ದೀನರು ಸಂತೋಷವುಳ್ಳವರು
“ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.”—1 ಪೇತ್ರ 5:5.
1, 2. ಯೇಸು ತನ್ನ ಪರ್ವತ ಪ್ರಸಂಗದಲ್ಲಿ ಸಂತೋಷವುಳ್ಳವರಾಗಿರುವ ವಿಷಯವನ್ನು ದೀನರಾಗಿರುವ ವಿಷಯಕ್ಕೆ ಹೇಗೆ ಸಂಬಂಧಿಸಿದನು?
ಸಂತೋಷದಿಂದಿರುವುದು ಮತ್ತು ದೀನರಾಗಿರುವುದು ಒಂದಕ್ಕೊಂದು ಸಂಬಂಧಿಸಿವೆಯೋ? ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಯೇಸು ಕ್ರಿಸ್ತನು, ಆತನ ಅತಿ ಪ್ರಖ್ಯಾತ ಪರ್ವತ ಪ್ರಸಂಗದಲ್ಲಿ, ಒಂಬತ್ತು ಸಂತೋಷಗಳನ್ನು ಅಥವಾ ಸೌಭಾಗ್ಯಗಳನ್ನು ಬಣ್ಣಿಸಿದ್ದಾನೆ. (ಮತ್ತಾಯ 5:1-12) ಸಂತೋಷವುಳ್ಳವರಾಗಿರುವುದನ್ನು ದೀನರಾಗಿರುವುದಕ್ಕೆ ಯೇಸು ಸಂಬಂಧಿಸಿದ್ದಾನೋ? ಹೌದು, ಸಂಬಂಧಿಸಿದ್ದಾನೆ, ಯಾಕಂದರೆ ದೀನರಾಗಿರುವುದು ಆತನು ತಿಳಿಸಿದ ಹಲವಾರು ಸಂತೋಷಗಳಲ್ಲಿ ಒಳಗೂಡಿರುತ್ತದೆ. ಉದಾಹರಣೆಗೆ, ತನ್ನ ಆತ್ಮಿಕ ಅಗತ್ಯಗಳ ಪ್ರಜ್ಞೆಯುಳ್ಳವನಾಗಿರುವುದಕ್ಕೆ ಒಬ್ಬನು ದೀನನಾಗಿರಲೇಬೇಕು. ದೀನರು ಮಾತ್ರವೇ ನೀತಿಗಾಗಿ ಹಸಿವು ಮತ್ತು ಬಾಯಾರಿಕೆ ಉಳ್ಳವರಾಗಿದ್ದಾರೆ. ಮತ್ತು ದುರಹಂಕಾರಿಗಳು ಸೌಮ್ಯಚಿತ್ತರಲ್ಲ ಮತ್ತು ಕರುಣೆಯುಳ್ಳವರಲ್ಲ, ಅವರು ಶಾಂತಿಕರ್ತರೂ ಅಲ್ಲ.
2 ದೀನರು ಸಂತೋಷವುಳ್ಳವರಾಗಿದ್ದಾರೆ ಯಾಕಂದರೆ ದೀನರಾಗಿರುವುದು ಯೋಗ್ಯವೂ ಪ್ರಾಮಾಣಿಕವೂ ಆಗಿದೆ; ಅದಲ್ಲದೆ ದೀನರು ಸಂತೋಷವುಳ್ಳವರಾಗಿದ್ದಾರೆ ಯಾಕಂದರೆ ದೀನರಾಗಿರುವುದು ವಿವೇಕಪ್ರದವು; ಅದು ಯೆಹೋವ ದೇವರೊಂದಿಗೆ ಮತ್ತು ಜೊತೆ ಕ್ರೈಸ್ತರೊಂದಿಗೆ ಒಳ್ಳೆಯ ಸಂಬಂಧಗಳಿಗೆ ನೆರವಾಗುತ್ತದೆ. ಅದಲ್ಲದೆ, ದೀನ ಜನರು ಸಂತೋಷಿತರು ಯಾಕಂದರೆ ದೀನರಾಗಿರುವುದು ಅವರ ಪಾಲಿನ ಪ್ರೀತಿಯ ಒಂದು ಅಭಿವ್ಯಕ್ತಿಯಾಗಿದೆ.
3. ಪ್ರಾಮಾಣಿಕತೆಯು ನಮ್ಮನ್ನು ದೀನರಾಗಿರುವಂತೆ ಏಕೆ ಬದ್ಧಮಾಡುತ್ತದೆ?
3 ಪ್ರಾಮಾಣಿಕತೆಯು ನಮ್ಮನ್ನು ದೀನರಾಗಿರುವಂತೆ ಅಪೇಕ್ಷಿಸುವುದೇಕೆ? ಮೊದಲನೆಯದಾಗಿ ಯಾಕಂದರೆ, ನಾವೆಲ್ಲರೂ ಅಸಂಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದಿದ್ದೇವೆ ಮತ್ತು ತಪ್ಪುಗಳನ್ನು ಮಾಡುತ್ತಾ ಇರುತ್ತೇವೆ. ಅಪೊಸ್ತಲ ಪೌಲನು ತನ್ನ ಕುರಿತು ಅಂದದ್ದು: “ನನ್ನಲ್ಲಿ ಅಂದರೆ ನನ್ನ ಶರೀರಾಧೀನಸ್ವಭಾವದಲ್ಲಿ ಒಳ್ಳೇದೇನೂ ವಾಸವಾಗಿಲ್ಲವೆಂದು ನನಗೆ ತಿಳಿದದೆ. ಒಳ್ಳೇದನ್ನು ಮಾಡುವದಕ್ಕೆ ಮನಸ್ಸುಂಟು; ಆದರೆ ಅದನ್ನು ಮಾಡುವದು ನನ್ನಿಂದಾಗದು.” (ರೋಮಾಪುರ 7:18) ಹೌದು, ನಾವೆಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದೇವೆ. (ರೋಮಾಪುರ 3:23) ಯಥಾರ್ಥ ಭಾವವು ನಮ್ಮನ್ನು ದುರಹಂಕಾರಿಗಳಾಗಿರದಂತೆ ಇಡುತ್ತದೆ. ಒಂದು ತಪ್ಪನ್ನು ಒಪ್ಪಿಕೊಳ್ಳುವುದಕ್ಕೆ ದೈನ್ಯವು ಆವಶ್ಯಕವಾಗಿದೆ, ಮತ್ತು ಪ್ರಾಮಾಣಿಕತೆಯು ನಾವೊಂದು ತಪ್ಪನ್ನು ಮಾಡುವಾಗಲೆಲ್ಲಾ ದೋಷವನ್ನು ಸ್ವೀಕರಿಸುವಂತೆ ಸಹಾಯ ಮಾಡುವುದು. ನಾವೇನನ್ನು ಮಾಡಲು ಪರಿಶ್ರಮಿಸುತ್ತೇವೋ ಅದನ್ನು ಮಾಡಲು ತಪ್ಪುತ್ತಾ ಇರುವುದರಿಂದ, ದೀನರಾಗಿರಲು ನಮಗೆ ಯೋಗ್ಯ ಕಾರಣಗಳು ಇವೆ.
4. ನಾವು ದೀನರಾಗಿರುವುದಕ್ಕೆ 1 ಕೊರಿಂಥ 4:7 ರಲ್ಲಿ ಯಾವ ನಿರ್ಬಂಧಕ ಕಾರಣವನ್ನು ಕೊಡಲಾಗಿದೆ?
4 ಪ್ರಾಮಾಣಿಕತೆಯು ನಮ್ಮನ್ನು ಏಕೆ ದೀನರಾಗಿ ಮಾಡಬೇಕೆಂಬದಕ್ಕೆ ಪೌಲನು ಇನ್ನೊಂದು ಕಾರಣವನ್ನು ನಮಗೆ ಕೊಡುತ್ತಾನೆ. ಅವನನ್ನುವುದು: “ನಿನಗೂ ಇತರರಿಗೂ ತಾರತಮ್ಯ ಮಾಡಿದವರು ಯಾರು? ದೇವರಿಂದ ಹೊಂದದೆ ಇರುವಂಥದ್ದು ನಿನ್ನಲ್ಲಿ ಒಂದಾದರೂ ಉಂಟೋ? ಹೊಂದಿದ ಮೇಲೆ ಹೊಂದದವನಂತೆ ನೀನು ಯಾಕೆ ಹಿಗ್ಗಿಕೊಳ್ಳುತ್ತೀ?” (1 ಕೊರಿಂಥ 4:7) ಅದರ ಕುರಿತು ಯಾವ ಸಂಶಯವೂ ಇಲ್ಲ, ನಮಗೇ ಕೀರ್ತಿಯನ್ನು ತೆಗೆದುಕೊಳ್ಳುವುದು, ನಮ್ಮ ಸ್ವತ್ತುಗಳ, ಸಾಮರ್ಥ್ಯಗಳ, ಅಥವಾ ಸಾಧನೆಗಳ ವಿಷಯದಲ್ಲಿ ಬಿಂಕದಿಂದಿರುವುದು ನಮಗೆ ಪ್ರಾಮಾಣಿಕತೆಯಾಗಿರದು. ದೇವರ ಮುಂದೆ ಒಂದು ಒಳ್ಳೇ ಮನಸ್ಸಾಕ್ಷಿಯನ್ನು ನಾವು ಹೊಂದುವಂತೆ ಪ್ರಾಮಾಣಿಕತೆಯು ನಮಗೆ ನೆರವಾಗುತ್ತದೆ? ಆ ಮೂಲಕ “ನಾವು ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ [ಪ್ರಾಮಾಣಿಕರಾಗಿ, NW] ನಡೆದು” ಕೊಳ್ಳಬಹುದು.—ಇಬ್ರಿಯ 13:18.
5. ನಾವು ಒಂದು ತಪ್ಪನ್ನು ಮಾಡಿದಾಗಲೂ ಪ್ರಾಮಾಣಿಕತೆಯು ನಮಗೆ ಹೇಗೆ ಸಹಾಯ ಮಾಡುವುದು?
5 ನಾವು ಒಂದು ತಪ್ಪನ್ನು ಮಾಡುವಾಗ ದೀನರಾಗಿರುವಂತೆ ಪ್ರಾಮಾಣಿಕತೆಯು ನಮಗೆ ಸಹಾಯ ಮಾಡುತ್ತದೆ. ನಮ್ಮನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುವ ಬದಲಿಗೆ ಅಥವಾ ಬೇರೆಯವರ ಮೇಲೆ ದೂರನ್ನು ಬದಲಾಯಿಸುವ ಬದಲಿಗೆ, ದೋಷವನ್ನು ಸ್ವೀಕರಿಸಲು ನಮ್ಮನ್ನು ಹೆಚ್ಚು ಸಿದ್ಧರನ್ನಾಗಿ ಮಾಡುತ್ತದೆ. ಹೀಗೆ ಆದಾಮನು ಹವ್ವಳನ್ನು ದೂರಿದಾಗ, ದಾವೀದನಾದರೋ ಬತ್ಷೆಬೆಯನ್ನು, ‘ಆಕೆಯು ಪೂರ್ಣ ವೀಕ್ಷಣೆಯಲ್ಲಿ ಸ್ನಾನ ಮಾಡಬಾರದಿತ್ತು, ನಾನು ಶೋಧನೆಗೆ ಒಳಗಾಗುವುದನ್ನು ತಡೆಯ ಸಾಧ್ಯವಿರಲಿಲ್ಲ,’ ಎಂದನ್ನುತ್ತಾ ದೂರಲಿಲ್ಲ. (ಆದಿಕಾಂಡ 3:12; 2 ಸಮುವೇಲ 11:2-4) ನಿಜವಾಗಿ, ಒಂದು ಕಡೆ, ಪ್ರಾಮಾಣಿಕರಾಗಿರುವುದು ದೀನರಾಗುವಂತೆ ನಮಗೆ ಸಹಾಯ ಮಾಡುತ್ತದೆ ಎಂದು ಹೇಳಬಹುದು; ಇನ್ನೊಂದು ಕಡೆ, ದೀನರಾಗಿರುವಿಕೆಯು ಪ್ರಾಮಾಣಿಕರಾಗುವಂತೆ ನಮಗೆ ಸಹಾಯ ಮಾಡುತ್ತದೆ.
ಯೆಹೋವನಲ್ಲಿ ನಂಬಿಕೆಯು ನಾವು ದೀನರಾಗುವಂತೆ ಸಹಾಯ ಮಾಡುತ್ತದೆ
6, 7. ದೇವರಲ್ಲಿ ನಂಬಿಕೆಯು ನಾವು ದೀನರಾಗಿರುವಂತೆ ಹೇಗೆ ಸಹಾಯ ಮಾಡುತ್ತದೆ?
6 ಯೆಹೋವನಲ್ಲಿ ನಂಬಿಕೆಯು ಸಹ ನಾವು ದೀನರಾಗಿರುವಂತೆ ಸಹಾಯ ಮಾಡುತ್ತದೆ. ವಿಶ್ವದ ಪರಮಾಧಿಕಾರಿಯಾದ ನಿರ್ಮಾಣಿಕನು ಎಷ್ಟು ದೊಡ್ಡವನೆಂಬದನ್ನು ಗಣ್ಯಮಾಡುವಿಕೆಯು, ನಾವು ತೀರ ಪ್ರಾಮುಖ್ಯರೆಂದು ನೆನಸುವುದರಿಂದ ನಮ್ಮನ್ನು ತಡೆಯುತ್ತದೆ. ಇದನ್ನು ಪ್ರವಾದಿ ಯೆಶಾಯನು ಎಷ್ಟು ಚೆನ್ನಾಗಿ ನಮಗೆ ನೆನಪಿಸುತ್ತಾನೆ! ಯೆಶಾಯ 40:15, 22 ರಲ್ಲಿ ನಾವು ಓದುವುದು: “ಆಹಾ, ಆತನ ಗಣನೆಯಲ್ಲಿ ಜನಾಂಗಗಳು ಕಪಿಲೆಯಿಂದುದುರುವ ತುಂತುರಿನಂತೆಯೂ ತ್ರಾಸಿನ ತಟ್ಟೆಯ ದೂಳಿನ ಹಾಗೂ ಇರುತ್ತವೆ. . . . ಭೂಮಂಡಲನಿವಾಸಿಗಳು ಮಿಡತೆಗಳಂತೆ ಸಣ್ಣಗೆ ಕಾಣಿಸುವಷ್ಟು ಉನ್ನತವಾದ ಆಕಾಶದಲ್ಲಿ ಆವನು ಆಸೀನನಾಗಿದ್ದಾನೆ.”
7 ನಾವು ಒಂದು ಅನ್ಯಾಯವನ್ನು ಅನುಭವಿಸಿದ್ದೇವೆ ಎಂಬ ಅನಿಸಿಕೆಯಾದಾಗಲೂ ಯೆಹೋವನಲ್ಲಿ ನಂಬಿಕೆಯು ನಮಗೆ ಸಹಾಯಕಾರಿಯು. ವಿಷಯದ ಕುರಿತು ಪರಿತಪಿಸುವ ಬದಲಿಗೆ, ಕೀರ್ತನೆ 37:1-3, 8, 9 ರಲ್ಲಿ ಕೀರ್ತನೆಗಾರನು ನಮಗೆ ನೆನಪಿಸುವ ಪ್ರಕಾರ, ಯೆಹೋವನಲ್ಲಿ ದೈನ್ಯದಿಂದ ನಾವು ಕಾದುಕೊಂಡಿರುವೆವು. ಅಪೊಸ್ತಲ ಪೌಲನು ಇದೇ ವಿಷಯವನ್ನು ಸೂಚಿಸುತ್ತಾನೆ: “ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು [ಯೆಹೋವನು, NW] ಹೇಳುತ್ತಾನೆಂಬದಾಗಿ ಬರೆದದೆ.”—ರೋಮಾಪುರ 12:19.
ದೈನ್ಯವು—ವಿವೇಕದ ಮಾರ್ಗ
8. ದೈನ್ಯವು ಯೆಹೋವನೊಂದಿಗೆ ಒಂದು ಸುಸಂಬಂಧಕ್ಕೆ ನೆರವಾಗುತ್ತದೆಯೇಕೆ?
8 ದೀನರಾಗಿರುವುದು ವಿವೇಕದ ಮಾರ್ಗವೇಕೆಂಬದಕ್ಕೆ ಅನೇಕ ಕಾರಣಗಳಿವೆ. ಒಂದು ಯಾವುದೆಂದರೆ, ಈ ಮೊದಲೇ ಸೂಚಿಸಿದ ಪ್ರಕಾರ, ಅದು ನಮ್ಮ ನಿರ್ಮಾಣಿಕನೊಂದಿಗೆ ಸುಸಂಬಂಧಗಳಿಗೆ ನೆರವಾಗುತ್ತದೆ. ಜ್ಞಾನೋಕ್ತಿ 16:5 ರಲ್ಲಿ ದೇವರ ವಾಕ್ಯವು ಸರಳವಾಗಿ ಹೇಳುವುದು: “ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ.” ಜ್ಞಾನೋಕ್ತಿ 16:18 ರಲ್ಲಿ ಸಹ ನಾವು ಓದುವುದು: “ಗರ್ವದಿಂದ ಭಂಗ. ಉಬ್ಬಿನಿಂದ ದೊಬ್ಬು.” ಇಂದೋ ಮುಂದೋ ದುರಹಂಕಾರಿಗಳು ಕಷ್ಟವನ್ನು ಅನುಭವಿಸುತ್ತಾರೆ. ನಾವು 1 ಪೇತ್ರ 5:5 ರಲ್ಲಿ ಏನು ಓದುತ್ತೇವೋ ಆ ಕಾರಣದಿಂದಾಗಿ, ಅದು ನಿಜವಾಗಿ ಆ ರೀತಿಯಾಗಿ ಇರಲೇಬೇಕು: “ನೀವೆಲ್ಲರೂ ದೀನಮನಸ್ಸೆಂಬ ವಸ್ತ್ರದಿಂದ ಸೊಂಟಾಕಟ್ಟಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” ಪ್ರಾರ್ಥನೆ ಮಾಡುತ್ತಿದ್ದ ಫರಿಸಾಯ ಮತ್ತು ಸುಂಕದವನ ಕುರಿತ ಯೇಸುವಿನ ಸಾಮ್ಯದಲ್ಲಿ ಇದೇ ವಿಷಯವನ್ನು ನೀವು ಕಾಣುವಿರಿ. ಹೆಚ್ಚು ನೀತಿವಂತನಾಗಿ ಪರಿಣಮಿಸಿದವನು ಆ ದೀನನಾದ ಸುಂಕದವನೇ.—ಲೂಕ 18:9-14.
9. ಕಷ್ಟಾಪತ್ತಿನ ಸಮಯಗಳಲ್ಲಿ ದೈನ್ಯವು ಯಾವ ಸಹಾಯ ನೀಡುತ್ತದೆ?
9 ದೈನ್ಯವು ವಿವೇಕದ ಮಾರ್ಗ, ಯಾಕಂದರೆ ದೈನ್ಯವು ಯಾಕೋಬ 4:7 ರಲ್ಲಿ ಕಂಡುಬರುವ ಬುದ್ಧಿವಾದವನ್ನು ಪಾಲಿಸಲಿಕ್ಕೆ ನಮಗೆ ಸುಲಭ ಮಾಡುತ್ತದೆ: “ಹೀಗಿರಲಾಗಿ ದೇವರಿಗೆ ಒಳಗಾಗಿರಿ.” ನಾವು ದೀನರಾಗದ್ದಲ್ಲಿ, ನಾವು ಕಷ್ಟಾಪತ್ತನ್ನು ಅನುಭವಿಸುವಂತೆ ಯೆಹೋವನು ಅನುಮತಿಸುವಾಗ ದಂಗೆ ಏಳೆವು. ನಮ್ಮ ಪರಿಸ್ಥಿತಿಗಳೊಂದಿಗೆ ಸಂತುಷ್ಟರಾಗಿದ್ದು, ತಾಳಿಕೊಳ್ಳುವಂತೆ ದೈನ್ಯವು ನಮ್ಮನ್ನು ಶಕ್ತರನ್ನಾಗಿ ಮಾಡುವುದು. ಗರ್ವಿಯಾದ ವ್ಯಕ್ತಿಯು ಅಸಂತುಷ್ಟನೂ, ಯಾವಾಗಲೂ ಹೆಚ್ಚನ್ನು ಆಶಿಸುವವನೂ ಆಗಿದ್ದು, ಸಂಕಷ್ಟದ ಪರಿಸ್ಥಿತಿಗಳಲ್ಲಿ ದಂಗೆಯೇಳುತ್ತಾನೆ. ಇನ್ನೊಂದು ಕಡೆ, ದೀನ ವ್ಯಕ್ತಿಯಾದರೋ ಸಂಕಷ್ಟಗಳಲ್ಲಿ ಮತ್ತು ಪರೀಕ್ಷೆಗಳಲ್ಲಿ, ಯೋಬನು ಮಾಡಿದಂತೆಯೇ, ತಾಳಿಕೊಳ್ಳುತ್ತಾನೆ. ಯೋಬನು ತನ್ನೆಲ್ಲಾ ಸ್ವತ್ತುಗಳ ನಷ್ಟವನ್ನು ಅನುಭವಿಸಿದನು, ವೇದನಾಭರಿತ ವ್ಯಾಧಿಯು ಅವನನ್ನು ಹೊಡೆಯಿತು, ಮತ್ತು ಅನಂತರ ಅವನ ಪತ್ನಿಯು, “ದೇವರನ್ನು ದೂಷಿಸಿ ಸಾಯಿ” ಎಂದನ್ನುತ್ತಾ, ದುರಹಂಕಾರದ ಮಾರ್ಗವನ್ನು ತಕ್ಕೊಳ್ಳುವಂತೆ ಅವನಿಗೆ ಬುದ್ಧಿಹೇಳಿದಳು ಕೂಡ. ಅವನು ಹೇಗೆ ಪ್ರತಿಕ್ರಿಯಿಸಿದನು? ಬೈಬಲ್ ದಾಖಲೆ ನಮಗನ್ನುವುದು: “ಆಗ ಯೋಬನು ಆಕೆಗೆ—ಮೂರ್ಖಳು ಮಾತಾಡಿದಂತೆ ನೀನು ಮಾತಾಡುತ್ತೀ; ದೇವರ ಹಸ್ತದಿಂದ ನಾವು ಒಳ್ಳೇದನ್ನು ಹೊಂದುತ್ತೇವಷ್ಟೆ; ಕೆಟ್ಟದ್ದನ್ನು ಹೊಂದಬಾರದೋ ಎಂದು ಹೇಳಿದನು. ಈ ಸಂದರ್ಭದಲ್ಲಿಯೂ ಪಾಪದ ಮಾತೊಂದೂ ಅವನ ತುಟಿಗಳಿಂದ ಹೊರಡಲಿಲ್ಲ.” (ಯೋಬ 2:9, 10) ಯೋಬನು ದೀನನಾಗಿದದ್ದರಿಂದ ದಂಗೆಯೇಳಲಿಲ್ಲ ಬದಲಿಗೆ ಅವನ ಮೇಲೆ ಏನು ಬರುವಂತೆ ಯೆಹೋವನು ಅನುಮತಿಸಿದನೋ ಅದಕ್ಕೆ ವಿವೇಕದಿಂದ ಅಧೀನನಾದನು. ಆದರೆ ಕೊನೆಗೆ ಹೇರಳ ಪ್ರತಿಫಲವನ್ನು ಅವನು ಪಡೆದನು.—ಯೋಬ 42:10-16; ಯಾಕೋಬ 5:11.
ದೈನ್ಯವು ಇತರರೊಂದಿಗೆ ಸುಸಂಬಂಧಗಳಿಗೆ ನೆರವಾಗುತ್ತದೆ
10. ದೈನ್ಯವು ಜೊತೆ ಕ್ರೈಸ್ತರೊಂದಿಗೆ ನಮ್ಮ ಸಂಬಂಧಗಳನ್ನು ಹೇಗೆ ಪ್ರಗತಿಗೊಳಿಸುತ್ತದೆ?
10 ದೈನ್ಯವು ವಿವೇಕದ ಮಾರ್ಗ ಯಾಕಂದರೆ ನಮ್ಮ ಜೊತೆ ಕ್ರೈಸ್ತರೊಂದಿಗೆ ಒಳ್ಳೇ ಸಂಬಂಧಗಳಿಗೆ ಅದು ನೆರವಾಗುತ್ತದೆ. ಯುಕ್ತವಾಗಿಯೇ ಅಪೊಸ್ತಲ ಪೌಲನು ನಮಗೆ ಉಪದೇಶಿಸುವುದು: “ಪಕ್ಷಪಾತದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವದನ್ನೂ ಮಾಡದೆ ಪ್ರತಿಯೊಬ್ಬನು ದೀನಭಾವದಿಂದ ಮತ್ತೊಬ್ಬರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.” (ಫಿಲಿಪ್ಪಿ 2:3, 4) ಇತರರೊಂದಿಗೆ ಪ್ರತಿಸ್ಪರ್ಧೆಯನ್ನು ಮಾಡದಂತೆ ಅಥವಾ ಇತರರಿಗಿಂತ ಅತಿಶಯಿಸಿ ಬೆಳಗಲು ಪ್ರಯತ್ನಿಸದಂತೆ ದೈನ್ಯವು ನಮ್ಮನ್ನು ವಿವೇಕದಿಂದ ತಡೆಯುತ್ತದೆ. ಅಂಥ ಮಾನಸಿಕ ಮನೋಭಾವಗಳು ನಮಗೆ ಮತ್ತು ನಮ್ಮ ಜೊತೆ ಕ್ರೈಸ್ತರಿಗೆ ಸಮಸ್ಯೆಗಳನ್ನು ಉಂಟುಮಾಡುತ್ತವೆ.
11. ತಪ್ಪುಗಳನ್ನು ಮಾಡುವುದನ್ನು ವರ್ಜಿಸುವಂತೆ ನಮಗೆ ದೈನ್ಯವು ಏಕೆ ಸಹಾಯ ಮಾಡಬಲ್ಲದು?
11 ತಪ್ಪುಗಳನ್ನು ಮಾಡುವುದರಿಂದ ದೂರವಿರುವಂತೆ ದೈನ್ಯವು ಮತ್ತೆ ಮತ್ತೆ ನಮಗೆ ಸಹಾಯ ಮಾಡುವುದು. ಅದು ಹೇಗೆ? ಹೇಗಂದರೆ ದೈನ್ಯವು ನಮ್ಮನ್ನು ಮಿತಿಮೀರಿದ ಆತ್ಮವಿಶ್ವಾಸವುಳ್ಳವರಾಗುವುದರಿಂದ ತಡೆಯುತ್ತದೆ. ಬದಲಾಗಿ, 1 ಕೊರಿಂಥ 10:12 ರ ಪೌಲನ ಬುದ್ಧಿವಾದವನ್ನು ನಾವು ಗಣ್ಯಮಾಡುವೆವು: “ಆದಕಾರಣ ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.” ದುರಹಂಕಾರಿಯಾದ ವ್ಯಕ್ತಿಯು ತೀರ ಹೆಚ್ಚು ಆತ್ಮವಿಶ್ವಾಸವುಳ್ಳವನಾಗಿರುವುದರಿಂದ, ಹೊರಗಣ ಪ್ರಭಾವಗಳಿಂದಾಗಿ ಅಥವಾ ತನ್ನ ಸ್ವಂತ ಬಲಹೀನತೆಗಳಿಂದಾಗಿ ತಪ್ಪುಗಳನ್ನು ಮಾಡುವ ಪ್ರವೃತ್ತಿಯುಳ್ಳವನಾಗಿದ್ದಾನೆ.
12. ದೈನ್ಯವು ಯಾವ ಶಾಸ್ತ್ರೀಯ ಹಂಗನ್ನು ಮುಟ್ಟಲು ನಮ್ಮನ್ನು ಪ್ರೇರೇಪಿಸುವುದು?
12 ಅಧೀನತೆಯಲ್ಲಿರುವ ಆವಶ್ಯಕತೆಗೆ ಹೊಂದಿಕೊಳ್ಳಲು ದೈನ್ಯವು ನಮಗೆ ಸಹಾಯ ಮಾಡುವುದು. ಎಫೆಸ 5:21 ರಲ್ಲಿ, ನಮಗೆ ಬೋಧಿಸಿದ್ದು: “ಕ್ರಿಸ್ತನಿಗೆ ಭಯಪಡುವವರಾಗಿದ್ದು ಒಬ್ಬರಿಗೊಬ್ಬರು ವಿನಯವುಳ್ಳವರಾಗಿ [ಅಧೀನರಾಗಿ, NW] ನಡೆದುಕೊಳ್ಳಿರಿ.” ನಿಜವಾಗಿಯೂ, ನಮಗೆಲ್ಲರಿಗೆ ಅಧೀನತೆಯಲ್ಲಿರುವ ಅಗತ್ಯವು ಇರುವುದಿಲ್ಲವೇ? ಮಕ್ಕಳು ತಮ್ಮ ಹೆತ್ತವರಿಗೆ, ಪತ್ನಿಯಂದಿರು ತಮ್ಮ ಗಂಡಂದಿರಿಗೆ, ಮತ್ತು ಗಂಡಂದಿರು ಕ್ರಿಸ್ತನಿಗೆ ಅಧೀನರಾಗಿರುವ ಅಗತ್ಯವಿದೆ. (1 ಕೊರಿಂಥ 11:3; ಎಫೆಸ 5:22; 6:1) ಅಲ್ಲದೆ, ಯಾವುದೇ ಕ್ರೈಸ್ತ ಸಭೆಯಲ್ಲಿ, ಶುಶ್ರೂಷಕ ಸೇವಕರೂ ಸೇರಿ, ಎಲ್ಲರೂ, ಹಿರಿಯರಿಗೆ ಅಧೀನತೆಯನ್ನು ತೋರಿಸಬೇಕಾಗಿದೆ. ಹಿರಿಯರು ವಿಶೇಷವಾಗಿ ಸರ್ಕಿಟ್ ಮೇಲ್ವಿಚಾರಕನು ಪ್ರತಿನಿಧೀಕರಿಸುವ ನಂಬಿಗಸ್ತ ಆಳು ವರ್ಗಕ್ಕೆ ಅಧೀನರಾಗಿದ್ದಾರೆಂಬದು ಸಹ ಸತ್ಯವಲ್ಲವೇ? ಮತ್ತು ಪುನಃ, ಸರ್ಕಿಟ್ ಮೇಲ್ವಿಚಾರಕನು ಜಿಲ್ಲಾ ಮೇಲ್ವಿಚಾರನಿಗೆ, ಜಿಲ್ಲಾ ಮೇಲ್ವಿಚಾರಕನು ತಾನು ಸೇವೆ ಮಾಡುತ್ತಿರುವ ದೇಶದ ಬ್ರಾಂಚ್ ಕಮಿಟಿಗೆ ಅಧೀನನಾಗಿರುವ ಅಗತ್ಯವಿದೆ. ಬ್ರಾಂಚ್ ಕಮಿಟಿಯ ಸದಸ್ಯರ ಕುರಿತೇನು? ಅವರು “ಒಬ್ಬರಿಗೊಬ್ಬರು ಅಧೀನರಾಗಿ ನಡೆದು” ಕೊಳ್ಳಲೇ ಬೇಕು ಮತ್ತು ಯಾವುದು ಸರದಿಯಲ್ಲಿ, ಸಿಂಹಾಸನಾಸೀನ ರಾಜ ಯೇಸುವಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೊ ಆ ನಂಬಿಗಸ್ತ ವಿವೇಕಿ ಆಳು ವರ್ಗವನ್ನು ಪ್ರತಿನಿಧಿಸುವ ಆಡಳಿತ ಮಂಡಲಿಗೆ ಕೂಡ ಅಧೀನರಾಗಿ ನಡೆದುಕೊಳ್ಳಲೇ ಬೇಕು. (ಮತ್ತಾಯ 24:45-47) ಹಿರಿಯರ ಯಾವುದೇ ಮಂಡಲಿಯಲ್ಲಿ ಇರುವಂತೆ, ಆಡಳಿತ ಮಂಡಲಿಯ ಸದಸ್ಯರು ಒಬ್ಬರು ಇನ್ನೊಬ್ಬರ ದೃಷ್ಟಿಕೋನಗಳನ್ನು ಗೌರವಿಸಬೇಕಾಗಿದೆ. ಉದಾಹರಣೆಗೆ, ತನ್ನಲ್ಲಿ ಒಂದು ಉತ್ತಮ ವಿಚಾರವಿದೆ ಎಂದು ಒಬ್ಬನು ನೆನಸಬಹುದು. ಆದರೆ ಇತರ ಸದಸ್ಯರ ಸಾಕಷ್ಟು ಸಂಖ್ಯೆಯು ಅವನ ಸಲಹೆಯನ್ನು ಒಪ್ಪದಿರುವಲ್ಲಿ, ಅವನು ಆ ವಿಚಾರವನ್ನು ಬದಿಗೊತ್ತಲೇಬೇಕು. ನಿಜವಾಗಿಯೂ ನಮಗೆಲ್ಲರಿಗೆ ನಮ್ರತೆಯ ಅಗತ್ಯವಿದೆ, ಯಾಕಂದರೆ ನಾವೆಲ್ಲರೂ ಅಧೀನತೆಯಲ್ಲಿ ಇದ್ದೇವೆ.
13, 14. (ಎ) ಯಾವ ವಿಶಿಷ್ಟ ಪರಿಸ್ಥಿತಿಯಲ್ಲಿ ದೈನ್ಯವು ನಮಗೆ ಸಹಾಯ ಮಾಡುವುದು? (ಬಿ) ಬುದ್ಧಿವಾದವನ್ನು ಸ್ವೀಕರಿಸುವ ಸಂಬಂಧದಲ್ಲಿ ಯಾವ ಮಾದರಿಯನ್ನು ಪೇತ್ರನು ಇಟ್ಟನು?
13 ದೈನ್ಯವು ವಿಶೇಷವಾಗಿ ವಿವೇಕದ ಮಾರ್ಗವಾಗಿ ಕಂಡುಬಂದಿರುವುದು ಹೇಗಂದರೆ ಅದು ಬುದ್ಧಿವಾದವನ್ನು ಮತ್ತು ಶಿಸ್ತನ್ನು ಸ್ವೀಕರಿಸಲು ನಮಗೆ ಸುಲಭವನ್ನಾಗಿ ಮಾಡುವುದರಲ್ಲಿಯೇ. ನಮ್ಮಲ್ಲಿ ಪ್ರತಿಯೊಬ್ಬರಿಗೆ ಆಗಿಂದಾಗ್ಗೆ ಶಿಸ್ತಿನ ಅಗತ್ಯವಿರುತ್ತದೆ, ಮತ್ತು ಜ್ಞಾನೋಕ್ತಿ 19:20 ರ ಹಿತೋಪದೇಶವನ್ನು ಪಾಲಿಸುವುದು ನಮಗೊಳ್ಳೆಯದು: “ಬುದ್ಧಿವಾದವನ್ನು ಕೇಳು, ಉಪದೇಶವನ್ನಾಲಿಸು, ಮುಂದೆ ಜ್ಞಾನಿಯಾಗುವಿ.” ಸೂಕ್ತವಾಗಿ ನುಡಿಯಲ್ಪಟ್ಟಂತೆ, ದೈನ್ಯವು ಗದರಿಕೆ ಯಾ ಶಿಕ್ಷೆಯೊಳಗಿನ ಕೊಂಡಿಯನ್ನು ತೆಗೆದುಬಿಡುತ್ತದೆ. ಅದಲ್ಲದೆ, ಇಬ್ರಿಯ 12:4-11 ರಲ್ಲಿ ಅಪೊಸ್ತಲ ಪೌಲನು ಶಿಸ್ತಿಗೆ ದೈನ್ಯದಿಂದ ಅಧೀನರಾಗಿರುವ ವಿವೇಕದ ಕುರಿತು ನಮಗೆ ಉಪದೇಶಿಸುತ್ತಾನೆ. ಈ ರೀತಿಯಲ್ಲಿ ಮಾತ್ರವೇ ನಾವು ನಮ್ಮ ಭವಿಷ್ಯದ ಮಾರ್ಗವನ್ನು ವಿವೇಕದಿಂದ ಮಾರ್ಗದರ್ಶಿಸಲು ನಿರೀಕ್ಷಿಸಬಲ್ಲೆವು ಮತ್ತು ಪ್ರತಿಫಲವಾಗಿ ನಿತ್ಯ ಜೀವದ ಬಹುಮಾನವನ್ನು ಪಡೆಯಬಲ್ಲೆವು. ಅದು ಎಂಥ ಸಂತೋಷವುಳ್ಳ ಪ್ರತಿಫಲವಾಗಿರಲಿದೆ!
14 ಈ ಸಂಬಂಧದಲ್ಲಿ ನಾವು ಅಪೊಸ್ತಲ ಪೇತ್ರನ ಉದಾಹರಣೆಗೆ ಕೈತೋರಿಸಬಹುದು. ಗಲಾತ್ಯ 2:14ರ ದಾಖಲೆಯಿಂದ ನಾವು ತಿಳಿಯುವ ಪ್ರಕಾರ, ಅಪೊಸ್ತಲ ಪೌಲನಿಂದ ಅವನು ಕಟುವಾದ ಬುದ್ಧಿವಾದವನ್ನು ಪಡೆದನು: “ಅವರು ಸುವಾರ್ತೆಯ ಸತ್ಯಾರ್ಥದ ಪ್ರಕಾರ ನೆಟ್ಟಗೆ ನಡೆಯುವದಿಲ್ಲವೆಂದು ನಾನು ಕಂಡಾಗ ಎಲ್ಲರ ಮುಂದೆ ಕೇಫ [ಪೇತ್ರ]ನಿಗೆ ಹೇಳಿದ್ದೇನಂದರೆ—ನೀನು ಯೆಹೂದ್ಯನಾಗಿದ್ದು ಯೆಹೂದ್ಯರಂತೆ ನಡೆಯದೆ ಅನ್ಯಜನರಂತೆ ನಡೆದ ಮೇಲೆ ಅನ್ಯಜನರಿಗೆ—ನೀವು ಯೆಹೂದ್ಯರ ಪದ್ಧತಿಗಳನ್ನು ಅನುಸರಿಸಬೇಕೆಂದು ನೀನು ಬಲಾತ್ಕಾರಮಾಡುವದು ಹೇಗೆ?” ಅಪೊಸ್ತಲ ಪೇತ್ರನು ಸಿಟ್ಟಾದನೋ? ಒಂದುವೇಳೆ ಆಗಿದ್ದರೂ, ಶಾಶ್ವತವಾಗಿ ಅಲ್ಲ, “ನಮ್ಮ ಪ್ರಿಯ ಸಹೋದರನಾದ ಪೌಲನು” ಎಂಬ ಅವನ ತದನಂತರದ ನಿರ್ದೇಶನೆಯಿಂದ ಅದನ್ನು ಕಾಣ ಸಾಧ್ಯವಿದೆ.—2 ಪೇತ್ರ 3:15, 16.
15. ನಾವು ದೀನರಾಗಿರುವುದರ ಮತ್ತು ನಾವು ಸಂತೋಷಿತರಾಗಿರುವುದರ ನಡುವಣ ಸಂಬಂಧವೇನು?
15 ಸ್ವಸಂತುಷ್ಟಿ ಮತ್ತು ಸಂತೃಪ್ತಿಯಿಂದಿರುವ ವಿಷಯವು ಕೂಡ ಇದೆ. ನಮ್ಮ ಪಾಲಿನೊಂದಿಗೆ, ನಮ್ಮ ಸುಯೋಗಗಳೊಂದಿಗೆ, ನಮ್ಮ ಆಶೀರ್ವಾದಗಳೊಂದಿಗೆ ನಾವು ಸಂತೃಪ್ತರಾಗಿರದ ಹೊರತು ನಾವು ಸಂತೋಷವುಳ್ಳರಾಗಿರ ಸಾಧ್ಯವೇ ಇಲ್ಲ. “ದೇವರು ಅನುಮತಿಸಿದರೆ, ನಾನದನ್ನು ತಗೆದುಕ್ಕೊಳ್ಳಬಲ್ಲೆ,” ಎಂಬ ಮನೋಭಾವವನ್ನು ದೀನ ಕ್ರೈಸ್ತನು ತಕ್ಕೊಳ್ಳುತ್ತಾನೆ, 1 ಕೊರಿಂಥ 10:13 ರಲ್ಲಿ ನಾವು ಓದುವ ಪ್ರಕಾರ, ಅಪೊಸ್ತಲ ಪೌಲನು ನಿಜವಾಗಿಯೂ ಹೇಳುವುದೂ ಅದನ್ನೇ: “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ತನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” ಹೀಗೆ ದೈನ್ಯವು ಹೇಗೆ ವಿವೇಕದ ಮಾರ್ಗವೆಂಬದನ್ನು ನಾವು ಪುನಃ ನೋಡುತ್ತೇವೆ, ಯಾಕಂದರೆ ನಮ್ಮ ಪಾಲು ಏನೇ ಇರಲಿ, ನಾವು ಸಂತೋಷವುಳ್ಳವರಾಗಿರುವಂತೆ ಅದು ಸಹಾಯ ಮಾಡುತ್ತದೆ.
ಪ್ರೀತಿ—ನಾವು ದೀನರಾಗಿರುವಂತೆ ಸಹಾಯ ಮಾಡುವುದು
16, 17. (ಎ) ನಾವು ದೀನರಾಗಿರುವಂತೆ ಸಹಾಯ ಮಾಡುವುದರಲ್ಲಿ ಸರ್ವಶ್ರೇಷ್ಠ ಗುಣವನ್ನು ಯಾವ ಶಾಸ್ತ್ರೀಯ ಉದಾಹರಣೆಯು ಎತ್ತಿಹೇಳುತ್ತದೆ? (ಬಿ) ಯಾವ ಐಹಿಕ ಮಾದರಿಯು ಸಹ ಈ ವಿಷಯವನ್ನು ಉದಾಹರಿಸುತ್ತದೆ?
16 ಎಲ್ಲದಕ್ಕಿಂತಲೂ ಹೆಚ್ಚಾಗಿ, ನಿಸ್ವಾರ್ಥ ಪ್ರೀತಿ, ಅಗಾಪೆ, ನಮಗೆ ದೀನರಾಗಿರುವಂತೆ ಸಹಾಯ ಮಾಡುತ್ತದೆ. ಪೌಲನು ಫಿಲಿಪ್ಪಿಯವರಿಗೆ ಬಣ್ಣಿಸಿದ ಯಾತನಾ-ಕಂಭದ ಅನುಭವವನ್ನು ಯೇಸು ಅಷ್ಟು ದೈನ್ಯದಿಂದ ತಾಳಿಕೊಳ್ಳಲು ಶಕ್ತನಾದದೇಕ್ದೆ? (ಫಿಲಿಪ್ಪಿ 2:5-8) ದೇವರಿಗೆ ಸರಿಸಮಾನನಾಗಿರುವುದಕ್ಕೆ ಅವನು ಯಾವ ಪರಿಗಣನೆಯನ್ನೂ ಕೊಡಲಿಲ್ಲವೇಕೆ? ಯಾಕಂದರೆ ಅವನು ಸ್ವತಃ ಹೇಳಿದ ಪ್ರಕಾರ, “ನಾನು ತಂದೆಯನ್ನು ಪ್ರೀತಿಸುತ್ತೇನೆ.” (ಯೋಹಾನ 14:31) ಆದುದರಿಂದಲೇ ಅವನು ಎಲ್ಲಾ ಸಮಯಗಳಲ್ಲಿ ತನ್ನ ಸ್ವರ್ಗೀಯ ತಂದೆಯಾದ ಯೆಹೋವ ದೇವರಿಗೆ ಮಹಿಮೆ ಮತ್ತು ಗೌರವವನ್ನು ಸಲ್ಲಿಸಿದನು. ಹೀಗೆ, ಇನ್ನೊಂದು ಸಂದರ್ಭದಲ್ಲಿ, ಅವನ ಸ್ವರ್ಗೀಯ ತಂದೆಯು ಮಾತ್ರವೇ ಒಳ್ಳೆಯವನು ಎಂದವನು ಒತ್ತಿಹೇಳಿದನು.—ಲೂಕ 18:18, 19.
17 ಈ ವಿಷಯವನ್ನು ಅಮೆರಿಕದ ಆರಂಭದ ಕವಿಗಳಲ್ಲಿ ಒಬ್ಬರಾದ ಜೋನ್ ಗ್ರೀನ್ಲೀಫ್ ವಿಟೀಯ್ಟರ್ನ ಜೀವನದಲ್ಲಿನ ಒಂದು ಘಟನೆಯು ಉದಾಹರಿಸುತ್ತದೆ. ಈ ಪುರುಷನಿಗೆ ಬಾಲ್ಯದ ಇನಿಯಳೊಬ್ಬಳಿದಳ್ದು, ಒಮ್ಮೆ ಅಕ್ಷರ ಸಂಯೋಜನೆಯ ಸ್ಪರ್ಧೆಯಲ್ಲಿ ಆಕೆ ಒಂದು ಶಬ್ದವನ್ನು ಸರಿಯಾಗಿ ಸಂಯೋಜಿಸಿದಳು, ಆದರೆ ಅವನು ಅದನ್ನು ತಪ್ಪಾಗಿ ಸಂಯೋಜಿಸಿದನು. ಆಕೆಗೆ ತುಂಬಾ ಬೇಸರವಾಯಿತು. ಏಕೆ? ಕವಿಯು ಜ್ಞಾಪಕಕ್ಕೆ ತಂದ ಪ್ರಕಾರ, ಆಕೆಯಂದದ್ದು: “ಆ ಶಬ್ದದ ಅಕ್ಷರ ಸಂಯೋಜನೆ ಮಾಡಿದ್ದಕ್ಕೆ ನನಗೆ ವ್ಯಸನವಾಗುತ್ತಿದೆ. ನಿಮಗಿಂತ ಶ್ರೇಷ್ಠಳಾಗಿರುವುದನ್ನು ನಾನು ಹೇಸುತ್ತೇನೆ. . . . ಯಾಕಂದರೆ ನೋಡಿ, ನಾನು ನಿಮ್ಮನ್ನು ಪ್ರೀತಿಸುತ್ತೇನೆ.” ಹೌದು, ನಾವು ಯಾರನ್ನಾದರೂ ಪ್ರೀತಿಸುತ್ತಿರುವಲ್ಲಿ, ಅವರು ನಮಗಿಂತ ಕೆಳಗಲ್ಲ, ಮೇಲಿರುವಂತೆ ನಾವು ಬಯಸುತ್ತೇವೆ, ಯಾಕಂದರೆ ಪ್ರೀತಿಯು ದೈನ್ಯವುಳ್ಳದ್ದಾಗಿದೆ.
18. ಯಾವ ಶಾಸ್ತ್ರೀಯ ಬುದ್ಧಿವಾದಕ್ಕೆ ಗಮನಕೊಡಲು ದೈನ್ಯವು ನಮಗೆ ಸಹಾಯ ಮಾಡುವುದು?
18 ಇದು ಕ್ರೈಸ್ತರೆಲ್ಲರಿಗೆ, ವಿಶೇಷವಾಗಿ ಸಹೋದರರಿಗೆ, ಒಂದು ಒಳ್ಳೆಯ ಪಾಠವಾಗಿರುತ್ತದೆ. ಒಂದು ವಿಶೇಷ ಸೇವಾ ಸುಯೋಗದ ಸಂಬಂಧದಲ್ಲಿ, ನಮ್ಮ ಬದಲಿಗೆ ನಮ್ಮ ಸಹೋದರನು ಅದನ್ನು ಪಡೆದದಕ್ಕಾಗಿ ನಾವು ಸಂತೋಷಿಸುವೆವೂ, ಇಲ್ಲವೇ ಅಸೂಯೆ ಮತ್ತು ಮತ್ಸರದ ತುಸು ಅನಿಸಿಕೆ ನಮಗಾಗುವುದೋ? ನಾವು ನಿಜವಾಗಿ ನಮ್ಮ ಸಹೋದರರನ್ನು ಪ್ರೀತಿಸುವುದಾದರೆ, ಅವನಿಗೆ ಆ ವಿಶೇಷ ನೇಮಕ ಅಥವಾ ಮಾನ್ಯತೆ ಇಲ್ಲವೇ ಸೇವಾ ಸುಯೋಗವು ದೊರೆತದಕ್ಕಾಗಿ ಉಲ್ಲಾಸಪಡುವೆವು. ಹೌದು ದೈನ್ಯವು, “ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ,” ಎಂಬ ಹಿತೋಪದೇಶವನ್ನು ಪಾಲಿಸಲು ಸುಲಭವನ್ನಾಗಿ ಮಾಡುವುದು. (ರೋಮಾಪುರ 12:10) ಇನ್ನೊಂದು ಭಾಷಾಂತರವು ಓದುವುದು: “ಒಬ್ಬರನ್ನೊಬ್ಬರು ನಿಮಗಿಂತ ಮೇಲಿನವರೆಂದು ಗೌರವಿಸಿರಿ.” (ನ್ಯೂ ಇಂಟರ್ನ್ಯಾಷನಲ್ ವರ್ಷನ್) ಪುನಃ ಇನ್ನೊಮ್ಮೆ ನಾವು ಅಪೊಸ್ತಲ ಪೌಲನಿಂದ ಉಪದೇಶಿಸಲ್ಪಟ್ಟಿರುವುದು: “ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.” (ಗಲಾತ್ಯ 5:13) ಹೌದು, ನಮಗೆ ಪ್ರೀತಿ ಇರುವುದಾದರೆ, ನಾವು ನಮ್ಮ ಸಹೋದರರಿಗೆ ನೆರವಾಗಲು, ಅವರ ಸೇವೆ ಮಾಡಲು, ಸಂತೋಷಪಡುವೆವು, ಅವರ ಅಭಿರುಚಿಗಳನ್ನು ಮತ್ತು ಹಿತಚಿಂತನೆಯನ್ನು ನಮ್ಮ ಸ್ವಂತದಕ್ಕಿಂತ ಮುಂದಿಡುವೆವು, ಇದಕ್ಕೆ ದೈನ್ಯದ ಆವಶ್ಯಕತೆಯಿದೆ. ದೈನ್ಯವು ನಮ್ಮನ್ನು ಜಂಬ ಕೊಚ್ಚುವುದರಿಂದಲೂ ತಡೆಯುವುದು ಮತ್ತು ಹೀಗೆ ಇತರರಲ್ಲಿ ಅಸೂಯೆ ಮತ್ತು ಮತ್ಸರದ ಭಾವವನ್ನು ಕೆರಳಿಸುವುದನ್ನು ವರ್ಜಿಸುವುದು. ಪ್ರೀತಿಯು “ಹೊಗಳಿಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ” ಎಂದು ಪೌಲನು ಬರೆದನು. ಏಕೆ ಇಲ್ಲ? ಏಕೆಂದರೆ ಹೊಗಳಿಕೊಳ್ಳುವುದು ಮತ್ತು ಉಬ್ಬಿಕೊಳ್ಳುವದರ ಹಿಂದಿರುವ ಹೇತುವು ಸ್ವಾರ್ಥ, ಅಹಂಭಾವವಾಗಿದೆ, ಪ್ರೀತಿಯಾದರೋ ನಿಸ್ವಾರ್ಥದ ಸಾರವೇ ಆಗಿರುತ್ತದೆ.—1 ಕೊರಿಂಥ 13:4.
19.ದೈನ್ಯವು ಮತ್ತು ಪ್ರೀತಿಯು, ದುರಹಂಕಾರ ಮತ್ತು ಸ್ವಾರ್ಥದ ಹಾಗೆ ನಿಕಟ ಸಹವಾಸದಲ್ಲಿವೆ ಎಂಬದನ್ನು ಯಾವ ಬೈಬಲ್ ಉದಾಹರಣೆಗಳು ದೃಷ್ಟಾಂತಿಸುತ್ತವೆ?
19 ರಾಜ ಸೌಲನೊಂದಿಗೆ ಮತ್ತು ಅವನ ಪುತ್ರ ಯೋನಾತಾನನೊಂದಿಗೆ ದಾವೀದನ ಸಂಬಂಧವು, ಪ್ರೀತಿ ಮತ್ತು ದೈನ್ಯವು ಹೇಗೆ ನಿಕಟ ಸಹವಾಸದಲ್ಲಿದೆ ಮತ್ತು ಅದೇ ರೀತಿ ಅಹಂಕಾರ ಮತ್ತು ಸ್ವಾರ್ಥವು ಹೇಗೆ ನಿಕಟ ಸಂಬಂಧದಲ್ಲಿದೆ ಎಂಬದರ ಒಂದು ಗಮನಾರ್ಹ ಉದಾಹರಣೆಯಾಗಿದೆ. ಯುದ್ಧದಲ್ಲಿ ದಾವೀದನ ಸಾಫಲ್ಯದ ಕಾರಣ, ಇಸ್ರಾಯೇಲ್ಯ ಸ್ತ್ರೀಯರು, “ಸೌಲನು ಸಾವಿರಗಟ್ಟಳೆಯಾಗಿ ಕೊಂದನು; ದಾವೀದನು ಹತ್ತುಸಾವಿರಗಟ್ಟಳೆಯಾಗಿ ಕೊಂದನು,” ಎಂದು ಹಾಡಿದರು. (1 ಸಮುವೇಲ 18:7) ದೈನ್ಯವೇ ಇಲ್ಲದವನಾಗಿದದ್ದರಿಂದ, ಬದಲಿಗೆ, ಅಹಂಕಾರದಿಂದ ಕುದಿದ ಸೌಲನು, ಅಂದಿನಿಂದ ದಾವೀದನೆಡೆಗೆ ಕೊಲೆಪಾತಕ ದ್ವೇಷವನ್ನು ಅಭಿವರ್ಧಿಸಿದನು. ಇದು ಅವನ ಮಗನಾದ ಯೋನಾತಾನನ ಮನೋಭಾವಕ್ಕಿಂತ ಎಷ್ಟು ಭಿನ್ನವಾಗಿತ್ತು! ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸುತ್ತಿದ್ದನೆಂದು ನಾವು ಓದುತ್ತೇವೆ. (1 ಸಮುವೇಲ 18:1) ಹೀಗಿರಲಾಗಿ, ಸೌಲನ ಉತ್ತರಾಧಿಕಾರಿ ಅರಸನಾಗಿ ಯೋನಾತಾನನಾದ ತನ್ನನಲ್ಲ, ದಾವೀದನನ್ನು ಯೆಹೋವನು ಆಶೀರ್ವದಿಸುತ್ತಿದ್ದಾನೆಂದು ಘಟನಾವಳಿಗಳ ಸಂಭವದಲ್ಲಿ ತೋರಿಬಂದಾಗ, ಯೋನಾತಾನನು ಹೇಗೆ ಪ್ರತಿಕ್ರಿಯಿಸಿದನು? ಯೋನಾತಾನನು ಅಸೂಯೆ ಯಾ ಮತ್ಸರಪಟ್ಟನೋ? ಇಲ್ಲವೇ ಇಲ್ಲ! ದಾವೀದನಿಗಾಗಿ ಅವನಿಗಿದ್ದ ಮಹಾ ಪ್ರೀತಿಯ ಕಾರಣ, 1 ಸಮುವೇಲ 23:17 ರಲ್ಲಿ ನಾವು ಓದುವ ಪ್ರಕಾರ, ಅವನು ಹೀಗನ್ನ ಶಕ್ತನಾದನು: “ಭಯಪಡಬೇಡ; ನೀನು ನನ್ನ ತಂದೆಯಾದ ಸೌಲನ ಕೈಗೆ ಸಿಕ್ಕಿಬೀಳುವದಿಲ್ಲ; ನೀನು ಇಸ್ರಾಯೇಲ್ಯರ ಅರಸನಾಗುವಿ; ನಾನು ನಿನಗೆ ಎರಡನೆಯವನಾಗಿರುವೆನು. ಹೀಗಾಗುವದೆಂದು ನನ್ನ ತಂದೆಯಾದ ಸೌಲನೂ ತಿಳಿದುಕೊಂಡಿದ್ದಾನೆ.” ಇಸ್ರಾಯೇಲ್ಯ ರಾಜನಾಗಿ ತನ್ನ ತಂದೆಯನ್ನು ಯಾರು ಹಿಂಬಾಲಿಸಬೇಕೆಂಬ ಸಂಬಂಧದಲ್ಲಿ ಯಾವುದು ದೇವರ ಚಿತ್ತವೆಂದು ಅವನು ಗ್ರಹಿಸಿಕೊಂಡನೋ ಅದನ್ನು ದೈನ್ಯದಿಂದ ಸ್ವೀಕರಿಸುವಂತೆ, ದಾವೀದನಿಗಾಗಿ ಯೋನಾತಾನನಲ್ಲಿದ್ದ ಮಹಾ ಪ್ರೀತಿಯು ಸಾಧ್ಯಗೊಳಿಸಿತು.
20. ಪ್ರೀತಿ ಮತ್ತು ದೈನ್ಯದ ನಡುವೆ ಆಪ್ತ ಸಂಬಂಧವನ್ನು ಯೇಸು ತೋರಿಸಿದ್ದು ಹೇಗೆ?
20 ಯೇಸು ಕ್ರಿಸ್ತನು ತನ್ನ ಮರಣಕ್ಕೆ ಮುಂಚಿನ ಕೊನೆಯ ರಾತ್ರಿಯಲ್ಲಿ ತನ್ನ ಶಿಷ್ಯರೊಂದಿಗಿದ್ದಾಗ ನಡೆದ ಸಂಗತಿಯು, ಪ್ರೀತಿ ಮತ್ತು ದೈನ್ಯದ ನಡುವಣ ಸಂಬಂಧವನ್ನು ಇನ್ನಷ್ಟು ಒತ್ತಿಹೇಳುತ್ತದೆ. ಯೇಸು ಕ್ರಿಸ್ತನು “ಲೋಕದಲ್ಲಿರುವ ತನ್ನವರನ್ನು ಪ್ರೀತಿಸಿ ಪರಿಪೂರ್ಣವಾಗಿ ಅವರನ್ನು ಪ್ರೀತಿಸುತ್ತಾ ಬಂದನು,” ಎಂದು ಯೋಹಾನ 13:1 ರಲ್ಲಿ ನಾವು ಓದುತ್ತೇವೆ. ಅದನ್ನು ಅನುಸರಿಸಿ, ಯೇಸುವು ಪರಿಚಾರಕನಂತೆ ಕಾರ್ಯನಡಿಸುತ್ತಾ ತನ್ನ ಅಪೊಸ್ತಲರ ಪಾದಗಳನ್ನು ತೊಳೆದನು ಎಂದು ನಾವು ಓದುತ್ತೇವೆ. ದೈನ್ಯದ ಎಂಥ ಒಂದು ಪ್ರಬಲವಾದ ಪಾಠವು!—ಯೋಹಾನ 13:1-11.
21. ಸಾರಾಂಶದಲ್ಲಿ, ನಾವು ಏಕೆ ದೀನರಾಗಿರಬೇಕು?
21 ನಿಜವಾಗಿಯೂ, ದೀನರಾಗಿರಲು ಅನೇಕ ಕಾರಣಗಳಿವೆ. ದೀನರಾಗಿರುವುದು ಯೋಗ್ಯ ವಿಷಯವಾಗಿದೆ, ಪ್ರಾಮಾಣಿಕವಾದ ಸಂಗತಿಯಾಗಿದೆ. ಅದು ನಂಬಿಕೆಯ ಮಾರ್ಗವಾಗಿದೆ. ಯೆಹೋವನೊಂದಿಗೆ ಮತ್ತು ನಮ್ಮ ಜೊತೆ ವಿಶ್ವಾಸಿಗಳೊಂದಿಗೆ ಸುಸಂಬಂಧಗಳಿಗೆ ಅದು ನೆರವಾಗುತ್ತದೆ. ಅದು ವಿವೇಕದ ಪಥವಾಗಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ, ಅದು ಪ್ರೀತಿಯ ಮಾರ್ಗವಾಗಿದೆ ಮತ್ತು ನಿಜ ಸಂತೋಷವನ್ನು ತರುತ್ತದೆ.
ನೀವು ಹೇಗೆ ಉತ್ತರಿಸುವಿರಿ?
▫ ದೀನರಾಗಿರುವುದರಲ್ಲಿ ಪ್ರಾಮಾಣಿಕತೆಯು ಯಾವ ವಿಧಗಳಲ್ಲಿ ಒಂದು ಸಹಾಯಕವು?
▫ ಯೆಹೋವನಲ್ಲಿ ನಂಬಿಕೆಯು ನಾವು ದೀನರಾಗಿರುವಂತೆ ಸಹಾಯಮಾಡಬಲ್ಲದೇಕೆ?
▫ ದೀನರಾಗಿರುವುದು ವಿವೇಕದ ಮಾರ್ಗವಾಗಿದೆ ಎಂದು ಯಾವುದು ತೋರಿಸುತ್ತದೆ?
▫ ನಾವು ದೀನರಾಗಿರುವುದಕ್ಕೆ ಪ್ರೀತಿಯು ವಿಶೇಷವಾಗಿ ಸಹಾಯಕಾರಿಯೇಕೆ?
[ಪುಟ 21 ರಲ್ಲಿರುವ ಚಿತ್ರ]
ಯೋಬನು ದೈನ್ಯದಿಂದ ಯೆಹೋವನಿಗೆ ತನ್ನನ್ನು ಅಧೀನಪಡಿಸಿಕೊಂಡನು. ಅವನು “ದೇವರನ್ನು ದೂಷಿಸಿ ಸಾಯ” ಲಿಲ್ಲ
[ಪುಟ 23 ರಲ್ಲಿರುವ ಚಿತ್ರ]
ಪೌಲನು ಪೇತ್ರನಿಗೆ ಬಹಿರಂಗವಾಗಿ ಬುದ್ಧಿಹೇಳಿದಾಗ ಅವನು ದೈನ್ಯದಿಂದ ಅಧೀನನಾದನು