ದೇವರ ಶಾಶ್ವತೋದ್ದೇಶಗಳನ್ನೂಳಗೊಂಡಿರುವ ಒಡಂಬಡಿಕೆಗಳು
“ಯೆಹೋವನು. . . . ತನ್ನ ವಾಗ್ದಾನವನ್ನು ಸಾವಿರ ತಲೆಗಳವರೆಗೂ ತನ್ನ ಒಡಂಬಡಿಕೆಯನ್ನು ನಿತ್ಯವೂ ನೆನಪಿನಲ್ಲಿಟ್ಟುಕೊಳ್ಳುತ್ತಾನೆ.”—ಕೀರ್ತನೆ 105:7,8.
1, 2. ನಮ್ಮಲ್ಲಿ ಹೆಚ್ಚಿನವರ ಮೇಲೆ ಒಂದು ಒಡಂಬಡಿಕೆ ಪರಿಣಾಮ ಬೀರಿದೆಯೆಂದು ನಾವೇಕೆ ಹೇಳಬಲ್ಲಿವು?
ಬಹು ಮಟ್ಟಿಗೆ ಒಡಂಬಡಿಕೆ ನಿಮ್ಮ ಮೇಲೆ ನಿಮ್ಮ ಗತ, ವರ್ತಮಾನ ಮತ್ತು ಭವಿಷ್ಯತ್ತಿನ ಮೇಲೆ ಪರಿಣಾಮ ಬೀರಿದೆ. ‘ಇದ್ಯಾವ ಒಡಂಬಡಿಕೆ?’ ಎಂದು ನೀವು ಕೇಳಬಹುದು. ಇಲ್ಲಿ ನಾವು ವಿವಾಹದ ವಿಷಯ ಮಾತಾಡುತ್ತೇವೆ. ಏಕೆಂದರೆ ನಮ್ಮಲ್ಲಿ ಹೆಚ್ಚಿನವರು ವಿವಾಹದ ಫಲವಾಗಿ ಹುಟ್ಟಿದವರಲ್ಲದೆ ಅನೇಕರು ವಿವಾಹಿತರೂ ಆಗಿದ್ದೇವೆ. ಮತ್ತು ಇದುವರೆಗೆ ವಿವಾಹವಾಗದಿರುವವರು ಪ್ರಾಯಶಃ ಭವಿಷ್ಯತ್ತಿನಲ್ಲಿ ಸಂತೋಷದ ವಿವಾಹದ ಆಶೀರ್ವಾದಗಳ ಕುರಿತು ಯೋಚಿಸುತ್ತಿರಬಹುದು.
2 ಅನೇಕ ಶತಕಗಳ ಹಿಂದೆ ಹಿಬ್ರೂ ಪ್ರವಾದಿ ಮಲಾಕಿಯನು “ಯೌವನದ ಹೆಂಡತಿ” ಮತ್ತು ಸಹಚಾರಿಣಿಯೂ ನಿನ್ನ ಒಡಂಬಡಿಕೆಯ ಪತ್ನಿ”—ಇದರ ಕುರಿತು ಬರೆದನು. (ಮಲಾಕಿಯ 2:14-16) ಅವನು ವಿವಾಹವನ್ನು ಒಡಂಬಡಿಕೆಯೆಂದು ಕರೆಯ ಸಾಧ್ಯವಿತ್ತು, ಏಕೆಂದರೆ ಇದೊಂದು ಕರಾರು. ವಿಧಿವಿಹಿತವಾದ ಒಪ್ಪಂದ, ಎರಡು ಪಕ್ಷಗಳು ಕೂಡಿ ಏನೋ ಮಾಡುವ ವ್ಯವಸ್ಥೆಯಾಗಿದೆ. ವಿವಾಹ ಕರಾರು ದ್ವಿಪಾರ್ಶ್ವಕ ಒಡಂಬಡಿಕೆಯಾಗಿದೆ. ಇದರಲ್ಲಿ ಉಭಯ ಪಕ್ಷಗಳು ಪತಿ, ಪತ್ನಿಗಳಾಗಲು ಸಮ್ಮತಿಸಿ ಪರಸ್ಪರ ಹೊಣೆಗಾರಿಕೆಗಳನ್ನು ಅಂಗೀಕರಿಸಿ ಬಾಳಿಕೆ ಬರುವ ಪ್ರಯೋಜನಗಳನ್ನು ಮುನ್ನೋಡುತ್ತಾರೆ.
3. ಇತರ ಒಡಂಬಡಿಕೆಗಳು ವಿವಾಹಕ್ಕಿಂತಲೂ ಹೆಚ್ಚು ನಮಗೇಕೆ ತಟ್ಟಬಹುದು?
3 ವಿವಾಹವು ವೈಯಕ್ತಿಕವಾಗಿ ನಮಗೆ ಕಟ್ಟುವ ಅತ್ಯಂತ ಮಹತ್ವದ ಒಡಂಬಡಿಕೆಯೆಂದು ಕಂಡು ಬರಬಹುದಾದರೂ ಇದಕ್ಕೂ ವ್ಯಾಪಕವಾಗಿ ಮಹತ್ವವುಳ್ಳ ಒಡಂಬಡಿಕೆಗಳನ್ನು ಬೈಬಲೇತರ ಧರ್ಮಗಳ ಒಡಂಬಡಿಕೆಗಳೊಂದಿಗೆ ಹೋಲಿಸುತ್ತಾ ಒಂದು ವಿಶ್ವಕೋಶ ಹೇಳುವುದೇನೆಂದರೆ ಬೈಬಲಿನಲ್ಲಿ ಮಾತ್ರ “ದೇವರ ಮತ್ತು ಆತನ ಜನರ ಮಧ್ಯೆ ಆಜ್ಞಾಪಿತ ಸಂಬಂಧವು ಅಂತಿಮವಾಗಿ ಸಾರ್ವಲೌಕಿಕ ಅರ್ಥದ ಗ್ರಾಹಕ ಪದ್ಧತಿಯಾಗಿ ಪರಿಣಮಿಸುತ್ತದೆ.” ಹೌದು, ಈ ಒಡಂಬಡಿಕೆಗಳು ನಮ್ಮ ಪ್ರಿಯ ಸೃಷ್ಟಿಕರ್ತನ ಶಾಶ್ವತೋದ್ದೇಶಗಳನ್ನು ಒಳಗೊಂಡಿವೆ. ನೀವು ಮುಂದೆ ನೋಡಲಿರುವಂತೆ ನೀವು ಪಡೆಯುವ ಅಗಣಿತ ಆಶೀರ್ವಾದಗಳು ಈ ಒಡಂಬಡಿಕೆಗಳಲ್ಲಿ ಅಡಕವಾಗಿವೆ. ‘ಆದರೆ ಇದು ಹೇಗೆ?’ ಎಂದು ಕೇಳಲು ಕಾರಣ ನಿಮಗಿದೆ.
4. ಯಾವ ಮೊದಲಿನ ಒಡಂಬಡಿಕೆ ದೇವರ ನಿತ್ಯೋದ್ದೇಶವನ್ನು ತೋರಿಸುತ್ತದೆ?
4 ಆದಾಮ, ಹವ್ವರು ದೇವರ ಅಧಿಕಾರವನ್ನು ನಿರಾಕರಿಸಿದಾಗ ಬಂದ ದುಖಃಕರವಾದ ಫಲಿತಾಂಶಗಳು ನಿಮಗೆ ಚೆನ್ನಾಗಿ ತಿಳಿದಿವೆ. ನಾವು ಅವರಿಂದ ಅಪೂರ್ಣತೆಯನ್ನು ಬಾಧ್ಯತೆಯಾಗಿ ಪಡೆದೆವು. ಮರಣಕ್ಕೆ ನಡೆಸುವ ಕಾಯಿಲೆಗಳನ್ನು ನಾವು ಅನುಭವಿಸುವುದರ ಹಿಂದೆ ಈ ನಿಜತ್ವ ಅಡಕವಾಗಿದೆ. (ಆದಿಕಾಂಡ 3:1-6, 14-19) ಆದರೂ ಅವರ ಪಾಪ, ಬಾಳುವ ಆರೋಗ್ಯ ಮತ್ತು ಸಂತೋಷದಿಂದ ಸತ್ಯಾರಾಧಕರು ಭೂಮಿಯನ್ನು ತುಂಬಬೇಕೆಂದು ದೇವರ ಉದ್ದೇಶವನ್ನು ಕೆಡಿಸಲಿಲ್ಲವೆಂಬುದಕ್ಕೆ ನಾವು ಆಭಾರಿಗಳಾಗಿರಬಲ್ಲಿವು. ಈ ಸಂಬಂಧದಲ್ಲಿ, ಆದಿಕಾಂಡ 3:15ರಲ್ಲಿ ದಾಖಲೆಯಾಗಿರುವ ಒಡಂಬಡಿಕೆಯನ್ನು ಯೆಹೋವನು ಮಾಡುದನು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವುದು. ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” ಆದರೂ ಈ ಹೇಳಿಕೆಯ ಸಂಕ್ಷೇಪ ರೂಪ ಮತ್ತು ಸಾಂಕೇತಿಕ ಭಾಷೆಯು ಅನೇಕ ಪ್ರಶ್ನೆಗಳಿಗೆ ಉತ್ತರ ಕೊಡದೆ ಬಿಟ್ಟಿತು. ಹಾಗಾದರೆ ಯೆಹೋವನು ಈ ಒಡಂಬಡಿಕೆಯ ವಚನವನ್ನು ಹೇಗೆ ನೆರವೇರಿಸಲಿದ್ದನು?
5, 6. (ಎ). ತನ್ನ ಉದ್ದೇಶವನ್ನು ಸಾಧಿಸಲು ದೇವರು ಯಾವ ಮಾಧ್ಯಮವನ್ನು ಉಪಯೋಗಿಸಿದನು? (ಬಿ) ಇದನ್ನು ಮಾಡುವ ದೇವರ ಮಾಧ್ಯಮದ ಸಂಬಂಧದಲ್ಲಿ ನಾವೇಕೆ ಆಸಕ್ತಿಯುಳ್ಳವರಾಗಿರಬೇಕು?
5 ದೇವರು ದೈವಿಕ ಕರಾರುಗಳ ಒಂದು ನಿರ್ದಿಷ್ಟ ಶ್ರೇಣಿಯ ಏರ್ಪಾಡನ್ನು ಮಾಡಲು ನಿರ್ಣಯಿಸಿದನು. ಈ ಪರಂಪರೆಯಲ್ಲಿ ಏದೆನಿನ ಒಡಂಬಡಿಕೆ ಸೇರಿ ಒಟ್ಟು ಏಳು ಒಡಂಬಡಿಕೆಗಳಿವೆ. ನಮ್ಮಲ್ಲಿ ನಿತ್ಯಾಶೀರ್ವಾದಗಳನ್ನು ಅನುಭವಿಸಲು ಬಯಸುವ ಪ್ರತಿಯೋರ್ವನು ಈ ಒಡಂಬಡಿಕೆಗಳ ತಿಳುವಳಿಕೆ ಪಡೆಯಬೇಕು. ಇದರಲ್ಲಿ, ಅವು ಯಾವಾಗ ಮತ್ತು ಹೇಗೆ ಮಾಡಲ್ಪಟ್ಟವು, ಅವುಗಳಲ್ಲಿ ಯಾರು ಸೇರಿಕೊಂಡಿದ್ದರು. ಅವುಗಳ ಗುರಿ ಆಥವಾ ಷರತ್ತುಗಳೇನು ಮತ್ತು ವಿಧೇಯ ಮಾನವ ಕುಲವನ್ನು ಅನಂತ ಜೀವನದಿಂದ ಆಶೀರ್ವದಿಸುವ ದೇವರ ಉದ್ದೇಶದಲ್ಲಿ ಈ ಒಡಂಬಡಿಕೆಗಳು ಪರಸ್ಪರವಾಗಿ ಹೇಗೆ ಸಂಬಂಧಿತವಾಗಿವೆ ಎಂದು ತಿಳಿಯುವುದು ಸೇರಿದೆ. ಈ ಒಡಂಬಡಿಕೆಗಳ ಪುನರ್ವಿಮರ್ಶೆಗೆ ಇದು ಉಚಿತವಾದ ಸಮಯ ಏಕೆಂದರೆ ಎಪ್ರಿಲ್ 10, 1990 ರಲ್ಲಿ ಕ್ರೈಸ್ತರ ಸಭೆಗಳು, ಈ ಒಡಂಬಡಿಕೆಗಳಲ್ಲಿ ನೇರವಾಗಿ ಸೇರಿಕೊಂಡಿರುವ ಕರ್ತನ ಸಂಧ್ಯಾಭೋಜನವನ್ನು ಆಚರಿಸಲು ಸೇರಿಬರುತ್ತಾರೆ.
6 ಹೌದು, ಕೆಲವರಿಗೆ ಒಡಂಬಡಿಕೆಗಳ ವಿಚಾರವು ನೀರಸವಾಗಿ, ಅತಿ ಸೂತ್ರತೆಯದ್ದಾಗಿ ಮತ್ತು ಮಾನವ ಆಸಕ್ತಿ ಇಲ್ಲದ್ದಾಗಿ ಕಂಡು ಬರಬಹುದು. ಆದರೆ ಥಿಯಾಲಾಜಿಕಲ್ ಡಿಕ್ಷ್ನರಿ ಆಫ್ ದಿ ಓಲ್ಡ್ ಟೆಸ್ಟಮೆಂಟ್ ಹೇಳುವುದನ್ನು ಚಿಂತಿಸಿರಿ: “ಪ್ರಾಚೀನ ಸಮೀಪ ಪೂರ್ವ ದೇಶಗಳಲ್ಲಿ ಮತ್ತು ಗ್ರೀಕ್ ಮತ್ತು ರೋಮನ್ ಜಗತ್ತುಗಳಲ್ಲಿ ‘ಒಡಂಬಡಿಕೆ’ಯ ಷರತ್ತುಗಳು. . . . ಎರಡು ಶಬ್ದಾರ್ಥ ನಿರ್ವಚನ ಕ್ಷೇತ್ರಗಳಲ್ಲಿ ವಿಂಗಡಿಸಲ್ಪಟ್ಟಿವೆ: ಒಂದು ಕಡೆಯಲ್ಲಿ ಪ್ರಮಾಣ ಮತ್ತು ವಚನಬದ್ಧತೆ; ಮತ್ತು ಇನ್ನೊಂದು ಕಡೆಯಲ್ಲಿ ಪ್ರೀತಿ ಮತ್ತು ಮಿತ್ರತ್ವ.” ನಾವು ಈ ಎರಡೂ ವಿಷಯಗಳನ್ನು ಅಂದರೆ ಪ್ರಮಾಣ ಮತ್ತು ಮಿತ್ರತ್ವಗಳನ್ನು ಯೆಹೋವನ ಒಡಂಬಡಿಕೆಗಳ ಕೇಂದ್ರತ್ವವಾಗಿ ನೋಡಬಲ್ಲಿವು.
ಅಬ್ರಹಾಮನಿಗೆ ಸಂಬಂಧಪಟ್ಟ ಒಡಂಬಡಿಕೆ—ಅನಂತಾಶೀರ್ವಾದಗಳಿಗೆ ಆಧಾರ
7, 8. ಯೆಹೋವನು ಅಬ್ರಹಾಮನೊಂದಿಗೆ ಯಾವ ವಿಧದ ಒಡಂಬಡಿಕೆಯನ್ನು ಮಾಡಿದನು? (1 ಪೂರ್ವಕಾಲವೃತ್ತಾಂತ 16:15,16)
7 “ನಂಬುವವರೆಲ್ಲರಿಗೂ. . . . ಮೂಲತಂದೆ”ಯಾಗಿದ್ದ ಮೂಲಪಿತ ಅಬ್ರಹಾಮನು “ದೇವರ ಸ್ನೇಹಿತ”ನಾಗಿದ್ದನು. (ರೋಮಾಪುರ 4:11; ಯಾಕೋಬ 2:21-23) ದೇವರು ಅವನಿಗೆ ಪ್ರಮಾಣದೊಂದಿಗೆ ಆಣೆಯಿಟ್ಟು ನಾವು ನಿತ್ಯ ಆಶೀರ್ವಾದಗಳನ್ನು ಪಡೆಯಲು ಮೂಲವಾಗಿರುವ ಒಂದು ಒಡಂಬಡಿಕೆಯನ್ನು ಅವನೊಂದಿಗೆ ಮಾಡಿದನು.—ಇಬ್ರಿಯ 6:13-18.
8 ಅಬ್ರಹಾಮನು ಊರ್ನಲ್ಲಿದ್ದಾಗ, ಅವನು ಇನ್ನೊಂದು ದೇಶಕ್ಕೆ, ಆ ಬಳಿಕ ಕಾನಾನ್ ಎಂದು ತಿಳಿದು ಬಂದ ದೇಶಕ್ಕೆ ಹೋಗುವಂತೆ ಯೆಹೋವನು ಹೇಳಿದನು. ಆ ವೇಳೆ ಯೆಹೋವನು ಅಬ್ರಹಾಮನಿಗೆ ವಚನ ಕೊಟ್ಟದ್ದು: “ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸಿ ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. . . . ನಿನ್ನ ಮೂಲಕ ಭೂಮಿಯ ಸಕಲ ಕುಟುಂಬಗಳು ನಿಶ್ಚಯವಾಗಿಯೂ ತಮ್ಮನ್ನು ಹರಸಿಕೊಳ್ಳುವರು.”a (ಆದಿಕಾಂಡ 12:1-3) ಆ ಬಳಿಕ, ನಾವೀಗ ನ್ಯಾಯವಾಗಿಯೇ ಅಬ್ರಹಾಮನಿಗೆ ಸಂಬಂಧಪಟ್ಟ ಒಡಂಬಡಿಕೆಯೆಂದು ಹೇಳುವ ಇದಕ್ಕೆ ದೇವರು ಕ್ರಮೇಣ ವಿವರಣೆಗಳನ್ನು ಕೂಡಿಸಿದನು. ಅದೇನೆಂದರೆ ಅಬ್ರಹಾಮನ ಸಂತಾನ ಅಥವಾ ಉತ್ತರಾಧಿಕಾರಿಯು ವಾಗ್ದಾನ ದೇಶವನ್ನು ಬಾಧ್ಯತೆಯಾಗಿ ಪಡೆಯುವನು. ಅವನ ಸಂತಾನ ಅಗಣಿತವಾಗುವದು. ಅಬ್ರಹಾಮ ಮತ್ತು ಸಾರ ರಾಜರುಗಳ ಉಗಮವಾಗುವರು. —ಆದಿಕಾಂಡ 13:14-17; 15:4-6; 17:1-8; ಕೀರ್ತನೆ 105:8-10.
9. ಅಬ್ರಹಾಮನೊಂದಿಗೆ ಯಾವ ವಿಧದ ಒಡಂಬಡಿಕೆಯಲ್ಲಿ ನಾವೂ ಸೇರಿಕೊಳ್ಳಬಹುದೆಂದು ನಮಗೆ ಹೇಗೆ ಗೊತ್ತು?
9 ದೇವರು ಇದನ್ನು “ನಾನು ನಿನ್ನ (ಅಬ್ರಹಾಮನ) ಸಂಗಡ “ಮಾಡಿದ ಒಡಂಬಡಿಕೆ” ಎಂದು ಕರೆದನು. (ಆದಿಕಾಂಡ 17:2) ಆದರೆ ನಮ್ಮ ಜೀವವೂ ಇದರಲ್ಲಿ ಸೇರಿದೆ ಎಂದು ನಿಶ್ಚಯವಾಗಿಯೂ ಭಾವಿಸಬೇಕು. ಏಕೆಂದರೆ, ದೇವರು ಆ ಬಳಿಕ ಈ ಒಡಂಬಡಿಕೆಯನ್ನು ವಿಸ್ತರಿಸಿ ನುಡಿದುದು: “ನಾನು ನಿನ್ನನ್ನು ನಿಶ್ಚಯವಾಗಿಯೂ ಆಶೀರ್ವದಿಸುವುದಲ್ಲದೆ ನಿನ್ನ ಸಂತಾನವನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದಲ್ಲಿರುವ ಮರಳಿನ ಕಣಗಳಂತೆಯೂ ಬಹುಸಂಖ್ಯಾತವಾಗಿ ಮಾಡುವೆನು; ನಿನ್ನ ಸಂತಾನವಾದವರು ತನ್ನ ವೈರಿಗಳ ದ್ವಾರವನ್ನು ಸ್ವಾಧೀನಮಾಡಿಕೊಳ್ಳುವನು. ಮತ್ತು ನಿನ್ನ ಸಂತಾನದ ಮೂಲಕ ಭೂಮಿಯ ಸಕಲ ಜನಾಂಗಗಳು ನಿಶ್ಚಯವಾಗಿಯೂ ತಮ್ಮನ್ನು ಹರಸಿಕೊಳ್ಳುವರು.” (ಆದಿಕಾಂಡ 22:17,18) ನಾವು ಆ ಜನಾಂಗಗಳ ಭಾಗವಾಗಿದ್ದೇವೆ; ಮತ್ತು ಈ ಆಶೀರ್ವಾದ ನಮಗಾಗಿ ಕಾದಿದೆ.
10. ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆಯಿಂದ ನಾವು ಯಾವ ಒಳನೋಟಗಳನ್ನು ಪಡೆಯುತ್ತೇವೆ.
10 ಅಬ್ರಹಾಮಿಕ ಒಡಂಬಡಿಕೆಯಿಂದ ನಾವೇನು ಕಲಿಯಬಹುದೆಂದು ಯೋಚಿಸಲು ನಾವು ತುಸು ತಡೆಯೋಣ. ಇದಕ್ಕೆ ಮೊದಲಿನ ಏದೆನ್ ಒಡಂಬಡಿಕೆಯಂತೆಯೇ ಅದು ಬರಲಿರುವ “ಸಂತಾನ”ಕ್ಕೆ ಕೈತೋರಿಸಿ ಆ ಸಂತಾನವು ಮಾನವ ಕುಲದಿಂದ ಬರುವದನ್ನು ಸೂಚಿಸುತ್ತದೆ. (ಆದಿಕಾಂಡ 3:15) ಅವನು ಶೇಮನ ವಂಶಪರಂಪರೆಯಿಂದ ಅಬ್ರಹಾಮ ಮತ್ತು ಅವನ ಪುತ್ರ ಇಸಾಕನ ಮೂಲಕ ಬರುವನು. ಈ ವಂಶದಲ್ಲಿ ರಾಜತ್ವವು ಸೇರಿಕೊಂಡಿದ್ದು ಅದು ಹೇಗೋ ಒಂದು ಕುಟುಂಬಕ್ಕೆ ಮಾತ್ರವಲ್ಲ, ಎಲ್ಲಾ ದೇಶಗಳ ಮಾನವರಿಗೆ ಆಶೀರ್ವಾದ ತರುವದು. ಈ ಒಡಂಬಡಿಕೆ ಹೇಗೆ ನೆರವೇರಿತು?
11. ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆಯ ಅಕ್ಷರಾರ್ಥಕವಾದ ನೆರವೇರಿಕೆ ಹೇಗಾಯಿತು?
11 ಯಾಕೋಬ ಅಥವಾ ಇಸ್ರಾಯೇಲಿನ ಮೂಲಕ ಅಬ್ರಹಾಮನ ವಂಶಸ್ಥರು ಬಹುಸಂಖ್ಯಾತರಾಗಿ ಒಂದು ಮಹಾ ಜನಾಂಗವಾದರು. ಅಬ್ರಹಾಮನ ಅಗಣಿತ, ಅಕ್ಷರಾರ್ಥಕ ಸಂತಾನವಾದ ಇವರು ಅಬ್ರಹಾಮ, ಇಸಾಕ ಮತ್ತು ಯಾಕೋಬನ ದೇವರ ಶುದ್ಧಾರಾಧನೆಗೆ ಸಮರ್ಪಿತರಾದರು. (ಆದಿಕಾಂಡ 28:13; ವಿಮೋಚನಾಕಾಂಡ 3:6,15; 6:3; ಅಪೊಸ್ತಲರ ಕೃತ್ಯ 3:13) ಅನೇಕ ವೇಳೆ ಈ ಇಸ್ರಾಯೇಲ್ಯರು ಸತ್ಯಾರಾಧನೆಯಿಂದ ತೊಲಗಿದರೂ ಯೆಹೋವನು “ಅವರನ್ನು. . . . ಹಾಳುಮಾಡಗೊಡಲಿಲ್ಲ. . . . ತಾನು ಅಬ್ರಹಾಮ್ ಇಸಾಕ್ ಯಾಕೋಬರೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ನೆನಸಿ ಅವರಿಗೆ ದಯೆತೋರಿಸಿದನು; ಕರುಳುಮರುಗಿದವನಾಗಿ ಅವರಿಗೆ ಪ್ರಸನ್ನನಾದನು.” (2 ಅರಸು 13:23; ವಿಮೋಚನಾಕಾಂಡ 2:24; ಯಾಜಕಕಾಂಡ 26:42-45)ದೇವರು ಕ್ರೈಸ್ತ ಸಭೆಯನ್ನು ತನ್ನ ಜನವಾಗಿ ಅಂಗೀಕರಿಸಿದ ಬಳಿಕವೂ ಆತನು ಇಸ್ರಾಯೇಲ್ಯರಿಗೆ ಅವರು ಅಬ್ರಹಾಮನ ಅಕ್ಷರಾರ್ಥ ಸಂತಾನವಾಗಿದ್ದುದರಿಂದ ಸ್ವಲ್ಪ ಕಾಲ ವಿಶೇಷ ಅನುಗ್ರಹವನ್ನು ತೋರಿಸಿದನು.—ದಾನಿಯೇಲ 9:27.
ಅಬ್ರಹಾಮನ ಆತ್ಮಿಕ ಸಂತಾನ
12, 13. ಅಬ್ರಹಾಮನ ಆತ್ಮಿಕ ನೆರವೇರಿಕೆಯಲ್ಲಿ ಯೇಸು ಸಂತಾನದ ಪ್ರಧಾನ ಭಾಗವಾಗಿ ಪರಿಣಮಿಸಿದ್ದು ಹೇಗೆ?
12 ಅಬ್ರಹಾಮನಿಗೆ ಸಂಬಂಧಪಟ್ಟ ಈ ಒಡಂಬಡಿಕೆಗೆ ಆತ್ಮಿಕವಾದ ಇನ್ನೊಂದು ನೆರವೇರಿಕೆ ಇತ್ತು. ಯೇಸುವಿನ ಸಮಯಕ್ಕೆ ಮೊದಲು ಈ ಮಹಾನೆರವೇರಿಕೆ ಸುವ್ಯಕ್ತವಾಗಿದ್ದರೂ ನಮ್ಮ ಸಮಯದಲ್ಲಿ ಇದು ಸ್ಪಷ್ಟವಾಗಿರುವದಕ್ಕೆ ನಾವು ಸಂತೋಷಿತರಾಗ ಸಾಧ್ಯವಿದೆ. ನಮಗೆ ಈ ನೆರವೇರಿಕೆಯ ವಿವರವು ದೇವರ ವಾಕ್ಯದಲ್ಲಿದೆ. ಪೌಲನು ಬರೆದುದು: “ಒಳ್ಳೇದು, ದೇವರು ಅಬ್ರಹಾಮನಿಗೂ ಅವನ ಸಂತತಿಗೂ ವಾಗ್ದಾನಗಳನ್ನು ಮಾಡಿದನು. ಆತನು ನಿನ್ನ ಸಂತತಿಗಳಿಗೆ ಎಂದು ಹೇಳಿ ಅನೇಕರನ್ನು ಸೂಚಿಸದೆ ನಿನ್ನ ಸಂತತಿಗೆ ಎಂದು ಹೇಳಿ ಒಬ್ಬನನ್ನೇ ಸೂಚಿಸುತ್ತಾನೆ. ಆ ಒಬ್ಬನು ಕ್ರಿಸ್ತನೇ.” —ಗಲಾತ್ಯ 3:16.
13 ಹೌದು, ಸಂತಾನವಾದಾತನು ಒಂದೇ ವಂಶದಿಂದ ಅಥವಾ ಕುಟುಂಬದಿಂದ ಬರಲಿದ್ದನು. ಇದು ಅಬ್ರಹಾಮನ ಅಕ್ಷರಾರ್ಥಕ ವಂಶಜನೂ ಪ್ರಾಕೃತಿಕ ಯೆಹೂದ್ಯನೂ ಆಗಿ ಹುಟ್ಟಿದ ಯೇಸುವಿನಲ್ಲಿ ನಿಜವಾಯಿತು. (ಮತ್ತಾಯ 1:1-16; ಲೂಕ 3:23-34) ಇದಲ್ಲದೆ, ಇವನು ಸ್ವರ್ಗದ ಮಹಾ ಅಬ್ರಹಾಮನ ಕುಟುಂಬದ ಭಾಗವೂ ಆಗಿದ್ದನು. ದೇವರು ಇಷ್ಟಪಟ್ಟಿರುವಲ್ಲಿ ಮೂಲಪಿತ ಅಬ್ರಹಾಮನು ಆಳವಾದ ನಂಬಿಕೆಯಿಂದ ತನ್ನ ಕುಮಾರನಾದ ಇಸಾಕನನ್ನು ಬಲಿನೀಡಲು ಸಿದ್ಧನಾಗಿದ್ದನೆಂದು ಜ್ಞಾಪಿಸಿಕೊಳ್ಳಿರಿ. (ಆದಿಕಾಂಡ 22:1-18; ಇಬ್ರಿಯ 11:17-19) ತದ್ರೀತಿ, ಯೆಹೋವನು ತನ್ನ ಏಕಜಾತ ಪುತ್ರನನ್ನು ಅವನು ನಂಬುವ ಮಾನವ ಕುಲಕ್ಕೆ ಪ್ರಾಯಶ್ಚಿತ್ತ ಬಲಿಯಾಗುವಂತೆ ಭೂಮಿಗೆ ಕಳುಹಿಸಿದನು. (ರೋಮಾಪುರ 5:8; 8:32) ಹೀಗೆ, ಈ ಒಡಂಬಡಿಕೆಗನುಸಾರವಾಗಿ ಅಬ್ರಹಾಮನ ಸಂತಾನವಾದ ಪ್ರಧಾನ ಭಾಗವಾಗಿ ಯೇಸುಕ್ರಿಸ್ತನನ್ನು ಪೌಲನು ಏಕೆ ಗುರುತಿಸಿದನೆಂದು ತಿಳಿಯುವದು ಸಾಧ್ಯವಾಗುತ್ತದೆ.
14. ಅಬ್ರಹಾಮನ ಸಂತಾನದ ದ್ವಿತೀಯ ಭಾಗ ಯಾವುದು ಮತ್ತು ಇದು ಮುಂದೆ ಇನ್ನಾವ ಚರ್ಚೆಗೆ ನಡಿಸುತ್ತದೆ?
14 ದೇವರು, ಈ ಆತ್ಮಿಕ ನೆರವೇರಿಕೆಯಲ್ಲಿ ‘ಅಬ್ರಹಾಮನ ಸಂತಾನವನ್ನು ಬಹುಸಂಖ್ಯಾತ’ ಮಾಡುವನೆಂದು ಪೌಲನು ಸೂಚಿಸಿದನು. ಅವನು ಬರೆದುದು: “ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರೂ ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.” (ಆದಿಕಾಂಡ 22:17; ಗಲಾತ್ಯ 3:29) ಇವರು ಅಬ್ರಹಾಮನ ಸಂತಾನದಲ್ಲಿ ದ್ವಿತೀಯ ಭಾಗವಾಗಿರುವ 144,000 ಆತ್ಮಾಭಿಷಿಕ್ತ ಕ್ರೈಸ್ತರು. ಇವರು ಸಂತಾನದ ಪ್ರಧಾನ ಭಾಗವಾದ ಕ್ರಿಸ್ತನಿಗೆ ವಿರೋಧಿಗಳಾಗಿರದೆ “ಕ್ರಿಸ್ತನವರು” ಆಗಿದ್ದಾನೆ. (1 ಕೊರಿಂಥ 1:2; 15:23) ಇವರಲ್ಲಿ ಅನೇಕರು ತಾವು ಅಬ್ರಹಾಮನ ವಂಶಜರೆಂದು ಹೇಳಸಾಧ್ಯವಿಲ್ಲವೆಂಬದು ನಮಗೆ ಗೊತ್ತು. ಏಕೆಂದರೆ ಇವರು ಯೆಹೋದ್ಯೇತರ ಜನಾಂಗದವರು. ಆದರೆ ಈ ಆತ್ಮಿಕ ನೆರವೇರಿಕೆಯಲ್ಲಿ ಹೆಚ್ಚು ನಿರ್ಧಾರಕ ವಿಷಯವೇನೆಂದರೆ ಅವರು ಪ್ರಾಕೃತಿಕವಾಗಿ ಮಹಾ ಅಬ್ರಹಾಮನಾದ ಯೆಹೋವನ ಕುಟುಂಬದ ಭಾಗವಾಗಿರದೆ ಪಾಪಿ ಆದಾಮನ ಅಪೂರ್ಣ ಕುಟುಂಬದ ಭಾಗವಾಗಿರುವುದೇ. ಆದುದರಿಂದ ಇವರು “ಅಬ್ರಹಾಮನ ಸಂತಾನ” ಭಾಗವಾಗಲು ಅರ್ಹರಾಗುವುದು ಹೇಗೆಂದು ನಾವು ನೋಡುವ ಅಗತ್ಯವಿದೆ.
ಧರ್ಮಶಾಸ್ತ್ರದೊಡಂಬಡಿಕೆ ತಾತ್ಕಾಲಿಕವಾಗಿ ಕೂಡಿಸಲ್ಪಟ್ಟದ್ದು
15-17. (ಎ) ಅಬ್ರಹಾಮನ ಒಡಂಬಡಿಕೆಗೆ ಧರ್ಮಶಾಸ್ತ್ರದೊಡಂಬಡಿಕೆಯು ಏಕೆ ಕೂಡಿಸಲ್ಪಟ್ಟಿತು? (ಬಿ)ಈ ಗುರಿಗಳನ್ನು ಧರ್ಮಶಾಸ್ತ್ರ ಹೇಗೆ ನೆರವೇರಿಸಿತು?
15 ದೇವರು ತನ್ನ ಉದ್ದೇಶವನ್ನು ನೆರವೇರಿಸುವ ಮೂಲ ಹೆಜ್ಜೆಯಾಗಿ ಅಬ್ರಹಾಮನೊಂದಿಗೆ ಒಡಂಬಡಿಕೆ ಮಾಡಿದ ಬಳಿಕ, ಸಂತಾನವಾದಾತನು ಬರುವ ತನಕ ಆ ವಂಶವು ಮಲಿನವಾಗದಂತೆ ಅಥವಾ ನಿರ್ನಾಮವಾಗದಂತೆ ಅದು ಹೇಗೆ ಸಂರಕ್ಷಿಸಲ್ಪಡುವುದು? ಮತ್ತು ಸಂತಾನವಾದಾತನು ಬಂದಾಗ, ಸತ್ಯಾರಾಧಕರು ಅವನನ್ನು ಹೇಗೆ ಗುರುತಿಸಬಲ್ಲರು? ಇಂಥ ಪ್ರಶ್ನೆಗಳಿಗೆ ಪೌಲನು, ಧರ್ಮಾಶಾಸ್ತ್ರದೊಡಂಬಡಿಕೆಯನ್ನು ತಾತ್ಕಾಲಿಕವಾಗಿ ಕೂಡಿಸಿದ ದೇವರ ವಿವೇಕವನ್ನು ಸೂಚಿಸುತ್ತಾ ಉತ್ತರ ನೀಡುತ್ತಾನೆ. ಅಪೊಸ್ತಲನು ಬರೆಯುವದು’
16 “ಹಾಗಾದರೆ ಧರ್ಮಶಾಸ್ತ್ರವೇಕೆ? ಯಾರಿಗೆ ವಾಗ್ದಾನವು ಮಾಡಲ್ಪಟ್ಟಿತ್ತೋ ಆ ಸಂತಾನವು ಬರುವ ತನಕ ಅಪರಾಧಗಳನ್ನು ವ್ಯಕ್ತಪಡಿಸಲಿಕ್ಕಾಗಿ ಅದನ್ನು ಕೂಡಿಸಲಾಯಿತು. ಅದನ್ನು ದೇವದೂತರ ಮೂಲಕ ಮಧ್ಯಸ್ಥನೊಬ್ಬನ ಕೈಯಲ್ಲಿ ರವಾನಿಸಲಾಯಿತು. . . . ನಾವು ನಂಬಿಕೆಯ ಕಾರಣ ನೀತಿವಂತರೆಂದು ತಿಳಿಯಪಡಿಸುವಂತೆ ಧರ್ಮಶಾಸ್ತ್ರವು ಕ್ರಿಸ್ತನ ಬಳಿಗೆ ನಡಿಸುವ ನಮ್ಮ ಖಾಸಗಿ ಶಿಕ್ಷಕನಾಗಿದೆ.”—ಗಲಾತ್ಯ 3:19,24
17 ಸೀನಾಯ ಬೆಟ್ಟದಲ್ಲಿ ಯೆಹೋವನು ತನ್ನ ಮತ್ತು ಇಸ್ರಾಯೇಲ್ಯರ ಮಧ್ಯೆ ಅದ್ವಿತೀಯವಾದ ರಾಷ್ಟ್ರೀಯ ಒಡಂಬಡಿಕೆಯೊಂದಿಗೆ ಮಾಡಿದನು. ಇದು ಮೋಶೆ ಮಧ್ಯಸ್ಥನಾಗಿದ್ದ ಧರ್ಮಶಾಸ್ತ್ರದೊಡಂಬಡಿಕೆಯಾಗಿತ್ತು.b (ಗಲಾತ್ಯ 4:24,25) ಆ ಜನರು ಈ ಒಡಂಬಡಿಕೆಯೊಳಗೆ ಬರಲು ಸಮ್ಮತಿಸಿದರು. ಮತ್ತು ಹೋರಿ ಮತ್ತು ಆಡುಗಳು ರಕ್ತದಿಂದ ಇದನ್ನು ಸ್ಥಿರೀಕರಿಸಲಾಯಿತು. (ವಿಮೋಚನಾಕಾಂಡ 24:3-8; ಇಬ್ರಿಯ 9:19,20)ಇದು ಇಸ್ರಾಯೇಲಿಗೆ ದೇವಪ್ರಭುತ್ವ ನಿಯಮಗಳನ್ನು ನೀತಿಯ ಒಂದು ಸರಕಾರಕ್ಕೆ ಹೊರಮೇರೆಯನ್ನೂ ಒದಗಿಸಿತು. ವಿಧರ್ಮಿಗಳೊಂದಿಗೆ ಜಾತ್ಯಂತರ ವಿವಾಹ ಮತ್ತು ದುರಾಚಾರ ಮತ್ತು ಮಿಥ್ಯಾ ಧರ್ಮಾಚಾರಗಳಲ್ಲಿ ಭಾಗವಹಿಸುವದನ್ನು ಇದು ನಿಶೇಧಿಸಿತು. ಹೀಗೆ ಇದು ಇಸ್ರಾಯೇಲ್ಯರನ್ನು ಕಾದು ಸಂತಾನವಾದಾತನ ವಂಶ ಮಲಿನಗೊಳ್ಳದಂತೆ ಮಾಡುವ ಶಕ್ತಿಯಾಗಿ ಪರಿಣಮಿಸಿತು. (ವಿಮೋಚನಾಕಾಂಡ 20:4-6; 34:12-16) ಆದರೆ ಯಾವ ಅಪೂರ್ಣ ಇಸ್ರಾಯೇಲ್ಯನೂ ಧರ್ಮಶಾಸ್ತ್ರಕ್ಕೆ ಪೂರ್ತಿಯಾಗಿ ವಿಧೇಯತೆ ತೋರಿಸ ಸಾಧ್ಯವಾಗದೆ ಇದ್ದುದರಿಂದ ಅದು ಪಾಪಗಳನ್ನು ವ್ಯಕ್ತಪಡಿಸಿತು. (ಗಲಾತ್ಯ 3:19) ಅದು, ಪರಿಪೂರ್ಣನಾದ ಒಬ್ಬ ಖಾಯಂ ಯಾಜಕನ ಮತ್ತು ಪ್ರತಿವರ್ಷ ಪುನರಾವರ್ತಿಸಿ ಬರುವ ಅಗತ್ಯವಿಲ್ಲದ ಒಂದು ಮಗುವನ್ನು ಅಗತ್ಯವಿರುವ ಅಧ್ಯಾಪಕನ ಬಳಿ ನಡಿಸುವ ಖಾಸಗಿ ಶಿಕ್ಷಕನಂತಿತ್ತು. ಆ ಅಧ್ಯಾಪಕನು ಮೆಸ್ಸೀಯನು ಅಥವಾ ಕ್ರಿಸ್ತನು. (ಇಬ್ರಿಯ 7:26-28; 9:9, 16-22; 10:1-4,11 ಉದ್ದೇಶವನ್ನು ನೆರವೇರಿಸಿದ ಬಳಿಕ ಧರ್ಮಶಾಸ್ತ್ರದ ಒಡಂಬಡಿಕೆ ಅಂತ್ಯವಾಗಲಿತ್ತು.—ಗಲಾತ್ಯ 3:24,25; ರೋಮಾಪುರ 7:6; “ವಾಚಕರಿಂದ ಪ್ರಶ್ನೆಗಳು”, ಪುಟ 32 ನೋಡಿ.
18. ಧರ್ಮಶಾಸ್ತ್ರದ ಒಡಂಬಡಿಕೆಯಲ್ಲಿ ಇನ್ನಾವ ಪ್ರತೀಕ್ಷೆ ಸೇರಿಕೊಂಡಿತ್ತು, ಆದರೆ ಇದನ್ನು ಗ್ರಹಿಸುವದು ಏಕೆ ಕಷ್ಟವಾಗಿತ್ತು?
18 ಈ ತಾತ್ಕಾಲಿಕ ಒಡಂಬಡಿಕೆಯನ್ನು ಮಾಡಿದಾಗ ದೇವರು ಅದರ ರೋಮಾಂಚಕ ಗುರಿ ಏನೆಂದೂ ತಿಳಿಸಿದನು: “ನೀವು ನನ್ನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆದರೆ ನೀವು ಎಲ್ಲಾ ಜನಾಂಗಗಳಲ್ಲಿ ನನಗೆ ಸ್ವಕೀಯ ಜನರಾಗುವಿರಿ. . . . ನೀವು ನನಗೆ ಯಾಜಕ ರಾಜ್ಯವು ಪರಿಶುದ್ಧಜನವೂ ಆಗಿರುವಿರಿ.” (ವಿಮೋಚನಾಕಾಂಡ 19:5,6) ಎಂಥ ಪ್ರತೀಕ್ಷೆಯಿದು! ರಾಜ-ಯಾಜಕರುಗಳ ಒಂದು ಜನಾಂಗ, ಆದರೆ ಇದು ಹೇಗಾದೀತು? ಧರ್ಮಶಾಸ್ತ್ರವು ಆ ಬಳಿಕ ತಿಳಿಸಿದಂತೆ, ಆಳುವ ವಂಶ (ಯೆಹೂದ)ಕ್ಕೆ ಮತ್ತು ಪುರೋಹಿತ ವಂಶ (ಲೇವಿ)ಕ್ಕೆ ವಿಭಿನ್ನ ಜವಾಬ್ದಾರಿಗಳನ್ನು ಕೊಡಲಾಯಿತು. (ಆದಿಕಾಂಡ 49:10; ವಿಮೋಚನಾಕಾಂಡ 28:43; ಅರಣ್ಯಕಾಂಡ 3:5-13) ಯಾವ ಪುರುಷನೂ ಆಳುವವನೂ ಯಾಜಕನೂ ಆಗ ಸಾಧ್ಯವಿರಲಿಲ್ಲ. ಆದರೂ ವಿಮೋಚನಾಕಾಂಡ 19:5,6 ರಲ್ಲಿ ಹೇಳಿರುವ ದೇವರ ಮಾತುಗಳು, ಯಾವುದೋ ಅಪ್ರಕಟಿತ ವಿಧದಲ್ಲಿ, ಧರ್ಮಶಾಸ್ತ್ರದೊಡಂಬಡಿಕೆಯಲ್ಲಿರುವವರಿಗೆ “ಯಾಜಕ ರಾಜ್ಯ” ಮತ್ತು “ಪರಿಶುದ್ಧ ಜನ”ದ ಸದಸ್ಯರನ್ನೊದಗಿಸುವ ಅವಕಾಶ ದೊರೆಯುವುದೆಂದು ನಂಬಲು ಕಾರಣ ಕೊಟ್ಟವು.
ದಾವೀದನಿಗೆ ಸಂಬಂಧಿಸಿದ ರಾಜ್ಯ ಒಡಂಬಡಿಕೆ
19. ಒಡಂಬಡಿಕೆಗಳಲ್ಲಿ ರಾಜತ್ವವನ್ನು ಹೇಗೆ ಸೂಚಿಸಲಾಗಿತ್ತು?
19 ಸಮಯಾನಂತರ, ದೇವರು ಇನ್ನೊಂದು ಒಡಂಬಡಿಕೆಯನ್ನು ಕೂಡಿಸಿದನು. ನಮ್ಮ ನಿತ್ಯ ಆಶೀರ್ವಾದಕ್ಕಾಗಿ ದೇವರು ತನ್ನ ಉದ್ದೇಶವನ್ನು ಹೇಗೆ ನೆರವೇರಿಸುವನೆಂದು ಇದು ಇನ್ನೂ ಸ್ಪಷ್ಟಗೊಳಿಸಿತು. ಅಬ್ರಹಾಮನ ಒಡಂಬಡಿಕೆ ಅಬ್ರಹಾಮನ ಅಕ್ಷರಾರ್ಥದ ಸಂತತಿಯಲ್ಲಿ ರಾಜತ್ವವನ್ನು ಮುಂತೋರಿಸಿತೆಂದು ನಾವಾಗಲೇ ನೋಡಿದ್ದೇವೆ. (ಆದಿಕಾಂಡ 17:6) ದೇವ ಜನರ ಮಧ್ಯೆ ರಾಜರುಗಳನ್ನೂ ಧರ್ಮಶಾಸ್ತ್ರ ಮುನ್ನೋಡಿತು. ಮೋಶೆ ಇಸ್ರಾಯೇಲ್ಯರಿಗೆ ಹೇಳಿದ್ದು: “(ವಾಗ್ದಾನ)ದೇಶವನ್ನು ನೀವು ಸೇರಿ. . . . ಅದರಲ್ಲಿ ವಾಸವಾಗಿರುವಾಗ—ಸುತ್ತಲಿರುವ ಎಲ್ಲಾ ಜನಾಂಗಗಳಂತೆ ನಾವೂ ಅರಸರನ್ನು ನೇಮಿಸಿಕೊಳ್ಳೋಣ ಎಂದು ಹೇಳಿಕೊಳ್ಳುವ ಪಕ್ಷಕ್ಕೆ ನೀವು ಅಗತ್ಯವಾಗಿ ನಿಮ್ಮ ದೇವರಾದ ಯೆಹೋವನು ಆದುಕೊಂಡವನನ್ನೇ ನೇಮಿಸಿಕೊಳ್ಳಬೇಕು. . . .ಅನ್ಯ ದೇಶದವನನ್ನು ನೇಮಿಸಬಾರದು.” (ಧರ್ಮೋಪದೇಶಕಾಂಡ 17:14,15) ಇಂಥ ರಾಜತ್ವಕ್ಕೆ ದೇವರು ಹೇಗೆ ಏರ್ಪಡಿಸಲಿದ್ದನು ಮತ್ತು ಅಬ್ರಹಾಮಿಕ ಒಡಂಬಡಿಕೆಗೆ ಇದು ಹೇಗೆ ಸಂಬಂಧಿಸಲಿತ್ತು?
20. ದಾವೀದನು ಮತ್ತು ಅವನ ಕುಲವು ಇದಕ್ಕೆ ಸಂಬಂಧಪಟ್ಟದ್ದು ಹೇಗೆ?
20 ಇಸ್ರಾಯೇಲಿನ ಪ್ರಥಮ ಅರಸನು ಬೆನ್ಯಾಮಿನ್ ವಂಶದ ಸೌಲನಾಗಿದ್ದರೂ ಅವನ ಅನಂತರ ಯೆಹೂದ್ಯ ವಂಶದ ಧೈರ್ಯಶಾಲಿಯೂ ನಿಷ್ಠೆಯುಳ್ಳವನೂ ಆದ ದಾವೀದನ ಅರಸನಾದನು. (1 ಸಮುವೇಲ 8:5; 9:1,2; 10:1; 16:1,13) ದಾವೀದನ ಆಳಿಕೆಯಲ್ಲಿ ಸಮಯಾನಂತರ ಯೆಹೋವನು ದಾವೀದನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಲು ನಿಶ್ಚಯಿಸಿದನು. ಮೊದಲು ಆತನು ಹೇಳಿದ್ದು: “ನೀನು ಪಿತೃಗಳ ಬಳಿಗೆ ಸೇರಿದ ಮೇಲೆ ನಿನ್ನಿಂದ ಹುಟ್ಟುವವನನ್ನು ನೆಲೆಗೊಳಿಸಿ ಅವನ ರಾಜ್ಯವನ್ನು ಸ್ಥಿರಪಡಿಸುವೆನು. ಅವನು ನನ್ನ ಹೆಸರಿಗಾಗಿ ಒಂದು ಮನೆಯನ್ನು ಕಟ್ಟುವನು; ನಾನು ಅವನ ರಾಜ್ಯಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು.” (2 ಸಮುವೇಲ 7:12,13)ಇಲ್ಲಿ ಸೂಚಿಸಿರುವಂತೆ, ದಾವೀದನ ಪುತ್ರನಾದ ಸೊಲೊಮೋನನು ಮುಂದಿನ ಅರಸನಾದನು. ಮತ್ತು ದೇವರಿಗಾಗಿ ಯೆರೂಸಲೇಮಿನಲ್ಲಿ ಒಂದು ಮನೆಯನ್ನು, ಅಥವಾ ದೇವಾಲಯವನ್ನು ಕಟ್ಟುವಂತೆ ಇವನನ್ನು ಉಪಯೋಗಿಸಲಾಯಿತು. ಆದರೆ, ಇದಕ್ಕೂ ಹೆಚ್ಚು ವಿಷಯಗಳಿದ್ದವು.
21. ದಾವೀದನು ರಾಜ್ಯ ಒಡಂಬಡಿಕೆ ಯಾವುದಕ್ಕೆ ಅವಕಾಶವನ್ನೊದಗಿಸಿತು?
21 ಯೆಹೋವನು ದಾವೀದನೊಂದಿಗೆ ಈ ಒಡಂಬಡಿಕೆಯನ್ನು ಮಾಡಿದನು: “ನಿನ್ನ ಮನೆಯೂ ಅರಸುತನವೂ ಸದಾಕಾಲ ಸ್ಥಿರವಾಗಿರುವವು; ನಿನ್ನ ಸಿಂಹಾಸನವು ಶಾಶ್ವತವಾಗಿರುವದು.” (2 ಸಮುವೇಲ 7:16) ಹೀಗೆ, ದೇವರು ಸರಳವಾಗಿ ಮಾತಾಡುತ್ತಾ ದಾವೀದನ ಕುಟುಂಬದಲ್ಲಿ ಇಸ್ರಾಯೇಲ್ಯರಿಗೆ ಒಂದು ರಾಜಮನೆತನವನ್ನು ಸ್ಥಾಪಿಸಿದನು. ಇದು ಕೇವಲ ದಾವೀದ ಸಂತತಿಯ ರಾಜರುಗಳ ಅನುಕ್ರಮವಾದ ಉತ್ತರಾಧಿಕಾರವಾಗಿರಲಿಲ್ಲ. ಕ್ರಮೇಣ, ದಾವೀದನ ಸಂತತಿಯಲ್ಲಿ ಯಾವನೋ ಒಬ್ಬನು ಬಂದು ಆಳಲಿದ್ದನು. ಅವನ ಆಳಿಕೆ “ಶಾಶ್ವತವಾಗಿ ಇರುವದು. ಅವನ ಸಿಂಹಾಸನವು ಸೂರ್ಯನಂತೆ (ದೇವರ) ಎದುರಿನಲ್ಲಿ” ಇರುವದು.—ಕೀರ್ತನೆ 89:20,29, 34-36; ಯೆಶಾಯ 55:3,4.
22. ದಾವೀದನೊಂದಿಗೆ ಮಾಡಿದ ಒಡಂಬಡಿಕೆ ಸಂತಾನದ ವಂಶಕ್ಕೆ ಸಂಬಂಧಿಸಿದ್ದು ಹೇಗೆ ಮತ್ತು ಪರಿಣಾಮವೇನು?
22 ಹೀಗೆ, ದಾವೀದನೊಂದಿಗೆ ಮಾಡಿದ ಒಡಂಬಡಿಕೆಯು ಸಂತಾನದ ವಂಶವನ್ನು ಇನ್ನೂ ಸಂಕುಚಿತ ಮಾಡಿತು. ಒಂದನೆಯ ಶತಕದ ಯೆಹೂದ್ಯರು ಸಹ ಮೆಸ್ಸೀಯನು ದಾವೀದನ ವಂಶಜನೆಂದು ಗ್ರಹಿಸಿದ್ದರು. (ಯೋಹಾನ 7:41,42) ಅಬ್ರಹಾಮಿಕ ಒಡಂಬಡಿಕೆಯ ಸಂತಾನದ ಪ್ರಧಾನ ಭಾಗವಾದ ಯೇಸು ಕ್ರಿಸ್ತನು, ದೇವದೂತನು ಸಾಕ್ಷಿ ನೀಡಿದಂತೆ, ದಾವೀದನ ರಾಜ್ಯದ ಖಾಯಂ ಬಾಧ್ಯಸ್ಥನಾಗಲು ಅರ್ಹನಾದನು. (ಲೂಕ 1:31-33) ಹೀಗೆ, ಯೇಸು, ಯಾವ ಭೂಕ್ಷೇತ್ರದ ಮೇಲೆ ದಾವೀದನು ಆಳಿದನೋ ಆ ವಾಗ್ದಾನ ದೇಶವನ್ನಾಳುವ ಹಕ್ಕನ್ನು ಪಡೆದನು. ಇದು ನಮಗೆ ಯೇಸುವಿನಲ್ಲಿ ಭರವಸೆಯನ್ನು ಹೆಚ್ಚಿಸಬೇಕು. ಏಕೆಂದರೆ ಯೇಸು ಆಳುವುದು ಶಾಸನಬದ್ಧವಲ್ಲದ ದುರಾಕ್ರಮಣದಿಂದಲ್ಲ. ಸ್ಥಾಪಿತ, ಶಾಸನಬದ್ಧ ಏರ್ಪಾಡಾದ ದೈವಿಕ ಒಡಂಬಡಿಕೆಯ ಮೂಲಕವೇ ಆಳುತ್ತಾನೆ.
23. ಯಾವ ಪ್ರಶ್ನೆಗಳು ಮತ್ತು ವಿಚಾರಗಳು ಇನ್ನೂ ತೀರ್ಮಾನಕ್ಕಾಗಿ ಕಾದಿವೆ?
23 ದೇವರು ಮಾನವ ಸಂತತಿಗೆ ನಿತ್ಯಾಶೀರ್ವಾದಗಳನ್ನು ತರುವ ಉದ್ದೇಶವನ್ನು ಪೂರೈಸಲು ದೇವರು ಏರ್ಪಡಿಸಿದ ದೈವಿಕ ಒಡಂಬಡಿಕೆಗಳಲ್ಲಿ ನಾಲ್ಕನ್ನು ನಾವೀಗ ಪರ್ಯಾಲೋಚಿಸಿರುತ್ತೇವೆ. ಚಿತ್ರವು ಇನ್ನೂ ಪೂರ್ತಿಗೊಂಡಿಲ್ಲ ಎಂದು ನೀವು ಪ್ರಾಯಶಃ ತಿಳಿಯಬಲ್ಲಿರಿ. ಈ ಪ್ರಶ್ನೆಗಳು ಉಳಿದಿರುತ್ತವೆ; ಮಾನವರು ಅಪೂರ್ಣರಾಗಿಯೇ ಇದ್ದುದರಿಂದ, ಇದನ್ನು ಯಾವ ಯಾಜಕನು ಅಥವಾ ಬಲಿಯು ಶಾಶ್ವತವಾಗಿ ಬದಲಾಯಿಸಬಲ್ಲದು? ಅಬ್ರಹಾಮನ ಸಂತಾನದ ಭಾಗವಾಗಲು ಮಾನವರು ಹೇಗೆ ಅರ್ಹರಾಗುವರು? ಆಳುವ ಹಕ್ಕಿನಲ್ಲಿ ಭೂಕ್ಷೇತ್ರಕ್ಕಿಂತಲೂ ಹೆಚ್ಚಿನದೂ ಸೇರಿದೆ ಎಂದು ನಂಬಲು ಕಾರಣವಿದೆಯೇ? ಅಬ್ರಹಾಮನ ಸಂತಾನದಲ್ಲಿ ಪ್ರಧಾನ ಹಾಗೂ ದ್ವಿತೀಯ ಭಾಗಗಳೆರಡೂ ನಮ್ಮಲ್ಲಿ ಪ್ರತಿಯೊಬ್ಬನು ಸೇರಿರುವ “ಭೂಮಿಯ ಸಕಲ ಜನಾಂಗಗಳಿಗೆ” ಆಶೀರ್ವಾದವನ್ನು ಹೇಗೆ ತರಸಾಧ್ಯವಿದೆ? ನೋಡೋಣ.
[ಅಧ್ಯಯನ ಪ್ರಶ್ನೆಗಳು]
a ಇದು. ಒಂದೇ ಪಕ್ಷ (ದೇವರು) ಷರತ್ತುಗಳನ್ನು ನೆರವೇರಿಸಲು ಬದ್ಧವಾಗಿದ್ದುದರಿಂದ ಏಕಪಕ್ಷ ಒಡಂಬಡಿಕೆಯಾಗಿದೆ.
b “ಒಡಂಬಡಿಕೆಯ ಈ ವಿಚಾರವು ಇಸ್ರಾಯೇಲ್ ಧರ್ಮದ ವಿಶೇಷ ಲಕ್ಷಣವಾಗಿತ್ತು. ಇತರ ಧರ್ಮಗಳು ಅನುಮತಿಸಿರುವಂತೆ ಎರಡು ಅಥವಾ ಹೆಚ್ಚು ಮಂದಿಗೆ ನಿಷ್ಠೆ ತೋರಿಸುವ ಸಾಧ್ಯತೆಯನ್ನು ತಪ್ಪಿಸಿ ಕೇವಲ ಒಬ್ಬನಿಗೆ ನಿಷ್ಠೆ ತೋರಿಸುವ ಒಂದೇ ಧರ್ಮ ಇದಾಗಿತ್ತು.”—ಥಿಯಾಲಾಜಿಕಲ್ ಡಿಕ್ಷ್ನರಿ ಆಫ್ ದಿ ಓಲ್ಡ್ ಟೆಸ್ಟಮೆಂಟ್. ಸಂಪುಟ II, ಪುಟ 278.
ನಿಮ್ಮ ಉತ್ತರವೇನು?
▫ ಅಬ್ರಹಾಮಿಕ ಒಡಂಬಡಿಕೆ ಹೇಗೆ ನಾವು ಅನಂತಾಶೀರ್ವಾದಗಳನ್ನು ಪಡೆಯಲು ಆಧಾರವನ್ನಿಟ್ಟಿತು?
▫ ಅಬ್ರಹಾಮನ ಅಕ್ಷರಾರ್ಥಕ ಮಾಂಸಿಕ ಸಂತಾನ ಯಾವುದು? ಸಾಂಕೇತಿಕ ಸಂತಾನ ಯಾವುದು?
▫ ಅಬ್ರಹಾಮಿಕ ಒಡಂಬಡಿಕೆಗೆ ಧರ್ಮಶಾಸ್ತ್ರದ ಒಡಂಬಡಿಕೆಯನ್ನು ಏಕೆ ಕೂಡಿಸಲಾಯಿತು?
▫ ದಾವೀದನೊಂದಿಗೆ ಮಾಡಿದ ಒಡಂಬಡಿಕೆಯು ದೇವರ ಉದ್ದೇಶವನ್ನು ಹೇಗೆ ಮುಂದುವರಿಸಿತು?
[ಪುಟ 13ರಲ್ಲಿರುವಚಿ]
(For fully formatted text, see publication)
ಏದೆನಿನ ಒಡಂಬಡಿಕೆ ಆದಿಕಾಂಡ 3:15
ಅಬ್ರಹಾಮಿಕ ಒಡಂಬಡಿಕೆ
ಪ್ರಧಾನ ಸಂತಾನ
ದ್ವಿತೀಯ ಸಂತಾನ
ಅನಂತ ಆಶೀರ್ವಾದಗಳು
[ಪುಟ 14ರಲ್ಲಿರುವಚಿ]
(For fully formatted text, see publication)
ಏದೆನಿನ ಒಡಂಬಡಿಕೆ ಆದಿಕಾಂಡ
ಅಬ್ರಹಾಮನೊಂದಿಗೆ ಮಾಡಿದ ಒಡಂಬಡಿಕೆ
ಧರ್ಮಶಾಸ್ತ್ರದೊಡಂಬಡಿಕೆ
ದಾವೀದನ ರಾಜ್ಯ ಒಡಂಬಡಿಕೆ
ಪ್ರಧಾನ ಸಂತಾನ
ದ್ವಿತೀಯ ಸಂತಾನ
ನಿತ್ಯಾಶೀರ್ವಾದಗಳು
[ಪುಟ 10 ರಲ್ಲಿರುವ ಚಿತ್ರ]
ಮಾನವ ಕುಲದ ಪರವಾಗಿ ತನ್ನ ಉದ್ದೇಶವನ್ನು ನೆರವೇರಿಸಲು ದೇವರು ನಂಬಿಗಸ್ತ ಅಬ್ರಹಾಮನೊಂದಿಗೆ ಒಡಂಬಡಿಕೆಯೊಂದನ್ನು ಮಾಡಿದನು.