ಅಧ್ಯಾಯ 15
ದೇವರನ್ನು ಗೌರವಿಸುವ ಒಂದು ಕುಟುಂಬವನ್ನು ಕಟ್ಟುವುದು
1-3. ವಿವಾಹ ಮತ್ತು ಮಾತಾಪಿತೃತ್ವಕ್ಕೆ ಸಾಮಾನ್ಯವಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಕೆಲವರು ಏಕೆ ಅಶಕ್ತರಾಗುತ್ತಾರೆ, ಆದರೆ ಬೈಬಲು ಏಕೆ ಸಹಾಯ ಮಾಡಬಲ್ಲದು?
ನೀವು ನಿಮ್ಮ ಸ್ವಂತ ಮನೆಯನ್ನು ಕಟ್ಟಲು ಯೋಜಿಸುತ್ತೀರಿ ಎಂದು ಭಾವಿಸೋಣ. ನೀವು ಜಮೀನನ್ನು ಖರೀದಿಸುತ್ತೀರಿ. ತೀವ್ರ ನಿರೀಕ್ಷೆಯಿಂದ ಮನೋದೃಷ್ಟಿಯಲ್ಲಿ ನಿಮ್ಮ ಹೊಸ ಮನೆಯನ್ನು ನೀವು ಕಾಣುತ್ತೀರಿ. ಆದರೆ ನಿಮ್ಮಲ್ಲಿ ಯಾವ ಉಪಕರಣಗಳೂ, ರಚನಾ ಕೌಶಲಗಳೂ ಇಲ್ಲದಿರುವಲ್ಲಿ ಏನು? ನಿಮ್ಮ ಪ್ರಯತ್ನಗಳು ಎಷ್ಟು ಆಶಾಭಂಗ ಹೊಂದುವುವು!
2 ಅನೇಕ ದಂಪತಿಗಳು ಒಂದು ಸಂತೋಷದ ಕುಟುಂಬ ದರ್ಶನವನ್ನು ಕಾಣುತ್ತಾ ವಿವಾಹವನ್ನು ಪ್ರವೇಶಿಸುತ್ತಾರಾದರೂ ಅದನ್ನು ಕಟ್ಟಲು ಉಪಕರಣಗಳಾಗಲಿ, ಕೌಶಲಗಳಾಗಲಿ ಇಲ್ಲದವರಾಗಿರುತ್ತಾರೆ. ವಿವಾಹ ದಿನ ಕಳೆದು ಸ್ವಲ್ಪದರಲ್ಲಿ, ನಕಾರಾತ್ಮಕ ನಮೂನೆಗಳು ವಿಕಾಸಗೊಳ್ಳುತ್ತವೆ. ಕಾದಾಟ ಮತ್ತು ಜಗಳಗಳು ನಿತ್ಯಕ್ರಮದ್ದಾಗುತ್ತವೆ. ಮಕ್ಕಳು ಹುಟ್ಟುವಾಗ ಹೊಸ ತಂದೆತಾಯಿಗಳು, ತಮಗೆ ಮಾತಾಪಿತೃತ್ವದಲ್ಲಿ ವಿವಾಹದಲ್ಲಿದ್ದುದಕ್ಕಿಂತ ಹೆಚ್ಚಿನ ಕೌಶಲವಿಲ್ಲವೆಂದು ಕಂಡುಕೊಳ್ಳುತ್ತಾರೆ.
3 ಆದರೂ ಸಂತೋಷಕರವಾಗಿ, ಬೈಬಲು ಸಹಾಯ ಮಾಡಬಲ್ಲದು. ಅದರ ಮೂಲಸೂತ್ರಗಳು ನಿಮಗೆ ಒಂದು ಸಂತೋಷದ ಕುಟುಂಬವನ್ನು ಕಟ್ಟಲು ಸಾಧ್ಯಮಾಡುವ ಉಪಕರಣಗಳಂತಿವೆ. (ಜ್ಞಾನೋಕ್ತಿ 24:3) ಇದು ಹೇಗೆಂದು ನಾವು ನೋಡೋಣ.
ಒಂದು ಸಂತೋಷದ ಮದುವೆಯನ್ನು ಕಟ್ಟಲಿಕ್ಕಾಗಿ ಉಪಕರಣಗಳು
4. ವಿವಾಹದಲ್ಲಿ ಸಮಸ್ಯೆಗಳು ಏಕೆ ನಿರೀಕ್ಷಿಸತಕ್ಕವುಗಳು, ಮತ್ತು ಬೈಬಲಿನಲ್ಲಿ ಯಾವ ಮಟ್ಟಗಳನ್ನು ಕೊಡಲಾಗಿದೆ?
4 ವಿವಾಹಿತ ದಂಪತಿಗಳು ಎಷ್ಟು ಸುಸಾಮ್ಯರೆಂದು ಕಂಡುಬಂದರೂ, ಭಾವಾತ್ಮಕ ರಚನೆ, ಬಾಲ್ಯಾನುಭವಗಳು ಮತ್ತು ಕೌಟುಂಬಿಕ ಹಿನ್ನೆಲೆಗಳಲ್ಲಿ ಅವರು ಭಿನ್ನರಾಗಿದ್ದಾರೆ. ಆದಕಾರಣ, ವಿವಾಹಾನಂತರ ಕೆಲವು ಸಮಸ್ಯೆಗಳು ನಿರೀಕ್ಷಿಸತಕ್ಕಂಥವುಗಳು. ಅವು ಹೇಗೆ ನಿರ್ವಹಿಸಲ್ಪಡುವುವು? ಒಳ್ಳೆಯದು, ಮನೆಕಟ್ಟುವವರು ಒಂದು ಮನೆಯನ್ನು ಕಟ್ಟುವಾಗ, ಅವರು ನಕಾಸೆಗಳನ್ನು ವಿಚಾರಿಸುತ್ತಾರೆ. ಇವು ಅನುಸರಿಸಬೇಕಾದ ಮಾರ್ಗದರ್ಶಕಗಳು. ಸಂತೋಷದ ಕುಟುಂಬವೊಂದನ್ನು ಕಟ್ಟಲು ಬೈಬಲು ದೇವರ ಮಟ್ಟಗಳನ್ನು ಒದಗಿಸುತ್ತದೆ. ಈಗ ಇವುಗಳಲ್ಲಿ ಕೆಲವನ್ನು ನಾವು ಪರೀಕ್ಷಿಸೋಣ.
5. ವಿವಾಹದಲ್ಲಿ ಕರ್ತವ್ಯ ನಿಷ್ಠೆಯ ಪ್ರಮುಖತೆಯನ್ನು ಬೈಬಲು ಹೇಗೆ ಒತ್ತಿಹೇಳುತ್ತದೆ?
5 ಕರ್ತವ್ಯ ನಿಷ್ಠೆ. ಯೇಸು ಹೇಳಿದ್ದು: “ದೇವರು ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು.”a (ಮತ್ತಾಯ 19:6) ಅಪೊಸ್ತಲ ಪೌಲನು ಬರೆದುದು: “ಗಂಡಹೆಂಡರ ಸಂಬಂಧವು ನಿಷ್ಕಲಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ.” (ಇಬ್ರಿಯ 13:4) ಆದಕಾರಣ ವಿವಾಹಿತ ವ್ಯಕ್ತಿಗಳು ತಮ್ಮ ಜೊತೆಗಳಿಗೆ ನಂಬಿಗಸ್ತರಾಗಿರಲು ಯೆಹೋವನ ಕಡೆಗೆ ಒಂದು ಹಂಗಿನ ಅನಿಸಿಕೆಯುಳ್ಳವರಾಗಬೇಕು.—ಆದಿಕಾಂಡ 39:7-9.
6. ಕರ್ತವ್ಯ ನಿಷ್ಠೆಯು ಒಂದು ವಿವಾಹವನ್ನು ಸಂರಕ್ಷಿಸಲು ಹೇಗೆ ಸಹಾಯ ಮಾಡುವುದು?
6 ಕರ್ತವ್ಯ ನಿಷ್ಠೆಯು ವಿವಾಹಕ್ಕೆ ಘನತೆ ಮತ್ತು ಭದ್ರತೆಯನ್ನು ಕೊಡುತ್ತದೆ. ಏನೇ ಬರಲಿ, ತಾವು ಒಬ್ಬರನ್ನೊಬ್ಬರು ಬೆಂಬಲಿಸಿಕೊಳ್ಳುವೆವೆಂದು ನಿಷ್ಠರಾದ ಪತಿಪತ್ನಿಯರಿಗೆ ಗೊತ್ತಿದೆ. (ಪ್ರಸಂಗಿ 4:9-12) ತೊಂದರೆಯ ಪ್ರಥಮ ಸೂಚನೆಯಲ್ಲಿಯೇ ತಮ್ಮ ವಿವಾಹವನ್ನು ತ್ಯಜಿಸುವವರಿಗಿಂತ ಇದೆಷ್ಟು ವಿಭಿನ್ನ! ಇಂತಹ ವ್ಯಕ್ತಿಗಳು ತಾವು ‘ತಪ್ಪಾದ ವ್ಯಕ್ತಿಯನ್ನು ಆರಿಸಿದ್ದೇವೆ,’ ತಾವು ‘ಪ್ರೇಮಿಸುವುದನ್ನು ನಿಲ್ಲಿಸಿಬಿಟ್ಟಿದ್ದೇವೆ,’ ಮತ್ತು ಇದಕ್ಕಿರುವ ಪರಿಹಾರವು ಹೊಸ ಸಂಗಾತಿಯೇ ಎಂದು ಬೇಗನೆ ತೀರ್ಮಾನಿಸುತ್ತಾರೆ. ಆದರೆ ಇದು ಭಾವನಾತ್ಮಕವಾಗಿ ಬೆಳೆಯುವ ಸಂದರ್ಭವನ್ನು ಪತಿಗೂ ಕೊಡುವುದಿಲ್ಲ, ಪತ್ನಿಗೂ ಕೊಡುವುದಿಲ್ಲ. ಬದಲಿಗೆ, ಇಂತಹ ನಿಷ್ಠಾಹೀನರು ಅವೇ ಸಮಸ್ಯೆಗಳನ್ನು ಹೊಸ ಜೊತೆಗಾರರ ಬಳಿಗೂ ಕೊಂಡೊಯ್ಯಬಹುದು. ಒಬ್ಬ ವ್ಯಕ್ತಿಗೆ ಒಂದು ಉತ್ತಮ ಮನೆಯಿದ್ದರೂ ಚಾವಣಿಯು ಸೋರುತ್ತಿರುವುದನ್ನು ಕಂಡುಕೊಳ್ಳುವುದಾದರೆ, ಅವನು ಅದನ್ನು ರಿಪೇರಿ ಮಾಡಲು ಪ್ರಯತ್ನಿಸುವುದು ಖಂಡಿತ. ಅವನು ಕೇವಲ ಮನೆ ಬದಲಾಯಿಸುವುದಿಲ್ಲ. ಅದೇ ರೀತಿ, ಸಂಗಾತಿಯನ್ನು ಬದಲಾಯಿಸುವುದು ವೈವಾಹಿಕ ಕಲಹದ ಕೆಳಗೆ ಅಡಗಿರುವ ವಿವಾದಾಂಶಗಳನ್ನು ಬಗೆಹರಿಸುವ ವಿಧವಲ್ಲ. ಸಮಸ್ಯೆಗಳು ಎದ್ದೇಳುವಾಗ, ವಿವಾಹವನ್ನು ಕೊನೆಗೊಳಿಸುವ ಮಾರ್ಗಕ್ಕಾಗಿ ಪ್ರಯತ್ನಿಸಬೇಡಿ, ಬದಲಿಗೆ ಅದನ್ನು ಕಾಪಾಡಲು ಅತಿ ಕಷ್ಟಪಟ್ಟು ಕೆಲಸಮಾಡಿರಿ. ಇಂತಹ ನಿಷ್ಠೆಯು ಆ ಬಂಧವನ್ನು ರಕ್ಷಿಸಲು, ದುರಸ್ತಾಗಿಡಲು ಮತ್ತು ಪೋಷಿಸಲು ಯೋಗ್ಯವಾದದ್ದಾಗಿ ಭಾವಿಸುವುದು.
7. ಸಂವಾದವು ವಿವಾಹಿತರಿಗೆ ಅನೇಕವೇಳೆ ಏಕೆ ಕಷ್ಟಕರವಾಗುತ್ತದೆ, ಆದರೆ “ನೂತನ ವ್ಯಕ್ತಿತ್ವ”ದ ಧರಿಸುವಿಕೆಯು ಹೇಗೆ ಸಹಾಯ ಮಾಡಬಲ್ಲದು?
7 ಸಂವಾದ. “ಆಪ್ತ ಮಾತುಕತೆಯಿಲ್ಲದಿರುವಲ್ಲಿ ಯೋಜನೆಗಳ ಆಶಾಭಂಗವಾಗುತ್ತದೆ,” ಎನ್ನುತ್ತದೆ ಬೈಬಲಿನ ಒಂದು ಜ್ಞಾನೋಕ್ತಿ. (ಜ್ಞಾನೋಕ್ತಿ 15:22, NW) ಆದರೂ ಕೆಲವು ವಿವಾಹಿತ ಜೊತೆಗಳಿಗೆ ಸಂವಾದವು ಕಷ್ಟಕರ. ಅದೇಕೆ ಹಾಗೆ? ಏಕೆಂದರೆ ಜನರಿಗೆ ವಿಭಿನ್ನ ಸಂವಾದ ಶೈಲಿಗಳಿವೆ. ಈ ನಿಜತ್ವವೇ ಅನೇಕವೇಳೆ ಗಣನೀಯವಾದ ತಪ್ಪಭಿಪ್ರಾಯ ಮತ್ತು ಹತಾಶೆಗೆ ನಡೆಸುತ್ತದೆ. ಪಾಲನೆಯು ಇದರಲ್ಲಿ ಒಂದು ಪಾತ್ರ ವಹಿಸಬಹುದು. ಉದಾಹರಣೆಗೆ, ಕೆಲವರು ಹೆತ್ತವರ ಜಗಳದ ವಾತಾವರಣದಲ್ಲಿ ಬೆಳೆದುಬಂದಿರಬಹುದು. ಈಗ ವಿವಾಹಿತ ವಯಸ್ಕರಾಗಿ, ತಮ್ಮ ಸಂಗಾತಿಗೆ ದಯೆ ಮತ್ತು ಪ್ರೀತಿಯ ವಿಧದಲ್ಲಿ ಹೇಗೆ ಮಾತಾಡಬೇಕೆಂಬುದು ಅವರಿಗೆ ಗೊತ್ತಿರಲಿಕ್ಕಿಲ್ಲ. ಆದರೂ, ನಿಮ್ಮ ಮನೆಯು ಒಂದು ‘ವ್ಯಾಜ್ಯ ತುಂಬಿದ ಮನೆ’ ಯಾಗಿ ಕ್ಷಯಿಸುವ ಆವಶ್ಯಕತೆಯಿಲ್ಲ. (ಜ್ಞಾನೋಕ್ತಿ 17:1) “ನೂತನ ವ್ಯಕ್ತಿತ್ವ” (NW) ವನ್ನು ಧರಿಸುವುದನ್ನು ಬೈಬಲು ಒತ್ತಿಹೇಳುತ್ತದೆ ಮತ್ತು ಅದು ಹಗೆಸಾಧನೆಯ ಕಟುತ್ವ, ಕಿರಿಚಾಟ ಮತ್ತು ಬೈಗುಳಗಳನ್ನು ಮನ್ನಿಸುವುದಿಲ್ಲ.—ಎಫೆಸ 4:22-24, 31.
8. ನಿಮ್ಮ ಜೊತೆಯೊಡನೆ ನೀವು ಅಸಮ್ಮತಿಸುವಾಗ ಯಾವುದು ಸಹಾಯಕರವಾದೀತು?
8 ಭಿನ್ನಾಭಿಪ್ರಾಯಗಳಿರುವಾಗ ನೀವೇನು ಮಾಡಬಲ್ಲಿರಿ? ಕೋಪವು ಭಗ್ಗನೆ ಹೊತ್ತಿಕೊಳ್ಳಲು ಆರಂಭಗೊಳ್ಳುವಲ್ಲಿ ನೀವು ಜ್ಞಾನೋಕ್ತಿ 17:14ರ ಬುದ್ಧಿವಾದವನ್ನು ಅನುಸರಿಸುವುದು ಒಳ್ಳೆಯದು: “ಸಿಟ್ಟೇರುವದಕ್ಕಿಂತ ಮುಂಚೆ ಜಗಳವನ್ನು ಬಿಟ್ಟುಬಿಡು [“ಬೀಳ್ಕೊಳ್ಳು,” NW].” ಹೌದು, ನೀವೂ ನಿಮ್ಮ ಜೊತೆಯೂ ಶಾಂತವಾಗುವ ಸಮಯದ ವರೆಗೆ ಚರ್ಚೆಯನ್ನು ನಿಲ್ಲಿಸಬಹುದು. (ಪ್ರಸಂಗಿ 3:1, 7) ಯಾವುದೇ ವಿದ್ಯಮಾನದಲ್ಲಿ, “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ . . . ಕೋಪಿಸುವದರಲ್ಲಿ ನಿಧಾನವಾಗಿ”ಯೂ ಇರಲು ಪ್ರಯತ್ನಿಸಿರಿ. (ಯಾಕೋಬ 1:19) ನಿಮ್ಮ ಗುರಿಯು ಆ ಸನ್ನಿವೇಶವನ್ನು ಸರಿಪಡಿಸುವುದು ಆಗಿರಬೇಕು, ವಾದವನ್ನು ಜಯಿಸುವುದಾಗಿರಬಾರದು. (ಆದಿಕಾಂಡ 13:8, 9) ನಿಮ್ಮನ್ನೂ ನಿಮ್ಮ ಸಂಗಾತಿಯನ್ನೂ ಶಾಂತಪಡಿಸುವ ಮಾತುಗಳನ್ನೂ ಮಾತಾಡುವ ರೀತಿಯನ್ನೂ ಆರಿಸಿಕೊಳ್ಳಿರಿ. (ಜ್ಞಾನೋಕ್ತಿ 12:18; 15:1, 4; 29:11) ಎಲ್ಲದಕ್ಕಿಂತ ಹೆಚ್ಚಾಗಿ, ರೇಗಿರುವ ಸ್ಥಿತಿಯಲ್ಲಿ ಉಳಿಯದೆ, ನಮ್ರ ಪ್ರಾರ್ಥನೆಯನ್ನು ಕೂಡಿ ಮಾಡುತ್ತಾ ದೇವರೊಂದಿಗೆ ಸಂವಾದ ಮಾಡುವ ಮೂಲಕ ಸಹಾಯವನ್ನು ಹುಡುಕಿರಿ.—ಎಫೆಸ 4:26, 27; 6:18.
9. ಸಂವಾದವು ಹೃದಯದಲ್ಲಿ ಆರಂಭಗೊಳ್ಳುತ್ತದೆಂದು ಏಕೆ ಹೇಳಸಾಧ್ಯವಿದೆ?
9 ಒಂದು ಬೈಬಲ್ ಜ್ಞಾನೋಕ್ತಿ ಹೇಳುವುದು: “ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ ಅವನ ತುಟಿಗಳಿಗೆ ಉಪದೇಶಶಕ್ತಿಯನ್ನೂ ಹೆಚ್ಚಿಸುವದು.” (ಜ್ಞಾನೋಕ್ತಿ 16:23) ಹಾಗಾದರೆ ನಿಜವಾಗಿಯೂ, ಯಶಸ್ವಿಕರವಾದ ಸಂವಾದಕ್ಕಿರುವ ಕೀಲಿ ಕೈ ಹೃದಯಲ್ಲಿದೆ, ಬಾಯಿಯಲ್ಲಲ್ಲ. ನಿಮ್ಮ ಜೊತೆಯ ಕಡೆಗೆ ನಿಮ್ಮ ಮನೋಭಾವವೇನು? “ಸಹಾನುಭೂತಿ” ಯನ್ನು ತೋರಿಸುವಂತೆ ಬೈಬಲು ಕ್ರೈಸ್ತರನ್ನು ಪ್ರೋತ್ಸಾಹಿಸುತ್ತದೆ. (1 ಪೇತ್ರ 3:8, NW) ನಿಮ್ಮ ವಿವಾಹ ಜೊತೆಯು ಸಂಕಟಕರವಾದ ವ್ಯಾಕುಲವನ್ನು ಅನುಭವಿಸುವಾಗ ನೀವಿದನ್ನು ಮಾಡಬಲ್ಲಿರೊ? ಹಾಗಿರುವಲ್ಲಿ, ಉತ್ತರಕೊಡುವ ವಿಧವನ್ನು ತಿಳಿಯಲು ಅದು ನಿಮಗೆ ಸಹಾಯ ಮಾಡುವುದು.—ಯೆಶಾಯ 50:4.
10, 11. 1 ಪೇತ್ರ 3:7ರ ಬುದ್ಧಿವಾದವನ್ನು ಒಬ್ಬ ಗಂಡನು ಹೇಗೆ ಅನ್ವಯಿಸಬಲ್ಲನು?
10 ಸನ್ಮಾನ ಮತ್ತು ಗೌರವ. “ಜ್ಞಾನಾನುಸಾರವಾಗಿ . . . ಸ್ತ್ರೀಸಹಜವಾದ ಹೆಚ್ಚು ಬಲಹೀನ ಪಾತ್ರೆಗೋ ಎಂಬಂತೆ ಗೌರವವನ್ನು ಗೊತ್ತುಮಾಡಿ,” ತಮ್ಮ ಹೆಂಡತಿಯರೊಂದಿಗೆ ಜೀವಿಸಬೇಕೆಂದು ಕ್ರೈಸ್ತ ಗಂಡಂದಿರಿಗೆ ಹೇಳಲಾಗಿದೆ. (1 ಪೇತ್ರ 3:7, NW) ಒಬ್ಬನ ಹೆಂಡತಿಯನ್ನು ಸನ್ಮಾನಿಸುವುದರಲ್ಲಿ ಆಕೆಯ ಮೌಲ್ಯವನ್ನು ಒಪ್ಪಿಕೊಳ್ಳುವುದು ಒಳಗೂಡಿದೆ. “ಜ್ಞಾನಾನುಸಾರವಾಗಿ” ಹೆಂಡತಿಯೊಂದಿಗೆ ಜೀವಿಸುವ ಗಂಡನಲ್ಲಿ ಆಕೆಯ ಅನಿಸಿಕೆಗಳು, ಸಾಮರ್ಥ್ಯಗಳು, ಬುದ್ಧಿಶಕ್ತಿ, ಮತ್ತು ಘನತೆಗೆ ಮೆಚ್ಚಿಕೆಯ ಅಭಿಪ್ರಾಯವಿರುತ್ತದೆ. ಯೆಹೋವನು ಸ್ತ್ರೀಯರನ್ನು ಹೇಗೆ ವೀಕ್ಷಿಸುತ್ತಾನೆ ಮತ್ತು ಉಪಚರಿಸಲ್ಪಡುವಂತೆ ಬಯಸುತ್ತಾನೆ ಎಂಬುದನ್ನೂ ಅವನು ತಿಳಿಯಬಯಸಬೇಕು.
11 ನಿಮ್ಮ ಮನೆಯಲ್ಲಿ ವಿಶೇಷವಾಗಿ ಕೋಮಲವಾಗಿರುವ, ಅತಿ ಉಪಯುಕ್ತವಾದ ಒಂದು ಪಾತ್ರೆಯಿದೆಯೆಂದು ಇಟ್ಟುಕೊಳ್ಳೋಣ. ನೀವು ಅದನ್ನು ಅತಿ ಜಾಗರೂಕತೆಯಿಂದ ನೋಡಿಕೊಳ್ಳುವುದಿಲ್ಲವೆ? ಒಳ್ಳೆಯದು, ಪೇತ್ರನು ಅದೇ ಧಾಟಿಯಲ್ಲಿ “ಹೆಚ್ಚು ಬಲಹೀನ ಪಾತ್ರೆ” ಎಂಬ ಪದವನ್ನು ಉಪಯೋಗಿಸಿದನು, ಮತ್ತು ಇದು, ಒಬ್ಬ ಕ್ರೈಸ್ತ ಗಂಡನನ್ನು ತನ್ನ ಪ್ರಿಯ ಪತ್ನಿಗೆ ಮೃದುವಾದ ಲಕ್ಷ್ಯವನ್ನು ತೋರಿಸುವಂತೆ ಪ್ರಚೋದಿಸಬೇಕು.
12. ತಾನು ತನ್ನ ಗಂಡನನ್ನು ಗಾಢವಾಗಿ ಸನ್ಮಾನಿಸುತ್ತೇನೆಂದು ಒಬ್ಬ ಹೆಂಡತಿಯು ಹೇಗೆ ತೋರಿಸಬಲ್ಲಳು?
12 ಆದರೆ ಬೈಬಲು ಹೆಂಡತಿಗೆ ಯಾವ ಸಲಹೆಯನ್ನೀಯುತ್ತದೆ? ಪೌಲನು ಬರೆದುದು: “ಪ್ರತಿ ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿ [“ಗಾಢವಾದ ಗೌರವ,” NW] ಯಿಂದ ನಡೆದುಕೊಳ್ಳಬೇಕು.” (ಎಫೆಸ 5:33) ತನ್ನ ಗಂಡನಿಂದ ಸನ್ಮಾನಿಸಲ್ಪಟ್ಟು ಆಳವಾಗಿ ಪ್ರೀತಿಸಲ್ಪಡುತ್ತೇನೆಂಬ ಪ್ರಜ್ಞೆಯು ಹೆಂಡತಿಗೆ ಅವಶ್ಯವಿರುವಂತೆಯೇ, ತನ್ನ ಹೆಂಡತಿಯಿಂದ ಗೌರವಿಸಲ್ಪಡುತ್ತೇನೆಂಬ ಅನಿಸಿಕೆಯ ಆವಶ್ಯಕತೆ ಗಂಡನಿಗಿರುತ್ತದೆ. ಮಾನಕೊಡುವ ಹೆಂಡತಿಯು ತನ್ನ ಗಂಡನ ದೋಷಗಳನ್ನು—ಅವನು ಕ್ರೈಸ್ತನಾಗಿರಲಿ, ಇಲ್ಲದಿರಲಿ, ನಿರ್ಲಕ್ಷದಿಂದ ಪ್ರಸಾರಮಾಡಳು. ಅವಳು ಅವನನ್ನು ಖಾಸಗಿಯಾಗಿಯಾಗಲಿ, ಬಹಿರಂಗವಾಗಿಯಾಗಲಿ ಟೀಕಿಸಿ ಅಥವಾ ತೃಣೀಕರಿಸಿ ಅವನ ಘನತೆಯನ್ನು ಅಪಹರಿಸಳು.—1 ತಿಮೊಥೆಯ 3:11; 5:13.
13. ದೃಷ್ಟಿಕೋನಗಳನ್ನು ಶಾಂತ ರೀತಿಯಲ್ಲಿ ಹೇಗೆ ವ್ಯಕ್ತಪಡಿಸಸಾಧ್ಯವಿದೆ?
13 ಒಬ್ಬ ಹೆಂಡತಿಯು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಸಾಧ್ಯವಿಲ್ಲವೆಂದು ಇದರ ಅರ್ಥವಲ್ಲ. ಯಾವುದೇ ವಿಷಯವು ಅವಳಿಗೆ ಶಾಂತಿಭಂಗವನ್ನು ತರುವುದಾದರೆ ಅವಳು ಅದನ್ನು ಗೌರವಪೂರ್ವಕವಾಗಿ ವ್ಯಕ್ತಪಡಿಸಬಲ್ಲಳು. (ಆದಿಕಾಂಡ 21:9-12) ತನ್ನ ಗಂಡನಿಗೆ ಒಂದು ವಿಚಾರವನ್ನು ತಿಳಿಯಪಡಿಸುವುದನ್ನು ಅವನಿಗೆ ಒಂದು ಚೆಂಡನ್ನು ಎಸೆಯುವುದಕ್ಕೆ ಹೋಲಿಸಬಹುದು. ಅವನು ಸುಲಭವಾಗಿ ಹಿಡಿಯಲಾಗುವಂತೆ ಅವಳು ಅದನ್ನು ಒಂದೋ ಹಗುರವಾಗಿ ಎಸೆಯಬಲ್ಲಳು, ಇಲ್ಲವೆ ಅವನಿಗೆ ಘಾಸಿಯಾಗುವಷ್ಟು ರಭಸದಿಂದ ಬಿಸಾಡಬಲ್ಲಳು. ಇಬ್ಬರು ಜೊತೆಗಳೂ ಆರೋಪಗಳನ್ನು ಎಸೆಯುವುದನ್ನು ವರ್ಜಿಸಿ, ಬದಲಿಗೆ ದಯೆಯ ಮತ್ತು ಮೃದುವಾದ ರೀತಿಯಲ್ಲಿ ಮಾತಾಡುವುದು ಎಷ್ಟು ಮಿಗಿಲು!—ಮತ್ತಾಯ 7:12; ಕೊಲೊಸ್ಸೆ 4:6; 1 ಪೇತ್ರ 3:3, 4.
14. ನಿಮ್ಮ ಜೊತೆಯು ವಿವಾಹದಲ್ಲಿ ಬೈಬಲ್ ಮೂಲಸೂತ್ರಗಳನ್ನು ಅನ್ವಯಿಸಲು ತುಸು ಆಸಕ್ತಿಯನ್ನು ತೋರಿಸುವಲ್ಲಿ ನೀವೇನು ಮಾಡಬೇಕು?
14 ನಾವು ನೋಡಿರುವಂತೆ, ಒಂದು ಸಂತೋಷವುಳ್ಳ ವಿವಾಹವನ್ನು ಕಟ್ಟಲು ಬೈಬಲ್ ಮೂಲಸೂತ್ರಗಳು ಸಹಾಯ ಮಾಡಬಲ್ಲವು. ಆದರೆ ಬೈಬಲು ಹೇಳಲಿರುವ ವಿಷಯದಲ್ಲಿ ನಿಮ್ಮ ಸಂಗಾತಿಯು ಕಡಮೆ ಅಭಿರುಚಿಯನ್ನು ತೋರಿಸುವಲ್ಲಿ ಏನು? ದೇವರ ಜ್ಞಾನವನ್ನು ನಿಮ್ಮ ಪಾತ್ರಕ್ಕೆ ನೀವು ಅನ್ವಯಿಸಿಕೊಳ್ಳುವಲ್ಲಿ ಆಗಲೂ ಹೆಚ್ಚನ್ನು ಸಾಧಿಸಸಾಧ್ಯವಿದೆ. ಪೇತ್ರನು ಬರೆದುದು: “ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.” (1 ಪೇತ್ರ 3:1, 2) ಇದೇ ವಿಷಯವು ಯಾರ ಹೆಂಡತಿಯು ಬೈಬಲಿನ ಕಡೆಗೆ ಅನಾಸಕ್ತಳೋ ಅಂತಹ ಗಂಡನಿಗೂ ಅನ್ವಯಿಸುತ್ತದೆ ನಿಶ್ಚಯ. ನಿಮ್ಮ ಜೊತೆಯು ಯಾವುದನ್ನೇ ಮಾಡಲು ಆರಿಸಿಕೊಳ್ಳಲಿ, ಬೈಬಲ್ ಮೂಲಸೂತ್ರಗಳು ನಿಮ್ಮನ್ನು ಹೆಚ್ಚು ಉತ್ತಮವಾದ ಪತಿಯೋ ಪತ್ನಿಯೋ ಆಗಿ ಮಾಡುವಂತೆ ಬಿಡಿರಿ. ದೇವರ ಜ್ಞಾನವು ನಿಮ್ಮನ್ನು ಹೆಚ್ಚು ಉತ್ತಮವಾದ ಹೆತ್ತವರೊಬ್ಬರಾಗುವಂತೆ ಮಾಡಬಲ್ಲದು.
ದೇವರ ಜ್ಞಾನಾನುಸಾರವಾಗಿ ಮಕ್ಕಳನ್ನು ಬೆಳೆಸುವುದು
15. ಮಕ್ಕಳನ್ನು ಬೆಳೆಸುವ ನ್ಯೂನ ವಿಧಾನಗಳು ಕೆಲವು ಬಾರಿ ಹೇಗೆ ದಾಟಿಸಲ್ಪಡುತ್ತವೆ, ಆದರೆ ಈ ನಮೂನೆಯನ್ನು ಹೇಗೆ ಬದಲಾಯಿಸಬಹುದು?
15 ಒಬ್ಬನಲ್ಲಿ ಒಂದು ಗರಗಸವೊ ಸುತ್ತಿಗೆಯೊ ಇರುವ ಮಾತ್ರಕ್ಕೆ ಅವನು ಒಬ್ಬ ಕುಶಲ ಬಡಗಿಯಾಗುವುದಿಲ್ಲ. ಅದೇ ರೀತಿ, ಕೇವಲ ಮಕ್ಕಳಿರುವ ಮಾತ್ರಕ್ಕೆ ಅದು ಒಬ್ಬನನ್ನು ಕುಶಲ ಜನ್ಮದಾತೃವಾಗಿ ಮಾಡುವುದಿಲ್ಲ. ಹೆತ್ತವರು ಅನೇಕವೇಳೆ, ಗೊತ್ತಿದ್ದೋ ಇಲ್ಲದೆಯೋ, ತಾವು ಬೆಳೆಸಲ್ಪಟ್ಟ ರೀತಿಯಲ್ಲಿಯೇ ತಮ್ಮ ಮಕ್ಕಳನ್ನು ಬೆಳೆಸುತ್ತಾರೆ. ಹೀಗೆ, ಹೆತ್ತವರು ಮಕ್ಕಳನ್ನು ಬೆಳೆಸುವ ನ್ಯೂನ ವಿಧಾನಗಳು ಕೆಲವು ಬಾರಿ ಒಂದರಿಂದ ಇನ್ನೊಂದು ಸಂತತಿಗೆ ದಾಟಿಸಲ್ಪಡುತ್ತದೆ. ಒಂದು ಹಳೆಯ ಹೀಬ್ರು ನಾಣ್ಣುಡಿ ಹೇಳುವುದು: “ಮಾಗಿಲ್ಲದ ಹಣ್ಣನ್ನು ತಿನ್ನುವವರು ತಂದೆಗಳಾದರೂ ಜುಮಗುಟ್ಟುವುದು ಮಕ್ಕಳ ಹಲ್ಲುಗಳೇ.” ಆದರೂ, ಹೆತ್ತವರು ಇಟ್ಟ ಮಾರ್ಗವನ್ನು ಒಬ್ಬ ವ್ಯಕ್ತಿ ಅನುಸರಿಸಬೇಕಾಗಿಲ್ಲವೆಂದು ಶಾಸ್ತ್ರಗಳು ತೋರಿಸುತ್ತವೆ. ಅವನು ವಿಭಿನ್ನವಾದ ಪಥವೊಂದನ್ನು, ಯೆಹೋವನ ಕಟ್ಟಳೆಗಳು ಪ್ರಭಾವ ಬೀರಿರುವ ಪಥವನ್ನು ಆರಿಸಿಕೊಳ್ಳಬಲ್ಲನು.—ಯೆಹೆಜ್ಕೇಲ 18:2, 14, 17.
16. ನಿಮ್ಮ ಕುಟುಂಬಕ್ಕೆ ಒದಗಿಸುವುದು ಏಕೆ ಪ್ರಾಮುಖ್ಯ, ಮತ್ತು ಇದರಲ್ಲಿ ಏನು ಒಳಗೂಡಿದೆ?
16 ಕ್ರೈಸ್ತ ಹೆತ್ತವರು ತಮ್ಮ ಮಕ್ಕಳಿಗೆ ಯೋಗ್ಯವಾದ ಮಾರ್ಗದರ್ಶನೆ ಮತ್ತು ಪರಾಮರಿಕೆಯನ್ನು ಕೊಡಬೇಕೆಂದು ಯೆಹೋವನು ನಿರೀಕ್ಷಿಸುತ್ತಾನೆ. ಪೌಲನು ಬರೆದುದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:8) ಎಷ್ಟು ಬಲವತ್ತಾದ ಮಾತುಗಳು! ನಿಮ್ಮ ಮಕ್ಕಳ ಶಾರೀರಿಕ, ಆತ್ಮಿಕ ಮತ್ತು ಭಾವಾತ್ಮಕ ಆವಶ್ಯಕತೆಗಳ ಜೋಕೆ ವಹಿಸುವುದು ಕೂಡಿಕೊಂಡಿರುವ, ಒದಗಿಸುವಾತನಾಗಿರುವ ನಿಮ್ಮ ಪಾತ್ರವನ್ನು ಪೂರೈಸುವುದು ದೈವಭಕ್ತಿಯ ಒಬ್ಬ ವ್ಯಕ್ತಿಯ ಸುಯೋಗವೂ ಜವಾಬ್ದಾರಿಯೂ ಆಗಿದೆ. ತಮ್ಮ ಮಕ್ಕಳಿಗೆ ಒಂದು ಸಂತೋಷದ ಪರಿಸರವನ್ನು ಕಟ್ಟಲು ಹೆತ್ತವರಿಗೆ ಸಹಾಯ ಮಾಡುವ ಮೂಲಸೂತ್ರಗಳನ್ನು ಬೈಬಲು ಒದಗಿಸುತ್ತದೆ. ಇವುಗಳಲ್ಲಿ ಕೆಲವನ್ನು ಪರಿಗಣಿಸಿರಿ.
17. ನಿಮ್ಮ ಮಕ್ಕಳ ಹೃದಯದಲ್ಲಿ ದೇವರ ನಿಯಮಗಳಿರಬೇಕಾದರೆ ಏನು ಅಗತ್ಯ?
17 ಉತ್ತಮವಾದ ಒಂದು ಮಾದರಿಯನ್ನಿಡಿರಿ. ಇಸ್ರಾಯೇಲ್ಯ ಹೆತ್ತವರಿಗೆ ಆಜ್ಞಾಪಿಸಲಾದದ್ದು: “ಇವುಗಳನ್ನು [ದೇವರ ವಾಕ್ಯಗಳನ್ನು] ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” ಹೆತ್ತವರು ತಮ್ಮ ಮಕ್ಕಳಿಗೆ ದೇವರ ಮಟ್ಟಗಳನ್ನು ಕಲಿಸಬೇಕಾಗಿತ್ತು. ಆದರೆ ಈ ಬುದ್ಧಿವಾದವು, “ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯ ದಲ್ಲಿರಬೇಕು” ಎಂಬ ಹೇಳಿಕೆಯಿಂದ ಆರಂಭಿಸಲ್ಪಟ್ಟಿತ್ತು. (ಧರ್ಮೋಪದೇಶಕಾಂಡ 6:6, 7, ಓರೆಅಕ್ಷರಗಳು ನಮ್ಮವು.) ಹೌದು, ತಮ್ಮಲ್ಲಿಲ್ಲದ್ದನ್ನು ಹೆತ್ತವರು ಕೊಡಲಾರರು. ನಿಮ್ಮ ಮಕ್ಕಳ ಹೃದಯಗಳಲ್ಲಿ ದೇವರ ನಿಯಮಗಳು ಬರೆಯಲ್ಪಡಬೇಕಾದರೆ ಅವು ನಿಮ್ಮ ಸ್ವಂತ ಹೃದಯಗಳಲ್ಲಿ ಪ್ರಥಮವಾಗಿ ಕೆತ್ತಲ್ಪಡಬೇಕು.—ಜ್ಞಾನೋಕ್ತಿ 20:7; ಹೋಲಿಸಿ ಲೂಕ 6:40.
18. ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಯೆಹೋವನು ಹೆತ್ತವರಿಗೆ ಬಲು ಸೊಗಸಾದ ಮಾದರಿಯನ್ನಿಟ್ಟಿರುವುದು ಹೇಗೆ?
18 ನಿಮ್ಮ ಪ್ರೀತಿಯ ಆಶ್ವಾಸನೆಯನ್ನು ಒದಗಿಸಿರಿ. ಯೇಸುವಿನ ದೀಕ್ಷಾಸ್ನಾನದಲ್ಲಿ ಯೆಹೋವನು ಪ್ರಕಟಿಸಿದ್ದು: “ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ.” (ಲೂಕ 3:22) ಯೆಹೋವನು ಹೀಗೆ ತನ್ನ ಪುತ್ರನನ್ನು, ಉದಾರವಾಗಿ ಒಪ್ಪಿಗೆಯನ್ನು ವ್ಯಕ್ತಪಡಿಸುತ್ತಾ, ತನ್ನ ಪ್ರೀತಿಯ ಆಶ್ವಾಸನೆ ಕೊಡುತ್ತಾ ಸ್ವೀಕರಿಸಿದನು. ಯೇಸು ತನ್ನ ತಂದೆಗೆ ತರುವಾಯ ಹೇಳಿದ್ದು: “ಲೋಕವು ಹುಟ್ಟುವದಕ್ಕಿಂತ ಮುಂಚೆಯೇ ನೀನು ನನ್ನನ್ನು ಪ್ರೀತಿಸಿ”ದ್ದಿ. (ಯೋಹಾನ 17:24) ಹಾಗಾದರೆ, ದೈವಭಕ್ತಿಯ ಹೆತ್ತವರಾಗಿ, ನಿಮ್ಮ ಮಕ್ಕಳಿಗೆ ಶಾಬ್ದಿಕವಾಗಿಯೂ ಶಾರೀರಿಕವಾಗಿಯೂ ನಿಮ್ಮ ಪ್ರೀತಿಯ ಅಭಿವ್ಯಕ್ತಿಗಳನ್ನು ಕೊಡಿರಿ—ಇದನ್ನು ಅನೇಕಾವರ್ತಿ ಮಾಡಿರಿ. “ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ,” ಎಂಬುದನ್ನು ಸದಾ ಜ್ಞಾಪಿಸಿರಿ.—1 ಕೊರಿಂಥ 8:1.
19, 20. ಮಕ್ಕಳ ಯೋಗ್ಯವಾದ ಶಿಸ್ತಿನಲ್ಲಿ ಏನು ಒಳಗೊಂಡಿದೆ, ಮತ್ತು ಹೆತ್ತವರು ಯೆಹೋವನ ಮಾದರಿಯಿಂದ ಹೇಗೆ ಪ್ರಯೋಜನ ಹೊಂದಬಲ್ಲರು?
19 ಶಿಸ್ತು. ಪ್ರೀತಿಯ ಶಿಸ್ತಿನ ಪ್ರಮುಖತೆಯನ್ನು ಬೈಬಲು ಒತ್ತಿಹೇಳುತ್ತದೆ. (ಜ್ಞಾನೋಕ್ತಿ 1:8) ಇಂದು ತಮ್ಮ ಮಕ್ಕಳನ್ನು ಮಾರ್ಗದರ್ಶಿಸಲು ತಮಗಿರುವ ಜವಾಬ್ದಾರಿಯನ್ನು ತಪ್ಪಿಸಿಕೊಳ್ಳುವ ಹೆತ್ತವರು ನಾಳೆ ಬಹುಮಟ್ಟಿಗೆ ನಿಶ್ಚಯವಾಗಿ ಎದೆಯೊಡೆಯುವ ಪರಿಣಾಮಗಳನ್ನು ಎದುರಿಸುವರು. ಆದರೂ, ಹೆತ್ತವರು ಇನ್ನೊಂದು ವಿಪರೀತಕ್ಕೆ ಹೋಗುವುದರ ವಿರುದ್ಧ ಎಚ್ಚರಿಸಲ್ಪಡುತ್ತಾರೆ. ಪೌಲನು ಬರೆದುದು: “ತಂದೆಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.” (ಕೊಲೊಸ್ಸೆ 3:21) ಮಕ್ಕಳನ್ನು ಮಿತಿಮೀರಿ ತಿದ್ದುವುದನ್ನು ಅಥವಾ ಅವರ ದೋಷಗಳ ವಿಷಯವಾಗಿ ಹಾಡಿದ್ದೇ ಹಾಡುವುದನ್ನು ಮತ್ತು ಸದಾ ಅವರ ಪ್ರಯತ್ನಗಳನ್ನು ಟೀಕಿಸುವುದನ್ನು ವರ್ಜಿಸಬೇಕು.
20 ನಮ್ಮ ಸ್ವರ್ಗೀಯ ಪಿತನಾದ ಯೆಹೋವ ದೇವರು ಶಿಸ್ತನ್ನು ಒದಗಿಸುವುದರಲ್ಲಿ ಮಾದರಿಯನ್ನಿಡುತ್ತಾನೆ. ಅವನ ತಿದ್ದುಪಾಟು ಎಂದಿಗೂ ವಿಪರೀತದ್ದಲ್ಲ. “ನನಗೆ ನಿಮ್ಮನ್ನು ಯೋಗ್ಯ ಪ್ರಮಾಣದಲ್ಲಿ ಶಿಕ್ಷಿಸಬೇಕಾಗುವುದು,” ಎಂದು ದೇವರು ತನ್ನ ಜನರಿಗೆ ಹೇಳಿದನು. (ಯೆರೆಮೀಯ 46:28, NW) ಈ ವಿಷಯದಲ್ಲಿ ಹೆತ್ತವರು ಯೆಹೋವನನ್ನು ಅನುಕರಿಸಬೇಕು. ನ್ಯಾಯಸಮ್ಮತ ಮಿತಿಗಳನ್ನು ಮೀರುವ ಅಥವಾ ತಿದ್ದುವ ಮತ್ತು ಕಲಿಸುವ ಸಂಕಲ್ಪಿತ ಉದ್ದೇಶವನ್ನು ದಾಟಿಹೋಗುವ ಶಿಸ್ತು ನಿಶ್ಚಯವಾಗಿಯೂ ಕೆಣಕುವುದಾಗುತ್ತದೆ.
21. ತಮ್ಮ ಶಿಸ್ತು ಪರಿಣಾಮಕಾರಿಯೋ ಎಂದು ಹೆತ್ತವರು ಹೇಗೆ ನಿರ್ಧರಿಸಬಲ್ಲರು?
21 ತಮ್ಮ ಶಿಸ್ತು ಪರಿಣಾಮಕಾರಿಯೋ ಎಂದು ಹೆತ್ತವರು ನಿರ್ಧರಿಸುವುದು ಹೇಗೆ? ಅವರು ತಮ್ಮನ್ನು, ‘ನಮ್ಮ ಶಿಸ್ತು ಏನನ್ನು ಪೂರೈಸುತ್ತದೆ?’ ಎಂದು ಕೇಳಿಕೊಳ್ಳಬಹುದು. ಅದು ಕಲಿಸಬೇಕು. ಶಿಸ್ತು ಏಕೆ ಕೊಡಲಾಗುತ್ತಿದೆ ಎಂದು ನಿಮ್ಮ ಮಗುವಿಗೆ ತಿಳಿಯತಕ್ಕದ್ದು. ತಮ್ಮ ತಿದ್ದುಪಾಟಿನ ಪಶ್ಚಾತ್ಪರಿಣಾಮದ ಕುರಿತು ಸಹ ಹೆತ್ತವರು ಚಿಂತಿತರಾಗಿರಬೇಕು. ನಿಜ, ಹೆಚ್ಚುಕಡಮೆ ಎಲ್ಲ ಮಕ್ಕಳು ಪ್ರಥಮವಾಗಿ ಶಿಸ್ತಿಗೆ ಸಿಡುಗುಟ್ಟುವರು. (ಇಬ್ರಿಯ 12:11) ಆದರೆ ಶಿಸ್ತು ಒಬ್ಬ ಮಗುವನ್ನು ಗಾಬರಿಗೊಂಡ ಅಥವಾ ತ್ಯಜಿಸಲ್ಪಟ್ಟ ಅನಿಸಿಕೆಯುಳ್ಳವನಾಗಿ ಮಾಡಬಾರದು, ಅಥವಾ ತಾನು ಅಂತರ್ಗತವಾಗಿ ದುಷ್ಟನೆಂಬ ಅಭಿಪ್ರಾಯವನ್ನು ಬಿಟ್ಟು ಹೋಗಬಾರದು. ತನ್ನ ಜನರನ್ನು ತಿದ್ದುವ ಮೊದಲು, ಯೆಹೋವನು ಹೇಳಿದ್ದು: “ಭಯಪಡಬೇಡ, ನಾನು ನಿನ್ನೊಂದಿಗಿದ್ದೇನೆ.” (ಯೆರೆಮೀಯ 46:28) ಹೌದು, ನಿಮ್ಮ ಮಗು ನೀವು ಅವನೊಂದಿಗೆ ಅಥವಾ ಅವಳೊಂದಿಗೆ ಪ್ರೀತಿಸುವ, ಬೆಂಬಲಿಸುವ ಹೆತ್ತವರೋಪಾದಿ ಇದ್ದೀರೆಂಬ ಪ್ರಜ್ಞೆಯುಳ್ಳವರಾಗಿರುವಂತಹ ವಿಧದಲ್ಲಿ ತಿದ್ದುವಿಕೆಯು ನಿರ್ವಹಿಸಲ್ಪಡಬೇಕು.
“ಕುಶಲ ನಿರ್ದೇಶನ” ವನ್ನು ಗಳಿಸುವುದು
22, 23. ಒಂದು ಸಂತೋಷದ ಕುಟುಂಬವನ್ನು ಕಟ್ಟಲು ಬೇಕಾದ ನಿರ್ದೇಶನವನ್ನು ನೀವು ಹೇಗೆ ಗಳಿಸಬಲ್ಲಿರಿ?
22 ಸಂತೋಷವುಳ್ಳ ಒಂದು ಕುಟುಂಬವನ್ನು ಕಟ್ಟಲು ನಮಗೆ ಅಗತ್ಯವಿರುವ ಉಪಕರಣಗಳನ್ನು ಒದಗಿಸಿದ್ದಕ್ಕೆ ನಾವು ಯೆಹೋವನಿಗೆ ಕೃತಜ್ಞರಾಗಿರಸಾಧ್ಯವಿದೆ. ಆದರೆ ಉಪಕರಣಗಳನ್ನು ಕೇವಲ ಹೊಂದಿರುವುದು ಸಾಕಾಗದು. ಅವನ್ನು ಯೋಗ್ಯವಾಗಿ ಬಳಸುವುದನ್ನು ನಾವು ಅಭ್ಯಸಿಸಬೇಕು. ಉದಾಹರಣೆಗೆ, ಒಬ್ಬ ಕಟ್ಟಡ ನಿರ್ಮಾಣಿಕನು ತನ್ನ ಉಪಕರಣಗಳನ್ನು ಉಪಯೋಗಿಸುವ ವಿಧದಲ್ಲಿ ನ್ಯೂನ ಚಾಳಿಗಳನ್ನು ವಿಕಸಿಸಿಕೊಳ್ಳಬಹುದು. ಅವನು ಅವುಗಳಲ್ಲಿ ಕೆಲವನ್ನು ಪೂರ್ತಿಯಾಗಿ ದುರುಪಯೋಗಕ್ಕೂ ಹಾಕಬಹುದು. ಈ ಪರಿಸ್ಥಿತಿಗಳಲ್ಲಿ, ಅವನ ವಿಧಾನಗಳು ಒಂದು ಕೆಳಮಟ್ಟದ ಉತ್ಪನ್ನವನ್ನು ಫಲಿಸುವುದು ಅತಿ ಸಂಭವನೀಯ. ಅದೇ ರೀತಿ ನಿಮ್ಮ ಕುಟುಂಬದೊಳಗೆ ನುಸುಳಿರುವ ಅನಾರೋಗ್ಯಕರವಾದ ಅಭ್ಯಾಸಗಳ ಅರಿವು ಈಗ ನಿಮಗಿರಬಹುದು. ಅವುಗಳಲ್ಲಿ ಕೆಲವು ಬಲವಾಗಿ ಬೇರೂರಿದ್ದು ಬದಲಾಯಿಸಲು ಕಷ್ಟಕರವಾದುದಾಗಿರಬಹುದು. ಆದರೂ, ಬೈಬಲಿನ ಬುದ್ಧಿವಾದವನ್ನು ಅನುಸರಿಸಿರಿ: “ವಿವೇಕಿಯಾದ ಒಬ್ಬ ವ್ಯಕ್ತಿಯು ಆಲಿಸಿ ಹೆಚ್ಚು ಉಪದೇಶವನ್ನು ಪಡೆದುಕೊಳ್ಳುವನು, ತಿಳಿವಳಿಕೆಯುಳ್ಳ ಮನುಷ್ಯನು ಕುಶಲ ನಿರ್ದೇಶನವನ್ನು ಗಳಿಸುವನು.”—ಜ್ಞಾನೋಕ್ತಿ 1:5, NW.
23 ದೇವರ ಜ್ಞಾನವನ್ನು ಪಡೆದುಕೊಳ್ಳುತ್ತಾ ಮುಂದುವರಿಯುವ ಮೂಲಕ ನೀವು ಕುಶಲ ನಿರ್ದೇಶನವನ್ನು ಗಳಿಸಬಲ್ಲಿರಿ. ಕುಟುಂಬ ಜೀವನಕ್ಕೆ ಅನ್ವಯಿಸುವ ಬೈಬಲ್ ಮೂಲಸೂತ್ರಗಳಿಗೆ ಎಚ್ಚರವಿದ್ದು, ಅವಶ್ಯವಿರುವಲ್ಲಿ ಹೊಂದಿಸಿಕೊಳ್ಳಿರಿ. ವಿವಾಹ ಜೊತೆಗಳಾಗಿ ಮತ್ತು ಹೆತ್ತವರಾಗಿ ಉತ್ತಮ ಮಾದರಿಯನ್ನು ಇಡುವ ಪ್ರೌಢ ಕ್ರೈಸ್ತರನ್ನು ಅವಲೋಕಿಸಿರಿ. ಅವರೊಂದಿಗೆ ಮಾತನಾಡಿರಿ. ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಚಿಂತೆಗಳನ್ನು ಪ್ರಾರ್ಥನೆಯಲ್ಲಿ ಯೆಹೋವನ ಬಳಿ ತೆಗೆದುಕೊಂಡು ಹೋಗಿರಿ. (ಕೀರ್ತನೆ 55:22; ಫಿಲಿಪ್ಪಿ 4:6, 7) ಆತನನ್ನು ಗೌರವಿಸುವ ಒಂದು ಸಂತೋಷದ ಕುಟುಂಬ ಜೀವನವನ್ನು ಅನುಭವಿಸಲು ಆತನು ನಿಮಗೆ ಸಹಾಯ ಮಾಡಬಲ್ಲನು.
[ಪಾದಟಿಪ್ಪಣಿಗಳು]
a ಪುನರ್ವಿವಾಹವನ್ನು ಅನುಮತಿಸುವ ವಿವಾಹ ವಿಚ್ಛೇದನಕ್ಕಿರುವ ಏಕಮಾತ್ರ ಶಾಸ್ತ್ರೀಯ ಆಧಾರವು “ಜಾರತ್ವ”—ವಿವಾಹದ ಹೊರಗಣ ಲೈಂಗಿಕ ಸಂಬಂಧಗಳೇ.—ಮತ್ತಾಯ 19:9.
ನಿಮ್ಮ ಜ್ಞಾನವನ್ನು ಪರೀಕ್ಷಿಸಿರಿ
ಕರ್ತವ್ಯ ನಿಷ್ಠೆ, ಸಂವಾದ, ಗೌರವ, ಮತ್ತು ಸನ್ಮಾನ, ಒಂದು ಸಂತೋಷದ ವಿವಾಹಕ್ಕೆ ಹೇಗೆ ಸಹಾಯ ಮಾಡುತ್ತವೆ?
ಹೆತ್ತವರು ತಮ್ಮ ಮಕ್ಕಳಿಗೆ ತಮ್ಮ ಪ್ರೀತಿಯ ಆಶ್ವಾಸನೆಯನ್ನು ಯಾವ ವಿಧಗಳಲ್ಲಿ ತೋರಿಸಬಲ್ಲರು?
ತಕ್ಕದ್ದಾದ ಶಿಸ್ತಿನಲ್ಲಿ ಯಾವ ಸಂಗತಿಗಳು ಒಳಗೂಡಿವೆ?
[ಪುಟ 147ರಲ್ಲಿ ಇಡೀ ಪುಟದ ಚಿತ್ರ]