ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ, ಇದನ್ನ ತಂತಿವಾದ್ಯಗಳ ಜೊತೆ ಹಾಡಬೇಕು. ಮಸ್ಕಿಲ್.* ದಾವೀದನ ಕೀರ್ತನೆ.
2 ನನಗೆ ಗಮನಕೊಡು, ನನಗೆ ಉತ್ತರಕೊಡು.+
ನನ್ನ ಚಿಂತೆಗಳು ನಾನು ಚಡಪಡಿಸೋ ತರ ಮಾಡಿವೆ,+
ನನಗೆ ತಳಮಳ ಆಗ್ತಿದೆ.
3 ಯಾಕಂದ್ರೆ ವೈರಿ ಜೋರು ಮಾಡ್ತಿದ್ದಾನೆ,
ಕೆಟ್ಟವನು ಒತ್ತಡ ಹಾಕ್ತಿದ್ದಾನೆ.
ಅವರು ನನ್ನ ಮೇಲೆ ಒಂದರ ಮೇಲೆ ಒಂದು ತೊಂದರೆನ ಗುಡ್ಡೆ ಹಾಕ್ತಿದ್ದಾರೆ,
ಕೋಪದಿಂದ ಅವರು ನನ್ನ ವಿರುದ್ಧ ಹಗೆತನ ಬೆಳೆಸ್ಕೊಂಡಿದ್ದಾರೆ.+
5 ನಾನು ಭಯದಿಂದ ನಡುಗ್ತಾ ಇದ್ದೀನಿ,
ತತ್ತರಿಸಿ ಹೋಗಿದ್ದೀನಿ.
6 ನಾನು ಹೀಗೆ ಹೇಳ್ತಾ ಇದ್ದೆ “ನನಗೆ ಪಾರಿವಾಳದ ತರ ರೆಕ್ಕೆ ಇದ್ದಿದ್ರೆ,
ಸುರಕ್ಷಿತವಾದ ಜಾಗಕ್ಕೆ ಹಾರಿಹೋಗಿ ಅಲ್ಲೇ ಇರ್ತಿದ್ದೆ.
7 ತುಂಬ ದೂರ ಹಾರಿಹೋಗ್ತಿದ್ದೆ.+
ಕಾಡಲ್ಲಿ ಗೂಡು ಮಾಡ್ಕೊತಿದ್ದೆ.+ (ಸೆಲಾ)
8 ಜೋರಾಗಿ ಬೀಸೋ ಗಾಳಿಯಿಂದ, ಭಯಂಕರ ಬಿರುಗಾಳಿಯಿಂದ ತಪ್ಪಿಸ್ಕೊಂಡು,
ನಾನು ಒಂದು ಸುರಕ್ಷಿತ ತಾಣಕ್ಕೆ ಓಡಿಹೋಗ್ತಿದ್ದೆ.”
9 ಯೆಹೋವನೇ, ಅವ್ರಿಗೆ ಗಲಿಬಿಲಿ ಮಾಡು, ಅವ್ರ ಯೋಜನೆಗಳನ್ನ ಹಾಳುಮಾಡು,*+
ಯಾಕಂದ್ರೆ ಪಟ್ಟಣದಲ್ಲಿ ನಾನು ಹಿಂಸೆ, ಹೊಡೆದಾಟ ನೋಡಿದ್ದೀನಿ.
10 ಹಗಲೂರಾತ್ರಿ ಅವರು ಪಟ್ಟಣದ ಗೋಡೆಗಳ ಮೇಲೆ ನಡೆದಾಡ್ತಾರೆ,
ಪಟ್ಟಣದಲ್ಲಿ ದ್ವೇಷ, ತೊಂದ್ರೆ ತುಂಬಿಕೊಂಡಿದೆ.+
ನನ್ನ ವಿರುದ್ಧ ಎದ್ದಿರೋನು ವೈರಿಯಲ್ಲ,
ವೈರಿಯಾಗಿದ್ರೆ ನಾನು ಅವನಿಗೆ ಸಿಗದೆ ಇರೋ ಹಾಗೆ ಬಚ್ಚಿಟ್ಕೊಳ್ತಿದ್ದೆ.
14 ಒಂದು ಕಾಲದಲ್ಲಿ ನಾವು ಆಪ್ತ ಸ್ನೇಹದ ಸಿಹಿ ಕ್ಷಣಗಳನ್ನ ಅನುಭವಿಸಿದ್ವಿ,
ಜನ್ರ ಜೊತೆ ದೇವರ ಆಲಯಕ್ಕೆ ಹೋಗ್ತಾ ಇದ್ವಿ.
15 ನನ್ನ ಶತ್ರುಗಳ ಮೇಲೆ ನಾಶನ ಬರಲಿ!+
ಜೀವಂತವಾಗೇ ಅವ್ರು ಸಮಾಧಿ* ಸೇರಲಿ,
ಯಾಕಂದ್ರೆ ಕೆಟ್ಟತನ ಅವ್ರ ಮಧ್ಯ, ಅವರೊಳಗೆ ಮನೆ ಮಾಡ್ಕೊಂಡಿದೆ.
16 ಆದ್ರೆ ನಾನು ಯೆಹೋವನನ್ನ ಕರೀತೀನಿ,
ಆತನು ನನ್ನನ್ನ ಕಾಪಾಡ್ತಾನೆ.+
17 ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಹೀಗೆ ನಾನು ಮೂರೂ ಹೊತ್ತು ದುಃಖದಲ್ಲೇ ಮುಳುಗಿರ್ತಿನಿ, ಕೊರಗ್ತಾ ಇರ್ತಿನಿ,+
ದೇವರು ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊಳ್ತಾನೆ.+
18 ಜನ್ರೆಲ್ಲ ನನ್ನ ವಿರುದ್ಧ ಬಂದಿದ್ದಾರೆ,
ಹಾಗಾಗಿ ನನ್ನ ವಿರುದ್ಧ ಹೋರಾಡೋರ ಕೈಯಿಂದ ಆತನು ನನ್ನನ್ನ ತಪ್ಪಿಸಿ ಶಾಂತಿಯನ್ನ ಕೊಡ್ತಾನೆ.+
ದೇವರಿಗೆ ಭಯಪಡದವರು,+
ಬದಲಾಗಲ್ಲ ಅಂತಾರೆ.
21 ಅವನ ಮಾತು ಬೆಣ್ಣೆಗಿಂತ ಮೃದು,+
ಆದ್ರೆ ಅವನ ಹೃದಯದ ತುಂಬ ದ್ವೇಷ.
ಅವನ ನುಡಿ ಎಣ್ಣೆಗಿಂತ ನಯ,
ಆದ್ರೆ ಅದು ಕತ್ತಿಗಿಂತ ಚೂಪು.+
ನೀತಿವಂತ ಬಿದ್ದುಹೋಗೋಕೆ* ಆತನು ಯಾವತ್ತೂ ಬಿಡಲ್ಲ.+
23 ದೇವರೇ, ನೀನು ಅವ್ರನ್ನ ಆಳವಾದ ಗುಂಡಿಗೆ ಬೀಳಿಸ್ತೀಯ.+
ರಕ್ತಾಪರಾಧಿಗಳು, ವಂಚಕರು ತಮ್ಮ ಅರ್ಧ ಆಯಸ್ಸಲ್ಲೇ ಹೋಗಿಬಿಡ್ತಾರೆ.+
ಆದ್ರೆ ನಾನು ನಿನ್ನಲ್ಲೇ ಭರವಸೆ ಇಟ್ಟಿದ್ದೀನಿ.