ದೇವಪ್ರಭುತ್ವ ಶುಶ್ರೂಷಾ ಶಾಲಾ ಪುನರ್ವಿಮರ್ಶೆ
ದೇವಪ್ರಭುತ್ವ ಶುಶ್ರೂಷಾ ಶಾಲೆಯಲ್ಲಿ ಮೇ 7ರಿಂದ ಆಗಸ್ಟ್ 20, 2001ರ ವರೆಗಿನ ವಾರಗಳ ನೇಮಕಗಳಲ್ಲಿ ಆವರಿತವಾದ ವಿಷಯದ ಮೇಲೆ ಮುಚ್ಚು-ಪುಸ್ತಕ ಪುನರ್ವಿಮರ್ಶೆ. ಕೊಡಲ್ಪಟ್ಟ ಸಮಯದಲ್ಲಿ ನಿಮ್ಮಿಂದಾದಷ್ಟು ಹೆಚ್ಚು ಪ್ರಶ್ನೆಗಳಿಗೆ ಉತ್ತರ ಬರೆಯಲು ಒಂದು ಪ್ರತ್ಯೇಕ ಕಾಗದದ ಹಾಳೆಯನ್ನು ಉಪಯೋಗಿಸಿರಿ.
[ಸೂಚನೆ: ಲಿಖಿತ ಪುನರ್ವಿಮರ್ಶೆಯ ಸಮಯದಲ್ಲಿ ಯಾವುದೇ ಪ್ರಶ್ನೆಯನ್ನು ಉತ್ತರಿಸಲು ಬೈಬಲನ್ನು ಮಾತ್ರವೇ ಉಪಯೋಗಿಸಬಹುದು. ಪ್ರಶ್ನೆಗಳನ್ನು ಹಿಂಬಾಲಿಸುವ ನಿರ್ದೇಶನಗಳು ನಿಮ್ಮ ವೈಯಕ್ತಿಕ ಸಂಶೋಧನೆಗಾಗಿ ಕೊಡಲ್ಪಟ್ಟಿವೆ. ದ ವಾಚ್ಟವರ್ನ ಎಲ್ಲ ನಿರ್ದೇಶನೆಗಳಲ್ಲಿ ಪುಟ ಮತ್ತು ಪ್ಯಾರಗ್ರಾಫ್ ನಂಬರ್ಗಳು ಇಲ್ಲದಿರಬಹುದು.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಸರಿ ಅಥವಾ ತಪ್ಪು ಎಂದುತ್ತರಿಸಿರಿ:
1. ನೆಹೆಮೀಯ 2:4ರಲ್ಲಿ ಸೂಚಿಸಲ್ಪಟ್ಟಿರುವ ಪ್ರಾರ್ಥನೆಯು, ಆಶೆ ತೊರೆದು ಕೊನೆ ಗಳಿಗೆಯಲ್ಲಿ ಮಾಡಿದ ಪ್ರಾರ್ಥನೆಯಾಗಿತ್ತು. [ವಾರದ ಬೈಬಲ್ ವಾಚನ; w-KA86 3/1 ಪು. 25 ಪ್ಯಾರ. 6ನ್ನು ನೋಡಿ.]
2. “ಸಭೆ” ಎಂಬ ಪದವು ಎಕ್ಲೀಸೀಯ ಎಂಬ ಗ್ರೀಕ್ ಪದದಿಂದ ಭಾಷಾಂತರಿಸಲ್ಪಟ್ಟಿದೆ, ಹಾಗೂ ಆ ಪದದಲ್ಲಿ ಒಕ್ಕಟ್ಟು ಮತ್ತು ಪರಸ್ಪರ ಬೆಂಬಲದ ವಿಚಾರಗಳು ಸೇರಿಕೊಂಡಿವೆ. [w-KA99 5/15 ಪು. 25 ಪ್ಯಾರ. 4]
3. ಯೇಸು ತನ್ನ ತಂದೆಯ ಹೆಸರನ್ನು ಸಮರ್ಥಿಸುವ ಮತ್ತು ಮಾನವ ಅಸ್ವಸ್ಥತೆಗಳನ್ನು ಶಾಶ್ವತವಾಗಿ ಪರಿಹರಿಸುವ ದೇವರ ರಾಜ್ಯದ ಕುರಿತು ಸಾರಲು ವಿಶೇಷವಾಗಿ ಈ ಭೂಮಿಗೆ ಬಂದಿದ್ದನು. [gt-KA 24]
4. ಯೋಬನು ಜೀವಿಸಿದ್ದ ಸಮಯದಲ್ಲಿ, ಯೆಹೋವನಿಗೆ ನಂಬಿಗಸ್ತನಾಗಿದ್ದ ಒಬ್ಬನೇ ಮಾನವನು ಅವನಾಗಿದ್ದನು. (ಯೋಬ 1:8) [ವಾರದ ಬೈಬಲ್ ವಾಚನ; w-KA92 11/1 ಪು. 31 ಪ್ಯಾರ. 3-4 ನ್ನು ನೋಡಿ.]
5. ಸೌಲನು ಅಥವಾ ಪೌಲನು, ಗುಡಾರಗಳನ್ನು ಮಾಡುವ ಮೂಲಕ ತನ್ನನ್ನೇ ಬೆಂಬಲಿಸಿಕೊಂಡನು ಎಂಬ ವಾಸ್ತವಾಂಶವು, ಅವನು ಒಬ್ಬ ಬಡ ಹಿನ್ನೆಲೆಯಿಂದ ಬಂದವನಾಗಿದ್ದನು ಎಂಬುದನ್ನು ಸೂಚಿಸುತ್ತದೆ. (ಅ. ಕೃ. 18:2, 3) [w-KA99 5/15 ಪು. 30 ಪ್ಯಾರ. 2ರಿಂದ ಪು. 31 ಪ್ಯಾರ. 1]
6. ದಾವೀದನು ಘೋರ ಪಾಪಗಳನ್ನು ಮಾಡಿದ್ದರೂ, ಅವನ ಪಶ್ಚಾತ್ತಾಪಿ ಮನೋಭಾವ ಹಾಗೂ ಒಳ್ಳೆಯ ಗುಣಗಳ ಕಾರಣದಿಂದಾಗಿ, “ಪೂರ್ಣಮನಸ್ಸಿನಿಂದ ನನ್ನನ್ನು ಹಿಂಬಾಲಿಸಿ”ದವನು ಎಂದು ಅವನ ಕುರಿತು ಯೆಹೋವನು ಹೇಳಲು ಶಕ್ತನಾದನು. (1 ಅರ. 14:8) [w-KA99 6/15 ಪು. 11 ಪ್ಯಾರ. 4]
7. ನಾವು ವಚನಿಸಿದ ಒಂದು ವಿಷಯವು ಅಶಾಸ್ತ್ರೀಯವಾದ ಹೊರತು, ನಾವು ಏನನ್ನು ವಚನಿಸಿದ್ದೇವೋ ತದನಂತರ ಅದನ್ನು ಪೂರೈಸುವುದು ಕಷ್ಟಕರವೆಂದು ಕಂಡುಬಂದರೂ, ಅದನ್ನು ನೆರವೇರಿಸಲು ನಮ್ಮಿಂದಾದದ್ದೆಲ್ಲವನ್ನೂ ಮಾಡಬೇಕು. (ಕೀರ್ತ. 15:4) [ವಾರದ ಬೈಬಲ್ ವಾಚನ; w-KA91 8/1 ಪು. 30 ಪ್ಯಾರ. 5 ನ್ನು ನೋಡಿ.]
8. ದಾವೀದನು ಒತ್ತಡದ ಕೆಳಗಿರುವಾಗ ತನ್ನ ನಂಬಿಕೆಯನ್ನು ತಾತ್ಕಾಲಿಕವಾಗಿ ಕಳೆದುಕೊಂಡನು ಎಂಬುದನ್ನು ಕೀರ್ತನೆ 22:1 ಸೂಚಿಸುತ್ತದೆ. [ವಾರದ ಬೈಬಲ್ ವಾಚನ; w-KA86 9/1 ಪು. 28 ಪ್ಯಾರ. 6 ನ್ನು ನೋಡಿ.]
9. ಒಬ್ಬ ಕ್ರೈಸ್ತನು, ನಿರಾಶೆಗಳು, ಆಶಾಭಂಗಗಳು, ಮತ್ತು ಕಾನೂನುಬದ್ಧ ಅಥವಾ ಹಣಕಾಸಿನ ತೊಂದರೆಗಳು ಎಂಬ ವಿಷಯಗಳ ಸಂಬಂಧದಲ್ಲಿ “ಬಿದ್ದರೂ,” ದೇವರ ಆತ್ಮ ಹಾಗೂ ಆತನ ಪ್ರೀತಿಯ ಆರಾಧಕರ ಬೆಂಬಲದಿಂದಾಗಿ, ಅವನು ಆತ್ಮಿಕವಾಗಿ ಸಂಪೂರ್ಣವಾಗಿ ‘ಎಸೆಯಲ್ಪಡುವುದಿಲ್ಲ.’ (ಕೀರ್ತ. 37:23, 24, NW) [ವಾರದ ಬೈಬಲ್ ವಾಚನ; w86 11/1 ಪು. 30 ಪ್ಯಾರ. 14 ನ್ನು ನೋಡಿ.]
10. ಯೇಸು “ಜಗಳಾಡುವದಿಲ್ಲ, ಕೂಗಾಡುವದಿಲ್ಲ; ಬೀದಿಗಳಲ್ಲಿ ಈತನ ಧ್ವನಿಯು ಯಾರಿಗೂ ಕೇಳಿಸುವದಿಲ್ಲ” ಎಂಬುದು, ಅವನು ಉಚ್ಚ ಸ್ವರದಿಂದ ಅಥವಾ ಎತ್ತರ ಧ್ವನಿಯಿಂದ ಬಹಿರಂಗವಾಗಿ ಸಾರುವುದಿಲ್ಲ ಎಂಬುದನ್ನು ಅರ್ಥೈಸಿತು. (ಮತ್ತಾ. 12:19) [gt-KA 33]
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿರಿ:
11. ಎಜ್ರ ಮತ್ತು ಅವನ ಸಹಾಯಕರು ಧರ್ಮಶಾಸ್ತ್ರದ ‘ತಾತ್ಪರ್ಯವನ್ನು ವಿವರಿಸುತ್ತಿದ್ದದ್ದು’ ಹೇಗೆ? (ನೆಹೆ. 8:8) [ವಾರದ ಬೈಬಲ್ ವಾಚನ; w-KA86 3/1 ಪು. 26 ಪ್ಯಾರ. 14ನ್ನು ನೋಡಿ.]
12. ‘ಯೆಹೋವನ ಆನಂದವು’ ಯಾವುದರಿಂದ ಫಲಿಸುತ್ತದೆ? (ನೆಹೆ. 8:10) [ವಾರದ ಬೈಬಲ್ ವಾಚನ; w-KA86 3/1 ಪು. 27 ಪ್ಯಾರ. 3ನ್ನು ನೋಡಿ.]
13. “ಸ್ವೇಚ್ಛೆಯಿಂದ ಯೆರೂಸಲೇಮಿನಲ್ಲಿ ವಾಸಿಸುವದಕ್ಕೆ ಮನಸ್ಸುಮಾಡಿದಂಥವರನ್ನು” ಏಕೆ ಆಶೀರ್ವದಿಸಲಾಯಿತು? (ನೆಹೆ. 11:2) [ವಾರದ ಬೈಬಲ್ ವಾಚನ; w-KA86 3/1 ಪು. 27 ಪ್ಯಾರ. 6ನ್ನು ನೋಡಿ.]
14. ರಾಜನಿಗೆ ತನ್ನ ನಿರ್ದಿಷ್ಟವಾದ ಬಿನ್ನಹವನ್ನು ಹೇಳಲು ಎಸ್ತೇರಳು ತಡಮಾಡಿದ್ದೇಕೆ? (ಎಸ್ತೇರಳು 5:6-8) [ವಾರದ ಬೈಬಲ್ ವಾಚನ; w-KA86 4/1 ಪು. 23 ಪ್ಯಾರ. 7ನ್ನು ನೋಡಿ.]
15. ವಿಭಿನ್ನ ಧಾರ್ಮಿಕ ನಂಬಿಕೆಯ ಒಬ್ಬನನ್ನು ವಿವಾಹವಾಗುವ ವಿಷಯದಲ್ಲಿ ಬೈಬಲಿನ ಸಲಹೆಯೇನು? ಶಾಸ್ತ್ರವಚನಗಳನ್ನು ಕೊಡಿರಿ. [fy-KA ಪು. 129 ಪ್ಯಾರ. 3]
16. ಎಲೀಫಜನ ಬುದ್ಧಿವಾದವು, ಯೋಬನನ್ನು ಪ್ರೋತ್ಸಾಹಿಸುವ ಬದಲು ಅವನನ್ನು ಏಕೆ ಎದೆಗುಂದಿಸಿತು? (ಯೋಬ 21:34; 22:2, 3) [ವಾರದ ಬೈಬಲ್ ವಾಚನ; w-KA95 2/15 ಪು. 27 ಪ್ಯಾರ. 5-6ನ್ನು ನೋಡಿ.]
17. ಒಂದು ವಿವಾಹದಲ್ಲಿ ಸಮಸ್ಯೆಗಳನ್ನು ಹೇಗೆ ಮತ್ತು ಯಾವಾಗ ನಿರ್ವಹಿಸಬೇಕು? [fy-KA ಪು. 154 ಪ್ಯಾರ. 4]
18. ಕೀರ್ತನೆ 2:1ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಜನಾಂಗಗಳು ಯಾವ ‘ವ್ಯರ್ಥಕಾರ್ಯಗಳನ್ನು ಯೋಚಿಸುತ್ತಿದ್ದಾರೆ?’ [ವಾರದ ಬೈಬಲ್ ವಾಚನ; w-KA86 9/1 ಪು. 27 ಪ್ಯಾರ. 4ನ್ನು ನೋಡಿ.]
19. ಸಮಾರ್ಯದವರು ಹಾಗೂ ಐಥಿಯೋಪ್ಯ ದೇಶದ ಅಧಿಕಾರಿಯನ್ನು ಒಳಗೊಂಡಿದ್ದ ಫಿಲಿಪ್ಪನ ಶುಶ್ರೂಷೆಯಿಂದ, ನಿಷ್ಪಕ್ಷಪಾತದ ಕುರಿತಾದ ಯಾವ ಪ್ರಾಯೋಗಿಕ ಪಾಠವನ್ನು ನಾವು ಕಲಿತುಕೊಳ್ಳಸಾಧ್ಯವಿದೆ? (ಅ. ಕೃ. 8:6-13, 26-39) [w-KA99 7/15 ಪು. 25 ಪ್ಯಾರ. 2]
20. ಸಮಾಧಿಯನ್ನು, ತನ್ನ ಸಮಸ್ಯೆಗಳಿಂದ ಮರೆಮಾಡುವ ಸ್ಥಳವಾಗಿ ಪರಿಗಣಿಸಿದ ಯೋಬನು, ದೇವರು ತನ್ನನ್ನು ಅಲ್ಲಿಂದ ಪುನರುತ್ಥಾನಗೊಳಿಸಬಲ್ಲನು ಎಂದು ತನಗಿದ್ದ ದೃಢವಿಶ್ವಾಸವನ್ನು ಹೇಗೆ ದೃಷ್ಟಾಂತಿಸಿದನು? (ಯೋಬ 14:7, 13-15) [ವಾರದ ಬೈಬಲ್ ವಾಚನ; w-KA00 5/15 ಪು. 27 ಪ್ಯಾರ. 7ರಿಂದ ಪು. 28 ಪ್ಯಾರ. 1ನ್ನು ನೋಡಿ.]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದನ್ನು ಪೂರ್ಣಮಾಡಲು ಬೇಕಾದ ಪದ(ಗಳು) ಅಥವಾ ಪದಗುಚ್ಛವನ್ನು ಒದಗಿಸಿರಿ:
21. ಎಸ್ತೇರ 8:17ರಲ್ಲಿ ಜನರು ‘ಯೆಹೂದ್ಯರ ಮತಕ್ಕೆ ಸೇರಿದರು’ ಎಂಬುದಾಗಿ ತಿಳಿಸುತ್ತದೆ; ಇದೇ ರೀತಿ, ಇಂದು “ಬೇರೆ ಕುರಿ”ಗಳ _________________________ದವರು _________________________ಯವರೊಂದಿಗೆ ಪಕ್ಷವಹಿಸಿ ನಿಂತಿದ್ದಾರೆ. (ಪ್ರಕ. 7:9; ಯೋಹಾ. 10:16; ಜೆಕ. 8:23) [ವಾರದ ಬೈಬಲ್ ವಾಚನ; w-KA86 4/1 ಪು. 24 ಪ್ಯಾರ. 7ನ್ನು ನೋಡಿ.]
22. ಅ. ಕೃತ್ಯಗಳು 1:7 ಸೂಚಿಸುವ ಪ್ರಕಾರ, ಯೆಹೋವನು _________________________ ಕುರಿತು ತುಂಬ ಪ್ರಜ್ಞೆಯುಳ್ಳವನಾಗಿರುವುದಾದರೂ, ಆತನ ಲೆಕ್ಕವೊಪ್ಪಿಸುವ ದಿನವು ಜನರು ನಿರೀಕ್ಷಿಸದೆ ಇರುವಾಗ, _________________________ ಬರುವಂತೆ ಬರುವುದು. (2 ಪೇತ್ರ 3:10) [w-KA99 6/1 ಪು. 5 ಪ್ಯಾರ. 1-2]
23. ಮತ್ತಾಯ 9:15ಬಿ-17ರಲ್ಲಿ ದಾಖಲಿಸಲ್ಪಟ್ಟಿರುವ ದೃಷ್ಟಾಂತಗಳ ಮೂಲಕ, _________________________ದಂತಹ _________________________ ಹಳೆಯ ಆಚರಣೆಗಳಿಗೆ ತನ್ನ ಹಿಂಬಾಲಕರು ಬದ್ಧರಾಗಿರಬೇಕೆಂದು ಯಾರೂ ನಿರೀಕ್ಷಿಸಕೂಡದು ಎನ್ನುವದನ್ನು _________________________ ಶಿಷ್ಯರು ಮನವರಿಕೆ ಮಾಡಿಕೊಳ್ಳುವಂತೆ ಯೇಸುವು ಸಹಾಯ ಮಾಡುತ್ತಿದ್ದನು. [gt-KA 28]
24. ವಿಶ್ವಾಸ, ಭರವಸೆ ಮತ್ತು ಪರಸ್ಪರರನ್ನು ಅರ್ಥಮಾಡಿಕೊಳ್ಳುವುದರಿಂದ ಹಿತಕರ ಸಂವಾದವು ಸಾಧ್ಯವಾಗುತ್ತದೆ, ಹಾಗೂ ವಿವಾಹವು ಒಂದು _________________________ ಸಂಬಂಧವಾಗಿದೆ ಎಂದು ವೀಕ್ಷಿಸಲ್ಪಡುವಲ್ಲಿ ಮತ್ತು ಅದು ಸಫಲವಾಗುವಂತೆ ಮಾಡಲು ನಿಜವಾದ _________________________ ಇರುವಲ್ಲಿ, ಈ ಗುಣಗಳು ಫಲಿಸಬಲ್ಲವು. [w-KA99 7/15 ಪು. 21 ಪ್ಯಾರ. 3]
25. ಹಿತಕರವಾದ ಸಮಾನಸ್ಥರ ಒತ್ತಡವು, ನಾವು ನೈತಿಕ ಹಾಗೂ ಆತ್ಮಿಕ ಆವಶ್ಯಕತೆಗಳನ್ನು _________________________ ತರಲು ಮತ್ತು ಹೀಗೆ ಯೆಹೋವನನ್ನು _________________________ ಸೇವಿಸಲು ನಮಗೆ ಸಹಾಯಮಾಡಸಾಧ್ಯವಿದೆ. [w-KA99 8/1 ಪು. 24 ಪ್ಯಾರ. 3]
ಕೆಳಗಿನ ಹೇಳಿಕೆಗಳಲ್ಲಿ ಪ್ರತಿಯೊಂದರ ಸರಿಯಾದ ಉತ್ತರವನ್ನು ಆರಿಸಿರಿ:
26. ಮೊರ್ದೆಕೈಯು “ಅರಮನೆಯ ಹೆಬ್ಬಾಗಲಲ್ಲಿ ಕೂತು”ಕೊಂಡಿದ್ದದ್ದು, ಅವನು (ರಾಜನ ಅಂಗರಕ್ಷಕನಾಗಿದ್ದನು; ಅಹೆಷ್ವೇರೋಷನ ಅಧಿಕಾರಿಗಳಲ್ಲಿ ಒಬ್ಬನಾಗಿದ್ದನು; ಅರಸನನ್ನು ಭೇಟಿಯಾಗಲು ಕಾಯುತ್ತಿದ್ದನು) ಎಂಬುದನ್ನು ಸೂಚಿಸುತ್ತದೆ. (ಎಸ್ತೇರಳು 2:19, 20) [ವಾರದ ಬೈಬಲ್ ವಾಚನ; w-KA86 4/1 ಪು. 22 ಪ್ಯಾರ. 10ನ್ನು ನೋಡಿ.]
27. ಯೋಬ 19:25-27ರಲ್ಲಿ ದಾಖಲಿಸಲ್ಪಟ್ಟಿರುವಂತೆ, “ದೇವರನ್ನು ನೋಡುವೆನು” ಎಂದು ಯೋಬನು ಹೇಳುವ ಮೂಲಕ, (ತನಗೆ ಒಂದು ದರ್ಶನವನ್ನು ಒದಗಿಸಲಾಗುವುದು; ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನಗೊಳಿಸಲಾಗುವುದು; ಯೆಹೋವನ ಕುರಿತಾದ ಸತ್ಯವನ್ನು ನೋಡುವಂತೆ ತನ್ನ ತಿಳಿವಳಿಕೆಯ ಕಣ್ಣುಗಳು ತೆರೆಯಲ್ಪಡುವವು) ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದನು. [ವಾರದ ಬೈಬಲ್ ವಾಚನ; w-KA94 11/15 ಪು. 19 ಪ್ಯಾರ. 17ನ್ನು ನೋಡಿ.]
28. ತಮ್ಮ ಮಕ್ಕಳಲ್ಲಿ (ವಿಚಾರಹೀನತೆಯನ್ನು; ಮೂರ್ಖತನವನ್ನು; ಹುಡುಗಾಟಿಕೆಯನ್ನು) ಎದುರಿಸುವಲ್ಲಿ ಹೆತ್ತವರು ಆಶ್ಚರ್ಯಪಡಬಾರದು. (ಜ್ಞಾನೋ. 22:15) [fy-KA ಪು. 149 ಪ್ಯಾರ. 20]
29. ಒಬ್ಬ ಗಂಡ ಮತ್ತು ಹೆಂಡತಿಯು ಭಿನ್ನಾಭಿಪ್ರಾಯಪಡುವಾಗ, ಅವರಲ್ಲಿ ಪ್ರತಿಯೊಬ್ಬರು (ಕಿವಿಗೊಡುವದರಲ್ಲಿ ತೀವ್ರವಾಗಿ; ಮಾತಾಡುವದರಲ್ಲಿ ತೀವ್ರವಾಗಿ; ಕೋಪಿಸುವುದರಲ್ಲಿ ತೀವ್ರವಾಗಿ) ಇರುವ ಅಗತ್ಯವಿದೆ. (ಯಾಕೋ. 1:19) [fy-KA ಪು. 156 ಪ್ಯಾರ. 9]
30. ಬಿಚ್ಚು ಮನಸ್ಸಿನವರು ಮತ್ತು ಯಥಾರ್ಥರಾಗಿರುವ ಮೂಲಕ, ವಿವಾಹ ಸಂಗಾತಿಗಳು ವಿವಾಹ ಭಂಜಕನಾದ (ವೃದ್ಧಾಪ್ಯದ; ಅಸ್ವಸ್ಥತೆಯ; ಸೈತಾನನ) ಆಕ್ರಮಣಗಳ ವಿರುದ್ಧ ತಮ್ಮ ವಿವಾಹ ಬಂಧವನ್ನು ದೃಢಗೊಳಿಸಬಹುದು. [fy-KA ಪು. 167 ಪ್ಯಾರ. 13]
ಮುಂದಿನ ಶಾಸ್ತ್ರವಚನಗಳನ್ನು ಕೆಳಗೆ ಪಟ್ಟಿಮಾಡಲ್ಪಟ್ಟಿರುವ ಹೇಳಿಕೆಗಳಿಗೆ ಸರಿಜೋಡಿಸಿರಿ:
ನೆಹೆ. 3:5; ಕೀರ್ತ. 12:2; 19:7; 72:13; ಲೂಕ 4:16-21
31. ಕಠಿನವಾದ ಕೆಲಸವು ನಮ್ಮ ಗೌರವಕ್ಕೆ ಕುಂದು ತರುತ್ತದೆಂದು ನೆನಸಿ, ಹೆಮ್ಮೆಯಿಂದ ಹಿಂಜರಿಯದೆ, ನಮ್ಮನ್ನು ನಾವೇ ಅದಕ್ಕಾಗಿ ಉಪಯೋಗಿಸಿಕೊಳ್ಳಲು ಸಿದ್ಧರಾಗಿರಬೇಕು. [ವಾರದ ಬೈಬಲ್ ವಾಚನ; w-KA86 3/1 ಪು. 26 ಪ್ಯಾರ. 2, 9ನ್ನು ನೋಡಿ.]
32. ಯೇಸು ಕ್ರಿಸ್ತನ ಭೂಶುಶ್ರೂಷೆಯ ದಿನಗಳಲ್ಲಿ ಯೆಹೂದಿ ಸಭಾಮಂದಿರವು, ಬೋಧನೆ, ಪ್ರಾರ್ಥನೆ, ಶಾಸ್ತ್ರವಚನಗಳ ವಿಸ್ತೃತ ಕಥನ ಮತ್ತು ವಾಚನಕ್ಕಾಗಿರುವ ಸ್ಥಳವಾಗಿತ್ತು. [gt-KA 21]
33. ಯೇಸು ತನ್ನ ರಾಜ್ಯಾಡಳಿತದ ಸಮಯದಲ್ಲಿ, ಅನುಕಂಪವುಳ್ಳ ರಾಜನಾಗಿ, ಎಲ್ಲಾ ಬಾಧಿತರಿಗೆ ಸಹಾಯ ಮಾಡುವ ತನ್ನ ಹೃದಯದಾಸೆಯನ್ನು ಪೂರೈಸುವನು. [gt-KA 25]
34. ನಮಗೆ ದೇವರ ಸ್ನೇಹವು ಬೇಕಾಗಿರುವಲ್ಲಿ, ನಾವು ನಿಷ್ಕಪಟಿಗಳಾಗಿದ್ದು, ಅಂತರ್ಯದಲ್ಲಿ ಪ್ರಾಮಾಣಿಕರಾಗಿರಬೇಕು. [ವಾರದ ಬೈಬಲ್ ವಾಚನ; w-KA91 8/1 ಪು. 29 ಪ್ಯಾರ. 1ನ್ನು ನೋಡಿ.]
35. ದೇವರ ನಿಯಮಗಳಿಗೆ ವಿಧೇಯತೆಯು, ಆತ್ಮಿಕವಾಗಿ ಚೈತನ್ಯದಾಯಕವಾಗಿದೆ ಮತ್ತು ಒಬ್ಬನಿಗೆ ಕ್ಷೇಮವನ್ನುಂಟುಮಾಡುತ್ತದೆ. [ವಾರದ ಬೈಬಲ್ ವಾಚನ; w-KA00 10/1 ಪು. 13 ಪ್ಯಾರ. 4ನ್ನು ನೋಡಿ.]