ದೇವರು ಮೂರ್ಖನನ್ನು ಹೇಸುತ್ತಾನೆ—ಯಾಕೆ?
ಬೈಬಲಿನಲ್ಲಿ ಉಪಯೋಗಿಸಲ್ಪಟ್ಟ ಪ್ರಕಾರ, “ಮೂರ್ಖ” ಎಂಬ ಪದವು, ಮಾನಸಿಕ ಶಕ್ತಿಯಲ್ಲಿ ಕೊರತೆಯುಳ್ಳವನನ್ನು ಸೂಚಿಸುವ ಬದಲಿಗೆ, ವಿವೇಚನೆಯನ್ನು ಧಿಕ್ಕರಿಸಿ, ದೇವರ ನೀತಿಯುಳ್ಳ ಮಟ್ಟಗಳಿಗೆ ಹೊಂದಿಕೆಯಿಲ್ಲದ ನೈತಿಕ ಅವಿವೇಕದ ಒಂದು ಮಾರ್ಗವನ್ನು ಅನುಸರಿಸುವ ಒಬ್ಬ ವ್ಯಕ್ತಿಗೆ ನಿರ್ದೇಶಿಸುತ್ತದೆ. ಅಂಥ ಒಬ್ಬನನ್ನು ಸೂಚಿಸುವ ವಿವಿಧ ಹೀಬ್ರು ಶಬ್ದಗಳು—ಕೆಸಿಲ್’ (“ಮೂಢನು”; ಜ್ಞಾನೋಕ್ತಿ 1:22), ’ಇವಿಲ್’ (“ಮೂರ್ಖನು”; ಜ್ಞಾನೋಕ್ತಿ 12:15) ನೆವಲ್’ (“ಬುದ್ಧಿಹೀನನು”; ಜ್ಞಾನೋಕ್ತಿ 17:7, NW), ಮತ್ತು ಲೆಟ್ಸ್ (“ನಿಂದಕನು”; ಜ್ಞಾನೋಕ್ತಿ 13:1) ಆಗಿವೆ. ಗ್ರೀಕ್ ಪದ ಎ‘ಪ್ರೊನ್ “ವಿವೇಚನೆಯಿಲ್ಲ”ದವನಿಗೆ (ಲೂಕ 12:20, NW), ಎ.ನೊ‘ಟೊಸ್ “ಬುದಿಯ್ಧಿಲ್ಲದ”ದವನಿಗೆ (ಗಲಾತ್ಯ 3:1), ಮತ್ತು ಮೊ.ರೊಸ್’ ‘ಹುಚ್ಚ’ನಿಗೆ ಅಥವಾ “ಮೂರ್ಖ”ನಿಗೆ ಸೂಚಿಸುತ್ತವೆ.—ಮತ್ತಾಯ 23:17; 25:2.
ನಾಬಾಲನೆಂಬ ಮನುಷ್ಯನ ಮಾರ್ಗವು ಮೂರ್ಖನ ಮಾರ್ಗವನ್ನು ಉದಾಹರಿಸುತ್ತದೆ. (1 ಸಮುವೇಲ 25) ಅಂತೆಯೇ, ಸತ್ಯ ದೇವರನ್ನು ಅರಿತ ಮೇಲೂ ನಿರ್ಮಿತ ವಸ್ತುಗಳನ್ನು ಆರಾಧಿಸುವ ಜನರ ಮಾರ್ಗವು ಇದೆ. (ರೋಮಾಪುರ 1:20-25) ಮೂರ್ಖನು ಅಥವಾ ಬುದ್ಧಿಹೀನನು “ನೀಚವಾಗಿ (ಬುದಿಯ್ಧಿಲ್ಲದೆ, NW) ಮಾತಾಡುವನು; ಅವನ ಹೃದಯವು ಕೇಡನ್ನು ಕಲ್ಪಿಸಿ ಅಲ್ಲದನ್ನು ನಡೆಯಿಸಿ ಯೆಹೋವನ ವಿರುದ್ಧವಾಗಿ ಅಸತ್ಯವನ್ನಾಡಿ ಹಸಿವೆಗೊಂಡವನ ಆಶೆಯನ್ನು ಬರಿದುಮಾಡಿ ಬಾಯಾರಿದವನ ಪಾನವನ್ನು ತಪ್ಪಿಸುವದಷ್ಟೆ,” ಎಂದು ಯೆಶಾಯನು ಹೇಳಿದ್ದಾನೆ. (ಯೆಶಾಯ 32:6) ಮೂರ್ಖನು ಜ್ಞಾನವನ್ನೂ ಶಿಕ್ಷೆಯನ್ನೂ ಅಸಡ್ಡೆಮಾಡುತ್ತಾನೆ. (ಜ್ಞಾನೋಕ್ತಿ 1:7) ಬುದ್ಧಿವಾದವನ್ನು ಪಾಲಿಸುವ ಬದಲಿಗೆ, ಏನನ್ನು ಅವನು “ಅವನ ಗಣನೆಗೆ ಸರಿ” ಎಂದೆಣಿಸುತ್ತಾನೋ ಆ ಮಾರ್ಗದಲ್ಲಿ ನಡಿಯುತ್ತಾ ಮುಂದರಿಯುವನು. (ಜ್ಞಾನೋಕ್ತಿ 12:15) ಅವನು ಕೋಪಕ್ಕೆ ಆತುರಪಡುತ್ತಾನೆ ಮತ್ತು ವಾಗ್ವಾದದಲ್ಲಿ ಆವೇಶದಿಂದ ನುಗ್ಗುತ್ತಾನೆ. (ಪ್ರಸಂಗಿ 7:9; ಜ್ಞಾನೋಕ್ತಿ 20:3) ಅವನು ತನ್ನ ಹೃದಯದಲ್ಲಿ (ಅವನ ತುಟಿಗಳು ಅನೇಕ ಮಾತುಗಳಲ್ಲಿ ಏನನ್ನು ಹೇಳದೆ ಇರಬಹುದೋ ಅವನ್ನು ಅವನ ಕ್ರಿಯೆಗಳು ಸೂಚಿಸುತ್ತಾ): “ದೇವರಿಲ್ಲ (ಯೆಹೋವನಿಲ್ಲ, NW)” ಎಂದು ಅಂದುಕೊಳ್ಳುತ್ತಾನೆ.—ಕೀರ್ತನೆ 14:1.
ಯೇಸು ಕ್ರಿಸ್ತನು ಶಾಸ್ತ್ರಿ ಮತ್ತು ಫರಿಸಾಯರನ್ನು “ಹುಚ್ಚರೇ, ಕುರುಡರೇ,” ಎಂದು ಸರಿಯಾಗಿ ನಿರ್ದೇಶಿಸಿದ್ದನು. ಅಂದರೆ, ವಿವೇಕದಲ್ಲಿ ಕೊರತೆಯುಳ್ಳ ಮತ್ತು ನೈತಿಕವಾಗಿ ನಿಷ್ಪ್ರಯೋಜಕರಾಗಿರುವ ವ್ಯಕ್ತಿಗಳು, ಯಾಕಂದರೆ ಮಾನವ ನಿರ್ಮಿತ ಸಂಪ್ರದಾಯಗಳ ಮೂಲಕ ಅವರು ಸತ್ಯವನ್ನು ವಕ್ರಗೊಳಿಸಿದ್ದರು ಮತ್ತು ಕಪಟತನದ ಮಾರ್ಗವನ್ನು ಅನುಸರಿಸಿದ್ದರು. ಅದಲ್ಲದೆ, ವಿವೇಚನೆಯಲ್ಲಿ ಅವರ ಕೊರತೆಯನ್ನು ಉದಾಹರಿಸಿದ ಮೂಲಕ ಯೇಸು ಈ ಹೆಸರಿನ ಔಚಿತ್ಯಕ್ಕೆ ಆಧಾರಕೊಟ್ಟನು. (ಮತ್ತಾಯ 23:15-22; 15:3) ಆದಾಗ್ಯೂ, ವ್ಯಕ್ತಿಯೊಬ್ಬನು ತನ್ನ ಸಹೋದರನನ್ನು ನೈತಿಕವಾಗಿ ನಿಷ್ಪ್ರಯೋಜಕನೆಂದು ತೀರ್ಮಾನಿಸುತ್ತಾ ಮತ್ತು ಖಂಡಿಸುತ್ತಾ, ತನ್ನ ಸಹೋದರನನ್ನು “ಛೀ ನೀಚಾ, (ಮೂರ್ಖ, NW)” ಎಂದು ತಪ್ಪಾಗಿ ಕರೆದಲ್ಲಿ, ಅವನು ತನ್ನನ್ನು ಗೆಹೆನ್ನಾಕ್ಕೆ ಗುರಿಪಡಿಸುವನು.—ಮತ್ತಾಯ 5:22; ರೋಮಾಪುರ 14:10-12; ಮತ್ತಾಯ 7:1, 2.
ಉಸುಬಿನ ಮೇಲೆ ತನ್ನ ಮನೆಯನ್ನು ಕಟ್ಟಿದ ಆ ಮೂರ್ಖ ಮನುಷ್ಯನು, ಮತ್ತು ಯಾರ ಭೂಮಿಯು ಚೆನ್ನಾಗಿ ಬೆಳೆಕೊಟ್ಟಿತೋ ಮತ್ತು ಯಾರು ಆ ಕಾರಣದಿಂದ ತನ್ನ ಕಣಜಗಳ ಸೌಕರ್ಯಗಳನ್ನು ವಿಸ್ತರಿಸಿ, ಅನಂತರ ನಿಜವಾಗಿ ಜೀವನದಲ್ಲಿ ಆನಂದಿಸಲು ಯೋಜಿಸಿದನೋ ಆ ಐಶ್ವರ್ಯವಂತ ಮನುಷ್ಯನು, ಆತ್ಮಿಕ ವಿಷಯಗಳನ್ನು ಅಸಡ್ಡೆಮಾಡಿದ ಮತ್ತು ಆ ಮೂಲಕ ನಿಜ ಆಶೀರ್ವಾದವನ್ನು ಕಳಕೊಂಡ ಬುದ್ಧಿಹೀನತೆಯನ್ನು ಎತ್ತಿಹೇಳುವ, ಯೇಸು ನಿತ್ಯದ ಜೀವನದಿಂದ ಕೊಟ್ಟ ಒಳ್ಳೇ ಸಾಮ್ಯಗಳ ಉದಾಹರಣೆಗಳಾಗಿದ್ದಾರೆ. ಅದಲ್ಲದೆ, ಮದಲಿಂಗನನ್ನು ಎದುರುಗೊಳ್ಳಲು ಹೋಗುವಲ್ಲಿ ತಮ್ಮ ದೀಪಗಳಿಗಾಗಿ ಎಣ್ಣೆಯನ್ನು ಕೊಂಡೊಯ್ಯದೆ ಇದ್ದ ಆ ಬುದಿಯ್ಧಿಲ್ಲದ ಐದು ಕನ್ಯೆಯರ ಯೇಸುವಿನ ಸಾಮ್ಯದಿಂದ ಒತ್ತಿಹೇಳಲ್ಪಟ್ಟ ಪ್ರಕಾರ, ಆತ್ಮಿಕ ರೀತಿಯಲ್ಲಿ “ಎಚ್ಚರ”ವಾಗಿರದೆ ಇರುವುದು ಮೂರ್ಖತನವಾಗಿದೆ.—ಮತ್ತಾಯ 7:24-27; ಲೂಕ 12:16-21; ಮತ್ತಾಯ 25:1-13.
ವ್ಯಕ್ತಿಯೊಬ್ಬನು ನಿಜವಾಗಿಯೂ ಜ್ಞಾನಿಯಾಗಬೇಕಾದರೆ ಲೋಕದ ದೃಷ್ಟಿಯಲ್ಲಿ ಹುಚ್ಚನಾಗಲೇಬೇಕು, ಯಾಕಂದರೆ “ಇಹಲೋಕ ಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ.” ತನ್ನನ್ನು ಪ್ರತಿನಿಧಿಸಲು ಯೆಹೋವನು ಆದುಕೊಂಡದ್ದು ಲೌಕಿಕ ರೀತಿಯಲ್ಲಿ ಜ್ಞಾನಿಗಳನ್ನಲ್ಲ, ಯಾರು ಜ್ಞಾನಹೀನರು, ಮೂಢರು ಎಂದು ಕೀಳಾಗಿ ನೋಡಲ್ಪಟ್ಟರೋ ಅವರನ್ನೇ. ಇದು ಲೋಕದ ಹುಚ್ಚುತನವನ್ನು ಇನ್ನಷ್ಟು ಹೆಚ್ಚು ಪ್ರತ್ಯಕ್ಷಪಡಿಸುವುದರಲ್ಲಿ ಪರಿಣಮಿಸಿದೆ. ಅದಲ್ಲದೆ, ಮೆಚ್ಚಿನ ವ್ಯಕ್ತಿಯ ಸಂಬಂಧದಲ್ಲಿ ಹಿಗ್ಗಿಕೊಳ್ಳುವುದಕ್ಕೆ ಎಲ್ಲಾ ಕಾರಣವನ್ನು ಇದು ತೆಗೆದುಹಾಕುತ್ತದೆ. ಬದಲಿಗೆ, ನ್ಯಾಯವಾಗಿ ಎಲ್ಲಾ ಮಹಿಮೆಯು ಜ್ಞಾನದ ಮೂಲನಾದ ಯೆಹೋವ ದೇವರಿಗೇ ಸಲ್ಲುತ್ತದೆ.—1 ಕೊರಿಂಥ 3:18, 19; 1:18-31.
“ಮೂರ್ಖನಿಗೆ ಅವನ “ಮೂಢತನಕ್ಕೆ ಸರಿಯಾಗಿ” ಅಥವಾ ಹೊಂದಿಕೆಯಾಗಿ “ಉತ್ತರ ಕೊಡು”ವುದು ಅಂದರೆ, ಅವನ ವಾದದ ಹೀನ ವಿಧಾನಗಳನ್ನು ಒಬ್ಬನು ಉಪಯೋಗಿಸಿದಲ್ಲಿ, ಅದು ಹಾಗೆ ಮಾಡುವವನನ್ನು ಆ ಮೂರ್ಖನ ಬುದ್ಧಿಹೀನ ವಿವೇಚನೆಗಳೊಂದಿಗೆ ಯಾ ಮಾರ್ಗಗಳೊಂದಿಗೆ ಸಹಮತದಲ್ಲಿ ಹಾಕುತ್ತದೆ ಎಂಬರ್ಥದಲ್ಲಿ. ಈ ಸಂಬಂಧದಲ್ಲಿ ಆ ಮೂರ್ಖನ ಹಾಗೆ ಆಗದಂತೆ, ಜ್ಞಾನೋಕ್ತಿ ನಮಗೆ ಈ ಬುದ್ಧಿವಾದವನ್ನು ಕೊಡುತ್ತದೆ: “ಮೂಢನ ಮೂರ್ಖತನಕ್ಕೆ ಸರಿಯಾಗಿ ಉತ್ತರಕೊಡಬೇಡ.” ಇನ್ನೊಂದು ಕಡೆ, ಜ್ಞಾನೋಕ್ತಿ 26:4, 5, ಅವನ “ಮೂರ್ಖತನಕ್ಕೆ ಸರಿಯಾಗಿ” ಉತ್ತರಕೊಡು ಎಂದು ಹೇಳಿರುವುದು ಯಾವ ಅರ್ಥದಲ್ಲಿ ಅಂದರೆ, ಅವನ ವಾಗ್ವಾದಗಳನ್ನು ವಿಶೇಷ್ಲಿಸಿ, ಅವುಗಳ ಅಸಂಬದ್ಧತೆಯನ್ನು ಹೊರಗೆಡಹಿ, ಅವನ ಸ್ವಂತ ವಾದಗಳು ಅವನೆಣಿಸಿದ ಹಾಗೆ ಉಪಯುಕ್ತವಾಗಿರುವ ಬದಲಿಗೆ ಪೂರಾ ಭಿನ್ನವಾದ ತೀರ್ಮಾನಗಳಿಗೆ ನಡಿಸುತ್ತವೆಂದು ತೋರಿಸಿ ಕೊಡುವುದಾಗಿದೆ.