ಪಾಠ 14
ಯಾವ ರೀತಿಯ ಆರಾಧನೆ ದೇವರಿಗೆ ಇಷ್ಟ?
ತುಂಬ ಧರ್ಮಗಳು ನಡೆದುಕೊಳ್ಳೋ ರೀತಿ ದೇವರಿಗೆ ಇಷ್ಟ ಆಗಲ್ಲ ಅಂತ ಹಿಂದಿನ ಪಾಠದಲ್ಲಿ ಕಲಿತ್ವಿ. ಹಾಗಾದ್ರೆ ದೇವರು ಇಷ್ಟಪಡೋ ರೀತಿಯಲ್ಲಿ ಆತನನ್ನ ಆರಾಧಿಸೋಕೆ ಆಗಲ್ಲ ಅಂತನಾ? ಆ ತರ ಏನಿಲ್ಲ, ದೇವರು ಇಷ್ಟಪಡುವ “ಆರಾಧನಾ ಪದ್ಧತಿ [ಅಥವಾ ರೀತಿ]” ಇದೆ ಅಂತ ಬೈಬಲ್ ಹೇಳುತ್ತೆ. (ಯಾಕೋಬ 1:27) ಇದರ ಬಗ್ಗೆ ಹೆಚ್ಚನ್ನ ತಿಳಿಯೋಣ.
1. ದೇವರಿಗೆ ಇಷ್ಟವಾಗೋ ಆರಾಧನೆಯ ಬಗ್ಗೆ ಎಲ್ಲಿಂದ ತಿಳಿಯಬಹುದು?
ದೇವರಿಗೆ ಏನಿಷ್ಟ ಆಗುತ್ತೆ ಅಂತ ನಾವು ಬೈಬಲಿನಿಂದ ತಿಳಿಯಬಹುದು. ಯೇಸು ಕೂಡ, ‘ದೇವರ ಮಾತುಗಳೇ ಸತ್ಯ’ ಅಂತ ಹೇಳಿದನು. (ಯೋಹಾನ 17:17) ತುಂಬ ಧರ್ಮ ಗುರುಗಳು ದೇವರ ಮಾತನ್ನ ಕಲಿಸುವ ಬದಲು ಮಾನವರ ಬೋಧನೆಗಳನ್ನ ಅಥವಾ ಸಂಪ್ರದಾಯಗಳನ್ನ ಕಲಿಸ್ತಾರೆ. ಹೀಗೆ ‘ದೇವರ ಆಜ್ಞೆನ ಪಕ್ಕಕ್ಕೆ ಇಡೋರನ್ನ’ ಅಥವಾ ಪಾಲಿಸದೇ ಇರೋರನ್ನ ಕಂಡರೆ ದೇವರಿಗೆ ಇಷ್ಟ ಆಗಲ್ಲ. (ಮಾರ್ಕ 7:9 ಓದಿ.) ಬದಲಿಗೆ ನಾವು ಬೈಬಲನ್ನ ಓದಿ ಅದರಲ್ಲಿರುವ ಸಲಹೆಗಳನ್ನ ಪಾಲಿಸಿದ್ರೆ ಯೆಹೋವನಿಗೆ ಖುಷಿಯಾಗುತ್ತೆ.
2. ನಾವು ಯೆಹೋವನನ್ನು ಹೇಗೆ ಆರಾಧಿಸಬೇಕು?
ಯೆಹೋವನು ನಮ್ಮ ಸೃಷ್ಟಿಕರ್ತ ಆಗಿರೋದ್ರಿಂದ ನಾವು ಆತನನ್ನ ಮಾತ್ರ ಆರಾಧಿಸಬೇಕು. (ಪ್ರಕಟನೆ 4:11) ಅಂದರೆ ನಾವು ಆತನನ್ನ ಪ್ರೀತಿಸಬೇಕು ಮತ್ತು ಯಾವುದೇ ಮೂರ್ತಿಗಳ, ವಸ್ತುಗಳ ಸಹಾಯವಿಲ್ಲದೆ ದೇವರಿಗೆ ಆಪ್ತರಾಗಬೇಕು.—ಯೆಶಾಯ 42:8 ಓದಿ.
ನಾವು ಮಾಡುವ ಆರಾಧನೆ ‘ಪವಿತ್ರವಾಗಿ ಮತ್ತು ಯೆಹೋವನು ಮೆಚ್ಚೋ’ ರೀತಿಯಲ್ಲಿ ಇರಬೇಕು. (ರೋಮನ್ನರಿಗೆ 12:1) ಇದರ ಅರ್ಥ ನಾವು ಆತನ ನೀತಿನಿಯಮಗಳ ಪ್ರಕಾರ ಜೀವಿಸಬೇಕು. ಉದಾಹರಣೆಗೆ ಯೆಹೋವನನ್ನು ಪ್ರೀತಿಸುವವರು ಮದುವೆ ಬಗ್ಗೆ ಆತನಿಟ್ಟಿರುವ ನಿಯಮಗಳನ್ನ ಪ್ರೀತಿಸ್ತಾರೆ ಮತ್ತು ಪಾಲಿಸ್ತಾರೆ. ಅಷ್ಟೇ ಅಲ್ಲ ಅವರು ದೇಹಕ್ಕೆ ಹಾನಿಮಾಡುವ ಯಾವುದೇ ವಿಷಯಗಳನ್ನ ಮಾಡಲ್ಲ. ಉದಾಹರಣೆಗೆ, ಅಡಿಕೆ, ತಂಬಾಕು ಸೇವನೆ ಮಾಡಲ್ಲ. ಅಷ್ಟೇ ಅಲ್ಲ ಕುಡಿಕತನದ ಚಟದಿಂದ ಮತ್ತು ಮತ್ತೇರಿಸಿಕೊಳ್ಳೋಕಾಗಿ ಅಮಲೌಷಧ (ಡ್ರಗ್ಸ್) ತೆಗೆದುಕೊಳ್ಳೋದರಿಂದ ದೂರವಿರುತ್ತಾರೆ.a
3. ಸಭೆಯಾಗಿ ಸೇರಿ ನಾವು ಯಾಕೆ ದೇವರನ್ನ ಆರಾಧಿಸಬೇಕು?
ಯಾಕಂದ್ರೆ ಪ್ರತಿವಾರ ಕೂಟಗಳಿಗೆ ಹೋಗೋದ್ರಿಂದ ‘ಸಭೆಯಲ್ಲಿ ಯೆಹೋವನನ್ನ ಸ್ತುತಿಸೋಕೆ’ ಆಗುತ್ತೆ. (ಕೀರ್ತನೆ 111:1, 2) ಇದನ್ನ ಮಾಡುವ ಒಂದು ವಿಧ ಆತನಿಗೆ ಸ್ತುತಿ ಗೀತೆ ಹಾಡೋದಾಗಿದೆ. (ಕೀರ್ತನೆ 104:33 ಓದಿ.) ಯೆಹೋವನು ನಮ್ಮನ್ನ ಪ್ರೀತಿಸೋದ್ರಿಂದ ನಾವು ಕೂಟಗಳಿಗೆ ಹಾಜರಾಗಬೇಕು ಅಂತ ಹೇಳಿದ್ದಾನೆ. ಯಾಕಂದ್ರೆ ನಾವು, ಈಗ ಮತ್ತು ಎಂದೆಂದೂ ಖುಷಿಯಾಗಿ ಬಾಳೋಕೆ ಕೂಟಗಳು ಸಹಾಯ ಮಾಡುತ್ತೆ. ನಾವು ಕೂಟಗಳಿಗೆ ಹೋಗುವಾಗ ಬೇರೆಯವರನ್ನ ಪ್ರೋತ್ಸಾಹಿಸುತ್ತೇವೆ, ನಾವೂ ಪ್ರೋತ್ಸಾಹ ಪಡೆದುಕೊಳ್ಳುತ್ತೇವೆ.
ಹೆಚ್ಚನ್ನ ತಿಳಿಯೋಣ
ನಾವು ಆರಾಧನೆಯಲ್ಲಿ ವಿಗ್ರಹಗಳನ್ನ ಬಳಸೋದು ದೇವರಿಗೆ ಯಾಕೆ ಇಷ್ಟ ಇಲ್ಲ ಅನ್ನೋದರ ಬಗ್ಗೆ ತಿಳಿದುಕೊಳ್ಳಿ. ಯಾವೆಲ್ಲಾ ಪ್ರಾಮುಖ್ಯ ವಿಧಗಳಲ್ಲಿ ದೇವರನ್ನ ಆರಾಧಿಸಬಹುದು ಅಂತನೂ ತಿಳಿಯಿರಿ.
4. ವಿಗ್ರಹಗಳ ಬಳಕೆ: ಯೆಹೋವನ ಅನಿಸಿಕೆ
ಆರಾಧನೆಯಲ್ಲಿ ವಿಗ್ರಹಗಳನ್ನ ಉಪಯೋಗಿಸಿದ್ರೆ ಯೆಹೋವನಿಗೆ ಹೇಗನಿಸುತ್ತೆ ಅಂತ ತಿಳಿದುಕೊಳ್ಳಲು ವಿಡಿಯೋ ನೋಡಿ, ನಂತರ ಈ ಕೆಳಗಿನ ಪ್ರಶ್ನೆಯನ್ನ ಚರ್ಚಿಸಿ.
ಹಿಂದಿನ ಕಾಲದ ದೇವಜನರು ಮೂರ್ತಿಗಳನ್ನ ಉಪಯೋಗಿಸಿ ಯೆಹೋವನನ್ನು ಆರಾಧಿಸಿದಾಗ ಏನಾಯ್ತು?
ದೇವರನ್ನ ಆರಾಧಿಸಲು ಮೂರ್ತಿಗಳು ಬೇಕೇ ಬೇಕು ಅಂತ ಕೆಲವರು ನೆನಸುತ್ತಾರೆ. ಆದ್ರೆ ಅದು ನಿಜನಾ? ವಿಮೋಚನಕಾಂಡ 20:4-6 ಮತ್ತು ಕೀರ್ತನೆ 106:35, 36 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಆರಾಧನೆಯಲ್ಲಿ ಜನರು ಯಾವ ರೀತಿಯ ಮೂರ್ತಿಗಳನ್ನ, ವಸ್ತುಗಳನ್ನ ಮತ್ತು ಫೋಟೋಗಳನ್ನ ಉಪಯೋಗಿಸೋದನ್ನ ನೀವು ನೋಡಿದ್ದೀರಾ?
ಮೂರ್ತಿಗಳನ್ನ ಉಪಯೋಗಿಸೋದ್ರ ಬಗ್ಗೆ ಯೆಹೋವನಿಗೆ ಹೇಗನಿಸುತ್ತೆ?
ಮೂರ್ತಿಗಳನ್ನ ಉಪಯೋಗಿಸೋದ್ರ ಬಗ್ಗೆ ನಿಮಗೆ ಹೇಗನಿಸುತ್ತೆ? ಯಾಕೆ ಹಾಗೆ ಅನಿಸುತ್ತೆ?
5. ಯೆಹೋವನನ್ನು ಆರಾಧಿಸಿದ್ರೆ ಮಾತ್ರ ತಪ್ಪಾದ ನಂಬಿಕೆಗಳಿಂದ ಬಿಡುಗಡೆ ಸಿಗುತ್ತೆ
ಯೆಹೋವನಿಗೆ ಇಷ್ಟವಾಗುವ ರೀತಿಯಲ್ಲಿ ಆತನನ್ನ ಆರಾಧಿಸಿದ್ರೆ ನಮಗೆ ಹೇಗೆ ತಪ್ಪಾದ ನಂಬಿಕೆಗಳಿಂದ ಬಿಡುಗಡೆ ಸಿಗುತ್ತೆ ಅನ್ನೋದರ ಬಗ್ಗೆ ತಿಳಿದುಕೊಳ್ಳಲು ವಿಡಿಯೋ ನೋಡಿ.
ಕೀರ್ತನೆ 91:14 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಯೆಹೋವನನ್ನು ಪ್ರೀತಿಸಿ ಆತನನ್ನ ಮಾತ್ರ ಆರಾಧಿಸಿದ್ರೆ, ಆತನು ನಮಗೋಸ್ಕರ ಏನು ಮಾಡ್ತಾನೆ ಅಂತ ಮಾತು ಕೊಟ್ಟಿದ್ದಾನೆ?
6. ಸಭಾಕೂಟಗಳಲ್ಲಿ ನಾವು ಯೆಹೋವನನ್ನು ಆರಾಧಿಸ್ತೇವೆ
ಕೂಟಗಳಲ್ಲಿ ಗೀತೆ ಹಾಡುವ ಮೂಲಕ ಮತ್ತು ಉತ್ತರ ಕೊಡುವ ಮೂಲಕ ನಾವು ಯೆಹೋವನನ್ನು ಸ್ತುತಿಸುತ್ತೇವೆ ಮತ್ತು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತೇವೆ. ಕೀರ್ತನೆ 22:22 ಓದಿ, ನಂತರ ಈ ಕೆಳಗಿನ ಪ್ರಶ್ನೆಗಳನ್ನ ಚರ್ಚಿಸಿ:
ಕೂಟಗಳಲ್ಲಿ ಬೇರೆಯವರು ಕೊಡುವ ಉತ್ತರಗಳನ್ನ ಕೇಳಿಸಿಕೊಂಡಾಗ ನಿಮಗೆ ಹೇಗೆ ಅನಿಸ್ತು?
ಕೂಟಗಳಲ್ಲಿ ಉತ್ತರ ಕೊಡೋಕೆ ತಯಾರಿ ಮಾಡೋದು ಹೇಗಂತ ಕಲಿಯೋಣವಾ?
7. ನಾವು ಕಲಿತಿದ್ದನ್ನ ಇನ್ನೊಬ್ಬರ ಹತ್ತಿರ ಹೇಳಿದಾಗ ಯೆಹೋವನಿಗೆ ಖುಷಿಯಾಗುತ್ತೆ
ಬೈಬಲ್ ಸತ್ಯಗಳನ್ನ ಇನ್ನೊಬ್ಬರ ಹತ್ತಿರ ಹೇಳೋಕೆ ತುಂಬ ಅವಕಾಶಗಳು ಸಿಗುತ್ತೆ. ಕೀರ್ತನೆ 9:1 ಮತ್ತು 34:1 ಓದಿ, ನಂತರ ಈ ಪ್ರಶ್ನೆಯನ್ನ ಚರ್ಚಿಸಿ:
ಬೈಬಲಿನಿಂದ ಕಲಿತ ಯಾವ ವಿಷಯಗಳನ್ನ ನೀವು ಬೇರೆಯವರ ಹತ್ತಿರ ಹೇಳೋಕೆ ಇಷ್ಟಪಡ್ತೀರಾ?
ಕೆಲವರು ಹೀಗಂತಾರೆ: “ಯಾವ ಧರ್ಮದಲ್ಲಿದ್ದರೂ ಪರವಾಗಿಲ್ಲ, ಒಳ್ಳೆಯವರಾಗಿದ್ರೆ ಸಾಕು.”
ನಿಮಗೇನು ಅನಿಸುತ್ತೆ?
ನಾವೇನು ಕಲಿತ್ವಿ
ನಮ್ಮನ್ನ ಸೃಷ್ಟಿಮಾಡಿದ ದೇವರನ್ನ ಮೆಚ್ಚಿಸಬೇಕಂದ್ರೆ ಆತನೊಬ್ಬನನ್ನೇ ಆರಾಧಿಸಬೇಕು. ಕೂಟಗಳಿಗೆ ಹಾಜರಾಗಿ ಆತನನ್ನ ಸ್ತುತಿಸಬೇಕು ಮತ್ತು ನಾವೇನು ಕಲಿತೀವೋ ಅದನ್ನ ಬೇರೆಯವರಿಗೆ ತಿಳಿಸಬೇಕು.
ನೆನಪಿದೆಯಾ
ದೇವರಿಗೆ ಇಷ್ಟವಾಗೋ ರೀತಿಯಲ್ಲಿ ಆರಾಧಿಸೋದ್ರ ಬಗ್ಗೆ ಎಲ್ಲಿಂದ ತಿಳಿಯಬಹುದು?
ನಾವು ಯೆಹೋವನನ್ನು ಮಾತ್ರ ಯಾಕೆ ಆರಾಧಿಸಬೇಕು?
ನಾವು ಯಾಕೆ ಆತನನ್ನ ಸಭೆಯಾಗಿ ಸೇರಿ ಆರಾಧಿಸಬೇಕು?
ಇದನ್ನೂ ನೋಡಿ
ಹಿಂದೆ ಮಾಡ್ತಿದ್ದ ಆರಾಧನಾ ರೀತಿಯನ್ನ ಬದಲಾಯಿಸಿಕೊಂಡ ಮೇಲೆ ಒಬ್ಬ ಸ್ತ್ರೀಗೆ ಹೇಗನಿಸಿತು ಅನ್ನೋದರ ಬಗ್ಗೆ ತಿಳಿದುಕೊಳ್ಳಲು “ನನಗೀಗ ಬಿಡುಗಡೆ ಸಿಕ್ಕಿದೆ!” ಅನ್ನೋ ಲೇಖನ ನೋಡಿ.
ಸಭಾಕೂಟಗಳಲ್ಲಿ ಉತ್ತರ ಕೊಡೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ ಅಂತ ತಿಳಿಯಿರಿ.
ಒಬ್ಬ ಯುವಕನಿಗೆ ಕೂಟಗಳಿಗೆ ಹೋಗೋಕೆ ತುಂಬ ಕಷ್ಟ ಆಗ್ತಿತ್ತು. ಆದರೂ ಅವನು ಕೂಟಗಳಿಗೆ ಹೋಗಿದ್ದರಿಂದ ಯಾವೆಲ್ಲಾ ಪ್ರಯೋಜನ ಪಡೆದ ಅಂತ ನೋಡಿ.
ಶಿಲುಬೆ ಕ್ರೈಸ್ತ ಧರ್ಮದ ಗುರುತು ಅಂತ ತುಂಬ ಜನರು ಹೇಳ್ತಾರೆ. ಆದರೆ ನಾವು ಆರಾಧನೆಯಲ್ಲಿ ಶಿಲುಬೆಯನ್ನ ಉಪಯೋಗಿಸೋದು ಸರಿನಾ?
“ಯೆಹೋವನ ಸಾಕ್ಷಿಗಳು ಆರಾಧನೆಯಲ್ಲಿ ಶಿಲುಬೆಯನ್ನು ಬಳಸುವುದಿಲ್ಲವೇಕೆ?” (jw.org ಲೇಖನ)
a ಈ ವಿಷಯಗಳ ಬಗ್ಗೆ ಮುಂದೆ ಬರೋ ಪಾಠಗಳಲ್ಲಿ ಕಲಿಯಲಿದ್ದೀರಿ.