ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಮೇ 2-8
ಬೈಬಲಿನಲ್ಲಿರುವ ನಿಧಿ | 1 ಸಮುವೇಲ 27-29
“ದಾವೀದನ ಯುದ್ಧ ತಂತ್ರಗಳು”
it-1-E ಪುಟ 41
ಆಕೀಷ
ದಾವೀದ ಎರಡು ಬಾರಿ ಸೌಲನಿಂದ ತಪ್ಪಿಸಿಕೊಂಡು ಓಡಿಹೋಗಿ ಆಶ್ರಯ ಪಡೆದ ಜಾಗದಲ್ಲಿ ಆಕೀಷ ರಾಜನಾಗಿದ್ದ. ದಾವೀದ ಮೊದಲನೇ ಸಲ ಆ ಜಾಗಕ್ಕೆ ಓಡಿಹೋದಾಗ ಅಲ್ಲಿರೋ ಜನ ಅವನನ್ನ ನಂಬಲಿಲ್ಲ. ಅವನನ್ನ ತಮ್ಮ ಶತ್ರು ಅಂತ ಹೇಳಿದ್ರು. ಅದಕ್ಕೆ ದಾವೀದ ಹುಚ್ಚನಂತೆ ನಾಟಕ ಮಾಡಿದ. ಇದನ್ನು ನೋಡಿದ ಆಕೀಷ ಅವನು ತಮಗೇನು ಹಾನಿ ಮಾಡಲ್ಲ ಅಂತ ನೆನಸಿ ಅವನನ್ನು ಹಾಗೇ ಬಿಟ್ಟ. (1ಸಮು 21:10-15; ಕೀರ್ತ 34:ಶೀರ್ಷಿಕೆ; 56:ಶೀರ್ಷಿಕೆ) ಎರಡನೇ ಸಲ ದಾವೀದ ಆ ಜಾಗಕ್ಕೆ ಓಡಿಹೋದಾಗ ಅವನ ಜೊತೆ 600 ಸೈನಿಕರು ಮತ್ತು ಅವರ ಕುಟುಂಬವಿತ್ತು. ಅದಕ್ಕೆ ಆಕೀಷ ಅವರಿಗೆ ಚಿಕ್ಲಗಲ್ಲಿ ಉಳಿಯೋಕೆ ಹೇಳಿದ. ದಾವೀದ ಮತ್ತು ಅವನ ಗಂಡಸರು ಚಿಕ್ಲಗಲ್ಲಿ ಒಂದು ವರ್ಷ, ನಾಲ್ಕು ತಿಂಗಳು ಉಳಿದುಕೊಂಡರು. ಅವರು ಯೂದಾಯ ಪಟ್ಟಣಗಳ ಮೇಲೆ ದಾಳಿ ಮಾಡ್ತಿದ್ದಾರೆ ಅಂತ ಆಕೀಷ ನೆನಸಿದ. ಆದ್ರೆ ದಾವೀದ ಗೆಷೂರ್ಯರ, ಗಿಜ್ರೀಯರ ಮತ್ತು ಅಮಾಲೇಕ್ಯರ ಮೇಲೆ ದಾಳಿ ಮಾಡ್ತಿದ್ದ. (1ಸಮು 27:1-12) ಆಕೀಷನನ್ನ ನಂಬಿಸೋದ್ರಲ್ಲಿ ದಾವೀದ ಯಶಸ್ವಿಯಾದ. ಫಿಲಿಷ್ಟಿಯರು ರಾಜ ಸೌಲನ ಮೇಲೆ ಆಕ್ರಮಣ ಮಾಡೋಕೆ ಯೋಜನೆ ಮಾಡ್ತಿದ್ದಾಗ ಆಕೀಷ ದಾವೀದನನ್ನ ತನ್ನ ಅಂಗರಕ್ಷಕನಾಗಿ ಮಾಡ್ಕೊಂಡ. ಆದ್ರೆ ಫಿಲಿಷ್ಟಿಯ “ಪ್ರಭುಗಳು” ದಾವೀದನನ್ನ ತಮ್ಮ ಜೊತೆ ಕರ್ಕೊಂಡು ಹೋಗಲು ಇಷ್ಟಪಡಲಿಲ್ಲ. ಹಾಗಾಗಿ ದಾವೀದನನ್ನ ಮತ್ತು ಅವನ ಗಂಡಸರನ್ನ ಕೊನೇ ಕ್ಷಣದಲ್ಲಿ ಚಿಕ್ಲಗಿಗೆ ವಾಪಸ್ಸ್ ಕಳುಹಿಸಿದ್ರು. (1ಸಮು 28:2; 29:1-11) ದಾವೀದ ರಾಜನಾದಾಗ ಗತ್ ವಿರುದ್ಧ ಯುದ್ಧ ಮಾಡಿದ. ಆದ್ರೆ ಆಕೀಷ ಕೊಲ್ಲಲ್ಪಡಲಿಲ್ಲ. ಸೊಲೊಮೋನ ಆಳುತ್ತಿದ್ದಾಗಲೂ ಆಕೀಷನಿದ್ದ.—1ಅರ 2:39-41. ಗತ್ ನೋಡಿ.
ಕಾವಲಿನಬುರುವಜು21.03 ಪುಟ 4 ಪ್ಯಾರ 8
ಹುಡುಗರೇ, ನೀವು ಹೇಗೆ ಬೇರೆಯವರ ವಿಶ್ವಾಸ ಗೆಲ್ಲಬಹುದು?
8 ದಾವೀದನಿಗೆ ಇನ್ನೊಂದು ಕಷ್ಟ ಬಂತು. ಅವನು ರಾಜನಾಗಿ ಆಯ್ಕೆ ಆಗಿದ್ರೂ ಯೆಹೂದದ ರಾಜನಾಗಿ ಆಳೋಕೆ ಅವನು ತುಂಬ ವರ್ಷ ಕಾಯಬೇಕಿತ್ತು. (1 ಸಮು. 16:13; 2 ಸಮು. 2:3, 4) ಆ ಸಮಯದಲ್ಲಿ ದಾವೀದ ‘ನಾನೇನೂ ಮಾಡಲ್ಲ’ ಅಂತ ಕೈಕಟ್ಟಿ ಕೂತಿದ್ದನಾ? ಇಲ್ಲ, ತಾಳ್ಮೆಯಿಂದ ಕಾಯ್ತಾ ತನ್ನಿಂದ ಏನು ಮಾಡಕ್ಕಾಗುತ್ತೋ ಅದನ್ನು ಮಾಡಿದ. ಉದಾಹರಣೆಗೆ ಸೌಲನಿಂದ ತಪ್ಪಿಸಿಕೊಂಡು ಫಿಲಿಷ್ಟಿಯರ ದೇಶದಲ್ಲಿ ಅಲೆಮಾರಿ ಆಗಿದ್ದಾಗ ದಾವೀದ ಇಸ್ರಾಯೇಲ್ಯರ ಶತ್ರುಗಳ ವಿರುದ್ಧ ಹೋರಾಡಿದ. ಹೀಗೆ ಹೋರಾಡಿ ಯೆಹೂದದ ಗಡಿ ಪ್ರದೇಶಗಳನ್ನು ಕಾಪಾಡಿದ.—1 ಸಮು. 27:1-12.
it-2-E ಪುಟ 245 ಪ್ಯಾರ 6
ಸುಳ್ಳು
ಸುಳ್ಳನ್ನ ಯೆಹೋವ ದೇವರು ಒಂಚೂರು ಇಷ್ಟಪಡಲ್ಲ ಅಂತ ಬೈಬಲಲ್ಲಿ ಸ್ಪಷ್ಟವಾಗಿ ಹೇಳುತ್ತೆ. ಹಾಗಂತ ತಿಳಿಯೋ ಹಕ್ಕಿಲ್ಲದವರಿಗೆ ನಾವು ಸರಿಯಾದ ಮಾಹಿತಿ ಕೊಡಬೇಕಂತಲ್ಲ. ಅದಕ್ಕೇ ಯೇಸು ನಮಗೆ ಸಲಹೆ ಕೊಟ್ಟಿದ್ದು: “ದೇವರಿಗೆ ಕೊಡೋದನ್ನ ನಾಯಿಗಳಿಗೆ ಹಾಕಬೇಡಿ. ನಿಮ್ಮ ಮುತ್ತುಗಳನ್ನ ಹಂದಿಗಳ ಮುಂದೆ ಚೆಲ್ಲಬೇಡಿ. ಚೆಲ್ಲಿದ್ರೆ ಅವು ಆ ಮುತ್ತುಗಳನ್ನ ತುಳಿದು ನಿಮ್ಮ ಮೇಲೆನೇ ದಾಳಿ ಮಾಡ್ತವೆ.” (ಮತ್ತಾ 7:6) ಸರಿಯಾದ ಉತ್ತರ ಕೊಟ್ಟರೆ ಅದ್ರಿಂದ ಹಾನಿಯಾಗುತ್ತೆ ಅಂತ ಯೇಸುವಿಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಅಗತ್ಯ ಇಲ್ಲದವರ ಪ್ರಶ್ನೆಗಳಿಗೆ ಸರಿಯಾದ ಅಥವಾ ನೇರವಾದ ಉತ್ತರ ಕೊಡಲಿಲ್ಲ.—ಮತ್ತಾ 15:1-6; 21:23-27; ಯೋಹಾ 7:3-10.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು10 1/1 ಪುಟ 20 ಪ್ಯಾರ 5-6
ಬದುಕಿರುವವರಿಗೆ ಸತ್ತವರು ಸಹಾಯ ಮಾಡ್ತಾರಾ?
ಒಬ್ಬ ವ್ಯಕ್ತಿ ಸತ್ತಾಗ “ಮಣ್ಣಿಗೆ ಸೇರ್ತಾನೆ.” ಮತ್ತು “ಅವನ ಯೋಚನೆಗಳೆಲ್ಲ ಅಳಿದು ಹೋಗುತ್ತೆ.” ಅಂತ ಬೈಬಲ್ ಹೇಳುತ್ತೆ. (ಕೀರ್ತ 146:4) ಸತ್ತವರ ಹತ್ತಿರ ಮಾತಾಡೋದು ಯೆಹೋವನಿಗೆ ಅಸಹ್ಯ ಅಂತ ಸೌಲನಿಗೆ ಮತ್ತು ಸಮುವೇಲನಿಗೆ ಗೊತ್ತಿತ್ತು. ಅದಕ್ಕೇ ತುಂಬ ವರ್ಷಗಳ ಹಿಂದೇನೇ ಪ್ರೇತವ್ಯವಹಾರ ಮಾಡುವವರನ್ನ ಆ ದೇಶದಿಂದ ಸೌಲ ಓಡಿಸಿಬಿಟ್ಟಿದ್ದ.—ಯಾಜಕಕಾಂಡ 19:31.
ಹೀಗೆ ಯೋಚಿಸಿ, ಸಮುವೇಲ ನಿಜವಾಗಲೂ ಆತ್ಮ ಆಗಿದ್ರೆ ದೇವರ ನಿಯಮಕ್ಕೆ ವಿರುದ್ಧವಾಗಿ ಹೋಗುತ್ತಿದ್ದನಾ? ಪ್ರೇತ ಮಾಧ್ಯಮ ಬಳಸಿ ಸೌಲನನ್ನ ಭೇಟಿ ಮಾಡುತ್ತಿದ್ದನಾ? ಯೆಹೋವ ದೇವರು, ಸೌಲನ ಹತ್ತಿರ ಮಾತಾಡೋಕೆ ಇಷ್ಟಪಡಲ್ಲ ಅಂತ ಈಗಾಗ್ಲೇ ಹೇಳಿದ್ರು. ಹಾಗಿರುವಾಗ ಸತ್ತ ಸಮುವೇಲನನ್ನು ಬಳಸಿ, ಸೌಲನ ಹತ್ತಿರ ಮಾತಾಡೋಕೆ ಸರ್ವಶಕ್ತ ದೇವರನ್ನು ಒತ್ತಾಯ ಮಾಡೋಕೆ ಪ್ರೇತ ಮಾಧ್ಯಮಕ್ಕೆ ಆಗುತ್ತಾ? ಖಂಡಿತ ಇಲ್ಲ. ಇದ್ರಿಂದ ಸ್ಪಷ್ಟವಾಗಿ ಗೊತ್ತಾಗೋದು ಏನಂದ್ರೆ, ಸೌಲ ಮಾತಾಡಿಸಿದ ವ್ಯಕ್ತಿ ಪ್ರವಾದಿ ಸಮುವೇಲನಾಗಿರಲಿಲ್ಲ. ಬದಲಿಗೆ, ಸತ್ತ ಸಮುವೇಲನ ತರ ನಾಟಕವಾಡಿದ್ದು ಒಬ್ಬ ಕೆಟ್ಟ ದೇವದೂತನಾಗಿದ್ದ.
ಮೇ 9-15
ಬೈಬಲಿನಲ್ಲಿರುವ ನಿಧಿ | 1 ಸಮುವೇಲ 30-31
“ಯೆಹೋವ ದೇವರಿಂದ ಬಲ ಪಡ್ಕೊಳ್ಳಿ”
ಕಾವಲಿನಬುರುಜು06 8/1 ಪುಟ 28 ಪ್ಯಾರ 12
ಯೆಹೋವನಿಗೆ ಭಯಪಟ್ಟು ಸಂತೋಷದಿಂದಿರ್ರಿ!
12 ದಾವೀದನಲ್ಲಿದ್ದ ದೇವಭಯವು ತಪ್ಪುಮಾಡುವುದರಿಂದ ಅವನನ್ನು ತಡೆದು ನಿಲ್ಲಿಸುವುದಕ್ಕಿಂತಲೂ ಹೆಚ್ಚಿನದನ್ನು ಮಾಡಿತು. ಕಷ್ಟಕರ ಸನ್ನಿವೇಶಗಳಲ್ಲಿ ಅವನು ನಿರ್ಣಾಯಕವಾಗಿ ಕ್ರಿಯೆಗೈಯುವಂತೆ ಮತ್ತು ವಿವೇಕದಿಂದ ವರ್ತಿಸುವಂತೆ ಅದು ಅವನನ್ನು ಬಲಪಡಿಸಿತು. ದಾವೀದನೂ ಅವನ ಜನರೂ ಸೌಲನಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಒಂದು ವರ್ಷ ನಾಲ್ಕು ತಿಂಗಳು ಫಿಲಿಷ್ಟಿಯ ಊರಾದ ಚಿಕ್ಲಗ್ನಲ್ಲಿ ಆಶ್ರಯಪಡೆದರು. (1 ಸಮುವೇಲ 27:5-7) ಒಮ್ಮೆ ಪುರುಷರು ಊರಲ್ಲಿ ಇಲ್ಲದಿದ್ದಾಗ, ಅಮಾಲೇಕ್ಯರು ಬಂದು ಸೂರೆಮಾಡಿ, ಆ ಪಟ್ಟಣವನ್ನು ಸುಟ್ಟು ಆ ಪುರುಷರ ಹೆಂಡತಿಯರು, ಮಕ್ಕಳು ಮತ್ತು ಪಶುಗಳನ್ನು ತಮ್ಮೊಂದಿಗೆ ಕೊಂಡೊಯ್ದರು. ದಾವೀದನೂ ಅವನ ಜನರೂ ಹಿಂದಿರುಗಿದಾಗ ಸಂಭವಿಸಿದ್ದನ್ನು ಕಂಡು ಅತ್ತರು. ದಾವೀದನೊಂದಿಗಿದ್ದ ಪುರುಷರ ಶೋಕವು ಕೋಪವಾಗಿ ಪರಿಣಮಿಸಲಾಗಿ ದಾವೀದನನ್ನು ಕಲ್ಲೆಸೆದು ಕೊಲ್ಲಬೇಕೆಂದಿದ್ದರು. ದಾವೀದನು ಇದರಿಂದ ವ್ಯಥೆಗೊಂಡರೂ ಎದೆಗುಂದಲಿಲ್ಲ. (ಜ್ಞಾನೋಕ್ತಿ 24:10) ಅವನಲ್ಲಿದ್ದ ದೇವಭಯವು ಅವನು ಯೆಹೋವನ ಕಡೆಗೆ ತಿರುಗುವಂತೆ ಪ್ರಚೋದಿಸಿತು ಮತ್ತು ಅವನು ‘ಯೆಹೋವನಲ್ಲಿ ತನ್ನನ್ನು ಬಲಪಡಿಸಿಕೊಂಡನು.’ ಆತನ ಸಹಾಯದಿಂದಾಗಿ ದಾವೀದನು ಮತ್ತು ಅವನ ಜನರು ಅಮಾಲೇಕ್ಯರನ್ನು ಸೋಲಿಸಿ ಕಳೆದುಕೊಂಡಿದ್ದ ಸಕಲವನ್ನೂ ಪುನಃ ಕೈವಶಮಾಡಿಕೊಂಡರು.—1 ಸಮುವೇಲ 30:1-20.
ಕಾವಲಿನಬುರುಜು12 4/15 ಪುಟ 30 ಪ್ಯಾರ 14
ರಕ್ಷಣೆ ಹೊಂದುವಂತೆ ಯೆಹೋವನು ನಮ್ಮನ್ನು ಕಾಪಾಡುತ್ತಾನೆ
14 ದಾವೀದನು ತನ್ನ ಜೀವಿತದಲ್ಲಿ ಅನೇಕ ಕಷ್ಟಕರ ಸನ್ನಿವೇಶಗಳನ್ನು ಎದುರಿಸಿದನು. (1 ಸಮು. 30:3-6) ಆ ಸಮಯದಲ್ಲಿ ಅವನಿಗಾದ ಅನಿಸಿಕೆಯನ್ನು ಯೆಹೋವ ದೇವರು ತಿಳಿದಿದ್ದನೆಂದು ದಾವೀದನ ಪ್ರೇರಿತ ಮಾತುಗಳು ತೋರಿಸುತ್ತವೆ. (ಕೀರ್ತನೆ 34:18; 56:8 ಓದಿ.) ನಾವು ‘ಮುರಿದ ಮನಸ್ಸುಳ್ಳವರೂ’ ‘ಕುಗ್ಗಿಹೋದವರೂ’ ಆಗಿರುವಾಗ ನಮಗಾಗುವ ಅನಿಸಿಕೆಗಳನ್ನು ಸಹ ಯೆಹೋವನು ತಿಳಿದಿರುತ್ತಾನೆ. ಇದು ನಮಗೆ ಸಾಂತ್ವನ ನೀಡುತ್ತದೆ. ಆ ರೀತಿಯ ಸಾಂತ್ವನ ಪಡೆದ ದಾವೀದನು ಹೀಗೆ ಹಾಡಿದನು: “ನಿನ್ನ ಕೃಪೆಯಲ್ಲಿ ಸಂತೋಷಿಸಿ ಉಲ್ಲಾಸದಿಂದಿರುವೆನು; ನಾನು ಕುಗ್ಗಿಹೋಗಿರುವದನ್ನು ನೋಡಿ ನನ್ನ ಬಾಧೆಗಳನ್ನು ನೀನು ಲಕ್ಷ್ಯಕ್ಕೆ ತೆಗೆದುಕೊಂಡಿಯಲ್ಲಾ.” (ಕೀರ್ತ. 31:7) ಆದರೆ ಯೆಹೋವನು ನಮ್ಮ ವೇದನೆಯನ್ನು ಗಮನಿಸುವುದಷ್ಟೇ ಅಲ್ಲ, ನಮಗೆ ಸಾಂತ್ವನ, ಉತ್ತೇಜನ ಕೊಟ್ಟು ಬಲಪಡಿಸುತ್ತಾನೆ. ಇದನ್ನು ಆತನು ಮಾಡುವ ಒಂದು ವಿಧ ಕ್ರೈಸ್ತ ಕೂಟಗಳ ಮೂಲಕವೇ
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು05 3/15 ಪುಟ 24 ಪ್ಯಾರ 9
ಒಂದನೇ ಸಮುವೇಲ ಪುಸ್ತಕದ ಮುಖ್ಯಾಂಶಗಳು
30:23, 24. ಅರಣ್ಯಕಾಂಡ 31:27 ರ ಮೇಲಾಧಾರಿತವಾದ ಈ ನಿರ್ಣಯವು, ಸಭೆಯಲ್ಲಿ ಬೆಂಬಲಾತ್ಮಕ ಪಾತ್ರಗಳಲ್ಲಿ ಕಾರ್ಯನಿರ್ವಹಿಸುವವರನ್ನು ಯೆಹೋವನು ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬುದನ್ನು ತೋರಿಸುತ್ತದೆ. ಆದುದರಿಂದ, ನಾವೇನೇ ಮಾಡಲಿ ಅದನ್ನು ‘ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ’ ಮಾಡೋಣ.—ಕೊಲೊಸ್ಸೆ 3:23.
ಮೇ 16-22
ಬೈಬಲಿನಲ್ಲಿರುವ ನಿಧಿ | 2 ಸಮುವೇಲ 1-3
“‘ಬಿಲ್ಲಿನ ಗೀತೆ’ ನಮಗೆ ಏನು ಕಲಿಸುತ್ತೆ?”
ಕಾವಲಿನಬುರುಜು00 6/15 ಪುಟ 13 ಪ್ಯಾರ 9
ನಿಮ್ಮ ಮೇಲೆ ಅಧಿಕಾರವಿರುವವರಿಗೆ ಗೌರವವನ್ನು ತೋರಿಸಿರಿ
9 ಸೌಲನು ದಾವೀದನನ್ನು ದುರುಪಚರಿಸುತ್ತಿದ್ದಾಗ ಅವನು ದುಃಖಿತನಾದನೋ? ಹೌದು! “ಬಲಾತ್ಕಾರಿಗಳು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ” ಎಂದು ದಾವೀದನು ಯೆಹೋವನಿಗೆ ಮೊರೆಯಿಟ್ಟನು. (ಕೀರ್ತನೆ 54:3) ತನ್ನ ಹೃದಯವನ್ನು ಯೆಹೋವನ ಮುಂದೆ ತೆರೆದಿಡುತ್ತಾ ಹೇಳಿದ್ದು: “ನನ್ನ ದೇವರೇ, ಶತ್ರುಗಳ ಕೈಯಿಂದ ನನ್ನನ್ನು ಬಿಡಿಸು; . . . ಬಲಿಷ್ಠರು ನನಗೆ ವಿರೋಧವಾಗಿ ಗುಂಪುಕೂಡಿದ್ದಾರೆ. ಯೆಹೋವನೇ, ನಾನು ನಿರ್ದೋಷಿಯೂ ನಿರಪರಾಧಿಯೂ ಅಲ್ಲವೇ! ನಿಷ್ಕಾರಣವಾಗಿ ನನ್ನ ಮೇಲೆ ಬೀಳಲು ಓಡಿಬಂದು ನಿಂತಿದ್ದಾರೆ; ಎದ್ದು ಬಂದು ಪರಾಂಬರಿಸಿ ನನಗೆ ಸಹಾಯಮಾಡು.” (ಕೀರ್ತನೆ 59:1-4) ಕೆಲವೊಮ್ಮೆ ಅಧಿಕಾರದಲ್ಲಿರುವ ಒಬ್ಬ ವ್ಯಕ್ತಿಗೆ ನೀವು ಏನೂ ಕೆಟ್ಟದ್ದನ್ನು ಮಾಡದೇ ಇದ್ದರೂ, ಅವರು ನಿಮಗೆ ತೊಂದರೆಗಳನ್ನು ಕೊಡುತ್ತಲೇ ಇರುವಾಗ ನಿಮಗೂ ಹಾಗನಿಸಿದೆಯೇ? ಸೌಲನು ಎಷ್ಟೇ ಕಷ್ಟಗಳನ್ನು ಕೊಟ್ಟರೂ, ದಾವೀದನು ಅವನಿಗೆ ಅಗೌರವವನ್ನು ತೋರಿಸಲಿಲ್ಲ. ಅಷ್ಟೇ ಏಕೆ, ಸೌಲನು ಸತ್ತಾಗಲು ಸಹ ಸಂತೋಷಿಸುವುದಕ್ಕೆ ಬದಲಾಗಿ ದಾವೀದನು ಒಂದು ಶೋಕಗೀತೆಯನ್ನು ರಚಿಸಿದನು: “ಸೌಲಯೋನಾತಾನರು ಪ್ರಿಯರೂ ಮನೋಹರರೂ ಆಗಿದ್ದರು. ಅವರು ಜೀವಿಸುವಾಗಲೂ . . . ಅವರು ಹದ್ದುಗಳಿಗಿಂತಲೂ ವೇಗವುಳ್ಳವರು; ಸಿಂಹಗಳಿಗಿಂತಲೂ ಬಲವುಳ್ಳವರು. ಇಸ್ರಾಯೇಲ್ಸ್ತ್ರೀಯರೇ, ಸೌಲನಿಗಾಗಿ ಗೋಳಾಡಿರಿ.” (2 ಸಮುವೇಲ 1:23, 24) ದಾವೀದನು ವಿನಾಕಾರಣ ಕಷ್ಟವನ್ನನುಭವಿಸುವುದಕ್ಕೆ ಸೌಲನು ಕಾರಣನಾಗಿದ್ದರೂ ಯೆಹೋವನ ಅಭಿಷಿಕ್ತನಿಗೆ ಅವನು ನಿಜವಾದ ಗೌರವವನ್ನು ತೋರಿಸಿದನು. ಅಧಿಕಾರದಲ್ಲಿರುವವರಿಗೆ ಗೌರವವನ್ನು ತೋರಿಸಿದ ದಾವೀದನ ಮಾದರಿಯು ಎಂಥ ಒಂದು ಅತ್ಯುತ್ತಮ ಮಾದರಿಯಾಗಿದೆ!
ಕಾವಲಿನಬುರುಜು12 4/15 ಪುಟ 10 ಪ್ಯಾರ 8
ನಂಬಿಕೆದ್ರೋಹ ಕಡೇ ದಿವಸಗಳ ಸೂಚನೆ
8 ಅನೇಕ ನಿಷ್ಠಾವಂತ ವ್ಯಕ್ತಿಗಳ ಮಾದರಿಗಳೂ ಬೈಬಲಿನಲ್ಲಿವೆ. ಅವುಗಳಲ್ಲಿ ಎರಡನ್ನು ಈಗ ನೋಡೋಣ. ಅವರಿಂದ ನಾವು ಯಾವ ಪಾಠ ಕಲಿಯಬಲ್ಲೆವೆಂದೂ ಗಮನಿಸೋಣ. ಮೊದಲು ನಾವು ನೋಡಲಿರುವುದು ದಾವೀದನಿಗೆ ನಿಷ್ಠೆ ತೋರಿಸಿದ ಯೋನಾತಾನನ ಕುರಿತು. ಇವನು ರಾಜ ಸೌಲನ ಹಿರೀ ಮಗ. ತಂದೆಯ ನಂತರ ಇಸ್ರಾಯೇಲಿನ ರಾಜನಾಗಲಿದ್ದವನು. ಆದರೆ ಯೆಹೋವನು ಅವನಿಗೆ ಬದಲಾಗಿ ದಾವೀದನನ್ನು ಇಸ್ರಾಯೇಲಿನ ಮುಂದಿನ ರಾಜನಾಗಿ ಆರಿಸಿಕೊಂಡನು. ಆಗ ಯೋನಾತಾನ ಹೊಟ್ಟೆಕಿಚ್ಚು ಪಟ್ಟು ದಾವೀದನನ್ನು ತನ್ನ ಎದುರಾಳಿಯಂತೆ ವೀಕ್ಷಿಸಲಿಲ್ಲ. ಯೆಹೋವನ ನಿರ್ಣಯವನ್ನು ಮನಃಪೂರ್ವಕವಾಗಿ ಗೌರವಿಸಿದನು. ಅವನ “ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು.” ದಾವೀದನಿಗೆ ನಿಷ್ಠನಾಗಿ ಉಳಿಯುವೆನೆಂದು ಯೋನಾತಾನ ಮಾತುಕೊಟ್ಟನು. ಮಾತ್ರವಲ್ಲ ತನ್ನ ಯುದ್ಧವಸ್ತ್ರಗಳನ್ನು, ಕತ್ತಿ, ಬಿಲ್ಲು, ನಡುಕಟ್ಟನ್ನು ದಾವೀದನಿಗೆ ಕೊಟ್ಟು ರಾಜಮರ್ಯಾದೆ ತೋರಿಸಿದನು. (1 ಸಮು. 18:1-4) ದಾವೀದನನ್ನು ‘ಬಲಪಡಿಸಲು’ ಯೋನಾತಾನನು ತನ್ನಿಂದ ಆದುದ್ದೆಲ್ಲವನ್ನೂ ಮಾಡಿದನು. ಒಮ್ಮೆ ತನ್ನ ಜೀವವನ್ನೇ ಒತ್ತೆಯಿಟ್ಟು ತಂದೆಯ ಮುಂದೆ ದಾವೀದನ ಪರವಹಿಸಿ ಮಾತಾಡಿದನು. ಪ್ರಾಣಸ್ನೇಹಿತನಿಗೆ ನಿಷ್ಠೆಯಿಂದಿದ್ದ ಯೋನಾತಾನನು, “ನೀನು ಇಸ್ರಾಯೇಲ್ಯರ ಅರಸನಾಗುವಿ; ನಾನು ನಿನಗೆ ಎರಡನೆಯವನಾಗಿರುವೆನು” ಎಂದು ಹೇಳಿದನು. (1 ಸಮು. 20:30-34; 23:16, 17) ಯೋನಾತಾನ ತೀರಿಕೊಂಡಾಗ ದಾವೀದನು ಎಷ್ಟು ದುಃಖಪಟ್ಟನೆಂದರೆ ತನ್ನ ಶೋಕಗೀತೆಯಲ್ಲಿ ಆ ನೋವು, ಪ್ರೀತಿಯನ್ನು ವ್ಯಕ್ತಪಡಿಸಿದನು.—2 ಸಮು. 1:17, 26.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 369 ಪ್ಯಾರ 2
ಸಹೋದರ
ಬೈಬಲಲ್ಲಿ “ಸಹೋದರ” ಅನ್ನೋ ಪದವನ್ನು ಒಂದೇ ತರದ ಇಷ್ಟ ಮತ್ತು ಗುರಿಗಳನ್ನು ಇಡುವವರಿಗೂ ಬಳಸಲಾಗಿದೆ. “ನೋಡಿ! ಸಹೋದರರು ಒಂದಾಗಿ ಒಗ್ಗಟ್ಟಿಂದ ಇರೋದು ಎಷ್ಟೋ ಒಳ್ಳೇದು, ಎಷ್ಟೋ ಮನೋಹರ!” ಅಂತ ದಾವೀದ ಬರೆಯುವಾಗ ಅವನು ರಕ್ತ ಸಂಬಂಧಿಗಳಾದ ಸಹೋದರರ ಬಗ್ಗೆ ಹೇಳ್ತಾ ಇರಲಿಲ್ಲ. ಇದರ ಅರ್ಥ, ರಕ್ತ ಸಂಬಂಧಿಗಳು ಅಲ್ಲದಿದ್ದರೂ ಒಂದಾಗಿ ಒಗ್ಗಟ್ಟಾಗಿ ಇರೋಕಾಗುತ್ತೆ. (ಕೀರ್ತ 133:1) ಈ ಕಾರಣದಿಂದಾನೇ ದಾವೀದ ಯೋನಾತಾನನನ್ನು ತನ್ನ ಸಹೋದರ ಅಂತ ಕರೆದ. ಅವರಿಬ್ಬರೂ ಸಹೋದರರಾಗಿದ್ದು ಅವರ ಅಪ್ಪ ಅಮ್ಮ ಒಂದೇ ಆಗಿದ್ದಾರೆ ಅನ್ನೋ ಕಾರಣದಿಂದಲ್ಲ. ಬದಲಿಗೆ ಅವರಿಬ್ಬರಿಗೆ ಇದ್ದ ಒಂದೇ ತರದ ಇಷ್ಟಗಳಿಂದ ಮತ್ತು ಅವರಿಬ್ಬರ ಮಧ್ಯೆ ಇದ್ದ ಪ್ರೀತಿಯಿಂದ.—2ಸಮು 1:26.
ಮೇ 23-29
ಬೈಬಲಿನಲ್ಲಿರುವ ನಿಧಿ | 2 ಸಮುವೇಲ 4-6
“ಯೆಹೋವನನ್ನು ನೋಯಿಸದೆ ಇರೋಕೆ ದೇವ ಭಯ ಬೆಳೆಸಿ”
ಕಾವಲಿನಬುರುಜು05 5/15 ಪುಟ 17ಪ್ಯಾರ 7
ಎರಡನೇ ಸಮುವೇಲ ಪುಸ್ತಕದ ಮುಖ್ಯಾಂಶಗಳು
6:1-7. ದಾವೀದನು ಒಂದು ಒಳ್ಳೇ ಉದ್ದೇಶದಿಂದಲೇ ಮಂಜೂಷವನ್ನು ಸಾಗಿಸಲು ಪ್ರಯತ್ನಿಸಿದ್ದನಾದರೂ ಅದನ್ನು ಬಂಡಿಯ ಮೇಲೆ ಸಾಗಿಸಿದ್ದು ದೇವರ ಆಜ್ಞೆಗೆ ವಿರುದ್ಧವಾಗಿತ್ತು ಮತ್ತು ಆ ಕಾರಣ ಅವನ ಪ್ರಯತ್ನವು ವಿಫಲಗೊಂಡಿತು. (ವಿಮೋಚನಕಾಂಡ 25:13, 14; ಅರಣ್ಯಕಾಂಡ 4:15, 19; 7:7-9) ಉಜ್ಜನು ಕೈಚಾಚಿ ಮಂಜೂಷವನ್ನು ಹಿಡಿದ ಘಟನೆಯು ಸಹ, ಸದುದ್ದೇಶಗಳು ದೇವರ ಆವಶ್ಯಕತೆಗಳನ್ನು ಬದಲಾಯಿಸಲಾರವು ಎಂಬುದನ್ನು ಸೂಚಿಸುತ್ತದೆ.
ಕಾವಲಿನಬುರುಜು05 2/1 ಪುಟ 27 ಪ್ಯಾರ 20
ಯೆಹೋವನು ಯಾವಾಗಲೂ ಸರಿಯಾದುದನ್ನೇ ಮಾಡುತ್ತಾನೆ
20 ಉಜ್ಜನು ಧರ್ಮಶಾಸ್ತ್ರವನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಂಡಿದ್ದಿರಬೇಕು ಎಂಬುದನ್ನು ಮನಸ್ಸಿನಲ್ಲಿಡಿ. ಮಂಜೂಷವು ಯೆಹೋವನ ಸಾನ್ನಿಧ್ಯವನ್ನು ಪ್ರತಿನಿಧಿಸುತ್ತಿತ್ತು. ಅನಧಿಕೃತ ವ್ಯಕ್ತಿಗಳು ಅದನ್ನು ಮುಟ್ಟಬಾರದು ಎಂದು ಧರ್ಮಶಾಸ್ತ್ರವು ಆಜ್ಞೆಯನ್ನು ವಿಧಿಸಿತ್ತು; ಈ ಆಜ್ಞೆಯನ್ನು ಉಲ್ಲಂಘಿಸುವವರಿಗೆ ಮರಣದಂಡನೆಯು ವಿಧಿಸಲ್ಪಡುವುದು ಎಂದು ಸ್ಪಷ್ಟವಾಗಿ ಎಚ್ಚರಿಕೆ ನೀಡಲಾಗಿತ್ತು. (ಅರಣ್ಯಕಾಂಡ 4:18-20; 7:89) ಆದುದರಿಂದ, ಆ ಪವಿತ್ರ ಪೆಟ್ಟಿಗೆಯನ್ನು ರವಾನಿಸುವ ಕೆಲಸವನ್ನು ಹಗುರವಾಗಿ ಪರಿಗಣಿಸಬಾರದಿತ್ತು. ಉಜ್ಜನು (ಒಬ್ಬ ಯಾಜಕನಾಗಿರಲಿಲ್ಲವಾದರೂ) ಲೇವಿಯರಲ್ಲಿ ಒಬ್ಬನಾಗಿದ್ದನು ಎಂಬುದು ಸುವ್ಯಕ್ತ, ಆದುದರಿಂದ ಅವನು ಧರ್ಮಶಾಸ್ತ್ರದೊಂದಿಗೆ ಪರಿಚಿತನಾಗಿದ್ದಿರಬೇಕು. ಅಷ್ಟುಮಾತ್ರವಲ್ಲದೆ, ವರ್ಷಗಳ ಮುಂಚೆ ಸುರಕ್ಷಿತತೆಗಾಗಿ ಮಂಜೂಷವನ್ನು ಅವನ ತಂದೆಯ ಮನೆಗೆ ಸಾಗಿಸಲಾಗಿತ್ತು. (1 ಸಮುವೇಲ 6:20-7:1) ಅದು ಸುಮಾರು 70 ವರ್ಷಗಳ ವರೆಗೆ ಅಂದರೆ ದಾವೀದನು ಅದನ್ನು ಸ್ಥಳಾಂತರಿಸುವ ಆಯ್ಕೆಯನ್ನು ಮಾಡುವ ವರೆಗೆ ಅಲ್ಲಿಯೇ ಇತ್ತು. ಆದುದರಿಂದ, ಮಂಜೂಷದ ಕುರಿತಾದ ನಿಯಮಗಳು ಉಜ್ಜನಿಗೆ ಬಾಲ್ಯದಿಂದಲೂ ಗೊತ್ತಿರುವುದು ಸಂಭವನೀಯ.
ಕಾವಲಿನಬುರುಜು05 2/1 ಪುಟ 27 ಪ್ಯಾರ 21
ಯೆಹೋವನು ಯಾವಾಗಲೂ ಸರಿಯಾದುದನ್ನೇ ಮಾಡುತ್ತಾನೆ
21 ಈ ಮುಂಚೆ ತಿಳಿಸಲ್ಪಟ್ಟಂತೆ, ಯೆಹೋವನು ಹೃದಯಗಳನ್ನು ಓದಬಲ್ಲನು. ಆತನ ವಾಕ್ಯವು ಉಜ್ಜನ ಕೃತ್ಯವನ್ನು ‘ತಪ್ಪು’ ಎಂದು ಕರೆಯುತ್ತದಾದ್ದರಿಂದ, ಆ ವೃತ್ತಾಂತದಲ್ಲಿ ನಿರ್ದಿಷ್ಟವಾಗಿ ಬಯಲುಪಡಿಸಲ್ಪಟ್ಟಿರದಂಥ ಯಾವುದೋ ಸ್ವಾರ್ಥಪರ ಹೇತುವನ್ನು ಯೆಹೋವನು ನೋಡಿದ್ದಿರಬೇಕು. ಉಜ್ಜನು ದುರಹಂಕಾರವಿದ್ದ ವ್ಯಕ್ತಿಯಾಗಿದ್ದನೋ, ಹದ್ದುಮೀರಿ ನಡೆಯುವ ಪ್ರವೃತ್ತಿಯವನಾಗಿದ್ದನೋ? (ಜ್ಞಾನೋಕ್ತಿ 11:2) ತನ್ನ ಕುಟುಂಬವು ಖಾಸಗಿಯಾಗಿ ಸಂರಕ್ಷಿಸುತ್ತಿದ್ದ ಮಂಜೂಷವನ್ನು ಸಾರ್ವಜನಿಕವಾಗಿ ಬಂಡಿಯಲ್ಲಿ ಕೊಂಡೊಯ್ಯುವುದು ಅವನಲ್ಲಿ ಸ್ವಪ್ರಾಮುಖ್ಯತೆಯ ಮನೋಭಾವವನ್ನು ಕೆರಳಿಸಿತೋ? (ಜ್ಞಾನೋಕ್ತಿ 8:13) ತನ್ನ ಸಾನ್ನಿಧ್ಯವನ್ನು ಸಂಕೇತಿಸುವಂಥ ಪವಿತ್ರ ಪೆಟ್ಟಿಗೆಯು ಬೀಳದಂತೆ ತಡೆಹಿಡಿಯಲು ಯೆಹೋವನ ಕೈ ಮೋಟುಗೈಯಾಗಿತ್ತೆಂದು ನೆನಸುವಷ್ಟರ ಮಟ್ಟಿಗೆ ಉಜ್ಜನು ನಂಬಿಕೆಯ ಕೊರತೆಯುಳ್ಳವನಾಗಿದ್ದನೋ? ವಿಷಯವು ಏನೇ ಆಗಿರಲಿ, ಯೆಹೋವನು ಸರಿಯಾದುದನ್ನೇ ಮಾಡಿದನು ಎಂಬ ಖಾತ್ರಿ ನಮಗಿರಸಾಧ್ಯವಿದೆ. ಆತನು ಉಜ್ಜನ ಮನಸ್ಸಿನಲ್ಲಿದ್ದ ಯಾವುದೋ ವಿಚಾರವನ್ನು ಕಂಡಿದ್ದಿರಬಹುದು ಮತ್ತು ಇದು ಆ ಕೂಡಲೆ ನ್ಯಾಯತೀರ್ಪನ್ನು ವಿಧಿಸುವಂತೆ ಆತನನ್ನು ಪ್ರಚೋದಿಸಿದ್ದಿರಬಹುದು.—ಜ್ಞಾನೋಕ್ತಿ 21:2.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು96 4/1 ಪುಟ 28 ಪ್ಯಾರ 5
ನಿಮ್ಮ ಚಿಂತಾಭಾರವನ್ನು ಯಾವಾಗಲೂ ಯೆಹೋವನ ಮೇಲೆ ಹಾಕಿರಿ
ಇದಕ್ಕಾಗಿ ಅರಸನೋಪಾದಿ ದಾವೀದನು ಸ್ವಲ್ಪ ಜವಾಬ್ದಾರಿಯನ್ನು ವಹಿಸಬೇಕಿತ್ತು. ಯೆಹೋವನೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಹೊಂದಿರುವವರು ಸಹ, ಪರೀಕ್ಷಾತ್ಮಕವಾದ ಸನ್ನಿವೇಶಗಳಿಗೆ ಸಾಂದರ್ಭಿಕವಾಗಿ ಕೆಟ್ಟದಾಗಿ ಪ್ರತಿವರ್ತಿಸಸಾಧ್ಯವಿದೆ ಎಂಬುದನ್ನು ಅವನ ಪ್ರತಿವರ್ತನೆಯು ತೋರಿಸುತ್ತದೆ. ಮೊದಲು ದಾವೀದನು ಕೋಪಗೊಂಡನು. ತದನಂತರ ಅವನು ಭಯಗೊಂಡನು. (2 ಸಮುವೇಲ 6:8, 9) ಯೆಹೋವನೊಂದಿಗೆ ಅವನಿಗಿದ್ದ ಭರವಸಾತ್ಮಕವಾದ ಸಂಬಂಧವು ಗಂಭೀರವಾಗಿ ಪರೀಕ್ಷಿಸಲ್ಪಟ್ಟಿತು. ಅವನು ಯೆಹೋವನ ಆಜ್ಞೆಗಳನ್ನು ಅನುಸರಿಸದಿದ್ದ, ಅವನು ಯೆಹೋವನ ಮೇಲೆ ತನ್ನ ಚಿಂತಾಭಾರವನ್ನು ಹಾಕಲು ಸೋತುಹೋದಂತೆ ಭಾಸವಾದ ಒಂದು ಸಂದರ್ಭವು ಇಲ್ಲಿತ್ತು. ಕೆಲವೊಮ್ಮೆ ನಮ್ಮ ವಿಷಯದಲ್ಲಿಯೂ ಸನ್ನಿವೇಶವು ಅದೇ ಆಗಿರಬಹುದೊ? ನಾವು ಯೆಹೋವನ ಉಪದೇಶಗಳನ್ನು ಅಲಕ್ಷ್ಯ ಮಾಡಿದುದರಿಂದಾಗಿ ಫಲಿಸುವ ಸಮಸ್ಯೆಗಳಿಗಾಗಿ ನಾವು ಎಂದಾದರೂ ಯೆಹೋವನನ್ನು ದೂಷಿಸುತ್ತೇವೊ?—ಜ್ಞಾನೋಕ್ತಿ 19:3.
ಮೇ 30–ಜೂನ್ 5
ಬೈಬಲಿನಲ್ಲಿರುವ ನಿಧಿ | 2 ಸಮುವೇಲ 7-8
“ದಾವೀದನ ಜೊತೆ ಯೆಹೋವನು ಮಾಡಿದ ಒಪ್ಪಂದ”
ಕಾವಲಿನಬುರುಜು10 4/1 ಪುಟ 20 ಪ್ಯಾರ 3
‘ನಿನ್ನ ಅರಸುತನ ಸದಾಕಾಲ ಸ್ಥಿರವಾಗಿರುವುದು’
ದಾವೀದನ ಈ ಮನದಾಳದ ಆಶೆಯು ಯೆಹೋವನ ಮನಸ್ಪರ್ಶಿಸಿತು. ಆತನು ದಾವೀದನ ಭಕ್ತಿಯನ್ನು ಮೆಚ್ಚಿದನು ಮತ್ತು ತನ್ನ ಉದ್ದೇಶಕ್ಕೆ ಹೊಂದಿಕೆಯಲ್ಲಿ ಅವನ ರಾಜವಂಶದಲ್ಲಿ ಶಾಶ್ವತವಾಗಿ ಆಳುವವನು ಬರುವನೆಂದು ಅವನೊಂದಿಗೆ ಒಡಂಬಡಿಕೆ ಮಾಡಿದನು. “ನಿನ್ನ ಮನೆಯೂ ಅರಸುತನವೂ ಸದಾಕಾಲ ಸ್ಥಿರವಾಗಿರುವವು; ನಿನ್ನ ಸಿಂಹಾಸನವು ಶಾಶ್ವತವಾಗಿರುವದು” ಎಂದು ಯೆಹೋವನು ಹೃತ್ಪೂರ್ವಕವಾಗಿ ಮಾಡಿದ ವಾಗ್ದಾನವನ್ನು ನಾತಾನನು ದಾವೀದನಿಗೆ ತಿಳಿಸಿದನು. (ವಚನ 16) ಈ ಒಡಂಬಡಿಕೆಯ ಶಾಶ್ವತ ಬಾಧ್ಯಸ್ಥನು ಅಂದರೆ ನಿತ್ಯನಿರಂತರಕ್ಕೂ ಆಳುವಾತನು ಯಾರು?—ಕೀರ್ತನೆ 89:20, 29, 34-36.
ಕಾವಲಿನಬುರುಜು10 4/1 ಪುಟ 20 ಪ್ಯಾರ 4
‘ನಿನ್ನ ಅರಸುತನ ಸದಾಕಾಲ ಸ್ಥಿರವಾಗಿರುವುದು’
ನಜರೇತಿನ ಯೇಸು ದಾವೀದನ ವಂಶಜ. ಯೇಸುವಿನ ಜನನದ ಕುರಿತು ಪ್ರಕಟಿಸುವಾಗ ಒಬ್ಬ ದೇವದೂತನು ಹೇಳಿದ್ದು: “ಯೆಹೋವ ದೇವರು ಅವನ ತಂದೆಯಾದ ದಾವೀದನ ಸಿಂಹಾಸನವನ್ನು ಅವನಿಗೆ ಕೊಡುವನು ಮತ್ತು ಅವನು ಯಾಕೋಬನ ಮನೆತನದ ಮೇಲೆ ಸದಾಕಾಲಕ್ಕೂ ರಾಜನಾಗಿ ಆಳುವನು, ಅವನ ರಾಜ್ಯಕ್ಕೆ ಅಂತ್ಯವೇ ಇರದು.” (ಲೂಕ 1:32, 33) ಹೌದು, ದೇವರು ದಾವೀದನೊಂದಿಗೆ ಮಾಡಿದ ಒಡಂಬಡಿಕೆಯು ಯೇಸು ಕ್ರಿಸ್ತನಲ್ಲಿ ನೆರವೇರಿತು. ಆದುದರಿಂದ ಆತನು ಆಳ್ವಿಕೆ ನಡೆಸುವುದು ಮಾನವರ ಆಯ್ಕೆಯಿಂದಾಗಿ ಅಲ್ಲ ಬದಲಾಗಿ ನಿತ್ಯಕ್ಕೂ ಆಳುವ ಹಕ್ಕನ್ನು ಕೊಡುವೆನೆಂದು ದೇವರು ವಾಗ್ದಾನ ಮಾಡಿದ್ದರಿಂದಲೇ. ನೆನಪಿಡಿ, ದೇವರ ವಾಗ್ದಾನಗಳು ಯಾವಾಗಲೂ ಸತ್ಯವಾಗುತ್ತವೆ.—ಯೆಶಾಯ 55:10, 11.
ಕಾವಲಿನಬುರುಜು14 10/15 ಪುಟ 10 ಪ್ಯಾರ 14
ದೇವರ ರಾಜ್ಯದಲ್ಲಿ ಬಲವಾದ ನಂಬಿಕೆಯನ್ನಿಡಿ
14 ಪ್ರಾಚೀನ ಇಸ್ರಾಯೇಲಿನ ಅರಸನಾದ ದಾವೀದನಿಗೆ ಯೆಹೋವನು ಒಂದು ವಾಗ್ದಾನ ಮಾಡಿದನು. ಈ ವಾಗ್ದಾನವೇ ದಾವೀದನೊಂದಿಗಿನ ಒಡಂಬಡಿಕೆ. (2 ಸಮುವೇಲ 7:12, 16 ಓದಿ.) ಮೆಸ್ಸೀಯನು ದಾವೀದನ ವಂಶದಲ್ಲಿ ಬರುವನೆಂದು ಯೆಹೋವನು ಆ ವಾಗ್ದಾನದಲ್ಲಿ ಹೇಳಿದನು. (ಲೂಕ 1:30-33) ಹೀಗೆ ಮೆಸ್ಸೀಯನು ಯಾವ ಕುಟುಂಬದಲ್ಲಿ ಬರಲಿದ್ದಾನೆಂಬ ನಿರ್ದಿಷ್ಟ ಮಾಹಿತಿಯನ್ನು ಯೆಹೋವನು ಕೊಟ್ಟನು. ದಾವೀದನ ವಂಶದಿಂದ ಬರುವ ಈತನೇ ಮೆಸ್ಸೀಯ ರಾಜ್ಯದ ರಾಜನಾಗಲು “ಬಾಧ್ಯನು” ಅಂದರೆ ಹಕ್ಕುದಾರನು ಎಂದೂ ಯೆಹೋವನು ಹೇಳಿದನು. (ಯೆಹೆ. 21:25-27) ದಾವೀದನ ರಾಜ್ಯಾಡಳಿತ ಸದಾಕಾಲಕ್ಕೂ ಇರಲಿತ್ತು. ಏಕೆಂದರೆ ದಾವೀದನ ವಂಶದವನಾದ ಯೇಸು ‘ಶಾಶ್ವತವಾಗಿ ಇರುವನು, ಮತ್ತು ಅವನ ಸಿಂಹಾಸನವು ಸೂರ್ಯನಂತೆ ನಿತ್ಯಕ್ಕೂ ಸ್ಥಿರವಾಗಿರುವುದು.’ (ಕೀರ್ತ. 89:34-37) ಹಾಗಾಗಿ ಮೆಸ್ಸೀಯ ರಾಜ್ಯವು ಎಂದಿಗೂ ಭ್ರಷ್ಟಗೊಳ್ಳದು ಮತ್ತು ಅದರ ಕೆಳಗಿರುವ ಎಲ್ಲರಿಗೆ ಸಿಗುವ ಆಶೀರ್ವಾದಗಳಿಗೆ ಕೊನೆಯೇ ಇಲ್ಲ ಎನ್ನುವುದು ನಿಶ್ಚಯ!
ಬೈಬಲಿನಲ್ಲಿರುವ ರತ್ನಗಳು
it-2-E ಪುಟ 206 ಪ್ಯಾರ 2
ಕೊನೆಯ ದಿನಗಳು
ಬಿಳಾಮನ ಪ್ರವಾದನೆ. ಇಸ್ರಾಯೇಲ್ಯರು ದೇವರು ಮಾತು ಕೊಟ್ಟ ದೇಶಕ್ಕೆ ಹೋಗೋ ಮುಂಚೆ, ಬಿಳಾಮ ಮೋವಾಬಿನ ರಾಜ ಬಾರಾಕನ ಬಗ್ಗೆ ಈ ಪ್ರವಾದನೆ ಹೇಳಿದ: “ಈ ಜನ ನಿನ್ನ ಜನ್ರಿಗೆ ಮುಂದೇನು ಮಾಡ್ತಾರೆ ಅಂತ ಹೇಳಿ ಹೋಗ್ತೀನಿ . . . ಯಾಕೋಬನ ವಂಶದಿಂದ ಒಂದು ನಕ್ಷತ್ರ ಹುಟ್ಟುತ್ತೆ, ಇಸ್ರಾಯೇಲನ ವಂಶದಿಂದ ಒಂದು ರಾಜದಂಡ ಬರುತ್ತೆ. ಅವನು ಮೋವಾಬಿನ ಹಣೆನ ಒಡೆದುಬಿಡ್ತಾನೆ ಯುದ್ಧದ ಹುಚ್ಚಿರೋ ಎಲ್ಲ ಜನ್ರ ತಲೆಬುರುಡೆಗಳನ್ನ ಚೂರುಚೂರು ಮಾಡ್ತಾನೆ.” (ಅರ 24:14-17) ಈ ಪ್ರವಾದನೆಯ ಮೊದಲನೇ ನೆರವೇರಿಕೆಯಲ್ಲಿ, ಅಲ್ಲಿ ತಿಳಿಸಲಾದ ನಕ್ಷತ್ರ ದಾವೀದನಾಗಿದ್ದ. ಅವನು ಮೋವಾಬ್ಯರನ್ನು ಸೋಲಿಸಿ ಅವರನ್ನ ತನ್ನ ಸೇವಕರನ್ನಾಗಿ ಮಾಡ್ಕೊಂಡ.—2ಸಮು 8:2.
ಜೂನ್ 6-12
ಬೈಬಲಿನಲ್ಲಿರುವ ನಿಧಿ | 2 ಸಮುವೇಲ 9-10
“ದಾವೀದ ಶಾಶ್ವತ ಪ್ರೀತಿ ತೋರಿಸಿದ”
ಕಾವಲಿನಬುರುಜು06 7/1 ಪುಟ 10 ಪ್ಯಾರ 6
ಸಂತೋಷ ನಿಮಗೆ ಖಂಡಿತ ಸಿಗಬಲ್ಲದು!
“ದಿಕ್ಕಿಲ್ಲದವನನ್ನು ಪರಾಂಬರಿಸುವವನು ಧನ್ಯನು” ಅಥವಾ ಸಂತೋಷಿತನು ಎಂದು ದಾವೀದನು ಬರೆದನು. ಅವನು ಮುಂದುವರಿಸಿದ್ದು: “ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು. ಯೆಹೋವನು ಅವನ ಪ್ರಾಣವನ್ನು ಕಾಪಾಡಿ ಉಳಿಸುವನು; ಅವನು ದೇಶದಲ್ಲಿ ಧನ್ಯನೆನಿಸಿಕೊಳ್ಳುವನು” ಅಥವಾ ಸಂತೋಷಿತನಾಗಿರುವನು. (ಕೀರ್ತನೆ 41:1, 2) ದಾವೀದನು ತನ್ನ ನೆಚ್ಚಿನ ಗೆಳೆಯನಾಗಿದ್ದ ಯೋನಾತಾನನ ಕುಂಟ ಮಗನಾದ ಮೆಫೀಬೋಶೆತನಿಗೆ ತೋರಿಸಿದ ಪ್ರೀತಿಪರ ಪರಿಗಣನೆಯು ದಿಕ್ಕಿಲ್ಲದವರ ವಿಷಯದಲ್ಲಿ ನಮಗಿರಬೇಕಾದ ಯೋಗ್ಯ ಮನೋಭಾವಕ್ಕೆ ಒಂದು ಮಾದರಿಯಾಗಿದೆ.—2 ಸಮುವೇಲ 9:1-13.
ಕಾವಲಿನಬುರುಜು05 5/15 ಪುಟ 17 ಪ್ಯಾರ 11
ಎರಡನೇ ಸಮುವೇಲ ಪುಸ್ತಕದ ಮುಖ್ಯಾಂಶಗಳು
9:1, 6, 7. ದಾವೀದನು ಕೊಟ್ಟ ಮಾತಿಗೆ ತಪ್ಪಲಿಲ್ಲ. ನಾವು ಸಹ ಯಾವಾಗಲೂ ಕೊಟ್ಟ ಮಾತಿಗೆ ತಪ್ಪದಿರಲು ಪ್ರಯತ್ನಿಸಬೇಕು.
ಕಾವಲಿನಬುರುಜು02 2/15 ಪುಟ 14 ಪ್ಯಾರ 10
ಅವರು ತಮ್ಮ ಶರೀರಕ್ಕೆ ನಾಟಿದ್ದ ಮುಳ್ಳುಗಳನ್ನು ಸಹಿಸಿಕೊಂಡರು
10 ಯೋನಾತಾನನಿಗಾಗಿ ತನಗಿದ್ದ ಅಪಾರ ಪ್ರೀತಿಯಿಂದಾಗಿ, ರಾಜ ದಾವೀದನು ಕೆಲವು ವರ್ಷಗಳ ನಂತರ ಮೆಫೀಬೋಶೆತನಿಗೆ ಪ್ರೀತಿದಯೆಯನ್ನು ತೋರ್ಪಡಿಸಿದನು. ಸೌಲನಿಗೆ ಸೇರಿದ್ದ ಎಲ್ಲ ಭೂಮಿಯನ್ನು ದಾವೀದನು ಮೆಫೀಬೋಶೆತನಿಗೆ ಒಪ್ಪಿಸಿಕೊಟ್ಟನು ಮತ್ತು ಸೌಲನ ದಾಸನಾದ ಚೀಬನು ಈ ಭೂಮಿಯನ್ನು ನೋಡಿಕೊಳ್ಳುವಂತೆ ನೇಮಿಸಿದನು. ದಾವೀದನು ಮೆಫೀಬೋಶೆತನಿಗೆ ಹೀಗೂ ಹೇಳಿದನು: “ನೀನು ಪ್ರತಿದಿನ ನನ್ನ ಪಂಕ್ತಿಯಲ್ಲಿ ಊಟಮಾಡಬೇಕು.” (2 ಸಮುವೇಲ 9:6-10) ದಾವೀದನ ಪ್ರೀತಿದಯೆಯು ಮೆಫೀಬೋಶೆತನಿಗೆ ಸಾಂತ್ವನವನ್ನು ನೀಡಿತು ಮತ್ತು ಅವನ ಅಂಗವಿಕಲತೆಯ ನೋವನ್ನು ಶಮನಗೊಳಿಸಲು ಸಹಾಯಮಾಡಿತೆಂಬುದರ ಕುರಿತು ಸಂದೇಹವಿಲ್ಲ. ಎಷ್ಟು ಒಳ್ಳೆಯ ಪಾಠ! ಶರೀರದಲ್ಲಿನ ಒಂದು ಮುಳ್ಳಿನೊಂದಿಗೆ ಹೆಣಗಾಡುತ್ತಿರುವವರಿಗೆ ನಾವು ಕೂಡ ಹಾಗೆಯೇ ದಯೆಯನ್ನು ತೋರಿಸಬೇಕು!
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 266
ಗಡ್ಡ
ಆಗಿನ ಕಾಲದ ಜನರು, ಗಡ್ಡ ಇಡೋದು ಪುರುಷರ ನಿಜವಾದ ಲಕ್ಷಣ ಮತ್ತು ಅದು ಪುರುಷರನ್ನು ಗೌರವಾನ್ವಿತ ವ್ಯಕ್ತಿಯಾಗಿ ಮಾಡುತ್ತೆ ಅಂತ ನೆನಸುತ್ತಿದ್ದರು. ಅಷ್ಟೇ ಅಲ್ಲ, ಗಡ್ಡವನ್ನ ಕತ್ತರಿಸೋದು ಯೆಹೋವನನ್ನ ಆರಾಧಿಸದ ಜನರ ಆರಾಧನೆಯ ಒಂದು ಪದ್ದತಿಯಾಗಿದ್ದಿರಬಹುದು. ಬಹುಷಃ ಈ ಕಾರಣದಿಂದಲೇ ಕಣ್ಣು ಮತ್ತು ಕಿವಿಯ ಮಧ್ಯೆ ಇರೋ ಕೂದಲನ್ನ, ಗಡ್ಡದ ಬದಿಯಲ್ಲಿರೋ ಕೂದಲನ್ನ ಬೋಳಿಸಬಾರದು ಅಂತ ದೇವರು ನಿಯಮ ಕೊಟ್ಟಿರಬೇಕು.—ಯಾಜ 19:27; 21:5.
ಜೂನ್ 13-19
ಬೈಬಲಿನಲ್ಲಿರುವ ನಿಧಿ | 2 ಸಮುವೇಲ 11-12
“ತಪ್ಪಾದ ಆಸೆಗಳು ನಿಮ್ಮನ್ನು ನಿಯಂತ್ರಿಸಲು ಬಿಡಬೇಡಿ”
ಕಾವಲಿನಬುರುಜು21.06 ಪುಟ 17 ಪ್ಯಾರ 10
ಸೈತಾನನ ಬಲೆಯಿಂದ ಖಂಡಿತ ತಪ್ಪಿಸಿಕೊಳ್ಳೋಕೆ ಆಗುತ್ತೆ.
10 ಯೆಹೋವ ದೇವರು ರಾಜ ದಾವೀದನಿಗೆ ತುಂಬ ಆಶೀರ್ವಾದ ಮಾಡಿದ್ರು. ಆಸ್ತಿ-ಅಂತಸ್ತು ಕೊಟ್ಟಿದ್ರು, ಎಷ್ಟೋ ಯುದ್ಧಗಳಲ್ಲಿ ಜಯ ಕೊಟ್ಟಿದ್ರು. ದೇವರು ಲೆಕ್ಕನೇ ಇಲ್ಲದಷ್ಟು ಒಳ್ಳೇದನ್ನ ಕೊಟ್ಟಿದ್ದಾನೆ ಅಂತ ಅವನು ತೃಪ್ತಿ ಆಗಿದ್ದ. (ಕೀರ್ತ. 40:5) ಆದ್ರೆ ಬರ್ತಾ-ಬರ್ತಾ ಅವನ ಮನಸ್ಸಲ್ಲಿ ಅತಿಯಾಸೆ ಬೇರು ಬಿಡ್ತು. ದಾವೀದನಿಗೆ ತುಂಬ ಹೆಂಡತಿಯರು ಇದ್ದರೂ ಬೇರೊಬ್ಬನ ಹೆಂಡತಿ ಮೇಲೆ ಕಣ್ಣು ಹಾಕಿದ. ಹಿತ್ತಿಯನಾದ ಊರೀಯನ ಹೆಂಡತಿ ಬತ್ಷೆಬೆ ಜೊತೆ ವ್ಯಭಿಚಾರ ಮಾಡಿದ. ಅವಳು ಗರ್ಭಿಣಿ ಆದಳು. ಅಷ್ಟೇ ಅಲ್ಲ, ದಾವೀದ ಅವಳ ಗಂಡನನ್ನೂ ಕೊಲ್ಲಿಸಿದ. (2 ಸಮು. 11:2-15) ಇಷ್ಟು ವರ್ಷಗಳಿಂದ ಯೆಹೋವ ದೇವರಿಗೆ ನಿಯತ್ತಾಗಿದ್ದವನು ಈಗ ಅತಿಯಾಸೆ ಅನ್ನೋ ಗುಂಡಿಯಲ್ಲಿ ಬಿದ್ದುಬಿಟ್ಟ. ಇದ್ರಿಂದ ಅವನ ಜೀವನದಲ್ಲಿ ತುಂಬ ಕಷ್ಟಗಳನ್ನ ಎದುರಿಸಬೇಕಾಯ್ತು. ಆದ್ರೆ ಮುಂದಕ್ಕೆ ದಾವೀದ ತಪ್ಪನ್ನ ಒಪ್ಕೊಂಡು ತಿದ್ದಿಕೊಂಡ. ಯೆಹೋವ ದೇವರು ಅವನನ್ನ ಕ್ಷಮಿಸಿದ್ರಿಂದ ದಾವೀದನಿಗೆ ಖುಷಿ ಆಯ್ತು.—2 ಸಮು. 12:7-13.
ಕಾವಲಿನಬುರುಜು19.09 ಪುಟ 17 ಪ್ಯಾರ 15
ಯೆಹೋವನಿಗೆ ಮನಸಾರೆ ಅಧೀನರಾಗಿ
15 ಯೆಹೋವನು ದಾವೀದನನ್ನು ಕುಟುಂಬದ ತಲೆಯಾಗಿ ಮಾತ್ರವಲ್ಲ ಇಡೀ ಇಸ್ರಾಯೇಲ್ ಜನಾಂಗಕ್ಕೆ ರಾಜನಾಗಿ ನೇಮಿಸಿದ್ದನು. ಆತನು ರಾಜನಾಗಿದ್ದರಿಂದ ಹೆಚ್ಚು ಅಧಿಕಾರವಿತ್ತು. ಕೆಲವೊಮ್ಮೆ ಆತನು ತನಗಿದ್ದ ಅಧಿಕಾರವನ್ನು ದುರುಪಯೋಗಿಸಿ ಗಂಭೀರ ತಪ್ಪುಗಳನ್ನು ಮಾಡಿದನು. (2 ಸಮು. 11:14, 15) ಆದರೆ ಶಿಸ್ತನ್ನು ಸ್ವೀಕರಿಸುವ ಮೂಲಕ ಯೆಹೋವನಿಗೆ ಅಧೀನತೆ ತೋರಿಸಿದನು. ಮನಸ್ಸುಬಿಚ್ಚಿ ಯೆಹೋವನಿಗೆ ಪ್ರಾರ್ಥಿಸಿದನು. ಯೆಹೋವನ ಸಲಹೆಗೆ ವಿಧೇಯನಾಗಲು ತನ್ನಿಂದಾದುದೆಲ್ಲವನ್ನು ಮಾಡಿದನು. (ಕೀರ್ತ. 51:1-4) ಆತನು ಎಷ್ಟರಮಟ್ಟಿಗೆ ದೀನನಾಗಿದ್ದನೆಂದರೆ ಪುರುಷರು ಮಾತ್ರವಲ್ಲ, ಸ್ತ್ರೀಯರು ಕೊಟ್ಟ ಸಲಹೆಯನ್ನೂ ಪಾಲಿಸಿದನು. (1 ಸಮು. 19:11, 12; 25:32, 33) ದಾವೀದನು ತನ್ನ ತಪ್ಪುಗಳಿಂದ ಪಾಠ ಕಲಿತನು ಮತ್ತು ತನ್ನ ಜೀವನದಲ್ಲಿ ಯೆಹೋವನ ಆರಾಧನೆಗೆ ಮೊದಲ ಸ್ಥಾನ ನೀಡಿದನು.
ಕಾವಲಿನಬುರುಜು18.06 ಪುಟ 17 ಪ್ಯಾರ 7
ನಿಮ್ಮ ಮನಸ್ಸಾಕ್ಷಿಗೆ ತರಬೇತಿ ಕೊಡಿ
7 ನಾವು ದೇವರ ನಿಯಮಗಳನ್ನು ಮುರಿದು ಅದರಿಂದಾಗುವ ಕೆಟ್ಟ ಪರಿಣಾಮಗಳನ್ನು ಅನುಭವಿಸಿದ ಮೇಲೆನೇ ಯಾವುದು ಸರಿ ಯಾವುದು ತಪ್ಪು ಎಂದು ತಿಳಿದುಕೊಳ್ಳಬೇಕಾಗಿಲ್ಲ. ಬದಲಿಗೆ ಇದನ್ನು ನಾವು ಹಿಂದಿನ ಕಾಲದಲ್ಲಿ ಕೆಲವರು ಮಾಡಿದ ತಪ್ಪುಗಳಿಂದ ಕಲಿಯಬಹುದು. ಆ ಉದಾಹರಣೆಗಳು ಬೈಬಲಿನಲ್ಲಿವೆ. ಜ್ಞಾನೋಕ್ತಿ 9:9 ಹೀಗೆ ಹೇಳುತ್ತದೆ: “ಜ್ಞಾನಿಗೆ ಉಪದೇಶಿಸಿದರೆ ಹೆಚ್ಚು ಜ್ಞಾನವನ್ನು ಹೊಂದುವನು.” ಈ ಜ್ಞಾನ ನಮಗೆ ದೇವರಿಂದ ಸಿಗುತ್ತದೆ. ಇಷ್ಟು ಉತ್ತಮವಾದ ಉಪದೇಶವನ್ನು ನಮಗೆ ಬೇರೆ ಯಾರೂ ಕೊಡಕ್ಕಾಗಲ್ಲ. ಉದಾಹರಣೆಗೆ, ದಾವೀದನು ಯೆಹೋವನ ನಿಯಮವನ್ನು ಮುರಿದು ತಪ್ಪುಮಾಡಿದ ಮೇಲೆ ಎಷ್ಟು ತೊಂದರೆಗಳನ್ನು ಅನುಭವಿಸಿದನು ಎಂದು ಯೋಚಿಸಿ. (2 ಸಮು. 12:7-14) ನೀವು ಆ ವೃತ್ತಾಂತವನ್ನು ಓದುವಾಗ ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ: ‘ಈ ಎಲ್ಲಾ ತೊಂದರೆಗಳನ್ನು ತಂದುಕೊಳ್ಳದಿರಲು ದಾವೀದನು ಏನು ಮಾಡಬಹುದಿತ್ತು? ದಾವೀದನು ಎದುರಿಸಿದಂಥ ಪ್ರಲೋಭನೆ ನನಗೆ ಎದುರಾದರೆ ನಾನೇನು ಮಾಡುತ್ತೇನೆ? ದಾವೀದನ ತರ ಪಾಪ ಮಾಡುತ್ತೇನಾ ಅಥವಾ ಯೋಸೇಫನ ತರ ಓಡಿಹೋಗುತ್ತೇನಾ?’ (ಆದಿ. 39:11-15) ಪಾಪದ ಪರಿಣಾಮಗಳ ಬಗ್ಗೆ ನಾವು ಗಾಢವಾಗಿ ಯೋಚಿಸುವುದಾದರೆ ‘ಕೆಟ್ಟದ್ದನ್ನು ಹೆಚ್ಚೆಚ್ಚು ದ್ವೇಷಿಸಲು’ ಕಲಿಯುತ್ತೇವೆ.
ಬೈಬಲಿನಲ್ಲಿರುವ ರತ್ನಗಳು
it-1-E ಪುಟ 590 ಪ್ಯಾರ 1
ದಾವೀದ
ದಾವೀದ ಮತ್ತು ಬತ್ಷೆಬೆ ಮಾಡಿದ ತಪ್ಪನ್ನ ಯೆಹೋವನು ಮಚ್ಚಿಡಲಿಲ್ಲ. ಬದಲಿಗೆ ಅವರು ಮಾಡಿದ ಪ್ರತಿಯೊಂದು ವಿಷಯಗಳನ್ನ ನೋಡಿದನು ಮತ್ತು ಸತ್ಯವನ್ನ ಬಯಲು ಮಾಡಿದನು. ಒಂದುವೇಳೆ ಯೆಹೋವ ದೇವರು ದಾವೀದ ಮತ್ತು ಬತ್ಷೆಬೆಯ ತಪ್ಪನ್ನು ನಿರ್ಣಯಿಸೋಕೆ ಮನುಷ್ಯ ನ್ಯಾಯಾಧೀಶರಿಗೆ ಕೊಟ್ಟಿದ್ರೆ ಮೋಶೆಯ ನಿಯಮದ ಪ್ರಕಾರ ಅವರಿಗೆ ಮರಣ ಶಿಕ್ಷೆಯಾಗ್ತಿತ್ತು. ಅಷ್ಟೇ ಅಲ್ಲ, ಅವಳ ಹೊಟ್ಟೆಯಲ್ಲಿದ್ದ ಮಗು ಕೂಡ ಸಾಯುತ್ತಿತ್ತು. (ಧರ್ಮೋ 5:18; 22:22) ಹಾಗಾಗಿ ಈ ವಿಷಯವನ್ನ ಯೆಹೋವನೇ ತೀರ್ಮಾನಿಸೋಕೆ ನಿರ್ಣಯಿಸಿದನು. ಯೆಹೋವನು ದಾವೀದನ ಜೊತೆ ಒಪ್ಪಂದ ಮಾಡ್ಕೊಂಡಿದ್ರಿಂದ ಅವನಿಗೆ ಕರುಣೆ ತೋರಿಸಿದನು. (2ಸಮು 7:11-16) ದಾವೀದ ಬೇರೆಯವರಿಗೆ ಕರುಣೆ ತೋರಿಸಿದ್ದನು. (1ಸಮು 24:4-7; ಯಾಕೋ 2:13 ನ್ನು ಹೋಲಿಸಿ) ಅಷ್ಟೇ ಅಲ್ಲ, ದಾವೀದ ಮತ್ತು ಬತ್ಷೆಬೆ ಪಶ್ಚಾತ್ತಾಪ ಪಟ್ಟಿದ್ರಿಂದಾನೇ ಯೆಹೋವ ಕ್ಷಮಿಸಿದನು. (ಕೀರ್ತ 51:1-4) ಹಾಗಂತ ಅವರಿಗೆ ಶಿಕ್ಷೆನೇ ಸಿಗ್ಲಿಲ್ವಾ? ಯೆಹೋವ ದೇವರು ಪ್ರವಾದಿ ನಾತಾನನ ಮೂಲಕ ಹೇಳಿದ್ದು: “ನಿನ್ನ ಮನೆಯಲ್ಲೇ ನಿನಗೆ ಕಷ್ಟ ತರ್ತಿನಿ”—2ಸಮು 12:1-12.
ಜೂನ್ 20-26
ಬೈಬಲಿನಲ್ಲಿರುವ ನಿಧಿ | 2 ಸಮುವೇಲ 13-14
“ಸ್ವಾರ್ಥದಿಂದ ಅಮ್ನೋನನಿಗಾದ ದುರಂತ”
it-1-E ಪುಟ 32
ಅಬ್ಷಾಲೋಮ
ಅಮ್ನೋನನ ಕೊಲೆ. ಅಬ್ಷಾಲೋಮನ ತಂಗಿ ತಾಮಾರಳು ತುಂಬ ಸುಂದರಿಯಾಗಿದ್ದಳು. ಹಾಗಾಗಿ ಅವಳ ಅಣ್ಣನಾದ ಅಮ್ನೋನನಿಗೆ ಅವಳ ಮೇಲೆ ಆಸೆ ಹುಟ್ಟಿತು. ಅವನು ಹುಷಾರಿಲ್ಲದ ಹಾಗೆ ನಾಟಕ ಮಾಡಿ ತಾಮಾರಳನ್ನು ತನ್ನ ಬಳಿ ಕರೆಸಿಕೊಂಡ. ಅವಳು ಅವನಿಗಾಗಿ ಅಡುಗೆ ಮಾಡಿಕೊಟ್ಟಳು. ಅಮ್ನೋನ ಆ ಅವಕಾಶ ಬಳಸಿ ಅವಳ ಮೇಲೆ ಅತ್ಯಾಚಾರ ಮಾಡಿದ. ಆಮೇಲೆ ಅವನಿಗೆ ಅವಳ ಮೇಲೆ ಪ್ರೀತಿಗಿಂತ ದ್ವೇಷಾನೇ ಹೆಚ್ಚಾಯ್ತು. ಹಾಗಾಗಿ ಅವಳನ್ನು ದ್ವೇಷಿಸೋಕೆ ಶುರುಮಾಡಿದ. ಅಷ್ಟೇ ಅಲ್ಲ, ಅವಳನ್ನು ಅಲ್ಲಿಂದ ಓಡಿಸಿಬಿಟ್ಟ.—2ಸಮು 13:1-20.
ಕಾವಲಿನಬುರುಜು17.09 ಪುಟ 5 ಪ್ಯಾರ 11
ಸ್ವನಿಯಂತ್ರಣ ಬೆಳೆಸಿಕೊಳ್ಳಿ
11 ಲೈಂಗಿಕ ಅನೈತಿಕತೆಯಲ್ಲಿ ತೊಡಗುವ ಪ್ರಲೋಭನೆಗೆ ಬಲಿಬಿದ್ದ ಜನರ ಬಗ್ಗೆ ಸಹ ಬೈಬಲ್ ಮಾತಾಡುತ್ತದೆ. ಸ್ವನಿಯಂತ್ರಣ ಕಳಕೊಂಡು ಮಾಡುವ ಇಂಥ ತಪ್ಪಿನಿಂದ ಏನೆಲ್ಲಾ ಅನಾಹುತ ಆಗುತ್ತದೆಂದು ಅದು ತೋರಿಸುತ್ತದೆ. ಕಿಮ್ ಎದುರಿಸಿದಂಥ ಸನ್ನಿವೇಶವನ್ನು ನೀವು ಎದುರಿಸುತ್ತಿರುವಲ್ಲಿ ಜ್ಞಾನೋಕ್ತಿ 7 ನೇ ಅಧ್ಯಾಯದಲ್ಲಿ ತಿಳಿಸಲಾಗಿರುವ ಯೌವನಸ್ಥನ ಬಗ್ಗೆ ಯೋಚಿಸಿ. ಅಷ್ಟೇ ಅಲ್ಲ, ಅಮ್ನೋನ ಮಾಡಿದ ತಪ್ಪು ಮತ್ತು ಅದರಿಂದ ಉಂಟಾದ ಪರಿಣಾಮಗಳ ಬಗ್ಗೆ ಸಹ ಯೋಚಿಸಿ. (2 ಸಮು. 13:1, 2, 10-15, 28-32) ಹೆತ್ತವರು ಇಂಥ ವ್ಯಕ್ತಿಗಳ ಬಗ್ಗೆ ಕುಟುಂಬ ಆರಾಧನೆಯಲ್ಲಿ ಚರ್ಚೆ ಮಾಡುವ ಮೂಲಕ ತಮ್ಮ ಮಕ್ಕಳಿಗೆ ಸ್ವನಿಯಂತ್ರಣ ಮತ್ತು ವಿವೇಕ ಬೆಳೆಸಿಕೊಳ್ಳಲು ಸಹಾಯ ಮಾಡಬಹುದು.
it-1-E ಪುಟ 33 ಪ್ಯಾರ 1
ಅಬ್ಷಾಲೋಮ
ಎರಡು ವರ್ಷಗಳು ಕಳೆಯಿತು. ಆಗ ಕುರಿಗಳ ಉಣ್ಣೆ ಕತ್ತರಿಸುವ ಸಮಯವಾಗಿತ್ತು. ಹಾಗಾಗಿ ಅಬ್ಷಾಲೋಮ ಯೆರೂಸಲೇಮಿಂದ 22 ಕಿ.ಮೀ ದೂರದಲ್ಲಿದ್ದ ಬಾಳ್-ಹಾಚೋರಿನಲ್ಲಿ ಒಂದು ಔತಣ ಏರ್ಪಡಿಸಿದ. ಅವನು ದಾವೀದನನ್ನ ಮತ್ತು ಅವನ ಎಲ್ಲಾ ಗಂಡುಮಕ್ಕಳನ್ನ ಅದಕ್ಕಾಗಿ ಕರೆದ. ಆದ್ರೆ ದಾವೀದ ಔತಣಕ್ಕೆ ಬರಲ್ಲ ಅಂತ ಹೇಳಿದ. ಆಗ ಅಬ್ಷಾಲೋಮ ದಾವೀದನ ದೊಡ್ಡ ಮಗನಾದ ಅಮ್ನೋನನನ್ನ ಕಳಿಸಿಕೊಡುವಂತೆ ಒತ್ತಾಯಿಸಿದ. (ಜ್ಞಾನೋ 10:18) ಔತಣದಲ್ಲಿ ಅಮ್ನೋನ “ದ್ರಾಕ್ಷಾಮದ್ಯ ಕುಡಿದು ಮತ್ತನಾದಾಗ” ಅಬ್ಷಾಲೋಮ ತನ್ನ ಸೇವಕರಿಗೆ ಅವನನ್ನ ಕೊಲ್ಲುವಂತೆ ಹೇಳಿದ.—2ಸಮು 13:23-38.
ಬೈಬಲಿನಲ್ಲಿರುವ ರತ್ನಗಳು
ಎಚ್ಚರ!04 12/22 ಪುಟ 8-9
ಪ್ರಾಮುಖ್ಯವಾಗಿರೋ ಸೌಂದರ್ಯ
ಅಬ್ಷಾಲೋಮ ತುಂಬ ಸುಂದರನಾಗಿದ್ದ. ಅವನ ಬಗ್ಗೆ ಬೈಬಲ್ ಹೇಳೋದು: “ಅಂಗಾಲಿಂದ ನಡುನೆತ್ತಿ ತನಕ ಅವನಲ್ಲಿ ಒಂದು ಕೊರತೆನೂ ಇರಲಿಲ್ಲ. ಅವನಷ್ಟು ಸುಂದರವಾದ ವ್ಯಕ್ತಿ ಆ ದೇಶದಲ್ಲಿ ಯಾರೂ ಇರಲಿಲ್ಲ. ಎಲ್ಲಿ ನೋಡಿದ್ರೂ ಜನ್ರು ಅವನ ರೂಪದ ಬಗ್ಗೆನೇ ಹಾಡಿಹೊಗಳ್ತಾ ಇದ್ರು.” (2 ಸಮು. 14:25) ಆದ್ರೆ ಅವನ ವ್ಯಕ್ತಿತ್ವ ಅಷ್ಟು ಸುಂದರವಾಗಿರಲಿಲ್ಲ. ಅವನಿಗೆ ಅಧಿಕಾರದ ದಾಹ ಇತ್ತು. ಹಾಗಾಗಿ ಅವನ ತಂದೆಯ ವಿರುದ್ಧನೇ ದಂಗೆ ಎದ್ದು ಅವನ ಸಿಂಹಾಸನವನ್ನೇ ವಶಪಡಿಸಿಕೊಳ್ಳೋಕೆ ಹೋದ. ಅವನು ತನ್ನ ತಂದೆಯ ಉಪಪತ್ನಿಯರ ಜೊತೆ ಸಂಬಂಧ ಇಟ್ಕೊಂಡಿದ್ದ. ಇದರಿಂದ ಯೆಹೋವನಿಗೆ ಅವನ ಮೇಲೆ ತುಂಬ ಕೋಪ ಬಂತು. ಹಾಗಾಗಿ ಅವನು ಸಾಯುವಾಗ ತುಂಬ ನೋವಿನಿಂದ ಸತ್ತ.—2 ಸಮುವೇಲ 15:10-14; 16:13-22; 17:14; 18:9, 15.
ಈಗ ಹೇಳಿ, ಅಬ್ಷಾಲೋಮ ನಿಜವಾಗಲೂ ಸುಂದರನಾಗಿದ್ದನಾ? ಖಂಡಿತ ಇಲ್ಲ ಅಲ್ವಾ? ಅವನಲ್ಲಿ ಅಸಹ್ಯ ಹುಟ್ಟಿಸೋ ವ್ಯಕ್ತಿತ್ವ ಇತ್ತು. ಅವನು ನಂಬಿಕೆ ದ್ರೋಹಿ ಮತ್ತು ದುರಹಂಕಾರಿ ಆಗಿದ್ದ. ಅವನ ಸೌಂದರ್ಯದಿಂದ ಅವನಿಗೆ ಯಾವ ಪ್ರಯೋಜನನೂ ಆಗಲಿಲ್ಲ. ಅವನನ್ನ ನಾಶನದಿಂದ ಕಾಪಾಡೋಕೆ ಅದು ಅವನಿಗೆ ಸಹಾಯ ಮಾಡ್ಲೇ ಇಲ್ಲ. ಬೈಬಲಲ್ಲಿ ಒಳ್ಳೆಯವರಾದ, ಬುದ್ಧಿವಂತರಾದ ತುಂಬ ಜನರ ಬಗ್ಗೆ ಹೇಳುತ್ತೆ. ಆದ್ರೆ ಅವರ ಹೊರಗಿನ ಸೌಂದರ್ಯದ ಬಗ್ಗೆ ಏನೂ ಹೇಳಿಲ್ಲ. ಯಾಕಂದ್ರೆ ಅವರ ಹೊರಗಿನ ಸೌಂದರ್ಯಕ್ಕಿಂತ ಒಳಗಿನ ಸೌಂದರ್ಯನೇ ತುಂಬ ಮುಖ್ಯ.
ಜೂನ್ 27–ಜೂಲೈ 3
ಬೈಬಲಿನಲ್ಲಿರುವ ನಿಧಿ | 2 ಸಮುವೇಲ 15-17
“ಅಹಂಕಾರದಿಂದ ದಂಗೆ ಎದ್ದ ಅಬ್ಷಾಲೋಮ”
it-1-E ಪುಟ 860
ಮುಂದೆ ಓಡುವವರು
ಹಿಂದಿನ ಕಾಲದಲ್ಲಿ ಇಸ್ರಾಯೇಲಿನಂಥ ದೇಶಗಳಲ್ಲಿ ಓಟಗಾರರು ರಾಜನ ರಥದ ಮುಂದೆ ಓಡೋದು ಸಾಮಾನ್ಯವಾಗಿತ್ತು. ಇವರು, ರಾಜ ಬರ್ತಿದ್ದಾನೆ ಅಂತ ಘೋಷಿಸುವಾಗ ಜನರು ರಾಜನ ಆಗಮನಕ್ಕಾಗಿ ತಯಾರಾಗ್ತಿದ್ರು. ಈ ಓಟಗಾರರು ರಾಜನಿಗೆ ಬೇಕಾದ ಸಹಾಯನೂ ಮಾಡುತ್ತಿದ್ರು. (1ಸಮು 8:11) ಓಟಗಾರರು, ರಾಜನ ರಥದ ಮುಂದೆ ಮಾತ್ರ ಓಡಬೇಕಿತ್ತು. ಆದ್ರೆ ಅಬ್ಷಾಲೋಮ ಮತ್ತು ಅದೋನೀಯ ತಮ್ಮ ಸ್ವಂತ ರಥಗಳ ಮುಂದೆ ಓಡೋಕೆ 50 ಓಟಗಾರರನ್ನು ಇಟ್ಟು ರಾಜನ ವಿರುದ್ಧನೇ ದಂಗೆ ಎದ್ರು. ಜನರಿಂದ ಹೆಚ್ಚು ಗೌರವ ಗಳಿಸಲು ಮತ್ತು ತಾವೇ ಸರಿಯಾದ ರಾಜರು ಅಂತ ಜನ ಯೋಚಿಸುವಂತೆ ಮಾಡಲು ಅವರು ಹೀಗೆ ಮಾಡಿದ್ರು.—2ಸಮು 15:1; 1ಅರ 1:5, ಓಟಗಾರರು ನೋಡಿ.
ಕಾವಲಿನಬುರುಜು12 7/15 ಪುಟ 13 ಪ್ಯಾರ 5
ಸ್ವಾತಂತ್ರ್ಯ ಕೊಡುವ ದೇವರಾದ ಯೆಹೋವನ ಸೇವೆಮಾಡಿ
5 ಇತರರ ಮೇಲೆ ಕೆಟ್ಟ ಪ್ರಭಾವ ಬೀರಿದ ಅನೇಕರ ಉದಾಹರಣೆಗಳು ಬೈಬಲ್ನಲ್ಲಿವೆ. ಅವರಲ್ಲೊಬ್ಬನು ರಾಜ ದಾವೀದನ ಮಗ ಅಬ್ಷಾಲೋಮ. ನೋಡಲು ಬಲು ಸುಂದರನಾಗಿದ್ದ ಇವನು ಸೈತಾನನಂತೆ ಹೆಬ್ಬಯಕೆಯನ್ನು ಬೆಳೆಸಿಕೊಂಡು ತನ್ನದಲ್ಲದ ಅಧಿಕಾರಕ್ಕಾಗಿ ಆಶಿಸತೊಡಗಿದನು. ತಂದೆಯ ರಾಜತ್ವವನ್ನು ಕಿತ್ತುಕೊಳ್ಳಲು ಸಂಚುಹೂಡಿದನು. ಜನರನ್ನು ತನ್ನ ಕಡೆಗೆ ತಿರುಗಿಸಿಕೊಳ್ಳಲು ಅವರ ಕಷ್ಟಗಳಿಗೆ ಮರುಗುವವನಂತೆ ನಟಿಸಿದನು. ರಾಜ ದಾವೀದನಿಗೆ ಜನರ ಬಗ್ಗೆ ಕಳಕಳಿಯೇ ಇಲ್ಲ ಎಂಬಂತೆ ಬಿಂಬಿಸಿದನು. ಸೈತಾನನು ಏದೆನ್ ತೋಟದಲ್ಲಿ ಮಾಡಿದಂತೆ ಅಬ್ಷಾಲೋಮನು ಹಿತಚಿಂತಕನೆಂಬ ಸೋಗು ಹಾಕಿ ತಂದೆಯ ವಿರುದ್ಧ ಇಲ್ಲಸಲ್ಲದ ಸುಳ್ಳುಹೇಳಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದನು.—2 ಸಮು. 15:1-5.
it-1-E ಪುಟ 1083-1084
ಹೆಬ್ರೋನ್
ಕೆಲವು ವರ್ಷಗಳ ನಂತರ ದಾವೀದನ ಮಗ ಅಬ್ಷಾಲೋಮ ಹೆಬ್ರೋನಿಗೆ ಹೋಗ್ತಾನೆ. ಮತ್ತು ತನ್ನ ತಂದೆಯ ಸಿಂಹಾಸನವನ್ನು ಕಿತ್ತುಕೊಳ್ಳಲು ಪ್ರಯತ್ನಿಸ್ತಾನೆ. ಆದ್ರೆ ಅವನು ಅದರಲ್ಲಿ ಯಶಸ್ವಿಯಾಗಲ್ಲ. (2ಸಮು 15:7-10) ಅವನು ಯಾಕೆ ಹೆಬ್ರೋನಿಗೆ ಹೋದ? ಬಹುಷಃ ಅವನು ಅಲ್ಲೇ ಹುಟ್ಟಿದ್ದಿರಬೇಕು. ಹೆಬ್ರೋನ್ ಯೂದಾಯದ ರಾಜಧಾನಿ ಆಗಿತ್ತು. ಅಷ್ಟೆ ಅಲ್ಲ, ಈ ಸ್ಥಳ ಇತಿಹಾಸದಲ್ಲೇ ಒಂದು ಪ್ರಮುಖ ಪಾತ್ರ ವಹಿಸಿದೆ.
ಬೈಬಲಿನಲ್ಲಿರುವ ರತ್ನಗಳು
ಕಾವಲಿನಬುರುಜು18.08 ಪುಟ 6 ಪ್ಯಾರ 11
ಸತ್ಯ ಏನೆಂದು ನಿಮಗೆ ಗೊತ್ತಾ?
11 ಜನರು ನಮ್ಮ ಬಗ್ಗೆ ಅರ್ಧಂಬರ್ಧ ಸತ್ಯ ತಿಳಿದು ಅದಕ್ಕೆ ಸ್ವಲ್ಪ ಕಥೆ ಕಟ್ಟಿ ಹಬ್ಬಿಸುವ ಸನ್ನಿವೇಶವೂ ಬರಬಹುದು. ಇದರಿಂದ ನಮಗೆ ತುಂಬ ಹಾನಿ ಆಗುತ್ತದೆ. ಮೆಫೀಬೋಶೆತನ ಉದಾಹರಣೆ ನೋಡಿ. ರಾಜ ದಾವೀದನು ಮೆಫೀಬೋಶೆತನಿಗೆ ಅವನ ಅಜ್ಜನಾದ ಸೌಲನಿಗೆ ಸೇರಿದ್ದ ಭೂಮಿಯನ್ನೆಲ್ಲ ಉದಾರವಾಗಿ ಕೊಟ್ಟನು. (2 ಸಮು. 9:6, 7) ಆದರೆ ನಂತರ ಚೀಬನು ಮೆಫೀಬೋಶೆತನ ಬಗ್ಗೆ ದಾವೀದನ ಹತ್ತಿರ ಸುಳ್ಳು ಹೇಳಿದನು. ಅದು ನಿಜನಾ ಎಂದು ದಾವೀದನು ಪರೀಕ್ಷಿಸಲಿಲ್ಲ. ಮೆಫೀಬೋಶೆತನಿಗೆ ಸೇರಿದ ಆಸ್ತಿಯನ್ನೆಲ್ಲಾ ಕಿತ್ತುಕೊಂಡುಬಿಟ್ಟನು. (2 ಸಮು. 16:1-4) ನಂತರ ಅವನು ಮೆಫೀಬೋಶೆತನ ಹತ್ತಿರ ಮಾತಾಡಿದಾಗ ತನ್ನ ತಪ್ಪಿನ ಅರಿವಾಯಿತು. ಆಗ ಅವನಿಂದ ತಗೊಂಡಿದ್ದ ಆಸ್ತಿಯಲ್ಲಿ ಸ್ವಲ್ಪವನ್ನು ಮಾತ್ರ ಹಿಂದೆ ಕೊಟ್ಟನು. (2 ಸಮು. 19:24-29) ಪೂರ್ತಿ ವಿಷಯ ತಿಳಿದುಕೊಳ್ಳದೆ ತಕ್ಷಣ ಪ್ರತಿಕ್ರಿಯಿಸುವ ಬದಲು ಸತ್ಯ ಏನೆಂದು ತಿಳಿದುಕೊಳ್ಳಲು ದಾವೀದನು ಪ್ರಯತ್ನಿಸಬೇಕಿತ್ತು. ಆಗ ಮೆಫೀಬೋಶೆತನು ಈ ಅನ್ಯಾಯವನ್ನು ಅನುಭವಿಸಬೇಕಾಗಿ ಬರುತ್ತಿರಲಿಲ್ಲ.