ಬೈಬಲಿನಲ್ಲಿರುವ ಪ್ರಾರ್ಥನೆಗಳು ಹೆಚ್ಚು ನಿಕಟವಾದ ಒಂದು ಪರಿಶೀಲನೆಗೆ ಅರ್ಹವಾಗಿವೆ
ನಾವೀಗ ನಿಕಟವಾಗಿ ಪರಿಶೀಲಿಸಲಿರುವ ಪ್ರಾರ್ಥನೆಗಳು, ಒಬ್ಬ ವ್ಯಾಕುಲಿತ ಹೆಂಗಸು, ಒಬ್ಬ ರಾಜ ಮತ್ತು ದೇವರ ಸ್ವಂತ ಮಗನಿಂದ ನುಡಿಯಲ್ಪಟ್ಟಂತಹವುಗಳಾಗಿವೆ. ಪ್ರತಿಯೊಂದು ಪ್ರಾರ್ಥನೆಯು ಭಿನ್ನವಾದ ಪರಿಸ್ಥಿತಿಗಳ ಶ್ರೇಣಿಯಿಂದ ಪ್ರೇರಿಸಲ್ಪಟ್ಟಿತ್ತು. ಆದರೆ, ಅಂತಹದ್ದೇ ಸನ್ನಿವೇಶಗಳು ಇಂದು ನಮ್ಮನ್ನು ತಟ್ಟಬಲ್ಲವು. ಈ ಮಾದರಿಗಳಿಂದ ನಾವೇನನ್ನು ಕಲಿಯಬಲ್ಲೆವು?
“ನಿನ್ನ ದಾಸಿಯ ದುಃಖವನ್ನು ಪರಾಂಬರಿಸು”
ನೀವು ಒಂದು ಪಟ್ಟುಹಿಡಿದಿರುವ ಸಮಸ್ಯೆಯೊಂದಿಗೆ ಹೆಣಗಾಡುತ್ತಿದ್ದೀರೋ? ಅಥವಾ ವ್ಯಾಕುಲತೆಯಿಂದ ನೀವು ಕುಗ್ಗಿ ಹೋಗಿದ್ದೀರೋ? ಹಾಗಿದ್ದಲ್ಲಿ, ತನ್ನ ಚೊಚ್ಚಲು ಮಗುವಾದ ಸಮುವೇಲನಿಗೆ ಜನ್ಮಕೊಡುವ ಮುಂಚೆ ಹನ್ನಳು ಇದ್ದಂತಹ ಪರಿಸ್ಥಿತಿಗೆ ಹೋಲುವಂತಹ ಪರಿಸ್ಥಿತಿಯಲ್ಲಿ ನೀವಿದ್ದೀರಿ. ಅವಳು ಸಂತಾನರಹಿತಳಾಗಿದ್ದಳು ಮತ್ತು ಇನ್ನೊಬ್ಬ ಸ್ತ್ರೀಯಿಂದ ಮೂದಲಿಸಲ್ಪಡುತ್ತಿದ್ದಳು. ವಾಸ್ತವದಲ್ಲಿ, ಹನ್ನಳ ಸನ್ನಿವೇಶವು ಅವಳನ್ನು ಎಷ್ಟು ಪೀಡಿಸಿ ಚಿಂತಿತಳಾಗಿಸಿತೆಂದರೆ ಅವಳು ಉಣ್ಣುತ್ತಲೂ ಇರಲಿಲ್ಲ. (1 ಸಮುವೇಲ 1:2-8, 15, 16) ಅವಳು ಯೆಹೋವನಿಗೆ ಮೊರೆಯಿಟಳ್ಟು ಮತ್ತು ಈ ಮುಂದಿನ ಬೇಡಿಕೆಯನ್ನು ಸಲ್ಲಿಸಿದಳು:
“ಸೇನಾಧೀಶ್ವರನಾದ ಯೆಹೋವನೇ, ನಿನ್ನ ದಾಸಿಯ ದುಃಖವನ್ನು ಪರಾಂಬರಿಸು; ನನ್ನನ್ನು ತಿರಸ್ಕರಿಸದೆ ಕನಿಕರವಿಟ್ಟು ನನಗೊಬ್ಬ ಮಗನನ್ನು ಕೊಡಬೇಕು; ಅವನು ಜೀವದಿಂದಿರುವ ತನಕ ನಿನ್ನವನಾಗಿಯೇ ಇರುವ ಹಾಗೆ ನಿನಗೆ ಪ್ರತಿಷ್ಠಿಸಿ ಕೊಡುವೆನು; ಅವನ ತಲೆಯ ಮೇಲೆ ಕ್ಷೌರಕತ್ತಿಯನ್ನು ಬರಗೊಡುವದಿಲ್ಲ.”—1 ಸಮುವೇಲ 1:11.
ಹನ್ನಳು ಅಸ್ಪಷ್ಟತೆಗಳಲ್ಲಿ ಮಾತಾಡಲಿಲ್ಲವೆಂಬದನ್ನು ಗಮನಿಸಿರಿ. ಅವಳು ಯೆಹೋವನನ್ನು ಒಂದು ನಿರ್ದಿಷ್ಟ ಬೇಡಿಕೆಯೊಂದಿಗೆ (ಒಂದು ಗಂಡು ಸಂತಾನಕ್ಕಾಗಿ) ಉದ್ದೇಶಿಸಿ ಮಾತಾಡಿದಳು ಮತ್ತು ಇದರೊಂದಿಗೆ (ಆತನನ್ನು ದೇವರ ವಶಕ್ಕೆ ಒಪ್ಪಿಸುವ) ಒಂದು ಖಚಿತವಾದ ಸ್ಥಿರಸಂಕಲ್ಪವನ್ನು ಜೊತೆಗೂಡಿಸಿದಳು. ಇದು ನಮಗೆ ಏನನ್ನು ತಿಳಿಸುತ್ತದೆ?
ಆಪತ್ತಿನಲ್ಲಿರುವಾಗ, ಪ್ರಾರ್ಥನೆಯಲ್ಲಿ ನಿರ್ದಿಷ್ಟವಾಗಿರ್ರಿ. ನಿಮ್ಮ ಸಮಸ್ಯೆಯು ಏನೇ ಆಗಿರಲಿ—ಅದು ನಿಮ್ಮ ಮನೆಯ ಸ್ಥಿತಿಯಾಗಿರಲಿ, ಒಂಟಿತನವಾಗಿರಲಿ, ಅಥವಾ ಅನಾರೋಗ್ಯವಾಗಿರಲಿ—ಅದರ ಕುರಿತಾಗಿ ಯೆಹೋವನಿಗೆ ಪ್ರಾರ್ಥಿಸಿರಿ. ನಿಮ್ಮ ಕಷ್ಟದ ನಿಖರವಾದ ಸ್ವಭಾವಲಕ್ಷಣವನ್ನು ಮತ್ತು ನಿಮಗೆ ಹೇಗನ್ನಿಸುತ್ತದೆಂಬದನ್ನು ವರ್ಣಿಸಿರಿ. “ಪ್ರತಿ ಸಂಜೆ ನಾನು ನನ್ನ ಎಲ್ಲಾ ತೊಂದರೆಗಳನ್ನು ಯೆಹೋವನಿಗೆ ವಹಿಸುತ್ತೇನೆ” ಎನ್ನುತ್ತಾಳೆ ಲ್ಯೂಈಜ ಎಂಬ ಹೆಸರಿನ ಒಬ್ಬ ವಿಧವೆ. “ಕೆಲವೊಮ್ಮೆ ಹಲವಾರು ಕಷ್ಟಗಳಿರುತ್ತವೆ, ಆದರೆ ನಾನು ಪ್ರತಿಯೊಂದನ್ನು ಸ್ಪಷ್ಟವಾಗಿಗಿ ತಿಳಿಸುತ್ತೇನೆ.”
ನಿಖರವಾದ ಪದಗಳಲ್ಲಿ ಯೆಹೋವನೊಂದಿಗೆ ಮಾತಾಡುವುದು ಪ್ರಯೋಜನಗಳನ್ನು ತರುತ್ತದೆ. ಹಾಗೆ ಮಾಡುವುದು ನಾವು ನಮ್ಮ ಸಮಸ್ಯೆಗಳನ್ನು ವಿಶದೀಕರಿಸುವಂತೆ ಸಹಾಯ ಮಾಡುತ್ತದೆ, ಹೀಗೆ ಅದು ಆಗ ಕಡಿಮೆ ದುಸ್ಸಾಧ್ಯವಾಗಿ ತೋರಬಹುದು. ನಿರ್ದಿಷ್ಟವಾದ ಪ್ರಾರ್ಥನೆಗಳನ್ನು ಹೇಳುವುದು ನಮ್ಮ ವ್ಯಾಕುಲತೆಯಿಂದ ನಮಗೆ ಪರಿಹಾರಕೊಡುತ್ತದೆ. ಅವಳ ಪ್ರಾರ್ಥನೆಯು ಉತ್ತರಿಸಲ್ಪಡುವದಕ್ಕಿಂತ ಮುಂಚೆಯೇ, ಹನ್ನಳಿಗೆ ಪುನರ್ಆಶ್ವಾಸನೆ ಕೊಡಲ್ಪಟ್ಟ ಅನಿಸಿಕೆಯಾಯಿತು ಮತ್ತು “ಆ ಮೇಲೆ ಆಕೆಯ ಮೋರೆಯಲ್ಲಿ ದುಃಖವು ಕಾಣಲಿಲ್ಲ.” (1 ಸಮುವೇಲ 1:18) ಇನ್ನೂ ಹೆಚ್ಚಾಗಿ, ನಿಖರವಾಗಿರುವದು ನಮ್ಮ ಪ್ರಾರ್ಥನೆಗೆ ಉತ್ತರವನ್ನು ಗುರುತಿಸಲು ನಾವು ಎಚ್ಚರವಾಗಿರುವಂತೆ ಮಾಡುತ್ತದೆ. “ನನ್ನ ಪ್ರಾರ್ಥನೆಗಳ ಮಾತುಗಳನ್ನು ನಾನು ಹೆಚ್ಚು ನಿಖರವಾಗಿ ಜೋಡಿಸುವಾಗ, ಉತ್ತರಗಳು ಹೆಚ್ಚು ಸ್ಪಷ್ಟವಾಗಿಗಿರುತ್ತವೆ” ಎಂದು ಜಮರ್ನಿಯಲ್ಲಿರುವ ಬರ್ನ್ಹಾರ್ಟ್ ಎಂಬ ಒಬ್ಬ ಕ್ರೈಸ್ತನು ಹೇಳುತ್ತಾನೆ.
“ನಾನು ಇನ್ನೂ ಒಬ್ಬ ಚಿಕ್ಕ ಬಾಲಕನು”
ಆದಾಗಲೂ, ಅದಕ್ಕೆ ತಾನು ಅನರ್ಹನು ಎಂದೆಣಿಸುವ ಒಬ್ಬ ವ್ಯಕ್ತಿಯು ನೇಮಕವೊಂದನ್ನು ಪಡೆಯುವುದಾದರೆ, ಅವನಿಗೆ ಒಂದು ಭಿನ್ನ ರೀತಿಯ ಚಿಂತೆಯ ಅನಿಸಿಕೆಯಾಗಬಹುದು. ಯೆಹೋವನಿಂದ ನಿಮಗೆ ನೀಡಲ್ಪಟ್ಟ ಜವಾಬ್ದಾರಿಯಿಂದಾಗಿ ನೀವು ಕೆಲವೊಮ್ಮೆ ಕ್ಷೋಭೆಗೊಳ್ಳುತ್ತೀರೋ? ಅಥವಾ ಕೆಲವು ಜನರು ನೀವು ನಿಮ್ಮ ನೇಮಕಕ್ಕೆ ಅಯೋಗ್ಯರೆಂದೆಣಿಸುತ್ತಾರೋ? ಇಸ್ರಾಯೇಲಿನ ರಾಜನಾಗಿ ಅಭಿಷೇಕಿಸಲ್ಪಟ್ಟಾಗ, ಯುವ ಸೊಲೊಮೋನನು ಆ ಸನ್ನಿವೇಶದಲ್ಲಿದ್ದನು. ಕೆಲವು ಪ್ರಮುಖರು, ಬೇರೆ ಯಾರೋ ಸಿಂಹಾಸನದ ಮೇಲಿರಲು ಇಷ್ಟಪಟ್ಟರು. (1 ಅರಸು 1:5-7, 41-46; 2:13-22) ತನ್ನ ಆಳಿಕ್ವೆಯ ಆರಂಭದಲ್ಲಿ, ಸೊಲೊಮೋನನು ಪ್ರಾರ್ಥನೆಯಲ್ಲಿ ಒಂದು ಬೇಡಿಕೆಯನ್ನು ಮಾಡಿದನು:
“ನನ್ನ ದೇವರಾದ ಯೆಹೋವನೇ, . . . ನಿನ್ನಿಂದ ಅರಸನಾಗಿ ನೇಮಿಸಲ್ಪಟ್ಟ ನಿನ್ನ ಸೇವಕನಾದ ನಾನು ಇನ್ನೂ ಚಿಕ್ಕವನು (“ಒಬ್ಬ ಚಿಕ್ಕ ಬಾಲಕನು,” NW); ವ್ಯವಹಾರಜ್ಞಾನವಿಲ್ಲದವನು, . . . ಅದನ್ನು [“ನಿನ್ನ ಜನರನ್ನು,” NW] ಆಳುವದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವದಕ್ಕೂ ನನಗೆ ವಿವೇಕವನ್ನು ದಯಪಾಲಿಸು.”—1 ಅರಸು 3:7-9.
ಯೆಹೋವನೊಂದಿಗಿನ ತನ್ನ ಸಂಬಂಧ, ತನಗೆ ಕೊಡಲ್ಪಟ್ಟ ಸುಯೋಗ, ಮತ್ತು ಆ ನೇಮಕವನ್ನು ನಿರ್ವಹಿಸುವ ತನ್ನ ಸಾಮರ್ಥ್ಯದ ಮೇಲೆ ಸೊಲೊಮೋನನು ತನ್ನ ಪ್ರಾರ್ಥನೆಯನ್ನು ಕೇಂದ್ರೀಕರಿಸಿದನು. ತದ್ರೀತಿಯ ವಿಧದಲ್ಲಿ, ನಮ್ಮ ಸಾಮರ್ಥ್ಯಕ್ಕೆ ಮೀರಿದ್ದೆಂದು ನಮಗನಿಸುವ ಒಂದು ನೇಮಕವು ನಮಗೆ ಕೊಡಲ್ಪಟ್ಟಾಗಲೆಲ್ಲಾ, ಕೆಲಸವನ್ನು ಮಾಡಲಿಕ್ಕಾಗಿ ನಮ್ಮನ್ನು ಸನ್ನದ್ಧಗೊಳಿಸಲು ನಾವು ದೇವರಿಗೆ ಬಿನ್ನೈಸಬೇಕು. ಮುಂದಿನ ಅನುಭವಗಳನ್ನು ಪರಿಗಣಿಸಿರಿ:
“ವಾಚ್ ಟವರ್ ಸೊಸೈಟಿಯ ಶಾಖಾ ಆಫೀಸಿನಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಪರಾಮರಿಸಲು ನಾನು ಕೇಳಲ್ಪಟ್ಟಾಗ, ನಾನು ಸಂಪೂರ್ಣವಾಗಿ ಕೊರತೆಯುಳ್ಳವನು ಎಂಬ ಭಾವನೆ ನನಗಾಯಿತು” ಎಂದು ಯೂಜೀನ್ ವಿವರಿಸುತ್ತಾನೆ. “ನನಗಿಂತ ಹೆಚ್ಚು ಯೋಗ್ಯತೆಯುಳ್ಳವರು ಮತ್ತು ಹೆಚ್ಚು ಅನುಭವವಿದ್ದವರು ಇದ್ದರು. ಮುಂದಿನ ಎರಡು ರಾತ್ರಿಗಳಲ್ಲಿ, ನನಗೆ ಬಲ ಮತ್ತು ಅವಶ್ಯವಾಗಿದ್ದಂತಹ ಆಶ್ವಾಸನೆಯನ್ನು ಕೊಟ್ಟಂತಹ ಪ್ರಾರ್ಥನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾ ನಾನು ಹೆಚ್ಚು ನಿದ್ರಿಸಲಿಲ್ಲ.”
ತುಂಬ ಜನಪ್ರಿಯನಾಗಿದ್ದ ಒಬ್ಬ ಯುವ ಸ್ನೇಹಿತನ ಅಕಸ್ಮಾತ್ತಾದ ಮತ್ತು ದುರಂತಮಯ ಮರಣದ ನಂತರ, ಒಂದು ಶವಸಂಸ್ಕಾರ ಭಾಷಣವನ್ನು ಕೊಡಲು ರೈನನ್ನು ಕೇಳಿಕೊಳ್ಳಲಾಯಿತು. ನೂರಾರು ಜನರು ಖಂಡಿತವಾಗಿಯೂ ಹಾಜರಿರಲಿದ್ದರು. ರೈ ಏನು ಮಾಡಿದನು? “ತಕ್ಕದಾದ ಶಬ್ದಗಳನ್ನು ಕಂಡುಹಿಡಿಯಲು, ಭಕ್ತಿವೃದ್ಧಿಮಾಡುವಂತಹ ವಿಚಾರಗಳನ್ನು ವ್ಯಕ್ತಪಡಿಸಲು, ಮತ್ತು ಸಾಂತ್ವನವನ್ನು ನೀಡಲು ಬಲ ಮತ್ತು ಸಾಮರ್ಥ್ಯಕ್ಕಾಗಿ ನಾನು ಅಷ್ಟು ಪ್ರಾರ್ಥಿಸಿರುವುದು ವಿರಳ.”
ಸೃಷ್ಟಿಕರ್ತನು ‘ವಿಷಯಗಳನ್ನು ಶೀಘ್ರಗೊಳಿಸಿ’ ದಂತೆ ಮತ್ತು ಆತನ ಸಂಸ್ಥೆಯು ವಿಸ್ತರಿಸಿದಂತೆ, ಆತನ ಸೇವಕರಲ್ಲಿ ಹೆಚ್ಚೆಚ್ಚು ಜನರಿಗೆ ಜವಾಬ್ದಾರಿಯು ವಹಿಸಲ್ಪಡುವುದು ಒಂದು ಸ್ವಾಭಾವಿಕವಾದ ಪರಿಣಾಮವಾಗಿದೆ. (ಯೆಶಾಯ 60:22, NW) ನಿಮಗೆ ಒಂದು ಹೆಚ್ಚಿನ ಪಾಲಿರುವಂತೆ ಕೇಳಿಕೊಳ್ಳಲ್ಪಟ್ಟಲ್ಲಿ, ನಿಮ್ಮ ವತಿಯಿಂದ ಅನುಭವ, ತರಬೇತಿ, ಅಥವಾ ಸಾಮರ್ಥ್ಯದ ಕೊರತೆಯನ್ನು ಯೆಹೋವನು ಸರಿದೂಗಿಸುವನು ಎಂಬ ವಿಷಯದಲ್ಲಿ ನಿಶ್ಚಿತರಾಗಿರ್ರಿ. ಸೊಲೊಮೋನನು ಮಾಡಿದಂತಹ ರೀತಿಯಲ್ಲೇ ದೇವರನ್ನು ಸಮೀಪಿಸಿರಿ, ಮತ್ತು ಆತನು ನೇಮಕವನ್ನು ನಿರ್ವಹಿಸಲು ನಿಮ್ಮನ್ನು ಸನ್ನದ್ಧಗೊಳಿಸುವನು.
“ಅವರೆಲ್ಲರೂ ಒಂದೇ ಆಗಿರಲಿಕ್ಕಾಗಿ”
ಇಂದು ಏಳುವ ಮೂರನೆಯ ಸನ್ನಿವೇಶವು, ಪ್ರಾರ್ಥನೆಯಲ್ಲಿ ಒಂದು ಗುಂಪನ್ನು ಪ್ರತಿನಿಧೀಕರಿಸಬೇಕಾಗಿರುವಾಗ. ಇತರರ ಪರವಾಗಿ ಒಂದು ಪ್ರಾರ್ಥನೆಯನ್ನು ಹೇಳಲು ಕೇಳಲ್ಪಟ್ಟಾಗ, ನಾವು ಯಾವುದಕ್ಕಾಗಿ ಪ್ರಾರ್ಥಿಸಬೇಕು? ಯೋಹಾನ 17 ನೆಯ ಅಧ್ಯಾಯದಲ್ಲಿ ದಾಖಲಿಸಲ್ಪಟ್ಟ ಯೇಸುವಿನ ಪ್ರಾರ್ಥನೆಯನ್ನು ಪರಿಗಣಿಸಿರಿ. ಒಬ್ಬ ಮನುಷ್ಯನೋಪಾದಿ ತನ್ನ ಕೊನೆಯ ಸಾಯಂಕಾಲದಂದು ಆತನು ಈ ಪ್ರಾರ್ಥನೆಯನ್ನು ತನ್ನ ಶಿಷ್ಯರ ಉಪಸ್ಥಿತಿಯಲ್ಲಿ ಹೇಳಿದನು. ತನ್ನ ಸ್ವರ್ಗೀಯ ತಂದೆಗೆ ಆತನು ಯಾವ ವಿಧದ ಬಿನ್ನಹಗಳನ್ನು ನಿರ್ದೇಶಿಸಿದನು?
ಯೇಸು ಸಾಮಾನ್ಯವಾಗಿದ್ದ ಗುರಿಗಳನ್ನು ಮತ್ತು ಉಪಸ್ಥಿತದಿದ್ದವರು ಭಾಗಿಗಳಾಗಿದ್ದ ನಿರೀಕ್ಷೆಯನ್ನು ಒತ್ತಿಹೇಳಿದನು. ಆತನು ಯೆಹೋವ ದೇವರ ನಾಮದ ಮಹಿಮೆಗೊಳಿಸುವಿಕೆಯನ್ನು ಮತ್ತು ರಾಜ್ಯದ ಪ್ರಸಿದ್ಧಪಡಿಸುವಿಕೆಯನ್ನು ತಿಳಿಸಿದನು. ಯೇಸು ಶಾಸ್ತ್ರವಚನಗಳ ಕುರಿತಾದ ಜ್ಞಾನದ ಮೇಲೆ ಆಧರಿತವಾದ, ತಂದೆ ಮತ್ತು ಮಗನೊಂದಿಗಿನ ಒಂದು ವೈಯಕ್ತಿಕ ಸಂಬಂಧದ ಮೌಲ್ಯವನ್ನು ಒತ್ತಿಹೇಳಿದನು. ಲೋಕದಿಂದ ಪ್ರತ್ಯೇಕಿಸಿಕೊಳ್ಳುವಿಕೆಯ ಕುರಿತಾಗಿ ಆತನು ಮಾತಾಡಿದನು, ಇದು ಅವನ ಹಿಂಬಾಲಕರನ್ನು ವಿರೋಧಕ್ಕಾಗಿ ತಯಾರಿಸಲಿಕ್ಕಿತ್ತು. ಶಿಷ್ಯರನ್ನು ಸಂರಕ್ಷಿಸಲು ಮತ್ತು ಸತ್ಯಾರಾಧನೆಯಲ್ಲಿ ಅವರನ್ನು ಐಕ್ಯಗೊಳಿಸಲೂ ಕ್ರಿಸ್ತನು ತನ್ನ ತಂದೆಯನ್ನು ಬೇಡಿಕೊಂಡನು.
ಹೌದು, ಯೇಸು ಐಕ್ಯವನ್ನು ಒತ್ತಿಹೇಳಿದನು. (ಯೋಹಾನ 17:20, 21) ಆ ಸಂಜೆಯ ಆರಂಭದಲ್ಲಿ, ಶಿಷ್ಯರು ಯಾವುದೋ ಅಪಕ್ವವಾದ ಕಾದಾಡುವಿಕೆಯಲ್ಲಿ ತೊಡಗಿದ್ದರು. (ಲೂಕ 22:24-27) ಆದಾಗಲೂ, ಕ್ರಿಸ್ತನು ಪ್ರಾರ್ಥನೆಯಲ್ಲಿ ಖಂಡಿಸಲು ಅಲ್ಲ, ಬದಲಾಗಿ ಐಕ್ಯಗೊಳಿಸಲು ಪ್ರಯತ್ನಿಸಿದನು. ಅದೇ ರೀತಿಯಲ್ಲಿ, ಕುಟುಂಬ ಮತ್ತು ಸಭಾ ಪ್ರಾರ್ಥನೆಗಳು ಪ್ರೀತಿಯನ್ನು ಪ್ರವರ್ಧಿಸಬೇಕು ಮತ್ತು ವ್ಯಕ್ತಿಗಳ ನಡುವೆ ಘರ್ಷಣೆಯನ್ನು ಜಯಿಸಲು ಪ್ರಯತ್ನಿಸಬೇಕು. ಪ್ರತಿನಿಧೀಕರಿಸಲ್ಪಡುತ್ತಿರುವವರು ಐಕ್ಯದಲ್ಲಿ ಒಟ್ಟಾಗುವಂತೆ ಸೆಳೆಯಲ್ಪಡಬೇಕು.—ಕೀರ್ತನೆ 133:1-3.
ಅಂತ್ಯದಲ್ಲಿ, ಕೇಳುವವರು “ಆಮೆನ್” ಅಥವಾ “ಹಾಗೇ ಆಗಲಿ” ಎಂದು ಹೇಳುವಾಗ ಈ ಐಕ್ಯವು ತೋರಿಬರುತ್ತದೆ. ಇದು ಸಾಧ್ಯವಾಗಲಿಕ್ಕಾಗಿ, ಹೇಳಲ್ಪಟ್ಟ ಸಕಲ ವಿಷಯವನ್ನು ಅವರು ತಿಳಿದುಕೊಳ್ಳಬೇಕು ಮತ್ತು ಅವರು ಅದರೊಂದಿಗೆ ಸಹಮತದಲ್ಲಿರಬೇಕು. ಆದುದರಿಂದ, ಉಪಸ್ಥಿತದಿದ್ದವರಲ್ಲಿ ಕೆಲವರಿಗೆ ತಿಳಿದಿರದ ಒಂದು ವಿಷಯವನ್ನು ಪ್ರಾರ್ಥನೆಯಲ್ಲಿ ತಿಳಿಸುವುದು ಅನುಚಿತವಾಗಿರುವುದು. ಉದಾಹರಣೆಗೆ, ಸಭೆಯನ್ನು ಪ್ರಾರ್ಥನೆಯಲ್ಲಿ ಪ್ರತಿನಿಧಿಸುತ್ತಿರುವ ಒಬ್ಬ ಹಿರಿಯನು, ಗಂಭೀರವಾಗಿ ಅಸ್ವಸ್ಥರಾಗಿರುವ ಒಬ್ಬ ಆತ್ಮಿಕ ಸಹೋದರ ಅಥವಾ ಸಹೋದರಿಯ ಮೇಲೆ ಯೆಹೋವನ ಆಶೀರ್ವಾದವನ್ನು ಬೇಡಬಹುದು. ಆದರೆ ಸಾಮಾನ್ಯವಾಗಿ ಆತನು ಪ್ರತಿನಿಧಿಸುತ್ತಿರುವವರಲ್ಲಿ ಅಧಿಕಾಂಶ ಜನರಿಗೆ, ಆ ವ್ಯಕ್ತಿಯ ಪರಿಚಯವಿರುವುದಾದರೆ ಮತ್ತು ಅವರು ಅವನ ಅಸ್ವಸ್ಥತೆಯ ಕುರಿತಾಗಿ ಕೇಳಿರುವುದಾದರೆ ಮಾತ್ರ ಅವನು ಹಾಗೆ ಮಾಡುವುದು ಉತ್ತಮವಾಗಿರುವುದು.
ಗುಂಪಿನಲ್ಲಿದ್ದ ಪ್ರತಿಯೊಬ್ಬ ಸದಸ್ಯನ ವೈಯಕ್ತಿಕ ಅಗತ್ಯಗಳನ್ನು ಯೇಸು ಒಂದೊಂದಾಗಿ ಹೇಳುತ್ತಾ ಹೋಗಲಿಲ್ಲವೆಂಬದನ್ನು ಗಮನಿಸಿರಿ. ಹಾಗೆ ಮಾಡುವುದು ನಿರ್ದಿಷ್ಟ ವ್ಯಕ್ತಿಗಳಿಗೆ ಮಾತ್ರವೇ ತಿಳಿದಿರಬಹುದಾದ ವ್ಯಕ್ತಿಗತ ವಿಷಯಗಳನ್ನು ತಿಳಿಸುವದನ್ನು ಒಳಗೂಡಸಾಧ್ಯವಿತ್ತು. ವೈಯಕ್ತಿಕ ಚಿಂತೆಗಳು, ಬಯಸಿದಷ್ಟು ವಿಸ್ತರಿತವಾಗಿ ಮತ್ತು ಆಪ್ತವಾಗಿ ಮಾಡಬಹುದಾದ ಖಾಸಗಿ ಪ್ರಾರ್ಥನೆಗಳಿಗೆ ತಕ್ಕದ್ದಾದ ವಿಷಯಗಳಾಗಿವೆ.
ಒಬ್ಬ ವ್ಯಕ್ತಿಯು ಪ್ರಾರ್ಥನೆಯಲ್ಲಿ ಆರಾಧಕರ ಒಂದು ದೊಡ್ಡ ಸಮೂಹವನ್ನು ಪ್ರತಿನಿಧಿಸಲು ತನ್ನನ್ನೇ ಹೇಗೆ ತಯಾರಿಸಿಕೊಳ್ಳಬಹುದು? ಒಬ್ಬ ಅನುಭವಸ್ಥ ಕ್ರೈಸ್ತನು ವಿವರಿಸುವದು: “ಯಾವುದಕ್ಕಾಗಿ ಉಪಕಾರ ಸಲ್ಲಿಸಬೇಕು, ಸಹೋದರರಿಗೆ ಯಾವ ಬೇಡಿಕೆಗಳಿರಬಹುದು, ಮತ್ತು ಅವರ ಪರವಾಗಿ ನಾನು ಯಾವ ಬಿನ್ನಹಗಳನ್ನು ಮಾಡಬಹುದೆಂದು ನಾನು ಮುಂಚಿತವಾಗಿಯೇ ಪರಿಗಣಿಸುತ್ತೇನೆ. ಸ್ತುತಿಯ ಮಾತುಗಳನ್ನು ಒಳಗೂಡುತ್ತಾ ನನ್ನ ಆಲೋಚನೆಗಳನ್ನು, ನಾನು ನನ್ನ ಮನಸ್ಸಿನಲ್ಲಿ ಸರಿಯಾದ ಕ್ರಮದಲ್ಲಿ ಹಾಕುತ್ತೇನೆ. ಒಂದು ಬಹಿರಂಗ ಪ್ರಾರ್ಥನೆಯನ್ನು ಹೇಳುವ ಮುಂಚೆ, ಒಂದು ಘನವಾದ ರೀತಿಯಲ್ಲಿ ಸಹೋದರರನ್ನು ಪ್ರತಿನಿಧಿಸಲು ಸಹಾಯಕ್ಕಾಗಿ ಕೇಳುತ್ತಾ ನಾನೊಂದು ಮೌನ ಪ್ರಾರ್ಥನೆಯನ್ನು ಹೇಳುತ್ತೇನೆ.”
ನಿಮ್ಮ ಪರಿಸ್ಥಿತಿಗಳು ಏನೇ ಆಗಿರಲಿ, ನಿಮ್ಮಂತಹ ಪರಿಸ್ಥಿತಿಯಲ್ಲಿದ್ದ ಯಾರಾದರೊಬ್ಬರಿಂದ ಹೇಳಲ್ಪಟ್ಟ ಒಂದು ಪ್ರಾರ್ಥನೆಯನ್ನು ನೀವು ಬೈಬಲಿನಲ್ಲಿ ಕಂಡುಕೊಳ್ಳುವದು ಸಂಭವನೀಯ. ಶಾಸ್ತ್ರವಚನಗಳಲ್ಲಿರುವ ಪ್ರಾರ್ಥನೆಗಳ ವಿಸ್ತಾರವಾದ ವ್ಯಾಪ್ತಿಯು ದೇವರ ಪ್ರೀತಿಯ ದಯೆಯ ಒಂದು ರುಜುವಾತಾಗಿದೆ. ಈ ಪ್ರಾರ್ಥನೆಗಳನ್ನು ಓದಿ ಅವುಗಳನ್ನು ಮನನ ಮಾಡುವುದು ನಿಮ್ಮ ಪ್ರಾರ್ಥನೆಗಳನ್ನು ಪುಷ್ಟೀಕರಿಸಲು ನಿಮಗೆ ಸಹಾಯ ಮಾಡುವುದು.
[ಪುಟ 5 ರಲ್ಲಿರುವ ಚೌಕ]
ಬೈಬಲಿನಲ್ಲಿರುವ ಗಮನಾರ್ಹವಾದ ಪ್ರಾರ್ಥನೆಗಳು
ಯೆಹೋವನ ಸೇವಕರು ಅನೇಕ ಪರಿಸ್ಥಿತಿಗಳ ಕೆಳಗೆ ಪ್ರಾರ್ಥನೆಗಳನ್ನು ಸಲ್ಲಿಸಿದರು. ಮುಂದಿನ ಸನ್ನಿವೇಶಗಳಲ್ಲಿ ಒಂದು ಅಥವಾ ಹೆಚ್ಚಿನವುಗಳಿಗೆ ನೀವು ಪ್ರತಿಕ್ರಿಯಿಸಬಲ್ಲಿರೋ?
ಎಲೀಯೆಜರನಂತೆ, ನಿಮಗೆ ದೇವರಿಂದ ಮಾರ್ಗದರ್ಶನೆಯ ಆವಶ್ಯಕತೆಯಿದೆಯೋ?—ಆದಿಕಾಂಡ 24:12-14.
ಯಾಕೋಬನಿದ್ದಂತೆ, ನೀವು ಆಸನ್ನವಾದ ಅಪಾಯದಲ್ಲಿದ್ದೀರೋ?—ಆದಿಕಾಂಡ 32:9-12.
ಮೋಶೆಯಂತೆ, ನೀವು ದೇವರನ್ನು ಹೆಚ್ಚು ಉತ್ತಮವಾಗಿ ತಿಳಿಯಲು ಬಯಸುತ್ತೀರೋ?—ವಿಮೋಚನಕಾಂಡ 33:12-17.
ಎಲೀಯನಿಗಾದಂತೆ, ನೀವು ಎದುರಾಳಿಗಳಿಂದ ಎದುರಿಸಲ್ಪಟ್ಟಿದ್ದೀರೋ?—1 ಅರಸು 18:36, 37.
ಯೆರೆಮೀಯನಿಗಿದ್ದಂತೆ, ನಿಮಗೆ ಸಾರುವುದು ಕಷ್ಟಕರವಾಗಿದೆಯೋ?—ಯೆರೆಮೀಯ 20:7-12.
ದಾನಿಯೇಲನಂತೆ, ನಿಮಗೆ ಪಾಪಗಳನ್ನು ಅರಿಕೆ ಮಾಡಿ ಕ್ಷಮೆಗಾಗಿ ಬೇಡಿಕೊಳ್ಳುವ ಅಗತ್ಯವಿದೆಯೋ?—ದಾನಿಯೇಲ 9:3-19.
ಯೇಸುವಿನ ಶಿಷ್ಯರಂತೆ ನೀವು ಹಿಂಸೆಯನ್ನು ಎದುರಿಸುತ್ತೀರೋ?—ಅ. ಕೃತ್ಯಗಳು 4:24-31.
ಮತ್ತಾಯ 6:9-13; ಯೋಹಾನ 17:1-26; ಫಿಲಿಪ್ಪಿಯ 4:6, 7; ಯಾಕೋಬ 5:16ನ್ನು ಸಹ ನೋಡಿರಿ.
[ಪುಟ 6 ರಲ್ಲಿರುವ ಚೌಕ]
ಆಳವಾಗಿ ಬೇರೂರಿರುವ ಒಂದು ಚಟದೊಂದಿಗೆ ಹೋರಾಡುವಾಗ ಪ್ರಾರ್ಥಿಸಬೇಕಾದ ವಿಷಯ
ಮರಳುತ್ತಾ ಇರುವ ಬಲಹೀನತೆಯೊಂದಿಗೆ ನೀವು ಹೆಣಗಾಡುತ್ತಿದ್ದೀರೋ? ಬೈಬಲಿನಲ್ಲಿ ದಾಖಲಿಸಲ್ಪಟ್ಟಂತಹ ಪ್ರಾರ್ಥನೆಗಳು ಹೇಗೆ ಲಾಭದಾಯಕವಾಗಿರಬಲ್ಲವು? ತನ್ನ ಸ್ವಂತ ಬಲಹೀನತೆಗಳ ಕುರಿತಾಗಿ ವಿವಿಧ ಸಮಯಗಳಲ್ಲಿ ಪ್ರಾರ್ಥಿಸಿದಂತಹ ದಾವೀದನಿಂದ ಕಲಿಯಿರಿ.
ದಾವೀದನು ಹಾಡಿದ್ದು: “ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು.” (ಕೀರ್ತನೆ 139:23) ತಪ್ಪಾದ ಆಶೆಗಳು, ಭಾವನೆಗಳು ಅಥವಾ ಹೇತುಗಳನ್ನು ಯೆಹೋವ ದೇವರು ಹುಡುಕಿ ತೆಗೆಯುವುದು ದಾವೀದನ ಆಶೆಯಾಗಿತ್ತು. ಬೇರೆ ಮಾತುಗಳಲ್ಲಿ ಹೇಳುವದಾದರೆ, ಪಾಪವನ್ನು ಹೋಗಲಾಡಿಸುವುದರಲ್ಲಿ ದಾವೀದನು ಯೆಹೋವನ ಸಹಾಯವನ್ನು ಪಡೆದನು.
ಆದರೆ ದಾವೀದನ ಬಲಹೀನತೆಗಳು ಅವನ ಮೇಲೆ ಜಯಹೊಂದಿದವು, ಮತ್ತು ಅವನು ಮಹತ್ತಾಗಿ ಪಾಪಗೈದನು. ಇಲ್ಲಿ ಪುನಃ ಒಮ್ಮೆ ದೇವರೊಂದಿಗಿನ ತನ್ನ ಸಂಬಂಧವನ್ನು ಪುನಃಸ್ಥಾಪಿಸಲಿಕ್ಕಾಗಿ, ಪ್ರಾರ್ಥನೆಯು ಅವನಿಗೆ ಸಹಾಯಮಾಡಿತು. ಕೀರ್ತನೆ 51:2 ರಲ್ಲಿ, ದಾವೀದನು ಹೀಗೆ ಬೇಡಿದನು: “ನನ್ನ ಪಾಪವನ್ನು ಸಂಪೂರ್ಣವಾಗಿ ತೊಳೆದುಬಿಡು; ನನ್ನ ದೋಷವನ್ನು ಪರಿಹರಿಸಿ ನನ್ನನ್ನು ಶುದ್ಧಿಗೊಳಿಸು.”
ನಾವು ಸಹ ತಪ್ಪಾದ ಪ್ರವೃತ್ತಿಗಳನ್ನು ತಡೆಯಲಿಕ್ಕಾಗಿ ಯೆಹೋವನ ನೆರವಿಗಾಗಿ ನಮ್ರತೆಯಿಂದ ಪ್ರಾರ್ಥಿಸಬಹುದು. ಆಳವಾಗಿ ಬೇರೂರಿರುವ ಒಂದು ಬಲಹೀನತೆಯನ್ನು ಮತ್ತು ಪಾಪವನ್ನು ಹೋಗಲಾಡಿಸಲು ಇದು ನಮ್ಮನ್ನು ಬಲಪಡಿಸುವುದು. ಒಂದು ಮರುಕೊಳಿಸುವಿಕೆಯು ಸಂಭವಿಸುವುದಾದರೆ, ಹೋರಾಟವನ್ನು ಮುಂದುವರಿಸಲು ನಮಗೆ ಸಹಾಯ ಮಾಡುವಂತೆ ನಾವು ಪುನಃ ಯೆಹೋವನನ್ನು ಬಿನ್ನಹಗಳೊಂದಿಗೆ ಸಮೀಪಿಸತಕ್ಕದ್ದು.
[ಪುಟ 7 ರಲ್ಲಿರುವ ಚಿತ್ರಗಳು]
ಒಂದು ಗುಂಪಿನ ಪರವಾಗಿ ಹೇಳಲ್ಪಡುವ ಪ್ರಾರ್ಥನೆಗಳು ಶಾಸ್ತ್ರೀಯ ನಿರೀಕ್ಷೆಗಳನ್ನು ಮತ್ತು ಸಾಮಾನ್ಯವಾಗಿರುವ ಆತ್ಮಿಕ ಗುರಿಗಳನ್ನು ಒತ್ತಿಹೇಳಬೇಕು