ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್ಗಳು
ಅಕ್ಟೋಬರ್ 3-9
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
it-2 180
ಜ್ಞಾನ
ಜ್ಞಾನದ ಮೂಲ. ಯೆಹೋವನೇ ಜ್ಞಾನದ ಮೂಲನಾಗಿದ್ದಾನೆ. ಜೀವವು ಆತನಿಂದ ಬಂದದ್ದಾಗಿದೆ. ಜ್ಞಾನ ಇರಬೇಕೆಂದರೆ ಜೀವ ಇರಲೇಬೇಕು. (ಕೀರ್ತ 36:9; ಅಕಾ 17:25, 28) ಅಲ್ಲದೇ, ಎಲ್ಲವನ್ನೂ ದೇವರೇ ಸೃಷ್ಟಿ ಮಾಡಿರುವುದರಿಂದ ಮಾನವನ ಜ್ಞಾನವು ದೇವರ ಕೈಕೆಲಸವನ್ನು ತಿಳಿದುಕೊಳ್ಳುವುದರ ಮೇಲೆ ಆಧರಿತವಾಗಿದೆ. (ಪ್ರಕ 4:11; ಕೀರ್ತ 19:1, 2) ದೇವರ ಚಿತ್ತ ಮತ್ತು ಉದ್ದೇಶಗಳನ್ನು ಮಾನವರು ತಿಳಿದುಕೊಳ್ಳಲು ದೇವರು ತನ್ನ ಪ್ರೇರಿತ ವಾಕ್ಯವನ್ನು ಕೊಟ್ಟಿದ್ದಾನೆ. (2ತಿಮೊ 3:16, 17) ಆದ್ದರಿಂದ ನಿಜ ಜ್ಞಾನದ ಮೂಲ ಯೆಹೋವನಾಗಿದ್ದಾನೆ. ಒಬ್ಬ ವ್ಯಕ್ತಿ ಇದನ್ನು ಪಡೆಯಬೇಕೆಂದರೆ ಅವನಿಗೆ ದೇವಭಯ ಇರಬೇಕು. ದೇವರಿಗೆ ಕೋಪ ತರುವಂಥ ವಿಷಯಗಳಿಂದ ದೂರವಿರುವಂತೆ ಇದು ಅವನಿಗೆ ಸಹಾಯ ಮಾಡುತ್ತದೆ. ಇಂಥ ಭಯವೇ ಜ್ಞಾನದ ಆರಂಭವಾಗಿದೆ. (ಜ್ಞಾನೋ 1:7) ಈ ದೇವಭಯ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಯಾರಿಗೆ ಈ ಭಯ ಇರುವುದಿಲ್ಲವೋ ಅವರು ತಮಗೆ ಸರಿಯೆನಿಸಿದ್ದನ್ನು ಮಾಡಿ ತಪ್ಪಾದ ನಿರ್ಣಯಕ್ಕೆ ಬರುತ್ತಾರೆ.
ಅಕ್ಟೋಬರ್ 17-23
ಬೈಬಲಿನಲ್ಲಿರುವ ರತ್ನಗಳು | ಜ್ಞಾನೋಕ್ತಿ 12-16
“ವಿವೇಕವು ಬಂಗಾರಕ್ಕಿಂತ ಅಮೂಲ್ಯ”
w07 7/15 8
“ಧನವು ಆಶ್ರಯ”
“ಬಂಗಾರಕ್ಕಿಂತಲೂ ಜ್ಞಾನವನ್ನು ಪಡೆಯುವದು ಎಷ್ಟೋ ಮೇಲು; ಬೆಳ್ಳಿಗಿಂತಲೂ ವಿವೇಕವನ್ನು ಹೊಂದುವದು ಲೇಸು” ಎಂದು ಜ್ಞಾನೋಕ್ತಿ 16:16 ಹೇಳುತ್ತದೆ. ವಿವೇಕವು ಏಕೆ ತುಂಬ ಅಮೂಲ್ಯವಾಗಿದೆ? ಏಕೆಂದರೆ “ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ, ಜ್ಞಾನಕ್ಕೆ ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.” (ಪ್ರಸಂಗಿ 7:12) ಹಾಗಾದರೆ ವಿವೇಕವು ಅದನ್ನು ಹೊಂದಿದವರಿಗೆ ಜೀವದಾಯಕವಾಗಿರುವುದು ಹೇಗೆ?
ದೈವಿಕ ವಿವೇಕವನ್ನು ಪಡೆದುಕೊಳ್ಳಬೇಕಾದರೆ ದೇವರ ವಾಕ್ಯವಾದ ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು ಮತ್ತು ಅದರ ಪ್ರಕಾರ ನಡೆಯಬೇಕು. ಹೀಗೆ ಮಾಡಿದರೆ, ಯೆಹೋವನು ಮೆಚ್ಚುವ ಮಾರ್ಗದಲ್ಲಿ ನಡೆಯಲು ಆಗುತ್ತದೆ. (ಜ್ಞಾನೋಕ್ತಿ 2:10-12) ಪುರಾತನ ಇಸ್ರಾಯೇಲಿನ ಅರಸ ಸೊಲೊಮೋನನು ಹೇಳಿದ್ದು: “ಸತ್ಯವಂತನ ರಾಜಮಾರ್ಗ ಹಾನಿಗೆ ದೂರ; ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು.” (ಜ್ಞಾನೋಕ್ತಿ 16:17) ಕೆಟ್ಟ ದಾರಿಯಲ್ಲಿ ನಡೆಯದಂತೆ ವಿವೇಕವು ಕಾಪಾಡುತ್ತದೆ ಮತ್ತು ಜೀವವನ್ನು ಸಂರಕ್ಷಿಸುತ್ತದೆ. ದೈವಿಕ ವಿವೇಕ ನಮ್ಮ ಮನೋಭಾವ, ಮಾತು ಮತ್ತು ಕಾರ್ಯಗಳ ಮೇಲೆ ಬೀರುವ ಸಕಾರಾತ್ಮಕ ಪರಿಣಾಮವನ್ನು ಜ್ಞಾನೋಕ್ತಿ 16:16-33ರಲ್ಲಿರುವ ವಿವೇಕದ ನುಡಿಮುತ್ತುಗಳು ತಿಳಿಸುತ್ತವೆ.
“ದೀನತೆ”
ವಿವೇಕವು ಹೀಗೆ ಹೇಳುತ್ತದೆ: “ಗರ್ವ, ಅಹಂಭಾವ . . . ಇವುಗಳನ್ನು ಹಗೆಮಾಡುತ್ತೇನೆ.” (ಜ್ಞಾನೋಕ್ತಿ 8:13) ಅಹಂಭಾವ ಮತ್ತು ವಿವೇಕ ಒಂದಕ್ಕೊಂದು ವಿರುದ್ಧ ಗುಣಗಳಾಗಿವೆ. ನಾವು ವಿವೇಕದಿಂದ ನಡೆದುಕೊಳ್ಳಬೇಕು ಮತ್ತು ಹೆಮ್ಮೆ ಅಥವಾ ಅಹಂಕಾರದ ಮನೋಭಾವ ಬರದಂತೆ ಎಚ್ಚರಿಕೆ ವಹಿಸಬೇಕು. ಜೀವನದಲ್ಲಿ ಯಶಸ್ಸು ಸಿಗುವಾಗ ಅಥವಾ ಕ್ರೈಸ್ತ ಸಭೆಯಲ್ಲಿ ಕೆಲವೊಂದು ಜವಾಬ್ದಾರಿ ಮತ್ತು ಸುಯೋಗಗಳು ಸಿಗುವಾಗ ಈ ಮನೋಭಾವ ಬರದಂತೆ ನಾವು ಎಚ್ಚರಿಕೆ ವಹಿಸಬೇಕು.
“ಗರ್ವದಿಂದ ಭಂಗ. ಉಬ್ಬಿನಿಂದ ದೊಬ್ಬು” ಎಂದು ಜ್ಞಾನೋಕ್ತಿ 16:18 ಎಚ್ಚರಿಸುತ್ತದೆ. ವಿಶ್ವದಲ್ಲೇ ಭಂಗ ಪಟ್ಟ ಮೊದಲ ವ್ಯಕ್ತಿ ಸೈತಾನ. ಅವನು ದೇವರ ಆತ್ಮಿಕ ಪುತ್ರನಾಗಿದ್ದು ತನ್ನನ್ನೇ ಪಿಶಾಚನಾದ ಸೈತಾನನ್ನಾಗಿ ಮಾಡಿಕೊಂಡನು. (ಆದಿಕಾಂಡ 3:1-5; ಪ್ರಕಟನೆ 12:9) ಭಂಗಪಡುವ ಮುಂಚೆ ಅವನು ಅಹಂಕಾರ ತೋರಿಸಿದನಲ್ಲವೇ? ಹೊಸದಾಗಿ ಕ್ರೈಸ್ತನಾದ ವ್ಯಕ್ತಿಯನ್ನು ಕ್ರೈಸ್ತ ಸಭೆಯ ಮೇಲ್ವಿಚಾರಕನನ್ನಾಗಿ ನೇಮಿಸಬಾರದು ಎಂದು ಬೈಬಲ್ ಹೇಳುತ್ತದೆ. ಯಾಕೆಂದರೆ, ಹಾಗೆ ಮಾಡುವಲ್ಲಿ “ಅಂಥವನು ಹೆಮ್ಮೆಯಿಂದ ಉಬ್ಬಿಕೊಂಡವನಾಗಿ ಪಿಶಾಚನಿಗೆ ಪ್ರಾಪ್ತವಾದ ನ್ಯಾಯತೀರ್ಪಿಗೆ ಒಳಗಾಗಬಹುದು” ಎನ್ನುತ್ತದೆ ಬೈಬಲ್. (1 ತಿಮೊಥೆಯ 3:1, 2, 6) ಇತರರಲ್ಲಿ ಅಹಂಕಾರ ಮೂಡಿಸದಂತೆ ಮತ್ತು ಸ್ವತಃ ನಮ್ಮಲ್ಲೂ ಆ ಗುಣ ಬರದಂತೆ ಜಾಗ್ರತೆ ವಹಿಸುವುದು ಎಷ್ಟೊಂದು ಪ್ರಾಮುಖ್ಯ ಅಲ್ಲವೇ!
w07 7/15 8-9
“ವಿವೇಕವು ಆಶ್ರಯ”
“ಬಂಗಾರಕ್ಕಿಂತಲೂ ಜ್ಞಾನವನ್ನು ಪಡೆಯುವದು ಎಷ್ಟೋ ಮೇಲು; ಬೆಳ್ಳಿಗಿಂತಲೂ ವಿವೇಕವನ್ನು ಹೊಂದುವದು ಲೇಸು” ಎಂದು ಜ್ಞಾನೋಕ್ತಿ 16:16 ಹೇಳುತ್ತದೆ. ವಿವೇಕವು ಏಕೆ ತುಂಬ ಅಮೂಲ್ಯವಾಗಿದೆ? ಏಕೆಂದರೆ “ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ, ಜ್ಞಾನಕ್ಕೆ ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.” (ಪ್ರಸಂಗಿ 7:12) ಹಾಗಾದರೆ ವಿವೇಕವು ಅದನ್ನು ಹೊಂದಿದವರಿಗೆ ಜೀವದಾಯಕವಾಗಿರುವುದು ಹೇಗೆ?
ದೈವಿಕ ವಿವೇಕವನ್ನು ಪಡೆದುಕೊಳ್ಳಬೇಕಾದರೆ ದೇವರ ವಾಕ್ಯವಾದ ಬೈಬಲಿನ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು ಮತ್ತು ಅದರ ಪ್ರಕಾರ ನಡೆಯಬೇಕು. ಹೀಗೆ ಮಾಡಿದರೆ, ಯೆಹೋವನು ಮೆಚ್ಚುವ ಮಾರ್ಗದಲ್ಲಿ ನಡೆಯಲು ಆಗುತ್ತದೆ. (ಜ್ಞಾನೋಕ್ತಿ 2:10-12) ಪುರಾತನ ಇಸ್ರಾಯೇಲಿನ ಅರಸ ಸೊಲೊಮೋನನು ಹೇಳಿದ್ದು: “ಸತ್ಯವಂತನ ರಾಜಮಾರ್ಗ ಹಾನಿಗೆ ದೂರ; ತನ್ನ ನಡತೆಯನ್ನು ಗಮನಿಸುವವನು ತನ್ನ ಆತ್ಮವನ್ನು ಕಾಯುವನು.” (ಜ್ಞಾನೋಕ್ತಿ 16:17) ಕೆಟ್ಟ ದಾರಿಯಲ್ಲಿ ನಡೆಯದಂತೆ ವಿವೇಕವು ಕಾಪಾಡುತ್ತದೆ ಮತ್ತು ಜೀವವನ್ನು ಸಂರಕ್ಷಿಸುತ್ತದೆ. ದೈವಿಕ ವಿವೇಕ ನಮ್ಮ ಮನೋಭಾವ, ಮಾತು ಮತ್ತು ಕಾರ್ಯಗಳ ಮೇಲೆ ಬೀರುವ ಸಕಾರಾತ್ಮಕ ಪರಿಣಾಮವನ್ನು ಜ್ಞಾನೋಕ್ತಿ 16:16-33ರಲ್ಲಿರುವ ವಿವೇಕದ ನುಡಿಮುತ್ತುಗಳು ತಿಳಿಸುತ್ತವೆ.
“ದೀನತೆ”
ವಿವೇಕವು ಹೀಗೆ ಹೇಳುತ್ತದೆ: “ಗರ್ವ, ಅಹಂಭಾವ . . . ಇವುಗಳನ್ನು ಹಗೆಮಾಡುತ್ತೇನೆ.” (ಜ್ಞಾನೋಕ್ತಿ 8:13) ಅಹಂಭಾವ ಮತ್ತು ವಿವೇಕ ಒಂದಕ್ಕೊಂದು ವಿರುದ್ಧ ಗುಣಗಳಾಗಿವೆ. ನಾವು ವಿವೇಕದಿಂದ ನಡೆದುಕೊಳ್ಳಬೇಕು ಮತ್ತು ಹೆಮ್ಮೆ ಅಥವಾ ಅಹಂಕಾರದ ಮನೋಭಾವ ಬರದಂತೆ ಎಚ್ಚರಿಕೆ ವಹಿಸಬೇಕು. ಜೀವನದಲ್ಲಿ ಯಶಸ್ಸು ಸಿಗುವಾಗ ಅಥವಾ ಕ್ರೈಸ್ತ ಸಭೆಯಲ್ಲಿ ಕೆಲವೊಂದು ಜವಾಬ್ದಾರಿ ಮತ್ತು ಸುಯೋಗಗಳು ಸಿಗುವಾಗ ಈ ಮನೋಭಾವ ಬರದಂತೆ ನಾವು ಎಚ್ಚರಿಕೆ ವಹಿಸುವುದು ತುಂಬ ಪ್ರಾಮುಖ್ಯ.
“ಗರ್ವದಿಂದ ಭಂಗ. ಉಬ್ಬಿನಿಂದ ದೊಬ್ಬು” ಎಂದು ಜ್ಞಾನೋಕ್ತಿ 16:18 ಎಚ್ಚರಿಸುತ್ತದೆ. ವಿಶ್ವದಲ್ಲೇ ಭಂಗ ಪಟ್ಟ ಮೊದಲ ವ್ಯಕ್ತಿ ಸೈತಾನ. ಅವನು ದೇವರ ಆತ್ಮಿಕ ಪುತ್ರನಾಗಿದ್ದು ತನ್ನನ್ನೇ ಪಿಶಾಚನಾದ ಸೈತಾನನ್ನಾಗಿ ಮಾಡಿಕೊಂಡನು. (ಆದಿಕಾಂಡ 3:1-5; ಪ್ರಕಟನೆ 12:9) ಭಂಗಪಡುವ ಮುಂಚೆ ಅವನು ಅಹಂಕಾರ ತೋರಿಸಿದನಲ್ಲವೇ? ಹೊಸದಾಗಿ ಕ್ರೈಸ್ತನಾದ ವ್ಯಕ್ತಿಯನ್ನು ಕ್ರೈಸ್ತ ಸಭೆಯ ಮೇಲ್ವಿಚಾರಕನನ್ನಾಗಿ ನೇಮಿಸಬಾರದು ಎಂದು ಬೈಬಲ್ ಹೇಳುತ್ತದೆ. ಯಾಕೆಂದರೆ, ಹಾಗೆ ಮಾಡುವಲ್ಲಿ “ಅಂಥವನು ಹೆಮ್ಮೆಯಿಂದ ಉಬ್ಬಿಕೊಂಡವನಾಗಿ ಪಿಶಾಚನಿಗೆ ಪ್ರಾಪ್ತವಾದ ನ್ಯಾಯತೀರ್ಪಿಗೆ ಒಳಗಾಗಬಹುದು” ಎನ್ನುತ್ತದೆ ಬೈಬಲ್. (1 ತಿಮೊಥೆಯ 3:1, 2, 6) ಇತರರಲ್ಲಿ ಅಹಂಕಾರ ಮೂಡಿಸದಂತೆ ಮತ್ತು ಸ್ವತಃ ನಮ್ಮಲ್ಲೂ ಆ ಗುಣ ಬರದಂತೆ ಜಾಗ್ರತೆ ವಹಿಸುವುದು ಎಷ್ಟೊಂದು ಪ್ರಾಮುಖ್ಯ ಅಲ್ಲವೇ!
“ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವದಕ್ಕಿಂತಲೂ ದೀನರ ಸಂಗಡ ದೈನ್ಯದಿಂದಿರುವದು ವಾಸಿ” ಎನ್ನುತ್ತದೆ ಜ್ಞಾನೋಕ್ತಿ 16:19. ಪುರಾತನ ಬಾಬೆಲಿನ ರಾಜ ನೆಬೂಕದ್ನೆಚ್ಚರನಿಂದ ನಾವು ಈ ಎಚ್ಚರಿಕೆಯ ಪಾಠವನ್ನು ಕಲಿಯಬಹುದು. ಅವನು ಅಹಂಕಾರದಿಂದ ದೂರಾ ಎಂಬ ಬೈಲಿನಲ್ಲಿ ತನ್ನ ದೊಡ್ಡ ಪ್ರತಿಮೆಯನ್ನು ಮಾಡಿಸಿದನು. ಈ ಪ್ರತಿಮೆಯನ್ನು ಎತ್ತರದ ಪೀಠದ ಮೇಲಿಟ್ಟಿರಬೇಕು. ಆದ್ದರಿಂದ ಅದು 90 ಅಡಿ [27 ಮೀ] ಎತ್ತರವಿತ್ತು. (ದಾನಿಯೇಲ 3:1) ಈ ಬೃಹದಾಕಾರದ ಪ್ರತಿಮೆಯು ನೆಬೂಕದ್ನೆಚ್ಚರನ ಆಳ್ವಿಕೆಯ ಪ್ರತೀಕವಾಗಿತ್ತು. ಪ್ರತಿಮೆ, ನಿಲುವುಕಂಬ, ಗೋಪುರ ಮತ್ತು ಗಗನಚುಂಬಿ ಕಟ್ಟಡಗಳಂಥ ತುಂಬ ಎತ್ತರದ ಅಥವಾ ಬೃಹದಾಕಾರದ ವಸ್ತುಗಳು ಮನುಷ್ಯರನ್ನು ಪ್ರಭಾವಿಸಬಲ್ಲವು, ಆದರೆ ದೇವರನ್ನಲ್ಲ. “ಯೆಹೋವನು ಮಹೋನ್ನತನು; ಆದರೂ ದೀನರನ್ನು ಲಕ್ಷಿಸುತ್ತಾನೆ; ಗರ್ವಿಷ್ಠರನ್ನು ದೂರದಿಂದಲೇ ಗುರುತುಹಿಡಿಯುತ್ತಾನೆ” ಎಂದು ಕೀರ್ತನೆಗಾರನು ಹಾಡಿದ್ದಾನೆ. (ಕೀರ್ತನೆ 138:6) “ಮನುಷ್ಯರ ಮಧ್ಯೆ ಯಾವುದು ಶ್ರೇಷ್ಠವೆಂದು ಎಣಿಸಲ್ಪಡುತ್ತದೋ ಅದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.” (ಲೂಕ 16:15) ಆದ್ದರಿಂದ ‘ಅಹಂಭಾವದ ವಿಷಯಗಳನ್ನು ಯೋಚಿಸುತ್ತಿರದೆ ದೀನತೆಯಿಂದ ನಡೆಸಲ್ಪಡುವುದು’ ಒಳ್ಳೆಯದು.—ರೋಮನ್ನರಿಗೆ 12:16.
“ವಿವೇಚನೆ” ಬಳಸುತ್ತಾ “ಒಡಂಬಡಿಸುವಂತೆ” ಮಾತಾಡಿ
ವಿವೇಕ ನಮ್ಮ ಮಾತಿನ ಮೇಲೆ ಯಾವ ಪರಿಣಾಮ ಬೀರುತ್ತದೆ? ವಿವೇಕಿ ರಾಜ ನಮಗೆ ಹೀಗೆ ಹೇಳುತ್ತಾನೆ: “[ದೇವರ] ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು; ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು. ಜ್ಞಾನಹೃದಯರಿಗೆ ಜಾಣರೆಂಬ ಬಿರುದು ಬರುವದು; ಸವಿತುಟಿಯಿಂದ ಉಪದೇಶಶಕ್ತಿಯು ಹೆಚ್ಚುವದು. ವಿವೇಕಿಗೆ ವಿವೇಕವೇ ಜೀವದ ಬುಗ್ಗೆ; ಮೂರ್ಖನಿಗೆ ಮೂರ್ಖತನವೇ ದಂಡನೆ. ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ ಅವನ ತುಟಿಗಳಿಗೆ ಉಪದೇಶ [ಒಡಂಬಡಿಸುವ] ಶಕ್ತಿಯನ್ನೂ ಹೆಚ್ಚಿಸುವದು.”—ಜ್ಞಾನೋಕ್ತಿ 16:20-23.
ವಿವೇಕವು ವಿವೇಚನೆಯಿಂದ ಒಡಂಬಡಿಸುವಂತೆ ಮಾತಾಡಲು ಸಹಾಯಮಾಡುತ್ತದೆ. ಯಾಕೆ? ವಿವೇಕಿಯು ಯಾವುದೇ ವಿಷಯದಲ್ಲಾದರೂ “ಸುಕ್ಷೇಮವನ್ನು” ಅಂದರೆ ಒಳ್ಳೇದನ್ನೇ ಹುಡುಕಲು ಪ್ರಯತ್ನಿಸುತ್ತಾನೆ ಮತ್ತು ‘ಯೆಹೋವನಲ್ಲಿ ಭರವಸೆ ಇಡುತ್ತಾನೆ.’ ಇತರರಲ್ಲಿ ಒಳ್ಳೇದನ್ನೇ ಹುಡುಕಲು ಪ್ರಯತ್ನಿಸುವಾಗ ನಾವು ಅವರ ಬಗ್ಗೆ ಒಳ್ಳೇದನ್ನೇ ಮಾತಾಡುತ್ತೇವೆ. ಕಠೋರವಾಗಿ ಅಥವಾ ಜಗಳಕ್ಕೆಳೆಯುವಂತೆ ಮಾತಾಡುವುದಿಲ್ಲ, ಬದಲಿಗೆ ನಮ್ಮ ಮಾತುಗಳು ಸಿಹಿಯಾಗಿಯೂ, ಒಡಂಬಡಿಸುವಂತೆಯೂ ಇರುತ್ತವೆ. ಇತರರ ಪರಿಸ್ಥಿತಿಯನ್ನು ವಿವೇಚಿಸಿ ತಿಳಿದುಕೊಳ್ಳುವಾಗ ಅವರು ಎಷ್ಟು ಕಷ್ಟ ಅನುಭವಿಸುತ್ತಿದ್ದಾರೆ ಮತ್ತು ಹೇಗೆ ಅವುಗಳನ್ನು ಎದುರಿಸುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ರಾಜ್ಯದ ಕುರಿತು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲೂ ವಿವೇಚನೆಯಿಂದ ಮಾತಾಡುವುದು ತುಂಬ ಪ್ರಾಮುಖ್ಯ. ದೇವರ ವಾಕ್ಯವನ್ನು ಇತರರಿಗೆ ಕಲಿಸುವಾಗ, ಬೈಬಲಿನಲ್ಲಿರುವ ಮಾಹಿತಿಯನ್ನು ಅವರಿಗೆ ತಿಳಿಸುವುದು ಮಾತ್ರ ನಮ್ಮ ಉದ್ದೇಶವಲ್ಲ, ಬದಲಿಗೆ ಅವರ ಹೃದಯವನ್ನು ಮುಟ್ಟುವುದೇ ನಮ್ಮ ಗುರಿಯಾಗಿದೆ. ಇದನ್ನು ಮಾಡಲು ನಮ್ಮ ತುಟಿಗಳಿಗೆ ಒಡಂಬಡಿಸುವ ಶಕ್ತಿಯನ್ನು ಹೆಚ್ಚಿಸಬೇಕು. ಅಪೊಸ್ತಲ ಪೌಲನು ತಿಮೊಥೆಯನಿಗೆ, ‘ನೀನು ನಂಬುವಂತೆ ಒಡಂಬಡಿಸಲ್ಪಟ್ಟ ವಿಷಯಗಳಲ್ಲಿ ಮುಂದುವರಿಯುತ್ತಾ ಇರು’ ಎಂದು ಪ್ರೋತ್ಸಾಹಿಸಿದನು.—2 ತಿಮೊಥೆಯ 3:14, 15.
w07 7/15 9-10
“ವಿವೇಕವು ಆಶ್ರಯ”
“ಸೊಕ್ಕಿನವರ ಸಂಗಡ ಸೂರೆಯನ್ನು ಹಂಚಿಕೊಳ್ಳುವದಕ್ಕಿಂತಲೂ ದೀನರ ಸಂಗಡ ದೈನ್ಯದಿಂದಿರುವದು ವಾಸಿ” ಎನ್ನುತ್ತದೆ ಜ್ಞಾನೋಕ್ತಿ 16:19. ಪುರಾತನ ಬಾಬೆಲಿನ ರಾಜ ನೆಬೂಕದ್ನೆಚ್ಚರನಿಂದ ನಾವು ಎಚ್ಚರಿಕೆಯ ಪಾಠವನ್ನು ಕಲಿಯಬಹುದು. ಅವನು ಅಹಂಕಾರದಿಂದ ದೂರಾ ಎಂಬ ಬೈಲಿನಲ್ಲಿ ತನ್ನ ದೊಡ್ಡ ಪ್ರತಿಮೆಯನ್ನು ಮಾಡಿಸಿದನು. ಈ ಪ್ರತಿಮೆಯನ್ನು ಎತ್ತರದ ಪೀಠದ ಮೇಲಿಟ್ಟಿರಬೇಕು. ಆದ್ದರಿಂದ ಅದು 90 ಅಡಿ [27 ಮೀ] ಎತ್ತರವಿತ್ತು. (ದಾನಿಯೇಲ 3:1) ಈ ಬೃಹದಾಕಾರದ ಪ್ರತಿಮೆಯು ನೆಬೂಕದ್ನೆಚ್ಚರನ ಆಳ್ವಿಕೆಯ ಪ್ರತೀಕವಾಗಿತ್ತು. ಪ್ರತಿಮೆ, ನಿಲುವುಕಂಬ, ಗೋಪುರ ಮತ್ತು ಗಗನಚುಂಬಿ ಕಟ್ಟಡಗಳಂಥ ತುಂಬ ಎತ್ತರದ ಅಥವಾ ಬೃಹದಾಕಾರದ ವಸ್ತುಗಳು ಮನುಷ್ಯರನ್ನು ಪ್ರಭಾವಿಸಬಲ್ಲವು, ಆದರೆ ದೇವರನ್ನಲ್ಲ. “ಯೆಹೋವನು ಮಹೋನ್ನತನು; ಆದರೂ ದೀನರನ್ನು ಲಕ್ಷಿಸುತ್ತಾನೆ; ಗರ್ವಿಷ್ಠರನ್ನು ದೂರದಿಂದಲೇ ಗುರುತುಹಿಡಿಯುತ್ತಾನೆ” ಎಂದು ಕೀರ್ತನೆಗಾರನು ಹಾಡಿದ್ದಾನೆ. (ಕೀರ್ತನೆ 138:6) “ಮನುಷ್ಯರ ಮಧ್ಯೆ ಯಾವುದು ಶ್ರೇಷ್ಠವೆಂದು ಎಣಿಸಲ್ಪಡುತ್ತದೋ ಅದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.” (ಲೂಕ 16:15) ಆದ್ದರಿಂದ ‘ಅಹಂಭಾವದ ವಿಷಯಗಳನ್ನು ಯೋಚಿಸುತ್ತಿರದೆ ದೀನತೆಯಿಂದ ನಡೆಸಲ್ಪಡುವುದು’ ಒಳ್ಳೆಯದು.—ರೋಮನ್ನರಿಗೆ 12:16.
“ವಿವೇಚನೆ” ಬಳಸುತ್ತಾ “ಒಡಂಬಡಿಸುವಂತೆ” ಮಾತಾಡಿ
ವಿವೇಕ ನಮ್ಮ ಮಾತಿನ ಮೇಲೆ ಯಾವ ಪರಿಣಾಮ ಬೀರುತ್ತದೆ? ವಿವೇಕಿ ರಾಜ ನಮಗೆ ಹೀಗೆ ಹೇಳುತ್ತಾನೆ: “[ದೇವರ] ವಾಕ್ಯವನ್ನು ಸ್ಮರಿಸುವವನು ಸುಕ್ಷೇಮವನ್ನು ಪಡೆಯುವನು; ಯೆಹೋವನಲ್ಲಿ ಭರವಸವಿಡುವವನು ಭಾಗ್ಯವಂತನು. ಜ್ಞಾನಹೃದಯರಿಗೆ ಜಾಣರೆಂಬ ಬಿರುದು ಬರುವದು; ಸವಿತುಟಿಯಿಂದ ಉಪದೇಶಶಕ್ತಿಯು ಹೆಚ್ಚುವದು. ವಿವೇಕಿಗೆ ವಿವೇಕವೇ ಜೀವದ ಬುಗ್ಗೆ; ಮೂರ್ಖನಿಗೆ ಮೂರ್ಖತನವೇ ದಂಡನೆ. ಜ್ಞಾನಿಯ ಹೃದಯವು ಅವನ ಬಾಯಿಗೆ ಜಾಣತನವನ್ನೂ ಅವನ ತುಟಿಗಳಿಗೆ ಉಪದೇಶ [ಒಡಂಬಡಿಸುವ] ಶಕ್ತಿಯನ್ನೂ ಹೆಚ್ಚಿಸುವದು.”—ಜ್ಞಾನೋಕ್ತಿ 16:20-23.
ವಿವೇಕವು ವಿವೇಚನೆಯಿಂದ ಒಡಂಬಡಿಸುವಂತೆ ಮಾತಾಡಲು ಸಹಾಯಮಾಡುತ್ತದೆ. ಯಾಕೆ? ವಿವೇಕಿಯು ಯಾವುದೇ ವಿಷಯದಲ್ಲಾದರೂ “ಸುಕ್ಷೇಮವನ್ನು” ಅಂದರೆ ಒಳ್ಳೇದನ್ನೇ ಹುಡುಕಲು ಪ್ರಯತ್ನಿಸುತ್ತಾನೆ ಮತ್ತು ‘ಯೆಹೋವನಲ್ಲಿ ಭರವಸೆ ಇಡುತ್ತಾನೆ.’ ಇತರರಲ್ಲಿ ಒಳ್ಳೇದನ್ನೇ ಹುಡುಕಲು ಪ್ರಯತ್ನಿಸುವಾಗ ನಾವು ಅವರ ಬಗ್ಗೆ ಒಳ್ಳೇದನ್ನೇ ಮಾತಾಡುತ್ತೇವೆ. ಕಠೋರವಾಗಿ ಅಥವಾ ಜಗಳಕ್ಕೆಳೆಯುವಂತೆ ಮಾತಾಡುವುದಿಲ್ಲ, ಬದಲಿಗೆ ನಮ್ಮ ಮಾತುಗಳು ಸಿಹಿಯಾಗಿಯೂ, ಒಡಂಬಡಿಸುವಂತೆಯೂ ಇರುತ್ತವೆ. ಇತರರ ಪರಿಸ್ಥಿತಿಯನ್ನು ವಿವೇಚಿಸಿ ತಿಳಿದುಕೊಳ್ಳುವಾಗ ಅವರು ಎಷ್ಟು ಕಷ್ಟ ಅನುಭವಿಸುತ್ತಿದ್ದಾರೆ ಮತ್ತು ಹೇಗೆ ಅವುಗಳನ್ನು ಎದುರಿಸುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
ರಾಜ್ಯದ ಕುರಿತು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲೂ ವಿವೇಕದಿಂದ ಮಾತಾಡುವುದು ತುಂಬ ಪ್ರಾಮುಖ್ಯ. ದೇವರ ವಾಕ್ಯವನ್ನು ಇತರರಿಗೆ ಕಲಿಸುವಾಗ, ಬೈಬಲಿನಲ್ಲಿರುವ ಮಾಹಿತಿಯನ್ನು ಅವರಿಗೆ ತಿಳಿಸುವುದು ಮಾತ್ರ ನಮ್ಮ ಉದ್ದೇಶವಾಗಿರುವುದಿಲ್ಲ, ಬದಲಿಗೆ ಅವರ ಹೃದಯವನ್ನು ಮುಟ್ಟುವುದೇ ನಮ್ಮ ಗುರಿಯಾಗಿದೆ. ಇದನ್ನು ಮಾಡಲು ನಮ್ಮ ತುಟಿಗಳಿಗೆ ಒಡಂಬಡಿಸುವ ಶಕ್ತಿಯನ್ನು ಹೆಚ್ಚಿಸಬೇಕು. ಅಪೊಸ್ತಲ ಪೌಲನು ತಿಮೊಥೆಯನಿಗೆ, ‘ನೀನು ನಂಬುವಂತೆ ಒಡಂಬಡಿಸಲ್ಪಟ್ಟ ವಿಷಯಗಳಲ್ಲಿ ಮುಂದುವರಿಯುತ್ತಾ ಇರು’ ಎಂದು ಪ್ರೋತ್ಸಾಹಿಸಿದನು.—2 ತಿಮೊಥೆಯ 3:14, 15.
ಗ್ರೀಕ್ ಭಾಷೆಯಲ್ಲಿ “ಒಡಂಬಡಿಸು” ಎಂಬ ಪದದ ಅರ್ಥ “ಒಲಿಸಿಕೊ” ಅಥವಾ “ತರ್ಕ ಇಲ್ಲವೆ ನೈತಿಕ ವಿಚಾರಗಳ ಪ್ರಭಾವದಿಂದ ಮನಸ್ಸನ್ನು ಬದಲಾಯಿಸುವುದು” ಎಂದಾಗಿದೆ ಎಂದು ಡಬ್ಲ್ಯೂ. ಇ. ವೈನ್ ಎಂಬವರು ಬರೆದ ಆ್ಯನ್ ಎಕ್ಸ್ಪೊಸಿಟರಿ ಡಿಕ್ಷನೆರಿ ಆಫ್ ನ್ಯೂ ಟೆಸ್ಟಮೆಂಟ್ ವರ್ಡ್ಸ್ ಹೇಳುತ್ತದೆ. ಕೇಳುಗರ ಮನಸ್ಸನ್ನು ಬದಲಾಯಿಸುವಂಥ ರೀತಿಯಲ್ಲಿ ಒಡಂಬಡಿಸಬೇಕೆಂದರೆ ಅವರ ಯೋಚನೆ, ಆಸಕ್ತಿ, ಪರಿಸ್ಥಿತಿ, ಹಿನ್ನೆಲೆಯನ್ನು ವಿವೇಚಿಸಿ ತಿಳಿದುಕೊಂಡಿರಬೇಕು. ಇಂಥ ತಿಳಿವಳಿಕೆ (ಒಳನೋಟ) ಪಡೆಯುವುದು ಹೇಗೆ? ಇದಕ್ಕೆ ಶಿಷ್ಯ ಯಾಕೋಬನು ಹೀಗೆ ಉತ್ತರಿಸುತ್ತಾನೆ: “ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಆಗಿರಬೇಕು.” (ಯಾಕೋಬ 1:19) ಕೇಳುಗರ ಭಾವನೆಗಳನ್ನು ಹೊರಗೆಳೆಯುವ ಮತ್ತು ಆತನು ಹೇಳುವ ವಿಷಯಗಳಿಗೆ ಸರಿಯಾಗಿ ಗಮನಕೊಡುವ ಮೂಲಕ ಅವನ ಹೃದಯದಲ್ಲೇನಿದೆ ಎಂದು ನಾವು ತಿಳಿಯಬಲ್ಲೆವು.
ಇತರರನ್ನು ಒಡಂಬಡಿಸುವುದರಲ್ಲಿ ಅಪೊಸ್ತಲ ಪೌಲನು ಅತ್ಯುತ್ತಮ ಮಾದರಿ. (ಅಪೊಸ್ತಲರ ಕಾರ್ಯಗಳು 18:4) ಆತನ ವಿರೋಧಿಗಳಲ್ಲಿ ಒಬ್ಬನಾದ ದೇಮೇತ್ರಿಯ ಎಂಬ ಅಕ್ಕಸಾಲಿಗನು, “ಈ ಪೌಲನು . . . ಎಫೆಸದಲ್ಲಿ ಮಾತ್ರವಲ್ಲದೆ ಹೆಚ್ಚುಕಡಮೆ ಇಡೀ ಏಷ್ಯಾ ಪ್ರಾಂತದಲ್ಲಿ ಸಾಕಷ್ಟು ಜನರನ್ನು ಒಡಂಬಡಿಸಿ ಅವರ ಮನಸ್ಸನ್ನು ಬೇರೊಂದು ಅಭಿಪ್ರಾಯದ ಕಡೆಗೆ ತಿರುಗಿಸಿದ್ದಾನೆ” ಎಂದು ಒಪ್ಪಿಕೊಂಡನು. (ಅಪೊಸ್ತಲರ ಕಾರ್ಯಗಳು 19:26) ಸಾರುವ ಕೆಲಸವನ್ನು ಅಷ್ಟೊಂದು ಪರಿಣಾಮಕಾರಿಯಾಗಿ ಮಾಡಿದ್ದಕ್ಕೆ ತಾನೇ ಕಾರಣ ಎಂದು ಪೌಲನು ಕೊಚ್ಚಿಕೊಂಡನಾ? ಇಲ್ಲ. ತನ್ನ ಸಾರುವ ಕೆಲಸವು “ಪವಿತ್ರಾತ್ಮದ ಮತ್ತು ದೇವರ ಶಕ್ತಿಯ ಪುರಾವೆ” ಎಂದು ಅವನು ಭಾವಿಸಿದನು. (1 ಕೊರಿಂಥ 2:4, 5) ನಮಗೂ ಯೆಹೋವನ ಪವಿತ್ರಾತ್ಮದ ಸಹಾಯ ಲಭ್ಯವಿದೆ. ಯೆಹೋವನಲ್ಲಿ ನಾವು ಭರವಸೆ ಇಟ್ಟಿರುವುದರಿಂದ ನಾವು ಸೇವೆಯಲ್ಲಿ ವಿವೇಚನೆಯಿಂದ ಒಡಂಬಡಿಸುವಂತೆ ಮಾತಾಡಲು ಪ್ರಯತ್ನಿಸುವಾಗ ಆತನು ನಮಗೆ ಸಹಾಯ ಮಾಡೇ ಮಾಡುತ್ತಾನೆ.
“ಜ್ಞಾನಹೃದರಿಗೆ [ವಿವೇಕಿಗಳಿಗೆ] ಜಾಣರೆಂಬ ಬಿರುದು” ಬರುವುದರಲ್ಲಿ ಆಶ್ಚರ್ಯವೇನಿಲ್ಲ. (ಜ್ಞಾನೋಕ್ತಿ 16:21, ಆ್ಯನ್ ಅಮೆರಿಕನ್ ಟ್ರಾನ್ಸಲೇಷನ್, ನ್ಯೂ ಇಂಟರ್ ನ್ಯಾಷನಲ್ ವರ್ಷನ್) ವಿವೇಕಿಗೆ ವಿವೇಕವು “ಜೀವದ ಬುಗ್ಗೆ.” ಆದರೆ ಮೂರ್ಖನು ‘ಜ್ಞಾನವನ್ನೂ ಶಿಕ್ಷೆಯನ್ನೂ ಅಸಡ್ಡೆಮಾಡುವನು.’ (ಜ್ಞಾನೋಕ್ತಿ 1:7) ಯೆಹೋವನಿಂದ ಬರುವ ಶಿಕ್ಷೆ ಅಥವಾ ಶಿಸ್ತನ್ನು ತಿರಸ್ಕರಿಸುವುದರ ಪರಿಣಾಮ ಏನಾಗುತ್ತದೆ? ಮೇಲೆ ತಿಳಿಸಲಾದಂತೆ “ಮೂರ್ಖನಿಗೆ ಮೂರ್ಖತನವೇ ದಂಡನೆ” ಎನ್ನುತ್ತಾನೆ ಸೊಲೊಮೋನನು. (ಜ್ಞಾನೋಕ್ತಿ 16:22) ಅವರಿಗೆ ಹೆಚ್ಚು ಶಿಸ್ತು ಕೊಡಲಾಗುತ್ತದೆ. ಆ ಶಿಸ್ತು ಹೆಚ್ಚಾಗಿ ದಂಡನೆಯಾಗಿರುತ್ತದೆ. ಮೂರ್ಖನು ಸ್ವತಃ ತನ್ನ ಮೇಲೇ ಕಷ್ಟ, ಅವಮಾನ, ಕಾಯಿಲೆ ಮತ್ತು ಮರಣವನ್ನು ತಂದುಕೊಳ್ಳಬಹುದು.
ವಿವೇಕವು ನಮ್ಮ ಮಾತಿನ ಮೇಲೆ ಬೀರುವ ಪ್ರಭಾವವನ್ನು ಒತ್ತಿಹೇಳುತ್ತಾ ಇಸ್ರಾಯೇಲಿನ ಅರಸನು ಹೀಗೆ ಹೇಳಿದ್ದಾನೆ: “ಸವಿನುಡಿಯು ಜೇನುಕೊಡ; ಅದು ಆತ್ಮಕ್ಕೆ ಸಿಹಿ, ಎಲುಬಿಗೆ ಕ್ಷೇಮ.” (ಜ್ಞಾನೋಕ್ತಿ 16:24) ಜೇನು ಸಿಹಿಯಾಗಿದ್ದು ಹಸಿದವರಿಗೆ ಕ್ಷಣ ಮಾತ್ರದಲ್ಲಿ ಚೈತನ್ಯ ಕೊಡುವಂತೆಯೇ ಸಿಹಿಮಾತು ಉತ್ತೇಜನ ಮತ್ತು ಚೈತನ್ಯ ನೀಡುತ್ತದೆ. ಜೇನು ಆರೋಗ್ಯಕ್ಕೆ ಒಳ್ಳೆದು ಮತ್ತು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಅದರಂತೆಯೇ ಸಿಹಿ ಮಾತು ಆಧ್ಯಾತ್ಮಿಕ ಆರೋಗ್ಯಕ್ಕೆ ಉತ್ತಮ.—ಜ್ಞಾನೋಕ್ತಿ 24:13, 14.
‘ಸರಳವಾಗಿ ತೋರುವ ದಾರಿಯ’ ಬಗ್ಗೆ ಎಚ್ಚರವಿರಲಿ
“ಮನುಷ್ಯದೃಷ್ಟಿಗೆ ಸರಳವಾಗಿ ತೋರುವ ಒಂದು ದಾರಿಯುಂಟು. ಕಟ್ಟಕಡೆಗೆ ಅದು ಮರಣಮಾರ್ಗವೇ” ಎಂದು ಸೊಲೊಮೋನನು ಹೇಳಿದನು. (ಜ್ಞಾನೋಕ್ತಿ 16:25) ಯಾರು ನೆಪಗಳನ್ನು ಕೊಟ್ಟು ದೇವರ ನಿಯಮಗಳಿಗೆ ವಿರುದ್ಧವಾಗಿ ಹೋಗುತ್ತಾರೋ ಅಂಥವರಿಗೆ ಇದು ಎಚ್ಚರಿಕೆಯಾಗಿದೆ. ನಮ್ಮ ದೃಷ್ಟಿಯಲ್ಲಿ ಕೆಲವೊಂದು ವಿಷಯಗಳು ಸರಿಯಾಗಿ ಕಾಣಬಹುದು, ಆದರೆ ದೇವರ ವಾಕ್ಯದ ತತ್ವಕ್ಕನುಸಾರ ಅದು ತಪ್ಪಾಗಿರಬಹುದು. ಇಂಥ ಕುತಂತ್ರವನ್ನು ಸೈತಾನ ಬಳಸಿ ಒಬ್ಬ ವ್ಯಕ್ತಿ ತನಗೆ ಸರಿಯೆಂದು ತೋಚುವ ಮಾರ್ಗವನ್ನು ಆರಿಸುವಂತೆ ಮಾಡುತ್ತಾನೆ. ಆದರೆ ಅದು ಕೊನೆಗೆ ಮರಣಕ್ಕೆ ನಡೆಸುತ್ತದೆ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
g 11/13 16
“ನಿತ್ಯವೂ ಔತಣ” ಮಾಡುತ್ತಿರೋ?
“ದೀನನ [“ಬಾಧಿತರ,” ಪವಿತ್ರ ಬೈಬಲ್] ದಿನಗಳೆಲ್ಲಾ ದುಃಖಭರಿತ; ಹರ್ಷಹೃದಯನಿಗೆ ನಿತ್ಯವೂ ಔತಣ.”—ಜ್ಞಾನೋಕ್ತಿ 15:15.
ಈ ಮಾತುಗಳ ಅರ್ಥವೇನು? ಈ ಮಾತುಗಳು ವ್ಯಕ್ತಿಯೊಬ್ಬನ ಮಾನಸಿಕ ಮತ್ತು ಭಾವಾನಾತ್ಮಕ ಪರಿಸ್ಥಿತಿಯನ್ನು ಸೂಚಿಸುತ್ತವೆ. ‘ದೀನನು’ ಅಥವಾ ಬಾಧಿತನು ನಕರಾತ್ಮಕ ವಿಷಯಗಳ ಮೇಲೆ ಗಮನಕೊಡುವುದರಿಂದ ಅವನ ದಿನಗಳು “ದುಃಖ” ಅಥವಾ ನೋವಿನಿಂದ ಕೂಡಿರುತ್ತವೆ. ಆದರೆ ‘ಹರ್ಷಹೃದಯದವನು’ ಒಳ್ಳೆಯ ವಿಷಯಗಳಿಗೆ ಗಮನ ಕೊಡಲು ಪ್ರಯತ್ನಿಸುತ್ತಾನೆ. ಈ ಮನೋಭಾವದಿಂದ ಅವನಿಗೆ ಸಂತೋಷ ಸಿಗುತ್ತದೆ. ಹೀಗೆ ಅವನಿಗೆ ನಿತ್ಯವೂ ಔತಣದಂತೆ ಇರುತ್ತದೆ.
ನಮ್ಮ ಸಂತೋಷವನ್ನು ಕಸಿದುಕೊಳ್ಳುವಂಥ ಸಮಸ್ಯೆಗಳು ನಮಗೆಲ್ಲರಿಗೂ ಇವೆ. ಆದರೂ, ಕಷ್ಟದಲ್ಲೂ ಸಂತೋಷವನ್ನು ಕಾಪಾಡಿಕೊಳ್ಳಲು ಕೆಲವು ವಿಷಯಗಳನ್ನು ನಾವು ಮಾಡಬಹುದು. ಇದರ ಬಗ್ಗೆ ಬೈಬಲ್ ಏನು ಹೇಳುತ್ತದೆ ಎನ್ನುವುದನ್ನು ಗಮನಿಸಿ.
• ನಾಳಿನ ಚಿಂತೆಗಳು ನಿಮ್ಮ ಇವತ್ತಿನ ಸಂತೋಷವನ್ನು ಕಸಿದುಕೊಳ್ಳಲು ಬಿಡಬೇಡಿ. ಯೇಸು ಕ್ರಿಸ್ತನು ಹೇಳಿದ್ದು: “ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವು ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು. ಪ್ರತಿದಿನಕ್ಕೆ ಅದಕ್ಕಿರುವ ಕೆಡುಕೇ ಸಾಕು.”—ಮತ್ತಾಯ 6:34.
• ಒಳ್ಳೆಯ ವಿಷಯಗಳ ಮೇಲೆ ಗಮನವಿಡಿ. ಕುಗ್ಗಿ ಹೋದಾಗ ನಿಮ್ಮ ಜೀವನದ ಒಳ್ಳೆ ವಿಷಯಗಳ ಪಟ್ಟಿಯೊಂದನ್ನ ಮಾಡಿ, ಅದರ ಬಗ್ಗೆ ಯೋಚಿಸಿ. ನೀವು ಹಿಂದೆ ಮಾಡಿದ ತಪ್ಪುಗಳ ಬಗ್ಗೆ, ಕೆಟ್ಟ ಕೆಲಸಗಳ ಬಗ್ಗೆ ಯೋಚಿಸಬೇಡಿ. ಆ ತಪ್ಪುಗಳಿಂದ ಪಾಠ ಕಲಿತು ಮುಂದೆ ಸಾಗಿ. ಉದಾಹರಣೆಗೆ, ಬರೀ ರಿಯರ್ ವ್ಯೂ ಮಿರರನ್ನೇ ನೋಡಿಕೊಂಡಿರದೆ, ಅದನ್ನು ಆಗೊಮ್ಮೆ ಈಗೊಮ್ಮೆ ನೋಡುವ ಡ್ರೈವರ್ನಂತೆ ಇರಿ. ದೇವರು ಪಾಪಗಳನ್ನು ಕ್ಷಮಿಸುವವನಾಗಿದ್ದಾನೆ ಎನ್ನುವುದನ್ನು ಯಾವತ್ತೂ ಮರೆಯಬೇಡಿ.—ಕೀರ್ತನೆ 130:4.
• ಚಿಂತೆಗಳಿಂದ ನೀವು ಕುಗ್ಗಿ ಹೋದಾಗ ಯಾರು ನಿಮ್ಮನ್ನು ಉತ್ತೇಜಿಸಿ ಪ್ರೋತ್ಸಾಹಿಸುತ್ತಾರೋ ಅಂಥವರ ಹತ್ತಿರ ಅದನ್ನು ಹೇಳಿಕೊಳ್ಳಿ. “ಕಳವಳವು ಮನಸ್ಸನ್ನು ಕುಗ್ಗಿಸುವದು. ಕನಿಕರದ ಮಾತು ಅದನ್ನು ಹಿಗ್ಗಿಸುವುದು” ಎನ್ನುತ್ತದೆ ಜ್ಞಾನೋಕ್ತಿ 12:25. “ಕನಿಕರದ ಮಾತು” ಕುಟುಂಬ ಸದಸ್ಯರಿಂದಲೋ ಅಥವಾ ಒಬ್ಬ ಒಳ್ಳೇ ಸ್ನೇಹಿತನಿಂದಲೋ ಬರಬಹುದು. ಅವರು ನಿಮ್ಮನ್ನು ಸಂಶಯಿಸುವುದಿಲ್ಲ ಬದಲಿಗೆ ಅವರ “ಪ್ರೀತಿ ನಿರಂತರವಾಗಿರುತ್ತದೆ.”—ಜ್ಞಾನೋಕ್ತಿ 17:17.
ಬೈಬಲಿನಲ್ಲಿರುವ ವಿವೇಕಯುತ ಮಾತುಗಳು ಕಷ್ಟಸಮಸ್ಯೆಗಳ ಮಧ್ಯೆಯೂ ಹೆಚ್ಚು ಸಂತೋಷದಿಂದಿರಲು ಅನೇಕರಿಗೆ ಸಹಾಯ ಮಾಡಿವೆ. ಆ ಮುತ್ತಿನಂಥ ಮಾತುಗಳು ನಿಮಗೂ ಪ್ರಯೋಜನ ತರಲಿ.
w07 5/15 18-19
“ನಿನ್ನ ಉದ್ದೇಶಗಳು ಸಫಲವಾಗುವವು”
ಸ್ವಪ್ರೀತಿ ಇರುವುದಾದರೆ ನಾವು ನಮ್ಮ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತೇವೆ, ನಮ್ಮ ಕೆಟ್ಟ ನಡತೆಯನ್ನು ಮರೆಮಾಡಲು ಪ್ರಯತ್ನಿಸುತ್ತೇವೆ. ಅಲ್ಲದೇ, ನಾವು ಮಾಡುವ ತಪ್ಪುಗಳು ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ. ಆದರೆ ಯೆಹೋವನಿಗೆ ನಾವು ಮೋಸ ಮಾಡಲು ಆಗುವುದಿಲ್ಲ. ಯೆಹೋವನಿಗೆ ನಮ್ಮ ಅಂತರಂಗದ ಬಗ್ಗೆ ಸಂಪೂರ್ಣವಾಗಿ ಗೊತ್ತಿದೆ. ಅಂತರಂಗವು ಒಬ್ಬ ವ್ಯಕ್ತಿಯ ಮಾನಸಿಕ ಪ್ರವೃತ್ತಿಯಾಗಿದ್ದು ಅವನ ಹೃದಯಕ್ಕೆ ಸಂಬಂಧಿಸಿದೆ. ಇದು ಹೆಚ್ಚಾಗಿ ಸಾಂಕೇತಿಕ ಹೃದಯ ಏನು ಮಾಡುತ್ತದೋ ಅದರ ಮೇಲೆ ಹೊಂದಿಕೊಂಡಿರುತ್ತದೆ. ಅದರಲ್ಲಿ ನಮ್ಮ ಯೋಚನೆಗಳು, ಭಾವನೆಗಳು ಮತ್ತು ಉದ್ದೇಶಗಳು ಸೇರಿವೆ. “ಹೃದಯಗಳನ್ನು ಶೋಧಿಸುವವನು” ನಮ್ಮ ಅಂತರಂಗವನ್ನು ನೋಡಿ ಅದಕ್ಕೆ ಹೊಂದಿಕೆಯಲ್ಲಿ ನ್ಯಾಯ ತೀರ್ಮಾನ ಮಾಡುತ್ತಾನೆ. ಹೀಗೆ ಮಾಡುವಾಗ ಆತನು ಪಕ್ಷಪಾತ ಮಾಡುವುದಿಲ್ಲ. ಹಾಗಾಗಿ ನಾವು ನಮ್ಮ ಅಂತರಂಗವನ್ನು ಕಾಪಾಡಿಕೊಳ್ಳುವುದು ತುಂಬಾ ಪ್ರಾಮುಖ್ಯ.
‘ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸು’
ಯೋಜನೆಗಳನ್ನು ಮಾಡಬೇಕೆಂದರೆ ಅದರ ಬಗ್ಗೆ ಮೊದಲು ಯೋಚಿಸಿಬೇಕು. ಇದರಲ್ಲಿ ಹೃದಯ ಕೂಡ ಸೇರಿದೆ. ನಾವು ಯೋಚನೆಗಳಿಗೆ ಅನುಗುಣವಾಗಿ ಕ್ರಿಯೆ ಮಾಡುತ್ತೇವೆ. ನಾವು ನಮ್ಮ ಕೆಲಸ ಕಾರ್ಯಗಳಲ್ಲಿ ಸಫರಾಗುತ್ತೇವಾ? ಸೊಲೊಮೋನನು ಹೇಳಿದ್ದು, “ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸಿದರೆ ನಿನ್ನ ಉದ್ದೇಶಗಳು ಸಫಲವಾಗುವವು.” (ಜ್ಞಾನೋಕ್ತಿ 16:3) ನಿನ್ನ ಕಾರ್ಯಭಾರವನ್ನು ಯೆಹೋವನಿಗೆ ವಹಿಸು ಅಂದರೆ ಯೆಹೋವನ ಮೇಲೆ ಸಂಪೂರ್ಣ ನಂಬಿಕೆ ಇಟ್ಟು, ಆತನ ಮೇಲೆ ಆತುಕೊಂಡು, ನಮ್ಮ ಹೊರೆಗಳು ಆತನದ್ದೋ ಎಂಬಂತೆ ಆತನ ಹೆಗಲಿಗೆ ಹಾಕುವುದನ್ನು ಸೂಚಿಸುತ್ತದೆ. ಕೀರ್ತನೆಗಾರನು ಹಾಡಿದ್ದು: “ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು. ಆತನೇ ಅದನ್ನು ಸಾಗಿಸುವನು.”—ಕೀರ್ತನೆ 37:5.
ನಮ್ಮ ಯೋಜನೆಗಳು ಸಫಲ ಆಗಬೇಕೆಂದರೆ ಅವು ದೇವರ ವಾಕ್ಯಕ್ಕೆ ಹೊಂದಿಕೆಯಲ್ಲಿರಬೇಕು ಮತ್ತು ಒಳ್ಳೇ ಉದ್ದೇಶದಿಂದ ಕೂಡಿರಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಬೈಬಲಿನ ಸಲಹೆಯನ್ನು ಸರಿಯಾಗಿ ಪಾಲಿಸಲು ನಮ್ಮಿಂದಾದ ಎಲ್ಲಾ ಪ್ರಯತ್ನವನ್ನು ಹಾಕುವಂತೆ ಯೆಹೋವನ ಸಹಾಯ ಮತ್ತು ಬೆಂಬಲಕ್ಕಾಗಿ ನಾವು ಪ್ರಾರ್ಥಿಸಬೇಕು. ಅದರಲ್ಲೂ ವಿಶೇಷವಾಗಿ ನಮಗೆ ಕಷ್ಟ ಪರೀಕ್ಷೆಗಳು ಎದುರಾದಾಗ ‘ನಮ್ಮ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕಬೇಕು.’ ಆಗ ಆತನು ನಮ್ಮನ್ನು ‘ಉದ್ದಾರ ಮಾಡುವನು.’ ಅಲ್ಲದೇ ಆತನು “ನೀತಿವಂತನನ್ನು ಎಂದಿಗೂ ಕದಲಗೊಡಿಸನು.”—ಕೀರ್ತನೆ 55:22.
“ಯೆಹೋವನು ಒಂದೊಂದನ್ನೂ ತಕ್ಕ ಗುರಿಯಿಂದ ಸೃಷ್ಟಿಸಿದ್ದಾನೆ”
ನಮ್ಮ ಕಾರ್ಯಭಾರವನ್ನು ಯೆಹೋವನಿಗೆ ವಹಿಸುವದರಿಂದ ಇನ್ನೂ ಯಾವೆಲ್ಲಾ ಪ್ರಯೋಜನಗಳಾಗುತ್ತವೆ? ವಿವೇಕಿಯಾದ ಅರಸನೊಬ್ಬನು ಹೇಳಿದ್ದು,“ಯೆಹೋವನು ಒಂದೊಂದನ್ನೂ ತಕ್ಕ ಗುರಿಯಿಂದ ಸೃಷ್ಟಿಸಿದ್ದಾನೆ.” (ಜ್ಞಾನೋಕ್ತಿ 16:4ಎ) ಇಡೀ ವಿಶ್ವವನ್ನು ಸೃಷ್ಟಿಸಿದ ದೇವರಿಗೆ ಉದ್ದೇಶವಿದೆ. ನಾವು ನಮ್ಮ ಕಾರ್ಯಭಾರವನ್ನು ಆತನಿಗೆ ವಹಿಸಿದರೆ ನಮ್ಮ ಜೀವನ ವ್ಯರ್ಥವಾಗುವುದಿಲ್ಲ, ಅದಕ್ಕೆ ಒಂದು ಉದ್ದೇಶ ಮತ್ತು ಅರ್ಥ ಸಿಗುತ್ತದೆ. ಈ ಭೂಮಿಗಾಗಿ ಮತ್ತು ಮಾನವರಿಗಾಗಿ ಯೆಹೋವನ ಉದ್ದೇಶ ಶಾಶ್ವತವಾಗಿದೆ. (ಎಫೆಸ 3:11) ಆತನು ಭೂಮಿಯನ್ನು ಸೃಷ್ಟಿಸಿದ್ದು “ಜನನಿವಾಸಕ್ಕಾಗಿಯೇ.” (ಯೆಶಾಯ 45:18) ಅಷ್ಟೇ ಅಲ್ಲದೆ, ಆರಂಭದಲ್ಲಿ ದೇವರು ಭೂಮಿಯ ಮೇಲೆ ಮಾನವರಿಗಾಗಿ ಏನನ್ನು ಉದ್ದೇಶಿಸಿದ್ದನೋ ಅದು ನೆರವೇರಲಿದೆ. (ಆದಿಕಾಂಡ 1:28) ಯಾರು ತಮ್ಮನ್ನು ಸತ್ಯ ದೇವರಿಗೆ ಅರ್ಪಿಸಿಕೊಂಡಿರುತ್ತಾರೋ ಅಂಥವರು ಶಾಶ್ವತವಾಗಿ ಅರ್ಥಭರಿತ ಜೀವನ ನಡೆಸುತ್ತಾರೆ.
ಯೆಹೋವನು “ಕೇಡಿನ ದಿನಕ್ಕಾಗಿ ಕೆಡುಕರನ್ನುಂಟುಮಾಡಿದ್ದಾನೆ.” (ಜ್ಞಾನೋಕ್ತಿ 16:4ಬಿ) ಯೆಹೋವನು ಕೆಡುಕರನ್ನು ಸೃಷ್ಟಿ ಮಾಡಿಲ್ಲ, ಏಕೆಂದರೆ ಆತನು “ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ.” (ಧರ್ಮೋ 32:4) ಯೆಹೋವನು ಕೆಡುಕರ ವಿರುದ್ಧ ತನ್ನ ನ್ಯಾಯತೀರ್ಪನ್ನು ತರುವ ತನಕ ಅವರನ್ನು ಜೀವಿಸುವಂತೆ ಬಿಟ್ಟಿದ್ದಾನೆ. ಉದಾಹರಣೆಗೆ, ಯೆಹೋವನು ಈಜಿಪ್ಟಿನ ಫರೋಹನಿಗೆ ಹೇಳಿದ್ದು, “ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಲೋಕದಲ್ಲೆಲ್ಲಾ ಪ್ರಸಿದ್ಧಿಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಸಾಯಿಸದೆ ಉಳಿಸಿದೆನು.” (ವಿಮೋ 9:16) ಹತ್ತು ಬಾಧೆಗಳನ್ನು ತಂದಿದ್ದು, ಫರೋಹ ಮತ್ತವನ ಸೈನ್ಯವನ್ನು ಕೆಂಪು ಸಮುದ್ರದಲ್ಲಿ ನಾಶ ಮಾಡಿದ್ದು ತಾನೇ ಆತನ ಅಪಾರ ಶಕ್ತಿಗೆ ಒಂದು ಉತ್ತಮ ಉದಾಹರಣೆಯಾಗಿದೆ.
ಕೆಡುಕರು ಸಹ ತಮಗೆ ಅರಿವಿಲ್ಲದೆ ಯೆಹೋವನ ಉದ್ದೇಶಕ್ಕೆ ಪೂರಕವಾಗಿ ನೆರವಾಗುವಂತೆ ಯೆಹೋವನು ಸನ್ನಿವೇಶಗಳನ್ನು ಬದಲಿಸಬಲ್ಲನು. ಕೀರ್ತನೆಗಾರನು ಹೇಳಿದ್ದು: “ಮನುಷ್ಯರ ಕೋಪವೂ ನಿನ್ನ [ಯೆಹೋವನ] ಘನಕ್ಕೇ ಸಾಧಕವಾಗುವದು; ಕೋಪಶೇಷವನ್ನು ನಡುಕಟ್ಟಿನಂತೆ ಬಿಗಿದುಕೊಳ್ಳುವಿ.” (ಕೀರ್ತನೆ 76:10) ವೈರಿಗಳು ತನ್ನ ಸೇವಕರ ಮೇಲೆ ಕೋಪವನ್ನು ತೋರಿಸುವಂತೆ ಯೆಹೋವನು ಅನುಮತಿಸುತ್ತಾನೆ ನಿಜ. ತನ್ನ ಸೇವಕರನ್ನು ಶಿಸ್ತುಗೊಳಿಸಲು ಮತ್ತು ತರಬೇತಿಗೊಳಿಸಲು ಎಲ್ಲಿಯವರೆಗೆ ಬೇಕೋ ಅಲ್ಲಿಯವರೆಗೆ ಮಾತ್ರ ಅನುಮತಿಸುತ್ತಾನೆ. ಅದಕ್ಕಿಂತ ಹೆಚ್ಚಿನದ್ದನ್ನು ದೇವರು ತೆಗೆದುಕೊಳ್ಳುತ್ತಾನೆ.
ಯೆಹೋವನು ತನ್ನ ದೀನ ಸೇವಕರಿಗೆ ಸಹಾಯ ಮಾಡುತ್ತಾನೆ. ಆದರೆ ಯಾರು ಹೆಮ್ಮೆ ಮತ್ತು ಅಹಂಕಾರ ಪಡುತ್ತಾರೋ ಅವರ ಬಗ್ಗೆ ಏನು? ಇಸ್ರಾಯೇಲಿನ ರಾಜ ಹೇಳಿದ್ದು, “ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ. ಅವರಿಗೆ ದಂಡನೆ ಖಂಡಿತ.” (ಜ್ಞಾನೋಕ್ತಿ 16:5) ಅಹಂಕಾರಿಗಳು ಒಬ್ಬರಿಗೊಬ್ಬರು ಬೆಂಬಲಿಸುತ್ತಾ ಸಮಾಧಾನ ಮಾಡಿಕೊಳ್ಳಬಹುದು ಆದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ಎಷ್ಟೇ ಜ್ಞಾನ ಇರಲಿ, ಎಷ್ಟೇ ಸಾಮರ್ಥ್ಯವಿರಲಿ ಅಥವಾ ಯಾವುದೇ ಸುಯೋಗದಲ್ಲಿರಲಿ ದೀನತೆಯನ್ನು ಬೆಳೆಸಿಕೊಳ್ಳುವುದು ವಿವೇಕಯುತವಾಗಿದೆ.
‘ಯೆಹೋವನಲ್ಲಿ ಭಯಭಕ್ತಿಯಿರಲಿ’
ನಾವು ಹುಟ್ಟಿದಾಗಿನಿಂದ ಪಾಪಿಗಳಾಗಿರುವುದರಿಂದ ಸಹಜವಾಗಿ ತಪ್ಪು ಮಾಡುತ್ತೇವೆ. (ರೋಮನ್ನರಿಗೆ 3:23; 5:12) ಕೆಟ್ಟ ದಾರಿಗೆ ನಡೆಸುವ ಯೋಜನೆಗಳನ್ನು ಮಾಡದಿರಲು ಯಾವುದು ನಮಗೆ ಸಹಾಯ ಮಾಡುತ್ತದೆ? ಜ್ಞಾನೋಕ್ತಿ 16:6 ತಿಳಿಸುವುದು, “ಕೃಪಾಸತ್ಯತೆಗಳಿಂದ ಪಾಪನಿವಾರಣೆ. ಯೆಹೋವನ ಭಯಭಕ್ತಿಯಿಂದ ಹಾನಿನಿವಾರಣೆ.” ಯೆಹೋವ ದೇವರು ಆತನ ಕೃಪೆ ಮತ್ತು ಸತ್ಯತೆಯಿಂದ ನಮ್ಮ ಪಾಪಗಳನ್ನು ಕ್ಷಮಿಸುತ್ತಾನೆ. ಯೆಹೋವನ ಮೇಲಿನ ಭಯವು ಪಾಪ ಮಾಡುವುದರಿಂದ ನಮ್ಮನ್ನು ಎಚ್ಚರಿಸುತ್ತದೆ. ಯೆಹೋವನ ಮೇಲಿನ ಪ್ರೀತಿ ಮತ್ತು ಆತನ ಕೃಪೆಯ ಕಡೆಗಿನ ಗಣ್ಯತೆಯ ಮೂಲಕ ದೇವಭಯವನ್ನು ನಾವು ಬೆಳೆಸಿಕೊಳ್ಳುತ್ತೇವೆ. ಇದು ನಾವು ಆತನನ್ನು ನೋಯಿಸಬಾರದೆಂಬ ಭಾವನೆಯನ್ನು ಬೆಳೆಸಿಕೊಳ್ಳುವಂತೆ ಸಹಾಯ ಮಾಡುತ್ತದೆ.
ದೇವರ ಅದ್ಭುತ ಶಕ್ತಿಯ ಕಡೆಗೆ ಪೂಜ್ಯಭಾವ ಮತ್ತು ಗೌರವವನ್ನು ಬೆಳೆಸಿಕೊಳ್ಳುವಾಗ ದೇವಭಯವು ನಮ್ಮ ಹೃದಯದಲ್ಲಿ ಬೆಳೆಯುತ್ತದೆ. ಸೃಷ್ಟಿಯಲ್ಲಿರುವ ಆತನ ಅದ್ಭುತ ಶಕ್ತಿಯ ಬಗ್ಗೆ ಸ್ವಲ್ಪ ಯೋಚಿಸಿ. ಅದರ ಬಗ್ಗೆ ತಿಳಿದುಕೊಂಡಾಗ ಪೂರ್ವಜನಾದ ಯೋಬನು ತನ್ನ ಯೋಚನೆಯನ್ನು ಬದಲಾಯಿಸಿಕೊಳ್ಳಲು ಸಹಾಯವಾಯಿತು. (ಯೋಬ 42;1-6) ಬೈಬಲಿನಲ್ಲಿ ಯೆಹೋವನು ತನ್ನ ಜನರೊಂದಿಗೆ ವ್ಯವಹರಿಸಿದ ದಾಖಲೆಗಳನ್ನು ಓದುವಾಗ ನಮ್ಮ ಮೇಲೆ ಕೂಡ ಇದೇ ರೀತಿಯ ಪರಿಣಾಮ ಬಿರುವುದಿಲ್ಲವೇ? ಕೀರ್ತನೆಗಾರನು ಹಾಡಿದ್ದು: “ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ. ಆತನ ಆಳಿಕೆ ನರರಲ್ಲಿ ಭಯಹುಟ್ಟಿಸತಕ್ಕದ್ದಾಗಿದೆ.” (ಕೀರ್ತನೆ 66:5) ಯೆಹೋವನ ಕೃಪೆಯನ್ನು ನಾವು ತಾತ್ಸಾರ ಮಾಡಬಾರದು. ಇಸ್ರಾಯೇಲ್ಯರು ಯೆಹೋವ ವಿರುದ್ಧ ‘ಎದುರುಬಿದ್ದು ಆತನ ಪವಿತ್ರಾತ್ಮನನ್ನು ದುಃಖಪಡಿಸಿದನು. ಆದದರಿಂದ ಆತನು ಮಾರ್ಪಟ್ಟು ಅವರಿಗೆ ಶತ್ರುವಾಗಿ ತಾನೇ ಅವರೊಡನೆ ಹೋರಾಡಿನು.’ (ಯೆಶಾಯ 63:10) ಆದರೆ “ಯೆಹೋವನು ಒಬ್ಬನ ನಡತೆಗೆ ಮೆಚ್ಚಿದರೆ ಅವನ ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವನು.” (ಜ್ಞಾನೋಕ್ತಿ 16:7) ದೇವಭಯವು ಎಂಥಾ ಉತ್ತಮ ಸಂರಕ್ಷಣೆಯಾಗಿದೆ!
“ಅನ್ಯಾಯದಿಂದ ಗಳಿಸಿದ ಬಹು ಧನಕ್ಕಿಂತಲೂ ನ್ಯಾಯದಿಂದ ಕೂಡಿಸಿದ ಅಲ್ಪ ಧನವೇ ಲೇಸು” ಎಂದು ವಿವೇಕಿಯಾದ ರಾಜ ಹೇಳಿದನು. (ಜ್ಞಾನೋಕ್ತಿ 16:8) ಜ್ಞಾನೋಕ್ತಿ 15:16 ತಿಳಿಸುವುದು, “ಕಳವಳದಿಂದ ಕೂಡಿದ ಬಹುಧನಕ್ಕಿಂತಲೂ ಯೆಹೋವನ ಭಯದಿಂದ ಕೂಡಿದ ಅಲ್ಪಧನವೇ ಲೇಸು.” ನೀತಿಯ ಮಾರ್ಗದಲ್ಲಿ ಇರಲು ದೇವರ ಮೇಲಿನ ಭಯಭಕ್ತಿ ತುಂಬಾ ಪ್ರಾಮುಖ್ಯ.
‘ಮನುಷ್ಯನು ತನ್ನ ಮನದಂತೆ ದಾರಿಯನ್ನಾರಿಸಿಕೊಳ್ಳುವನು’
ಮನುಷ್ಯನು ತನ್ನ ನಿರ್ಣಯವನ್ನು ತಾನೇ ಮಾಡುವಂಥ ರೀತಿಯಲ್ಲಿ ಸೃಷ್ಟಿಸಲ್ಪಟ್ಟಿರುವುದರಿಂದ ಸರಿ ಮತ್ತು ತಪ್ಪನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದ್ದಾನೆ. (ಧರ್ಮೋಪದೇಶಕಾಂಡ 30:19, 20) ನಮ್ಮ ಸಾಂಕೇತಿಕ ಹೃದಯಕ್ಕೆ ಬೇರೆ ಬೇರೆ ಆಯ್ಕೆಗಳನ್ನು ಪರಿಗಣಿಸುವ ಮತ್ತು ಒಂದು ಅಥವಾ ಹೆಚ್ಚು ವಿಷಯಗಳ ಮೇಲೆ ಕೇಂದ್ರಿಕರಿಸುವ ಸಾಮರ್ಥ್ಯವಿದೆ. ಹಾಗಾಗಿ ಆಯ್ಕೆ ಮಾಡುವ ಜವಾಬ್ದಾರಿ ನಮ್ಮದು. ಸೊಲೊಮೋನ ಹೇಳಿದ್ದು, “ಮನುಷ್ಯನು ತನ್ನ ಮನದಂತೆ ದಾರಿಯನ್ನಾರಿಸಿಕೊಂಡರೂ ಯೆಹೋವನೇ ಅವನಿಗೆ ಗತಿಯನ್ನು ಏರ್ಪಡಿಸುವನು.” (ಜ್ಞಾನೋಕ್ತಿ 16:9) ಯೆಹೋವನು ನಮ್ಮ ದಾರಿಯನ್ನು ಮಾರ್ಗದರ್ಶಿಸುತ್ತಿರುವುದರಿಂದ ನಾವು ವಿವೇಕಿಗಳಂತೆ ನಡೆದುಕೊಳ್ಳಲು ಆತನ ಸಹಾಯ ಕೇಳಿಕೊಳ್ಳುವಾಗ ‘ನಮ್ಮ ಕಾರ್ಯಗಳು ಸಫಲವಾಗುತ್ತವೆ.’
ಅಕ್ಟೋಬರ್ 31–ನವೆಂಬರ್ 6
ಬೈಬಲಿನಲ್ಲಿರುವ ರತ್ನಗಳು | ಜ್ಞಾನೋಕ್ತಿ 22-26
“ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನ್ನು ಶಿಕ್ಷಿಸು”
w07 6/1 31
ವಾಚಕರಿಂದ ಪ್ರಶ್ನೆಗಳು
ಜ್ಞಾನೋಕ್ತಿ 22:6ನೇ ವಚನ, ಕ್ರೈಸ್ತ ಮಕ್ಕಳನ್ನು ಸರಿಯಾಗಿ ತರಬೇತುಗೊಳಿಸಿದರೆ ಅವರು ಯೆಹೋವನಿಂದ ದೂರ ಹೋಗುವುದಿಲ್ಲ ಎಂಬ ಭರವಸೆಯನ್ನು ಕೊಡುತ್ತದೋ?
ಈ ವಚನ ಹೀಗನ್ನುತ್ತದೆ: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” ಗಿಡ ನೇರವಾಗಿ ಬೆಳೆಯಬೇಕೆಂದರೆ ಚಿಕ್ಕದಿದ್ದಾಗಲೇ ಅದನ್ನು ಸರಿಮಾಡಬೇಕು. ಅದೇ ರೀತಿ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಚೆನ್ನಾಗಿ ತರಬೇತಿಕೊಟ್ಟರೆ ಅವರು ದೊಡ್ಡವರಾದ ಮೇಲೆ ಯೆಹೋವನ ಸೇವೆ ಮಾಡಲು ಮುಂದೆಬರುವ ಸಾಧ್ಯತೆ ಹೆಚ್ಚಿದೆ. ಈ ರೀತಿ ತರಬೇತಿ ಕೊಡಲು ಸಾಕಷ್ಟು ಸಮಯ ಮತ್ತು ಪ್ರಯತ್ನ ಅಗತ್ಯ ಎಂದು ಹೆತ್ತವರಿಗೆ ತಿಳಿದಿದೆ. ತಮ್ಮ ಮಕ್ಕಳನ್ನು ಶಿಷ್ಯರನ್ನಾಗಿ ಮಾಡಲು ಹೆತ್ತವರು ಅವರಿಗೆ ಕಲಿಸಿ, ಎಚ್ಚರಿಸಿ, ಪ್ರೋತ್ಸಾಹಿಸಿ, ಶಿಸ್ತು ಕೊಡಬೇಕು ಮತ್ತು ಸ್ವತಃ ಒಳ್ಳೇ ಮಾದರಿಯಾಗಿರಬೇಕು. ಇದನ್ನು ಅವರು ಪ್ರೀತಿಯಿಂದ ಮತ್ತು ಸತತವಾಗಿ ಅನೇಕ ವರ್ಷಗಳವರೆಗೆ ಮಾಡಬೇಕು.
ಒಂದುವೇಳೆ ಮಕ್ಕಳು ಯೆಹೋವನಿಂದ ದೂರ ಹೋದರೆ ಹೆತ್ತವರು ಸರಿಯಾಗಿ ತರಬೇತಿ ಕೊಟ್ಟಿಲ್ಲ ಎಂದು ಅರ್ಥನಾ? ಕೆಲವೊಮ್ಮೆ ಮಕ್ಕಳನ್ನು ಯೆಹೋವನ ಶಿಸ್ತಿನಲ್ಲಿ ಮತ್ತು ಮಾನಸಿಕ ಕ್ರಮಪಡಿಸುವಿಕೆಯಲ್ಲಿ ಬೆಳೆಸಲು ಹೆತ್ತವರು ಹಾಕುವ ಪ್ರಯತ್ನ ಸಾಕಾಗದೇ ಇರಬಹುದು. (ಜ್ಞಾನೋಕ್ತಿ 6:4) ಒಳ್ಳೇ ತರಬೇತಿ ಪಡೆದ ಮಕ್ಕಳು ದೇವರಿಗೆ ಖಂಡಿತ ನಂಬಿಗಸ್ತರಾಗಿ ಉಳಿಯುತ್ತಾರೆ ಎಂಬ ಖಾತ್ರಿಯನ್ನು ಈ ಜ್ಞಾನೋಕ್ತಿಯು ಕೊಡುತ್ತಿಲ್ಲ. ಹೆತ್ತವರು ಮಕ್ಕಳನ್ನು ತಮಗೆ ಇಷ್ಟಬಂದಂತೆ ರೂಪಿಸಲು ಸಾಧ್ಯವಿಲ್ಲ. ಏಕೆಂದರೆ ದೊಡ್ಡವರಂತೆ ಅವರಿಗೂ ಇಚ್ಛಾಸ್ವಾತಂತ್ರ್ಯ ಇದೆ ಮತ್ತು ಅವರು ತಮ್ಮ ಜೀವನ ರೀತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳಬೇಕು. (ಧರ್ಮೋಪದೇಶಕಾಂಡ 30:15, 16, 19) ಮೇಲೆ ಕೊಡಲಾದ ಜ್ಞಾನೋಕ್ತಿಯನ್ನು ಬರೆದ ರಾಜ ಸೊಲೊಮೋನನಂತೆ, ಕೆಲವು ಮಕ್ಕಳು ಹೆತ್ತವರ ಶ್ರದ್ಧಾಪೂರ್ವಕ ಪ್ರಯತ್ನಗಳ ಮಧ್ಯೆಯೂ ಅಪನಂಬಿಗಸ್ತರಾಗುತ್ತಾರೆ. ಯೆಹೋವನ ಕೆಲವು ಪುತ್ರರು ಸಹ ಆತನಿಗೆ ಅಪನಂಬಿಗಸ್ತರಾದರು.
ಈ ರೀತಿ ತರಬೇತಿ ಪಡೆದ ಎಲ್ಲಾ ಮಕ್ಕಳೂ ಓರೆಯಾಗುವುದಿಲ್ಲ ಎಂದು ಈ ವಚನದ ಅರ್ಥ ಅಲ್ಲ, ಆದರೆ ಸಾಮಾನ್ಯವಾಗಿ ಹೆಚ್ಚಿನವರು ಓರೆಯಾಗುವುದಿಲ್ಲ. ಇದು ನಿಜವಾಗಿಯೂ ಹೆತ್ತವರಿಗೆ ತುಂಬ ಉತ್ತೇಜನ ನೀಡುತ್ತದೆ. ಯೆಹೋವನಿಗೆ ಇಷ್ಟವಾಗುವ ರೀತಿಯಲ್ಲಿ ಮಕ್ಕಳನ್ನು ತರಬೇತಿಗೊಳಿಸಲು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸುವಾಗ ಉತ್ತಮ ಫಲಿತಾಂಶಗಳು ಸಿಗುತ್ತವೆ ಎನ್ನುವುದನ್ನು ಹೆತ್ತವರು ಸದಾ ಮನಸ್ಸಿನಲ್ಲಿಡಬೇಕು. ಈ ವಿಷಯದಲ್ಲಿ ಹೆತ್ತವರ ಪಾತ್ರ ತುಂಬ ಪ್ರಾಮುಖ್ಯವಾಗಿದ್ದು, ಅವರ ಮಾದರಿ ಮಕ್ಕಳ ಮೇಲೆ ತುಂಬ ಪ್ರಭಾವ ಬೀರುವುದರಿಂದ ತಮ್ಮ ಪಾತ್ರವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.—ಧರ್ಮೋಪದೇಶಕಾಂಡ 6:6, 7.
ಶ್ರದ್ಧಾಪೂರ್ವಕವಾಗಿ ತರಬೇತಿ ನೀಡಿದ ಹೆತ್ತವರ ಮಕ್ಕಳು ಯೆಹೋವನಿಂದ ದೂರಹೋದಾಗಲೂ, ಅವರು ತಮ್ಮ ಮಕ್ಕಳು ಪಶ್ಚಾತ್ತಾಪಪಟ್ಟು ಹಿಂದೆ ಬರಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ಬೈಬಲ್ ಸತ್ಯವು ಶಕ್ತಿಶಾಲಿಯಾಗಿದೆ ಮತ್ತು ಹೆತ್ತವರು ಕೊಟ್ಟ ತರಬೇತಿಯನ್ನು ಬೇಗನೆ ಮರೆಯಲಿಕ್ಕಾಗುವುದಿಲ್ಲ.—ಕೀರ್ತನೆ 19:7.
it-2 818 ¶4
ಬೆತ್ತ, ಕೋಲು
ಹೆತ್ತವರಿಗಿರುವ ಅಧಿಕಾರ. “ಬೆತ್ತವು” ಮಕ್ಕಳ ಮೇಲೆ ಹೆತ್ತವರಿಗಿರುವ ಅಧಿಕಾರವನ್ನು ಸೂಚಿಸುತ್ತದೆ. ಜ್ಞಾನೋಕ್ತಿ ಪುಸ್ತಕದಲ್ಲಿ ಅನೇಕ ಬಾರಿ ಈ ಅಧಿಕಾರದ ಬಗ್ಗೆ ಮಾತಾಡಲಾಗಿದೆ. ಇಲ್ಲಿ ಬೆತ್ತ ಎನ್ನುವ ಪದ ಹೊಡೆಯುವುದನ್ನು ಮಾತ್ರವಲ್ಲ ಎಲ್ಲಾ ರೀತಿಯ ಶಿಸ್ತನ್ನೂ ಸೂಚಿಸುತ್ತದೆ. ಮಕ್ಕಳನ್ನು ಶಿಸ್ತುಗೊಳಿಸಲು ಬೆತ್ತವನ್ನು ಉಪಯೋಗಿಸುವ ವಿಚಾರದಲ್ಲಿ ಹೆತ್ತವರು ದೇವರಿಗೆ ಲೆಕ್ಕ ಒಪ್ಪಿಸಬೇಕಾಗಿದೆ. ಈ ವಿಚಾರದಲ್ಲಿ ಹೆತ್ತವರು ತಪ್ಪಿದರೆ ತಮ್ಮ ಮಕ್ಕಳ ನಾಶನಕ್ಕೆ ಅವರೇ ಕಾರಣರಾಗುತ್ತಾರೆ. ಅಷ್ಟೇ ಅಲ್ಲದೆ ಹೆತ್ತವರು ದೇವರ ಅನುಗ್ರಹ ಮತ್ತು ಒಪ್ಪಿಗೆಯನ್ನು ಕಳೆದುಕೊಳ್ಳುತ್ತಾರೆ. (ಜ್ಞಾನೋ 10:1; 15:20; 17:25; 19:13) “ಮೂರ್ಖತನವು ಹುಡುಗನ ಮನಸ್ಸಿಗೆ ಸಹಜ, ಆದರೆ ಶಿಕ್ಷಕನ ಬೆತ್ತವು ಅದನ್ನು ತೊಲಗಿಸುವದು. “ಹುಡುಗನ ಶಿಕ್ಷೆಗೆ ಹಿಂತೆಗೆಯಬೇಡ; ಬೆತ್ತದ ಏಟಿಗೆ ಸಾಯನು. ಬೆತ್ತದಿಂದ ಹೊಡೆ; ಅವನ ಆತ್ಮವನ್ನು ಪಾತಾಳಕ್ಕೆ ಬೀಳದಂತೆ ಕಾಪಾಡು.” (ಜ್ಞಾನೋ 22:15; 23:13, 14) ವಾಸ್ತವದಲ್ಲಿ, “ಬೆತ್ತಹಿಡಿಯದ ಪಿತ ಪುತ್ರನಿಗೆ ಶತ್ರು; ಚೆನ್ನಾಗಿ ಶಿಕ್ಷಿಸುವ ಪಿತ ಪುತ್ರನಿಗೆ ಮಿತ್ರ.”—ಜ್ಞಾನೋ 13:24; 19:18; 29:15; 1ಸಮು 2:27-36.