ಬೈಬಲಿನಲ್ಲಿರುವ ರತ್ನಗಳು | ಎಜ್ರ 6-10
ಯೆಹೋವನಿಗೆ ತನ್ನನ್ನು ಇಷ್ಟಪೂರ್ವಕವಾಗಿ ಸೇವಿಸುವ ಸೇವಕರು ಬೇಕು
ಎಜ್ರನು ಯೆರೂಸಲೇಮಿಗೆ ಹಿಂದಿರುಗಲು ತಯಾರಿ ಮಾಡಿಕೊಂಡನು
ಯೆರೂಸಲೇಮಿಗೆ ಹಿಂದಿರುಗಿ, ಯೆಹೋವನ ಆರಾಧನೆಯನ್ನು ಪುನಸ್ಸ್ಥಾಪಿಸಲು ರಾಜ ಅರ್ತಷಸ್ತನಿಂದ ಎಜ್ರ ಅನುಮತಿ ಪಡೆದನು
ಯೆಹೋವನ ದೇವಾಲಯವನ್ನು ಕಟ್ಟಲು ರಾಜನು ಎಜ್ರನಿಗೆ “ಇಷ್ಟವಾದದ್ದನ್ನೆಲ್ಲಾ” ಅಂದರೆ ಚಿನ್ನ, ಬೆಳ್ಳಿ, ಗೋಧಿ, ದ್ರಾಕ್ಷಾಮದ್ಯ, ಎಣ್ಣೆ ಮತ್ತು ಉಪ್ಪನ್ನು ಕೊಟ್ಟನು. ಅವೆಲ್ಲವುಗಳ ಒಟ್ಟು ಬೆಲೆಯನ್ನು ನಮ್ಮ ದಿನಗಳಿಗೆ ಹೋಲಿಸಿದರೆ ಅದು ಸುಮಾರು 600ಕೋಟಿ ರೂಪಾಯಿಯಷ್ಟಾಗುತ್ತದೆ
ಯೆಹೋವನು ತನ್ನ ಸೇವಕರನ್ನು ಸಂರಕ್ಷಿಸುತ್ತಾನೆಂದು ಎಜ್ರನಿಗೆ ನಂಬಿಕೆ ಇತ್ತು
ಯೆರೂಸಲೇಮಿಗೆ ಹಿಂದಿರುಗುವುದು ಕಷ್ಟದ ಕೆಲಸವಾಗಿತ್ತು
ಪ್ರಯಾಣಿಸಬೇಕಾಗಿದ್ದ ದಾರಿ ಹತ್ತಿರತ್ತಿರ 1,000 ಮೈಲಿಯಷ್ಟಿದ್ದು (1,600 ಕಿ.ಮೀ.) ತುಂಬ ಅಪಾಯಕಾರಿಯಾಗಿತ್ತು
ಪ್ರಯಾಣಕ್ಕೆ ಸುಮಾರು 4 ತಿಂಗಳು ತಗುಲಿತು
ಯೆರೂಸಲೇಮಿಗೆ ಹಿಂದಿರುಗಿದವರಿಗೆ ಬಲವಾದ ನಂಬಿಕೆ, ಸತ್ಯಾರಾಧನೆಗಾಗಿ ಹುರುಪು ಮತ್ತು ಧೈರ್ಯ ಇರಬೇಕಾಗಿತ್ತು
ಎಜ್ರನು ಪ್ರಯಾಣಿಸುವಾಗ ಕೊಂಡೊಯ್ದ ಚಿನ್ನ ಮತ್ತು ಬೆಳ್ಳಿ . . .
750 ತಲಾಂತುಗಳಿಗಿಂತ ಹೆಚ್ಚಿನ ತೂಕದ್ದಾಗಿತ್ತು ಅಥವಾ ಸಂಪೂರ್ಣ ಬೆಳವಣಿಗೆಯಾಗಿರುವ ಆಫ್ರಿಕಾದ ಸುಮಾರು 3 ಗಂಡು ಆನೆಗಳ ತೂಕದಷ್ಟಿತ್ತು!
ಯೆರೂಸಲೇಮಿಗೆ ಹಿಂದಿರುಗಿದವರು ಎದುರಿಸಿದ ಸವಾಲುಗಳು
ಸುಲಿಗೆ ಮಾಡುವವರ ಆಕ್ರಮಣ, ಮರುಭೂಮಿ ಪ್ರದೇಶ, ಕಾಡಿನ ಕ್ರೂರ ಜೀವಿಗಳು