತಿಸುತ್ತದೆ. (ಯೆಶಾಯ 43:10) ಹೌದು, ಇಂದು ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಗಳ ಮೂಲಕ ಆತ್ಮಿಕ ಆಹಾರವನ್ನು ಯಾವುದು ಪ್ರವಹಿಸುತ್ತದೋ, ಆ ಲೋಕವ್ಯಾಪಕ ಆತ್ಮಾಭಿಷಿಕ್ತ ಮಂಡಲಿಯ ಮೂಲಕ ಯೇಸು ನಮ್ಮ ಆತ್ಮಿಕ ಆಹಾರವನ್ನು ಒದಗಿಸುತ್ತಾನೆ.
ಆತ್ಮಿಕ ಆಹಾರದ ಸರಬರಾಯಿಗಾಗಿರುವ ಯೇಸುವಿನ ಒದಗಿಸುವಿಕೆಯು ಅಪೊಸ್ತಲ ಪೌಲನಿಂದ ಇನ್ನೂ ವಿವರಿಸಲ್ಪಟ್ಟಿದೆ: “ಆತನು ಉನ್ನತಸ್ಥಾನಕ್ಕೆ ಏರಿದಾಗ ತಾನು ಜಯಿಸಿದ್ದ ಬಹುಜನರನ್ನು ಸೆರೆಹಿಡುಕೊಂಡು ಹೋಗಿ ಮನುಷ್ಯರಿಗೆ ದಾನಗಳನ್ನು ಮಾಡಿದನು. . . . ಆತನು ಕೆಲವರನ್ನು ಅಪೊಸ್ತಲರನ್ನಾಗಿಯೂ ಕೆಲವರನ್ನು ಪ್ರವಾದಿಗಳನ್ನಾಗಿಯೂ ಕೆಲವರನ್ನು ಸೌವಾರ್ತಿಕರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಉಪದೇಶಿಗಳನ್ನಾಗಿಯೂ ಅನುಗ್ರಹಿಸಿದನು. ನಾವೆಲ್ಲರು ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯವನ್ನು ಹೊಂದಿ ಪ್ರವೀಣತೆಗೆ ಬಂದವರಾಗಿ ಕ್ರಿಸ್ತನ ಪರಿಪೂರ್ಣತೆಯೆಂಬ ಪ್ರಮಾಣವನ್ನು ಮುಟ್ಟುವ ತನಕ ದೇವಜನರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವೂ ಸಭೆಯ ಸೇವೆಗೋಸ್ಕರವೂ ಕ್ರಿಸ್ತನ ದೇಹವು ಅಭಿವೃದ್ಧಿಯಾಗುವದಕ್ಕೋಸ್ಕರವೂ ಆತನು ಇವರನ್ನು ಅನುಗ್ರಹಿಸಿದನು.”—ಎಫೆಸ 4:8, 11-13.
ಅದು ಪ್ರಾಮುಖ್ಯವಾಗಿ ಸ್ಥಳಿಕ ಸಭೆಗಳೊಳಗೆ—ಕೂಟಗಳಲ್ಲಿ—ಈ “ಮನುಷ್ಯರಲ್ಲಿ ದಾನಗಳು” ಸಹೋದರರನ್ನು ಬಲಪಡಿಸಿದವು. ದೃಷ್ಟಾಂತಕ್ಕೆ, ಅಂತಿಯೋಕ್ಯದಲ್ಲಿ, “ಯೂದನೂ ಸೀಲನೂ ತಾವೇ ಪ್ರವಾದಿಗಳಾಗಿದದ್ದರಿಂದ ಸಹೋದರರನ್ನು ಅನೇಕ ಮಾತುಗಳಿಂದ ಪ್ರಬೋಧಿಸಿ ದೃಢಪಡಿಸಿದರು.” (ಅ. ಕೃತ್ಯಗಳು 15:32) ಹಾಗೆಯೆ ಇಂದು ಆತ್ಮಿಕವಾಗಿ ಅರ್ಹರಾದ ವ್ಯಕ್ತಿಗಳ ಭಾಷಣಗಳು ನಮ್ಮ ನಂಬಿಕೆಯನ್ನು ಬಾಡಿ ಹೋಗದಿರುವಂತೆ ಯಾ ನಿಷ್ಕ್ರಿಯವಾಗದಂತೆ ಪೋಷಿಸುವುದು.
ನಾವು ಕೂಟಗಳಿಗೆ ಹಾಜರಾಗಲು ಇನ್ನೂ ಆರಂಭಿಸದೇ ಇರಬಹುದಾದರೂ, ಸಭೆಯ ಒಬ್ಬ ಸದಸ್ಯನ ವೈಯಕ್ತಿಕ ಸಹಾಯದ ಕಾರಣದಿಂದ ನಾವು ಉತ್ತಮವಾದ ಪ್ರಗತಿಯನ್ನು ಮಾಡಿರುವುದು ಪ್ರಾಯಶಃ ಸತ್ಯವಾಗಿರಬಹುದು. “. . . . ಒಬ್ಬನು ನಿಮಗೆ ದೈವೋಕ್ತಿಗಳ ಮೂಲಪಾಠಗಳನ್ನು ತಿರಿಗಿ ಕಲಿಸಿಕೊಡಬೇಕಾಗಿದೆ; ನೀವು ಹಾಲು ಕುಡಿಯತಕ್ಕವರೇ ಹೊರತು ಗಟ್ಟಿಯಾದ ಆಹಾರವನ್ನು ತಿನ್ನತಕ್ಕವರಲ್ಲ.” ಎಂದು ತಿಳಿಸುತ್ತಾ, ಇದಕ್ಕೆ ಒಂದು ಸಮಯವಿದೆ ಎಂದು ಬೈಬಲು ಹೇಳುತ್ತದೆ. (ಇಬ್ರಿಯ 5:12) ಆದರೆ ಒಬ್ಬನು ಹಾಲು ಕುಡಿಯತಕ್ಕ ಹಂತದಲ್ಲೇ ಸದಾ ಉಳಿಯಸಾಧ್ಯವಿಲ್ಲ. ದೇವರೆಡೆಗೆ ಪ್ರೀತಿ ಮತ್ತು ಆತನಲ್ಲಿ ನಂಬಿಕೆಯನ್ನು ಸಜೀವವಾಗಿಡಲು ರಚಿಸಲ್ಪಟ್ಟ ಬೈಬಲ್ ಉಪದೇಶಗಳ ಒಂದು ಸತತವಾದ ಕಾರ್ಯಕ್ರಮವನ್ನು ಕ್ರೈಸ್ತ ಕೂಟಗಳು ಒದಗಿಸುತ್ತವೆ ಮಾತ್ರವಲ್ಲ “ದೇವರ ಸಂಕಲ್ಪವನ್ನೆಲ್ಲಾ” ಅನ್ವಯಿಸಿಕೊಳ್ಳುವಲ್ಲಿ ವ್ಯಾವಹಾರಿಕ ಸಹಾಯವನ್ನೂ ಒದಗಿಸುತ್ತವೆ. (ಅ. ಕೃತ್ಯಗಳು 20:27) ಇದು “ಹಾಲಿ” ಗಿಂತಲೂ ಅಧಿಕವಾದದ್ದಾಗಿದೆ. ಬೈಬಲು ಇನ್ನೂ ಹೇಳುವುದು: “ಗಟ್ಟಿಯಾದ ಆಹಾರವು ಪ್ರಾಯಸ್ಥರಿಗೋಸ್ಕರ ಅಂದರೆ ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿದವರಿಗೋಸ್ಕರವಾಗಿದೆ.” (ಇಬ್ರಿಯ 5:14) ಮನೆ ಬೈಬಲ್ ಅಭ್ಯಾಸದ ಮೂಲ ಬೋಧನೆಯ ಭಾಗವಾಗಿಲ್ಲದೇ ಇರಬಹುದಾದ, ಪ್ರಾಮುಖ್ಯವಾದ ಬೈಬಲ್ ಪ್ರವಾದನೆಗಳ ವಚನ-ವಚನದ ಅಧ್ಯಯನಗಳು ಮತ್ತು ನಮ್ಮ ಸ್ವಂತ ಜೀವಿತಗಳಲ್ಲಿ ನಾವು ದೇವರನ್ನು ಅನುಕರಿಸಬಲ್ಲ ವಿಧದ ಕುರಿತ ಗಾಢವಾದ ಚರ್ಚೆಗಳಂತಹ ಅನೇಕ ವಿಷಯಗಳು ಕೂಟಗಳಲ್ಲಿ ಪರಿಗಣಿಸಲ್ಪಡುತ್ತವೆ.
ಯೆಹೋವನ ಜ್ಞಾಪನಗಳು—ನಿಮ್ಮ ಹಿಂದಿರುವ ಒಂದು ಧ್ವನಿಯಂತೆ
ಅಂತಹ ಸಭಾ ಅಭ್ಯಾಸಗಳ ಮೂಲಕ, ನಾವು ಯಾವ ರೀತಿಯ ವ್ಯಕ್ತಿಗಳಾಗಿರಬೇಕೆಂದು ನಮಗೆ ಯೆಹೋವನು ಕ್ರಮವಾಗಿ ಜ್ಞಾಪಕ ಹುಟ್ಟಿಸುತ್ತಾನೆ. ಅಂತಹ ಜ್ಞಾಪನಗಳು ಅತಿ ಮಹತ್ವದ್ದಾಗಿವೆ. ಅವುಗಳ ಹೊರತು ನಾವು ಸುಲಭವಾಗಿಯೇ ಸ್ವಾರ್ಥತೆ, ಅಹಂಕಾರ, ಮತ್ತು ಲೋಭದ ಕಡೆಗೆ ಒಲವುಳ್ಳವರಾಗುತ್ತೇವೆ. ಶಾಸ್ತ್ರ ವಚನಗಳ ಜ್ಞಾಪನಗಳು, ಸ್ವತಃ ದೇವರೊಂದಿಗೆ ಮತ್ತು ಇತರ ಮಾನವರೊಂದಿಗೆ ಸಫಲವಾದ ಸಂಬಂಧದಲ್ಲಿ ನಾವು ಆನಂದಿಸುವಂತೆ ಸಹಾಯ ಮಾಡುತ್ತವೆ. ಕೀರ್ತನೆ 119:59 ರ ಬರಹಗಾರನು ಒಪ್ಪಿಕೊಂಡನು “ನನ್ನ ನಡತೆಯನ್ನು ಶೋಧಿಸಿದೆನು; ನಿನ್ನ ಕಟ್ಟಳೆಗಳ [ಜ್ಞಾಪನ, NW] ಕಡೆಗೆ ತಿರುಗಿಕೊಂಡಿದ್ದೇನೆ.”
ನಾವು ಕ್ರಮವಾಗಿ ಕ್ರೈಸ್ತ ಕೂಟಗಳಿಗೆ ಹಾಜರಾಗುವಾಗ, ಯೆಶಾಯನ ಮೂಲಕವಾಗಿ ಯೆಹೋವನು ನುಡಿದ ಪ್ರವಾದನೆಯ ನೆರವೇರಿಕೆಯನ್ನು ನಾವು ಅನುಭವಿಸುತ್ತೇವೆ, ಅದು ಹೇಳುವುದು: “ಕರ್ತನು ಕಷ್ಟವನ್ನೂ ಶ್ರಮವನ್ನೂ ನಿಮಗೆ ಅನ್ನಪಾನಗಳನ್ನಾಗಿ ಕೊಟ್ಟರೂ ನಿಮ್ಮ ಬೋಧಕನು ಇನ್ನು ಮರೆಯಾಗಿರನು, ನಿಮ್ಮ ಬೋಧಕನನ್ನು ಕಣ್ಣಾರೆ ಕಾಣುವಿರಿ; ನೀವು ಬಲಕ್ಕಾಗಲಿ ಎಡಕ್ಕಾಗಲಿ ತಿರುಗಿಕೊಳ್ಳುವಾಗ ಇದೇ ಮಾರ್ಗ, ಇದರಲ್ಲೇ ನಡೆಯಿರಿ ಎಂದು ನಿಮ್ಮ ಹಿಂದೆ ಆಡುವ ಮಾತು ನಿಮ್ಮ ಕಿವಿಗೆ ಬೀಳುವದು.” ಯೆಹೋವನು ನಮ್ಮ ಪ್ರಗತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಾನೆ ಮತ್ತು ನಾವೊಂದು ತಪ್ಪು ಹೆಜ್ಜೆಯನ್ನು ತಕ್ಕೊಳ್ಳುವುದಾದರೆ ಪ್ರೀತಿ ಪೂರ್ವಕವಾಗಿ ನಮ್ಮನ್ನು ಸರಿಪಡಿಸುತ್ತಾನೆ. (ಯೆಶಾಯ 30:20, 21; ಗಲಾತ್ಯ 6:1) ಮತ್ತು ಇದಕ್ಕಿಂತಲೂ ಹೆಚ್ಚಿನ ಸಹಾಯವನ್ನು ಆತನು ಒದಗಿಸುತ್ತಾನೆ.
ಸಭೆಯ ಮೂಲಕ ಪವಿತ್ರ ಆತ್ಮವನ್ನು ಸ್ವೀಕರಿಸುವುದು
ಯೆಹೋವನ ಸಾಕ್ಷಿಗಳೊಂದಿಗೆ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಮೂಲಕ, ಆತನ ಜನರಲ್ಲಿ ನೆಲೆಗೊಂಡಿರುವ ದೇವರ ಪವಿತ್ರಾತ್ಮದ ಮೂಲಕ ನಾವು ಬಲಪಡಿಸಲ್ಪಡುತ್ತೇವೆ. (1 ಪೇತ್ರ 4:14) ಇದಲ್ಲದೆ, ಸಭೆಯಲ್ಲಿರುವ ಕ್ರೈಸ್ತ ಮೇಲ್ವಿಚಾರಕರು ಪವಿತ್ರಾತ್ಮದ ಮೂಲಕ ನೇಮಿಸಲ್ಪಟ್ಟಿದ್ದಾರೆ. (ಅ.ಕೃತ್ಯಗಳು 20:28) ದೇವರ ಈ ಕಾರ್ಯಕಾರಿ ಶಕ್ತಿಯು ಒಬ್ಬ ಕ್ರೈಸ್ತನ ಮೇಲೆ ಶಕ್ತಿಶಾಲಿ ಪ್ರಭಾವವನ್ನು ಹಾಕುತ್ತದೆ. ಬೈಬಲು ಹೇಳುವುದು: “ದೇವರಾತ್ಮನಿಂದ ಉಂಟಾಗುವ ಫಲವೇನಂದರೆ—ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ದಯೆ ಉಪಕಾರ ನಂಬಿಕೆ ಸಾಧುತ್ವ ಶಮೆದಮೆ ಇಂಥವುಗಳೇ.” (ಗಲಾತ್ಯ 5:22) ದೇವರ ಸಂಸ್ಥೆಯ ಮೂಲಕವಾಗಿ ಕಾರ್ಯನಡಿಸುತ್ತಾ, ಪವಿತ್ರಾತ್ಮವು, ಆತನನ್ನು ಪ್ರೀತಿಸುವವರಿಗಾಗಿ ಯೆಹೋವನು ಏನನ್ನು ಸಿದ್ಧವಾಗಿಟ್ಟಿದ್ದಾನೆಂಬ ಅದ್ಭುತಕರವಾದ ಸ್ಪಷ್ಟ ತಿಳಿವಳಿಕೆಯನ್ನು ನಾವು ಸಂಪಾದಿಸಲು ಸಹ ಸಹಾಯಮಾಡುತ್ತದೆ. ಈ ವಿಷಯಗಳ ವ್ಯವಸ್ಥೆಯ ಪ್ರಖ್ಯಾತ ಜನರು ದೇವರ ಉದ್ದೇಶಗಳನ್ನು ಗ್ರಹಿಸಲಾರರೆಂದು ವಿವರಿಸಿದ ಅನಂತರ ಪೌಲನು ಬರೆದದ್ದು: “ನಮಗಾದರೋ ದೇವರು ತನ್ನ ಆತ್ಮನ ಮೂಲಕ ಅದನ್ನು ಪ್ರಕಟಿಸಿದನು.”—1 ಕೊರಿಂಥ 2:8-10.
ನಂಬಿಕೆಯನ್ನು ಬಲಪಡಿಸುವ ಆತ್ಮಿಕ ಆಹಾರವನ್ನು ಮಾತ್ರವಲ್ಲ, ಸಭೆಯ ಪ್ರಮುಖ ಚಟುವಟಿಕೆಯಲ್ಲಿ ಭಾಗವಹಿಸಲು ಅಪೇಕ್ಷಿಸುವವರಿಗೆ ಸಭೆಯು ತರಬೇತಿಯನ್ನು ಒದಗಿಸುತ್ತದೆ. ಅದು ಏನು?
ಸಭೆಯ ಮೂಲಕ ಒದಗಿಸಲ್ಪಡುವ ತರಬೇತಿ
ಎಲ್ಲಿ ಜನರು ಕೇವಲ ಮನೋರಂಜನೆಯಲ್ಲಿ ಆನಂದಿಸುತ್ತಾರೊ ಮತ್ತು ಉತ್ತಮ ಜೀವಿತಗಳನ್ನು ಜೀವಿಸುವಂತೆ ಒಬ್ಬರನ್ನೊಬ್ಬರು ಪ್ರಾಯಶಃ ಪ್ರೋತ್ಸಾಹಿಸುತ್ತಾರೋ ಅಂತಹ ಒಂದು ಸಾಮಾಜಿಕ ಸಂಘವಾಗಿ ಕ್ರೈಸ್ತ ಸಭೆಯು ಇರುವುದಿಲ್ಲ. ಆತ್ಮಿಕ ಅಂಧಕಾರದಲ್ಲಿ ಜೀವಿಸುತ್ತಿರುವವರಿಗೆ ರಾಜ್ಯದ ಶುಭವಾರ್ತೆಯನ್ನು ಕೊಂಡೊಯ್ಯಲಿಕ್ಕಾಗಿ ಯೇಸು ಸಭೆಯನ್ನು ನಿಯೋಜಿಸಿದನು. (ಅ. ಕೃತ್ಯಗಳು 1:8; 1 ಪೇತ್ರ 2:9) ಸಾ.ಶ. 33 ರ ಪಂಚಾಶತ್ತಮ ದಿನದಲ್ಲಿ ಅದು ಸ್ಥಾಪಿಸಲ್ಪಟ್ಟಂದಿನಿಂದ, ಅದು ಸಾರುವವರ ಒಂದು ಸಂಘವಾಗಿತ್ತು. (ಅ. ಕೃತ್ಯಗಳು 2:4) ಯೆಹೋವನ ಉದ್ದೇಶಗಳ ಕುರಿತಾಗಿ ಯಾವನಿಗಾದರೂ ಹೇಳಲು ಪ್ರಯತ್ನಿಸಿ ಆದರೆ ಆತನಿಗೆ ಮನಗಾಣಿಸಲು ತಪ್ಪಿದುದರ ಅನುಭವವವು ನಿಮಗಾಗಿದೆಯೊ? ಕಲಿಸುವ ಕಲೆಯಲ್ಲಿ ವೈಯಕ್ತಿಕ ತರಬೇತಿಯನ್ನು ಸಭಾ ಕೂಟಗಳು ಒದಗಿಸುತ್ತವೆ. ಬೈಬಲಿನ ಉದಾಹರಣೆಗಳನ್ನು ಅಭ್ಯಾಸಿಸುವ ಮೂಲಕ, ಪರ್ಯಾಲೋಚಿಸಲಿಕ್ಕಿರುವ ಸಾಮಾನ್ಯ ನೆಲೆಯನ್ನು ಸ್ಥಾಪಿಸುವುದು ಹೇಗೆ, ತಾರ್ಕಿಕ ವಾದದ ಆಧಾರಕ್ಕಾಗಿ ಶಾಸ್ತ್ರ ವಚನಗಳನ್ನು ಉಪಯೋಗಿಸುವುದು ಹೇಗೆ, ಮತ್ತು ಪ್ರಶ್ನೆಗಳನ್ನು ಮತ್ತು ದೃಷ್ಟಾಂತಗಳನ್ನು ಉಪಯೋಗಿಸುವುದರ ಮೂಲಕ ಇತರರಿಗೆ ವಿವೇಚಿಸಲು ಸಹಾಯಮಾಡುವುದು ಹೇಗೆ ಎಂಬದನ್ನು ನಾವು ಕಲಿಯುತ್ತೇವೆ. ಬೈಬಲಿನ ಸತ್ಯವನ್ನು ಬೇರೊಬ್ಬ ವ್ಯಕ್ತಿಯು ತಿಳಿಯುವಂತೆ ನೆರವಾಗುವ ಅವರ್ಣನೀಯ ಸಂತೋಷವನ್ನು ಅನುಭವಿಸುವಂತೆ ಅಂತಹ ಕೌಶಲ್ಯಗಳು ನಿಮಗೆ ಸಹಾಯಮಾಡಬಲ್ಲವು.
ಈ ಕಲಹಛಿದ್ರಿತ, ಅನೈತಿಕ ಲೋಕದಲ್ಲಿ, ಕ್ರೈಸ್ತ ಸಭೆಯು ಒಂದು ನಿಜ ಆತ್ಮಿಕ ರಕ್ಷಣಾಲಯವಾಗಿದೆ. ಅದು ಅಪರಿಪೂರ್ಣ ಜನರಿಂದ ನಿರ್ಮಿಸಲ್ಪಟ್ಟಿರುವದಾದರೂ, ಅದು ಶಾಂತಿ ಮತ್ತು ಪ್ರೀತಿಯ ಒಂದು ಆಶ್ರಯಸ್ಥಾನ. ಆದುದರಿಂದಲೇ, ಅದರ ಎಲ್ಲಾ ಕೂಟಗಳಲ್ಲಿ ಒಬ್ಬ ಕ್ರಮದ ಹಾಜರಿಗರಾಗಿದ್ದು ಕೀರ್ತನೆಗಾರನ ಮಾತುಗಳ ಕುರಿತಾದ ಸತ್ಯತೆಯನ್ನು ಸ್ವತಃ ನೀವೇ ಅನುಭವಿಸಿರಿ: “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು! . . . ಅಲ್ಲಿ ಆಶೀರ್ವಾದವೂ ಜೀವವೂ ಸದಾಕಾಲ ಇರಬೇಕೆಂದು ಯೆಹೋವನು ಆಜ್ಞಾಪಿಸಿದ್ದಾನೆ.”—ಕೀರ್ತನೆಗಳು 133:1, 3.