ವಾಗ್ದಾನ್ ದೇಶದಿಂದ ದೃಶ್ಯಗಳು
ಬಾಷಾನ್—ಫಲವತ್ತಾದ ಒಂದು ಮೂಲ
ಬೈಬಲನ್ನು ಓದುವಾಗ ನೀವು ಚಿತ್ರಿಸ ಸಾಧ್ಯವಿರದ ಅನೇಕ ಸ್ಥಳಗಳ ಹೆಸರುಗಳನ್ನು ನೀವು ಓದಬಹುದಲ್ಲವೇ? ಜೂನ್ನಿಂದ ಅಗೋಸ್ತ್ 1989 ರ ತನಕ ಯೆಹೋವನ ಸಾಕ್ಷಿಗಳು ಮೀಕನಿಂದ ಜೆಕರ್ಯನ ತನಕ ಓದಿದರು. ಆ ಕಾರ್ಯ ತಖ್ತೆಗನುಸಾರ ಭಾಷಾನ್ ಮೂರು ವಚನಗಳಲ್ಲಿ ಉಲ್ಲೀಕಿಸಲ್ಪಟ್ಟಿರುವದನ್ನು ನೀವು ಕಾಣುವಿರಿ. (ಮೀಕ 7:14; ನಹೂಮ 1:4; ಜೆಕರ್ಯ 11:2) ನಿಮ್ಮ ಮನೋನೇತ್ರಗಳಿಂದ ಭಾಷಾನನ್ನು ನೀವು ಕಾಣಬಲ್ಲವರಾದರೆ ಅವು ಮತ್ತು ಇನ್ನಿತರ ಆಸಕ್ತಿಯ ವಚನಗಳು ಹೆಚ್ಚು ಅರ್ಥಭರಿತವಾಗಬಲ್ಲವು.
ಬಾಷಾನ್ ಎಲ್ಲಿತ್ತು? ವಾರ್ತಾಪತ್ರದ ಭೂಪಟದಲ್ಲಿ ನೀವು ಗಮನಿಸಿರಬಹುದಾದ ಗೊಲಾನ್ ದಿಣ್ಣೆಯಲ್ಲಿ ನೀವದನ್ನು ಸಾಮಾನ್ಯವಾಗಿ ಗುರುತಿಸಬಲ್ಲಿರಿ. ಗಲಿಲಾಯ ಸಮುದ್ರದ ಹಾಗೂ ಮೇಲ್ಗಡೆ ಯೋರ್ದಾನ್ ಕಣಿವೆಯ ಪೂರ್ವದಲ್ಲಿ ಬಾಷಾನ್ ಇತ್ತು. ಇದು ಮೂಲತ: ಯಾರ್ಮುಕ್ ನದಿಯಿಂದ ಆರಂಬಿಸಲ್ಪಟ್ಟು (ಇದು ಯೋರ್ದಾನ್ ಮತ್ತು ಸಿರಿಯಾದ ನಡುವಿನ ಪ್ರಚಲಿತ ಗಡಿಯ ಒಂದು ಭಾಗ) ಉತ್ತರಮುಖವಾಗಿ ಹೆರ್ಮೋನ್ ಪರ್ವತದ ತನಕ ಚಾಚಿದೆ.
ವಾಗ್ದಾನ ದೇಶಕ್ಕೆ ಪುರಾತನ ಇಸ್ರಾಯೇಲ್ಯರು ಪ್ರವೇಶಿಸುವದಕ್ಕಿಂತ ಮೊದಲು ಬಾಷಾನಿನ ಅರಸ ಉನ್ನತ ಪುರುಷ ಓಗ್ನ ಕಾನಾನ್ಯ ಸೇನೆಯನ್ನು ಅವರು ಸೋಲಿಸಲಿಕ್ಕಿತ್ತು. ಅದರನಂತರ ಬಾಷಾನಿನ ಹೆಚ್ಚಿನಾಂಶ ಮನಸ್ಸೆ ಕುಲದ ಸ್ವಾಧೀನದಲ್ಲಿತ್ತು. (ಧರ್ಮೋಪದೇಶಕಾಂಡ 3:1-7, 11, 13; ಅರಣ್ಯಕಾಂಡ 32:33; 34:14) ಈ ಬೈಬಲ್ ಪ್ರದೇಶ ಹೇಗಿತ್ತು? ಅದರ ಪರ್ವತ ಪ್ರದೇಶಗಳಲ್ಲಿ ಕಾಡುಗಳಿದ್ದರೂ ಬಾಷಾನಿನ ಹೆಚ್ಚಿನ ಪ್ರದೇಶವು ವಿಸ್ತಾರವಾದ ಪ್ರಸ್ತಭೂಮಿಯಾಗಿದ್ದು ಉನ್ನತವಾಗಿತ್ತು. ಹಲವಾರು ರೀತಿಯಿಂದ ಬಾಷಾನ್ ಸಾಕ್ಷತ್ ಒಂದು ರೊಟ್ಟಿಯ ಬುಟ್ಟಿಯಾಗಿತ್ತು. ಹೆಚ್ಚಿನ ಪ್ರದೇಶಗಳು ಮೇವುಗಾವಲು ಯಾ ಗೋಮಾಳ ಪ್ರದೇಶವಾಗಿದ್ದುದರಿಂದಲೇ ಹಾಗೆ ಹೇಳಬಹುದು. (ಯೆರೆಮೀಯ 50:19) ಇದರಲ್ಲಿರುವ ಕೆಲವು ಚಿತ್ರಗಳು ಬಾಷಾನಿನ ಕುರಿತು ಬೈಬಲಿನ ಹೇಳಿಕೆಗಳನ್ನು ನಿಮ್ಮ ಮನಸ್ಸಿಗೆ ತರಬಹುದು.a
ಅನೇಕರು “ಬಾಷಾನಿನ ಬಲವುಳ್ಳ ಹೋರಿಗಳ” ಕುರಿತು ಓದಿರುತ್ತೀರಿ. (ಕೀರ್ತನೆ 22:12, ಕಿಂಗ್ ಜೇಮ್ಸ್ ವಶನ್) ಹೌದು, ಪ್ರಾಚೀನ ಕಾಲದಲ್ಲಿ ಈ ಪ್ರದೇಶವು ದನಕರುಗಳಿಗೆ, ಎಳೆಯ ಹೋರಿಗಳಿಗೆ ಪ್ರಸಿದ್ಧವಾಗಿತ್ತು. ಆದರೆ ಇಲ್ಲಿ ಬೇರೆ ಜಾನುವಾರುಗಳು ಬೆಳೆಸಲ್ಪಡುತ್ತಿದ್ದವು, ಉದಾಹರಣೆಗೆ ಹಾಲು ಮತ್ತು ಮೊಸರನ್ನು ವಿಫುಲವಾಗಿ ಕೊಡುತ್ತಿದ್ದ ಕುರಿ, ಅಡುಗಳು ಸಹಾ.—ಧರ್ಮೋಪದೇಶಕಾಂಡ 32:14.
ಬಾಷಾನ್ ಇಂತಹ ಫಲವತ್ತಾದ ಪ್ರದೇಶವಾಗಲು ಕಾರಣವೇನೆಂದು ಅನೇಕರು ವಿಸ್ಮಿತರಾಗುತ್ತಾರೆ, ಯಾಕಂದರೆ ಅದು ಯೋರ್ದಾನಿನ ಪೂರ್ವದಲ್ಲಿರುವ ಒಣನೆಲವೆಂದು ಅನೇಕರು ನೆನಸುತ್ತಾರೆ. ಪಶ್ಚಿಮದಲ್ಲಿರುವ ಗಲಿಲಾಯ ಬೆಟ್ಟಗಳು ಕೆಳಮಟ್ಟದಲಿದ್ಲರ್ದಿಂದ ಮೆಡಿಟರೇನಿಯನ್ ಮೋಡಗಳು ಅವುಗಳನ್ನು ದಾಟಿ, ಪುಷ್ಕಳ ಮಳೆಯನ್ನು ಬಾಷಾನಿಗೆ ತರುತ್ತಿದ್ದವು. ಅದಲ್ಲದೇ ತೇವಭರಿತ ಗಾಳಿ ಮತ್ತು ತೊರೆಗಳು ಹೆರ್ಮೋನ್ ಪರ್ವತದಿಂದ ಕೆಳಗೆ ಬರುತ್ತಿದ್ದವು. ಬಹುಮೂಲ್ಯ ತೇವದಿಂದ ಕೂಡಿದ ಫಲವತ್ತಾದ ಜ್ವಾಲಾಮುಖಿಯಿಂದಾದ ಮಣ್ಣು ಬಾಷಾನಿನಲ್ಲಿ ಕಾಣುವಾಗ ಅಲ್ಲಿದ್ದ ಸಾಮರ್ಥ್ಯವನ್ನು ಊಹಿಸಿರಿ. ಅಲ್ಲಿ ದವಸ ಧಾನ್ಯಗಳು ಹೇರಳವಾಗಿ ಉತ್ಪನ್ನವಾಗುತ್ತಿದ್ದವು. ರೋಮನರ ದವಸದ ಪ್ರಮುಖ ಕಣಜವಾಗುವ ಬಹಳಷ್ಟು ಮೊದಲೇ ಸೊಲೊಮೋನನ ಊಟದ ಮೇಜುಗಳಿಗೆ ಬಾಷಾನಿನಿಂದ ಆಹಾರವು ಒದಗಿಸಲ್ಪಡುತಿತ್ತು. ಆದದರಿಂದ ಸಕಾರಣವಾಗಿಯೇ ತನ್ನ ವಿಮೋಚಿತ ಜನರಿಗೆ ದೇವರ ಒದಗಿಸುವಿಕೆಯ ಕುರಿತು ಈ ರೀತಿಯಲ್ಲಿ ಅನಂತರ ಹೇಳ ಸಾಧ್ಯವಿತ್ತು: “ಪೂರ್ವಕಾಲದಂತೆ ಬಾಷಾನಿನಲ್ಲಿಯೂ ಗಿಲ್ಯಾದಿನಲ್ಲಿಯೂ ಮೇಯಲಿ.”—ಮೀಕ 7:14; 1 ಅರಸುಗಳು 4:7, 13.
ಇಂತಹ ಫಲವತ್ತತೆಯನ್ನು ತಿಳಿದವನಾಗಿ, ದೇವರ ಅಪ್ರಸನ್ನತೆಯು ಏನನ್ನು ತರಸಾಧ್ಯವಿದೆ ಎಂಬ ಮನೋವೇದಕ ಚಿತ್ರಣವನ್ನು ನಹೂಮನು ಕೊಟ್ಟದ್ದನ್ನು ನೀವು ಗಣ್ಯಮಾಡಬಹುದು: “ಬಾಷಾನೂ ಕರ್ಮೆಲೂ (ಪಚ್ಚೆ ಬೆಳೆಯ ಮಹಾ ಸಮುದ್ರದ ಹತ್ತಿರದ ಬೆಟ್ಟಗಳು) ಕಂದುತ್ತವೆ. ಲೆಬನೋನಿನ ಚಿಗುರು ಬಾಡುತ್ತದೆ.”—ನಹೂಮ 1:4ಬಿ.
ಬೈಬಲಿನ ಹತ್ತಿರದ ದೃಶ್ಯಗಳು ಬಾಷಾನಿನ ಈ ನೋಟವನ್ನು ಹೆಚ್ಚು ಸುಲಭವಾಗಿ ಚಿತ್ರಿಸಿಕೊಳ್ಳಲು ನಿಮಗೆ ಸಹಾಯವಾಗಬಹುದು. ಉದಾಹರಣೆಗೆ, ದವಸಧಾನ್ಯದ ಕೊಯ್ಲಿನ ಕುರಿತು ನೀವು ಓದಿರಬಹುದು. ಬಾಷಾನಿನಲ್ಲಿ ಗೋದಿಯು ತುಂಬಾ ಬೆಳೆಯುತ್ತಿತ್ತು. ಐಯ್ಯಾರ್ ಮತ್ತು ಸಿವಾನ್ ತಿಂಗಳಿನ ಬೆಚ್ಚಗೆನ ಸಮಯಗಳಲ್ಲಿ ಗೋದಿ ಬೆಳೆಯು ಬರುತಿತ್ತು. (ಅದು ಯೆಹೂದಿಯರ ಕ್ಯಾಲೆಂಡರ್ ಎಪ್ರಿಲ್ ತಿಂಗಳ ಕೊನೆಯ ಭಾಗ, ಮೇ ಮತ್ತು ಆರಂಭಿಸಿದ ಜೂನ್ ತಿಂಗಳುಗಳಿಗೆ ಸಮಾನ) ಈ ಸಮಯದಲ್ಲಿ ವಾರಗಳ ಹಬ್ಬ (ಪಂಚಾಶತ್ತಮ) ಬರುತಿತ್ತು. ಅದರ ಭಾಗವಾಗಿ ಗೋದೀಬೆಳೆಯ ಪ್ರಥಮ ಫಲಗಳು ಸಮರ್ಪಿಸಲ್ಪಡುತ್ತಿದ್ದವು. ಕುರಿಗಳು, ಆಡುಗಳು, ಮತ್ತು ಹೋರಿಯೊಂದು ಯಜ್ನವಾಗಿ ಅರ್ಪಿಸಲ್ಪಡುತ್ತಿದ್ದವು. ಈ ಜಾನುವಾರುಗಳು ಬಾಷಾನಿನಿಂದ ತರಲ್ಪಡುತ್ತಿದ್ದವೇ?—ವಿಮೋಚನಕಾಂಡ 34.22; ಯಾಜಕಕಾಂಡ 23:15-18.
ಮೇಲೆ ತೋರಿಸಲ್ಪಟ್ಟ ಬಾಗಿದ ಕುಡುಗೋಲಿನ ಮೂಲಕ ಮಾಗಿದ ಗೋದಿಯನ್ನು ಸುಗ್ಗಿಯ ಕಾಲದಲ್ಲಿ ಕೆಲಸಗಾರರು ಉಪಯೋಗಿಸುತ್ತಿದ್ದರು. ಇದು ಕಬ್ಬಿಣದಿಂದ ಮಾಡಲ್ಪಟ್ಟಿದ್ದಾಗಿ ಮರದ ಹಿಡಿ ಇರುವದಿಲ್ಲ. (ಧರ್ಮೋಪದೇಶಕಾಂಡ 16:9, 10; 23:25) ಸಿವುಡನ್ನು ಅನಂತರ ಒಟ್ಟುಗೂಡಿಸಿ ತೆನೆ ಬಡಿಯುವ ಕಣಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಒಂದು ಮರದ ಸುತ್ತಿಗೆಯನ್ನು (ಅದರ ಕೆಳ ಬದಿಯಲ್ಲಿ ಕಲ್ಲುಗಳಿಂದ ಭದ್ರಮಾಡಿರುತ್ತಾರೆ) ಕಾಳುಗಳನ್ನು ತೆಗೆಯಲು ಅದರ ಮೇಲೆ ಎಳೆಯುತ್ತಾರೆ. (ರೂತ್ 2:2-7, 23; 3:3, 6; ಯೆಶಾಯ 41:15) ಗೊಲಾನ್ ಟಿನಲ್ಲಿ ತೆಗೆದ ಈ ಚಿತ್ರಗಳನ್ನು ನೀವು ನೋಡುತ್ತಿರುವಾಗ ದೇವರ ಅರ್ಥಭರಿತ ನಿಯಮದ ಕುರಿತು ನೀವು ಯೋಚಿಸಬಹುದು: “ಕಣತುಳಿಯುವ ಎತ್ತಿನ ಬಾಯಿ ಕಟ್ಟಬಾರದು.”—ಧರ್ಮೋಪದೇಶಕಾಂಡ 25:4; 1 ಕೊರಿಂಥ 9:9.
ಕೊನೆಗೆ ಪ್ರಾಚೀನ ಬಾಷಾನಿನಲ್ಲಿ ದಪ್ಪನೆಯ ಕಾಡುಗಳಿರುವ ಪ್ರದೇಶಗಳಿದ್ದವೆಂಬದನ್ನು ನೆನಪಿಸಿರಿ. ಕೆಲವು ಮಹತ್ತಾದ ಅಲ್ಲೋನ್ (ಓಕ್) ಮರಗಳಿದ್ದವು. ಎಡಬದಿಯಲ್ಲಿ ಅವು ತೋರಿಸಲ್ಪಟ್ಟಿವೆ. ಬಾಷಾನಿನ ಗಟ್ಟಿಯಾದ ಅಲ್ಲೋನ್ ಮರದಿಂದ ಫೊನಿಶಿಯರು ಹುಟ್ಟುಗೋಲುಗಳನ್ನು ಮಾಡಿದರು. (ಯೆಹೆಜ್ಕೇಲ 27:6) ಆದರೂ ಅಂತಹ “ಬಾಷಾನಿನ ಶ್ರೇಷ್ಟ ಮರಗಳು ನುಗ್ಗಲಾಗದ ವನಗಳು’ ದೇವರ ವ್ಯಕ್ತಪಡಿಸಿದ ಕ್ರೋಧವನ್ನು ತಾಳಲಾರವು. (ಜೆಕರ್ಯ 11:2; ಯೆಶಾಯ 2:13) ಅಂತಹ ವನಗಳುಪಾರಾಗಲು ಓಡುವ ಸೇನೆಗಳಿಗೆ ಹೇಗೆ ಸಮಸ್ಯೆಗಳಾಗಿದ್ದವೆಂದು ಅಂತಹ ಮರಗಳನ್ನು ನೋಡುವವರಿಗೆ ತಿಳಿಯಬಹುದು. ಇನ್ನೊಂದೆಡೆ ಅಬ್ಷಾಲೋಮನಿಗೆ ಆದಂತೆ ಏಕಾಂಗಿ ಸವಾರನೂ ಅದರ ಕೊಂಬೆಗಳಲ್ಲಿ ಸಿಕ್ಕಿಕೊಳ್ಳಬಹುದು.—2 ಸಮುವೇಲ 18:8, 9.
ವಾಗ್ದಾನ ದೇಶದ ಪ್ರದೇಶದಲ್ಲಿ ಬಾಷಾನ್ ಇದ್ದರೂ ಬೈಬಲಿನ ಗಮನಾರ್ಹ ಘಟನೆಗಳು ಅನೇಕವಾಗಿ ಅಲ್ಲಿ ಜರುಗಲಿಲ್ಲ, ಆದರೂ ಅದರ ದೃಶ್ಯಗಳು ಅದಕ್ಕೆ ಬೈಬಲು ನಿರ್ದೇಶಿಸಿರುವದರಿಂದ ನಮ್ಮ ತಿಳುವಳಿಕೆಯು ಹೆಚ್ಚುವದು. (w89 5/1)
[ಅಧ್ಯಯನ ಪ್ರಶ್ನೆಗಳು]
a ಯೆಹೋವನ ಸಾಕ್ಷಿಗಳ 1989ರ ಕ್ಯಾಲೆಂಡರನ್ನು ಸಹಾ ನೋಡಿರಿ
[ಪುಟ 28 ರಲ್ಲಿರುವ ಚಿತ್ರ ಕೃಪೆ]
Pictorial Archive (Near Eastern History) Est.
[Picture Credit Lines on page 29]
Pictorial Archive (Near Eastern History) Est.
Inset: Badè Institute of Biblical Archaeology
Pictorial Archive (Near Eastern History) Est.