ಹಿಂಸಾಕೃತ್ಯಕ್ಕೆ ಶಾಶ್ವತ ಕೊನೆ—ಹೇಗೆ?
ಹಿಂಸಾಕೃತ್ಯದ ಅಭಿವೃದ್ಧಿಯನ್ನು ನಿಗ್ರಹಿಸಲಿಕ್ಕಾಗಿ, ಅಮೆರಿಕದಲ್ಲಿನ ಅನೇಕ ನಗರಗಳು ಹೊಸ ರೀತಿಯ ಉಪಾಯದೊಂದಿಗೆ ಪ್ರಯೋಗ ನಡೆಸಿದವು—ಯಾರು ತಮ್ಮ ಬಂದೂಕುಗಳನ್ನು ಒಪ್ಪಿಸಿಬಿಡುತ್ತಾರೊ ಅವರಿಗೆ, ಹಣ ಅಥವಾ ಸಾಮಾನಿನ ಬಹುಮಾನವು ಕೊಡಲ್ಪಡುವುದು. ಫಲಿತಾಂಶವೇನು? ಉದಾಹರಣೆಗಾಗಿ ಸೆಂಟ್ ಲೂವಿಸ್ ನಗರದಲ್ಲಿ, 3,41,000 ಡಾಲರುಗಳ ಬೆಲೆಯಲ್ಲಿ, 8,500 ಬಂದೂಕುಗಳು ಸಂಗ್ರಹಿಸಲ್ಪಟ್ಟವು. ನ್ಯೂ ಯಾರ್ಕ್ ನಗರದಲ್ಲಿ ತದ್ರೀತಿಯ ಒಂದು ಕಾರ್ಯಕ್ರಮವು ಒಂದು ಸಾವಿರಕ್ಕಿಂತಲೂ ಹೆಚ್ಚಿನ ಆಯುಧಗಳನ್ನು ಸಂಗ್ರಹಿಸಿತು.
ಇದೆಲ್ಲವೂ ದುಷ್ಕೃತ್ಯದ ಮೇಲೆ ಯಾವ ಪರಿಣಾಮವನ್ನು ಬೀರಿದೆ? ವಿಷಾದಕರವಾಗಿ ತೀರ ಕೊಂಚ ಪರಿಣಾಮವನ್ನು ಬೀರಿದೆ. ಹಿಂಬಾಲಿಸಿದ ವರ್ಷದಲ್ಲಿ ಸೆಂಟ್ ಲೂವಿಸ್ನಲ್ಲಿನ ಬಂದೂಕು ಸಂಬಂಧಿತ ನರಹತ್ಯೆಗಳು ಸರ್ವಕಾಲಿಕ ಉಚ್ಚಾಂಕವನ್ನು ತಲಪಿದವು. ನ್ಯೂ ಯಾರ್ಕ್ ನಗರದಲ್ಲಿ, ಅಂದಾಜು ಮಾಡಲ್ಪಟ್ಟಿರುವ 20 ಲಕ್ಷ ಬಂದೂಕುಗಳು ಇನ್ನೂ ಸಾಮಾನ್ಯ ಜನರ ಒಡೆತನದಲ್ಲಿವೆ. ಅಮೆರಿಕದಲ್ಲಿ ಖಾಸಗಿ ಒಡೆತನದಲ್ಲಿರುವ ಸುಮಾರು 20 ಕೋಟಿ ಬಂದೂಕುಗಳು—ಬಹುಮಟ್ಟಿಗೆ ಪ್ರತಿಯೊಬ್ಬ ಪುರುಷ, ಸ್ತ್ರೀ, ಮತ್ತು ಮಗುವಿಗೆ ಒಂದರಂತೆ—ಇವೆ. ಬೇರೆ ದೇಶಗಳಲ್ಲಿ, ಬಂದೂಕು ಸಂಬಂಧಿತ ಹಿಂಸಾಕೃತ್ಯವು ಗಾಬರಿಹುಟ್ಟಿಸುವಂತಹ ಪ್ರಮಾಣದಲ್ಲಿ ಅಧಿಕಗೊಳ್ಳುತ್ತಿದೆ. ಬ್ರಿಟನ್ನಲ್ಲಿ “1983 ಮತ್ತು 1993ರ ನಡುವೆ, ಬಂದೂಕುಗಳು ಒಳಗೊಂಡಿದ್ದ, ಪೊಲೀಸರಿಂದ ದಾಖಲಿಸಲ್ಪಟ್ಟಂತಹ ಅನೇಕ ಅಪರಾಧಗಳು ಬಹುಮಟ್ಟಿಗೆ 14,000ಕ್ಕೆ ದ್ವಿಗುಣಿತವಾಗಿದ್ದವು” ಎಂದು ದಿ ಇಕಾನಮಿಸ್ಟ್ ಹೇಳುತ್ತದೆ. ನರಹತ್ಯೆಯ ಪ್ರಮಾಣವು ಸಂಬಂಧಸೂಚಕವಾಗಿ ಕಡಿಮೆಯಾಗಿರುವುದಾದರೂ, ಆ ದೇಶದಲ್ಲಿ ಕಾನೂನು ವಿರುದ್ಧವಾದ ಸುಮಾರು ಹತ್ತು ಲಕ್ಷ ಆಯುಧಗಳು ಇವೆ.
ನಿಶ್ಚಯವಾಗಿ, ಆ ಭಯಾನಕ ಸಂಖ್ಯೆಗಳಲ್ಲಿನ ಯಾವುದೇ ಇಳಿತವು ಒಂದು ಮುನ್ನೆಜ್ಜೆಯಾಗಿದೆ. ಆದರೂ, ಮೇಲೆ ವಿವರಿಸಲ್ಪಟ್ಟಿರುವವುಗಳಂತಹ ಸೂಕ್ತಕ್ರಮಗಳು, ಹಿಂಸಾಕೃತ್ಯದ ಮೂಲ ಕಾರಣಗಳನ್ನು ನಿಗ್ರಹಿಸಲಾರವು. ಆ ಕಾರಣಗಳು ಯಾವುವು? ಅನೇಕ ಅಂಶಗಳು ಉಲ್ಲೇಖಿಸಲ್ಪಟ್ಟಿರುವುದಾದರೂ ಅವುಗಳಲ್ಲಿ ಕೆಲವು ಮೂಲಭೂತವಾಗಿವೆ. ಕುಟುಂಬ ಸ್ಥಿರತೆ ಮತ್ತು ನೈತಿಕ ಬೋಧನೆಯ ಕೊರತೆಯು, ಅನೇಕ ಯುವ ಜನರನ್ನು ಪುಂಡರ ಗುಂಪುಗಳಿಗೆ—ತಾವು ಅದಕ್ಕೆ ಸೇರಿದ್ದೇವೆನ್ನುವ ಭಾವನೆಗಾಗಿ—ಸೇರುವಂತೆ ಬಲವಂತಪಡಿಸಿದೆ. ದೊಡ್ಡ ಲಾಭಗಳ ಸೆಳೆತವು, ಅನೇಕರನ್ನು ಹಿಂಸಾಕೃತ್ಯವನ್ನು ಅವಲಂಬಿಸುವಂತೆ ಪ್ರಚೋದಿಸುತ್ತದೆ. ವಿಷಯಗಳನ್ನು ಹಿಂಸಾತ್ಮಕ ಸಾಧನೋಪಾಯಗಳ ಮೂಲಕ ಸರಿಪಡಿಸುವಂತೆ ಅನ್ಯಾಯವು ಇತರರನ್ನು ಬಲವಂತಪಡಿಸುತ್ತದೆ. ದೇಶ, ಕುಲ, ಅಥವಾ ಜೀವನದಲ್ಲಿನ ಸ್ಥಾನದ ದುರಭಿಮಾನವು, ಇತರರ ಕಷ್ಟಾನುಭವವನ್ನು ಅಲಕ್ಷ್ಯಮಾಡುವಂತೆ ಜನರನ್ನು ಪ್ರಚೋದಿಸುತ್ತದೆ. ಇವು ಸುಲಭ ಪರಿಹಾರಗಳಿಲ್ಲದಂತಹ, ಆಳವಾಗಿ ಬೇರೂರಿರುವ ಅಂಶಗಳಾಗಿವೆ.
ಏನು ಮಾಡಸಾಧ್ಯವಿದೆ?
ಹೆಚ್ಚು ಪೊಲೀಸ್, ಹೆಚ್ಚು ಕಠಿನವಾದ ಸೆರೆವಾಸಗಳು, ಬಂದೂಕು ನಿಯಂತ್ರಣ, ಮರಣದಂಡನೆ, ಇವುಗಳೆಲ್ಲವೂ ದುಷ್ಕೃತ್ಯ ಹಾಗೂ ಹಿಂಸಾಕೃತ್ಯಗಳನ್ನು ನಿಗ್ರಹಿಸಲಿಕ್ಕಾಗಿರುವ ಸಾಧನೋಪಾಯಗಳೋಪಾದಿ ಪ್ರಸ್ತಾಪಿಸಲ್ಪಟ್ಟು ಪ್ರಯತ್ನಿಸಲ್ಪಟ್ಟಿವೆ. ಅವು ವಿಭಿನ್ನ ಪ್ರಮಾಣಗಳ ಯಶಸ್ವಿಯನ್ನು ತಂದಿವೆ, ಆದರೆ ಹಿಂಸಾಕೃತ್ಯವು ಇನ್ನೂ ನಮ್ಮ ಜೀವಿತದ ಒಂದು ಭಾಗವಾಗಿರುವುದು ದುಃಖಕರವಾದ ಸಂಗತಿಯಾಗಿದೆ. ಏಕೆ? ಈ ಸೂಕ್ತಕ್ರಮಗಳು ಕೇವಲ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡುವುದರಿಂದಲೇ.
ಇನ್ನೊಂದು ಕಡೆಯಲ್ಲಿ, ಹಿಂಸಾಕೃತ್ಯಕ್ಕೆ ಅಂತ್ಯವನ್ನು ತರಲಿಕ್ಕಾಗಿರುವ ಕೀಲಿ ಕೈ ಶಿಕ್ಷಣವಾಗಿದೆ ಎಂಬುದು ಅನೇಕ ಪರಿಣತರ ಅನಿಸಿಕೆ. ಈ ಕಲ್ಪನೆಯು ತರ್ಕಬದ್ಧವಾಗಿರುವಾಗ, ಹಿಂಸಾಕೃತ್ಯವು ಶೈಕ್ಷಣಿಕ ಅವಕಾಶಗಳು ಪರಿಮಿತಗೊಳಿಸಲ್ಪಟ್ಟಿರುವ ರಾಷ್ಟ್ರಗಳಿಗೆ ಮಾತ್ರವೇ ಸೀಮಿತಗೊಳಿಸಲ್ಪಟ್ಟಿಲ್ಲ ಎಂಬುದನ್ನು ನಾವು ಗಮನಿಸತಕ್ಕದ್ದು. ವಾಸ್ತವವಾಗಿ, ಅತ್ಯುಚ್ಚ ಮಟ್ಟಗಳ ಶಿಕ್ಷಣಗಳನ್ನು ಹೊಂದಿರುವ ರಾಷ್ಟ್ರಗಳೂ ಸಹ, ಅತ್ಯಂತ ಹಿಂಸಾತ್ಮಕ ರಾಷ್ಟ್ರಗಳಲ್ಲಿ ಕೆಲವಾಗಿವೆಯೆಂದು ತೋರುತ್ತದೆ. ಕೇವಲ ಶಿಕ್ಷಣವಲ್ಲ, ಬದಲಿಗೆ ಸರಿಯಾದ ರೀತಿಯ ಶಿಕ್ಷಣವು ಅಗತ್ಯವಾಗಿದೆ ಎಂಬುದನ್ನು ಅವಲೋಕಿಸುವುದು ಕಷ್ಟಕರವಲ್ಲ. ಅದು ಎಂತಹ ರೀತಿಯ ಶಿಕ್ಷಣವಾಗಿರಸಾಧ್ಯವಿದೆ? ಶಾಂತಿ ಪ್ರಿಯರೂ ಯಥಾರ್ಥ ವ್ಯಕ್ತಿಗಳೂ ಆಗಿರುವಂತೆ ಜನರಿಗೆ ಕಲಿಸಲು ಶಕ್ತರಾಗಿರುವ ಯಾರಾದರೊಬ್ಬರು ಇದ್ದಾರೊ?
“ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ. ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು [“ಶಾಂತಿಯು,” NW] ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು [“ನೀತಿಯು,” NW] ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.” (ಯೆಶಾಯ 48:17, 18) ಶಾಂತಿ ಪ್ರಿಯರೂ ನೀತಿವಂತರೂ ಆಗಿರುವಂತೆ ಯೆಹೋವನು ಜನರಿಗೆ ಹೇಗೆ ಕಲಿಸುತ್ತಾನೆ? ಪ್ರಥಮವಾಗಿ ತನ್ನ ವಾಕ್ಯವಾದ ಬೈಬಲಿನ ಮೂಲಕವೇ.
ದೇವರ ವಾಕ್ಯದ ಶಕ್ತಿ
ಖಂಡಿತವಾಗಿಯೂ ಬೈಬಲು, ಕೇವಲ ಹಳೆಯ ಕಟ್ಟು ಕಥೆಗಳು ಮತ್ತು ಹಿಂದಿನ ಕಾಲದವುಗಳೂ ಅಸಂಬದ್ಧವೂ ಆಗಿರುವ ಹೇಳಿಕೆಗಳ ಸಂಗ್ರಹಣವಾಗಿಲ್ಲ. ಯಾರು ತನ್ನ ಶ್ರೇಷ್ಠ ದೃಷ್ಟಿಕೋನದಿಂದ, ಬೇರೆ ಯಾವುದೇ ವ್ಯಕ್ತಿಗಿಂತಲೂ ಹೆಚ್ಚು ಉತ್ತಮವಾಗಿ ಮಾನವ ಸ್ವಭಾವವನ್ನು ತಿಳಿದಿದ್ದಾನೊ, ಆ ಮಾನವಕುಲದ ಸೃಷ್ಟಿಕರ್ತನಿಂದ ಕೊಡಲ್ಪಟ್ಟ ಮೂಲಸೂತ್ರಗಳು ಮತ್ತು ಕಲ್ಪನೆಗಳನ್ನು ಇದು ಒಳಗೊಂಡಿದೆ. “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ” ಎಂದು ಯೆಹೋವ ದೇವರು ಹೇಳುತ್ತಾನೆ.—ಯೆಶಾಯ 55:9.
ಈ ಕಾರಣಕ್ಕಾಗಿಯೇ “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣಆತ್ಮಗಳನ್ನೂ ಕೀಲುಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿಹೋಗುವಂಥದು, ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ” ಎಂದು ಅಪೊಸ್ತಲ ಪೌಲನು ಸಾಕ್ಷ್ಯ ನೀಡುತ್ತಾನೆ. (ಇಬ್ರಿಯ 4:12) ಹೌದು, ಒಬ್ಬ ವ್ಯಕ್ತಿಯ ಹೃದಯಕ್ಕೆ ತಲಪಿ, ಅದನ್ನು ಸ್ಪರ್ಶಿಸಿ, ಅವನ ಆಲೋಚನೆ ಮತ್ತು ನಡವಳಿಕೆಯನ್ನು ಮಾರ್ಪಡಿಸುವಂತಹ ಶಕ್ತಿಯು ದೇವರ ವಾಕ್ಯಕ್ಕಿದೆ. ಇಂದು ಜನರ ಹಿಂಸಾತ್ಮಕ ಮಾರ್ಗಗಳನ್ನು ಬದಲಾಯಿಸಲಿಕ್ಕಾಗಿ ಅಗತ್ಯವಾಗಿರುವುದು ಇದೇ ಅಲ್ಲವೊ?
230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಈಗ ಸುಮಾರು 50 ಲಕ್ಷಗಳಷ್ಟು ಇರುವ ಯೆಹೋವನ ಸಾಕ್ಷಿಗಳು, ವಾಸ್ತವವಾಗಿ ಹೆಚ್ಚು ಉತ್ತಮವಾಗಿ ಜೀವಿತಗಳನ್ನು ರೂಪಾಂತರಿಸುವ ಶಕ್ತಿ ದೇವರ ವಾಕ್ಯಕ್ಕಿದೆ ಎಂಬುದಕ್ಕೆ ಸಜೀವ ಪುರಾವೆಯಾಗಿದ್ದಾರೆ. ಅವರ ನಡುವೆ ಪ್ರತಿಯೊಂದು ರಾಷ್ಟ್ರೀಯತೆ, ಭಾಷೆ, ಮತ್ತು ಕುಲದಿಂದ ಬಂದ ಜನರಿದ್ದಾರೆ. ಅವರು ಎಲ್ಲಾ ರೀತಿಯ ವೃತ್ತಿಗಳಿಂದಲೂ ಸಾಮಾಜಿಕ ಹಿನ್ನೆಲೆಗಳಿಂದಲೂ ಬಂದವರಾಗಿದ್ದಾರೆ. ಅವರಲ್ಲಿ ಕೆಲವರು ಈ ಹಿಂದೆ ಹಿಂಸಾತ್ಮಕವಾದ ಮತ್ತು ತೊಂದರೆಭರಿತ ಜೀವಿತಗಳನ್ನು ನಡೆಸಿದ್ದರು. ಆದರೆ ಅಂತಹ ಸಂಗತಿಗಳು ತಮ್ಮ ನಡುವೆ ದ್ವೇಷೋದ್ರೇಕ, ಪ್ರತಿಸ್ಪರ್ಧೆ, ಪಕ್ಷಪಾತಗಳನ್ನು ಕೆರಳಿಸುವಂತೆ ಅನುಮತಿಸುವುದರ ಬದಲು, ಈ ಪ್ರತಿಬಂಧಗಳನ್ನು ಜಯಿಸಲು ಅವರು ಕಲಿತಿದ್ದಾರೆ ಮತ್ತು ಶಾಂತಿ ಪ್ರಿಯರೂ ಲೋಕವ್ಯಾಪಕವಾಗಿ ಐಕ್ಯರೂ ಆದ ಜನರಾಗಿ ಪರಿಣಮಿಸಿದ್ದಾರೆ. ಇದನ್ನು ಯಾವುದು ಸಾಧ್ಯಮಾಡಿದೆ?
ಹಿಂಸಾಕೃತ್ಯವನ್ನು ಕೊನೆಗೊಳಿಸುವ ಒಂದು ಕಾರ್ಯಾಚರಣೆ
ದೇವರ ವಾಕ್ಯವಾದ ಬೈಬಲಿನಲ್ಲಿ ಪ್ರಕಟಪಡಿಸಲ್ಪಟ್ಟಿರುವಂತೆ, ಆತನ ಉದ್ದೇಶದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ಇತರರಿಗೆ ಸಹಾಯ ಮಾಡಲಿಕ್ಕಾಗಿ ಯೆಹೋವನ ಸಾಕ್ಷಿಗಳು ಬದ್ಧರಾಗಿದ್ದಾರೆ. ಅವರು ಭೂಮಿಯ ಪ್ರತಿಯೊಂದು ಮೂಲೆಯಲ್ಲಿ ಯೆಹೋವನ ಮಾರ್ಗಗಳನ್ನು ಕಲಿಯಲು ಮತ್ತು ಆತನಿಂದ ಶಿಕ್ಷಣವನ್ನು ಪಡೆದುಕೊಳ್ಳಲು ಇಷ್ಟಪಡುವವರಿಗಾಗಿ ಹುಡುಕುತ್ತಿದ್ದಾರೆ. ಅವರ ಪ್ರಯತ್ನಗಳು ಫಲವನ್ನು ಫಲಿಸುತ್ತಿವೆ. ಈ ಶೈಕ್ಷಣಿಕ ಕಾರ್ಯಾಚರಣೆಯ ಫಲಿತಾಂಶವಾಗಿ, ಅಮೋಘವಾದ ಒಂದು ಪ್ರವಾದನೆಯು ನೆರವೇರಲ್ಪಡುತ್ತಿದೆ.
ಸುಮಾರು 2,700 ವರ್ಷಗಳ ಹಿಂದೆ, ಪ್ರವಾದಿಯಾದ ಯೆಶಾಯನು ಹೀಗೆ ಬರೆಯುವಂತೆ ಪ್ರೇರೇಪಿಸಲ್ಪಟ್ಟನು: “ಅಂತ್ಯಕಾಲದಲ್ಲಿ . . . ಹೊರಟುಬಂದ ಬಹು ಜನಾಂಗದವರು—ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು ಎಂದು ಹೇಳುವರು.”—ಯೆಶಾಯ 2:2, 3.
ಯೆಹೋವನಿಂದ ಕಲಿಸಲ್ಪಡುವುದು ಮತ್ತು ಆತನ ದಾರಿಗಳಲ್ಲಿ ನಡೆಯುವುದು, ಜನರ ಜೀವಿತಗಳಲ್ಲಿ ಅದ್ಭುತಕರ ಬದಲಾವಣೆಗಳನ್ನು ಉಂಟುಮಾಡಬಲ್ಲದು. ಅಂತಹ ಬದಲಾವಣೆಗಳಲ್ಲಿ ಒಂದು, ಅದೇ ಪ್ರವಾದನೆಯಲ್ಲಿ ಮುಂತಿಳಿಸಲ್ಪಟ್ಟಿದೆ: “ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” (ಯೆಶಾಯ 2:4) ಅನೇಕ ಜನರು ಈ ಶಾಸ್ತ್ರವಚನವನ್ನು ಓದಿದ್ದಾರೆ. ವಾಸ್ತವವಾಗಿ, ಈ ವಚನವು ನ್ಯೂ ಯಾರ್ಕ್ ನಗರದಲ್ಲಿರುವ ವಿಶ್ವ ಸಂಸ್ಥೆಯ ಚೌಕದ ಗೋಡೆಯೊಂದರ ಮೇಲೆ ಕೆತ್ತಲ್ಪಟ್ಟಿದೆ. ವಿಶ್ವ ಸಂಸ್ಥೆಯು ಮಹತ್ವಾಕಾಂಕ್ಷೆ ಪಡುವ, ಆದರೆ ಗ್ರಹಿಸಲು ತಪ್ಪಿಹೋಗಿರುವ ವಿಷಯದ ಜ್ಞಾಪನವು ಇದಾಗಿದೆ. ಈ ಯುದ್ಧ ಮತ್ತು ಹಿಂಸಾಕೃತ್ಯದ ತೆಗೆದುಹಾಕುವಿಕೆಯು, ಯಾವುದೇ ಮಾನವ ನಿರ್ಮಿತ ರಾಜಕೀಯ ಸಂಸ್ಥೆಯಿಂದ ಸಾಧಿಸಲ್ಪಡುವಂತಹದ್ದಾಗಿಲ್ಲ. ಇದು ಯೆಹೋವ ದೇವರು ಮಾತ್ರವೇ ಮಾಡಲು ಸಮರ್ಥನಾಗಿರುವ ಒಂದು ಕಾರ್ಯವಾಗಿದೆ. ಇದನ್ನು ಆತನು ಹೇಗೆ ನೆರವೇರಿಸುವನು?
ಸ್ಪಷ್ಟವಾಗಿಯೇ, “ಯೆಹೋವನ ಪರ್ವತಕ್ಕೆ . . . ಹೋಗೋಣ!” ಮತ್ತು ‘ಆತನ ಮಾರ್ಗಗಳ ವಿಷಯವಾಗಿ ಬೋಧನೆ ಪಡೆದುಕೊಳ್ಳೋಣ’ ಮತ್ತು “ಆತನ ದಾರಿಗಳಲ್ಲಿ ನಡೆ”ಯೋಣ, ಎಂಬ ಆಮಂತ್ರಣಕ್ಕೆ ಪ್ರತಿಯೊಬ್ಬರೂ ಪ್ರತಿಕ್ರಿಯೆ ತೋರಿಸುವುದಿಲ್ಲ; ಅಥವಾ ಎಲ್ಲರೂ “ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡ”ಲು ಇಷ್ಟಪಡುವವರಾಗಿರುವುದಿಲ್ಲ. ಅಂತಹ ಜನರ ಕುರಿತಾಗಿ ಯೆಹೋವನು ಏನು ಮಾಡುವನು? ಆತನು ಅವಕಾಶದ ದ್ವಾರವನ್ನು ಸದಾಕಾಲ ತೆರೆದಿಡುವುದಿಲ್ಲ ಅಥವಾ ಅವರು ಬದಲಾವಣೆಗಳನ್ನು ಮಾಡುವಂತೆ ಕಾಯುವುದಿಲ್ಲ. ಹಿಂಸಾಕೃತ್ಯಕ್ಕೆ ಅಂತ್ಯವನ್ನು ತರಲಿಕ್ಕಾಗಿ ಯೆಹೋವನು, ಯಾರು ತಮ್ಮ ಹಿಂಸಾತ್ಮಕ ಮಾರ್ಗಗಳನ್ನು ಪಟ್ಟುಹಿಡಿದು ಬೆನ್ನಟ್ಟುತ್ತಾರೊ ಅವರನ್ನೂ ಕೊನೆಗೊಳಿಸುವನು.
ಅತ್ಯಾವಶ್ಯಕವಾದ ಒಂದು ಪಾಠ
ನೋಹನ ದಿನದಲ್ಲಿ ಯೆಹೋವನು ನಡೆಸಿದ ಕಾರ್ಯವು, ಇಂದು ನಮಗಾಗಿ ಒಂದು ಎಚ್ಚರಿಕೆಯ ಪಾಠವನ್ನು ಒದಗಿಸುತ್ತದೆ. ಆಗ ಎಂತಹ ರೀತಿಯ ಲೋಕವು ಅಸ್ತಿತ್ವದಲ್ಲಿತ್ತು ಎಂಬುದನ್ನು ಬೈಬಲಿನ ದಾಖಲೆಯು ತೋರಿಸುತ್ತದೆ: “ಭೂಲೋಕದವರು ದೇವರ ದೃಷ್ಟಿಗೆ ಕೆಟ್ಟುಹೋಗಿದ್ದರು; ಅನ್ಯಾಯವು [“ಹಿಂಸಾಕೃತ್ಯವು,” NW] ಲೋಕವನ್ನು ತುಂಬಿಕೊಂಡಿತ್ತು.” ಈ ಕಾರಣದಿಂದ ದೇವರು ನೋಹನಿಗೆ ತಿಳಿಸಿದ್ದು: “ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅವರ ಅನ್ಯಾಯದಿಂದ [“ಹಿಂಸಾಕೃತ್ಯದಿಂದ,” NW] ತುಂಬಿ ಅದೆ; ನಾನು ಅವರನ್ನೂ ಭೂಮಿಯ ಮೇಲಿರುವದೆಲ್ಲವನ್ನೂ ಅಳಿಸಿಬಿಡುತ್ತೇನೆ.”—ಆದಿಕಾಂಡ 6:11, 13.
ನಾವು ಒಂದು ಪ್ರಮುಖ ಅಂಶವನ್ನು ಗಮನಿಸಬೇಕು. ಆ ಸಂತತಿಯ ಮೇಲೆ ಜಲಪ್ರಳಯವನ್ನು ತರುವಾಗ, ದೇವರು ನೋಹನನ್ನೂ ಅವನ ಕುಟುಂಬವನ್ನೂ ಸಂರಕ್ಷಿಸಿದನು. ಏಕೆ? ಬೈಬಲು ಉತ್ತರಿಸುವುದು: “ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು; ಅವನು [“ಸತ್ಯ,” NW] ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.” (ಆದಿಕಾಂಡ 6:9; 7:1) ಆ ಸಮಯದಲ್ಲಿ ಜೀವಿಸುತ್ತಿದ್ದ ಪ್ರತಿಯೊಬ್ಬ ವ್ಯಕ್ತಿಯೂ ಅಗತ್ಯವಾಗಿ ಒಬ್ಬ ಹಿಂಸಾತ್ಮಕ ವ್ಯಕ್ತಿಯಾಗಿರದಿದ್ದಾಗಲೂ, ಕೇವಲ ನೋಹನೂ ಅವನ ಕುಟುಂಬವೂ “ಸತ್ಯ ದೇವರೊಂದಿಗೆ ಅನ್ಯೋನ್ಯವಾಗಿ ನಡೆ”ಯಿತು. ಆ ಕಾರಣದಿಂದಲೇ, ಆ ಹಿಂಸಾತ್ಮಕ ಲೋಕವು ಕೊನೆಗೊಳಿಸಲ್ಪಟ್ಟಾಗ ಅವರು ಪಾರಾದರು.
ಪುನಃ ಒಮ್ಮೆ ಭೂಮಿಯು ‘ಹಿಂಸಾಕೃತ್ಯದಿಂದ ತುಂಬಿಕೊಳ್ಳು’ತ್ತಿರುವುದನ್ನು ನಾವು ಅವಲೋಕಿಸಿದಂತೆ, ಇದು ದೇವರಿಂದ ಗಮನಿಸಲ್ಪಡದೆ ಹೋಗುವುದಿಲ್ಲ ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ. ನೋಹನ ದಿನದಲ್ಲಿ ಆತನು ಹೇಗೆ ಕ್ರಿಯೆಗೈದನೊ ಹಾಗೆಯೇ ಆತನು ಕ್ರಿಯೆಗೈಯುವನು ಮತ್ತು ಹಿಂಸಾಕೃತ್ಯವನ್ನು ಶಾಶ್ವತವಾಗಿ ಕೊನೆಗೊಳಿಸುವನು. ಆದರೆ ಈಗ ‘ಸತ್ಯ ದೇವರೊಂದಿಗೆ ಅನ್ಯೋನ್ಯವಾಗಿ ನಡೆ’ಯಲು ಕಲಿಯುತ್ತಿರುವವರಿಗಾಗಿ, ಶಾಂತಿಗಾಗಿರುವ ತನ್ನ ಮಹಾ ಶೈಕ್ಷಣಿಕ ಕಾರ್ಯಾಚರಣೆಗೆ ಪ್ರತಿಕ್ರಿಯೆ ತೋರಿಸುತ್ತಿರುವವರಿಗಾಗಿ ಆತನು ಸುರಕ್ಷಣೆಯ ಮಾರ್ಗವನ್ನೂ ಒದಗಿಸುವನು.
ಕೀರ್ತನೆಗಾರನ ಮೂಲಕ, ಯೆಹೋವನು ಈ ಆಶ್ವಾಸನೆಯನ್ನು ಕೊಡುತ್ತಾನೆ: “ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; ಮತ್ತು ನಿಶ್ಚಯವಾಗಿ ನೀವು ಅವನಿದ್ದ ಸ್ಥಳಕ್ಕೆ ಗಮನಹರಿಸುವಿರಿ, ಮತ್ತು ಅವನು ಅಲ್ಲಿರುವುದಿಲ್ಲ. ಆದರೆ ದೀನರು ಸ್ವತಃ ಭೂಮಿಯ ಒಡೆತನವನ್ನು ಪಡೆದುಕೊಳ್ಳುವರು, ಮತ್ತು ನಿಜವಾಗಿಯೂ ಅವರು ಶಾಂತಿಯ ಸಮೃದ್ಧಿಯಲ್ಲಿ ಅಪೂರ್ವ ಆನಂದವನ್ನು ಕಂಡುಕೊಳ್ಳುವರು.”—ಕೀರ್ತನೆ 37:10, 11, NW.
ನಿಮ್ಮೊಂದಿಗೆ ಬೈಬಲನ್ನು ಅಭ್ಯಾಸಿಸಲಿಕ್ಕಾಗಿ ಯೆಹೋವನ ಸಾಕ್ಷಿಗಳು ಸಂತೋಷಿಸುವರು; ಇದರಿಂದಾಗಿ ಹೀಗೆ ಹೇಳುವವರೊಂದಿಗೆ ನೀವು ಕೂಡಿಕೊಳ್ಳಸಾಧ್ಯವಿದೆ: “ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ, ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆ ಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು.” (ಯೆಶಾಯ 2:3) ಹೀಗೆ ಮಾಡುವ ಮೂಲಕ, ಎಲ್ಲಾ ದುಷ್ಟತನ ಹಾಗೂ ಹಿಂಸಾಕೃತ್ಯದ ಅಂತ್ಯವನ್ನು ನೋಡುವವರ ಮಧ್ಯೆ ನೀವು ಇರಸಾಧ್ಯವಿದೆ. ನೀವು “ಶಾಂತಿಯ ಸಮೃದ್ಧಿಯಲ್ಲಿ ಅಪೂರ್ವ ಆನಂದವನ್ನು” ಕಂಡುಕೊಳ್ಳಬಲ್ಲಿರಿ.
[ಪುಟ 5 ರಲ್ಲಿರುವ ಚಿತ್ರ ಕೃಪೆ]
Reuters/Bettmann