ಮದ್ಯವ್ಯಸನದೊಂದಿಗೆ ಮಾಡುವ ಹೋರಾಟದಲ್ಲಿ ಜಯ ಹೊಂದುವುದು
“ಕೆಲಸದ ಸಮಯದಲ್ಲಿ, ಬೆಳಗ್ಗೆ ಸುಮಾರು ಹತ್ತು ಗಂಟೆಗೆ, ನಾನು ಮದ್ಯಪಾನದ ಕುರಿತು ಯೋಚಿಸತೊಡಗುತ್ತಿದ್ದೆ. ಹನ್ನೆರಡು ಗಂಟೆಯೊಳಗೆ, ನಾನು ಹೊರಗೆ ಹೋಗಿ ಒಂದೋ, ಎರಡೋ ಬಾರಿ ಕುಡಿಯುತ್ತಿದ್ದೆ. ಮೂರು ಗಂಟೆಯೊಳಗೆ ನಾನು ದೈಹಿಕವಾಗಿ ನಡುಗುತ್ತಿರುತ್ತಿದ್ದೆ. ಇನ್ನೊಂದು ಕುಡಿತ ದೊರೆಯುವಂತೆ ನಾನು ಕೆಲಸ ಬಿಡುವ ಸಮಯಕ್ಕಾಗಿ ಹಂಬಲಿಸುತ್ತಿದ್ದೆ. ಅನೇಕ ವೇಳೆ, ಮನೆಗೆ ಹೋಗುವ ದಾರಿಯಲ್ಲಿ ಇನ್ನೆರಡು ಸಲ ಕುಡಿಯುತ್ತಿದ್ದೆ. ಸುಮಾರು ಏಳು ಗಂಟೆಗೆ ನಾನು ಪುನಃ ನಿರ್ಬಂಧಕ್ಕೊಳಗಾಗುತ್ತಿದ್ದೆ. ನಾನು ಕುಡಿದು, ಮೂರ್ಛೆ ತಪ್ಪಿ ಕುರ್ಚಿಯಿಂದ ಬಿದ್ದು, ಬಟ್ಟೆಯಲ್ಲೇ ಮೂತ್ರ ಮಾಡಿ, ಅದರಲ್ಲೇ ಬೆಳಗ್ಗಿನ ವರೆಗೆ ಮಲಗುತ್ತಿದ್ದೆ. ಇದನ್ನು ತೆಗೆದುಕೊಂಡು ಒಂದು ವಾರದ ಏಳು ದಿನಗಳಿಂದ ಗುಣಿಸಿರಿ; ಅದನ್ನು ಒಂದು ವರ್ಷದ 52 ವಾರಗಳಿಂದ ಗುಣಿಸಿರಿ; ಅದನ್ನು 29 ವರ್ಷಗಳಿಂದ ಗುಣಿಸಿರಿ.”
ಈ ಮನುಷ್ಯನು ಒಬ್ಬ ಮದ್ಯವ್ಯಸನಿ. ಇವನು ಒಬ್ಬಂಟಿಗನಾಗಿಲ್ಲ. ಲೋಕಾದ್ಯಂತ ಲಕ್ಷಗಟ್ಟಲೆ ಜನರು, ಯಾವುದು ಡಾ. ವರ್ನನ್ ಇ. ಜಾನ್ಸನ್ ಎಂಬವರಿಗನುಸಾರ, “ಶಾರೀರಿಕವಾಗಿ, ಮಾನಸಿಕವಾಗಿ, ಮನೋವೈಜ್ಞಾನಿಕವಾಗಿ, ಮತ್ತು ಆಧ್ಯಾತ್ಮಿಕವಾಗಿ ಇಡೀ ಮನುಷ್ಯನನ್ನು ಆವರಿಸುತದ್ತೊ” ಆ ಮಾರಕ ಪರಿಸ್ಥಿತಿಯೊಂದಿಗೆ ಹೋರಾಡುತ್ತಾರೆ.a
ಮದ್ಯವ್ಯಸನವನ್ನು ಗುಣಪಡಿಸಸಾಧ್ಯವಿಲ್ಲ, ಆದರೆ ಜೀವಾವಧಿಯ ಒಂದು ವರ್ಜನೆಯ ಕಾರ್ಯಕ್ರಮದ ಮೂಲಕ ಅದನ್ನು ಹಿಡಿದಿಡುವುದು ಸಾಧ್ಯವೆಂದು ಅನೇಕ ಪರಿಣತರು ಹೇಳುತ್ತಾರೆ. ಇದೊಂದು ಅಸಮಂಜಸವಾದ ಆವಶ್ಯಕತೆಯಲ್ಲ, ಏಕೆಂದರೆ ಮದ್ಯಸಾರ ಜೀವಕ್ಕೆ ಅಗತ್ಯವಾದ ವಸ್ತುವಾಗಿರುವುದಿಲ್ಲ. ವಾಸ್ತವವೇನಂದರೆ, ಮದ್ಯದ ದುರುಪಯೋಗವು ದೇವರ ಅಸಮ್ಮತಿಯನ್ನು ತರುತ್ತದೆ. (1 ಕೊರಿಂಥ 6:9, 10) ಮದ್ಯದ ಅತಿಕಾಂಕೆಗ್ಷೆ ಬಲಿಯಾಗಿ ನಿತ್ಯಜೀವದ ನಷ್ಟವನ್ನು ಪಡೆಯುವುದಕ್ಕಿಂತ ಮದ್ಯವಿಲ್ಲದವರಾಗಿದ್ದು ದೇವರ ನೂತನ ಲೋಕಕ್ಕೆ ಪ್ರವೇಶಿಸುವುದು ಲೇಸು.—ಮತ್ತಾಯ 5:29, 30.
ಮದ್ಯದ ದುರುಪಯೋಗದಿಂದ ಬಿಡಿಸಿಕೊಂಡು ಸ್ವತಂತ್ರರಾಗುವುದು—ಮತ್ತು ಸ್ವತಂತ್ರರಾಗಿ ಉಳಿಯುವುದು—ಅನೇಕ ವೇಳೆ ಒಂದು ಹತಾಶೆಯ ಪಂಥಾಹ್ವಾನ. (ರೋಮಾಪುರ 7:21-24 ಹೋಲಿಸಿ.) ಯಾವುದು ಸಹಾಯ ಮಾಡಬಲ್ಲದು? ನಾವು ನೇರವಾದ ತುಸು ಬುದ್ಧಿವಾದವನ್ನು ಒದಗಿಸೋಣ. ನೀವು ಮದ್ಯಪಾನವನ್ನೇ ಮಾಡದವರಾಗಿದ್ದರೂ, ಈ ಸಲಹೆ ಬೋಧಪ್ರದವಾಗಿದ್ದು, ಮದ್ಯವ್ಯಸನದೊಂದಿಗೆ ಹೋರಾಡುತ್ತಿರುವ ಒಬ್ಬ ಸ್ನೇಹಿತನಿಗೊ, ಸಂಬಂಧಿಗೊ, ನೀವು ನೆರವನ್ನು ನೀಡುವಂತೆ ಸಾಧ್ಯಮಾಡಬಹುದು.
ನಿಮ್ಮ ಕಡೆಗೆ ಪ್ರಾಮಾಣಿಕವಾದ ಒಂದು ನೋಟ
ನೀವು ಮದ್ಯವ್ಯಸನಿ ಎಂಬ ನಿಜತ್ವವನ್ನು ಅಲ್ಲಗಳೆಯುವುದೇ ಜಯಿಸಲಿರುವ ಅತ್ಯಂತ ದೊಡ್ಡ ತಡೆಗಳಲ್ಲಿ ಒಂದಾಗಿದೆ. ಅಲ್ಲಗಳೆಯುವಿಕೆಯು ಒಂದು ವಿಧದ ಅಪ್ರಾಮಾಣಿಕತೆ. ಇದು ಒಂದು ಉದ್ದೇಶವಿರುವ ಯುಕ್ತಿಸಂಗತವಾದ ವಿವರಣೆ: ನಿಮ್ಮ ಕುಡಿಯುವ ಸ್ವಾತಂತ್ರ್ಯವನ್ನು ರಕ್ಷಿಸುವುದು. ‘ನನ್ನ ಸಮಸ್ಯೆ ಅಷ್ಟೊಂದು ದೊಡ್ಡದಲ್ಲ,’ ಎಂದು ನೀವು ತರ್ಕಿಸಬಹುದು. ‘ನನಗೆ ನನ್ನ ಕುಟುಂಬ ಇನ್ನೂ ಇದೆ. ಕೆಲಸ ಇನ್ನೂ ಇದೆ.’ ಅತಿ ಪ್ರಾಮುಖ್ಯವಾದ ವಿಷಯವು, ನಿಮಗೆ ಮದ್ಯಪಾನ ಇನ್ನೂ ಇದೆ ಎಂಬುದೇ.
ಇಂತಹ ಅಲ್ಲಗಳೆಯುವಿಕೆ, ಸಹಾಯಮಾಡ ಬಯಸುವ ಮಿತ್ರರಿಗೆ ನೀವು ಕಿವಿಗೊಡುವುದರಿಂದ ನಿಮ್ಮನ್ನು ತಡೆಯಬಹುದು. ತನ್ನ ಹೆಂಡತಿಯ ಮಲತಂದೆ ಅನಾರೋಗ್ಯಕರವಾದ ಕುಡಿಯುವ ನಮೂನೆಗಳನ್ನು ಮತ್ತು ಒರಟು ವರ್ತನೆಯನ್ನು ಆಯ್ದುಕೊಂಡಿದ್ದಾನೆಂದು ರಾಬರ್ಟ್ ಗಮನಿಸಿದನು. ರಾಬರ್ಟ್ ಹೇಳುವುದು: “ಕೆಲವು ದಿನಗಳ ಬಳಿಕ, ನಾನು ಅವರನ್ನು ಮುಕಾಬಿಲೆ ಮಾಡಿ, ಅವರ ವರ್ತನೆಗೆ ಅವರ ಕುಡಿತ ಸಹಾಯ ಮಾಡಿದೆಯೆಂದು ಅವರಿಗನಿಸುತ್ತದೊ ಎಂದು ಕೇಳಿದೆ.” ಫಲಿತಾಂಶ? “ಅವರು ಅದನ್ನು, ‘ನಿನಗೆ ಹಾಗೆ ಹೇಳಲು ಆಧಾರವಿಲ್ಲ’ ಮತ್ತು, ‘ನನಗೆ ಹೇಗೆನಿಸುತ್ತಿದೆಯೆಂಬುದು ನಿನಗೆ ತಿಳಿಯದು,’ ಎಂಬಂತಹ ಹೇಳಿಕೆಗಳಿಂದ ಪೂರ್ತಿ ಅಲ್ಲಗಳೆದರು.”
ನಿಮ್ಮ ಕುಡಿತದ ವಿಷಯದಲ್ಲಿ ಚಿಂತಿತನಾಗಿರುವ ನಿಮ್ಮ ಕುಟುಂಬದ ಸದಸ್ಯನೊಬ್ಬನು ಯಾ ಮಿತ್ರನೊಬ್ಬನು ನಿಮ್ಮನ್ನು ಸಮೀಪಿಸುವಲ್ಲಿ, ಪರೀಕ್ಷಿಸುವ, ಪ್ರಾಮಾಣಿಕವಾದ ದೃಷ್ಟಿಯನ್ನು ನಿಮ್ಮ ಮೇಲೆ ನೀವೇ ಇಟ್ಟುಕೊಳ್ಳಿರಿ. (ಜ್ಞಾನೋಕ್ತಿ 8:33) ಮದ್ಯವಿಲ್ಲದೆ ನೀವು ಒಂದು ಇಡೀ ವಾರ, ಒಂದು ಪೂರ್ತಿ ತಿಂಗಳು, ಯಾ ಅನೇಕ ತಿಂಗಳುಗಳು ಜೀವಿಸಬಲ್ಲಿರೊ? ಇಲ್ಲವಾದರೆ ಏಕೆ ಇಲ್ಲ? ಸುಳ್ಳು ತರ್ಕದಿಂದ ತನ್ನನ್ನು ವಂಚಿಸಿಕೊಳ್ಳುವ ಮನುಷ್ಯನಂತಿರಬೇಡಿರಿ. ಯಾಕೋಬನು ಹೇಳುವುದು: “ಅವನು ಕನ್ನಡಿಯಲ್ಲಿ ತನ್ನ ಹುಟ್ಟುಮುಖವನ್ನು ನೋಡಿದ ಮನುಷ್ಯನಂತಿರುವನು; ಇವನು ತನ್ನನ್ನು ನೋಡಿಕೊಂಡು ಹೋಗಿ ತಾನು ಹೀಗಿದ್ದೇನೆಂಬದನ್ನು ಆ ಕ್ಷಣವೇ ಮರೆತು ಬಿಡುವನು.”—ಯಾಕೋಬ 1:22-25.
ಗುಣಹೊಂದಲು ಆರಂಭಿಸಿದ ಮೇಲೆಯೂ, ಅಲ್ಲಗಳೆಯುವಿಕೆಯ ವಿಷಯ ನೀವಿನ್ನೂ ಎಚ್ಚರದಿಂದಿರಬೇಕಾಗುವುದು. ವಿಲ್ಪವರ್ಸ್ ನಾಟ್ ಇನಫ್ ಎಂಬ ಪುಸ್ತಕ ವಿವರಿಸುವುದು: “ಹೊಸತಾಗಿ ಮದ್ಯವರ್ಜಿಸಿರುವ ವ್ಯಕ್ತಿ, ಸ್ವಲ್ಪ ಸಮಯ ಮದ್ಯದ ಉಪಯೋಗವನ್ನು ನಿಲ್ಲಿಸಶಕ್ತನಾದ ಕಾರಣ—ಪ್ರಾಯಶಃ ಪ್ರಥಮ ಬಾರಿ—ತಾನೀಗ ಗುಣಹೊಂದಿದ್ದೇನೆಂದು ತಪ್ಪಾಗಿ ನಂಬಸಾಧ್ಯವಿದೆ.” ಇದು ಅತಿ ಬಲವಾದ ವ್ಯಸನಾತ್ಮಕ ಯೋಚನೆಯಾಗಿದ್ದು, ಮರುಕೊಳಿಸುವಿಕೆಗೆ ಪ್ರಥಮ ಹೆಜ್ಜೆಯಾಗಿದೆ. ಇಂತಹ ಅಲ್ಲಗಳೆಯುವಿಕೆಯನ್ನು ಪ್ರತಿಭಟಿಸಬೇಕಾದರೆ, ನೀವು ಒಬ್ಬಂಟಿಗರಾಗಿ ಹೋರಾಡಬಾರದು.
ಸಹಾಯವನ್ನು ಪಡೆಯಿರಿ
ಮದ್ಯವ್ಯಸನವನ್ನು ತಾನೊಬ್ಬನಾಗಿಯೇ ಹೋರಾಡಶಕ್ತನಲ್ಲವೆಂದು ಗ್ರಹಿಸಿದ, ಲಿಯೋ ಎಂದು ನಾವು ಕರೆಯಬಹುದಾದ ಒಬ್ಬ ಪುರುಷನು ವೃತ್ತಿಪರ ಸಹಾಯವನ್ನು ಹುಡುಕಿದನು. ತೀವ್ರ ಚಿಕಿತ್ಸೆಯ ಒಂದು ಅವಧಿಯ ಬಳಿಕ, ಅವನು ಗುಣಹೊಂದತೊಡಗಿದನು. ಪರಿಣತರ ಸಹಾಯದ ಬೆಲೆಗೆ ವಿಶೇಷ ಪರಿಗಣನೆ ಕೊಡುವುದು ಅಗತ್ಯವೆಂದು ಲಿಯೋ ಅಭಿಪ್ರಯಿಸುತ್ತಾನೆ.b ಇಂತಹ ಸಹಾಯ ಸ್ಥಳಿಕವಾಗಿ ದೊರೆಯುವಲ್ಲಿ, ಅದರ ಪ್ರಯೋಜನ ಪಡೆಯಲು ನೀವು ನಿರ್ಧರಿಸಬಹುದು.
ಆದರೂ, ಗುಣಹೊಂದುವಿಕೆಯಲ್ಲಿ ಕೇವಲ ವರ್ಜನೆಗಿಂತಲೂ ಹೆಚ್ಚಿನದು ಸೇರಿದೆ ಎಂಬುದನ್ನು ನೀವು ಗ್ರಹಿಸತಕ್ಕದ್ದು. ಮಧ್ಯವ್ಯಸನದ ಕೆಳಗೆ ನೀವು ಎದುರಿಸುವ ಅಗತ್ಯವಿರುವ ಗಂಭೀರತರದ ಸಂಭವನೀಯ ವಾದಾಂಶಗಳೂ ಇರುತ್ತವೆ. ಇವನ್ನು ಅಲಕ್ಷಿಸುವುದು ಅಪಾಯಕಾರಿಯಾಗಿರಬಲ್ಲದು. ಡಾ. ಷಾರ್ಲಟ್ ಡೇವಿಸ್ ಕ್ಯಾಸ್ ಬರೆಯುವುದು: “ಚಟ ಹಿಡಿಸುವ ವಸ್ತುಗಳ ಸಂಬಂಧದಲ್ಲಿ ಚಿಕಿತ್ಸೆಗೊಳಗಾದ ಜನರನ್ನು ನಾನು ಹದಿನಾಲ್ಕು ಬಾರಿಯ ವರೆಗೆ ಭೇಟಿ ಮಾಡಿದ್ದೇನೆ, ಏಕೆಂದರೆ ದುರುಪಯೋಗ, ಅವಲಂಬನೆ, ಮತ್ತು ಅಸಡ್ಡೆಯ ಮೂಲ ಸಮಸ್ಯೆಗಳು ನಿಭಾಯಿಸಲ್ಪಟ್ಟಿರಲ್ಲಿಲ.”
ಡೆನಿಸ್ ಎಂಬವನು ಇದು ಸತ್ಯವೆಂದು ಕಂಡುಕೊಂಡನು. ಅವನು ಬರೆಯುವುದು: “ನಾನು ತುಂಬ ಸಮಸ್ಯೆಗಳು ಇನ್ನೂ ಇದ್ದ ಸಮಮನಸ್ಸಿನ ಮದ್ಯವ್ಯಸನಿಯಾಗಿದ್ದೆ. ಕುಡಿಯುವುದನ್ನು ನಿಲ್ಲಿಸುವುದು ಸಾಕಾಗಿರಲಿಲ್ಲ. ನನ್ನ ಗತ ಕಾಲದೆಡೆಗೆ ಒಂದು ನೋಟವನ್ನು ತೆಗೆದುಕೊಳ್ಳಬೇಕಾಗಿತ್ತು, ನನ್ನ ಶೈಶವದ ಪಾಠಗಳನ್ನು ಪರೀಕ್ಷಿಸಬೇಕಾಗಿತ್ತು, ಅವು ನನ್ನನ್ನು ಹೇಗೆ ಬಾಧಿಸಿದವೆಂದು ನಾನು ತಿಳಿಯಬೇಕಾಗಿತ್ತು, ಮತ್ತು ನನ್ನ ವರ್ತನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿತ್ತು.”
ತದ್ರೀತಿ, ಗುಣಹೊಂದುತ್ತಾ ಮುಂದುವರಿಯಲಿಕ್ಕಾಗಿ, ಲಿಯೋ ತನ್ನೊಳಗೆ ಆಳವಾಗಿ ನೋಡಬೇಕಾಗಿತ್ತು. “ನಾನು ತೀರಾ ಹೊಟ್ಟೆಕಿಚ್ಚಿನ, ಜುಲುಮಿನ ವ್ಯಕ್ತಿಯಾಗಿದ್ದೆ. ಕೆಳಮಟ್ಟದ ಆತ್ಮಗೌರವ ಮತ್ತು ಮಹೋನ್ನತಿಯ ಭ್ರಾಂತಿಗಳ ಅವಧಿಗಳಿಂದ ಉಯ್ಯಲಾಡುತ್ತಿದ್ದೆ,” ಎಂದು ಅವನು ಹೇಳುತ್ತಾನೆ. ಲಿಯೋ ಎಫೆಸ 4:22 ರ, “ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು,” ಎಂಬ ಬೈಬಲ್ ಬುದ್ಧಿವಾದವನ್ನು ಪ್ರಯೋಗಿಸಿದನು. ಹೌದು, “ಹಿಂದಿನ ನಡತೆ” ನಿಮ್ಮ ವ್ಯಕ್ತಿತ್ವದ ಮೇಲೆ ಬಲಾಢ್ಯವಾದ ಪ್ರಭಾವವನ್ನು ಬೀರಿದೆ. ಗಾರೆ ಅಚಿಗ್ಚೆ ಹೇಗೆ ಹೊಂದಿಕೊಳ್ಳುತ್ತದೊ ಹಾಗೆಯೇ ನಿಮ್ಮ ವ್ಯಕ್ತಿತ್ವವು ನಿಮ್ಮ ಗತಕಾಲದ ನಡತೆಯಿಂದ ಅಂಶಿಕವಾಗಿ ರೂಪಿಸಲ್ಪಟ್ಟಿದೆ. ತಪ್ಪಾದ ನಡತೆಯು ತೊಲಗಿಸಲ್ಪಟ್ಟಾಗ, ಇನ್ನೇನು ಉಳಿಯುತ್ತದೆ? ಪ್ರಾಯಶಃ ಅನೇಕ ವರ್ಷಗಳ ಅವಧಿಯಲ್ಲಿ ರೂಪಿಸಲ್ಪಟ್ಟಿರುವ ಒಂದು ವ್ಯಕ್ತಿತ್ವವೇ. ಆದುದರಿಂದ, ಗುಣಹೊಂದುವಿಕೆಯಲ್ಲಿ ನಿಮ್ಮ ಹಿಂದಿನ ನಡತೆಗೆ ಹೊಂದಿಕೊಂಡಿರುವ ಹಳೆಯ ವ್ಯಕ್ತಿತ್ವವನ್ನು ಬದಲಾಯಿಸುವುದು ಸೇರಿರಲೇ ಬೇಕು.
ದೇವರೊಂದಿಗೆ ಒಂದು ಸಂಬಂಧವನ್ನು ಸ್ಥಾಪಿಸಿರಿ
ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸುವುದೂ ಲಿಯೋವಿನ ಗುಣವಾಗುವಿಕೆಯಲ್ಲಿ ಸೇರಿತ್ತು. “ಯೆಹೋವನ ಮೇಲೆ ನೆಚ್ಚಿಕೆಯಿಡಲು ಕಲಿತದ್ದು, ನನ್ನ ಮನೋಭಾವ, ವರ್ತನೆ, ಮತ್ತು ಹೊರನೋಟವನ್ನು ಪೂರ್ತಿ ಬದಲಾಯಿಸಿತು,” ಎನ್ನುತ್ತಾನೆ ಅವನು.
ಆದರೂ, ಸಾವಧಾನತೆ ಯೋಗ್ಯವಾಗಿದೆ. ಯಾವುದೇ ಸಂಬಂಧ—ಮಾನವರೊಂದಿಗಾಗಲಿ, ದೇವರೊಂದಿಗಾಗಲಿ—ತೆರೆದ ಮನಸ್ಸು, ಪ್ರಾಮಾಣಿಕತೆ, ಮತ್ತು ಭರವಸೆಯನ್ನು ಕೇಳಿಕೊಳ್ಳುತ್ತದೆ. ಮದ್ಯವ್ಯಸನವು ಸವೆಯಿಸುವುದು ಇವೇ ಗುಣಗಳನ್ನು. ಇವನ್ನು ಬೆಳೆಸಸಾಧ್ಯವಿದೆಯಾದರೂ ಅದಕ್ಕೆ ಸಮಯ ಹಿಡಿಯುತ್ತದೆ.
ಮದ್ಯವ್ಯಸನಿಯೋಪಾದಿ, ಒಂದು ಆಪ್ತ ಸಂಬಂಧದ ಅನುಭವ ನಿಮಗೆ ತಿಳಿದಿರಲಿಕ್ಕಿಲ್ಲ. ಪ್ರಾಯಶಃ ಅದನ್ನು ನೀವು ಎಂದೂ ಅನುಭವಿಸಿದಿರ್ದಲಿಕ್ಕಿಲ್ಲ. ಆದುದರಿಂದ ತಾಳ್ಮೆಯಿಂದಿರ್ರಿ. ವರ್ಜನೆಯ ಸ್ವಯಂಚಾಲಿತ ಉಪ ಉತ್ಪಾದನೆಯಾಗಿ ದೇವರೊಂದಿಗೆ ಒಂದು ಸಂಬಂಧವು ಮೈದೋರುವಂತೆ ನಿರಿಕ್ಷಿಸುತ್ತಾ ಈ ಹೆಜ್ಜೆಯನ್ನು ರಭಸದಿಂದ ಮುಂದಿಡಬೇಡಿರಿ. ದೇವರ ಮತ್ತು ಆತನ ಗುಣಗಳನ್ನು ತಿಳಿಯಲು ಪ್ರಯಾಸಪಡಿರಿ. ಯೆಹೋವನ ಮತ್ತು ಆತನ ಮಾರ್ಗಗಳ ಬಗೆಗೆ ಆಳವಾದ, ಗಣ್ಯತೆಯ ಅನಿಸಿಕೆಗಳನ್ನು ವ್ಯಕ್ತಪಡಿಸುವ ಬೈಬಲಿನ ಕೀರ್ತನೆಗಳನ್ನು ಪ್ರಾಯಶಃ ಜಾಗರೂಕತೆಯಿಂದ ಓದುತ್ತಾ, ಕ್ರಮವಾಗಿ ಧ್ಯಾನ ಮಾಡಿರಿ.c
“ಬಲಾಧಿಕ್ಯ”
ದೇವರೊಂದಿಗೆ ಒಂದು ಭರವಸೆಯ, ದೃಢವಿಶ್ವಾಸದ ಸಂಬಂಧವು ನಿಮ್ಮ ಮೇಲೆ ಬಲಾಢ್ಯವಾದ ಪ್ರಭಾವವನ್ನು ಬೀರಬಲ್ಲದು. ಗುಣಹೊಂದುವ ನಿಮ್ಮ ಪ್ರಯತ್ನವನ್ನು ಯೆಹೋವನು ಬೆಂಬಲಿಸುವನು. (ಹೋಲಿಸಿರಿ ಕೀರ್ತನೆ 51:10-12; 145:14.) ನೀವು ಶ್ರದ್ಧಾಪೂರ್ವಕವಾದ ಪ್ರಾರ್ಥನೆಯಿಂದ ಆತನನ್ನು ಯಾವ ಸಮಯದಲ್ಲಿಯೂ, ಆತನು ನಿಮಗೆ “ಬಲಾಧಿಕ್ಯವನ್ನು” ಕೊಡುವನೆಂಬ ದೃಢವಿಶ್ವಾಸದಿಂದ ಸಮೀಪಿಸಬಹುದು.—2 ಕೊರಿಂಥ 4:7; ಫಿಲಿಪ್ಪಿ 4:6, 7.
ಸೃಷ್ಟಿಕರ್ತನಿಗೆ, ಇನ್ನಾವ ಮನುಷ್ಯನಿಗಿಂತಲೂ ಉತ್ತಮವಾಗಿ, ನಿಮ್ಮ ಮನಃಪ್ರಕೃತಿ ಗೊತ್ತಿದೆ. (ಕೀರ್ತನೆ 103:14) ಮಾನವ ವಿವೇಕವನ್ನು ಆಧಾರಮಾಡಿಕೊಂಡಿರುವ ಮಾನವ ಸಲಹೆಗಾರರು ಸಹಾಯಮಾಡಬಲ್ಲರಾದರೆ, ಮನುಷ್ಯನ ಸೃಷ್ಟಿಕರ್ತನು ಈ ಹೋರಾಟದಲ್ಲಿ ನಿಮಗೆ ಇನ್ನೆಷ್ಟೋ ಹೆಚ್ಚು ಸಹಾಯ ಮಾಡಶಕ್ತನು! (ಯೆಶಾಯ 41:10; 48:17, 18) ಆತನು ಕ್ರೈಸ್ತ ಸಭೆಯೊಳಗಿಂದ ಪ್ರೀತಿಪೂರ್ವಕವಾದ ಬೆಂಬಲವನ್ನು ಒದಗಿಸಿದ್ದಾನೆ.
ಬೆಂಬಲ ನೀಡುವ ಒಂದು ವ್ಯವಸ್ಥೆ
ಕ್ರೈಸ್ತ ಸಭೆಯಲ್ಲಿರುವ ಆತ್ಮಿಕವಾಗಿ ಪಕ್ವತೆಯುಳ್ಳ ಹಿರಿಯರು ಸಹಾಯದ ಒಂದು ಮಹಾ ಉಗಮವಾಗಿರಬಲ್ಲರು. ಅವರಲ್ಲಿ ವೈದ್ಯಕೀಯ ಯಾ ಮಾನಸಿಕಾರೋಗ್ಯ ಕ್ಷೇತ್ರಗಳಲ್ಲಿ ನಿಪುಣರೆಂದು ಹೇಳಿಕೊಳ್ಳುವವರು ಕೆಲವರೇ ಇರಬಹುದಾದರೂ, ಅವರಿಗೆ ದೇವರ ವಾಕ್ಯ ಮತ್ತು ಮೂಲಸೂತ್ರಗಳು ಗೊತ್ತಿವೆ ಮತ್ತು ಅವುಗಳಲ್ಲಿ ಅವರಿಗೆ ಭರವಸೆಯಿದೆ. ಅವರು “ಗಾಳಿಯಲ್ಲಿ ಮರೆಯಂತೆಯೂ ಅತಿವೃಷಿಯ್ಟಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ” ಇರುವವರಾಗಿ ಪರಿಣಮಿಸಬಲ್ಲರು. (ಯೆಶಾಯ 32:2) ಅವರ ಸಹಾಯದ ಪೂರ್ಣ ಪ್ರಯೋಜನವನ್ನು ಪಡೆಯಿರಿ.d
ಇಂತಹ ಕ್ರೈಸ್ತ ಹಿರಿಯರು, ಕುಟುಂಬದ ಇತರ ಸದಸ್ಯರು ಮತ್ತು ಮಿತ್ರರ ಸಹಿತ, ನಿಮ್ಮ ಸ್ವಂತ ಕ್ರಿಯೆಗಳ ಫಲವಾಗಿ ಬಂದ ಪರಿಣಾಮಗಳಿಂದ ನಿಮ್ಮನ್ನು ಮರೆಮಾಡಿ ಕಾಪಾಡರೆಂಬುದು ನಿಶ್ಚಯ. ಕಮಿಂಗ್ ಆಫ್ ಡ್ರಿಂಕ್ ಎಂಬ ಪ್ರಕಾಶನವು ವಿವರಿಸುವುದು: “ಮದ್ಯವ್ಯಸನಿಗಳ ಚಿಕಿತ್ಸೆಯಲ್ಲಿರುವ ಪ್ರಮುಖಾಂಶವು, ಅವರನ್ನು ಆ ಚಟದ ಹಾನಿಕರ ಪರಿಣಾಮಗಳಿಂದ ಎದುರಿಸಿ, ಅವರ ಸ್ವಂತ ವರ್ತನೆಗಳಿಗೆ ಅವರೇ ಜವಾಬ್ದಾರಿ ವಹಿಸಿಕೊಳ್ಳುವಂತೆ ಮಾಡುವುದೇ.” ಹೀಗೆ ಅವರು ದಯಾಪರರಾದರೂ ಮುಚ್ಚುಮರೆಯಿಲ್ಲದೆ ಮಾತಾಡಿ, ನೀವು ನಿಜತ್ವವನ್ನು ಎದುರಿಸುವಂತೆಯೂ, ಮದ್ಯದ ವಿರುದ್ಧ ನೀವು ಮಾಡುವ ಹೋರಾಟವನ್ನು ಜಯಿಸಲು ಅವಶ್ಯವಿರುವ ಯಾವುದೇ ಚಿಕಿತ್ಸೆಗೆ ಮತ್ತು ವರ್ತನಾ ರೀತಿಗೆ ನೀವು ಅಂಟಿಕೊಳ್ಳುವಂತೆಯೂ ನಿಮ್ಮನ್ನು ಪ್ರೋತ್ಸಾಹಿಸುವರು.
ಗುಣಹೊಂದುವಿಕೆ ನಿಮ್ಮ ಜವಾಬ್ದಾರಿ
ಇತರರ ಬೆಂಬಲದಿಂದ ನೀವು ಪ್ರಯೋಜನ ಪಡೆಯಬಹುದಾದರೂ, ಯಾವ ಮನುಷ್ಯನಾಗಲಿ, ಯಾ ಆತ್ಮಜೀವಿಯಾಗಲಿ, ನಿಮ್ಮ ಗುಣಹೊಂದುವಿಕೆಯನ್ನು ಬಲಾತ್ಕರಿಸ ಸಾಧ್ಯವಿಲ್ಲ ಎಂದು ತಿಳಿಯುವ ಅಗತ್ಯ ನಿಮಗಿದೆ. ನೀವು ನಿಮ್ಮ ವರ್ತನೆಯನ್ನು ಆರಿಸಿಕೊಳ್ಳಲು ಸ್ವಾತಂತ್ರ್ಯವುಳ್ಳವರು. ನಿಮ್ಮ ವಾಸಿಯಾಗುವಿಕೆ ಅಂತಿಮವಾಗಿ ನಿಮ್ಮ ಜವಾಬ್ದಾರಿ. (ಹೋಲಿಸಿ ಆದಿಕಾಂಡ 4:7; ಧರ್ಮೋಪದೇಶಕಾಂಡ 30:19, 20; ಫಿಲಿಪ್ಪಿ 2:12.) ಆ ಜವಾಬ್ದಾರಿಯನ್ನು ಅಂಗೀಕರಿಸಿರಿ, ಮತ್ತು ಯೆಹೋವನು ನಿಮ್ಮನ್ನು ಆಶೀರ್ವದಿಸುವನು. ಒಂದನೆಯ ಕೊರಿಂಥ 10:13 ರಲ್ಲಿ ನಮಗೆ ಆಶ್ವಾಸನೆ ದೊರೆಯುವುದು: “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ತನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” ಆದುದರಿಂದ, ಆದರಣೆಯನ್ನು ತೆಗೆದುಕೊಳ್ಳಿರಿ—ಮದ್ಯವ್ಯಸನದೊಂದಿಗೆ ಮಾಡುವ ಹೋರಾಟದಲ್ಲಿ ನೀವು ಜಯಪಡೆಯಬಲ್ಲಿರಿ.
[ಅಧ್ಯಯನ ಪ್ರಶ್ನೆಗಳು]
a ನಾವು ಮದ್ಯವ್ಯಸನಿಯನ್ನು ಪುರುಷನಾಗಿ ಸೂಚಿಸುತ್ತೇವಾದರೂ, ಇಲ್ಲಿ ಕೊಟ್ಟಿರುವ ಮೂಲಸೂತ್ರಗಳು ಸ್ತ್ರೀಯರಿಗೂ ಅಷ್ಟೇ ಸರಿಸಮವಾಗಿ ಅನ್ವಯಿಸುತ್ತದೆ.
b ಸಹಾಯವನ್ನು ಒದಗಿಸಬಲ್ಲ ಅನೇಕ ಚಿಕಿತ್ಸಾ ಕೇಂದ್ರಗಳು, ಆಸ್ಪತ್ರೆಗಳು, ಮತ್ತು ಇತರ ಗುಣಮಾಡುವ ಕಾರ್ಯಕ್ರಮಗಳಿವೆ. ಕಾವಲಿನಬುರುಜು ಯಾವ ನಿರ್ದಿಷ್ಟ ಚಿಕಿತ್ಸೆಯನ್ನೂ ಅನುಮೋದಿಸುವುದಿಲ್ಲ. ಒಬ್ಬನು ಧರ್ಮಶಾಸ್ತ್ರೀಯ ಮೂಲಸೂತ್ರಗಳನ್ನು ರಾಜಿ ಮಾಡಿಸುವ ಚಟುವಟಿಕೆಗಳಲ್ಲಿ ಸಿಕ್ಕಿಬೀಳದಂತೆ ಎಚ್ಚರಿಕೆ ವಹಿಸಬೇಕು. ಆದರೆ ಅಂತಿಮ ವಿಶೇಷ್ಲಣೆಯಲ್ಲಿ, ಪ್ರತಿಯೊಬ್ಬನು ತನಗೆ ಯಾವ ರೀತಿಯ ಚಿಕಿತ್ಸೆ ಅಗತ್ಯವೊ ಅದನ್ನು ಅವನಾಗಿಯೇ ನಿರ್ಣಯಿಸಬೇಕು.
c ಕೆಲವು ಉದಾಹರಣೆಗಳು ಯಾವುವೆಂದರೆ ಕೀರ್ತನೆ 8, 9, 18, 19, 24, 51, 55, 63, 66, 73, 77, 84, 86, 90, 103, 130, 135, 139, 145.
d ಹಿರಿಯರಿಗೆ ಸಹಾಯಕರ ಮಾರ್ಗದರ್ಶನಗಳು ಮೇ 1, 1983 ರ ದ ವಾಚ್ಟವರ್, ಪುಟಗಳು 8-11 ರಲ್ಲಿ ಕಂಡುಬರುತ್ತವೆ.
[ಪುಟ 24 ರಲ್ಲಿರುವ ಚೌಕ]
ಮದ್ಯವ್ಯಸನವು ಉತ್ಪಾದಿಸುವ ನೀತಿಭ್ರಷ್ಟತೆ ಮತ್ತು ದುರವಸ್ಥೆಯಿಂದ ನೀವು ಪ್ರಾಯಶಃ ಬಳಲುತ್ತೀರಿ. ಹಾಗಿರುವಲ್ಲಿ, ಆಶಾರಹಿತರಾಗಬೇಡಿರಿ. ಸಹಾಯ ಲಭ್ಯವಿದೆ.
[ಪುಟ 26 ರಲ್ಲಿರುವ ಚೌಕ]
ಹಿಮ್ಮರಳುವ ಅನುಭವವಾಗುವಲ್ಲಿ
“ಹಿಮ್ಮರಳಲು ಸಿದ್ಧವಾಗಿರುವುದು ಅಗ್ನಿಶಾಮಕ ಕವಾಯತು ಮಾಡುತ್ತಿರುವಂತೆ,” ಎನ್ನುತ್ತದೆ ವಿಲ್ಪವರ್ಸ್ ನಾಟ್ ಇನಫ್ ಎಂಬ ಪುಸ್ತಕ. “ಬೆಂಕಿಯನ್ನು ನಿರೀಕ್ಷಿಸುತ್ತೀರಿ ಎಂದು ಇದರ ಅರ್ಥವಲ್ಲ, ಸಂಭವಿಸುವಲ್ಲಿ ನೀವು ಜವಾಬ್ದಾರಿಯ ಕ್ರಮವನ್ನು ಕೈಕೊಳ್ಳಲು ಸಿದ್ಧರಾಗಿದ್ದೀರಿ ಎಂದು ಅರ್ಥ.” ಹಿಮ್ಮರಳುವ ಅನುಭವ ನಿಮಗಾಗುವಲ್ಲಿ:
◻ ಯೆಹೋವನಿಗೆ ಪ್ರಾರ್ಥಿಸಿರಿ. ಆತನು ನಿಮ್ಮ ಸಮಸ್ಯೆಯನ್ನು ತಿಳಿದಿರುತ್ತಾನೆ ಮತ್ತು ಸಹಾಯ ಮಾಡುವ ಬಯಕೆಯುಳ್ಳವನಾಗಿದ್ದಾನೆ ಎಂಬ ಆಶ್ವಾಸನೆ ನಿಮಗಿರಲಿ.—ಕೀರ್ತನೆ 103:14; ಯೆಶಾಯ 41:10.
◻ ಅಗತ್ಯ ಬೀಳುವಲ್ಲಿ ಯಾರನ್ನು ಸಂಪರ್ಕಿಸುವಿರೆಂದು ಮೊದಲೇ ನಿರ್ಣಯಿಸಿ, ಒಬ್ಬ ಕ್ರೈಸ್ತ ಹಿರಿಯನಲ್ಲಿ ಭರವಸೆಯಿಂದ ಸಂಗತಿಯನ್ನು ಹೇಳಿರಿ. ನಡೆದುದರ ಕುರಿತು ಪ್ರಾಮಾಣಿಕತೆ ತೋರಿಸಿರಿ, ಮತ್ತು ಆತನ ಶಾಸ್ತ್ರೀಯ ಬುದ್ಧಿವಾದಕ್ಕೆ ಜಾಗರೂಕತೆಯಿಂದ ಕಿವಿಗೊಡಿರಿ.
◻ ಹತಾಶೆಯ ವಿರುದ್ಧ ಎಚ್ಚರಿಕೆ. ಆತ್ಮಜುಗುಪ್ಸೆ ನಿಮ್ಮನ್ನು ಪೂರ್ತಿ ಹಿಮ್ಮರಳಿಕೆಗೆ ಮಾತ್ರ ನಡಿಸುತದ್ತಾದುದರಿಂದ ನಿಮ್ಮ ದೋಷವನ್ನು ಯೋಗ್ಯ ಕಣ್ನೆಲೆಯಲ್ಲಿ ನೋಡಿರಿ. ಒಂದು ಕದನದಲ್ಲಿ ಸೋತುಹೋಗಿರುವುದು ಯುದ್ಧದಲ್ಲೇ ಸೋತು ಹೋದಿರಿ ಎಂದರ್ಥವಾಗುವುದಿಲ್ಲ. ಒಬ್ಬ ಬಹುದೂರ ಓಟದ ಓಟಗಾರನು ಬಿದ್ದಾಗ, ಅವನು ಆರಂಭದ ರೇಖೆಗೆ ಹಿಂದೆ ಹೋಗುವುದಿಲ್ಲ; ಎದ್ದು ಓಟವನ್ನು ಮುಂದುವರಿಸುತ್ತಾನೆ. ನಿಮ್ಮ ಗುಣಹೊಂದುವಿಕೆಯಲ್ಲಿಯೂ ಅದನ್ನೇ ಮಾಡಿರಿ. ನೀವು ಇನ್ನೂ ದಾರಿಯಲಿದ್ಲೀರ್ದಿ. ಮದ್ಯವರ್ಜನೆಯ ಸಮಯದಿಂದ ದಾಟಿರುವ ವಾರಗಳು, ತಿಂಗಳುಗಳು, ಯಾ ವರ್ಷಗಳು ಇನ್ನೂ ಅಸ್ತಿತ್ವದಲ್ಲಿವೆ.
[ಪುಟ 25 ರಲ್ಲಿರುವ ಚಿತ್ರ]
ನಿಮ್ಮನ್ನು ನೀವೇ ಪರೀಕ್ಷಿಸುವ, ಪ್ರಾಮಾಣಿಕ ದೃಷ್ಟಿಯಿಂದ ನೋಡಿ, ಅಲ್ಲಗಳೆಯುವಿಕೆಯನ್ನು ಪ್ರತಿಭಟಿಸಿರಿ