ಕ್ಯಾಪ್ಟನರ ಮೇಜಿನ ಬಳಿ
ಹಡಗಿನ ಕ್ಯಾಪ್ಟನರ ಮೇಜಿನ ಬಳಿ ಆಸಕ್ತಿಕರ ಜನ, ಮೃಷ್ಟಾನ್ನ ಭೋಜನ ಮತ್ತು ಮನಸ್ಸಿಗೆ ಹಿಡಿಸುವಂಥ ಸಂಭಾಷಣೆಯು, ಊಟವನ್ನು ಆನಂದಮಯವನ್ನಾಗಿ ಮಾಡುತ್ತದೆ. ಆದರೆ ವೈಟ್ ಸ್ಟಾರ್ ಲೈನ್ ಕಂಪನಿಯ ಹಡಗಿನ ಕ್ಯಾಪ್ಟನ್ ರಾಬರ್ಟ್ ಜಿ. ಸ್ಮಿತ್ ಅವರ ಮೇಜಿನ ಬಳಿಯಲ್ಲಿ ನಡೆದ ಚರ್ಚೆಯು, ಒಂದು ಆಧ್ಯಾತ್ಮಿಕ ಔತಣದ ಮೇಲೆ ಬೆಳಕು ಬೀರಿತು.—ಯೆಶಾಯ 25:6.
ರಾಬರ್ಟ್ 24ನೆಯ ವಯಸ್ಸಿನಲ್ಲಿ ತಮ್ಮ ಪ್ರಥಮ ಲೋಕ ಸಂಚಾರಕ್ಕಾಗಿ, 1894ರಲ್ಲಿ ಕಿನ್ಕ್ಲೂನ್ ಆಫ್ ಡಂಡೀ ಎಂಬ ಹಾಯಿ ಹಡಗಿನ ನಾಯಕತ್ವವನ್ನು ವಹಿಸಿದರು. ಆ ಬಳಿಕ ಅವರು ವೈಟ್ ಸ್ಟಾರ್ ಕಂಪನಿಯ ಸೆಡ್ರಿಕ್, ಸೀವಿಕ್ ಮತ್ತು ರೂನಿಕ್ ಎಂಬ ಹಡಗುಗಳ ಕ್ಯಾಪ್ಟನ್ ಆದರು.a ಈ ಹಡಗುಗಳಲ್ಲೊಂದರಲ್ಲಿ ನ್ಯೂ ಯಾರ್ಕ್ನಿಂದ ಅಟ್ಲಾಂಟಿಕ್ ಮಾರ್ಗವಾಗಿ ಇಂಗ್ಲೆಂಡಿನ ಲಿವರ್ಪೂಲ್ಗೆ ಹೋಗುತ್ತಿದ್ದಾಗ, ಈ ರಾಬರ್ಟ್ ತಮ್ಮ ಕ್ಯಾಪ್ಟನ್ ಮೇಜಿನಲ್ಲಿ ಚಾರ್ಲ್ಸ್ ಟೇಸ್ ರಸಲ್ ಅವರ ಆತಿಥೇಯರಾದರು. ರಸಲ್ರೊಂದಿಗೆ ನಡೆದ ಸಂಭಾಷಣೆಯು, ಬೈಬಲ್ ಸಂದೇಶದಲ್ಲಿ ರಾಬರ್ಟ್ ಅವರ ಆಸಕ್ತಿಯನ್ನು ಕೆರಳಿಸಿತು. ಮತ್ತು ಹೆಚ್ಚನ್ನು ಕಲಿಯಲು ಸಹಾಯವಾಗುವಂತೆ ಅವರು ಸಂತೋಷದಿಂದ ರಸಲ್ರಿಂದ ಶಾಸ್ತ್ರಗಳ ಅಧ್ಯಯನ (ಇಂಗ್ಲಿಷ್) ಎಂಬ ಪ್ರಕಾಶನದ ಪ್ರತಿಗಳನ್ನು ಪಡೆದರು.
ರಸಲ್ರು ಪತ್ರದ ಮುಖೇನ ಅವರೊಂದಿಗೆ ಸಂಪರ್ಕವನ್ನು ಇಟ್ಟುಕೊಂಡದ್ದರಿಂದ, ರಾಬರ್ಟ್ ಅವರ ಆಸಕ್ತಿ ಬೆಳೆಯಿತು. ರಾಬರ್ಟ್ ತಮ್ಮ ಹೊಸದಾಗಿ ಕಂಡುಕೊಂಡ ಜ್ಞಾನವನ್ನು ತಮ್ಮ ಪತ್ನಿಯೊಂದಿಗೆ ಹಂಚಿಕೊಂಡರು. ಸ್ವಲ್ಪ ಕಾಲದೊಳಗೆ ಅವರಿಬ್ಬರೂ, ಯೆಹೋವನ ಸಾಕ್ಷಿಗಳು ಆಗ ಹೇಗೆ ಪ್ರಸಿದ್ಧರಾಗಿದ್ದರೊ ಆ ಕ್ರಿಯಾಶೀಲ ಬೈಬಲ್ ವಿದ್ಯಾರ್ಥಿಗಳಾದರು. ತರುವಾಯ ರಾಬರ್ಟ್ಗೆ ಬೈಬಲ್ ಭಾಷಣಗಳನ್ನು ಕೊಡುವ ಸುಸಂದರ್ಭ ದೊರೆಯಿತು. ಉದಾಹರಣೆಗೆ, ಆಸ್ಟ್ರೇಲಿಯದ ಬ್ರಿಸ್ಬೆನ್ನಲ್ಲಿ ಅವರು “ಗಿಲ್ಯಾದಿನ ಸುಗಂಧತೈಲ” ಎಂಬ ವಿಷಯದಲ್ಲಿ ಮಾತಾಡಿ, “ಎಲ್ಲ ಲೋಕಸಂಕಟಗಳಿಗೆ ಪರಿಹಾರ”ವಾಗಿರುವ ಸಂದೇಶವು ಹೇಗೆ ದೇವರ ವಾಕ್ಯದಲ್ಲಿ ಅಡಕವಾಗಿದೆ ಎಂಬದನ್ನು ತೋರಿಸಿದರು. ಇಂಗ್ಲೆಂಡಿಗೆ ಹಿಂದೆ ಹೋದಾಗ ಅವರ ಪತ್ನಿ ಮತ್ತು ಎಳೆಯ ಮಕ್ಕಳು, “ಫೋಟೋ-ಡ್ರಾಮ ಆಫ್ ಕ್ರಿಏಷನ್” ಜಾರುಚಿತ್ರವನ್ನು ತೋರಿಸುವಾಗ ರಸಲ್ರ ವ್ಯಾಖ್ಯಾನಗಳ ರೆಕಾರ್ಡಿಂಗನ್ನು ನುಡಿಸುವುದರಲ್ಲಿ ಸಹಾಯಮಾಡಿದರು.
ರಾಬರ್ಟ್ರವರು ತಮಗೆ ಸಿಕ್ಕಿದ್ದ ರಾಜ್ಯ ಸತ್ಯದ ಪರಂಪರೆಯನ್ನು ತಮ್ಮ ಮಕ್ಕಳಿಗೆ ದಾಟಿಸಿದರು. ಇಂದು, ಐದು ತಲೆಮಾರುಗಳ ತರುವಾಯ ಅವರ ಕುಟುಂಬದ ಸದಸ್ಯರಲ್ಲಿ 18 ಮಂದಿ ಸುವಾರ್ತೆಯನ್ನು ಇತರರಿಗೆ ಸಾರುವುದರಲ್ಲಿ ಮಗ್ನರಾಗಿದ್ದಾರೆ. ಕ್ಯಾಪ್ಟನರ ಮೇಜಿನ ಬಳಿಯಲ್ಲಿ ಏನು ಬಡಿಸಲ್ಪಟ್ಟಿತೊ ಅದಕ್ಕಾಗಿ ಅವರು ಕೃತಜ್ಞರಾಗಿದ್ದಾರೆ.
ಕ್ಯಾಪ್ಟನ್ ಸ್ಮಿತ್ ಅವರ ಕುತೂಹಲವನ್ನು ಯಾವುದು ಕೆರಳಿಸಿತೊ ಆ ಬೈಬಲ್ ಸಂದೇಶವನ್ನು ಜನರು ಲೋಕಾದ್ಯಂತವಾಗಿ ಕಲಿಯುವಂತೆ ಯೆಹೋವನ ಸಾಕ್ಷಿಗಳು, ತಮ್ಮ ಸಾಹಿತ್ಯ ಮತ್ತು ಬೈಬಲ್ ಶೈಕ್ಷಣಿಕ ಕೆಲಸದ ಮೂಲಕ ಸಹಾಯಮಾಡುತ್ತಿದ್ದಾರೆ. ಆ ಕ್ಯಾಪ್ಟನರ ಮೇಜಿನ ಬಳಿಯಲ್ಲಿ ಅಷ್ಟೊಂದು ಆಸಕ್ತಿಕರವಾದ ವಿಷಯವಾಗಿ ಪರಿಣಮಿಸಿದ ವಿಷಯವನ್ನೇ ನೀವೂ ಕಂಡುಕೊಳ್ಳಬಲ್ಲಿರಿ.
[ಪಾದಟಿಪ್ಪಣಿ]
a ಟೈಟ್ಯಾನಿಕ್ ಎಂಬ ಜೊತೆ ಹಡಗು ತನ್ನ ಪ್ರಥಮವೂ ವಿಪತ್ಕಾರಕವೂ ಆದ ಪ್ರಯಾಣವನ್ನು ಕ್ಯಾಪ್ಟನ್ ಇ. ಜೆ. ಸ್ಮಿತ್ (ಸಂಬಂಧಿಕರಲ್ಲ) ಅವರ ನಾಯಕತ್ವದಲ್ಲಿ ನಡೆಸಿತು.
[ಪುಟ 8ರಲ್ಲಿರುವ ಚಿತ್ರ]
ರಾಬರ್ಟ್ ಜಿ. ಸ್ಮಿತ್
[ಪುಟ 8ರಲ್ಲಿರುವ ಚಿತ್ರ]
ಚಾರ್ಲ್ಸ್ ಟಿ. ರಸಲ್