ಪ್ರಶ್ನಾ ಪೆಟ್ಟಿಗೆ
● ಎರಡು ಅಥವಾ ಹೆಚ್ಚು ವಿವಿಧ-ಭಾಷಾ ಸಭೆಗಳು ಒಂದೇ ಟೆರಿಟೆರಿಯಲ್ಲಿ ಸೇವೆ ಮಾಡುವಾಗ ಯಾವ ಸಂಗತಿಗಳನ್ನು ಮನಸ್ಸಿನಲ್ಲಿಡಬೇಕು?
ನಮ್ಮ ರಾಜ್ಯದ ಸೇವೆಯ ಎಪ್ರಿಲ್ 1984ರ ಸಂಚಿಕೆಯು, “ಸುವಾರ್ತೆಯನ್ನು ನೀಡುವುದು”ರ ಕೆಳಗೆ ಹೇಳಿದ್ದು: “ಪ್ರತಿ ಸಭೆಯ ಪ್ರಚಾರಕರು ತಮ್ಮ ಪ್ರಯತ್ನಗಳನ್ನು ತಮ್ಮ ಸ್ವಂತ ವಿಶಿಷ್ಟ ಭಾಷಾ ಗುಂಪಿಗೆ ಕೇಂದ್ರೀಕರಿಸಬೇಕು. ಬಹು ಭಾಷಾ ಕ್ಷೇತ್ರಗಳಲ್ಲಿ ಸೇವೆ ಮಾಡುವ ಸಭೆಗಳು ತಮ್ಮ ಪ್ರಚಾರಕರು ಸಂದರ್ಶಿಸ ಬಾರದಾದ ಮನೆಗಳ ಮತ್ತು ಕೊಟಡಿಗಳ ಒಂದು ಪಟ್ಟಿಯನ್ನು ಮಾಡುವುದನ್ನು ಸಹಾಯಕಾರಿಯಾಗಿ ಕಾಣಬಹುದು. ಟೆರಿಟೆರಿಯನ್ನು ಪೂರ್ಣವಾಗಿ ಆವರಿಸಲು ಮತ್ತು ಆಸಕ್ತ ಜನರನ್ನು ತಕ್ಕದಾದ್ದ ಸಭೆಗೆ ಮಾರ್ಗದರ್ಶಿಸಲು ಪರಸ್ಪರ ಸ್ವೀಕರಣೀಯವಾದ ಏರ್ಪಾಡನ್ನು ಮಾಡುವುದು ಸಂಬಂಧಿತ ಸಭೆಯ ಸೇವಾ ಮೇಲ್ವಿಚಾರಕರ ಜವಾಬ್ದಾರಿಯು. ವಿವಿಧ ಭಾಷಾ ಸಭೆಗಳ ಪ್ರಚಾರಕರಿಂದ ಪ್ರಾಯಶಃ ಅದೇ ಬೆಳಿಗ್ಗೆ ಯಾ ಮಧ್ಯಾಹ್ನ, ಮನೆಯವರು ಅನಾವಶ್ಯಕವಾಗಿ ತೊಂದರೆ ಪಡದಂತೆ ತಡೆಯಲು ಇದನ್ನು ಮಾಡತಕ್ಕದ್ದು. “ಕ್ರಿಸ್ತನ ಸುವಾರ್ತೆಗೆ ಅಡ್ಡಿ ಮಾಡಲು” ನಾವು ಬಯಸಲಾರೆವು.—1 ಕೊರಿ. 9:12.
ಜನರು ಸ್ಥಳಾಂತರಿಸುವ ಕಾರಣ ಬದಲಾವಣೆಗಳನ್ನು ಮಾಡುವ ಅಗತ್ಯವಿರುವಾಗ ಆಸಕ್ತ ಜನರ ಹೆಸರು ಮತ್ತು ವಿಳಾಸಗಳನ್ನು ತಕ್ಕದಾದ್ದ ಸಭೆಗೆ ಬೇಗನೇ ದಾಟಿಸಿರಿ. ಟೆರಿಟೆರಿ ರೆಕಾರ್ಡ್ಸ್ನ್ನು ಹೊಸತಾಗಿಡಲು ಇದು ಸಹಾಯಕಾರಿ. ಪ್ರೀತಿ, ಪರಸ್ಪರ ಗಮನ, ತಿಳುವಳಿಕೆ, ಸಮಂಜಸ್ವತ ಮತ್ತು ಸಹಕಾರವು ಇಲ್ಲಿ ಅತ್ಯಾವಶ್ಯಕ.—ಫಿಲಿ.4:5.
ಬೀದಿ ಸಾಕ್ಷಿ, ಅನೌಪಚಾರಿಕ ಸಾಕ್ಷಿ, ಮುಂತಾದವುಗಳನ್ನು ನಡಿಸುವಾಗ ಪ್ರಚಾರಕರು ಬೇರೆ ಬೇರೆ ಭಾಷೆಗಳ ಲಿಟ್ರೇಚರ್ ಒಯ್ಯಬಹುದು. ಆದರೆ ಮನೆ ಮನೆಯ ಸೇವೆಮಾಡುವಾಗ, ಎರಡು ಅಥವಾ ಹೆಚ್ಚು ಸಭೆಗಳಿಂದ ಸೇವೆಮಾಡಲ್ಪಡುವ ಕ್ಷೇತ್ರದಲ್ಲಿ ಸಾಮಾನ್ಯವಾಗಿ, ನಮ್ಮ ಸ್ವಂತ ಸಭೆಯ ಭಾಷೆಯ ಮೇಲೆ ಏಕಾಗ್ರತೆಯನ್ನಿಡುವೆವು. ಎಲ್ಲಿ ಈ ಸಮಸ್ಯೆ ಇದೆಯೋ ಅಲ್ಲಿ ಕ್ಷೇತ್ರಗಳು ಭಾಷೆಗನುಸಾರ ಏರ್ಪಡಿಸಲ್ಪಡುವವೆಂದು ನೆನಪಿಡಿರಿ, ಈ ಮೂಲಕ ಪುಸ್ತಕ ನೀಡುವ ಪ್ರಚಾರಕರು ಆಸಕ್ತ ಮನೆಯವನನ್ನು ಅವನಿಗೆ ಚೆನ್ನಾಗಿ ಗೊತ್ತಿರುವ ಅಥವಾ ಅವನು ಇಷ್ಟೈಸುವ ಭಾಷೆಯಲ್ಲಿ ನಡೆಯುವ ಸಭಾ ಕೂಟಗಳಿಗೆ ನಡಿಸಲೂ ಸಾಧ್ಯವಿದೆ.
ಕೆಲವು ಸಾರಿ ನಮ್ಮ ಪ್ರಯತ್ನಗಳು ತುಸು ಮೇಲುಸೇರುವೆಯಾಗುತ್ತವೆ. ಆದರೆ ಮೇಲೆ ಸೂಚಿಸಿದ ಲೇಖನದಲ್ಲಿ ತಿಳಿಸಿದ ಪ್ರಕಾರ, “ಸಾರುತ್ತಾ ಇರುವಾಗ ನಮ್ಮ ಉದ್ದೇಶವು ಶಿಷ್ಯರನ್ನಾಗಿ ಮಾಡುವುದು—ಸತ್ಯವನ್ನು ಕಲಿಸುವುದೇ ಎಂಬದನ್ನು ಮುಖ್ಯವಾಗಿ ನಮ್ಮ ಮನಸ್ಸಲಿಡ್ಲತಕ್ಕದ್ದು. (ಮತ್ತಾಯ 28:19, 20) ಜನರು ಚೆನ್ನಾಗಿ ತಿಳಿಯುವ ಭಾಷೆಯಲ್ಲಿ ಕಲಿಸುವಿಕೆಯು ಮಾಡಲ್ಪಡಬೇಕು. (1 ಕೊರಿ. 14:9) ” ನಾವು ಹಾಜರಾಗುವ ಸಭೆಯ ಭಾಷೆಯನ್ನು ಚೆನ್ನಾಗಿ ತಿಳಿದಿರುವ ಯಾ ಇಷ್ಟೈಸುವ ಜನರ ಮೇಲೆ ನಮ್ಮ ಶುಶ್ರೂಷೆಯನ್ನು ಕೇಂದ್ರೀಕರಿಸುವ ಮೂಲಕ ಇನ್ನೂ ಹೆಚ್ಚು ಮಂದಿಗೆ ರಕ್ಷಣೆ ಪಡೆಯಲು ನೆರವಾಗುವುದರಲ್ಲಿ ಎಷ್ಟೋ ಒಳ್ಳಿತನ್ನು ನಾವು ಪೂರೈಸಬಹುದು.