ನಿಮಗಾಗಿ ಒಂದು ಆರೋಗ್ಯ ಪರೀಕೆಯ್ಷೊ?
ವ್ಯಕ್ತಿಗಳಿಗಾಗಿ ವೈದ್ಯಕೀಯ ಮತ್ತು ರೋಗ ನಿದಾನದ ಪದ್ಧತಿಗಳ ಕುರಿತು ವಾಚ್ ಟವರ್ ಸೊಸೈಟಿಯು ಶಿಫಾರಸ್ಸುಗಳನ್ನು ಯಾ ನಿರ್ಣಯಗಳನ್ನು ಮಾಡುವುದಿಲ್ಲ. ಆದರೆ ಬೈಬಲ್ ತತ್ವಗಳ ವಿಶದಪಟ್ಟ ತಿಳಿವಳಿಕೆಯಲ್ಲಿ ಕೆಲವು ಪದ್ಧತಿಗಳಲ್ಲಿ ಸಂದೇಹಾಸ್ಪದವಾಗಿರುವ ವಿಷಯಾಂಶಗಳು ಇರುವುದಾದರೆ, ಅವುಗಳ ಕಡೆಗೆ ಗಮನವನ್ನು ನಿರ್ದೇಶಿಸಬಹುದು. ಏನು ಒಳಗೊಂಡಿದೆ ಎಂದು ಆಗ ಪ್ರತಿಯೊಬ್ಬ ವ್ಯಕ್ತಿಯು ಪರಿಗಣಿಸಬಲ್ಲನು ಮತ್ತು ಏನನ್ನು ಮಾಡಬೇಕೆಂಬುದನ್ನು ನಿರ್ಧರಿಸಬಲ್ಲನು.
ಪ್ರಿಯ ಸಹೋದರರೇ: ಮುಂದಿನ ವಿಷಯದ ಮೇಲೆ ನಿಮ್ಮ ಅಭಿಪ್ರಾಯವನ್ನು ಪಡೆಯಲಿಚ್ಛಿಸುತ್ತೇನೆ. ಒಬ್ಬಾಕೆ [ವೈದ್ಯಕೀಯ ವೃತ್ತಿಯವಳಿಗೆ] ಒಳ್ಳೆಯ ಯಶಸ್ಸಿರುವಂತೆ ತೋರುತ್ತದೆ, ಆದರೆ ಆಕೆ ಬಳಸುವ ಒಂದು ವಿಧಾನವು ನನ್ನಲ್ಲಿ ಸಂದೇಹವನ್ನುಂಟುಮಾಡುತ್ತದೆ. . . . ಪರೀಕ್ಷೆಯ ಮೂಲಕ ಸಮಸ್ಯೆಯು ಏನಾಗಿದೆ ಎಂದು ಆಕೆ ನಿರ್ಧರಿಸುತ್ತಾಳೆ. ಆಮೇಲೆ ಯಾವ ರೀತಿಯ ಮದ್ದು ಯಾ ಎಷ್ಟನ್ನು ಬಳಸಬೇಕೆಂಬುದನ್ನು ಕಂಡುಹಿಡಿಯಲು, ಮದ್ದಿನ ಸೀಸೆಯನ್ನು ಆಕೆ ರಸಗ್ರಂಥಿ ಯಾ ಒಂದು ಅಂಗದ ಚರ್ಮದ ಪಕ್ಕದಲ್ಲಿ ಇಡುತ್ತಾಳೆ. ಮೇಲಕ್ಕೆತ್ತಲ್ಪಟ್ಟ ರೋಗಿಯ ತೋಳನ್ನು ಕೆಳಗೆ ಎಳೆಯಲು ಆಕೆ ಪ್ರಯತ್ನಿಸುತ್ತಾಳೆ. ತೋಳನ್ನು ಕೆಳಗೆ ಎಳೆಯಲು ಆಕೆಗೆ ಬೇಕಾದ ಶಕಿಯ್ತಿಂದ ಮದ್ದಿನ ಬಗೆಯನ್ನು ಯಾ ಅದರ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಒಳಗೊಂಡಿರುವ ವಿಚಾರಸರಣಿ ಏನೆಂದರೆ, ವಿದ್ಯುತ್ತಿನ ಕಣಗಳು ಒಂದು ಪ್ರವಾಹದಂತೆ ಮದ್ದಿನಿಂದ ಸೀಸೆಯ ಲೋಹದ ಮುಚ್ಚಳದ ಮುಖಾಂತರ ದೇಹದ ಭಾಗಕ್ಕೆ ಪ್ರಯಾಣಿಸುತ್ತವೆ, ಹೀಗೆ ಅದನ್ನು ಬಲಪಡಿಸುತ್ತವೆ. ಕವಲುಗೋಲಿನಿಂದ ಜಲಶೋಧನೆ ಮಾಡುವಂತಿದೆಯೊ?
ಅಮೆರಿಕದ ಆರಿಗನ್ನಿಂದ ಬಂದ ಈ ಪತ್ರವು, ಪೋಷಣಾತ್ಮಕ ಆವಶ್ಯಕತೆಗಳನ್ನು ನಿರ್ಧರಿಸಲು, ಭಾವನಾತ್ಮಕ ವಿವಾದಾಂಶಗಳನ್ನು ಜಾಗರೂಕವಾಗಿ ಪರಿಗಣಿಸಲು, ಸ್ಮರಣೆಗಳನ್ನು ತೂಗಿನೋಡಲು, ಮತ್ತು ದೈನಿಕ ಜೀವನದ ಕುರಿತಾದ ಪ್ರಶ್ನೆಗಳನ್ನು ಬಗೆಹರಿಸಲು ಕೆಲವರು ಉಪಯೋಗಿಸುವ ಒಂದು ಪದ್ಧತಿಗೆ ಸಂಬಂಧಿಸಿದೆ. ಪದ್ಧತಿ ಎಷ್ಟೇ ಸಾಮಾನ್ಯವಾದದ್ದಾಗಿರಲಿ, ಬರಹಗಾರನ ಸಂಶಯಗಳು ನ್ಯಾಯಸಮ್ಮತವಾಗಿವೆಯೊ?
ಆರೋಗ್ಯ—ಯಾವ ಬೆಲೆಗೆ?
ತಾವು ಏಕೆ ಅಸ್ವಸ್ಥರಾಗುತ್ತೇವೆಂದು ಮತ್ತು ಗುಣಹೊಂದುವುದು ಹೇಗೆಂದು ತಿಳಿಯಲು ಪ್ರಾಚೀನ ಸಮಯಗಳಿಂದಲೂ ಜನರು ಪ್ರಯತ್ನಿಸಿದ್ದಾರೆ. ಇಸ್ರಾಯೇಲ್ಯರಿಗೆ ಇದು ಅನುಕೂಲಕರವಾಗಿತ್ತು ಯಾಕೆಂದರೆ ತಾವು ಪಾಪಿಗಳೆಂದು ಅವರಿಗೆ ಗೊತ್ತಿತ್ತು ಮತ್ತು ಅನೇಕ ರೋಗಗಳನ್ನು ತಗಲಿಸಿಕೊಳ್ಳುವುದನ್ನು ಯಾ ಹರಡಿಸುವುದನ್ನು ತೊರೆಯಲು ಅವರಿಗೆ ಸಹಾಯಮಾಡಿದ ನಿಯಮಗಳನ್ನು ಅವರು ದೇವರಿಂದ ಪಡೆದಿದ್ದರು. (ಯಾಜಕಕಾಂಡ 5:2; 11:39, 40; 13:1-4; 15:4-12; ಧರ್ಮೋಪದೇಶಕಾಂಡ 23:12-14) ಆದಾಗಿಯೂ, ದೇವರ ಜನರು ತಮ್ಮ ದಿನದ ಅರ್ಹರಾದ ವೈದ್ಯರಿಂದ ಸಹ ಸಹಾಯವನ್ನು ಕೋರಿದರು.—ಯೆಶಾಯ 1:6; 38:21; ಮಾರ್ಕ 2:17; 5:25, 26; ಲೂಕ 10:34; ಕೊಲೊಸ್ಸೆ 4:14.
ಪ್ರಾಚೀನ ಬಾಬೆಲಿನಲ್ಲಿ ಮತ್ತು ಐಗುಪ್ತದಲ್ಲಿದ್ದ ಜನರಿಗೆ ಇದು ಎಷ್ಟು ವೈದೃಶ್ಯವಾಗಿತ್ತು! ಅವರ “ಡಾಕ್ಟರುಗಳ”ಲ್ಲಿ ನೈಸರ್ಗಿಕ ಘಟಕಾಂಶಗಳ ಮೇಲೆ ಆಧಾರಿತವಾದ ಕೆಲವು ಪರಿಹಾರಗಳಿದ್ದವು, ಆದರೂ ಅವರ “ಚಿಕಿತ್ಸೆಗಳಲ್ಲಿ” ಹೆಚ್ಚನ್ನು ಈಗ ಪಾಂಡಿತ್ಯ ನಟನೆಯೆಂದು ವರ್ಣಿಸಬಹುದು. ಹಂದಿಗಳ ಕಣ್ಣುಗಳು, ಅಂಜನಕಲ್ಲು, ಕಾವಿ ಮಣ್ಣು, ಮತ್ತು ಜೇನಿನಿಂದ ತಯಾರಿಸಿದ ಅಸಹ್ಯವಾದ ಗುಟುಕಿನ ಸಹಾಯದಿಂದ ಅಂಧತೆಯನ್ನು ಗುಣಪಡಿಸುವ ಒಬ್ಬ ವೈದ್ಯನ ಕುರಿತು ಐಗುಪ್ತದ ಚಿತ್ರಲಿಪಿಯೊಂದು ಹೇಳುತ್ತದೆ. ಹೀಗೆ ತಯಾರಿಸಿದ ಪದಾರ್ಥವನ್ನು ರೋಗಿಯ ಕಿವಿಯೊಳಗೆ ಸುರಿಯಲಾಗುತ್ತಿತ್ತು! ಈ ಚಿಕಿತ್ಸೆಯು “ನಿಜವಾಗಿಯೂ ಉತ್ಕೃಷ್ಟ” ವಾಗಿತ್ತೆಂದು ಪ್ರಾಚೀನ ಸಮಯದ ಒಂದು ಪ್ರಮಾಣಪತ್ರವು ವಾದಿಸುತ್ತದೆ. ಅದರ ವಿಲಕ್ಷಣತೆ ಯಾ ಗೂಢತ್ವವು ಸಹ ಅದರ ಆಕರ್ಷಣೆಯನ್ನು ಹೆಚ್ಚಿಸಿರಬಹುದು.
ಬಾಬೆಲಿನವರು ಮತ್ತು ಐಗುಪ್ತದವರು ಅನೇಕ ವೇಳೆ ನಿಗೂಢ ಶಕ್ತಿಗಳನ್ನು ಆಹ್ವಾನಿಸಿದರು.a ಯಾವುದೊ ಶಕ್ತಿಯು ಯಾ ಬಲವು ರೋಗಿಯಿಂದ ಇನ್ನೊಂದು ಜೀವಿಯೊಳಗೆ ಹರಿದು, ಪರಿಣಾಮವೊಂದನ್ನು ಉಂಟುಮಾಡುವುದೆಂದು ನಂಬುತ್ತಾ, ಒಂದು ಕುರಿಯ ಮೂಗಿನ ಸೊಳ್ಳೆಯೊಳಗೆ ಉಸಿರಾಡುವಂತೆ ಒಬ್ಬ ಪುರೋಹಿತ ⁄ ವೈದ್ಯನು ರೋಗಿಯೊಬ್ಬನನ್ನು ಕೇಳಿಕೊಳ್ಳುತ್ತಿದ್ದನು. ಕುರಿಯನ್ನು ಕೊಲಲ್ಲಾಯಿತು, ಮತ್ತು ಅದರ ಪಿತ್ತಜನಕಾಂಗವು ರೋಗಿಯ ಕಾಯಿಲೆಯನ್ನು ಯಾ ಅವನ ಭವಿಷ್ಯತ್ತನ್ನು ಬಯಲುಪಡಿಸಬಹುದೆಂದು ನಂಬಲಾಯಿತು.—ಯೆಶಾಯ 47:1, 9-13; ಯೆಹೆಜ್ಕೇಲ 21:21.
ಪ್ರಾಚೀನ ಇಸ್ರಾಯೇಲಿನಲ್ಲಿ ದೇವರಿಗೆ ಭಯಪಡುವ ಒಬ್ಬ ವೈದ್ಯನು ಪ್ರೇತವ್ಯವಹಾರದ ಪದ್ಧತಿಗಳನ್ನು ಪ್ರಯೋಗಿಸಿರಲಿಕ್ಕಿಲ್ಲವೆಂಬುದು ನಿಶ್ಚಯ. ದೇವರು ಬುದ್ಧಿವಂತಿಕೆಯಿಂದ ಆಜ್ಞಾಪಿಸಿದ್ದು: “ಕಣಿಹೇಳುವವರು, . . . ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, . . . ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ.” (ಧರ್ಮೋಪದೇಶಕಾಂಡ 18:10-12; ಯಾಜಕಕಾಂಡ 19:26; 20:27) ಇದೇ ವಿಷಯವು ಇಂದು ದೇವರ ಕ್ರೈಸ್ತ ಸೇವಕರಿಗೆ ಅನ್ವಯಿಸುತ್ತದೆ. ಎಚ್ಚರಿಕೆಯು ಸೂಕ್ತವಾದದ್ದಾಗಿದೆ.
ಇತ್ತೀಚೆಗಿನ ವರ್ಷಗಳಲ್ಲಿ ಅನೇಕ ಜನರು “ಬದಲಿ” ರೋಗ ನಿದಾನದ ತಂತ್ರಗಳ ಮತ್ತು ಚಿಕಿತ್ಸೆಗಳ ಕಡೆಗೆ ತಮ್ಮ ಗಮನವನ್ನು ನಿರ್ದೇಶಿಸಿದ್ದಾರೆ. ಇದು ಮೂಲಭೂತವಾಗಿ ವೈಯಕ್ತಿಕ ನಿರ್ಣಯಕ್ಕಾಗಿರುವ ಒಂದು ಕ್ಷೇತ್ರವಾಗಿದೆ. (ಮತ್ತಾಯ 7:1; ಹೋಲಿಸಿ ರೋಮಾಪುರ 14:3, 4.) ಜೀವಗಳನ್ನು ರಕ್ಷಿಸುವ ಏಕೈಕ ಮಾರ್ಗವಾಗಿರುವ ಶುಶ್ರೂಷೆಯನ್ನು ವಾದಾಸ್ಪದ ಆರೋಗ್ಯ ವಿವಾದಾಂಶಗಳು ಮಬ್ಬುಗವಿಸುವ ಮಟ್ಟಿಗೆ, ಅವುಗಳಲ್ಲಿ ಯಾವ ಕ್ರೈಸ್ತನಾದರೂ ಮಗ್ನನಾಗುವುದಾದರೆ, ಅದು ನಿಶ್ಚಯವಾಗಿಯೂ ದುಃಖಕರವಾಗಿರುವುದು. (1 ತಿಮೊಥೆಯ 4:16) ಹೊಸ ಲೋಕದಲ್ಲಿ ವೈದ್ಯಕೀಯ ವಿಧಾನಗಳ, ಗಿಡಮೂಲಿಕೆಗಳ, ಆಹಾರಕ್ರಮಗಳ, ಯಾ ಸಮಗ್ರ ಆಹಾರಪಥ್ಯಗಳ ಮುಖಾಂತರ ಕಾಯಿಲೆಯು ಗುಣಪಡಿಸಲ್ಪಡುವುದೆಂದು ಮತ್ತು ಪರಿಪೂರ್ಣ ಆರೋಗ್ಯವು ಸಾಧಿಸಲ್ಪಡುವುದೆಂದು ಬೈಬಲ್ ಹೇಳುವುದಿಲ್ಲ. ವಾಸ್ತವವಾಗಿ, ಪೂರ್ಣ ಗುಣಪಡಿಸುವಿಕೆಯು ಯೇಸುವಿನ ಪ್ರಾಯಶ್ಚಿತ್ತ ಬಲಿಯ ಆಧಾರದ ಮೇಲೆ ಪಾಪದ ಕ್ಷಮಾಪಣೆಯ ಮೂಲಕ ಮಾತ್ರ ಸಾಧ್ಯವಾಗುವುದು.—ಯೆಶಾಯ 33:24; ಪ್ರಕಟನೆ 22:1, 2.
ಯಾವ ಶಕ್ತಿಗಳು ಒಳಗೊಂಡಿವೆ?
ಆರಂಭಿಕ ಪತ್ರದಲ್ಲಿ ಉಲ್ಲೇಖಿಸಲಾದ ಸ್ನಾಯು ಪರೀಕ್ಷೆಯ ಪದ್ಧತಿಯ ಕುರಿತು ತನ್ನ ಸ್ವಂತ ನಿರ್ಣಯವನ್ನು ಮಾಡುವುದರಲ್ಲಿ, ಒಬ್ಬ ಕ್ರೈಸ್ತನು ಏನನ್ನು ಪರಿಗಣಿಸಲು ಬಯಸಬಹುದು?
ಸ್ನಾಯುಗಳ ಬಲವನ್ನು ಯಾ ಪ್ರತಿಕ್ರಿಯೆಯನ್ನು ಪರೀಕ್ಷಿಸುವ ಕೆಲವು ವಿಧಾನಗಳು ಸಾಂಪ್ರದಾಯಿಕ ಔಷಧ ವಿದ್ಯೆಯ ಭಾಗವಾಗಿವೆ, ಮತ್ತು ಅವುಗಳ ಸಮಂಜಸತೆಯನ್ನು ಸಂದೇಹಿಸುವವರು ಕೊಂಚ ಜನರೇ. ಉದಾಹರಣೆಗೆ, ಶೈಶವ ಪಾರ್ಶ್ವರೋಗವು ಸ್ನಾಯುಗಳನ್ನು ದುರ್ಬಲಗೊಳಿಸಬಲ್ಲದು, ಮತ್ತು ಇದಕ್ಕಾಗಿ ಚಿಕಿತ್ಸೆಯು ಕನೀಸಿಆಲಜಿ—“ಸ್ನಾಯುಗಳ ಮತ್ತು ಸ್ನಾಯುವಿನ ಚಲನೆಯ ಅಧ್ಯಯನ”—ಎಂದು ಕರೆಯಲ್ಪಡುವ ವಿಷಯವನ್ನು ಒಳಗೊಳ್ಳಬಹುದು. ಪಾರ್ಶ್ವವಾಯುವಿನ ಬಲಿಗಳಿಗಾಗಿರುವ ಪುನಃಸ್ಥಾಪನೆಯ ಚಿಕಿತ್ಸೆಯಲ್ಲಿಯೂ ಇಂತಹ ಕನೀಸಿಆಲಜಿಯನ್ನು ಬಳಸಲಾಗುತ್ತದೆ. ಅನೇಕ ಜನರು ಇಂತಹ ಚಿಕಿತ್ಸೆಯ ನ್ಯಾಯಸಮ್ಮತತೆಯನ್ನು ಗ್ರಹಿಸುವರು.
ಈ ಲೇಖನದ ಆರಂಭದಲ್ಲಿರುವ ಪತ್ರದಲ್ಲಿ ವರ್ಣಿಸಲಾದ ಸ್ನಾಯು ಪರೀಕ್ಷಿಸುವಿಕೆಯ ಕುರಿತೇನು? ನಿರ್ದಿಷ್ಟವಾದ ಆಹಾರಗಳು, ಗಿಡಮೂಲಿಕೆಗಳು, ಯಾ ಆಹಾರಸ್ವತಗಳು ಒಬ್ಬ ವ್ಯಕ್ತಿಗೆ ಸಹಾಯ ಮಾಡಬಲ್ಲವೊ ಯಾ ಹಾನಿಮಾಡಬಲ್ಲವೊ ಎಂಬುದನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ, ಈ ಪ್ರಕಾರದ “ಕನೀಸಿಆಲಜಿ” ಯನ್ನು ಬಳಸಲಾಗಿದೆ. ಅನೇಕ ವೇಳೆ ಮಾಡಲ್ಪಡುವಂತೆ, ವ್ಯಕ್ತಿಯು ತನ್ನ ತೋಳನ್ನು ಮೇಲಕ್ಕೆತ್ತುತ್ತಾನೆ ಮತ್ತು ಸ್ನಾಯುವಿನ ಬಲವನ್ನು ಪರೀಕ್ಷಿಸಲು ಒಬ್ಬ ವೈದ್ಯನು ಅದನ್ನು ಕೆಳಗೆ ಒತ್ತುತ್ತಾನೆ. ಅನಂತರ ರೋಗಿಯು ತನ್ನ ಬಾಯೊಳಗೆ, ತನ್ನ ಹೊಟ್ಟೆಯ ಮೇಲೆ, ಇಲ್ಲವೆ ತನ್ನ ಕೈಯಲ್ಲಿ, ಒಂದು ಪೋಷಕ ಅಂಶವನ್ನು ಯಾ ಬೇರೆ ಪದಾರ್ಥವನ್ನು ಇಡುತ್ತಾನೆ. ತದನಂತರ ತೋಳಿನ ಸ್ನಾಯುಗಳನ್ನು ಪುನಃಪರೀಕ್ಷಿಸಲಾಗುತ್ತದೆ. ಅವನಿಗೆ ಆ ಪೋಷಕ ಅಂಶದ ಅಗತ್ಯವಿದ್ದರೆ ಅವನ ತೋಳು ಬಲಿಷ್ಠವಾಗಿ ಪರಿಣಮಿಸುವುದು; ಅದು ಅವನಿಗೆ ಕೆಟ್ಟದಾಗಿದ್ದರೆ, ಸ್ನಾಯುಗಳು ದುರ್ಬಲವಾಗಿರುವವು ಎಂಬುದಾಗಿ ಹೇಳಲಾಗುತ್ತದೆ.b
ಇದನ್ನು ಪ್ರಯತ್ನಿಸಿದ ಕೆಲವರು ಅದು ಕಾರ್ಯಸಾಧಿಸುತ್ತದೆಂದು ಮತ್ತು ಪರಿಣಾಮವು ದೇಹದೊಳಗಿರುವ ಶಕ್ತಿಗಳ ಮೇಲೆ ಆಧಾರಿಸಿದೆ ಎಂದು ನಂಬುತ್ತಾರೆ. ಆಧುನಿಕ ವಿಜ್ಞಾನಕ್ಕೆ ವಿವರಿಸಲು ಸಾಧ್ಯವಾಗದ ಆದರೆ ಸಂಭವಿಸುವ ಯಾ ಅವಲೋಕಿಸಬಲ್ಲ ಅನೇಕ ವಿಷಯಗಳಿವೆ ಎಂದು ಅವರು ತರ್ಕಿಸುತ್ತಾರೆ. ಹೀಗೆ, ವೈದ್ಯರು ಅವುಗಳನ್ನು ಇನ್ನೂ ಕಂಡುಹಿಡಿಯದಿದ್ದರೂ ಯಾ ಸ್ವೀಕರಿಸದಿದ್ದರೂ, ಶಕ್ತಿಗಳ ಮತ್ತು ಪದಾರ್ಥಗಳ ನಡುವೆ ಪರಸ್ಪರಕ್ರಿಯೆ ಯಾ ಬಲದ ಮಾರ್ಗಗಳು ಇರಬಹುದೆಂದು ಅವರು ವಾದಿಸುತ್ತಾರೆ.
ಇನ್ನೊಂದು ಕಡೆಯಲ್ಲಿ, ಅಪ್ಲಾಯ್ಡ್ ಕನೀಸಿಆಲಜಿ (ಇಂಗ್ಲಿಷ್ನಲ್ಲಿ) ಎಂಬ ಪುಸ್ತಕವು ಹೇಳುವುದು: “ಆಹಾರಸ್ವತಗಳನ್ನು ಯಾ ಗಿಡಮೂಲಿಕೆಗಳಂತಹ ರಾಸಾಯನಿಕ ಪದಾರ್ಥಗಳನ್ನು, ಕೈಯಲ್ಲಿ ಪದಾರ್ಥವನ್ನು ಹಿಡಿದುಕೊಳ್ಳುವ ಮೂಲಕ ಮತ್ತು ಸ್ನಾಯುವನ್ನು ಪರೀಕ್ಷಿಸುವ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆಂದು ಕೆಲವೊಮ್ಮೆ [ಪುಸ್ತಕಗಳು] ಕಲಿಸುತ್ತವೆ. ಈ ರೀತಿಯ ಪರೀಕ್ಷೆಯಲ್ಲಿ ಯಾವುದೇ ವಿಶ್ವಾಸಾರ್ಹತೆಯನ್ನು ಸೂಚಿಸುವ ಪ್ರಮಾಣವು ಇರುವುದಿಲ್ಲ. . . . ತತ್ವಶಾಸ್ತ್ರೀಯ ಮನೋಭಾವವು ಎಷ್ಟು ಪ್ರಬಲವಾಗಿರಬಲ್ಲದೆಂದರೆ, ಪರೀಕ್ಷಿಸುವ ಪ್ರಕ್ರಿಯೆಯಲ್ಲಿ ನಿಷ್ಕೃಷ್ಟವಾದ ಮಾಹಿತಿಯನ್ನು ಪಡೆಯುವುದಕ್ಕೆ ನಿರ್ವಾಹಕ ಅವಿಚಾರಾಭಿಪ್ರಾಯವು ಅಡಬ್ಡರುತ್ತದೆ.” “ಪರೀಕ್ಷೆಯನ್ನು ಕೇವಲ . . . ತುಸು ಬದಲಾಯಿಸುವ ಮೂಲಕ, ಕೈಯಿಂದ ಮಾಡುವ ಸ್ನಾಯುವಿನ ಪರೀಕ್ಷೆಯಲ್ಲಿ ಅನುಭವಸ್ಥನಾಗಿರುವ ಒಬ್ಬ ಪರೀಕ್ಷಕನು ತನ್ನ ಇಷ್ಟಾನುಸಾರ ಸುಲಭವಾಗಿ ರೋಗಿಯ ಸ್ನಾಯುವನ್ನು ದುರ್ಬಲವಾಗಿ ಯಾ ಬಲಿಷ್ಠವಾಗಿ ತೋರುವಂತೆ ಮಾಡಬಲ್ಲನು.”
ಎಚ್ಚರದಿಂದಿರ್ರಿ!
ಆದರೂ, ಕೆಲವು ಸ್ನಾಯು ಪರೀಕ್ಷೆಗಳು ಹೆಚ್ಚಿನ ವಿಷಯಗಳನ್ನು ಒಳಗೊಂಡಿರುತ್ತವೆ. “ಬದಲಿ ಪರೀಕ್ಷೆ” (ಸರೊಗೆಟ್ ಟೆಸ್ಟಿಂಗ್) ಎಂದು ಕರೆಯಲಾಗುವ ವಿಧಾನವನ್ನು ಪರಿಗಣಿಸಿರಿ. ಇದನ್ನು ಒಬ್ಬ ವೃದ್ಧ ವ್ಯಕ್ತಿಯ ಸಂಬಂಧದಲ್ಲಿ ಅಥವಾ ಪರೀಕ್ಷಿಸಲ್ಪಡಲು ತೀರ ದುರ್ಬಲವಾಗಿರುವ ಒಂದು ಶಿಶುವಿನ ಸಂಬಂಧದಲ್ಲಿ ನಡೆಸಬಹುದು. ಬದಲಿವ್ಯಕ್ತಿಯು ಮಗುವನ್ನು ಸ್ಪರ್ಶಿಸುವಾಗ, ವೈದ್ಯನು ಬದಲಿ ವ್ಯಕ್ತಿಯ ತೋಳನ್ನು ಪರೀಕ್ಷಿಸುತ್ತಾನೆ. ಇದನ್ನು ಮುದ್ದಿನ ಪ್ರಾಣಿಗಳಿಗೂ ಅನ್ವಯಿಸಲಾಗಿದೆ; ಕಾಲಿ, ಜರ್ಮನ್ ಷೆಪರ್ಡ್, ಯಾ ಬೇರೆ ಅಸ್ವಸ್ಥ ಪ್ರಾಣಿಯ ಮೇಲೆ ತನ್ನ ಕೈಯನ್ನು ಇಟ್ಟಿರುವಾಗ ಬದಲಿ ವ್ಯಕ್ತಿಯ ತೋಳನ್ನು ಪರೀಕ್ಷಿಸಲಾಗುತ್ತದೆ.
ಇಂತಹ ಕ್ರಿಯೆಗಳನ್ನು ತೀರ್ಮಾನಿಸುವ ಸ್ಥಾನದಲ್ಲಿ ನಾವು ಇರುವುದಿಲ್ಲ, ಆದರೆ ‘ಈ ಪರಿಣಾಮಗಳ ಹಿಂದೆ ದೈಹಿಕ ಶಕಿಗ್ತಳಿವೆಯೊ?’ ಎಂದು ನೀವು ಕೇಳಬಹುದು. ಕಾಸ್ಮಿಕ್ ಕಿರಣಗಳ, ಸೂಕ್ಷ್ಮತರಂಗಗಳ (ಮೈಕ್ರೊವೇವ್), ಮತ್ತು ವಿದ್ಯುತ್ಕಾಂತಕ ವಿಕಿರಣದ ಹಲವಾರು ಬಗೆಗಳ ಅಸ್ತಿತ್ವವನ್ನು ವಿಜ್ಞಾನಿಗಳು ರುಜುಪಡಿಸಿದ್ದಾರೆ. ಆದರೂ, ಎಲ್ಲ ಸೃಷ್ಟಿಜೀವಿಗಳು—ಶಿಶುಗಳನ್ನು ಮತ್ತು ಮುದ್ದಿನ ಪ್ರಾಣಿಗಳನ್ನು ಸೇರಿಸಿ—ತಮ್ಮೊಳಗೆ ಹರಿಯಬಲ್ಲ ಶಕ್ತಿಗಳನ್ನು ಹೊಂದಿದ್ದು, ಎರಡನೆಯ ವ್ಯಕ್ತಿಯ ಮೇಲೆ ಪರೀಕ್ಷಾತ್ಮಕವಾದ ಪರಿಣಾಮವನ್ನು ಉತ್ಪಾದಿಸಬಲ್ಲವೊ? ಶಕ್ತಿಗಳು ಹೊರಗೆ ಹರಿದು ಕುರಿಯೊಂದನ್ನು ಪ್ರಭಾವಿಸಬಲ್ಲವೆಂದು ಬಾಬೆಲಿನವರು ನೆನಸಿದರು. ನೀವು ಸ್ವತಃ ಹೀಗೆ ಕೇಳಿಕೊಳ್ಳಬಹುದು, ‘ತದ್ರೀತಿಯ ಯಾವುದೊ ಸಂಗತಿಯು ಇಂದು ಮನುಷ್ಯರಲ್ಲಿ ಯಾ ಪ್ರಾಣಿಗಳಲ್ಲಿ ಸಂಭವಿಸಬಲ್ಲದೆಂದು ನಾನು ನಂಬುತ್ತೇನೊ? ಅಥವಾ ಆಗುವ ಪರಿಣಾಮಗಳಿಗೆ ಮತ್ತೊಂದು ವಿವರಣೆ ಇರಸಾಧ್ಯವೊ?’
ಕೆಲವು ವೈದ್ಯರು ಲೋಹದ ಸುರುಳಿಗಳು ಯಾ ಲೋಲಕಗಳಂತಹ ಸಲಕರಣೆಗಳಿಂದ ವ್ಯಕ್ತಿಯೊಬ್ಬನ “ಶಕ್ತಿಗಳನ್ನು” ಅಳೆಯುತ್ತೇವೆಂದು ವಾದಿಸುತ್ತಾರೆ. ವೈದ್ಯನ “ಬಲದ ಕ್ಷೇತ್ರ”ವು ರೋಗಿಯ ಬಲದ ಕ್ಷೇತ್ರದೊಂದಿಗೆ ಪರಸ್ಪರವಾಗಿ ಕಾರ್ಯಮಾಡುವಾಗ, ಇವು ಚಲಿಸುತ್ತವೆಂದು ನಂಬಲಾಗುತ್ತದೆ. ಒಂದು ಸಮಯದಲ್ಲಿ ಒಬ್ಬ ಸಂಶೋಧನಾ ವಿಜ್ಞಾನಿಯಾಗಿದ್ದ, ಈ ಕ್ಷೇತ್ರದಲ್ಲಿರುವ ವೈದ್ಯೆಯೂ ಬರಹಗಾರ್ತಿಯೂ ಕೆಲವೊಮ್ಮೆ ಒಂದು ಲೋಲಕದ ಬಳಕೆಯಿಂದ ರೋಗ ನಿರ್ಣಯಿಸುತ್ತಾಳೆ. “ಮಾನವ ಬಲದ ಕ್ಷೇತ್ರವನ್ನು” ಯಾ ವ್ಯಕ್ತಿಗಳ ಸುತ್ತಲೂ ಇರುವ ವರ್ಣರಂಜಿತ ದಿವ್ಯಪ್ರಭೆಯನ್ನು ಆಕೆ ನೋಡಬಲ್ಲಳೆಂದು ಸಹ ಆಕೆ ಪ್ರತಿಪಾದಿಸುತ್ತಾಳೆ. ದೇಹದೊಳಗೆ ಗೆಡ್ಡೆಗಳನ್ನು, ರಕ್ತ ಕಣಗಳನ್ನು, ಯಾ ಸೂಕ್ಷ್ಮ ದರ್ಶಕೀಯ ಜೀವಿಗಳನ್ನು ನೋಡಲು ಮತ್ತು ಭೂತಕಾಲವನ್ನು ವೀಕ್ಷಿಸಲು “ಆಂತರಿಕ ದೃಷ್ಟಿ” ಯನ್ನು ಬಳಸುತ್ತೇನೆಂದು ಸಹ ಆಕೆ ವಾದಿಸುತ್ತಾಳೆ.c
ಈ ಹಿಂದೆ ಗಮನಿಸಿದಂತೆ, ತೋಳಿನ ಬಲದ ಮೂಲಕ ಶಕ್ತಿಗಳನ್ನು ಅಳೆಯುವುದು ಭಾವನೆಗಳನ್ನು ಪರೀಕ್ಷಿಸಲು ಸಹ ಬಳಸಲಾಗಿದೆ. ವ್ಯಾಪಕವಾಗಿ ಹಂಚಲ್ಪಟ್ಟ ಒಂದು ಪುಸ್ತಕವು ಹೇಳಿದ್ದು: “ಅದೇ ಸಮಯದಲ್ಲಿ ಅಲ್ಪವಾದ ಭಾವನಾತ್ಮಕ ಪರೀಕ್ಷೆಯನ್ನು ಸೇರಿಸಲು ನೀವು ಬಯಸುವುದಾದರೆ, ‘ನಿಮಗೊಂದು ಸಮಸ್ಯೆ ಇದೆಯೆ?’ ಎಂದು ಗಟ್ಟಿಯಾಗಿ ಕೇಳಿ ಮತ್ತು ಪುನಃ ಪರೀಕ್ಷಿಸಿರಿ. ಪೋಷಕ ಅಂಶವು ರೋಗಿಗೆ ಪ್ರಯೋಜನಕಾರಿಯಾಗಿರದಿದ್ದರೆ ಇದು ಕೆಲವೊಮ್ಮೆ ತೋಳನ್ನು ದುರ್ಬಲಗೊಳಿಸುವುದು.” “ಯಾವ ವಯಸ್ಸಿನಲ್ಲಿ ನಿರ್ದಿಷ್ಟವಾದ ಶಾರೀರಿಕ, ಭಾವನಾತ್ಮಕ ಯಾ ಆತ್ಮಿಕ ಪೆಟ್ಟು” ಸಂಭವಿಸಿತ್ತೆಂದು “ಕಂಡುಹಿಡಿಯಲು” ಕೆಲವರು ಇಂತಹ ಒಂದು ಪರೀಕ್ಷೆಯನ್ನು ಉಪಯೋಗಿಸುತ್ತಾರೆ. ದೈನಿಕ ವಿಷಯಗಳ ಸಂಬಂಧದಲ್ಲಿ ‘ಹೌದು ಯಾ ಇಲ್ಲ’ ಎಂಬ ನಿರ್ಣಯಗಳನ್ನು ಮಾಡಲು ಸಹ ಇದನ್ನು ಬಳಸಲಾಗುತ್ತದೆ.
ಇಂತಹ ಸ್ನಾಯು ಪರೀಕ್ಷೆ (ಕನೀಸಿಆಲಜಿ) ಯನ್ನು ಮಾಡುವ ಅನೇಕರು, ಈಗ ತಾನೇ ವರ್ಣಿಸಲಾದ ವಿಷಯಗಳಿಂದ ತಮ್ಮ ಪದ್ಧತಿಯು ಭಿನ್ನವಾಗಿದೆಯೆಂದು, ಯಾವ ಪ್ರೇತವ್ಯವಹಾರವು ಒಳಗೊಡಿರುವುದಿಲ್ಲವೆಂದು, ಯಾ ಅವರು ಯಾವುದೇ ಭಾವನಾತ್ಮಕ ಪರೀಕ್ಷೆಯನ್ನು ಮಾಡುವುದಿಲ್ಲವೆಂದು ಹೇಳುವುದು ಸಂಭವನೀಯ. ಆದರೂ, ಅವರು ಮಾಡುವಂತಹ ವಿಷಯವು, ವಿಶೇಷ ಶಕಿಗ್ತಳಿವೆ ಎಂದು ಹೇಳಿಕೊಳ್ಳುವ ಕೆಲವು ಜನರಿಂದ ಮಾತ್ರ ಪರೀಕ್ಷಿಸಲ್ಪಡಬಲ್ಲ ಯಾ ನೋಡಸಾಧ್ಯವಿರುವ ಪ್ರತಿಯೊಬ್ಬ ಮಾನವನಲ್ಲಿರುವ ಶಕ್ತಿಗಳಲ್ಲಿ ಒಂದು ವಿಶ್ವಾಸದ ಮೇಲೆ ಇನ್ನೂ ಆಧಾರಿತವಾಗಿದೆಯೊ?
ಕ್ರೈಸ್ತರು ಇಂತಹ ವಿವಾದಾಂಶಗಳನ್ನು ಲಘುವಾಗಿ ಎಣಿಸುವುದಿಲ್ಲ. ದೇವರು ಇಸ್ರಾಯೇಲ್ಯರಿಗೆ ಸಲಹೆ ನೀಡಿದ್ದು: “ವ್ಯರ್ಥನೈವೇದ್ಯವನ್ನು ಇನ್ನು ತಾರದಿರಿ, ಧೂಪವು ನನಗೆ ಅಸಹ್ಯ; ಅಮಾವಾಸ್ಯೆ, ಸಬ್ಬತ್ ದಿನ, ಕೂಟಪ್ರಕಟನೆ, ಇವು ಬೇಡ; ಅಧರ್ಮದಿಂದ ಕೂಡಿದ ಸಂಘವನ್ನು ನಾನು ಸಹಿಸಲಾರೆನು.” (ಯೆಶಾಯ 1:13) ಆ ರಾಷ್ಟ್ರವು ಧರ್ಮಭ್ರಷ್ಟ ರಾಷ್ಟ್ರವಾಗಿ ಪರಿಣಮಿಸಿದಾಗ, ಅವರು ‘ಕಣಿಹೇಳುತ್ತಿದ್ದರು ಮತ್ತು ಯಂತ್ರಮಂತ್ರಗಳನ್ನು ಮಾಡುತ್ತಿದ್ದರು.’ (2 ಅರಸು 17:17; 2 ಪೂರ್ವಕಾಲವೃತ್ತಾಂತ 33:1-6) ವಿಶೇಷವಾದ ಸಂಸ್ಕಾರಗಳ ಮೂಲಕ ಅವರು ಮಾಹಿತಿಯನ್ನು ಹುಡುಕಿದರೆಂಬುದು ಸುವ್ಯಕ್ತ, ಮತ್ತು ತದನಂತರ ಅವರು “ಜೊಳ್ಳು” ನುಡಿದರು.—ಜೆಕರ್ಯ 10:2.
ರೋಗಿಗೆ ಯಾ ವೈದ್ಯನಿಗೆ ಯಾವ ಹಾನಿಯೂ ಆಗದೆ ಮಾಡಲಾದ ಕೆಲವು ಸ್ನಾಯು ಪರೀಕ್ಷೆಗಳು, ಕೆಡುಕು ಮಾಡದವುಗಳಾಗಿರಬಹುದು. ಆದರೆ, ಕೆಲವು ಪರೀಕ್ಷೆಗಳು ಆಂತರಿಕ ದೃಷ್ಟಿ, ಗೂಢವಾದ ದಿವ್ಯಪ್ರಭೆಗಳು, ಮತ್ತು ಒಂದು ಲೋಲಕದ ಬಳಕೆಯಂತಹ ಜೊಳ್ಳು ಯಾ ಅತಿಲೌಕಿಕ ವಿಷಯಗಳನ್ನು ಹೊಂದಿವೆಯೆಂಬುದು ಸ್ಪಷ್ಟ. ಕ್ರೈಸ್ತರು ಜೊಳ್ಳು ಸಾಮರ್ಥ್ಯಗಳನ್ನು ಅಭ್ಯಸಿಸಲಾರರು. ಅಂತಹವುಗಳೊಂದಿಗೆ ಅವರು ಪ್ರಯೋಗವನ್ನೂ ಮಾಡಬಾರದು, ಯಾಕೆಂದರೆ ಸೈತಾನನ ಆಳವಾದ ವಿಷಯಗಳ ಕುರಿತು ಅವರು ಕುತೂಹಲಿಗಳಾಗಿರುವುದಿಲ್ಲ. (ಪ್ರಕಟನೆ 2:24) ಬದಲಿಗೆ, ದೇವರ ವಾಕ್ಯವು ಖಂಡಿಸುವ ಪ್ರೇತವ್ಯವಹಾರದ ಪದ್ಧತಿಗೆ ಸಂಬಂಧಿಸಿದೆ ಎಂದು ತೋರಬಹುದಾದ ಯಾವುದೇ ವಿಷಯದ ಬಗ್ಗೆ ಎಚ್ಚರಿಕೆಯನ್ನು ವಹಿಸಲಿಕ್ಕಾಗಿ ಒಳ್ಳೆಯ ಕಾರಣವಿದೆ.—ಗಲಾತ್ಯ 5:19-21.
ತಾನು ಮಾಡುವಂತಹ ವಿಷಯಕ್ಕೆ ವೈದ್ಯನೊಬ್ಬನು ಜವಾಬ್ದಾರನಾಗಿದ್ದಾನೆ, ಮತ್ತು ಪ್ರತಿಯೊಬ್ಬರ ಪ್ರತಿಪಾದನೆಗಳನ್ನು ಯಾ ಕಾರ್ಯವಿಧಾನಗಳನ್ನು ವಿಮರ್ಶಿಸಿ, ತೀರ್ಪನ್ನು ನೀಡುವುದು ನಮ್ಮ ಉದ್ದೇಶವಾಗಿರುವುದಿಲ್ಲ. ಈ ಪದ್ಧತಿಗಳಲ್ಲಿ ಕೆಲವು ಅತಿಲೌಕಿಕ ಶಕ್ತಿಯನ್ನು ಒಳಗೊಂಡಿವೆಯೆಂದು ನಿಮಗನಿಸಿದರೂ, ಅವುಗಳನ್ನು ಪ್ರಯತ್ನಿಸಿದ ಅನೇಕರು ಯಾವ ಅರಿವೂ ಇಲ್ಲದೆ, ಪ್ರೇತವ್ಯವಹಾರದಲ್ಲಿ ಒಳಸೇರಿಕೆಯ ಯಾವ ಯೋಚನೆಯೂ ಇಲ್ಲದೆ ಹಾಗೆ ಮಾಡಿದರೆಂಬುದು ಸ್ಪಷ್ಟ. ಅದು ಕೇವಲ ಒಳ್ಳೆಯ ಆರೋಗ್ಯಕ್ಕಾಗಿ ತಮ್ಮ ವಿಪರೀತ ಬಯಕೆಯ ಪ್ರತಿಬಿಂಬವಾಗಿದ್ದಿರಬಹುದು. ಆದರೂ, ಅಂತಹ ಪದ್ಧತಿಗಳಲ್ಲಿ ಒಳಗೊಂಡಿದ್ದ ಕೆಲವರು, ಯಾವುದೇ ಸಂಭಾವ್ಯ ಶಾರೀರಿಕ ಪ್ರಯೋಜನವು ಒಳಗೊಂಡಿರುವ ಆತ್ಮಿಕ ಗಂಡಾಂತರಕ್ಕೆ ಸಮಾನವಲ್ಲವೆಂದು ತದನಂತರ ನಿರ್ಣಯಿಸಿದ್ದಾರೆ.
ಪುನಃ, ಇಂತಹ ವೈಯಕ್ತಿಕ ವಿಷಯಗಳ ಸಂಬಂಧದಲ್ಲಿ ಏನು ಮಾಡಬೇಕೆಂಬುದನ್ನು ಪ್ರತಿಯೊಬ್ಬ ವ್ಯಕ್ತಿಯು ನಿರ್ಧರಿಸಬೇಕು. ಆದರೂ, ಕ್ರೈಸ್ತರು ದೇವರ ಸಲಹೆಯನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕು: “ಮೂಢನು ಯಾವ ಮಾತನ್ನಾದರೂ ನಂಬುವನು; ಜಾಣನು ತನ್ನ ನಡತೆಯನ್ನು ಚೆನ್ನಾಗಿ ಗಮನಿಸುವನು.” (ಜ್ಞಾನೋಕ್ತಿ 14:15) ಅದು ಆರೋಗ್ಯ ಪ್ರತಿಪಾದನೆಗಳಿಗೂ ಅನ್ವಯಿಸುತ್ತದೆ.
ದೇವರ ಸೇವಕರನ್ನು ಸತ್ಯಾರಾಧನೆಯಿಂದ ಅಪಕರ್ಷಿಸಲು ಸೈತಾನನು ಆತುರವುಳ್ಳವನಾಗಿದ್ದಾನೆ. ಇತರ ಅಭಿರುಚಿಗಳಿಂದ ಕ್ರೈಸ್ತರು ಆಕರ್ಷಿತರಾಗುವಂತೆ ಮಾಡಲು ಅವನಿಗೆ ಸಾಧ್ಯವಾದರೆ ಪಿಶಾಚನು ಹರ್ಷಿಸುವನು. ಅವರನ್ನು ಪ್ರೇತವ್ಯವಹಾರದೊಳಗೆ ಸೆಳೆಯಬಹುದಾದ ಅತಿಲೌಕಿಕ ಆಚರಣೆಗಳಿಂದ, ಯಾ ಹಾಗೆ ತೋರುವ ವಿಷಯಗಳಿಂದ ಅವರು ಆಕರ್ಷಿತರಾಗುವುದಾದರೆ ಅವನು ಅಧಿಕ ಸಂತೋಷಗೊಳ್ಳುವನು.—1 ಪೇತ್ರ 5:8.
ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಳಗೆ ಇರದಿದ್ದರೂ, ನಿಗೂಢ ಆಚರಣೆಗಳ ಕಡೆಗೆ ಯೆಹೋವ ದೇವರ ಮನೋಭಾವವು ಪರಿವರ್ತನೆ ಹೊಂದಿಲ್ಲ. ಈ ಹಿಂದೆ ಗಮನಿಸಿದಂತೆ, ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದು ಏನೆಂದರೆ, “ಕಣಿಹೇಳುವವರು, ಶಕುನನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು” ಅವರೊಳಗೆ ಇರಬಾರದಿತ್ತು. “ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ; . . . ನೀವು ನಿಮ್ಮ ದೇವರಾದ ಯೆಹೋವನ ಸೇವೆಯ ವಿಷಯದಲ್ಲಿ ಸದಾಚಾರವುಳ್ಳವರಾಗಿರಬೇಕು.”—ಧರ್ಮೋಪದೇಶಕಾಂಡ 18:10-13.
ಹಾಗಾದರೆ, ಇಂದು ಕ್ರೈಸ್ತರು “ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ಹೋರಾಡಬೇಕಾಗಿರುವ ಕಾರಣ . . . ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸುವುದು” ಎಷ್ಟು ವಿವೇಕವುಳ್ಳದ್ದಾಗಿದೆ!—ಎಫೆಸ 6:11, 12, NW.
[ಅಧ್ಯಯನ ಪ್ರಶ್ನೆಗಳು]
a ಅನೇಕ ಜನರು ಇನ್ನೂ ಷಾಮನರನ್ನು, ಮಂತ್ರವಾದಿಗಳನ್ನು, ಯಾ ತದ್ರೀತಿಯ ವೈದ್ಯರನ್ನು ವಿಚಾರಿಸುತ್ತಾರೆ. ಷಾಮನನು “ರೋಗವನ್ನು ಗುಣಪಡಿಸುವ, ಗುಟ್ಟಾಗಿರುವುದನ್ನು ಮುನ್ನರಿಯುವ, ಮತ್ತು ಘಟನೆಗಳನ್ನು ನಿಯಂತ್ರಿಸುವ ಉದ್ದೇಶಕ್ಕಾಗಿ ಮಾಟವನ್ನು ಉಪಯೋಗಿಸುವ ಒಬ್ಬ ಯಾಜಕ” ನಾಗಿದ್ದಾನೆ. ಒಬ್ಬ ಮಂತ್ರವಾದಿ ಯಾ ಷಾಮನನು, ಗಿಡಮೂಲಿಕೆಗಳನ್ನು ಪ್ರೇತವ್ಯವಹಾರದ ಆಚರಣೆ (ರಹಸ್ಯವಾದ ಬಲಗಳನ್ನು ಆಹ್ವಾನಿಸುವುದು) ಗಳೊಂದಿಗೆ ಕೂಡಿಸಬಹುದು. ಒಬ್ಬ ಜಾಗರೂಕ, ನಿಷ್ಠಾವಂತನಾದ ಕ್ರೈಸ್ತನು ಪ್ರೇತವ್ಯವಹಾರದಲ್ಲಿ ಇಂತಹ ಒಳಗೂಡುವಿಕೆಯನ್ನು—ಅದೊಂದು ರೋಗ ಪರಿಹಾರವನ್ನು ನೀಡುವಂತೆ ತೋರುವುದಾದರೂ—ವರ್ಜಿಸುವನು.—2 ಕೊರಿಂಥ 2:11; ಪ್ರಕಟನೆ 2:24; 21:8; 22:15.
b ಇದೊಂದು ಸಾಮಾನ್ಯ ವರ್ಣನೆಯಾಗಿದೆ, ಆದರೆ ಪರೀಕ್ಷಿಸುವ ಪ್ರಕ್ರಿಯೆಗಳು ಬದಲಾಗಬಹುದು. ಉದಾಹರಣೆಗೆ, ರೋಗಿಯು ತನ್ನ ಹೆಬ್ಬೆರಳನ್ನು ಮತ್ತು ತೋರು ಬೆರಳನ್ನು ಒಟ್ಟಿಗೆ ಒತ್ತುವಂತೆ ಕೇಳಲ್ಪಡಬಹುದು, ಮತ್ತು ವೈದ್ಯನು ಅವುಗಳನ್ನು ಬೇರೆಯಾಗಿ ಎಳೆಯಲು ಪ್ರಯತ್ನಿಸುತ್ತಾನೆ.
c ಆಕೆ ಬರೆಯುವುದು: “ಅದ್ಭುತಕರವೆಂದು ತೋರುವ ಈ ಘಟನೆಗಳು ಹೇಗೆ ಸಂಭವಿಸುತ್ತವೆ? . . . ನಾನು ಬಳಸುವ ಪ್ರಕ್ರಿಯೆಯನ್ನು, ಕೈಯಗಳನ್ನು ಇಡುವುದು, ಭಕ್ತಿ ಚಿಕಿತ್ಸೆ ಯಾ ಆತ್ಮಿಕ ಗುಣಪಡಿಸುವಿಕೆ ಎಂಬುದಾಗಿ ಕರೆಯಲಾಗುತ್ತದೆ. ಅದೊಂದು ಗೂಢವಾದ ಪ್ರಕ್ರಿಯೆ ಆಗಿರುವುದೇ ಇಲ್ಲ, ಆದರೆ ಬಹಳ ಪ್ರಾಮಾಣಿಕವಾದದ್ದು . . . ಶಾರೀರಿಕ ದೇಹವನ್ನು ಸುತ್ತುವರಿದಿರುವ ಮತ್ತು ವ್ಯಾಪಿಸುವ ಬಲದ ಕ್ಷೇತ್ರ ಯಾ ದಿವ್ಯಪ್ರಭೆ ಪ್ರತಿಯೊಬ್ಬನಿಗಿದೆ. ಈ ಬಲದ ಕ್ಷೇತ್ರವು ನಿಕಟವಾಗಿ ಆರೋಗ್ಯದೊಂದಿಗೆ ಜೊತೆಸೇರಿರುತ್ತದೆ. . . . ಉನ್ನತ ಪ್ರಜ್ಞೆಯ ಗ್ರಹಿಕೆ ಒಂದು ರೀತಿಯ ‘ನೋಡುವಿಕೆ’ ಯಾಗಿದೆ, ಅದರಲ್ಲಿ ನಿಮ್ಮ ಸಾಮಾನ್ಯ ದೃಷ್ಟಿಯ ಬಳಕೆಯಿಲ್ಲದೆ ನಿಮ್ಮ ಮನಸ್ಸಿನಲ್ಲಿ ನೀವೊಂದು ಚಿತ್ರವನ್ನು ನೋಡುತ್ತೀರಿ. ಅದು ಕಲ್ಪನೆಯಾಗಿರುವುದಿಲ್ಲ. ಅದನ್ನು ಕೆಲವೊಮ್ಮೆ ಅತೀಂದ್ರಿಯ ದೃಷ್ಟಿಯೆಂದು ಸೂಚಿಸಲಾಗುತ್ತದೆ.”