ಪರ್ವತಗಳು ಸೃಷ್ಟಿಯ ಅನುಪಮ ಕೃತಿಗಳು
ಆ್ಯಂಡೀಸ್, ಕ್ಯಾಸ್ಕೇಡ್ಸ್, ಹಿಮಾಲಯ, ರಾಕೀ, ಆ್ಯಲ್ಪ್ಸ್ ಮತ್ತು ಯೂರಲ್—ಇವು ಭೂಗ್ರಹದ ಪರ್ವತಗಳಲ್ಲಿ ಕೇವಲ ಕೆಲವು. ಈ ಪರ್ವತಗಳ ಭಾರೀ ಗಾತ್ರ ನಿಮ್ಮನ್ನು ಬೆರಗುಗೊಳಿಸಬಲ್ಲದು.
ಮೌಂಟ್ ಎವರೆಸ್ಟ್ನ ಮುಂದೆ ನಿಲ್ಲುವುದನ್ನು ಭಾವಿಸಿ. ಎತ್ತರದ ಮಟ್ಟಿಗೆ ಇದು ಭೂಮಿಯ ಪ್ರದರ್ಶನವಸ್ತು, 8,848 ಮೀಟರ್—ಒಂಬತ್ತು ಕಿಲೊಮೀಟರ್ ಎತ್ತರದ ಸ್ಮಾರಕ! ಮತ್ತು ಈ ಒಂದು ಶಿಖರವು ಆ ಶೋಭಾಯಮಾನವಾದ ಹಿಮಾಲಯಗಳ ಒಂದು ಚಿಕ್ಕ ಭಾಗ ಮಾತ್ರ. ಪ್ರತಿಯೊಂದು ಶಿಖರವು ತತ್ತರಗುಟ್ಟಿಸುವ 6,400 ಮೀಟರ್ಗಳಷ್ಟು ಎತ್ತರವಿದ್ದು 70ಕ್ಕೂ ಹೆಚ್ಚು ಶಿಖರಗಳಿರುವ ಈ ಶ್ರೇಣಿಯು ಗಾತ್ರದಲ್ಲಿ ಯೂರೋಪಿನ ಆಲ್ಪ್ಸ್ ಪರ್ವತಗಳ ಎರಡರಷ್ಟಿದೆ!
ಅದ್ವಿತೀಯ ಜೀವ ವಲಯಗಳು
ಹೆಚ್ಚಿನ ಪರ್ವತಗಳಲ್ಲಿ ವಿವಿಧ ಜೀವ ವಲಯಗಳು ಅಥವಾ ಪರಿಸರಗಳಿವೆ. ಇದು ಬಹುಮಟ್ಟಿಗೆ, ಎತ್ತರದಲ್ಲಿ ಪ್ರತಿ 300 ಮೀಟರ್ಗಳಷ್ಟು ಕಡಮೆಯಾಗುವಾಗ ಶಾಖಮಾನದಲ್ಲಿ 1.8 ಡಿಗ್ರಿ ಸೆಲ್ಸಿಯಸ್ ಕಡಮೆಯಾಗುವ ಕಾರಣದಿಂದಲೇ. ಮಳೆ, ಮಣ್ಣು ಮತ್ತು ಗಾಳಿಯಲ್ಲಿ ಬದಲಾವಣೆಗಳು ಸಹ ಪ್ರತಿಯೊಂದು ವಲಯವನ್ನು ಅದ್ವಿತೀಯವಾಗಿ ಮಾಡಬಲ್ಲದು.
ಇಂತಹ ಪರಿಸರಗಳ ವೈವಿಧ್ಯದ ಒಂದು ಉದಾಹರಣೆ ಅಮೆರಿಕದ ಅರಿಜೋನದ ಸ್ಯಾನ್ ಫ್ರಾನ್ಸಿಸ್ಕೊ ಶಿಖರಗಳೇ. ಆ ರಾಜ್ಯದಲ್ಲಿ ಅವು ಅತ್ಯುನ್ನತ ಪರ್ವತಗಳು. ಕೋಕನೀನೊ ಪ್ರಸ್ತಭೂಮಿಯಲ್ಲಿ ಆ ಪರ್ವತಗಳ ಬುಡದಿಂದ ಆರಂಭಿಸಿ, ಆ ಸ್ಯಾನ್ ಫ್ರಾನ್ಸಿಸ್ಕೊ ಶಿಖರಗಳಲ್ಲಿ ಒಂದರ ನೆತ್ತಿಯನ್ನು ನೀವು ಹತ್ತುವಲ್ಲಿ, ನೀವು ಮೊದಲಾಗಿ ಮರುಭೂಮಿಯ ಪರಿಸ್ಥಿತಿಗಳಲ್ಲಿ ಹಲ್ಲಿಗಳು ಮತ್ತು ಕ್ಯಾಕ್ಟೈ ಕಳ್ಳಿ ಸೇರಿರುವ ಜೀವಿ ಪರಿಸ್ಥಿತಿ ಸಮುದಾಯವನ್ನು ಅವಲೋಕಿಸುವಿರಿ. ಪ್ರಗತಿಪರವಾಗಿ ನೀವು ಹೆಚ್ಚು ಶೀತಲ ಜೀವ ವಲಯಗಳನ್ನು, ಬೆಟ್ಟದಾಡು ಮತ್ತು ಸ್ಪ್ರೂಸ್ ಮರಗಳ ವಾಸಸ್ಥಾನವನ್ನು ನೋಡುವಿರಿ. ಅಂತಿಮವಾಗಿ ನೀವು ನೆತ್ತಿಯ ಉತ್ತರ ಧ್ರುವ-ಆ್ಯಲ್ಪೈನ್ ಪರಿಸ್ಥಿತಿಗಳನ್ನು ತಲುಪುವಿರಿ. ಇಲ್ಲವಾದಲ್ಲಿ ಮೆಕ್ಸಿಕೊದಿಂದ ಕೆನಡದ ವರೆಗೆ ಸಮುದ್ರ ಮಟ್ಟದ ಒಳನಾಡಿನಲ್ಲಿ ಪ್ರಯಾಣ ಮಾಡುವಲ್ಲಿ ಮಾತ್ರ ಕಂಡುಕೊಳ್ಳುವ ಅದೇ ರೀತಿಯ ಜೀವರೂಪಗಳನ್ನು ಮತ್ತು ಪರಿಸರವನ್ನು, ನೀವು ನಿಮ್ಮ ಈ ಒಂದು ಹತ್ತುವಿಕೆಯಲ್ಲಿಯೇ ಕಾಣಬಲ್ಲಿರಿ!
ಚುರುಕು ಮತ್ತು ಚೈತನ್ಯಗೊಳಿಸುವ ಪರ್ವತದ ಗಾಳಿಯನ್ನು ಸೇವಿಸುವ ಉಲ್ಲಾಸಕರವಾದ ಸಂವೇದನೆಯನ್ನು ನೀವು ಅನುಭವಿಸಿದ್ದೀರೊ? ಈ ಸಂವೇದನೆಗಿರುವ ಒಂದು ವಿವರಣೆಯು ಗಾಳಿಯ ಶಾಖದ ಕಡಮೆ ಮಟ್ಟವಾಗಿದೆ. ಆದರೆ ಸಮೀಪದಲ್ಲಿ ನಗರಗಳಿಲ್ಲದಿರುವಲ್ಲಿ ಪರ್ವತದ ಗಾಳಿ ಹೆಚ್ಚು ತಿಳಿಯಾಗಿಯೂ ಹೆಚ್ಚು ಶುದ್ಧವಾಗಿಯೂ ಇರಬಲ್ಲದು. ಎರಡು ಸಾವಿರ ಮೀಟರ್ಗಳಷ್ಟು ಎತ್ತರದಲ್ಲಿ ಪ್ರತಿ ಕ್ಯೂಬಿಕ್ ಸೆಂಟಿಮೀಟರ್ ಗಾಳಿಯಲ್ಲಿ ದೂಳು, ಪುಷ್ಪಧೂಳಿ, ಇತ್ಯಾದಿಯ 2,500 ಚಿಕ್ಕ ಕಣಗಳಿರುತ್ತವೆ. ಇದನ್ನು ದೊಡ್ಡ ನಗರಗಳ ಗಾಳಿಗೆ ಹೋಲಿಸಿರಿ. ಅಲ್ಲಿ ಅದೇ ಗಾತ್ರದ ವಾಯುಸ್ಥಳದಲ್ಲಿ ದೂಳಿನ 1,50,000 ಚಿಕ್ಕ ಕಣಗಳಿರಬಲ್ಲದು! ಆಧುನಿಕ ಸಮೀಕ್ಷಾ ಮಂದಿರಗಳನ್ನು ಅನೇಕ ವೇಳೆ ಬೆಟ್ಟಗಳ ಮೇಲೆ ಏಕೆ ಕಟ್ಟಲಾಗುತ್ತವೆಂಬುದನ್ನು ಇದು ವಿವರಿಸುತ್ತದೆ. ಏಕೆಂದರೆ ಅಲ್ಲಿ ತಿಳಿಯಾದ ಒಣಗಾಳಿಯು ಖಗೋಳೀಯ ಸಮೀಕ್ಷೆಗೆ ಆದರ್ಶ ಪರಿಸ್ಥಿತಿಗಳನ್ನು ಒದಗಿಸುತ್ತವೆ.
ಎಲ್ಲಿ ವಾಯುಮಂಡಲದ ಒತ್ತಡ ಮತ್ತು ಆಮ್ಲಜನಕದ ಮಟ್ಟ ಕುಸಿಯುತ್ತದೋ, ಸೂರ್ಯ ವಿಕಿರಣ ಮೇಲೇರುತ್ತದೋ, ಚಂಡಮಾರುತ ಶಕ್ತಿಯ ಗಾಳಿ ಶಾಖವನ್ನು ಕೆಳಗಿಳಿಸುತ್ತದೋ ಅಂತಹ ಎತ್ತರ ಪ್ರದೇಶಗಳಲ್ಲಿ ಪರ್ವತಗಳು ಅಷ್ಟೊಂದು ಆಶ್ರಯಕೊಡುವ ಸ್ವಭಾವದವುಗಳಾಗಿರುವುದಿಲ್ಲ. ಆಶ್ಚರ್ಯಕರವಾಗಿ, ಇಂತಹ ಪರಿಸ್ಥಿತಿಗಳಡಿಯಲ್ಲಿಯೂ ಹಲವು ಜೀವರಾಶಿಗಳು ಪಟ್ಟುಹಿಡಿದು ಏಳಿಗೆ ಹೊಂದುತ್ತವೆ. ಉದಾಹರಣೆಗೆ, ಸಾಲಿಸ್ಟಿಡ್ ಅಥವಾ ಹಾರುವ ಜೇಡರ ಹುಳುವನ್ನು ಪರಿಗಣಿಸಿರಿ. ಈ ಪರ್ವತವಾಸಿಯು ಹಿಮಾಲಯದಲ್ಲಿ 6,000 ಮೀಟರ್ಗಳಿಗೂ ಹೆಚ್ಚು ಎತ್ತರದಲ್ಲಿ ಹಾಯಾಗಿದ್ದಾನೆ! ಈ ಜೀವಿ ಹೇಗೆ ಬದುಕಿ ಉಳಿಯುತ್ತದೆಂದು ವಿಜ್ಞಾನಿಗಳಿಗೆ ತೀರ ಸ್ಪಷ್ಟವಾಗಿಗಿರುವುದಿಲ್ಲ.
ಮನುಷ್ಯನ ಮೇಲೆ ಪರಿಣಾಮಗಳು
ಪರ್ವತಗಳು ಸರ್ವ ಮಾನವಕುಲದ ಮೇಲೆ ಪರಿಣಾಮ ಬೀರುತ್ತವೆ. ಉದಾಹರಣೆಗೆ, ಒಂದು ಲೋಕ ಭೂಪಟವನ್ನು ನೋಡಿರಿ. ಅಲ್ಲಿ 3,000 ಮೀಟರುಗಳಿಗೂ ಮಿಕ್ಕಿರುವ ಶಿಖರಗಳ ಪಿರನೀಸ್ ಪರ್ವತಗಳು ಸ್ಪೆಯ್ನನ್ನು ಫ್ರಾನ್ಸ್ ಮತ್ತು ಬಾಕಿ ಯೂರೋಪಿನಿಂದ ಹೇಗೆ ಪ್ರತ್ಯೇಕಿಸುತ್ತವೆಂದು ನೋಡಿರಿ. ಇದೇ ರೀತಿ ಇನ್ನು ಅನೇಕ ರಾಜಕೀಯ ಮೇರೆಗಳು ದೊಡ್ಡ ಪರ್ವತ ಶ್ರೇಣಿಗಳಲ್ಲಿ ಎಳೆಯಲ್ಪಟ್ಟಿರುವುದನ್ನು ನೀವು ನೋಡುವಿರಿ. ಈ ಕದಲದ ತಡೆಗಳು ವಿಭಿನ್ನ ಭಾಷೆಗಳ ಮತ್ತು ವಾಡಿಕೆಗಳ ಜನರ ಮಧ್ಯೆ ಪ್ರಯಾಣ ಮತ್ತು ವ್ಯಾಪಾರವನ್ನು ಪರಿಮಿತಗೊಳಿಸಿದೆ. ಹೀಗೆ ಪರ್ವತಗಳ ಇರವು, ನೀವು ಜೀವಿಸುವ ದೇಶದ ಆಕಾರ ಮತ್ತು ಗಾತ್ರ, ನೀವು ಆಡುವ ಭಾಷೆ, ಮತ್ತು ನಿಮ್ಮ ದೇಶದ ಪದ್ಧತಿಗಳ ಮೇಲೆ ಮಾರ್ಪಡಿಸುವ ಪ್ರಭಾವವನ್ನು ಬೀರಿರುವುದು ಸಂಭವನೀಯ.
ಉನ್ನತ ಪರ್ವತಗಳು ಗಾಳಿಯ ಹರಿವನ್ನೂ ಮುರಿಯುತ್ತವೆ. ಇದು ಮಳೆಯ, ಹಿಮದ, ಗಾಳಿಯ ಮತ್ತು ಶಾಖದ ಕಾಲಚಕ್ರಗಳ ಮೇಲೆ ಪ್ರಭಾವ ಬೀರಬಲ್ಲದು. ಇದು ಸರದಿಯಾಗಿ, ನೀವು ಆನಂದಿಸುವ ಆಹಾರದ ವಿವಿಧತೆ, ನೀವು ಉಡುವ ಬಟ್ಟೆಗೆಳ ವಿಧ, ಮತ್ತು ಪ್ರಾಯಶಃ ನಿಮ್ಮ ಮನೆಯ ವಾಸ್ತುಶಿಲ್ಪೀಯ ವಿನ್ಯಾಸವನ್ನು ಸಹ ಪ್ರಭಾವಿಸಬಲ್ಲದು.
ದೃಷ್ಟಾಂತಕ್ಕೆ, ಕೂನ್ಲೂನ್, ಟೀಅನ್ ಶಾನ್, ಹಿಂದೂ ಕುಶ್, ಹಿಮಾಲಯ ಮತ್ತು ಮಧ್ಯ ಏಷಿಯದ ಇತರ ಪರ್ವತ ಶ್ರೇಣಿಗಳು ಪೂರ್ವದಿಂದ ಪಶ್ಚಿಮಕ್ಕೆ ಹೋಗುತ್ತವೆ. ಈ ಮೌನಿ ದೈತ್ಯ ಶ್ರೇಣಿಗಳು ಸೈಬೀರಿಯದಿಂದ ಚಳಿ, ಒಣಗಾಳಿ ಬೀಸುವುದನ್ನು ತಡೆದು ಹಿಂದೂ ಸಾಗರದಿಂದ ಬೆಚ್ಚಗೆನ, ಪಸೆಯಿರುವ ಗಾಳಿ ಬೀಸುವುದನ್ನು ತಡೆಯುತ್ತದೆ. ಹೀಗೆ ಈ ಪರ್ವತಗಳ ಉತ್ತರಕ್ಕೆ ದಕ್ಷಿಣಕ್ಕಿಂತ, ಲಕ್ಷಾಂತರ ಜನರನ್ನು ಪ್ರಭಾವಿಸುವ ತೀರ ಭಿನ್ನವಾದ ಹವಾಮಾನವಿದೆ.
ಹಾನಿಗೊಳಪಟ್ಟಿರುವ ಪರಿಸರ?
ಆಶ್ಚರ್ಯಕರವಾಗಿ, ಮಾನವಕುಲವು ಪರ್ವತಗಳ ಸೌಂದರ್ಯವನ್ನೂ ಭವ್ಯತೆಯನ್ನೂ ಹಾನಿಗೊಳಪಡಿಸುತ್ತಿದೆ. ಆ್ಯಲ್ಪ್ಸ್ನಲ್ಲಿ ಒಮ್ಮೆ ಅಲೆದಾಡುತ್ತಿದ್ದ ಲಿಂಕ್ಸ್ ಬೆಕ್ಕು ಮತ್ತು ಕರಡಿಗಳು ಅನಿಯಂತ್ರಿತ ಬೇಟೆಯ ಕಾರಣ ಇಲ್ಲದೆ ಹೋಗಿವೆ. ಅರಣ್ಯನಾಶದ ಪರಿಣಾಮವಾಗಿ ಅನೇಕ ಇಳುಕಲುಗಳಿಂದ ಅಮೂಲ್ಯವಾದ ಮೇಲ್ಮಣ್ಣನ್ನು ನೀರು ಕೊಚ್ಚಿಕೊಂಡು ಹೋಗುತ್ತದೆ. ಉದ್ಯಮಗಳಿಂದಾಗುವ ಮಾಲಿನ್ಯ ಮತ್ತು ಭಾರೀ ಪ್ರವಾಸೋದ್ಯಮ ಸಹ ಕೆಲವು ಪರ್ವತ ಪ್ರದೇಶಗಳ ಸೂಕ್ಷ್ಮ ಜೀವಿಪರಿಸ್ಥಿತಿ ಸಮತೋಲದ ಮೇಲೆ ತೀಕ್ಷೈ ಪ್ರಭಾವವನ್ನು ಹಾಕುತ್ತವೆ.
ಸಂತೋಷಕರವಾಗಿ, ಪರ್ವತಗಳು ಭೂದೃಶ್ಯದ ಕಾಯಂ ರೂಪಗಳು. (ಹೋಲಿಸಿ ಆದಿಕಾಂಡ 49:26.) ಬೈಬಲು ಬರಲಿರುವ ಹೊಸ ಲೋಕ ಸರಕಾರವನ್ನು ಒಂದು ಬೆಟ್ಟಕ್ಕೆ ಹೋಲಿಸಿರುವುದು ಗಮನಾರ್ಹ. ಭೂಮಿಯನ್ನು ತುಂಬುತ್ತಾ, ಈ ಪರ್ವತಸದೃಶ ಸರಕಾರವು ಈ ಗ್ರಹಕ್ಕೆ ಆಗಿರುವ ಯಾವುದೇ ಹಾನಿಯನ್ನು ದುರಸ್ತು ಮಾಡುವುದು. (ದಾನಿಯೇಲ 2:35, 44, 45) ಹೀಗೆ ಸೃಷ್ಟಿಯ ಈ ಅನುಪಮ ಕೃತಿಗಳಲ್ಲಿ ಸದಾ ಆನಂದಿಸುವ ಆಶ್ವಾಸನೆ ನಮಗಿದೆ. (g94 10⁄8)
[ಪುಟ 20 ರಲ್ಲಿರುವ ಚಿತ್ರ]
ಫ್ರಾನ್ಸ್ನಲ್ಲಿ ಮಾನ್ ಬ್ಲಾನ್, 4,810 ಮೀಟರ್ಗಳು
[ಕೃಪೆ]
M. Thonig/H. Armstrong Roberts
[ಪುಟ 22 ರಲ್ಲಿರುವ ಚಿತ್ರ]
ಜಪಾನಿನಲ್ಲಿ ಮೌಂಟ್ ಫ್ಯೂಜಿ, 3,778 ಮೀಟರ್ಗಳು
[ಕೃಪೆ]
A. Tovy/H. Armstrong Roberts